Tag: MLA Shivalinge Gowda

  • ದೇವರ ಮುಂದೆ ಬಂದು ಪ್ರಮಾಣ ಮಾಡಲಿ- ಬಿಎಸ್‍ವೈ ರಾಜಕೀಯ ಕಾರ್ಯದರ್ಶಿಗೆ ಶಿವಲಿಂಗೇಗೌಡ ಸವಾಲು

    ದೇವರ ಮುಂದೆ ಬಂದು ಪ್ರಮಾಣ ಮಾಡಲಿ- ಬಿಎಸ್‍ವೈ ರಾಜಕೀಯ ಕಾರ್ಯದರ್ಶಿಗೆ ಶಿವಲಿಂಗೇಗೌಡ ಸವಾಲು

    – ಅವನು ಯಾರ್ರೀ, ಅರಸೀಕೆರೆ ಜನಕ್ಕೆ ಏನೇನೋ ಸುಳ್ಳು ಹೇಳ್ತಾರೇನ್ರೀ

    ಹಾಸನ: ಕಾನೂನು ಪ್ರಕಾರ ಈ ಬಾರಿ ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿಗೆ ಎಸ್‍ಟಿ ಮೀಸಲಾತಿ ಬಂದಿದೆ ಎನ್ನುವುದಾದರೆ ದೇವರ ಮುಂದೆ ಬಂದು ಪ್ರಮಾಣ ಮಾಡಲಿ. ನಾನು ಹೇಳುತ್ತಿರುವುದು ಕಾನೂನಿನಲ್ಲಿ ತಪ್ಪಿದ್ದರೆ ಬೆಳಗ್ಗೆಯೇ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಬಿಎಸ್‍ವೈ ರಾಜಕೀಯ ಕಾರ್ಯದರ್ಶಿ ಎನ್‍ಆರ್.ಸಂತೋಷ್‍ಗೆ ಶಾಸಕ ಶಿವಲಿಂಗೇಗೌಡ ಬಹಿರಂಗ ಸವಾಲು ಹಾಕಿದ್ದಾರೆ.

    ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿ ಎಸ್‍ಟಿಗೆ ಮೀಸಲಾಗಿರುವುದರಿಂದ ಜೆಡಿಎಸ್ ಪಕ್ಷಕ್ಕೆ ಬಹುಮತವಿದ್ದರೂ, ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿ ಬಿಜೆಪಿ ಪಾಲಾಗಲಿದೆ. ಈ ಮೀಸಲಾತಿ ದೋಷದಿಂದ ಕೂಡಿದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ ಶಾಸಕ ಶಿವಲಿಂಗೇಗೌಡ ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ ಸಿಎಂ ಆಪ್ತ ಸಂತೋಷ್

    ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸಂತೋಷ್, ಮೀಸಲಾತಿಯಲ್ಲಿ ಯಾವುದೇ ತಪ್ಪಾಗಿಲ್ಲ. ಶಾಸಕ ಶಿವಲಿಂಗೇಗೌಡ ಅವರ ಕಾನೂನು ಹೋರಾಟದ ಬಗ್ಗೆ ಅರಸೀಕೆರೆಯ ಎಸ್‍ಟಿ ಸಮುದಾಯದ ಜನರ ಮನೆಗಳಿಗೆ ಹೋಗಿ ತಿಳಿಸುವುದಾಗಿ ಹೇಳಿದ್ದರು. ಸಂತೋಷ್ ಹೇಳಿಕೆಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಶಾಸಕ ಶಿವಲಿಂಗೇಗೌಡ, ಅವನು ಯಾರ್ರೀ. ಅರಸೀಕೆರೆ ಜನಕ್ಕೆ ಏನೇನೋ ಸುಳ್ಳು ಹೇಳ್ತಾರೇನ್ರೀ. ಎಸ್‍ಟಿ ಸದಸ್ಯ ಜೆಡಿಎಸ್‍ನಿಂದ ಗೆದ್ದಿದ್ದರೆ ಮೀಸಲಾತಿ ಮಾಡಿಸುತ್ತಿದ್ದರಾ. ಇವನು ಆತ್ಮಸಾಕ್ಷಿ ಮುಟ್ಟಿಕೊಂಡು ಹೇಳಲಿ.

    ಎಲ್ಲೆಲ್ಲಿ ಬಿಜೆಪಿಯವರನ್ನು ತಂದು ಕೂರಿಸಬಹುದೋ ಅಲ್ಲೆಲ್ಲ ಮೀಸಲಾತಿ ತಂದಿದ್ದಾರೆ. ಅಸೆಂಬ್ಲಿ ನಡೆದಿದ್ದರೆ ನಾವು ಏನು ಎಂದು ತೋರಿಸುತ್ತಿದ್ದೆವು. ಇವನು ತಲೆಕೆಳಗಾಗಿ ನಿಂತರು ಎಸ್‍ಟಿ ಜನಾಂಗ ಇವನನ್ನು ನಂಬುತ್ತಾ. ಅರಸೀಕೆರೆಯಲ್ಲಿ ನೆಮ್ಮದಿ ರಾಜಕಾರಣ ಇತ್ತು. ಈಗ ಬೆಂಕಿಯಿಡಲು ಬಂದಿದ್ದಾರೆ. ನಾನು ಅರಸೀಕೆರೆಯಲ್ಲಿ ಜಾತಿ ರಾಜಕಾರಣ ಮಾಡಿದ್ದೇನೆ ಅಂದರೆ ಅವರ ಮನೆಯಲ್ಲಿ ಜೀತ ಮಾಡುತ್ತೇನೆ. ನಾನು ಕೂಡ ಮನೆ ಮನೆಗೆ ಹೋಗುತ್ತೇನೆ. ಆ ಜನಾಂಗದವರಿಗೆ ಎಲ್ಲವನ್ನೂ ತಿಳಿಸುತ್ತೇನೆ. ಶಿವಲಿಂಗೇಗೌಡನನ್ನೇನಾದ್ರು ನೀವು ಕೆಣಕಿದ್ರೆ ರಾಜಕೀಯದಲ್ಲಿ ಜನ ನಿಮ್ಮನ್ನು ಯಾವ ಸ್ಥಿತಿಗೆ ತಂದು ನಿಲ್ಲಿಸುತ್ತಾರೆ ನೋಡ್ತೀರಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸಿಕ್ತು ಹಾಸನ, ಅರಸೀಕೆರೆ ನಗರಸಭೆ ಅಧ್ಯಕ್ಷ ಪಟ್ಟ

  • ಬಿಎಸ್‍ವೈ ಬಹುಮತ ಇಲ್ಲದೆ ಮುಖ್ಯಮಂತ್ರಿ ಆದನಾ?- ಶಾಸಕ ಶಿವಲಿಂಗೇಗೌಡ ಆಕ್ರೋಶ

    ಬಿಎಸ್‍ವೈ ಬಹುಮತ ಇಲ್ಲದೆ ಮುಖ್ಯಮಂತ್ರಿ ಆದನಾ?- ಶಾಸಕ ಶಿವಲಿಂಗೇಗೌಡ ಆಕ್ರೋಶ

    – ಸ್ವಾರ್ಥಕ್ಕಾಗಿ ರಾಜಕೀಯ ಪ್ರೇರಿತ ಮೀಸಲಾತಿ

    ಹಾಸನ: ಸರ್ಕಾರ ನಿಯಮ ಮೀರಿ ಹಾಸನ ಜಿಲ್ಲೆಯ, ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿಗೆ ಮೀಸಲಾತಿ ಪ್ರಕಟಿಸಿದೆ. ಸರ್ಕಾರದಲ್ಲಿ ಕಾಣದ ಕೈಗಳು ಹಿಂಬದಿಯಿಂದ ಯಡಿಯೂರಪ್ಪ ಅವರ ಕೈಯಲ್ಲಿ ಈ ರೀತಿ ಆಡಳಿತ ನಡೆಸುತ್ತಿವೆ ಎಂದು ಶಾಸಕ ಶಿವಲಿಂಗೇಗೌಡ ಆಕ್ರೋಶ ಹೊರಹಾಕಿದ್ದಾರೆ.

    ಅರಸೀಕೆರೆ ನಗರಸಭೆಯ ಅಧ್ಯಕ್ಷಗಾದಿ ಎಸ್‍ಟಿ ಅಭ್ಯರ್ಥಿ ಮೀಸಲಾಗಿದೆ. ಆದರೆ ಎಸ್‍ಟಿ ಪಂಗಡಕ್ಕೆ ಸೇರಿದ ಅಭ್ಯರ್ಥಿ ಬಿಜೆಪಿ ಪಕ್ಷದಿಂದ ಮಾತ್ರ ಜಯಗಳಿಸಿದ್ದಾರೆ. ಹೀಗಾಗಿ ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಬಹುಮತ ಹೊಂದಿದ್ದರೂ ಅಧ್ಯಕ್ಷಗಾದಿ ಮಾತ್ರ ಬಿಜೆಪಿ ಪಾಲಾಗುತ್ತಿದೆ. ಈ ಬಗ್ಗೆ ಹಾಸನದಲ್ಲಿ ಆಕ್ರೋಶ ಹೊರಹಾಕಿರುವ ಶಾಸಕ ಶಿವಲಿಂಗೇಗೌಡ, ಯಡಿಯೂರಪ್ಪ ಅವರಿಗೆ ನೇರವಾಗಿ ಆಡಳಿತ ನಡೆಸಲು ಬಿಡುತ್ತಿಲ್ಲ. ಯಡಿಯೂರಪ್ಪ ಏನು ಬಹುಮತ ಇಲ್ಲದೆ ಮುಖ್ಯಮಂತ್ರಿ ಆದನಾ? ನಗರಸಭೆ ಮೀಸಲಾತಿ ಪ್ರಕಟ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮೀಸಲು ನಿಗದಿಯಲ್ಲಿ ನ್ಯಾಯ ದೇವತೆಗೆ ಅನ್ಯಾಯ – ರೇವಣ್ಣ ಕಿಡಿ

    ನ್ಯಾಯಾಧೀಶರು ನಮಗೆ ನ್ಯಾಯ ಕೊಡಬೇಕು. ರಾಜಕೀಯ ಸ್ವಾರ್ಥಕ್ಕಾಗಿ, ರಾಜಕೀಯ ಪ್ರೇರಿತ ಮೀಸಲಾತಿ ಮಾಡಿದ್ದಾರೆ. ಕಾರ್ಯಾಂಗ, ಶಾಸಕಾಂಗ ನಡೆಸುವವರಿಗೆ ಕ್ಯಾಕರಿಸಿ, ಕ್ಯಾಕರಿಸಿ ಉಗಿಯಬೇಕಾಗುತ್ತೆ. ಇದಕ್ಕೆ ಪ್ರಜಾಪ್ರಭುತ್ವ ಅಂತಾ ಕರೆಯಬೇಕಾ. ಈ ಬಗ್ಗೆ ಸುಪ್ರೀಂಕೋರ್ಟ್‍ಗೆ ಹೋದರೂ ಬಿಡೋದಿಲ್ಲ. ಹೋರಾಟ ಮಾಡುತ್ತೇನೆ. ಯಾವ ಪುರುಷಾರ್ಥಕ್ಕಾಗಿ ಇಂಥ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ಕಾಣದ ಕೈ ಕೆಲಸ ಮಾಡುತ್ತಿವೆ. ಯಡಿಯೂರಪ್ಪ ಹೇಗೆ ಇದನ್ನ ಸಮರ್ಥಿಸಿ ಕೊಳ್ಳುತ್ತಾರೆ? ಕಾರ್ಯಾಂಗ, ಶಾಸಕಾಂಗ ಎರಡೂ ನ್ಯಾಯಾಂಗಕ್ಕೆ ಮೋಸ, ಅಪಚಾರ ಮಾಡುತ್ತಿವೆ ಎಂದು ಕಿಡಿಕಾರಿದರು.

    ಅರಸೀಕೆರೆ ನಗರಸಭೆ ಒಟ್ಟು 31 ಸದಸ್ಯ ಬಲ ಹೊಂದಿದೆ. ಅದರಲ್ಲಿ ಜೆಡಿಎಸ್ 21, ಕಾಂಗ್ರೆಸ್ 01, ಬಿಜೆಪಿ 05, 3 ಜನ ಸ್ವತಂತ್ರ ಅಭ್ಯರ್ಥಿಗಳು ಸದಸ್ಯರಾಗಿದ್ದಾರೆ. ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿ ಎಸ್‍ಟಿ ಗೆ ಮೀಸಲಾಗಿರುವ ಕಾರಣ, ಕೇವಲ 5 ಜನ ಸದಸ್ಯ ಬಲ ಹೊಂದಿರುವ ಬಿಜೆಪಿ ಪಕ್ಷದ ಸದಸ್ಯ ನಗರಸಭೆ ಅಧ್ಯಕ್ಷರಾಗೋದು ಖಚಿತವಾಗಿದೆ. ಇದನ್ನೂ ಓದಿ: ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸಿಕ್ತು ಹಾಸನ, ಅರಸೀಕೆರೆ ನಗರಸಭೆ ಅಧ್ಯಕ್ಷ ಪಟ್ಟ

