Tag: MLA Jameer Ahmed

  • ಜಮೀರ್ ತಾನು ಏನೆಂದು ಅವರೇ ಯೋಚಿಸಬೇಕು: ಸಿ.ಟಿ.ರವಿ

    ಜಮೀರ್ ತಾನು ಏನೆಂದು ಅವರೇ ಯೋಚಿಸಬೇಕು: ಸಿ.ಟಿ.ರವಿ

    ಚಿಕ್ಕಮಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜಮೀರ್ ಅಹ್ಮದ್ ಅವರ ಪಾತ್ರ ಎಷ್ಟಿದೆ, ಏನು ಅನ್ನೋದು ತನಿಖೆಯ ಬಳಿಕ ಗೊತ್ತಾಗಬೇಕು. ಆದರೆ ಜಮೀರ್ ತಾನು ಏನೆಂದು ಅವರೇ ಯೋಚಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

    ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್ ಕುರಿತಂತೆ ಸ್ಥಳೀಯರೊಂದಿಗಿನ ಸಭೆಯ ಬಳಿಕ ಮಾತನಾಡಿದ ಸಚಿವರು, ಡ್ರಗ್ಸ್ ಮಾಫಿಯಾದಲ್ಲಿ ಜಮೀರ್ ಅಹ್ಮದ್ ಅವರ ಪಾತ್ರ ಎಷ್ಟಿದೆ ಎಂಬುವುದು ತನಿಖೆಯ ಬಳಿಕ ಗೊತ್ತಾಗಬೇಕಿದೆ. ಆದರೆ ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರಕರಣದಲ್ಲಿ ಅಪರಾಧಿಗಳ ಪರ ಅವರು ನಿಂತಿದ್ದ ಅವರು ನಿಲುವು ಸಮಾಜಘಾತುಕ ಶಕ್ತಿಗಳಿಗೆ ಬೆಂಬಲ ಕೊಡುವಂತಹಾ ಮನಸ್ಥಿತಿ ತೋರಿಸುತ್ತೆ ಎಂದು ಜಮೀರ್ ವಿರುದ್ಧ ಕಿಡಿಕಾರಿದರು.

    ಜಮೀರ್ ಅವರದ್ದು ಅಪರಾಧಿಗಳ ಪರವಾಗಿ ನಿಲ್ಲುವಂತಹಾ ಮನೋಭಾವನೆ. ಜೊತೆಗೆ ಅವರದ್ದೇ ಕ್ಷೇತ್ರವಾದ ಪಾದರಾಯನಪುರದಲ್ಲಿ ಅವರ ಬೆಂಬಲಿಗರು ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ದರು. ಆಗ ಅವರು ಅವರ ಪರವಾಗಿ ನಿಂತು ಆರೋಪಿಗಳನ್ನು ಸನ್ಮಾನಿಸುವ ಕೆಲಸ ಮಾಡಿದ್ದು ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಷಯ. ಸಾರ್ವಜನಿಕ ಬದುಕಿನಲ್ಲಿ ಇರುವಂತವರು ಸೌಹಾರ್ದತೆಗೆ ಒತ್ತು ಕೊಡಬೇಕೇ ವಿನಃ, ಡಿಸ್ಟ್ರೆಕ್ಟೀವ್ ಮೆಂಟಾಲಿಟಿಗೆ ಒತ್ತು ಕೊಡುವಂತದ್ದು ಶ್ರೇಯಸ್ಸಲ್ಲ. ಅದು ತಾತ್ಕಾಲಿಕವಾಗಿ ಲಾಭ ತಂದುಕೊಡಬಹುದು. ಆದರೆ, ಖಳನಾಯಕನಾಗಿ ಉಳಿಯೋದಕ್ಕೆ ಬೆಳೆಯೋದಕ್ಕೆ ಕಾರಣವಾಗುತ್ತೆ ಎಂದರು.

  • ಜಮೀರ್ ಪಾದ ಪೂಜೆ ಮಾಡಿದ ಬೆಂಬಲಿಗರು- ಬಂಗಾರದ ಮನುಷ್ಯ ಜಮೀರಣ್ಣ ಕಟೌಟ್ ಬಿಡುಗಡೆ

    ಜಮೀರ್ ಪಾದ ಪೂಜೆ ಮಾಡಿದ ಬೆಂಬಲಿಗರು- ಬಂಗಾರದ ಮನುಷ್ಯ ಜಮೀರಣ್ಣ ಕಟೌಟ್ ಬಿಡುಗಡೆ

    ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಕಾಲು ತೊಳೆದು, ಹೂವು ಹಾಕಿ ಬೆಂಬಲಿಗರು ಪಾದಪೂಜೆ ಮಾಡಿವ ಮೂಲಕ ಅಂಧಾಭಿಮಾನ ಮೆರೆದಿದ್ದಾರೆ.

    ಚಾಮರಾಜಪೇಟೆಯಲ್ಲಿ ಬಂಗಾರದ ಮನುಷ್ಯ ಜಮೀರಣ್ಣ ಅಭಿಮಾನಿಗಳ ಬಳಗದಿಂದ ಕಾರ್ಯಕ್ರಮ ಆಯೋಜಿಸಿ, ಪಾದಪೂಜೆ ಮಾಡಿ ಗೌರವಿಸಿದ್ದಾರೆ. ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಮರೆತು ಒಟ್ಟೊಟ್ಟಾಗಿ ನಿಂತು ಪಾದಪೂಜೆ ಮಾಡಿದ್ದಾರೆ. ಅಲ್ಲದೆ ಬಂಗಾರದ ಮನುಷ್ಯ ಜಮೀರಣ್ಣ ಎಂಬ ಕಟೌಟ್‍ನ್ನು ಶಾಸಕ ಜಮೀರ್ ಅಹ್ಮದ್ ಕಡೆಯಿಂದಲೇ ಬಿಡುಗಡೆ ಮಾಡಿಸಿದ್ದಾರೆ. ಈ ವೇಳೆ ಕೋವಿಡ್-19 ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಕ್ರಮದಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸಿದ್ದಾರೆ.

    ಬೆಂಬಲಿಗರು ಸಾಮಾಜಿಕ ಅಂತರವಿಲ್ಲದೆ ಒಟ್ಟಿಗೆ ಸೇರಿ ಕಾಲು ತೊಳೆದು, ಹೂ ಹಾಕಿ ಪಾದಪೂಜೆ ಮಾಡಿ, ಬಳಿಕ ಬಟ್ಟೆಯಿಂದ ಜಮೀರ್ ಕಾಲು ವರೆಸಿದ್ದಾರೆ. ಈ ವೇಳೆ ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.