Tag: MLA Tanveer Sait

  • ಜೀವನ್ಮರಣ ಹೋರಾಟದಲ್ಲಿ ಗೆದ್ದ ತನ್ವೀರ್ ಸೇಠ್- ಮೈಸೂರಿಗೆ ಆಗಮನ

    ಜೀವನ್ಮರಣ ಹೋರಾಟದಲ್ಲಿ ಗೆದ್ದ ತನ್ವೀರ್ ಸೇಠ್- ಮೈಸೂರಿಗೆ ಆಗಮನ

    ಮೈಸೂರು: ದುಷ್ಕರ್ಮಿ ನಡೆಸಿದ ಕೊಲೆ ಯತ್ನದಿಂದ ಜೀವನ್ಮರಣ ಹೋರಾಟದಲ್ಲಿದ್ದ ಶಾಸಕ ತನ್ವೀರ್ ಸೇಠ್ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

    ಹೆಚ್ಚಿನ ಚಿಕಿತ್ಸೆ ಮತ್ತು ವಿಶ್ರಾಂತಿಗಾಗಿ ವಿದೇಶಕ್ಕೆ ತೆರಳಿದ್ದ ಅವರು ವಿಶ್ರಾಂತಿ ಮುಗಿಸಿ ಇಂದು ಭಾರತಕ್ಕೆ ವಾಪಸ್ಸಾಗಿದ್ದಾರೆ. ಇಷ್ಟು ದಿನ ಅವರು ದುಬೈನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಕಳೆದ ವರ್ಷದ ನವೆಂಬರ್ 18ರಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ಮೈಸೂರಿನ ಬನ್ನಿಮಂಟಪದಲ್ಲಿ ನೂರಾರು ಜನರ ಮುಂದೆಯೇ ಶಾಸಕರ ಮೇಲೆ ಕೊಲೆ ಯತ್ನ ನಡೆದಿತ್ತು.

    ಘಟನೆಯಲ್ಲಿ ಕುತ್ತಿಗೆ ಭಾಗಕ್ಕೆ ಮಚ್ಚಿನ ಪೆಟ್ಟು ಬಿದ್ದು ತನ್ವೀರ್ ಸೇಠ್ ಜೀವನ್ಮರಣ ಹೋರಾಟ ಆರಂಭಿಸಿದ್ದರು. ಆಗ ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಶಾಸಕ ತನ್ವೀರ್ ಸೇಠ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಕಳುಹಿಸಲಾಗಿತ್ತು. ಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ. ನಂತರ ದುಬೈನಲ್ಲೇ ಅವರು ವಿಶ್ರಾಂತಿ ಪಡೆಯುತ್ತಿದ್ದರು. ಇವತ್ತು ಭಾರತಕ್ಕೆ ವಾಪಾಸ್ ಬಂದಿರುವ ಸೇಠ್ ರಾತ್ರಿ ವೇಳೆಗೆ ಮೈಸೂರಿಗೆ ಆಗಮಿಸಲಿದ್ದಾರೆ.

  • ರಾಜ್ಯದ ಸಿಎಂ ಎಚ್‍ಡಿಕೆ, ಆದ್ರೆ ಆ ಸ್ಥಾನದಲ್ಲಿ ಸಿದ್ದರಾಮಯ್ಯರನ್ನೇ ನೋಡ್ತೀನಿ: ಪುಟ್ಟರಂಗ ಶೆಟ್ಟಿ

    ರಾಜ್ಯದ ಸಿಎಂ ಎಚ್‍ಡಿಕೆ, ಆದ್ರೆ ಆ ಸ್ಥಾನದಲ್ಲಿ ಸಿದ್ದರಾಮಯ್ಯರನ್ನೇ ನೋಡ್ತೀನಿ: ಪುಟ್ಟರಂಗ ಶೆಟ್ಟಿ

    ಮೈಸೂರು: ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದು, ಆದರೆ ನಾನು ಆ ಸ್ಥಾನದಲ್ಲಿ ನಾನು ಸಿದ್ದರಾಮಯ್ಯರನ್ನ ನೋಡುತ್ತೇನೆ ಎಂದು ಸಚಿವ ಪುಟ್ಟರಂಗಶೆಟ್ಟಿ ಅವರು ಹೇಳಿದ್ದಾರೆ.

    ಈ ಹಿಂದೆ ನಾನು ನೀಡಿದ ಹೇಳಿಕೆಗೆ ಬದ್ಧನಾಗಿದ್ದು, ಬಸವರಾಜ್ ಹೊರಟ್ಟಿ ಅವರು ಹೇಳಿದಂತೆ ಇಲ್ಲಿ ಯಾವುದು ನಡೆಯುವುದಿಲ್ಲ. ಇಲ್ಲಿ ಎಚ್‍ಡಿ ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಆ ಮಾತು ಹೇಳಿದರೆ ಮಾತ್ರ ನಡೆಯುತ್ತದೆ ಎಂದರು.

    ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಇಲ್ಲ. ಮತ್ತೆ ಚುನಾವಣೆ ಎದರುಸಬೇಕೆಂಬ ಹೊರಟ್ಟಿ ಅವರು ನೇರ ಚುನಾವಣೆ ಎದುರಿಸಿದರೆ ಅದರ ಸ್ಥಿತಿ ಗೊತ್ತಾಗುತ್ತದೆ. ಯಾವುದೇ ಕಾರಣಕ್ಕೂ ಅವರ ಮಾತು ನಡೆಯುವುದಿಲ್ಲ ಬಿಡಿ. ಸರ್ಕಾರ ಉತ್ತಮವಾಗಿ ಮುನ್ನಡೆಯುತ್ತದೆ. ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂಬುವುದು ಶಾಸಕರ ವೈಯಕ್ತಿಕ ಅಭಿಪ್ರಾಯ. ಆದರೆ ಸಿಎಂ ಖಾಲಿ ಇಲ್ಲ, 5 ವರ್ಷ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸುತ್ತದೆ ವಿಶ್ವಾಸ ವ್ಯಕ್ತಪಡಿಸಿದರು.

    ಶಾಸಕ ತನ್ವೀರ್ ಸೇಠ್ ಮಾತನಾಡಿ, ಒಂದು ವರ್ಷದಲ್ಲಿ ನಾವು ಮಾಡಬೇಕಾದ ಕೆಲಸ ಮಾಡಿಲ್ಲ. ಒಂದು ವರ್ಷದಲ್ಲಿ ಹಲವು ಚುನಾವಣೆ ಬಂದವು. ಬಿಜೆಪಿ ಶಾಸಕರ ಖರೀದಿಗೆ ಮುಂದಾಗಿತ್ತು. ಅಲ್ಲದೇ ಲೋಕಸಭಾ ಚುನಾವಣೆಯೂ ಬಂದಿತ್ತು. ಈ ಎಲ್ಲ ಕಾರಣದಿಂದಾಗಿ ನಾವು ಒಂದು ವರ್ಷದಲ್ಲಿ ಮಾಡಬೇಕಾದ ಕೆಲಸ ಪರಿಪೂರ್ಣ ಆಗಿಲ್ಲ. ಆದರೆ ಮುಂದಿನ ನಾಲ್ಕು ವರ್ಷ ನಾವು ಸಮರ್ಥವಾಗಿ ಆಡಳಿತ ಮಾಡುವ ವಿಶ್ವಾಸ ಇದೆ ಎಂದರು.

  • ಅವರೇ ಓಡಿದ್ರು.. ಅವರೇ ಬಿದ್ರು.. ಕೊನೆಗೆ ಅವರೇ ದಸರಾ ಮಾಡಿದ್ರು- ತನ್ವೀರ್ ಸೇಠ್ ವ್ಯಂಗ್ಯಭರಿತ ಆಕ್ರೋಶ

    ಅವರೇ ಓಡಿದ್ರು.. ಅವರೇ ಬಿದ್ರು.. ಕೊನೆಗೆ ಅವರೇ ದಸರಾ ಮಾಡಿದ್ರು- ತನ್ವೀರ್ ಸೇಠ್ ವ್ಯಂಗ್ಯಭರಿತ ಆಕ್ರೋಶ

    ಮೈಸೂರು: ಅವರೇ ಓಡಿದ್ರು.. ಅವರೇ ಬಿದ್ರು. ಅವರೇ ದಸರಾ ಮಾಡಿದರು ಎಂದು ಹೇಳುವ ಮೂಲಕ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಸಚಿವ ಜಿಟಿ ದೇವೇಗೌಡ ವಿರುದ್ಧ ವ್ಯಂಗ್ಯ ಮಾಡಿದ್ದಾರೆ.

    ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಡ ಹಬ್ಬ ದಸರಾಗೆ ನಮ್ಮಿಂದ ಯಾವುದೇ ಸಮಸ್ಯೆ ಆಗಬಾರದು ಎಂದು ಸುಮ್ಮನೆ ಇದ್ದೆವು. ಇಡೀ ದಸರಾ ಕಾರ್ಯಕ್ರಮದ ಅನೇಕ ಲೋಪದಿಂದ ನಡೆದಿದೆ. ಅವರೇ ಓಡಿದ್ರು.. ಅವರೇ ಬಿದ್ರು.. ಕೊನೆಗೆ ಅವರೇ ದಸರಾ ಮಾಡಿದರು ಎಂದು ಆರೋಪ ಮಾಡಿದರು.

