Tag: MLA Rajugowda

  • ದೀಪಿಕಾ, ಮಾಜಿ ಸಿಎಂಗೆ ಬಿಜೆಪಿ ಶಾಸಕ ರಾಜುಗೌಡ ಟಾಂಗ್

    ದೀಪಿಕಾ, ಮಾಜಿ ಸಿಎಂಗೆ ಬಿಜೆಪಿ ಶಾಸಕ ರಾಜುಗೌಡ ಟಾಂಗ್

    ಯಾದಗಿರಿ: JNU ವಿದ್ಯಾರ್ಥಿಗಳ ಪರ ನಿಂತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಮಂಗಳೂರು ಗಲಭೆಯ ವಿಡಿಯೋ ಬಿಡುಗಡೆ ಮಾಡಿದ ಮಾಜಿ ಸಿಎಂ ಬಗ್ಗೆ ಸುರಪುರ ಬಿಜೆಪಿ ಶಾಸಕ ರಾಜುಗೌಡ ಯಾದಗಿರಿಯಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ನಟರು ಮುಖಕ್ಕೆ ಬಣ್ಣ ಹಚ್ಚಿ ನಿರ್ದೇಶಕ ಹೇಳಿದಂತೆ ನಟನೆ ಮಾಡುತ್ತಾರೆ. ಅವರು ಸ್ವಂತ ಬುದ್ಧಿಯಿಂದ ಕೆಲಸ ಮಾಡುವುದು ಕಡಿಮೆ. ತಮ್ಮ ಫೇಮ್ ಮತ್ತು ಪಬ್ಲಿಸಿಟಿಗೆ ಏನು ಬೇಕು ಅದನ್ನು ಮಾತ್ರ ಮಾಡುತ್ತಾರೆ. ದುಡ್ಡು ಕೊಟ್ಟು ಹೋಗಿ ನೋಡುವ ಸಿನಿಮಾದಲ್ಲಿ ಮಾತ್ರ ದೀಪಿಕಾ ಪಡುಕೋಣೆಯನ್ನು ನೋಡೋಕೆ ಚೆನ್ನಾಗಿರುತ್ತೆ. ಅದು ಬಿಟ್ಟು ಅವರ ಇತಿಹಾಸ ತೆಗೆದುಕೊಂಡರೆ ಅವರ ಬಗ್ಗೆ ಉತ್ತರ ಸಿಗುತ್ತೆ. ಹೀಗಾಗಿ ನಾನು ನಟರ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಪಬ್ಲಿಸಿಟಿಗೋಸ್ಕರ ಮಾತನಾಡುವ ಬದಲಾಗಿ ಸತ್ಯದ ಬಗ್ಗೆ ಮಾತಾಡಲಿ ಎಂದು ಶಾಸಕ ರಾಜುಗೌಡ ಹೇಳಿದ್ದಾರೆ.

    ಮಂಗಳೂರು ಗಲಭೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ವಿಡಿಯೋ ಬಿಡುಗಡೆ ವಿಚಾರ ಮಾತನಾಡಿದ ಅವರು, ಕುಮಾರಸ್ವಾಮಿ ರಾಜಕಾರಣಿಯಾಗುವುದಕ್ಕಿಂತ ಮೊದಲು ನಿರ್ಮಾಪಕರಾಗಿದ್ದು, ವೀಡಿಯೋ ಎಡಿಟಿಂಗ್ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತು. ಗಲಭೆ ವಿಚಾರ ಇಟ್ಟುಕೊಂಡು ಚೀಪ್ ಪಾಲಿಟಿಕ್ಸ್ ಮಾಡುವುದು ಸರಿಯಲ್ಲ. ರಾಜಕೀಯ ಪಿತೂರಿಯಿಂದ ಮಂಗಳೂರಿನಲ್ಲಿ ಉದ್ದೇಶ ಪೂರಕವಾಗಿ ಗಲಾಟೆಯಾಗಿದೆ ಎಂದರು.

    ಪೊಲೀಸರು ಗಲಾಟೆ ವೀಡಿಯೋ ಬಿಡುಗಡೆ ಮಾಡಿದ ದಿನವೇ ಕುಮಾರಸ್ವಾಮಿಯವರು ತಮ್ಮ ವೀಡಿಯೋ ಬಿಡುಗಡೆ ಮಾಡಬೇಕಿತ್ತು. ಆದರೆ ಇಷ್ಟು ದಿನ ಯಾಕೆ ಸುಮ್ನಿದ್ದರು, ಅವರಿಗೆ ಜನರ ಬಗ್ಗೆ ಅಷ್ಟು ಕಾಳಜಿ ಇದ್ದರೆ ನೆರೆ ಬಂದ ಪ್ರದೇಶಗಳಿಗೆ ಬಂದು ಮಲಗಲಿ. ವಿರೋಧ ಪಕ್ಷದಲ್ಲಿರುವವರು ಇಂತಹ ವೀಡಿಯೋ ಬಿಡುಗಡೆ ಮಾಡಿ ಹೆಸರು ಪಡೆಯುವ ಬದಲು ಜನರ ಕಷ್ಟ ಆಲಿಸಲಿ ಎಂದು ಟಾಂಗ್ ನೀಡಿದ್ದಾರೆ.

  • ತಾತ, ಮೊಮ್ಮಕ್ಕಳಿಗೆ ಸೋಲು ಖಚಿತ, ಚುನಾವಣೆ ನಂತ್ರ ಹುಡುಕಬೇಕು: ರಾಜುಗೌಡ

    ತಾತ, ಮೊಮ್ಮಕ್ಕಳಿಗೆ ಸೋಲು ಖಚಿತ, ಚುನಾವಣೆ ನಂತ್ರ ಹುಡುಕಬೇಕು: ರಾಜುಗೌಡ

    ಯಾದಗಿರಿ: ಲೋಕಸಭೆ ಚುನಾವಣಾ ಬಳಿಕ ಪ್ರಧಾನಿ ದೇವೇಗೌಡರನ್ನು, ಮಗ ನಿಖಿಲ್‍ರನ್ನು ಮತ್ತು ಅಣ್ಣಮಗ ಪ್ರಜ್ವಲ್ ಅವರನ್ನು ಎಲ್ಲಿದ್ದಿರಪ್ಪಾ ಅಂತ ಕರೆದು ಹುಡುಕಬೇಕಾದ ಪರಿಸ್ಥಿತಿ ಸಿಎಂ ಕುಮಾರಸ್ವಾಮಿಗೆ ಬರಲಿದೆ ಎಂದು ಸುರಪುರ ಶಾಸಕ ರಾಜುಗೌಡ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ಎಲ್ಲಿದ್ದಿಯಪ್ಪ ಡೈಲಾಗ್ ಬಳಸಿ ದೇವೇಗೌಡರ ಕುಟುಂಬವನ್ನು ಲೇವಡಿ ಮಾಡಿದ್ದಾರೆ.

    ತಾತ ಮತ್ತು ಇಬ್ಬರೂ ಮೊಮ್ಮಕ್ಕಳು ಸೋಲುವುದು ಖಚಿತವಾಗಿದೆ. ಲೋಕಸಭಾ ಚುನಾವಣೆ ನಂತರ ಅವರನ್ನು ಹುಡುಕಬೇಕಾಗುತ್ತದೆ. 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಡುವುದಾಗಿ ದೇವೇಗೌಡರು ಹೇಳಿದ್ದರು. ಆದರೆ ಅವರೇನು ದೇಶ ಬಿಡಲಿಲ್ಲ. ಈಗ ರೇವಣ್ಣ ಸನ್ಯಾಸಿ ಆಗುತ್ತೇನೆ ಎನ್ನುತ್ತಾರೆ. ಇದರಿಂದಲೇ ಜೆಡಿಎಸ್‍ನವರಿಗೆ ಎರಡು ನಾಲಗೆ ಇದೆ ಎಂದು ಎನ್ನುವುದು ಗೊತ್ತಾಗುತ್ತದೆ ಎಂದು ದೇವೇಗೌಡರಿಗೆ ಮಾತಿನ ಚಾಟಿ ಬಿಸಿದರು.

    ನಿಖಿಲ್ ಎಲ್ಲಿದ್ಯಪ್ಪ ಅಂತ ಸಿನಿಮಾ ಮಾಡಿದರೆ ನೀವು ಅದರಲ್ಲಿ ನಟಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಅವರು, ನಾನಲ್ಲ ನಮ್ಮ ಮನೆ ಕೆಲಸದವರು ಕೂಡ ಆ ಚಿತ್ರದಲ್ಲಿ ಪಾತ್ರ ಮಾಡಲು ಇಷ್ಟಪಡಲ್ಲ. ಆದರೆ ಮೋದಿ ಅವರ ಸಿನಿಮಾ ಬಂದರೆ ಅದರಲ್ಲಿ ಬೇಕಾದರೇ ಸೈನಿಕನ ಪಾತ್ರ ಮಾಡುತ್ತೇನೆ ಅಂತ ಹೇಳಿದರು.

    ಕಾಂಗ್ರೆಸ್ ನಾಯಕರು ಆಯೋಜಿಸಿರುವ ವೀರಶೈವ ಲಿಂಗಾಯತ ಸಮಾವೇಶದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಗಂಡ ಸತ್ತ ಮೇಲೆ ಹೆಂಡತಿಗೆ ಬುದ್ಧಿ ಬಂದಂತೆ ಲಿಂಗಾಯತ ಧರ್ಮ ಒಡೆಯಲು ಹೋದ ಬಳಿಕ ಕಾಂಗ್ರೆಸ್ ನಾಯಕರಿಗೆ ಈಗ ಬುದ್ಧಿ ಬಂದಿದೆ. ಧರ್ಮ ಒಡೆದವರು ಈಗ ಲೋಕಸಭೆ ಚುನಾವಣೆಯಲ್ಲಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಇಂತವರು ಸರ್ವನಾಶ ಅಗಲಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು.

  • ಬುದ್ಧಿಜೀವಿಗಳಿಗೆ ಶಾಸಕ ರಾಜುಗೌಡ ಎಚ್ಚರಿಕೆ

    ಬುದ್ಧಿಜೀವಿಗಳಿಗೆ ಶಾಸಕ ರಾಜುಗೌಡ ಎಚ್ಚರಿಕೆ

    ರಾಯಚೂರು: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಾವಿಗೆ ಸಂತಾಪ ಸೂಚಿಸಿ, ಬಳಿಕ ಬುದ್ಧಿಜೀವಿಗಳು ಹೇಳಿಕೆ ನೀಡುವಾಗ ಅವರ ನಾಲಗೆ ಮೇಲೆ ಹಿಡಿತವಿರಿಲಿ. ಇಲ್ಲದಿದ್ದರೆ ನಾಲಗೆ ಕತ್ತರಿಸಬೇಕಾಗುತ್ತದೆ ಎಂದು ಸುರಪುರ ಶಾಸಕ ರಾಜುಗೌಡ ಎಚ್ಚರಿಕೆ ನೀಡಿದ್ದಾರೆ.

    ರಾಯಚೂರಿನಲ್ಲಿ ನಡೆದ ಆರೋಗ್ಯಕ್ಕಾಗಿ ಓಟ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪುಲ್ವಾಮದಲ್ಲಿ ನಡೆದ ಘೋರ ಉಗ್ರರ ದಾಳಿಯಲ್ಲಿ ವೀರ ಯೋಧರು ಹುತಾತ್ಮರಾಗಿರುವುದು ಬೇಸರದ ಸಂಗತಿ. ಇದರಿಂದ ಇಡೀ ದೇಶಕ್ಕೆ ನೋವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಯೋಧರ ಹತ್ಯೆಯನ್ನು ಸಂಭ್ರಮಿಸುವ ಪ್ರಜೆಗಳು, ನಟರು, ರಾಜಕಾರಣಿಗಳು ಹಾಗೂ ಉದ್ಯಮಿಗಳು ಯಾರೇ ಆಗಲಿ ಅವರು ದೇಶದ್ರೋಹಿಗಳು ಎಂದು ಕಿಡಿಕಾರಿದ್ದಾರೆ.

    ಸಿಆರ್‌ಪಿಎಫ್‌ನ 40 ಕ್ಕೂ ಅಧಿಕ ಯೋಧರು ಬಲಿಯಾಗಿದ್ದಾರೆ. ಈ ಕೃತ್ಯವೆಸಗಿದ ಪಾಕ್ ಉಗ್ರರನ್ನು ಬುಡ ಸಮೇತ ಕಿತ್ತು ಎಸೆಯಬೇಕು ಎಂದು ನಾನು ಮೋದಿ ಅವರಿಗೆ ಮನವಿ ಮಾಡುತ್ತೇನೆ. ಆಗ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ದೊರೆಯುತ್ತದೆ. ಈ ವಿಚಾರವಾಗಿ ಎಲ್ಲಾ ಪಕ್ಷಗಳು ಒಂದಾಗಬೇಕಾಗಿದೆ. ಇಲ್ಲಿ ರಾಜಕೀಯ ಮಾಡುವುದು ಬೇಡ. ಗಡಿ ಯೋಧರು ಯಾವ ಜಾತಿ, ಪಕ್ಷ ಭೇದವಿಲ್ಲದೆ ನಾವೆಲ್ಲ ಭಾರತೀಯರೆಂದು ದೇಶವನ್ನು ಕಾಯುತ್ತಾರೆ. ಹಾಗೆಯೇ ನಾವೆಲ್ಲ ಒಂದಾಗಿ ಉಗ್ರರ ವಿರುದ್ಧ ನಿಲ್ಲಬೇಕು. ಯೋಧರ ಹತ್ಯೆಯನ್ನು ಸಂಭ್ರಮಿಸೋ ಜನರು ದೇಶದ್ರೋಹಿಗಳು. ಬುದ್ಧಿಜೀವಿಗಳು ಈ ರೀತಿಯ ಹೇಳಿಕೆ ನೀಡಿದರೆ ನಾಲಗೆ ಕತ್ತರಿಸಬೇಕಾಗುತ್ತದೆ. ಯಾರೇ ದೇಶದ್ರೋಹ ಹೇಳಿಕೆ ನೀಡಿದರೂ ಅವರ ಪ್ರತಿರೋಧಕ್ಕೆ ಯುವಕರ ಪಡೆ ಸಿದ್ಧವಾಗಿದೆ ಎಂದು ಶಾಸಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv