Tag: MLA Raghupathi Bhat

  • ಸಚಿವೆ ಜಯಮಾಲಾ ಜೊತೆ ಶಾಸಕ ರಘುಪತಿ ಭಟ್ ಜಟಾಪಟಿ

    ಸಚಿವೆ ಜಯಮಾಲಾ ಜೊತೆ ಶಾಸಕ ರಘುಪತಿ ಭಟ್ ಜಟಾಪಟಿ

    ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಮತ್ತು ಬಿಜೆಪಿ ಶಾಸಕ ರಘುಪತಿ ಭಟ್ ನಡುವೆ ಮಾತಿನ ಚಕಮಕಿ ನಡೆದ ಘಟನೆ ಉಡುಪಿಯ ಕಕ್ಕುಂಜೆಯಲ್ಲಿ ನಡೆದಿದೆ. ರಾಜ್ಯ ಸರ್ಕಾರದ ನಗರೋತ್ಥಾನ ಕಾರ್ಯಕ್ರಮದ ಉದ್ಘಾಟನೆಗೆ ಸಂಬಂಧಪಟ್ಟಂತೆ ಈ ಗಲಾಟೆ ನಡೆದಿದೆ.

    ಸರ್ಕಾರಿ ಕಾರ್ಯಕ್ರಮಕ್ಕೆ ಆ ಕ್ಷೇತ್ರದ ಶಾಸಕರಿಗೆ ಮಾಹಿತಿ ನೀಡುತ್ತಿಲ್ಲ. ಈ ಬಾರಿಯೂ ಹಾಗೆಯೇ ರಸ್ತೆಗಳ ಉದ್ಘಾಟನೆ ಆಗುತ್ತಿದೆ ಎಂದು ಸಚಿವೆ ಜಯಮಾಲಾರನ್ನು ಶಾಸಕ ರಘುಪತಿ ಭಟ್ ತರಾಟೆಗೆ ತೆಗೆದುಕೊಂಡರು.

    35 ಕೋಟಿ ವೆಚ್ಚದ ನಗರೋತ್ಥಾನ ಅನುದಾನದ ಉದ್ಘಾಟನೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಗೂ ಆಹ್ವಾನವಿಲ್ಲ. ನಗರದೆಲ್ಲೆಡೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೆಸರಿನ ಬ್ಯಾನರ್ ಹಾಕಲಾಗಿದೆ. ಇದು ಸರ್ಕಾರಿ ಕಾರ್ಯಕ್ರಮದಂತೆ ಕಾಣಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿದೆ ಎಂದು ಸಚಿವೆ ವಿರುದ್ಧ ಭಟ್ ಗರಂ ಆದರು.

    ಕಾರಿನೊಳಗಿದ್ದ ಪ್ರಮೋದ್ ಮಧ್ವರಾಜ್:
    ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧವೂ ಶಾಸಕ ರಘುಪತಿ ಭಟ್ ಆಕ್ರೋಶ ವ್ಯಕ್ತಪಡಿಸಿದರು. ಮಾಜಿಗಳು, ನನ್ನ ವಿರುದ್ಧ ಸೋತವರನ್ನು ಮುಂದೆ ನಿಲ್ಲಿಸಿಕೊಂಡು ಕಾರ್ಯಕ್ರಮ ಮಾಡುತ್ತಿದ್ದೀರಿ. ಸ್ಥಳೀಯ ಜನಪ್ರತಿನಿಧಿಗಳಿಗೂ ಆಹ್ವಾನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಅಂತಿಮವಾಗಿ ಶಾಸಕರ ಮನವೊಲಿಸಿ ಮುಂದಿನ ಉದ್ಘಾಟನೆ ಕಾರ್ಯಕ್ರಮಗಳಿಗೆ ಆಹ್ವಾನ ನೀಡುವುದಾಗಿ ಕರೆದುಕೊಂಡು ಹೋದರು. ಸುಮಾರು 15 ನಿಮಿಷಗಳ ವಾಗ್ವಾದ, ಮನವೊಲಿಕೆ ನಡೆಯುತ್ತಿದ್ದರೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಧ್ಯ ಪ್ರವೇಶ ಮಾಡದೆ ಕಾರಿನಲ್ಲೇ ಕುಳಿತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನೂ ವೋಟ್ ಹಾಕುತ್ತೇನೆಂದು ಹಠ ಹಿಡಿದ 3ರ ಪೋರ- ಕೈಗೆ ಇಂಕ್ ಹಾಕಿಸಿಕೊಂಡು ಖುಷಿಪಟ್ಟ

    ನಾನೂ ವೋಟ್ ಹಾಕುತ್ತೇನೆಂದು ಹಠ ಹಿಡಿದ 3ರ ಪೋರ- ಕೈಗೆ ಇಂಕ್ ಹಾಕಿಸಿಕೊಂಡು ಖುಷಿಪಟ್ಟ

    ಉಡುಪಿ: ಅಪ್ಪ ಅಮ್ಮನ ಜೊತೆ ಹೋಗಿ ನಾನೂ ವೋಟ್ ಹಾಕುತ್ತೇನೆ ಅಂತಾ ನಿಟ್ಟೂರಿನ 3 ವರ್ಷದ ಪೋರ ಹಠ ಹಿಡಿದು, ಕೊನೆಗೆ ಅತ್ತು ಕರೆದು ಕೈಗೆ ಇಂಕ್ ಹಾಕಿಸಿಕೊಂಡಿದ್ದಾನೆ.

    ಹಾಲುಗಲ್ಲದ ಹಸುಳೆ ರಿಹಾಂಶ್‍ಗೆ ಈಗ ಮೂರರ ಹರೆಯ. ಇವನು ಉಡುಪಿ ಶಾಸಕ ರಘುಪತಿ ಭಟ್ಟರ ಮಗ. ಅಪ್ಪ ಅಮ್ಮನ ಜೊತೆಗೆ ಮತಗಟ್ಟೆಗೆ ಬಂದ, ಅವರು ಮತದಾನ ಮಾಡಲು ಹೋಗುತ್ತಿದ್ದಂತೆ ನಾನೂ ವೋಟ್ ಹಾಕುತ್ತೇನೆ ಅಂತಾ ಹಠ ಮಾಡಿ, ಅಳಲಾರಂಭಿಸಿದ್ದಾನೆ. ಶಾಸಕರ ಕಾರು ಚಾಲಕ ವಿಜಯ್, ಅಧಿಕಾರಿಗಳ ಬಳಿಗೆ ರಿಹಾಂಶ್‍ನನ್ನು ಕರದೊಯ್ದರು. ಮತಗಟ್ಟೆಯ ಹೊರಗೆ ಕುಳಿತ್ತಿದ್ದ ಅಧಿಕಾರಿಗಳು ಪೆನ್ನಿನಿಂದ ರಿಹಾಂಶ್ ಎಡಗೈ ತೋರ್ಬೆರಳಿಗೆ ಶಾಹಿಮುದ್ರೆ ಹಾಕಿಸಿದ್ದಾರೆ. ಆಗ ಆತನು ಅಳುವುದನ್ನು ನಿಲ್ಲಿಸಿದ್ದಾನೆ.

    ಗಮ್ಮತ್ತು ಏನಂದರೆ ಶಾಹಿ ಹಾಕ್ಕೊಂಡು ಬಂದವನೇ ವಿಕ್ಟರಿ ಸಿಂಬಲ್ ತೋರಿಸುತ್ತಾನೆ. ಮೋದಿ ಗೆಲ್ತಾರೆ ಅಂತಾನೆ. ನಾಳೆ ಪೇಪರಲ್ಲಿ ಫೋಟೋ ಹಾಕಿ ಅಂತಾ ಮಾಧ್ಯಮದವರಿಗೆ ಮನವಿ ಮಾಡಿಕೊಂಡಿದ್ದಾನೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ರಘುಪತಿ ಭಟ್, ಕಳೆದ ಕೆಲವು ದಿನಗಳಿಂದ ಮನೆಯಲ್ಲಿ ಚುನಾವಣೆಯದ್ದೇ ವಾತಾವರಣ. ಹಾಗಾಗಿ ವೋಟ್ ಹಾಕುತ್ತೇನೆ ಅಂತಾ ಹಠ ಮಾಡುತ್ತಿದ್ದ. ಆತ ಕೂಡ ನಮ್ಮಂತೆ ಮೋದಿ ಅಭಿಮಾನಿ ಅಂತಾ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಲಸಿನ ಹಣ್ಣು ತಿಂದ್ರೆ ಏಡ್ಸ್ ಬರಲ್ಲ ಎಂದು ಕೇಳಿದ್ದೇನೆ: ಶಾಸಕ ರಘುಪತಿ ಭಟ್

