Tag: MK Mata

  • ‘ಕನ್ನೇರಿ’ಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ ರಾಜ್ಯ ಪ್ರಶಸ್ತಿ ವಿಜೇತ ಎಂ.ಕೆ.ಮಠ

    ‘ಕನ್ನೇರಿ’ಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ ರಾಜ್ಯ ಪ್ರಶಸ್ತಿ ವಿಜೇತ ಎಂ.ಕೆ.ಮಠ

    ನ್ನೇರಿ’ಸ್ಯಾಂಡಲ್‍ವುಡ್‌ನಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಚಿತ್ರ. ಮಾರ್ಚ್ 4ರಂದು ಪ್ರೇಕ್ಷಕರೆದುರು ಬರಲು ಸಜ್ಜಾಗಿರುವ ಈ ಚಿತ್ರ ಈಗಾಗಲೇ ಪ್ರೇಕ್ಷಕರನ್ನು ಸಾಕಷ್ಟು ವಿಚಾರಗಳಿಂದ ತನ್ನತ್ತ ಸೆಳೆದುಕೊಂಡಿದೆ.

    ಹಾಡು, ಟ್ರೇಲರ್, ಮನಸ್ಸಿಗೆ ನಾಟಿವೆ. ಏನೋ ವಿಶೇಷತೆ ಇದೆ ಅನ್ನೋದನ್ನು ಸಾರಿ ಹೇಳಿವೆ. ಬಿಡುಗಡೆಯಾಗಿರುವ ಟೀಸರ್ ಕೂಡ ಅಷ್ಟೇ ಕುತೂಹಲ ಹುಟ್ಟು ಹಾಕಿದೆ. ಹೀಗೆ ಸಿನಿರಸಿಕರ ಮನಸೆಳೆದ ಈ ಚಿತ್ರದಲ್ಲಿ ಸ್ಯಾಂಡಲ್‍ವುಡ್ ಅಂಗಳದ ಹೆಮ್ಮೆಯ ಹಿರಿಯ ನಟ ಎಂ.ಕೆ ಮಠ ಕೂಡ ಬಣ್ಣಹಚ್ಚಿದ್ದಾರೆ.  ಇದನ್ನೂ ಓದಿ: ಎಂತವರಿಗೂ ಮರುಕ ಹುಟ್ಟಿಸುತ್ತೆ ಕನ್ನೇರಿ ಚಿತ್ರದ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡು

    ತಮ್ಮ ಅಮೋಘ ಅಭಿನಯದ ಮೂಲಕ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಎಂ.ಕೆ.ಮಠ ಕನ್ನೇರಿ ಚಿತ್ರದಲ್ಲಿ ಬಹು ಮುಖ್ಯ ಪಾತ್ರವೊಂದಕ್ಕೆ ಜೀವತುಂಬಿದ್ದಾರೆ. ಈಗಾಗಲೇ ಗೊತ್ತಿರುವ ಹಾಗೆ ಕನ್ನೇರಿ ನೆಲೆ ಕಳೆದುಕೊಂಡು ನಿರ್ವಸತಿಗರಾದ ಕಾಡಿನ ಜನರ ಸುತ್ತ ನೈಜ ಘಟನೆಗಳನ್ನು ಸ್ಪೂರ್ತಿಯಾಗಿ ಇಟ್ಟುಕೊಂಡು ಹೆಣೆದ ಚಿತ್ರ. ಇಂತಹ ಚಿತ್ರದಲ್ಲಿ ಎಂ.ಕೆ ಮಠ ಅವ್ರು ಕಾಡಿನ ಜನರ ಹಾಡಿಯ ನಾಯಕನಾಗಿ ಬಣ್ಣಹಚ್ಚಿದ್ದಾರೆ. ಕೇವಲ ಬಣ್ಣಹಚ್ಚಿಲ್ಲ ಅದನ್ನು ಜೀವಿಸಿದ್ದಾರೆ. ಚಿತ್ರದ ಸ್ಯಾಂಪಲ್‍ಗಳಲ್ಲೂ ಅದನ್ನು ಕಾಣಬಹುದಾಗಿದೆ. ತಮ್ಮ ಪಾತ್ರದ ಬಗ್ಗೆ ಹಾಗೂ ನೀನಾಸಂ ಮಂಜು ಆಯ್ದುಕೊಂಡ ಕಥೆ ಬಗ್ಗೆ ಬಹಳ ಸಂತಸ ವ್ಯಕ್ತಪಡಿಸಿರುವ ಇವ್ರು ಈ ಸಿನಿಮಾ ಖಂಡಿತ ಪ್ರೇಕ್ಷಕರ ಮನಮುಟ್ಟಲಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿಗೂ ಇಷ್ಟವಾಯ್ತು ‘ಕನ್ನೇರಿ’ ಚಿತ್ರದ ‘ಈ ಗಾಳಿ ತಂಗಾಳಿ’ ಹಾಡು!

    ನೀನಾಸಂ ಮಂಜು ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಕೊಟಿಗಾನಹಳ್ಳಿ ರಾಮಯ್ಯ ಕಥೆ ಬರೆದಿದ್ದಾರೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಮತ್ತು ಚಂದ್ರಶೇಖರ್ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಕದ್ರಿ ಮಣಿಕಾಂತ್ ಅದ್ಭುತ ಸಂಗೀತ ಸಂಯೋಜನೆ, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಸುಜಿತ್ ಎಸ್ ನಾಯಕ್ ಸಂಕಲನ ಚಿತ್ರಕ್ಕಿದೆ. ಇದನ್ನೂ ಓದಿ: ‘ಕನ್ನೇರಿ’ ಒಡಲೊಳಗಿದೆ ಬೇರೆಯದ್ದೇ ಲೋಕ – ಟ್ರೇಲರ್ ನೋಡಿ ಮೆಚ್ಚಿದ ಪ್ರೇಕ್ಷಕ ಮಹಾಶಯರು

    ನೈಜ ಘಟನೆಯೊಂದಿಗೆ ಮಹಿಳಾ ಪ್ರಧಾನ ಚಿತ್ರವಾಗಿರುವ ಕನ್ನೇರಿಯಲ್ಲಿ ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಅರುಣ್ ಸಾಗರ್, ಕರಿ ಸುಬ್ಬು, ಸರ್ದಾರ್ ಸತ್ಯ,ಅನಿತ ಭಟ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.