Tag: MLA Raju Gowda

  • ಈ ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ: ರಾಜೂಗೌಡ

    ಈ ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ: ರಾಜೂಗೌಡ

    ಯಾದಗಿರಿ: ಈ ಸೋಲಿಗೆ ನಾನೇ ಕಾರಣ ಇದು ನನ್ನ ನಾಯಕತ್ವದಲ್ಲಿ ನಡೆದ ಚುನಾವಣೆ, ಹೀಗಾಗಿ ಈ ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದ್ದಾರೆ.

    ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಸುರಪುರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಕ್ಕೇರಿ ಪುರಸಭೆ ಸೋಲಿಗೆ ನಾನೇ ಕಾರಣ ಇದು ನನ್ನ ನಾಯಕತ್ವದಲ್ಲಿ ನಡೆದ ಚುನಾವಣೆ, ಹೀಗಾಗಿ ಈ ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ಇದು ನನಗೆ ಎಚ್ಚರಿಕೆ ಗಂಟೆ ಅಂತ ಸೋಲಿನ ವಿಮರ್ಶೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: 4 ಬಾರಿ ಕೋವಿಡ್‌ ಲಸಿಕೆ ಪಡೆದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್‌

    ಜನರ ನನ್ನ ಮೇಲೆ ಸಿಟ್ಟಾಗಿದ್ದಾರೆ ಇದನ್ನು ಅರಿತು ಇನ್ನು ಮುಂದೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಜನರು ಎಷ್ಟು ಕೆಲಸ ಮಾಡಿದರೂ ನಮ್ಮ ಬಗ್ಗೆ ಒಲವು ಹೊಂದಿಲ್ಲ. ಒಂದಲ್ಲಾ, ಒಂದು ಕಾರಣಕ್ಕಾಗಿ ಸಿಟ್ಟಾಗಿದ್ದಾರೆ. ಜನರ ಅಸಮಾಧಾನಕ್ಕೆ ಕಾರಣ ಹುಡುಕಲು ಯತ್ನಿಸುತ್ತೇನೆ. ಬಳಿಕ ಅವರ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.

    ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಡಿ.27ರಂದು ಚುನಾವಣೆ ನಡೆದಿತ್ತು. 58 ಪುರಸಭೆ, 57 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಇದನ್ನೂ ಓದಿ: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರತನ್ ಟಾಟಾ

  • ಮೀಸಲಾತಿ ವಿಚಾರವಾಗಿ ಶ್ರೀಗಳು ರಾಜೀನಾಮೆ ನೀಡು ಅಂದ್ರೆ ನೀಡುತ್ತೇನೆ: ರಾಜೂಗೌಡ

    ಮೀಸಲಾತಿ ವಿಚಾರವಾಗಿ ಶ್ರೀಗಳು ರಾಜೀನಾಮೆ ನೀಡು ಅಂದ್ರೆ ನೀಡುತ್ತೇನೆ: ರಾಜೂಗೌಡ

    ಯಾದಗಿರಿ: ಮೀಸಲಾತಿ ವಿಚಾರವಾಗಿ ನಮ್ಮ ಶ್ರೀಗಳು ರಾಜೀನಾಮೆ ನೀಡು ಎಂದರೇ ನಾನು ರಾಜೀನಾಮೆ ನೀಡುತ್ತೇನೆ. ವಿರೋಧ ಪಕ್ಷದಲ್ಲಿ ಇದ್ದಾಗ ಹೇಳಿದ ಮಾತನ್ನೇ ಈಗಲೂ ಹೇಳುತ್ತೇನೆ ಎಂದು ಸುರಪುರ ಬಿಜೆಪಿ ಶಾಸಕ ಮತ್ತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ರಾಜೂಗೌಡ ಹೇಳಿಕೆ ನೀಡಿದ್ದಾರೆ.

    ಎಸ್‍ಟಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರವಾಗಿ ಮಾತನಾಡಿದ ಅವರು, ನಾನು ವಿರೋಧ ಪಕ್ಷದಲ್ಲಿ ಇದ್ದಾಗ ರಾಜೂಗೌಡ ತಂದೆ ಶಂಬನಗೌಡ ಅಂತ ನನ್ನ ಹೆಸರು ಇತ್ತು. ಇವತ್ತು ಆಡಳಿತ ಪಕ್ಷದಲ್ಲಿದ್ದೇನೆ, ಇಂದು ಕುಡ ನನ್ನ ಹೆಸರು ರಾಜೂಗೌಡ ತಂದೆ ಶಂಬನಗೌಡ ಅಂತ ಇದೆ. ನಾನು ನನ್ನ ತಂದೆ ಮಗ, ನಾನು ನಮ್ಮ ಶ್ರೀಗಳಿಗೆ ನೀಡಿದ ಮಾತಿಗೆ ಇಂದಿಗೂ ಬದ್ಧ. ನಮ್ಮ ಶ್ರೀಗಳು ವಿಧಾನಸಭೆಯಲ್ಲಿ ಹೋರಾಟ ಮಾಡು ಎಂದರೂ ಮಾಡುತ್ತೇನೆ. ಶ್ರೀಗಳ ಆಜ್ಞೆ ಏನು ಇರುತ್ತೋ ಅದನ್ನು ಪಾಲಿಸುತ್ತೇನೆ ಎಂದರು.

    ನಾವು ಇನ್ನೂ ಹುಡುಗರಿದ್ದು, ಮೈಯಲ್ಲಿ ಜೋಶ್ ಇದೆ. ಏನು ಬೇಕಾದರೂ ಮಾತನಾಡುತ್ತೇವೆ. ಆದರೆ ನಮ್ಮ ಹಿಂದೆ ಸತೀಶ್ ಜಾರಕಿಹೊಳಿಯಂತ ಹಿರಿಯರು ಇದ್ದಾರೆ. ಅವರ ಮಾರ್ಗದಲ್ಲಿ ನಮ್ಮ ಹೋರಾಟ ಮುಂದುವರಿಸುತ್ತೇವೆ. ಸಂಪುಟ ವಿಸ್ತರಣೆಗೆ ನಮ್ಮ ಮುಖ್ಯಮಂತ್ರಿಗಳು ಮನಸ್ಸು ಮಾಡಿದ್ದಾರೆ. ಈ ಬಾರಿಯಾದರೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸ್ಥಾನ ನೀಡಬೇಕು ಎಂಬುದು ನಮ್ಮ ಒತ್ತಾಯಿದೆ ಎಂದರು.

    ಇದೇ ವೇಳೆ ಡ್ರಗ್ಸ್ ಮಾಫಿಯಾ ಕುರಿತು ಮಾತನಾಡಿದ ಅವರು, ನಶೆಗೆ ಯಾವ ಫಿಲ್ಮ್ ಸ್ಟಾರ್ ಇಲ್ಲ, ಮುಖ್ಯಮಂತ್ರಿ ರಾಜಕಾರಣಿನೂ ಇಲ್ಲ. ಯಾರು ನಶೆಯಿಂದ ಬಿಳುತ್ತಾರೋ ಅಂತಹವರು ಅದಕ್ಕೆ ಒಳಗಾಗುತ್ತಾರೆ. ಯಾರು ಉಪ್ಪು ತಿನ್ನುತ್ತಾರೋ ಅವರು ನೀರು ಕುಡಿಯುತ್ತಾರೆ ಎಂದರು.

    ನಟ-ನಟಿಯರನ್ನು ಮತ್ತು ರಾಜಕಾರಣಿಗಳನ್ನು ಜನರ ಫಾಲೋ ಮಾಡುತ್ತಾರೆ. ಈ ಡ್ರಗ್ಸ್ ಚಟಕ್ಕೆ ಅವರು ಬಿದ್ದ ಮೇಲೆ ನಟ-ನಟಿಯರು ನಶೆಯನ್ನು ಫಾಲೋ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳತ್ತಾರೆ. ಮುಖ್ಯ ಮಂತ್ರಿಗಳು ಮತ್ತು ಗೃಹ ಸಚಿವರು ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳ ಎಸ್‍ಪಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ರಾಜ್ಯ ಮೂಲೆ ಮೂಲೆಗಳಲ್ಲಿ ಈ ಡ್ರಗ್ ಜಾಲ ಪತ್ತೆ ಮಾಡಲು ಕ್ರಮ ತೆಗೆದುಕೊಂಡಿದ್ದಾರೆ. ಈ ಮೂಲಕ ರಾಜ್ಯವನ್ನು ಡ್ರಗ್ ಮುಕ್ತ ಮಾಡಲು ಸಿದ್ಧರಾಗಿದ್ದಾರೆ ಎಂದರು.

    ಯಾರು ಪೇಜ್ 3 ಪಾರ್ಟಿ ಮಾಡುತ್ತಾರೋ ಅವರು ಈ ಡ್ರಗ್ ಚಟಕ್ಕೆ ಬೀಳುತ್ತಾರೆ. ನಾವು ಪಾರ್ಟಿ ಮಾಡುವಾಗ ನಮಗೂ ಸಾಕಷ್ಟು ಮಂದಿ ನೀನು ಕುಡಿಯಲ್ಲಾ ಅಂತ ಗೇಲಿ ಮಾಡಿದ್ದಾರೆ. ನಮ್ಮ ಮೈಂಡ್ ಸ್ಟ್ರಾಂಗ್ ಇದೆ ಅದಕ್ಕೆ ನಾವು ಅದರ ಹತ್ತಿರ ಹೋಗಲ್ಲ. ಆದರೆ ಗೇಲಿ ಮಾಡೋರ ಮಾತು ಕೇಳಲಾಗದೆ ಕೆಲವರು ರುಚಿ ನೋಡಲು ಮುಂದಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಇತ್ತೀಚೆಗೆ ಡ್ಯಾಮೇಜಿಂಗ್ ಹೇಳಿಕೆಗಳು ಹೆಚ್ಚಾಗುತ್ತಿವೆ. ಸತ್ಯ ಯಾವುದೋ ಸುಳ್ಳು ಯಾವುದೋ ಗೊತ್ತಾಗತ್ತಿಲ್ಲ. ಪ್ರಶಾಂತ ಸಂಬರಗಿ ಎನ್ನುವರು ಜಮೀರ್ ಅಹ್ಮದ್ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಶಾಸಕರ ಮೇಲೆ ಗಂಭೀರ ಆರೋಪ ಮಾಡುವಾಗ ಸಂಬಂಧಿಸಿದ ದಾಖಲೆ ಇದ್ದರೆ ಕೇಸ್ ದಾಖಲಿಸಬೇಕು. ಜಮೀರ್ ಕ್ಯಾಸಿನೊಗೆ ಹೋದಾಗ ಸಂಜನಾ ಇದ್ದರೋ ಇಲ್ಲವೋ ಎಂಬುವುದು ತನಿಖೆಯಿಂದ ಹೊರ ಬರುತ್ತೆ ಎಂದರು.

  • ಬೇರೆ ರಾಜ್ಯದಿಂದ ಬಂದ ಕಾರ್ಮಿಕರಿಗಾಗಿ ಸ್ವಂತ ಮನೆ ಬಿಟ್ಟುಕೊಡಲೂ ಸಿದ್ಧ: ಶಾಸಕ ರಾಜುಗೌಡ

    ಬೇರೆ ರಾಜ್ಯದಿಂದ ಬಂದ ಕಾರ್ಮಿಕರಿಗಾಗಿ ಸ್ವಂತ ಮನೆ ಬಿಟ್ಟುಕೊಡಲೂ ಸಿದ್ಧ: ಶಾಸಕ ರಾಜುಗೌಡ

    – ನಮ್ಮ ಜಿಲ್ಲೆಯ ಕಾರ್ಮಿಕರಿಗಾಗಿ ಎಲ್ಲ ರೀತಿಯ ಸಹಾಯ ಮಾಡ್ತೇನೆ
    – ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಲು ಇದು ಸಕಾಲ

    ಯಾದಗಿರಿ: ಬೇರೆ ರಾಜ್ಯದಿಂದ ಬಂದ ಜನರಿಗಾಗಿ ಸ್ವಂತ ಮನೆ ಬಿಟ್ಟುಕೊಡಲೂ ಸಿದ್ಧ ಎಂದು ಸುರಪುರ ಬಿಜೆಪಿ ಶಾಸಕ ರಾಜುಗೌಡ ಹೇಳಿದ್ದಾರೆ.

    ಯಾದಗಿರಿ ಜಿ.ಪಂ. ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಯಾದಗಿರಿ ಜಿಲ್ಲೆ ಗ್ರೀನ್ ಝೋನ್ ನಲ್ಲಿರುವ ಕಾರಣ ವಿವಿಧ ಜಿಲ್ಲೆಗಳಿಂದ ಮತ್ತು ರಾಜ್ಯಗಳಲ್ಲಿ ಸಿಲುಕಿರುವ ಜಿಲ್ಲೆಯ ಕಾರ್ಮಿಕರನ್ನು ಕರೆತರಲು ಸಿದ್ಧತೆ ನಡೆಸಾಲಗಿದೆ. ಆದರೆ ಇದಕ್ಕೆ ಜಿಲ್ಲೆಯ ಹಲವು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಮ್ಮ ಜಿಲ್ಲೆಯ ಕಾರ್ಮಿಕರಿಗೆ ನಾವು ಸಹಾಯ ಮಾಡಬೇಕಿದೆ ಎಂದು ಹೇಳಿದ್ದಾರೆ.

    ಕೋವಿಡ್ 19 ಹರಡುವಿಕೆ ತಡೆಯಲು ಮುಂಜಾಗ್ರತಾ ಕ್ರಮವಾಗಿ, ಜಿಲ್ಲೆಗೆ ಬಂದಿರುವವರಿಗೆ ಸರ್ಕಾರಿ ಶಾಲೆ ಮತ್ತು ಹಾಸ್ಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಇದಕ್ಕೆ ಸ್ಥಳೀಯರು ವಿರೋಧಿಸುತ್ತಿದ್ದಾರೆ. ಇದರಿಂದ ಭಾವುಕರಾದ ರಾಜೂಗೌಡ, ಕೊರೊನಾ ಯಾರ ಪಾಪದಿಂದ ಬಂದಿದ್ದಲ್ಲ, ಇದರ ವಿರುದ್ಧ ಎಲ್ಲರೂ ಹೋರಾಡಬೇಕು. ಜಿಲ್ಲಾಡಳಿತ ನನ್ನ ಮನೆ ಕೇಳಿದರೂ ನಾನು ಬಿಟ್ಟು ಕೊಡಲು ಸಿದ್ಧ ಎಂದಿದ್ದಾರೆ.

    ಮದ್ಯಪಾನ ನಿಷೇಧಿಸುವಂತೆ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮದ್ಯ ಮಾರಾಟ ನಿಷೇಧ ಮಾಡಲು ಇದು ಸೂಕ್ತ ಸಮಯ, ಲಾಕ್ ಡೌನ್ ಸಮಯದಲ್ಲಿ ಬಹಳಷ್ಟು ಕುಡುಕರು ಮದ್ಯ ವ್ಯಸನದಿಂದ ದೂರವಾಗಿದ್ದಾರೆ. ಇದನ್ನು ಅರಿತು ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕು ಎಂದರು.

  • ನನಗೆ ಸಿಎಎ ಬಗ್ಗೆ ಗೊತ್ತಿಲ್ಲ, ಆದ್ರೆ ನೀವೇಕೆ ವಿರೋಧ ಮಾಡ್ತೀರಿ ಹೇಳಿ: ಶಾಸಕ ರಾಜುಗೌಡ

    ನನಗೆ ಸಿಎಎ ಬಗ್ಗೆ ಗೊತ್ತಿಲ್ಲ, ಆದ್ರೆ ನೀವೇಕೆ ವಿರೋಧ ಮಾಡ್ತೀರಿ ಹೇಳಿ: ಶಾಸಕ ರಾಜುಗೌಡ

    ಕಲಬುರಗಿ: ಸಿಎಎ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನೀವು ಯಾಕೆ ವಿರೋಧ ಮಾಡುತ್ತಿದ್ದೀರಿ ಹೇಳಿ ಎಂದು ಸುರಪುರ ಶಾಸಕ ರಾಜುಗೌಡ ಕಲಬುರಗಿಯಲಲ್ಲಿ ಪೌರತ್ವ ವಿರೋಧಿಸುವವರಿಗೆ ಪ್ರಶ್ನೆ ಮಾಡಿದ್ದಾರೆ.

    ಡಿ.11ರಂದು ಕಲಬುರಗಿ ನಗರದಲ್ಲಿ ಪೌರತ್ವ ಬೆಂಬಲಿಸಿ ನಡೆಯುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದವರು, ಸದ್ಯ ಸಿಎಎ ಬಗ್ಗೆ ಗಂಧ ಗಾಳಿಯು ಗೊತ್ತಿಲ್ಲದವರು ವಿರೋಧ ಮಾಡ್ತಿದ್ದಾರೆ. ಇದನ್ನು ವಿರೋಧಿಸುವವರ ಕನಸಿನಲ್ಲೂ ಮೋದಿ ಬರುತ್ತಾರೆ. ಬೆಳಗ್ಗೆ ಎದ್ದು ಹಲ್ಲುಜ್ಜುವಾಗ ಮೋದಿ, ಅಮಿತ್ ಶಾ ಕನ್ನಡಿಯಲ್ಲಿ ಕಾಣುತ್ತಾರೆ ಎಂದು ಲೇವಡಿ ಮಾಡಿದರು.

    ಸಿಎಎ ವಿರೋಧಿಸುವವರಿಗೆ ಅದನ್ನು ಮಾಡುವುದು ಬಿಟ್ಟು ಬೇರೆ ಏನು ಕೆಲಸ ಮಾಡೋದಿಲ್ಲ. ಮೋದಿ ಸಾಹೇಬರು ಹುಟ್ಟಿರೋದೆ ಭಾರತಾಂಬೆಯ ರಕ್ಷಣೆಗಾಗಿ, ಅಮಿತ್ ಶಾ ಹುಟ್ಟಿರೋದೆ ಮೋದಿ ಸಾಹೇಬರ ಆಜ್ಞೆ ಪಾಲನೆ ಮಾಡೋದಕ್ಕೆ. ಹಿಂದಿನ ಕಾಲದಲ್ಲಿ ರಾಮ ಆಂಜನೇಯನನ್ನು ನೋಡುತ್ತಿದ್ದೇವು. ಡಿ.11ರ ಬೆಳಗ್ಗೆ 11 ಗಂಟೆಗೆ ಕಲಬುರಗಿಯ ಎಲ್ಲಾ ಸಮುದಾಯದ ಜನ ಪೌರತ್ವ ಕಾಯ್ದೆ ಬೆಂಬಲಿಸಿ ಕಲಬುರಗಿಯ ಮೆರವಣಿಗೆಯಲ್ಲಿ ಭಾಗವಹಿಸಿ ಎಂದು ರಾಜುಗೌಡ ಕರೆ ನೀಡಿದ್ದಾರೆ.

    ಕಲಬುರಗಿ-ಬೀದರ್ ಜಿಲ್ಲೆಯ ವಿವಿಧ ಮಠಾಧೀಶರು ಸೇರಿದಂತೆ ಎಲ್ಲಾ ಸಮುದಾಯದ ಜನ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಆ ಮೂಲಕ ಸಿಎಎ ಬೆಂಬಲಿಸಿ ಮೋದಿ-ಶಾ ಕೈ ಬಲಪಡಿಸಿ ಎಂದು ಕರೆ ನೀಡಿದರು.

