Tag: MLA Lakshmi Hebbalkar

  • ಸಚಿವ ರಮೇಶ್ ಜಾರಕಿಹೊಳಿ ಸಾಹೇಬ್ರು ದೊಡ್ಡವರು- ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು

    ಸಚಿವ ರಮೇಶ್ ಜಾರಕಿಹೊಳಿ ಸಾಹೇಬ್ರು ದೊಡ್ಡವರು- ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು

    ಬಾಗಲಕೋಟೆ: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಸಾಹೇಬ್ರು ದೊಡ್ಡವರು. ನನ್ನ ಕಾಲ ಕಸ, ಶೋ ಪೀಸ್, ಸ್ಲಂನಿಂದ ಬಂದವಳು ಅಂದರು. ಪದೇ ಪದೇ ನನ್ನ ಹೆಸರು ಬಳಸುತ್ತಿರುವ ಹಿಂದಿನ ಮರ್ಮ ಗೊತ್ತಿಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ಕೊಟ್ಟಿದ್ದಾರೆ.

    ನಗರದ ಹೊರವಲಯದ ರೆಸಾರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರೆ ಶ್ರಮ ಹಾಗೂ ಧರ್ಮ ನನ್ನನ್ನು ಕಾಪಾಡುತ್ತದೆ. ಸಚಿವ ರಮೇಶ್ ಜಾರಕಿಹೊಳಿ ಅವರು ನನ್ನ ರಾಜಕೀಯ ಬೆಳವಣಿಗೆಗೆ ಸಹಾಯ ಮಾಡಿದ್ದಾರೆ. ಆದರೆ ನನ್ನ ಬೆಳವಣಿಗೆಗೆ ಬ್ರೇಕ್ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಅದನ್ನು ದೇವರು ನಿರ್ಧಾರ ಮಾಡುತ್ತಾನೆ. ನನ್ನ ಧರ್ಮ ನನ್ನ ಶ್ರಮ ಕಾಪಾಡುತ್ತದೆ ಎನ್ನುವ ಮೂಲಕ ಜಾರಕಿಹೊಳಿ ಸಹೋದರರಿಗೆ ಟಾಂಗ್ ಕೊಟ್ಟಿದ್ದಾರೆ.

    ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನಾನೊಬ್ಬಳೆ ಬೆಂಬಲಿಗಳಲ್ಲ. ರಾಜ್ಯದಲ್ಲಿ ಅನೇಕರು ಬೆಂಬಲಿಗರಿದ್ದು, ಅವರಲ್ಲಿ ನಾನೂ ಒಬ್ಬಳು. ಸಚಿವರಿಗೆ ಅವರದ್ದೇ ಆದ ದೊಡ್ಡ ಪಡೆ ಇದೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ಪರ ಬ್ಯಾಟ್ ಬೀಸಿ, ರಮೇಶ್ ಜಾರಕಿಹೊಳಿ ಅವರಿಗೆ ಮತ್ತೊಮ್ಮೆ ತಿರುಗೇಟು ಕೊಟ್ಟಿದ್ದಾರೆ.

    ಮೀಟೂ ಒಳ್ಳೆ ಅಭಿಯಾನವಾಗಿದ್ದು, ದೇಶ ಎಜ್ಯುಕೇಟ್ ಆಗುತ್ತಿದೆ ಎಂದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಶೋಭಕ್ಕ ಉದ್ವೇಗದಲ್ಲಿ ಮಾತಾಡಿದ್ದಾರೆ. ಜನ ನಮ್ಮನ್ನು ನೋಡುತ್ತಿರುತ್ತಾರೆ. ಅಕ್ಕ ಮಾತಾಡುವಾಗ ಉದ್ವೇಗಕ್ಕೆ ಒಳಗಾಗಬಾರದು. ಮಾತು ಆಡಿದರೆ ಹೋಯ್ತು. ಮುತ್ತು ಒಡೆದರೆ ಹೋಯ್ತು ಅಂತ ತಿಳಿದು ಮಾತನಾಡಬೇಕು ಎಂದು ಟಾಂಗ್ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಾರಕಿಹೊಳಿ ಸಹೋದರರು-ಶಾಸಕಿ ಹೆಬ್ಬಾಳ್ಕರ್ ಜಟಾಪಟಿಗೆ ಸಜ್ಜಾಯ್ತು ಮತ್ತೊಂದು ಚುನಾವಣೆ

    ಜಾರಕಿಹೊಳಿ ಸಹೋದರರು-ಶಾಸಕಿ ಹೆಬ್ಬಾಳ್ಕರ್ ಜಟಾಪಟಿಗೆ ಸಜ್ಜಾಯ್ತು ಮತ್ತೊಂದು ಚುನಾವಣೆ

    -ಶಾಸಕಿ ಬಣದಿಂದ ಮರಾಠಿ ಭಾಷಿಕ ಅಭ್ಯರ್ಥಿಗಳಿಗೆ ಮಣೆ

    ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಕೈ ನಾಯಕರ ಜಟಾಪಟಿಗೆ ಮತ್ತೊಂದು ಚುನಾವಣೆ ಸಾಕ್ಷಿಯಾಗಲಿದೆ. ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಇದೇ 15ರಂದು ಘೋಷಣೆಯಾಗಿದೆ.

    ಈ ಚುನಾವಣೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಹೋದರರಿಗೆ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಪಿಎಲ್‍ಡಿ ಬ್ಯಾಂಕ್ ಹಾಗೂ ಸ್ಥಳೀಯ ಚುನಾವಣೆಯ ಹೊಗೆ ಎರಡೂ ಬಣಗಳಲ್ಲಿ ಆಡುತ್ತಿದ್ದು, ಇದೇ ವೇಳೆ ಎಪಿಎಂಸಿ ಚುನಾವಣೆ ಘೋಷಣೆಯಾಗಿದೆ.  ಇದನ್ನು ಓದಿ: ಸತೀಶ್ ಜಾರಕಿಹೊಳಿ ಬೆಂಬಲಿಗನಿಗೆ ಚಾಕು ಇರಿದ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗ

    ಪಿಎಲ್‍ಡಿ ಬ್ಯಾಂಕ್ ಚುನಾವಣೆ ಬಳಿಕವೂ ಸ್ಥಳೀಯ ಚುನಾವಣೆಯಲ್ಲಿ ಕೈ ನಾಯಕರು ಪರೋಕ್ಷವಾಗಿ ಕಿಡಿಕಾರಿದ್ದರು. ಬೆಳಗಾವಿ ಕಾಂಗ್ರೆಸ್ ನಾಯಕರ ವಾಗ್ದಾಳಿ ಹೈಕಮಾಂಡ್ ಮಟ್ಟದಲ್ಲಿ ಭಾರೀ ಚರ್ಚೆಯಾಗಿತ್ತು. ಈಗ ಎಪಿಎಂಸಿ ಚುನಾವಣೆ ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ ಕೈ ನಾಯಕರು ಮತ್ತೆ ತಮ್ಮ ಹಳೇ ವರಸೆಯನ್ನು ಮುಂದುವರಿಸುತ್ತಾರೆ ಎನ್ನಲಾಗುತ್ತಿದೆ. ಇದನ್ನು ಓದಿ: ಎಲ್ಲವನ್ನು ಆ ದೇವ್ರು ನೋಡಿಕೊಳ್ತಾನೆ – ಗೆದ್ದ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಚುಟುಕು ಮಾತು

    ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಣದಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮರಾಠಿ ಭಾಷಿಕ ಯುವರಾಜ ಕದಂ, ಸುಧೀರ್ ಗಡ್ಡೆ ಅಭ್ಯರ್ಥಿಗಳಾಗಿದ್ದಾರೆ. ಇತ್ತ ಜಾರಕಿಹೊಳಿ ಸಹೋದರರ ಬಣದಿಂದ ಯಾವುದೇ ಅಭ್ಯರ್ಥಿಗಳ ಹೆಸರು ಫೈನಲ್ ಆಗಿಲ್ಲ. ಇಬ್ಬರು ನಾಯಕರೂ ಸಂಧಾನ ಮಾಡಿಕೊಳ್ಳುತ್ತಾರೋ ಅಥವಾ ಮತ್ತೊಮ್ಮೆ ವಾಗ್ದಾಳಿಗೆ ಮುಂದಾಗುತ್ತಾರೋ ಎನ್ನುವುದು ಜಿಲ್ಲೆಯಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದನ್ನು ಓದಿ: ನಾನು ಸ್ಲಂನಲ್ಲಿ ಹುಟ್ಟಿರ್ಬೋದು, ಸಂಸ್ಕೃತಿ ಎಲ್ಲೆ ಮೀರಿ ಹೋಗಿಲ್ಲ- ರಮೇಶ್‍ಗೆ ಹೆಬ್ಬಾಳ್ಕರ್ ಟಾಂಗ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಾರಕಿಹೊಳಿ ದೊಡ್ಡವರು, ಅವರ ಬಗ್ಗೆ ಏನು ಹೇಳಲ್ಲ – ಲಕ್ಷ್ಮೀ ಹೆಬ್ಬಾಳ್ಕರ್

    ಜಾರಕಿಹೊಳಿ ದೊಡ್ಡವರು, ಅವರ ಬಗ್ಗೆ ಏನು ಹೇಳಲ್ಲ – ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ಸ್ಥಳೀಯ ಮುಖಂಡರ ಜೊತೆಗೆ ಇರುವ ಭಿನ್ನಾಭಿಪ್ರಾಯ ಜಿಲ್ಲೆಗೆ ಸೀಮಿತ. ಈ ಜಗಳ ಲೋಕಸಭೆ ಚುನಾವಣೆ, ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರಲ್ಲ. ಜಾರಕಿಹೊಳಿ ದೊಡ್ಡವರು, ಅವರು ಸಮರ್ಥ ನಾಯಕರಾಗಿದ್ದು ಅವರ ಬಗ್ಗೆ ನಾನು ಏನು ಹೇಳಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಮುದ್ರ ಇದ್ದಂತೆ. ಜಿಲ್ಲಾ ಉಸ್ತುವಾರಿ ಸಚಿವರಿಂದ ಎಲ್ಲ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹೈಕಮಾಂಡ್ ಅವಕಾಶ ನೀಡಿದೆ. ಅದ್ದರಿಂದ ಪಕ್ಷದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಯಿತು. ಪಕ್ಷದ ಒಳಿತಿಗಾಗಿ ತಗ್ಗಿ, ಬಗ್ಗಿ ನಡೆಯಲು ನಾನು ಸಿದ್ಧವಾಗಿದ್ದು, ಆದರೆ ಕ್ಷೇತ್ರ ವಿಚಾರ ಬಂದಾಗ ನಾನು ನ್ಯಾಯ ಒದಗಿಸಲು ಹೋರಾಟ ನಡೆಸುತ್ತೇನೆ ಎಂದರು.