    ಈ ಬಾರಿಯ ದಸರಾದಲ್ಲಿ ನಡೆದ್ದು ಕೇವಲ ಲೋಪಗಳಷ್ಟೇ ಉಸ್ತುವಾರಿ ಸಚಿವರ ಕೈ ಗೊಂಬೆಗಳಾಗಿ ಅಧಿಕಾರಿಗಳು ವರ್ತನೆ ಮಾಡಿ ಜನಪ್ರತಿನಿಧಿಗಳನ್ನು ಹೀನಾಯವಾಗಿ ನಡೆಸಲಾಗಿದೆ. ಅಲ್ಲದೇ ಪಾಸ್ ವಿತರಣೆಯಲ್ಲೂ ಜಿಲ್ಲಾ ಆಡಳಿತ ಲೋಪ ಮಾಡಿದೆ. ದಸರಾ ಹಬ್ಬದಲ್ಲಿ ಉಂಟಾದ ಎಲ್ಲಾ ಸಮಸ್ಯೆಗಳ ಕುರಿತು ಉತ್ತರ ನೀಡಬೇಕಿದೆ. ಅದ್ದರಿಂದಲೇ ಈ ಸುದ್ದಿಗೋಷ್ಠಿ ನಡೆಸುತ್ತಿರುವುದಾಗಿ ತಿಳಿಸಿದರು.

    ಕಾಂಗ್ರೆಸ್ ಬೆಂಬಲದಿಂದ ಸಮ್ಮಿಶ್ರ ಸರ್ಕಾರ ಬಂದಿದ್ದರೂ ಜಿಲ್ಲಾ ಪಕ್ಷದ ಅಧ್ಯಕ್ಷರಿಗೆ ಕೆಲವೇ ಪಾಸ್ ನೀಡಿದ್ದರು. ಅವುಗಳನ್ನು ವಾಪಸ್ ಕಳುಹಿಸಿದ್ದೇವೆ. ಸಂಜೆ ನಡೆದ ಪಂಜಿನ ಕವಾಯತು ಕಾರ್ಯಕ್ರಮದಲ್ಲೂ ಇದೇ ರೀತಿ ನಡೆದಿದೆ. ವ್ಯವಸ್ಥಿತವಾಗಿ ಜಿಲ್ಲಾ ಆಡಳಿತದ ಮೇಲೆ ಒತ್ತಡ ಹಾಕಿ ಜಿಲ್ಲಾ ಉಸ್ತುವಾರಿ ಸಚಿವರು 10 ಸಾವಿರ, ಸಾರಾ ಮಹೇಶ್ 5 ಸಾವಿರ, ಸಿಎಂ ಕಚೇರಿಗೆ 5 ಸಾವಿರ ಸೇರಿದಂತೆ ಪಾಸ್‍ಗಳ ಮಾರಾಟ ನಡೆಸಿದ್ದಾರೆ. ಇವುಗಳ ಬಗ್ಗೆ ತನಿಖೆ ನಡೆಸಬೇಕು ಆಗ್ರಹಿಸಿದರು. ಇದನ್ನು ಓದಿ: ಪಂಚೆಯಲ್ಲಿಯೇ ಓಡಿ ಬಿದ್ರು ಸಚಿವರು: ವಿಡಿಯೋ

    ಸಿದ್ದರಾಮಯ್ಯ ಅವರು ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಿದ್ದರೂ ಕೂಡ ಉಸ್ತುವಾರಿ ಸಚಿವರು ಅಧಿಕಾರಿಗಳ ಮೇಲು ಕೂಡ ಒತ್ತಡ ಹಾಕಿದ್ದಾರೆ. ಜಿಲ್ಲಾ ಆಡಳಿತ ಕೂಡ ತಮ್ಮ ಕೆಲಸ ಮರೆತು ಕಾರ್ಯನಿರ್ವಹಿಸಿದೆ. ಕಾರ್ಯಕ್ರಮದ ಸಮಯದಲ್ಲೂ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಅಲ್ಲದೇ ದಸರಾಗೆ ಬಂದ ಪ್ರೇಕ್ಷಕರ ಮೇಲೂ ಲಾಠಿ ಚಾರ್ಚ್ ಮಾಡಲಾಗಿದೆ. ಇದು ಅತ್ಯಂತ ಕೆಟ್ಟ ವರ್ತನೆ ಎಂದು ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv