Tag: mla and minister

  • ಜನ ಟ್ರಾಫಿಕ್‍ನಲ್ಲಿ ಸಿಲುಕಿದ್ದರೆ, ಮಂತ್ರಿಗಳಿಗೆ, ಶಾಸಕರಿಗೆ ಸಂಚರಿಸಲು ರಾಜಮಾರ್ಗ

    ಜನ ಟ್ರಾಫಿಕ್‍ನಲ್ಲಿ ಸಿಲುಕಿದ್ದರೆ, ಮಂತ್ರಿಗಳಿಗೆ, ಶಾಸಕರಿಗೆ ಸಂಚರಿಸಲು ರಾಜಮಾರ್ಗ

    ಬೆಂಗಳೂರು: ಸಿಲಿಕಾನ್ ಸಿಟಿಯ ಮಹಾಮಳೆಗೆ ಜನ ತತ್ತರಿಸಿದ್ದರೆ ರಾಜ್ಯದ ಸಚಿವರು ಮತ್ತು ಶಾಸಕರ ಕಾರು ಸಂಚರಿಸಲು ಪೊಲೀಸರು ರಾಜಮಾರ್ಗವನ್ನು ಮಾಡಿಕೊಟ್ಟಿದ್ದಾರೆ.

    ಚಾಲುಕ್ಯ ಸರ್ಕಲ್ ನಿಂದ ಹೆಬ್ಬಾಳದವರೆಗಿನ ರಸ್ತೆಗಳು ಜಾಮ್ ಆಗಿದ್ದರೆ, ಸಚಿವರು ಮತ್ತು ಶಾಸಕರಿಗಾಗಿ ಟ್ರಾಫಿಕ್ ಪೊಲೀಸರು ರೇಸ್ ಕೋರ್ಸ್ ರಸ್ತೆಯಲ್ಲಿ ಒನ್ ವೇ ಮಾಡಿ ಕೊಟ್ಟಿದ್ದಾರೆ.

    ಸಂಜೆ ಸುರಿದ ಮಳೆಯಿಂದ ಜನ ಗಂಟಗಟ್ಟಲೇ ಟ್ರಾಫಿಕ್ ನಲ್ಲಿ ಸಿಲುಕಿದ್ದರೆ, ಅಧಿಕಾರಿಗಳ ಒತ್ತಡಕ್ಕೆ ಮಣಿದು ಟ್ರಾಫಿಕ್ ಪೊಲೀಸರು ಒನ್‍ವೇ ಮಾಡಿ ಅವರ ಕಾರು ಸಂಚರಿಸಲು ಅನುವು ಮಾಡಿಕೊಟ್ಟಿರುವುದಕ್ಕೆ  ಜನ ಈಗ ಆಕ್ರೋಶಗೊಂಡಿದ್ದಾರೆ.

    ಇಂಥ ವಿಐಪಿ ಸಂಸ್ಕೃತಿಗೆ ನಾವು ಕಡಿವಾಣ ಹಾಕಲೇಬೇಕು. ಹೀಗಾಗಿ ಸಿಎಂ ಸಿದ್ದರಾಮಯ್ಯನವರ ಅಧಿಕೃತ ಟ್ವಿಟ್ಟರ್ ಖಾತೆಯಾದ @CMofKarnataka   ಟ್ವೀಟ್ ಮಾಡಿ ನಿಮ್ಮ ಆಕ್ರೋಶವನ್ನು ಹೊರಹಾಕಿ.