    ಕಾಂಗ್ರೆಸ್ ಸಭೆಯಲ್ಲಿ ರಮೇಶ ಜಾರಕಿಹೊಳಿ, ಡಿಕೆಶಿ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ನಡೆದಿರುವುದು ಬೇರೆ, ಮಾಧ್ಯಮದಲ್ಲಿ ವರದಿ ಮಾಡಿರುವುದು ಬೇರೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಲ್ಲರೂ ಪಕ್ಷ ಸಂಘಟನೆಯ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತೆವೆ. ಆದರೆ ಪಕ್ಷದ ಸಭೆಯಲ್ಲಿ ನನ್ನ ವಿಚಾರದಲ್ಲಿ ರಮೇಶ ಜಾರಕಿಹೊಳಿ, ಡಿಕೆ ಶಿವಕುಮಾರ್ ನಡುವೆ ಯಾವುದೇ ವಾಗ್ವಾದ ನಡೆದಿಲ್ಲ. ಆದರೆ ಲೋಕಸಭೆ ಚುನಾವಣೆ ಅಭ್ಯರ್ಥಿಯಲ್ಲಿ ಆಯ್ಕೆ ಕೆಲ ಮಾತುಕತೆ ನಡೆದಿದೆ ಎಂದು ಸ್ಪಷ್ಟಪಡಿಸಿದರು.

    ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ರಾಜ್ಯ ಸಮ್ಮಿಶ್ರ ಸರ್ಕಾರವೂ ಕೂಡ ಉತ್ತಮವಾಗಿ ಆಡಳಿತ ನಡೆಸುತ್ತಿದ್ದು. ಮುಂದಿನ ಲೋಕಸಭಾ ಚುನಾವಣೆಯಲ್ಲೂ ರಾಜ್ಯದ ಜನ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಸೇರಿದಂತೆ ಎಲ್ಲಾ ಕಾರ್ಯಗಳಲ್ಲೂ ಪಕ್ಷದ ನಾಯಕರು ಉತ್ತಮ ಸಹಕಾರ ನೀಡಿದ್ದಾರೆ. ಜಾರಕಿಹೊಳಿ ಅವರು ನಮ್ಮ ನಾಯಕರಾಗಿದ್ದು, ಅವರು ಹೇಳಿದ ದಾರಿಯಲ್ಲಿ ನಾವು ನಡೆಯುತ್ತೇವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಿಎಲ್‍ಡಿ ಬ್ಯಾಂಕ್ ಚುನಾವಣೆ: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ಸಹೋದರರು ಗರಂ

    ಪಿಎಲ್‍ಡಿ ಬ್ಯಾಂಕ್ ಚುನಾವಣೆ: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ಸಹೋದರರು ಗರಂ

    ಬೆಳಗಾವಿ: 20 ವರ್ಷಗಳಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಜಾರಕಿಹೊಳಿ ಕುಟುಂಬ ಬೆಳೆಸಿದೆ. ಶಾಸಕರಾದ ಮೇಲೆ ಜಾತಿ ನೆಪ ಹೇಳುವುದು ಸರಿಯಲ್ಲ. ಸಂಖ್ಯೆ ಬಹಳಷ್ಟು ದಿನ ಉಳಿಯಲ್ಲ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನಲೆ ಅಹೋರಾತ್ರಿ ಪ್ರತಿಭಟನೆ ಕೈಗೊಂಡಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವರು, ಪಿಎಲ್‍ಡಿ ಬ್ಯಾಂಕಿಗೆ 20 ವರ್ಷದಿಂದ ರಾಜಕೀಯ ಮುಕ್ತ ಚುನಾವಣೆ ನಡೆಯುತ್ತಿತ್ತು. ಸಚಿವರು, ಶಾಸಕರು ಯಾರೊಬ್ಬರು ಪಾಲ್ಗೊಂಡಿರಲಿಲ್ಲ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ದೇಶಕರಿಗೆ ಆಮಿಷವೊಡ್ಡಿದ್ದಾರೆ ಹಾಗೂ ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಈ ಹಿಂದಿನ ಪದ್ಧತಿಯಲ್ಲಿ ಚುನಾವಣೆ ನಡೆಸಲು ನಮ್ಮದು ಸಲಹೆ ಇದೆ. ಅವಿರೋಧವಾಗಿ ಆಯ್ಕೆ ಆಗಿರುವವರು ಶಾಸಕಿ ಹೆಬ್ಬಾಳ್ಕರ್ ಜೊತೆಗೆ ಹೋಗಿದ್ದಾರೆ. ಎಲ್ಲರೂ ಸೇರಿ ಕೆಲಸ ಮಾಡುವ ನಿರೀಕ್ಷೆ ಹೊಂದಿದ್ದೇವು. ಆದರೆ ಇದು ಹುಸಿಯಾಗಿದೆ. ಚುನಾವಣೆ ಮುಂದೂಡಿಕೆ ಚುನಾವಣಾ ಅಧಿಕಾರಿಗೆ ಅಧಿಕಾರವಿದೆ. ಪ್ರತಿಭಟನೆಯಿಂದ ಯಾವುದೇ ಪ್ರಯೋಜವಿಲ್ಲ ಎಂದ ಅವರು, ಒಂದೇ ಪಕ್ಷದಲ್ಲಿ ಇದ್ದರೂ ಗುಂಪುಗಾರಿಕೆ ಮಾಡುವುದು ಸಹಜವಾಗಿದೆ. ಈಗಲೂ ಕಾಲ ಮಿಂಚಿಲ್ಲ ಎಲ್ಲರನ್ನೂ ಒಮ್ಮತದಿಂದ ಕರೆದುಕೊಂಡು ಹೋದರೆ ಸ್ವಾಗತ ಎಂದು ಎಚ್ಚರಿಕೆ ನೀಡಿದರು. ಇದನ್ನು ಓದಿ: ಬೆಳಗಾವಿಯಲ್ಲಿ ಮಿಡ್‍ನೈಟ್ ಹೈಡ್ರಾಮಾ – ಪಿಎಲ್‍ಡಿ ಬ್ಯಾಂಕ್ ಎಲೆಕ್ಷನ್ ಮುಂದೂಡಿಕೆ ರಾಜಕೀಯ

    ಮೊದಲ ಭಾರಿ ಗೆದ್ದು, ಈಗ ಮೆರೆಯುತ್ತಿರುವುದು ಸರಿಯಲ್ಲ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಎಚ್ಚರಿಕೆ ನೀಡಿದ್ದಾರೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ಅಧಿಕಾರಿಗಳ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಸಮಸ್ಯೆ ಒಂದೇ ಆಗಿದೆ – ಸತೀಶ್ ಜಾರಕಿಹೊಳಿ

    ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಸಮಸ್ಯೆ ಒಂದೇ ಆಗಿದೆ – ಸತೀಶ್ ಜಾರಕಿಹೊಳಿ

    ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ತನಗೂ ಸಚಿವ ಸ್ಥಾನ ನೀಡಿಲ್ಲ. ನಾವಿಬ್ಬರೂ ಸೇರಿಕೊಂಡು ನಮಗೆ ಸಚಿವ ಸ್ಥಾನ ತಪ್ಪಿಸಿದವರು ಯಾರು ಎಂದು ಹುಡುಕಾಟ ನಡೆಸಬೇಕಿದೆ ಎಂದು ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೋಳಿ ಹೇಳಿದ್ದಾರೆ.

    ಲಕ್ಷ್ಮೀ ಹೆಬ್ಬಾಳ್ಕರ್ ಗೆ ಮಂತ್ರಿ ಸ್ಥಾನ ಕೈ ತಪ್ಪಿದ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ ಅವರು, ಅವರಿಗೂ ಸಚಿವ ಸ್ಥಾನ ತಪ್ಪಿದೆ. ನನಗೂ ಸಚಿವ ಸ್ಥಾನ ತಪ್ಪಿದೆ. ಹೀಗಿರುವಾಗ ಯಾರು ಯಾರಿಗೆ ಸಚಿವ ಸ್ಥಾನ ತಪ್ಪಿಸಿದರು ಎನ್ನುವ ಮಾತೇ ಉದ್ಭವಿಸುವುದಿಲ್ಲ. ಆದರೆ ಅವರು ಸಚಿವ ಸ್ಥಾನ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದಾರೆ, ನಾನು ಹಾಕಲಿಲ್ಲ ಅಷ್ಟೇ. ನಾವಿಬ್ಬರೂ ಸೇರಿಕೊಂಡು ನಮಗೆ ಸಚಿವ ಸ್ಥಾನ ತಪ್ಪಿಸಿದವರು ಯಾರು ಅಂತಾ ಹುಡುಕಾಡಬೇಕಿದೆ ಎಂದು ಹೇಳಿದ್ದಾರೆ.

    ಸಚಿವ ಸ್ಥಾನದ ನೀಡುವಲ್ಲಿ ಪಕ್ಷದಲ್ಲಿ ಉಂಟಾಗಿರುವ ತಾರತಮ್ಯದ ಕುರಿತು ಈಗಾಗಲೇ ತಮ್ಮ ಅಸಮಾಧಾನವನ್ನು ನಾಯಕರಿಗೆ ತಿಳಿಸಿದ್ದು, ಸೋಮವಾರವೇ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಾನು ರಾಜೀನಾಮೆ ಸಲ್ಲಿಸಿದ್ದೇನೆ. ಮುಂದೆ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ, ಸೂಕ್ತ ಸ್ಥಾನಮಾನ ನೀಡಬೇಕು ಎಂದರು.

    ಇದೇ ವೇಳೆ ಶುಕ್ರವಾರ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸಮ್ಮುಖದಲ್ಲಿ ಬೆಂಗಳೂರಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದ ಅವರು, ಸಭೆಯಲ್ಲಿ ಭಾಗವಹಿಸುತ್ತೇನೆ. ಆದರೆ ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದಲ್ಲಿದ್ದುಕೊಂಡೇ ಚರ್ಚೆ ಮಾಡುತ್ತೇವೆ. ನಮ್ಮ ಬೇಡಿಕೆಯನ್ನ ಕೇಳುತ್ತೇವೆ. ಸಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾವುದಿಲ್ಲ ಎಂದು ತಿಳಿಸಿದರು.

    ಸದ್ಯ ಪಕ್ಷದಲ್ಲಿ ಉಂಟಾಗಿರುವ ಗೊಂದಲ ಹಾಗೂ ಸಮಸ್ಯೆಗಳು ಬಗೆಹರಿಯಲಾರದ ಸಮಸ್ಯೆಗಳಲ್ಲ. ಶೀಘ್ರವೇ ಈ ಕುರಿತ ಎಲ್ಲವೂ ಬಗೆಹರಿಯಲಿದೆ. ಆದರೆ ನಾನು ರಾಜೀನಾಮೆ ನೀಡಿರುವ ಕುರಿತು ಕೆಲ ನಾಯಕರು ನನ್ನ ಜೊತೆ ಮಾತನಾಡಿದ್ದಾರೆ. ಆದರೂ ರಾಜೀನಾಮೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

    ರಾಜ್ಯದ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ.

     

  • `ಕುಕ್ಕರ್ ಲಕ್ಷ್ಮಿದು, ಬಿರಿಯಾನಿ ಜಯಮಾಲಾದು’ ಜೋಕ್ ಕೇಳೋಕೆ ಚೆನ್ನಾಗಿದೆ – ಲಕ್ಷ್ಮೀ ಹೆಬ್ಬಾಳ್ಕರ್

    `ಕುಕ್ಕರ್ ಲಕ್ಷ್ಮಿದು, ಬಿರಿಯಾನಿ ಜಯಮಾಲಾದು’ ಜೋಕ್ ಕೇಳೋಕೆ ಚೆನ್ನಾಗಿದೆ – ಲಕ್ಷ್ಮೀ ಹೆಬ್ಬಾಳ್ಕರ್

    ಧಾರವಾಡ: ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿರುವ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಸಚಿವ ಸ್ಥಾನ ಕೈ ತಪ್ಪಿರುವ ಕುರಿತು ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಧಾರವಾಡದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ತಮ್ಮ ವಿರುದ್ಧದ ಆರೋಪಗಳ ಕುರಿತು ನಗುತ್ತಲೇ ಅಲ್ಲಗೆಳೆದರು. ನನ್ನ ಶುಗರ್ ಫಾಕ್ಟರಿ ಇದೆ ಅದರ ಬ್ರ್ಯಾಂಡ್ ಪ್ರಚಾರ ಮಾಡಲು ರೈತ ಮಹಿಳೆಯರಿಗೆ ಕುಕ್ಕರ್ ನೀಡಿದ್ದಾಗಿ ತಿಳಿಸಿದರು.

    ಇದೇ ವೇಳೆ ತಾವು ಸಚಿವ ಸ್ಥಾನದ ಪ್ರಮುಖ ಅಕಾಂಕ್ಷಿಯಾಗಿದ್ದು, ತಾನು ಸಚಿವ ಸ್ಥಾನ ಕೇಳಿರುವ ಹಿಂದೆ ಇಂದು ಅರ್ಥ ಇದೆ. ನಾನು ಮೊದಲ ಬಾರಿ ಶಾಸಕಿಯಾಗಿ ಆಯ್ಕೆ ಆಗಿದ್ದರೂ ಕೂಡ ಈ ಬಾರಿ ಚುನಾವಣೆಯಲ್ಲಿ ಗೆದ್ದಿರುವ ನಾಲ್ವರು ಶಾಸಕಿಯರು ಮೊದಲ ಬಾರಿ ಆಯ್ಕೆ ಆಗಿದ್ದಾರೆ. ಆದರೆ ತಾವು ಪಕ್ಷದ ಸಂಘಟನೆಯಲ್ಲಿ ಪ್ರಮುಖ ಸ್ಥಾನ ವಹಿಸಿದ್ದು, ನಮ್ಮ ಹಿರಿತನವನ್ನು ಪರಿಗಣಿಸಿ ಸಚಿವ ಸ್ಥಾನ ಕೇಳಿದ್ದೇವೆ. ಆದರೆ ಪಕ್ಷದ ನಾಯಕರು ನಮ್ಮನ್ನು ಪರಿಗಣಿಸಿಲ್ಲ. ಇದರಿಂದ ನಮ್ಮ ಮನಸ್ಸಿಗೆ ನೋವಾಗಿದೆ ಎಂದರು.

    ಪಕ್ಷದ ಮಾನದಂಡಗಳ ಬಗ್ಗೆ ತುಂಬಾ ಬೇಸರ ಆಗಿದೆ. ಪಕ್ಷದಲ್ಲಿ ಇರುವ ನಿಯಮಗಳನ್ನು ಮೀರಿ ನಡೆಯುತ್ತಿದ್ದಾರೆ. ಈ ಮೊದಲು ಯಾವ ಎಂಎಲ್‍ಸಿಯನ್ನು ಮಂತ್ರಿ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಜಯಮಾಲಾರನ್ನು ರಾತ್ರೋ ರಾತ್ರಿ ಮಂತ್ರಿ ಮಾಡಿದ್ದಾರೆ. ಪಕ್ಷದ ಹಿರಿಯ ನಾಯಕರಾದ ಉಗ್ರಪ್ಪ, ಅಲ್ಲಂ ವೀರಭದ್ರಪ್ಪ, ಎಸ್‍ಆರ್ ಪಾಟೀಲರಂಥವರಿಗೆ ಮಂತ್ರಿ ಸ್ಥಾನ ನೀಡಬೇಕಾಗಿತ್ತು. ಈ ಮಾನದಂಡಗಳು ಅವಕಾಶ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುವುದು ಸರಿಯಲ್ಲ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಪಕ್ಷದಲ್ಲಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.