  • ಮಧ್ಯರಾತ್ರಿ ಯುವಕರೊಂದಿಗೆ ಕಬಡ್ಡಿ ಆಡಿದ ಬಿಜೆಪಿ ಶಾಸಕ ರಾಜುಗೌಡ

    ಮಧ್ಯರಾತ್ರಿ ಯುವಕರೊಂದಿಗೆ ಕಬಡ್ಡಿ ಆಡಿದ ಬಿಜೆಪಿ ಶಾಸಕ ರಾಜುಗೌಡ

    ಯಾದಗಿರಿ: ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸ್ವಲ್ಪ ದಿನ ಮಂಕಾಗಿದ್ದ ಯಾದಗಿರಿ ಜಿಲ್ಲೆಯ ಸುರಪುರದ ಬಿಜೆಪಿ ಶಾಸಕ ರಾಜುಗೌಡ ಈಗ ಫುಲ್ ಜೋಶ್‌ನಲ್ಲಿದ್ದಾರೆ. ಶನಿವಾರ ತಮ್ಮ ಕ್ಷೇತ್ರದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಯುವಕರೊಂದಿಗೆ ಕಬಡ್ಡಿ ಕಣದಲ್ಲಿ ರಾಜುಗೌಡ ಮಿಂಚಿದ್ದಾರೆ.

    ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡದರಾಳದಲ್ಲಿ ಶನಿವಾರ ಶ್ರೀ ಬಸವೇಶ್ವರ ಯುವ ಬಳಗ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ, ಮುಕ್ತ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಿತ್ತು. ಈ ಪಂದ್ಯಾವಳಿಯನ್ನು ಶಾಸಕ ರಾಜುಗೌಡ ಅವರು ಉದ್ಘಾಟಿಸಿದರು. ಅಷ್ಟೇ ಅಲ್ಲದೆ ಯುವಕರೊಂದಿಗೆ ಸ್ವತಃ ತಾವೇ ಕಬಡ್ಡಿ ಕಣಕ್ಕಿಳಿದು ಆಟವಾಡಿ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಮುಂದಾದರು.

    ಮೂಲತಃ ಕ್ರೀಡಾಪಟುವಾಗಿರುವ ರಾಜುಗೌಡ ಅವರು ಯುವಕರೊಂದಿಗೆ ನುರಿತ ಕಬಡ್ಡಿ ಆಟಗಾರರಂತೆ ಆಟವಾಡುವ ಮೂಲಕ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿ, ಅವರ ಮನಗೆದ್ದಿದ್ದಾರೆ. ಕಾರ್ಯಕ್ರಮ ಉದ್ಘಾಟನೆ ಮಾಡಿ ಭಾಷಣದ ಮೂಲಕ ಯುವಕರಿಗೆ ಪ್ರೋತ್ಸಾಹಿಸಿದ್ದಲ್ಲದೆ, ಸ್ವತಃ ತಾವೇ ಯುವಕರೊಂದಿಗೆ ಕಬಡ್ಡಿ ಆಟವಾಡಿರುವುದು ವಿಶೇಷವಾಗಿದ್ದು, ಶಾಸಕರ ಕಾರ್ಯಕ್ಕೆ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಆನಂದ್ ಸಿಂಗ್ ಸ್ಥಿತಿ ನೋಡಿ ಬಹಳ ಗಾಬರಿ ಆಯ್ತು, ಅದು ರಾಕ್ಷಸರು ಮಾಡೋ ಕೆಲಸ: ಶಾಸಕ ರಾಜೂಗೌಡ ಆಕ್ರೋಶ

    ಆನಂದ್ ಸಿಂಗ್ ಸ್ಥಿತಿ ನೋಡಿ ಬಹಳ ಗಾಬರಿ ಆಯ್ತು, ಅದು ರಾಕ್ಷಸರು ಮಾಡೋ ಕೆಲಸ: ಶಾಸಕ ರಾಜೂಗೌಡ ಆಕ್ರೋಶ

    – ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದ ಶಾಸಕ ಸಿಟಿ ರವಿ, ಮಾಜಿ ಸಚಿವ ಜನಾರ್ದನ ರೆಡ್ಡಿ
    – ಕಾಂಗ್ರೆಸ್ ಪಕ್ಷದಲ್ಲಿ ಡಿವೈಡ್ ಅಂಡ್ ರೂಲ್ ಪಾಲಿಸಿ: ಜರ್ನಾದನ ರೆಡ್ಡಿ

    ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ಸೇರಿರುವ ಶಾಸಕ ಆನಂದ್ ಸಿಂಗ್ ಅವರನ್ನು ಬಿಜೆಪಿ ಶಾಸಕ ಸಿಟಿ ರವಿ, ರಾಜೂಗೌಡ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

    ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಾಜೂಗೌಡ, ಮೊದಲ ದಿನ ಅವರ ಭೇಟಿಗೆ ಬಂದ ವೇಳೆ ಏಕೆ ಅವಕಾಶ ನೀಡಿಲ್ಲ ಎನ್ನುವುದು ಇಂದು ಆನಂದ್ ಸಿಂಗ್ ಅವರನ್ನು ನೋಡಿದ ಬಳಿಕ ತಿಳಿಯಿತು. ಅವರ ಸ್ಥಿತಿ ನೋಡಿ ಬಹಳ ಗಾಬರಿ ಆಯ್ತು. ಆ ಮಟ್ಟದಲ್ಲಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಇಂತಹ ಕೃತ್ಯವನ್ನು ಮನುಷ್ಯರು ಮಾಡುವ ಕೆಲಸ ಅಲ್ಲ, ಇದು ರಾಕ್ಷಸರು ಮಾಡುವ ಕೆಲಸ. ನಮ್ಮ ಶತ್ರುಗಳಿಗೂ ಇಂತಹ ಪರಿಸ್ಥಿತಿ ಬರುವುದು ಬೇಡ. ಈಗಲೂ ಆನಂದ್ ಸಿಂಗ್ ಆತಂಕದಲ್ಲೇ ಇದ್ದಾರೆ ಎಂದು ಹಲ್ಲೆ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಪಕ್ಷವರು ಅವರ ಶಾಸಕರನ್ನೇ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಸಾಮಾನ್ಯ ಜನರಿಗೆ ರಕ್ಷಣೆ ಕೊಡುವುದು ಸರ್ಕಾರದಿಂದ ಸಾಧ್ಯವೇ? ಉದ್ದೇಶ ಪೂರ್ವಕವಾಗಿಯೇ ಶಾಸಕ ಗಣೇಶರನ್ನು ರಕ್ಷಣೆ ಮಾಡಲಾಗುತ್ತಿದ್ದು, ನಾವೇನಾದ್ರೂ ಈ ವಿಚಾರದಲ್ಲಿ ಒತ್ತಾಯ ಮಾಡಿದರೆ ಅದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಪೊಲೀಸರು ಶಾಸಕ ಗಣೇಶರನ್ನು ಬಂಧನ ಮಾಡೋದಕ್ಕೆ ಅಷ್ಟು ಆಸಕ್ತಿ ತೋರಿಸುತ್ತಿಲ್ಲ ಎಂದೆನಿಸುತ್ತದೆ. ಆದ್ದರಿಂದ ಆನಂದ್ ಸಿಂಗ್ ಅವರ ಸ್ನೇಹಿತನಾಗಿ ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇನೆ. ಇತರೇ ಶಾಸಕರು ಮಾನವೀಯ ದೃಷ್ಟಿಯಿಂದ ಆದ್ರು ಈ ಬಗ್ಗೆ ಸಾಕ್ಷಿ ಹೇಳಬೇಕು ಎಂದರು.

