Tag: MLA AT Ramaswamy

  • ರೈತ ವಿರೋಧಿ ಮಸೂದೆ ವಿರುದ್ಧ ಜೆಡಿಎಸ್ ಶಾಸಕ ಏಕಾಂಗಿ ಪ್ರತಿಭಟನೆ

    ರೈತ ವಿರೋಧಿ ಮಸೂದೆ ವಿರುದ್ಧ ಜೆಡಿಎಸ್ ಶಾಸಕ ಏಕಾಂಗಿ ಪ್ರತಿಭಟನೆ

    ಹಾಸನ: ಸದಾ ಒಂದಿಲ್ಲೊಂದು ವಿಶೇಷ ಪ್ರತಿಭಟನೆಯಲ್ಲಿ ಭಾಗಿಯಾಗುವ ಶಾಸಕರಾದ ಎ.ಟಿ.ರಾಮಸ್ವಾಮಿ ಇಂದು ಅರಕಲಗೂಡು ತಾಲೂಕು ಕಚೇರಿ ಮುಂದೆ ರಾಜ್ಯ ಸರ್ಕಾರದ ಕಾಯ್ದೆ ಜಾರಿ ವಿರುದ್ಧ ಏಕಾಂಗಿ ಪ್ರತಿಭಟನೆ ನಡೆಸಿದರು.

    ಅರಕಲಗೂಡು ತಾಲೂಕು ಕಚೇರಿ ಎದುರು ರೈತರ, ಬಡವರ ವಿರೋಧಿ ಕಾನೂನುಗಳಿಗೆ ಧಿಕ್ಕಾರ ಎಂಬ ನಾಮಫಲಕ ಹಿಡಿದು, ಸರ್ಕಾರದ ರೈತ ವಿರೋಧಿ ನಡೆ ವಿರುದ್ಧ ಆಕ್ರೋಶ ಹೊರಹಾಕಿದರು.

    ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದ ಶಾಸಕರು ತಮ್ಮದೇ ಆದ ರೀತಿಯಲ್ಲಿ ಬಂದ್‍ಗೆ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು. ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಹೆಸರನ್ನು ಹೊಂದಿರುವ ರಾಮಸ್ವಾಮಿಯವರು ಜೆಡಿಎಸ್ ಪಕ್ಷದ ನಿಷ್ಠಾವಂತ ರಾಜಕೀಯ ಮುಖಂಡರಲ್ಲಿ ಒಬ್ಬರು. ನೇರ ಮಾತುಗಾರಿಕೆಯಿಂದ ಹೆಸರಾಗಿರುವ ಅವರು ಏಕಾಂಗಿಯಾಗಿ ಪ್ರತಿಭಟನೆ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.

    ಇತ್ತೀಚೆಗೆ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರ ವಿರುದ್ಧವೇ ಮಾತನಾಡಿದ್ದ ಶಾಸಕರು ಇಂದು ಏಕಾಂಗಿ ಪ್ರತಿಭಟನೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ ಎನ್ನಬಹುದು. ಇದನ್ನೂ ಓದಿ: ರೇವಣ್ಣ ಸರ್ವಾಧಿಕಾರಿ ಮನೋಭಾವ ಬಿಡಲೇಬೇಕು – ಜೆಡಿಎಸ್ ಶಾಸಕ ಎಟಿ.ರಾಮಸ್ವಾಮಿ

  • ಪಶುಭಾಗ್ಯದಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪ – ಎಚ್‍ಡಿಡಿ ಎದುರೇ ಶಾಸಕರ ವಾಗ್ವಾದ

    ಪಶುಭಾಗ್ಯದಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪ – ಎಚ್‍ಡಿಡಿ ಎದುರೇ ಶಾಸಕರ ವಾಗ್ವಾದ

    ಹಾಸನ: ಪಶುಭಾಗ್ಯ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ನುಂಗಿ ನೀರು ಕುಡಿದಿದ್ದಾರೆ ಎಂದು ಹಾಸನ ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಮಾಜಿ ಸಚಿವ ಎ ಮಂಜು ವಿರುದ್ಧ ಆರೋಪ ಮಾಡಿದ್ದಾರೆ.

    ಹಾಸನದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಹಿರಿಯ ಶಾಸಕ ಎ.ಟಿ ರಾಮಸ್ವಾಮಿ ಪಶುಭಾಗ್ಯ ಯೋಜನೆಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಮಾಡಲಾಗಿದೆ. ಮಾಜಿ ಸಚಿವರು ತಮ್ಮ ಕಡೆಯವರಿಗೆ ಮಾತ್ರ ಸಹಾಯಧನ ಕೊಡಿಸಿದ್ದಾರೆ. ಹಸುವನ್ನೇ ನೇರವಾಗಿ ಖರೀದಿಸಿ ನೀಡಬೇಕಿದ್ದ ಸಹಕಾರಿ ಸಂಘಗಳು ಕೇವಲ ಸಬ್ಸಿಡಿ ಹಣ ನೀಡಿ ಕೈತೊಳೆದುಕೊಂಡಿದೆ ಎಂದು ಆರೋಪಿಸಿದರು. ಇದನ್ನು ಓದಿ: ಮೂರೇ ತಿಂಗಳಲ್ಲಿ ಬಿಜೆಪಿಯನ್ನು ನಗರದಿಂದ ಕಳುಹಿಸಿಲ್ಲವೇ: ರೇವಣ್ಣ 

    ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶಾಸಕರ ನೇರ ನೇರ ಆರೋಪ ಮಾಡಿದ್ದು, ಈ ವಿಚಾರದಲ್ಲಿಯೇ ಸ್ವಪಕ್ಷೀಯ ಶಾಸಕರ ನಡುವೆಯೇ ವಾಗ್ವಾದಕ್ಕೆ ಕಾರಣವಾಯಿತು. ಶಾಸಕರ ನಡುವೇ ವಾಗ್ವಾದ ನಡೆಯುತ್ತಿದ್ದರೆ ದೇವೇಗೌಡರು ಮೌನಕ್ಕೆ ಶರಣಾಗಿದ್ದರು. ಹಾಸನದ ಚನ್ನರಾಯಪಟ್ಟಣ ಶಾಸಕ ಸಿಎನ್ ಬಾಲಕೃಷ್ಣ ಮೇಲೆ ಶಾಸಕರಾದ ಕೆ.ಎಂ ಶಿವಲಿಂಗೇಗೌಡ, ಎ.ಟಿ ರಾಮಸ್ವಾಮಿ, ಲಿಂಗೇಶ್ ಅವರು ಆರೋಪಗಳ ಸುರಿಮಳೆಗೈದರು. ಇದನ್ನು ಓದಿ:  `ಮೇಡಂ ಎಣ್ಣೆಕಾಟ ತಪ್ಪಿಸಿ’-ಡಿಸಿ ರೋಹಿಣಿ ಸಿಂಧೂರಿಗೆ ರೇವಣ್ಣ ಮನವಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv