Tag: mla son

  • ಕಾಂಗ್ರೆಸ್ ಎಂಎಲ್‍ಎ ಮಗ ಆತ್ಮಹತ್ಯೆಗೆ ಶರಣು

    ಕಾಂಗ್ರೆಸ್ ಎಂಎಲ್‍ಎ ಮಗ ಆತ್ಮಹತ್ಯೆಗೆ ಶರಣು

    ಭೋಪಾಲ್: ಗುಂಡು ಹಾರಿಸಿಕೊಂಡು ಕಾಂಗ್ರೆಸ್ ಎಂಎಲ್‍ಎ(MLA) ಮಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

    ವೈಭವ್(16) ಮೃತನಾಗಿದ್ದನೆ. ರಿವಾಲ್ವರ್​ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಕಾಂಗ್ರೆಸ್ ಎಂಎಲ್‍ಎ(MLA) ಸಂಜಯ್ ಯಾದವ್ ಮಗನಾಗಿದ್ದಾನೆ. ಆತ ಪಿಯುಸಿ ಓದುತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ತಲೆಗೆ ಗುಂಡು ಹಾರಿಸಿಕೊಂಡು ಗಂಭೀರ ಗಾಯಗೊಂಡಿದ್ದ ವೈಭವ್‍ನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈದ್ಯರು ಕೆಲವೇ ಕ್ಷಣಗಳಲ್ಲಿ ವೈಭವ್ ಕೊನೆಯ ಕೊನೆಯುಸಿರೆಳೆದಿದ್ದಾನೆ. ಆತ ವಾಷ್‍ರೂಮ್‍ನಲ್ಲಿ ಶೂಟ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್

    ಜಬಲ್‍ಪುರ್ ಎಸ್‍ಪಿ ಸಿದ್ಧಾರ್ಥ್ ಬಹುಗುಣ ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಖಚಿತಪಡಿಸಿದ್ದು, ಯಾವ ಕಾರಣಕ್ಕೆ ಎಂಬುದನ್ನು ವಿಚಾರಣೆ ಮಾಡುತ್ತಿದ್ದೇವೆ. ಪತ್ರ ದೊರೆಕಿದ್ದು, ಅದರಲ್ಲಿ ತನ್ನ ಸಾವಿಗೆ ತಾನೇ ಕಾರಣ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ವೈಭವ್ ಬರೆದುಕೊಂಡಿದ್ದಾನೆ. ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.

  • ಮಾಜಿ ಶಾಸಕನ ಪುತ್ರನಿಂದ ಮಹಿಳೆ ಮೇಲೆ ದೌರ್ಜನ್ಯ

    ಮಾಜಿ ಶಾಸಕನ ಪುತ್ರನಿಂದ ಮಹಿಳೆ ಮೇಲೆ ದೌರ್ಜನ್ಯ

    – ಮಾಡೆಲ್ ಮೇಲೆ ದರ್ಪ

    ಹೈದರಾಬಾದ್: ತೆಲಂಗಾಣ ವೈದ್ಯೆಯ ಮೇಲಿನ ಅತ್ಯಾಚಾರದ ಕುರಿತು ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲೇ, ಬಿಜೆಪಿಯ ಮಾಜಿ ಶಾಸಕನ ಪುತ್ರ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿ ದರ್ಪ ತೋರಿದ್ದಾನೆ.

    ಹೈದರಾಬಾದ್‍ನ ಮಾಧಾಪುರ ಪ್ರದೇಶದ ನೊವೊಟೆಲ್ ಹೋಟೆಲ್‍ನ ಆರ್ಟಿಸ್ಟ್ರಿ ಪಬ್‍ನಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಆಶಿಶ್ ಗೌಡ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ವೃತ್ತಿಯಲ್ಲಿ ಮಾಡೆಲ್ ಆಗಿದ್ದು, ತೆಲುಗು ಬಿಗ್ ಬಾಸ್‍ನ ಕಂಟೆಸ್ಟ್ ಆಗಿದ್ದರು ಎಂದು ಹೇಳಲಾಗಿದೆ. ಘಟನೆ ಕುರಿತು ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಶಿಶ್ ಪಟಂಚೇರು ಕ್ಷೇತ್ರದ ಮಾಜಿ ಶಾಸಕ ಟಿ.ನಂದೀಶ್ವರ ಗೌಡ ಅವರ ಪುತ್ರನಾಗಿದ್ದಾನೆ. ಆರೋಪಿಯ ವಿರುದ್ಧ ಪೊಲೀಸರು ಮಹಿಳೆಯ ಬಳಿ ಅಸಭ್ಯವಾಗಿ ವರ್ತಿಸಿದ್ದರ ಕುರಿತು ಪ್ರಕರಣ ದಾಖಲಿಸಿದ್ದಾರೆ.

    ಆಶ್ಚರ್ಯವೆಂದರೆ ಪಶು ವೈದ್ಯೆಯ ಮೇಲಿನ ಅತ್ಯಾಚಾರವನ್ನು ಖಂಡಿಸಿ ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಆರೋಪಿ ಸಹ ಭಾಗವಹಿಸಿ ಬೆಂಬಲ ಸೂಚಿಸಿದ್ದ ಎನ್ನಲಾಗಿದೆ.

    ಆಶಿಶ್ ವಿರುದ್ಧ ಐಪಿಸಿ ಸೆಕ್ಷನ್ 354(ಮಹಿಳೆ ಬಳಿ ಅಸಭ್ಯವಾಗಿ ವರ್ತಿಸಿದ ಕ್ರಿಮಿನಲ್ ಅಪರಾಧ) ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಹಾಗೂ ಆತನ ಇಬ್ಬರು ಸ್ನೇಹಿತರು ನನ್ನ ಬಳಿ ಅಸಭ್ಯವಾಗಿ ವರ್ತಿಸಿದರು. ಅಲ್ಲದೆ ಒತ್ತಾಯಪೂರ್ವಕವಾಗಿ ತಳ್ಳಿದರು ಎಂದು 27 ವರ್ಷದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಮಾಧಾಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್(ಎಸ್‍ಎಚ್‍ಒ) ವೆಂಕಟ್ ರೆಡ್ಡಿ ಮಾಹಿತಿ ನೀಡಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೋಟೆಲ್ ಹಾಗೂ ಪಬ್‍ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ, ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈ ಪಂಚತಾರಾ ಹೋಟೆಲಿನ ಆರ್ಟಿಸ್ಟ್ರಿ ಪಬ್ ಸೆಲೆಬ್ರಿಟಿಗಳ ನೆಚ್ಚಿನ ತಾಣ ಎಂದು ಹೇಳಲಾಗಿದೆ.

    ಮದ್ಯದ ಬಾಟಲಿಯನ್ನು ದೊಡ್ಡದು ನೀಡಿಲ್ಲ ಎಂದು 2012ರಲ್ಲಿ ಆಶಿಶ್ ಅಂಗಡಿಯ ಕೆಲಸಗಾರನ ಮೇಲೆ ಹಲ್ಲೆ ಮಾಡಿದ್ದರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದನು. ಆರೋಪಿಯ ಕುಟುಂಬವು ಮೂಲತಃ ತೆಲಗು ದೇಶಂ ಪಕ್ಷವಾಗಿದ್ದು, ನಂತರ ಕಾಂಗ್ರೆಸ್ ಹಾಗೂ ಇದೀಗ ಬಿಜೆಪಿಗೆ ಸೇರಿದ್ದಾರೆ ಎಂದು ವರದಿಯಾಗಿದೆ.