Tag: MLA Somashekhar Reddy

  • ಲೋ..ಸೋಮಶೇಖರರೆಡ್ಡಿ ಧಮ್ ಇದ್ರೇ 4 ಲೈನ್ ವಂದೇ ಮಾತರಂ ಹೇಳು: ‘ಕೈ’ ನಾಯಕಿ ಕವಿತಾರೆಡ್ಡಿ

    ಲೋ..ಸೋಮಶೇಖರರೆಡ್ಡಿ ಧಮ್ ಇದ್ರೇ 4 ಲೈನ್ ವಂದೇ ಮಾತರಂ ಹೇಳು: ‘ಕೈ’ ನಾಯಕಿ ಕವಿತಾರೆಡ್ಡಿ

    ಚಿಕ್ಕಬಳ್ಳಾಪುರ: ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ನನ್ನ ಸಮುದಾಯಕ್ಕೆ ಸೇರಿದವನು. ಆದರೆ ಅವನು ಆಯೋಗ್ಯ ಎಂದು ಕಾಂಗ್ರೆಸ್ ನಾಯಕಿ ಕವಿತಾರೆಡ್ಡಿ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಪ್ರಶಾಂತನಗರದ ಈದ್ಗಾ ಮೈದಾನದಲ್ಲಿ ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಆಯೋಜಿಸಿದ್ದ ‘ಬುರ್ಕಾ ಔರ್ ಬಿಂದಿ ಏಕ್ ಸಾಥ್’ ಎಂಬ ಮಹಿಳೆಯರ ಶಾಂತಿಯುತ ಪ್ರತಿಭಟನೆಯಲ್ಲಿ ಭಾಷಣ ಮಾಡಿದ ಕವಿತಾರೆಡ್ಡಿ ಅವರು, ಸೋಮಶೇಖರರೆಡ್ಡಿ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿ ಸವಾಲು ಹಾಕಿದರು.

    ಪೌರತ್ವ ಕಾಯಿದೆ ತಿದ್ದುಪಡಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರ ಸೇರಿದಂತೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಗೆ ಅವಾಚ್ಯ ಪದ ಬಳಕೆ ಮಾಡಿ ಸವಾಲು ಹಾಕಿದರು.

    ಅಲ್ಪಸಂಖ್ಯಾತರನ್ನು ಊಫ್ ಅಂದ್ರೆ ಹೊರಟು ಹೋಗ್ತಾರೆ ಎಂದು ಸೋಮಶೇಖರ್ ಹೇಳಿದ್ದಾನೆ. ಆ ನನ್**ಗ ಅಯೋಗ್ಯನಿಗೆ ನಾನು ಮಾಧ್ಯಮದ ಮೂಲಕ ಹೇಳ್ತೇನೆ. ಲೋ.. ಸೋಮಶೇಖರರೆಡ್ಡಿ ನಿನಗೆ ಧಮ್ ಇದ್ರೇ ವಂದೇ ಮಾತರಂ ಹೇಳು. ಅನ್ ಲೈನ್‍ಗೆ ಬಂದು ವಂದೇ ಮಾತರಂ ನಾಲ್ಕು ಲೈನ್ ಹೇಳುಬಿಡು ಸಾಕು. ವಂದೇ ಮಾತರಂ ನಾಲ್ಕು ಲೈನ್ ಹೇಳೋಕೆ ಬರಲ್ಲ? ಮುಸ್ಲಿಂರನ್ನು ಊಫ್ ಅಂತಿಯಾ ನಾಚಿಕೆ ಆಗಲ್ವಾ? ಎಂದು ಕಿಡಿಕಾರಿದರು.

  • ಧರಣಿ ಮಾಡಿದಾಕ್ಷಣ ದೊಡ್ಡ ನಾಯಕನಾಗುತ್ತೀಯಾ?- ಜಮೀರ್‌ಗೆ ಸಚಿವ ಶ್ರೀರಾಮುಲು ತಿರುಗೇಟು

    ಧರಣಿ ಮಾಡಿದಾಕ್ಷಣ ದೊಡ್ಡ ನಾಯಕನಾಗುತ್ತೀಯಾ?- ಜಮೀರ್‌ಗೆ ಸಚಿವ ಶ್ರೀರಾಮುಲು ತಿರುಗೇಟು

    – ವಾಚ್‍ಮ್ಯಾನ್ ಆಗ್ತೀನಿ ಎಂದ ಮಾತು ಎಲ್ಲಿ ಹೋಯ್ತು?

    ಚಿತ್ರದುರ್ಗ: ಬಿಎಸ್‍ವೈ ಸಿಎಂ ಆದ್ರೆ ಅವರ ಮನೆ ಎದುರು ವಾಚ್‍ಮ್ಯಾನ್ ಆಗುತ್ತೀನಿ. ವಿಧಾನಸೌಧದ ಗೋಡೆಯನ್ನು ಒಡೆಯುತ್ತೇನೆ ಎಂದಿದ್ದ ಜಮೀರ್ ತಮ್ಮ ಮಾತುಗಳನ್ನು ಮರೆತಿದ್ದಾರೆ, ಆದರೆ ಇಂದು ಬಿಜೆಪಿ ಶಾಸಕರ ಮನೆ ಎದುರು ಧರಣಿ ನಡೆಸಿದ ಮಾತ್ರಕ್ಕೆ ಅವರು ದೊಡ್ಡ ನಾಯಕನಾಗುತ್ತೀಯಾ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಆರೋಗ್ಯ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.

    ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಇಂದು ಮಾಜಿ ಸಚಿವ, ಜಮೀರ್ ಅಹ್ಮದ್ ಧರಣಿ ಮಾಡಲು ಆಗಮಿಸಿದ್ದಾರೆ. ಆದರೆ ಮಾತು ಆಡಿದಂತೆ ನಡೆದುಕೊಳ್ಳೋದು ಅವರಿಂದ ಅಸಾಧ್ಯವಾಗಿದೆ. ಬಿಎಸ್‍ವೈ ಅವರು ಸಿಎಂ ಆದರೆ ಜಮೀರ್ ಅವರು ವಾಚ್ ಮ್ಯಾನ್ ಆಗುತ್ತೇನೆ ಹಾಗೂ ವಿಧಾನಸೌಧದ ಗೋಡೆ ಒಡೆಯುತ್ತೇನೆ ಎಂದು ಹೇಳಿದ್ದರು. ಆದರೆ ಜಮೀರ್ ಅಹ್ಮದ್ ನುಡಿದಂತೆ ನಡೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು. ಇದನ್ನು ಓದಿ: ಸಿಎಂ ಮನೆಯ ವಾಚ್ ಮ್ಯಾನ್- ಜಮೀರ್ ಫೋಟೋ ವೈರಲ್

    ಕೆಲ ಸಂದರ್ಭದಲ್ಲಿ ಸೋಮಶೇಖರರೆಡ್ಡಿ ಮಾತಾಡಿರಬಹುದು. ಆದರೆ ಜಮೀರ್ ಅಹ್ಮದ್ ಅವರೇನು ಕಡಿಮೆ ಇಲ್ಲ. ಅವರೂ ಸಹ ಮಾತಾಡಿದ್ದಾರೆ. ಜಮೀರ್ ಹಾಗೂ ಸಿದ್ಧರಾಮಯ್ಯ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈಗ ನಮ್ಮ ಶಾಸಕರ ಮನೆ ಬಳಿ ಧರಣಿ ನಡೆಸುತ್ತಿದ್ದಾರೆ. ಆ ಮೂಲಕ ಹಿಂದೂ-ಮುಸ್ಲಿಂರ ನಡುವೆ ಜಗಳ ಆರಂಭಿಸಲು ಕಾಂಗ್ರೆಸ್ ನಾಯಕರು ಧರಣಿ ನಡೆಸಿದ್ದಾರೆ ಎಂದು ಆರೋಪಿಸಿದರು.

    ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿದ್ದೇ ತಪ್ಪೆಂದು ವಿರೋಧಿಸಿ ಶಾಸಕರ ಮನೆ ಬಳಿ ಧರಣಿ ಮಾಡಲು ಜಮೀರ್ ಆಗಮಿಸಿದ್ದಾರೆ. ಆದರೆ ಶಾಸಕರ ಮನೆ ಮುಂದೆ ಧರಣಿ ಮಾಡಿದಾಕ್ಷಣ ನೀನು ದೊಡ್ಡ ನಾಯಕನಾಗ್ತಿಯಾ? ಎಂದು ರಾಮುಲು ಏಕವಚನದಲ್ಲೇ ಪ್ರಶ್ನಿಸಿದರು. ಅಲ್ಲದೇ ಸಿದ್ಧರಾಮಯ್ಯ ಕೂಡ ವಕೀಲರಾಗಿದ್ದರೂ ಸಿಎಎ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲಿ. ಅದನ್ನು ಬಿಟ್ಟು ಕಾಂಗ್ರೆಸ್ ನಾಯಕರು ಜಾತಿ, ಜನರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

    ಕನಕಪುರದಲ್ಲಿ ನಿರ್ಮಾಣ ಮಾಡಲು ಹೊರಟಿರುವ ಏಸು ಪ್ರತಿಮೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಶ್ರೀರಾಮುಲು, ಧರ್ಮದ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ಎಲ್ಲಾ ದೇವರು ಒಬ್ಬರೇ. ಆದರೆ ಇಂದು ದೇವರನ್ನು ಬೇರೆ ಬೇರೆ ಮಾಡಿ ಮಾತನಾಡುವವರು ಸ್ವಾರ್ಥಕ್ಕಾಗಿ ಅಷ್ಟೇ. ಸದ್ಯ ಕಾಂಗ್ರೆಸ್ ನಾಯಕರಿಗೆ ಯಾವುದೇ ವಿಷಯ ಇಲ್ಲವಾಗಿದೆ ಹೀಗಾಗಿ ಹೊಸ ವಿವಾದ ಸೃಷ್ಟಿಸುತಿದ್ದಾರೆಂದರು.