    ಹಲಸಿನ ಹಣ್ಣು ತಿಂದ್ರೆ ಏಡ್ಸ್ ಬರಲ್ಲ ಎಂದು ಕೇಳಿದ್ದೇನೆ: ಶಾಸಕ ರಘುಪತಿ ಭಟ್

    ಉಡುಪಿ: ಹಲಸಿನ ಹಣ್ಣು ತಿಂದ್ರೆ ಏಡ್ಸ್ ಬರಲ್ಲ ಎಂದು ಹಿರಿಯರು, ನಾಟಿ ವೈದ್ಯರು ಹೇಳಿದ್ದನ್ನು ನಾನು ಕೇಳಿದ್ದೇನೆ ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

    ಉಡುಪಿಯಲ್ಲಿ ಆಯೋಜಿಸಲಾಗಿದ್ದ ಹಲಸು ಮೇಳದಲ್ಲಿ ಮಾತನಾಡಿದ ಅವರು, ಹಲಸಿನ ಹಣ್ಣು ಹೆಚ್ಚೆಚ್ಚು ತಿಂದರೆ ಏಡ್ಸ್ ಬರುವುದಿಲ್ಲ. ಹಲಸಿನ ಕಾಯಿ ತಿಂದರೆ ಏಡ್ಸ್ ಕೂಡಾ ನಿಯಂತ್ರಣವಾಗುತ್ತೆ ಎಂದು ಹಿರಿಯರು ಹೇಳಿರುವುದನ್ನು ಕೇಳಿದ್ದೇನೆ. ನನಗೆ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಕೆಲವೊಮ್ಮೆ ಇಂತಹಾ ರೂಮರ್ಸ್ ನಿಂದಲೇ ವಿಷಯ ಹೆಚ್ಚು ಪ್ರಚಾರ ಪಡೆಯುತ್ತದೆ. ಹಲಸಿನ ಹಣ್ಣು ಹೆಚ್ಚೆಚ್ಚು ಸೇಲ್ ಆಗುತ್ತದೆ ಎಂದು ಹೇಳಿದರು.

    ದೊಡ್ಡಣಗುಡ್ಡೆಯಲ್ಲಿ ನಡೆಯುತ್ತಿರುವ ಹಲಸು ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಹಲಸಿನ ಕಾಯಿ ತಿಂದರೆ ಮಧುಮೇಹವೂ ಕಡಿಮೆಯಾಗುತ್ತದೆ. ಏಡ್ಸ್ ರೋಗ ನಿಯಂತ್ರಣಕ್ಕೂ ಹಲಸು ಒಳ್ಳೆಯದು ಎಂದರು. ಈ ಮೂಲಕ ಹೊಸದೊಂದು ವಿಚಾರವನ್ನು ಉಡುಪಿ ಶಾಸಕ ರಘುಪತಿ ಭಟ್ ತೆರೆದಿಟ್ಟಿದ್ದಾರೆ. ಶಾಸಕರ ಮಾತು ಕೇಳಿದ ಹಲಸು ಮೇಳಕ್ಕೆ ಆಗಮಿಸಿದ್ದ ಹಲವರಲ್ಲಿ ಚರ್ಚೆಗೆ ಕಾರಣವಾಗಿತ್ತು.