Tag: MLA JR Lobo

  • ಬಿಜೆಪಿ ಸಾಧನೆಯನ್ನು ತನ್ನ ಸಾಧನೆ ಎಂದು ಬಿಂಬಿಸಿ ನಗೆಪಾಟಲಿಗೀಡಾದ ಮಂಗಳೂರು ಕೈ ಶಾಸಕ ಲೋಬೋ

    ಬಿಜೆಪಿ ಸಾಧನೆಯನ್ನು ತನ್ನ ಸಾಧನೆ ಎಂದು ಬಿಂಬಿಸಿ ನಗೆಪಾಟಲಿಗೀಡಾದ ಮಂಗಳೂರು ಕೈ ಶಾಸಕ ಲೋಬೋ

    ಮಂಗಳೂರು: ಬಿಜೆಪಿ ಸರ್ಕಾರದ ಸಾಧನೆಗಳನ್ನು ತನ್ನ ಸಾಧನೆಯೆಂದು ಬಿಂಬಿಸಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆಆರ್ ಲೋಬೋ ಮತ್ತೆ ನಗೆಪಾಟಲಿಗೀಡಾಗಿದ್ದಾರೆ.

    ಚುನಾವಣಾ ಹಿನ್ನೆಲೆಯಲ್ಲಿ ಸಾಧನೆಯ ಹಾದಿಯಲ್ಲಿ ಎಂಬ ಅಭಿವೃದ್ಧಿ ಯೋಜನೆಗಳ ಕುರಿತ ಪುಸ್ತಕವನ್ನು ಜೆಆರ್ ಲೋಬೋ ಬಿಡುಗಡೆ ಮಾಡಿದ್ದು, ಪುಸ್ತಕದಲ್ಲಿ ಬಿಜೆಪಿ ಸರ್ಕಾರದ ಕಾಲಾವಧಿಯಲ್ಲಿ ಆದಂತಹ ಯೋಜನೆಗಳನ್ನು ಸೇರಿಸಿಕೊಂಡಿದ್ದಾರೆ.

    ಮಂಗಳೂರಿನ ಬಿಜೈ ಮಾರ್ಕೆಟ್ ನಿರ್ಮಾಣ, ಪಂಪ್ವಲ್ ಜಂಕ್ಷನ್ ಬಳಿ ಸೇತುವೆ ನಿರ್ಮಾಣ, ಗಣಪತಿ ಹೈ ಸ್ಕೂಲ್ ರಸ್ತೆ ಅಭಿವೃದ್ಧಿ, ಮಿನಿವಿಧಾನಸೌಧ ಕಟ್ಟಡ ರಚನೆ, ಲೋಕಾಯುಕ್ತ ಕಚೇರಿ ಉದ್ಘಾಟನೆ ಸೇರಿದಂತೆ ಬಿಜೆಪಿ ಸರ್ಕಾರದಲ್ಲಿ ಅನುಷ್ಠಾನಗೊಂಡ ಯೋಜನೆಗಳನ್ನು ಪುಸ್ತಕದಲ್ಲಿ ಅಳವಡಿಸಿದ್ದಾರೆ.

    ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಶಾಸಕ ಲೋಬೋ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದು, ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಜೆಆರ್ ಲೋಬೋ ಸುಳ್ಳಿನ ಮಾರ್ಗವನ್ನು ಹಿಡಿದಿದ್ದಾರೆ. ಈ ಮೂಲಕ ಜನರ ಮನಗೆಲ್ಲಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

     

  • ವಿಗ್ರಹ ಕಳ್ಳತನ ಮಾಡಿ ಕೈ ಶಾಸಕ ಜೆ.ಆರ್.ಲೋಬೋ ಆಪ್ತ ಸಿಕ್ಕಿಬಿದ್ದ

    ವಿಗ್ರಹ ಕಳ್ಳತನ ಮಾಡಿ ಕೈ ಶಾಸಕ ಜೆ.ಆರ್.ಲೋಬೋ ಆಪ್ತ ಸಿಕ್ಕಿಬಿದ್ದ

    ಮಂಗಳೂರು: ವಿಗ್ರಹ ಕಳ್ಳತನ ಪ್ರಕರಣದಲ್ಲಿ ಮಂಗಳೂರಿನ ಕಾಂಗ್ರೆಸ್ ಮುಖಂಡ, ಶಾಸಕ ಜೆ.ಆರ್.ಲೋಬೋ ಆಪ್ತನನ್ನು ಪೊಲೀಸರು ಬಂಧಿಸಿದ್ದಾರೆ.

    ಎನ್‍ಎಸ್‍ಯುಐ ಜಿಲ್ಲಾ ಕಾರ್ಯದರ್ಶಿ, ಮಂಗಳೂರಿನ ಕುಲಶೇಖರ ನಿವಾಸಿ ಆಸ್ಟಿನ್ ಪಿರೇರಾ ಬಂಧಿತ ಆರೋಪಿ. ಎರಡು ದಿನಗಳ ಹಿಂದೆ ಕುಂದಾಪುರದ ಕೋಟೇಶ್ವರ ಬಳಿ ನಾಲ್ಕು ಪಂಚಲೋಹದ ಜೈನ ತೀರ್ಥಂಕರರ ವಿಗ್ರಹಗಳನ್ನು ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಈತ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು.

    ಆ ಪೈಕಿ ಆಸ್ಟಿನ್ ಮಂಗಳೂರಿನ ಯುವ ಕಾಂಗ್ರೆಸ್ ಘಟಕದಲ್ಲಿ ಪ್ರಭಾವಿಯಾಗಿದ್ದು ಶಾಸಕ ಜೆ.ಆರ್ ಲೋಬೋ, ಮೊಯ್ದೀನ್ ಬಾವಾಗೆ ಆಪ್ತನಾಗಿದ್ದ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮಂಗಳೂರಿಗೆ ಬಂದಾಗ ಜೊತೆಗೆ ನಿಂತು ತೆಗೆಸಿಕೊಂಡಿದ್ದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಆರೋಪಿಗಳಿಂದ ನೋಟು ಎಣಿಸುವ ಯಂತ್ರ, 40 ಸಾವಿರ ರೂ. ನಗದು ಹಾಗೂ ಎರ್ಟಿಗಾ ಕಾರು ವಶಕ್ಕೆ ಪಡೆಯಲಾಗಿದೆ. ಇದೀಗ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆಸ್ಟಿನ್ ಪಿರೇರಾನನ್ನು ಎನ್‍ಎಸ್‍ಯುಐ ನಿಂದ ತೆಗೆದುಹಾಕಲು ಚಿಂತನೆ ನಡೆದಿದೆ.