  • ‘ಸತ್ತರೆ ಅಲ್ಲೇ ಸಾಯಲಿ’, ಹೊರ ರಾಜ್ಯದವರು ನಮ್ಮ ರಾಜ್ಯಕ್ಕೆ ಬರೋದು ಬೇಡ: ಶಿವಲಿಂಗೇಗೌಡ

    ‘ಸತ್ತರೆ ಅಲ್ಲೇ ಸಾಯಲಿ’, ಹೊರ ರಾಜ್ಯದವರು ನಮ್ಮ ರಾಜ್ಯಕ್ಕೆ ಬರೋದು ಬೇಡ: ಶಿವಲಿಂಗೇಗೌಡ

    ಹಾಸನ: ಯಾರು ಎಲ್ಲಿ ಬದುಕುತ್ತಿದ್ದಾರೆ ಅಲ್ಲೇ ಬದುಕಲಿ. ಸತ್ತರೆ ಅಲ್ಲೇ ಸಾಯಲಿ, ಬದುಕಿದರೆ ಅಲ್ಲೇ ಬದುಕಲಿ ಎಂದು ಶಾಸಕ ಶಿವಲಿಂಗೇಗೌಡ ಅವರು ಹೇಳಿದ್ದು, ಹೊರರಾಜ್ಯದಿಂದ ಹಾಸನಕ್ಕೆ ಬರುವವರಿಗೆ ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ.

    ಕೊರೊನಾ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಶಿವಲಿಂಗೇಗೌಡ ಅವರು, ಹೊರರಾಜ್ಯದಿಂದ ಹಾಸನಕ್ಕೆ ಬರುವವರಿಗೆ ಅವಕಾಶ ನೀಡದಂತೆ ಸಚಿವ ಮಾಧುಸ್ವಾಮಿಯವರಿಗೆ ಮನವಿ ಮಾಡಿದ್ದಾರೆ.

    ಇಂದು ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಸಭೆ ನಡೆಯುತ್ತಿತ್ತು. ಈ ವೇಳೆ ಮುಂಬೈನಿಂದ ಬಂದವರಿಂದ ಹಾಸನ ಗ್ರೀನ್‍ಝೋನ್ ಪಟ್ಟ ಕಳೆದುಕೊಂಡು ಜಿಲ್ಲೆಯ ಜನ ಆತಂಕಕ್ಕೊಳಪಟ್ಟ ವಿಚಾರವನ್ನು ಶಿವಲಿಂಗೇಗೌಡ ಅವರು ಪ್ರಸ್ತಾಪಿಸಿದರು.

    ಯಾರಿಗೂ ಹೊರರಾಜ್ಯದಿಂದ ಬರಲು ಅವಕಾಶ ನೀಡದಂತೆ ಮನವಿ ಮಾಡುತ್ತಿದ್ದೇನೆ. ಕಳೆದ 25 ವರ್ಷಗಳಿಂದ ಮುಂಬೈಯಲ್ಲಿ ವಾಸವಿದ್ದವರು ಈಗ ನಮ್ಮ ಜಿಲ್ಲೆ ಸೇಫ್ ಆಗಿದೆ ಎಂದು ಬರುತ್ತಿದ್ದಾರೆ. ಆದರೆ ಯಾರು ಎಲ್ಲಿ ಇದ್ದಾರೋ ಅಲ್ಲೇ ಇರಲಿ. ನಮ್ಮ ಜಿಲ್ಲೆ ಸೇಫ್ ಆಗಿದೆ. ಹೊರ ರಾಜ್ಯದವರ ಸಹವಾಸವೇ ಬೇಡ. ಅವರ ಜೀವನ ಅಲ್ಲಿ ಉತ್ತಮವಾಗಿದೆ. ಆದರೆ ಜೀವ ಭಯದಿಂದ ಮಾತ್ರ ಅವರು ಇಲ್ಲಿ ಬರಲು ಮುಂದಾಗುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಬೇಕು ಎಂದರೇ ಇದಕ್ಕೆ ಅವಕಾಶ ನೀಡಬಾರದು. ಮೋದಿ ಅವರು ಯಾವ ದೃಷ್ಟಿಯಿಂದ ಈ ಬಗ್ಗೆ ಅವಕಾಶ ನೀಡಿದ್ದರೆ ಎಂದು ತಿಳಿದಿಲ್ಲ. ಆದರೆ ನಮ್ಮ ಜಿಲ್ಲೆ ಸೇಫ್ ಆಗಬೇಕು ಎಂದರೇ ಜಿಲ್ಲಾಧಿಕಾರಿಗಳು ತಮಗೆ ಲಭಿಸಿರುವ ಅಧಿಕಾರವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

  • 50 ಸಾವಿರ ಆಹಾರ ಧಾನ್ಯಗಳ ಕಿಟ್ ವಿತರಣೆಗೆ ಮುಂದಾದ ಶಿವಲಿಂಗೇಗೌಡ

    50 ಸಾವಿರ ಆಹಾರ ಧಾನ್ಯಗಳ ಕಿಟ್ ವಿತರಣೆಗೆ ಮುಂದಾದ ಶಿವಲಿಂಗೇಗೌಡ

    ಹಾಸನ: ಹೆಮ್ಮಾರಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕೈಗೊಂಡಿರುವ ಲಾಕ್‍ಡೌನ್‍ನಿಂದಾಗಿ ಜನ ಸಾಮಾನ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ 50 ಸಾವಿರ ಆಹಾರ ಧಾನ್ಯಗಳ ಕಿಟ್ ವಿತರಿಸಲು ಶಾಸಕ ಶಿವಲಿಂಗೇಗೌಡ ಮುಂದಾಗಿದ್ದಾರೆ.

    ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಅವರು ಜನರಿಗೆ ಅನುಕೂಲವಾಗಲಿ ಎಂದು ಈಗಾಗಲೇ ಆಹಾರ ಧಾನ್ಯ ತುಂಬಿದ ಸುಮಾರು 50 ಸಾವಿರ ಕಿಟ್‍ಗಳನ್ನು ಸಿದ್ಧಪಡಿಸಿದ್ದಾರೆ. ಕಿಟ್‍ಗಳು ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ 530 ಹಳ್ಳಿಗೂ ತಲುಪಬೇಕು ಎಂಬ ಉದ್ದೇಶದಿಂದ ಈಗಾಗಲೇ ಶಾಸಕ ಶಿವಲಿಂಗೇಗೌಡ ಕಿಟ್ ಹಂಚಿಕೆ ಮಾಡುತ್ತಿದ್ದಾರೆ.

    ಶಿವಲಿಂಗೇಗೌಡ ಅವರು ಕೆಲವೊಂದು ಹಳ್ಳಿಗಳಿಗೆ ತಾವೇ ಸ್ವತಃ ತೆರಳಿ ಬೆಂಬಲಿಗರೊಂದಿಗೆ ಕಿಟ್ ಹಂಚಿಕೆ ಮಾಡುತ್ತಿದ್ದಾರೆ. ಇನ್ನುಳಿದ ಹಳ್ಳಿಗಳಲ್ಲಿ ತಮ್ಮ ಕಾರ್ಯಕರ್ತರ ಮೂಲಕ ಕಿಟ್ ಹಂಚುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕರು, ಎಷ್ಟು ಜನರಿಗೆ ಅಗತ್ಯವಿದೆಯೋ ಅವರಿಗೆ ತಮ್ಮ ಕೈಲಾದ ಮಟ್ಟಿಗೆ ಆಹಾರ ಧಾನ್ಯದ ಕಿಟ್ ತಲುಪಿಸುತ್ತಿದ್ದೇವೆ. ಒಂದು ವೇಳೆ ಏಪ್ರಿಲ್ ತಿಂಗಳ ನಂತರವೂ ಲಾಕ್‍ಡೌನ್ ಮುಂದುವರಿದರೆ ಕೈಲಾದ ಸಹಾಯ ಮಾಡುತ್ತೇನೆ ಎಂದು ತಿಳಿಸಿದ್ದಾರೆ.