    ಇದಕ್ಕೂ ಮುನ್ನ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ಸಿ.ಟಿ ರವಿ, ಆನಂದ್ ಸಿಂಗ್ ಅವರ ಆರೋಗ್ಯ ವಿಚಾರಿಸಿದರು. ನಾನು ಆನಂದ್ ಸಿಂಗ್ ಹತ್ತು ವರ್ಷದಿಂದ ಸ್ನೇಹಿತರು. ಅವರ ಆರೋಗ್ಯ ವಿಚಾರಣೆ ಮಾಡಿದ ವೇಳೆ ಬೇಡಿಕೊಂಡರೂ ಬಿಡದೇ ಹಲ್ಲೆ ಮಾಡಿದ್ದಾಗಿ ಆನಂದ್ ಅವರು ಹೇಳಿದ್ದು. ಇಂತಹ ಘಟನೆಗಳು ಶಾಸಕಾಂಗಕ್ಕೆ ಆಗಿರುವ ಅವಮಾನ ಎಂದರು.

    ಇದೇ ವೇಳೆ ಗಣೇಶ್ ಬಗ್ಗೆ ಬಿಜೆಪಿ ಸಾಫ್ಟ್ ಕರ್ನರ್ ವಿಚಾರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅಲ್ಲದೇ ಬಿಜೆಪಿ ಯಾರನ್ನು ರಕ್ಷಣೆ ಮಾಡುವ ಕೆಲಸ ಮಾಡಿಲ್ಲ. ಈ ಪ್ರಕರಣ ಯಾರು? ಮುಚ್ಚಿ ಹಾಕಲು ಯಾರು ಪ್ರಯತ್ನಿಸಿದ್ದರೋ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಿ ಎಂದು ಗರಂ ಆದರು. ಆನಂದ್ ಸಿಂಗ್ ಆರೋಗ್ಯ ವಿಚಾರಣೆಗೆ ಬಂದಿದ್ದು, ಇದು ಅದನ್ನೆಲ್ಲ ಮಾತನಾಡುವ ವೇದಿಕೆ ಅಲ್ಲ ಎಂದು ತೆರಳಿದರು.

    ಡಿವೈಡ್ ಅಂಡ್ ರೂಲ್ ಪಾಲಿಸಿ : ಬಳಿಕ ಬಿಜೆಪಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ತುಕಾರಾಂ ಅವರು ಭೇಟಿ ಮಾಡಿ ಆರೋಗ್ಯ ವಿಚಾರಣೆ ಮಾಡಿದರು. ಶಾಸಕ ಎಂಬುವುದನ್ನು ನೋಡದೇ ಹಲ್ಲೆ ಮಾಡಿದ್ದಾರೆ. ಆದರೆ ಹಲ್ಲೆ ಮಾಡಿದ ಶಾಸಕ ನಾಪತ್ತೆ ಎಂದು ಹೇಳುತ್ತಿರುವುದು ನಾಚಿಕೆ ವಿಚಾರ. ಶಾಸಕರನ್ನು ಬಂಧಿಸಿದರೆ ಸರ್ಕಾರ ತೊಂದರೆ ಎಂಬ ಕಾರಣದಿಂದ ಬಂಧನಕ್ಕೆ ಹಿಂದೇಟು ಹಾಕಲಾಗುತ್ತದೆ. ಘಟನೆಯಿಂದ ಇಡೀ ದೇಶದಲ್ಲೇ ರಾಜ್ಯದ ಮುಖ್ಯಮಂತ್ರಿಗಳು ತಲೆ ತಗ್ಗಿಸುವಂತೆ ಮಾಡಿದೆ. ಬಳ್ಳಾರಿ ಜಿಲ್ಲೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೇ ಪೈಪೋಟಿ ನಡೆದಿದೆ. ಆದ್ದರಿಂದಲೇ ಬಳ್ಳಾರಿ ಶಾಸಕರಲ್ಲಿ ಭಿನ್ನಭಿಪ್ರಾಯ ಉಂಟಾಗಿದೆ. ಕಾಂಗ್ರೆಸ್ ನಾಯಕರು ಶಾಸಕರನ್ನು ವಿಭಜನೆ ಮಾಡಿ ಆಳ್ವಿಕೆ ಮಾಡಲು ತೆರಳಿದ್ದಾರೆ ಎಂದು ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv