Tag: MJ Akbar

  • ಪತ್ರಕರ್ತೆ ಪಲ್ಲವಿಯೊಂದಿಗೆ ಒಪ್ಪಿತ ಸಂಬಂಧವಿತ್ತು – ಎಂ.ಜೆ.ಅಕ್ಬರ್ ಸ್ಪಷ್ಟನೆ

    ಪತ್ರಕರ್ತೆ ಪಲ್ಲವಿಯೊಂದಿಗೆ ಒಪ್ಪಿತ ಸಂಬಂಧವಿತ್ತು – ಎಂ.ಜೆ.ಅಕ್ಬರ್ ಸ್ಪಷ್ಟನೆ

    ನವದೆಹಲಿ: ಪತ್ರಕರ್ತೆ ಪಲ್ಲವಿ ಗುಗೋಯ್ ಅವರ ಆರೋಪವನ್ನು ಮಾಜಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್ ತಳ್ಳಿಹಾಕಿದ್ದು, ಆಕೆಗೂ ನನಗೂ ಒಪ್ಪಿತ ಸಂಬಂಧವಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

    ವಾಷಿಂಗ್ಟನ್ ಪೋಸ್ಟ್ ನಲ್ಲಿ ನನ್ನ ವಿರುದ್ಧ ಪಲ್ಲವಿ ಗುಗೋಯ್ ಅವರು ನವೆಂಬರ್ 2ರಂದು ಪ್ರಕಟಿಸಿದ ಲೇಖನ ಸುಳ್ಳು. ಪಲ್ಲವಿ ಜೊತೆಗೆ ಹಲವು ತಿಂಗಳು ನಾನು ಸಂಬಂಧ ಹೊಂದಿದ್ದೆ. ಇದು ನನ್ನ ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು. ಹೀಗಾಗಿ ನಮ್ಮ ಸಂಬಂಧ ಮುರಿದು ಬಿದ್ದಿತ್ತು ಎಂದು ಅಕ್ಬರ್ ತಿಳಿಸಿದ್ದಾರೆ.

    ಪತಿ ಪರ ಪತ್ನಿ ಬ್ಯಾಟ್:
    ಎಂ.ಜೆ. ಅಕ್ಬರ್ ಅವರ ಮೇಲಿನ ಮೀಟೂ ಆರೋಪದಿಂದ ನಾನು ಸುಮ್ಮನಿದ್ದೆ. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಪಲ್ಲವಿ ಅಂಕಣ ನೋಡಿ ನನಗೆ ಕೋಪ ಬಂದಿತ್ತು. ಏಕೆಂದರೆ ಅವರು ನನ್ನ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಎಂ.ಜೆ.ಅಕ್ಬರ್ ಪತ್ನಿ ಮಲ್ಲಿಕಾ ತೀರುಗೇಟು ಕೊಟ್ಟಿದ್ದಾರೆ.

    ನಮ್ಮ ಕೌಟುಂಬಿಕ ಕಲಹಕ್ಕೆ ಪಲ್ಲವಿ ಕಾರಣರಾಗಿದ್ದರು. ಪತಿಗೆ ಅರ್ಧರಾತ್ರಿಯಲ್ಲಿ ಫೋನ್ ಮಾಡುತ್ತಿದ್ದರು. ನನ್ನ ಉಪಸ್ಥಿತಿಯಲ್ಲಿಯೇ ಪತಿಯೊಂದಿಗೆ ಮಾತನಾಡುತ್ತಿದ್ದರು. ಕಾಲ ಕಳೆಯುತ್ತಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಭೇಟಿ ಆಗುತ್ತಿದ್ದರು. ಅವರಿಬ್ಬರ ಸಂಬಂಧ ಹದಗೆಟ್ಟ ಮೇಲೆ ನಮ್ಮ ಕುಟುಂಬದ ಮೇಲೆ ಭಾರೀ ಕೆಟ್ಟ ಪರಿಣಾಮ ಬೀರಿತ್ತು ಎಂದು ಮಲ್ಲಿಕಾ ಅವರು ತಿಳಿಸಿದ್ದಾರೆ.

    ಏಷ್ಯನ್ ಏಜ್ ಸಿಬ್ಬಂದಿಯ ಪಾರ್ಟಿ ನಮ್ಮ ಮನೆಯಲ್ಲಿ ನಡೆಯುತ್ತಿತ್ತು. ಆಗ ಹೆಚ್ಚಿನ ಸಂಖ್ಯೆಯಲ್ಲಿ ತರುಣ ಪತ್ರಕರ್ತರು ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. ಅವರು ಡಾನ್ಸ್ ಮಾಡುತ್ತಿದ್ದಾಗ ನನಗೆ ಸಂಕಟವಾಗುತ್ತಿತ್ತು. ಇದರಿಂದಾಗಿ ನಾನು ಪತಿಯ ವಿರುದ್ಧ ದನಿ ಎತ್ತಿದೆ. ಆದರೆ ಈಗ ಅದೇ ಮಹಿಳೆಯರು ಆರೋಪ ಮಾಡುತ್ತಿದ್ದಾರೆ ಎಂದು ಮಲ್ಲಿಕಾ ಹೇಳಿದ್ದಾರೆ.

    ಪಲ್ಲವಿ ಆರೋಪ ಏನು?
    ಎಂ.ಜೆ.ಅಕ್ಬರ್ ಮೇಲೆ ಪತ್ರಕರ್ತೆಯರು ಆರೋಪ ಮಾಡುತ್ತಿರುವ ಕುರಿತು ಮಾಹಿತಿ ಸಿಕ್ಕಿತ್ತು. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಅಕ್ಬರ್ ಅವರಂತಹ ವ್ಯಕ್ತಿ ಉನ್ನತ ಸ್ಥಾನದಲ್ಲಿ ಇದ್ದಾರೆ. ಅಷ್ಟೇ ಅಲ್ಲದೆ ಆಡಳಿತ ಪಕ್ಷದ ಸದಸ್ಯರಾಗಿರುವುದು ದುರ್ದೈವ.

    ನನ್ನ 22 ವಯಸ್ಸಿನಲ್ಲಿ ಏಷ್ಯನ್ ಏಜ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪತ್ರಿಕೆಯ ಸಂಪಾದಕರಾಗಿದ್ದ ಎಂ.ಜೆ.ಅಕ್ಬರ್ ಅವರ ಕೈಕೆಳಗೆ ಕೆಲಸ ಮಾಡುವುದು ಪ್ರತಿಷ್ಠೆಯ ವಿಚಾರವಾಗಿತ್ತು. ಆಗಿನ್ನು ಎಂ.ಜಿ.ಅಕ್ಬರ್ ಅವರಿಗೆ 40 ವರ್ಷ. ನಮ್ಮ ತಪ್ಪುಗಳನ್ನು ತಿದ್ದುತ್ತಲೇ ಗದರಿಸುತ್ತಿದ್ದರು ಹಾಗೂ ಬೈಯುತ್ತಿದ್ದರು. ಅವರ ನಿರೀಕ್ಷೆಯ ಮಟ್ಟದಲ್ಲಿ ನಾವು ಕೆಲಸ ಮಾಡುತ್ತಿಲ್ಲವೆಂದು ಹೀಯಾಳಿಸುತ್ತಿದ್ದರು.

    ಅವರಿಂದ ನಾನು ಹೆಚ್ಚು ವಿಷಯಗಳನ್ನು ಕಲಿತುಕೊಂಡೆ. ಆತ್ಮೀಯವಾಗಿ ಬೆರೆತುಕೊಂಡೆ. ಹೀಗಾಗಿ ನನ್ನ 23ನೇ ವಯಸ್ಸಿಗೆ ಒಪ್-ಎಡ್ ಪುಟದ ಸಂಪಾದಕಿಯಾದೆ. ಹಿರಿಯ ಪತ್ರಕರ್ತರಾದ ಖುಷವಂತ್ ಸಿಂಗ್, ಜಸ್ವತ್ ಸಿಂಗ್ ರೀತಿಯಲ್ಲಿ ನನಗೂ ಅಂಕಣ ಬರೆಯಲು ಅವಕಾಶ ಸಿಕ್ಕಿತ್ತು.

    ನನಗೆ ಸಿಕ್ಕ ಅವಕಾಶಗಳಿಗೆ, ಸ್ಥಾನಕ್ಕೆ ನಾನು ಭಾರೀ ಬೆಲೆ ತೆರಬೇಕಾಯಿತು. 1994ರಲ್ಲಿ ಒಂದು ದಿನ ಸಿದ್ಧಪಡಿಸಿದ್ದ ಪುಟವನ್ನು ತೋರಿಸಲು ಎಂ.ಜಿ.ಅಕ್ಬರ್ ಅವರ ಕೊಠಡಿಗೆ ಹೋಗಿದ್ದೆ. ಪುಟ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ತಕ್ಷಣವೇ ನನ್ನನ್ನು ಅಪ್ಪಿಕೊಂಡು ಬಲವಂತವಾಗಿ ಮುತ್ತಿಕ್ಕಿದರು. ಈ ಘಟನೆಯಿಂದ ಗಾಬರಿಗೊಂಡ ನಾನು ಗೊಂದಲಕ್ಕೆ ಒಳಗಾಗಿ ಅಲ್ಲಿಂದ ಹೊರ ಬಂದೆ.

    ಈ ಘಟನೆಯಾದ ಕೆಲವು ತಿಂಗಳ ನಂತರದಲ್ಲಿ ನಿಯತಕಾಲಿಕವೊಂದರ ಉದ್ಘಾಟನೆ ಕಾರ್ಯಕ್ರಮವಿತ್ತು. ಹೀಗಾಗಿ ಫ್ಯಾನ್ಸಿ ತಾಜ್ ಹೊಟೇಲ್‍ನಲ್ಲಿ ರೂಮ್ ಪಡೆದಿದ್ದರು. ಆಗ ಪುಟವನ್ನು ಹೇಗೆ ವಿನ್ಯಾಸ ಮಾಡಿರುವಿರಿ, ನೋಡಬೇಕು ತೆಗೆದುಕೊಂಡು ಬನ್ನಿ ಎಂದು ಅಕ್ಬರ್ ಅವರು ತಿಳಿಸಿದ್ದರು.

    ಸೂಚನೆಯೆಂತೆ ಅವರ ರೂಮ್‍ಗೆ ಹೋಗಿದ್ದೆ. ಆಗ ಈ ಹಿಂದೆ ನಡೆದುಕೊಂಡಂತೆ ವರ್ತಿಸಲು ಪ್ರಾರಂಭಿಸಿದರು. ಬಲವಂತವಾಗಿ ಕಿಸ್ ಮಾಡಲು ಅಕ್ಬರ್ ಬಂದಿದ್ದರು. ತಕ್ಷಣವೇ ಅವರನ್ನು ತಳ್ಳಿದೆ. ಆದರೆ ಇಷ್ಟಕ್ಕೆ ಬಗ್ಗದ ಅವರು ನನ್ನ ಮೇಲೆ ಬಲ ಪ್ರದರ್ಶನ ಮಾಡಿ, ಹಲ್ಲೆಗೆ ಯತ್ನಿಸಿದರು. ಅವರ ಜೊತೆಗೆ ಹೋರಾಡಿ ಅಲ್ಲಿಂದ ಅಳುತ್ತಲೇ ಹೊರಬಂದೆ.

    ಈ ಎರಡು ಘಟನೆಯ ಬಳಿಕ, ಅವರಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದೆ. ಆದರೆ ಜೈಪುರದಲ್ಲಿ ಇದ್ದಾಗ ಅಕ್ಬರ್ ನನಗೆ ಫೋನ್ ಮಾಡಿ ತಾವಿರುವಲ್ಲಿಗೆ ಕರೆಸಿಕೊಂಡು ನನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಪಲ್ಲವಿ ಗುಗೋಯ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ಮೇಲೆ ಬಿಜೆಪಿ ಮುಖಂಡ ಎಂ.ಜೆ.ಅಕ್ಬರ್ ಅತ್ಯಾಚಾರ ಎಸಗಿದ್ರು: ಪತ್ರಕರ್ತೆಯಿಂದ ಬಾಂಬ್

    ನನ್ನ ಮೇಲೆ ಬಿಜೆಪಿ ಮುಖಂಡ ಎಂ.ಜೆ.ಅಕ್ಬರ್ ಅತ್ಯಾಚಾರ ಎಸಗಿದ್ರು: ಪತ್ರಕರ್ತೆಯಿಂದ ಬಾಂಬ್

    ನವದೆಹಲಿ: ನನ್ನ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಂಜೆ ಅಕ್ಬರ್ ಅತ್ಯಾಚಾರ ಎಸಗಿದ್ದರು ಎಂದು ಭಾರತೀಯ ಮೂಲದ ಅಮೇರಿಕಪತ್ರಕರ್ತೆ ಪಲ್ಲವಿ ಗಗೋಯ್ ಆರೋಪಿಸಿದ್ದಾರೆ.

    ಪಲ್ಲವಿ ಗಗೋಯಲ್ ಈ ಕುರಿತು ವಾಷಿಂಗ್ಟನ್ ಪೋಸ್ಟ್ ನಲ್ಲಿ ಗುರುವಾರ, ತಮ್ಮ ಮೇಲಾದ ಅತ್ಯಾಚಾರ ಕುರಿತಾಗಿ ಬರೆದುಕೊಂಡಿದ್ದಾರೆ. ನಾನು ಏಷ್ಯನ್ ಏಜ್ ಪತ್ರಿಕೆಯ ಒಪ್-ಎಡ್ ಪುಟದ ಸಂಪಾದಕಿಯಾಗಿದ್ದಾಗ ಅವರು ಅತ್ಯಾಚಾರ ಎಸಗಿದ್ದಾರೆ ಎಂದು ಪಲ್ಲವಿ ಅವರು ಆರೋಪಿಸಿದ್ದಾರೆ. ಈ ಮೂಲಕ 23 ವರ್ಷಗಳ ಹಿಂದೆ ಆಗಿರುವ ಘಟನೆಯನ್ನು ಹೊರಹಾಕಿದ್ದಾರೆ.

    ಪಲ್ಲವಿ ಆರೋಪ ಏನು?
    ಎಂ.ಜೆ.ಅಕ್ಬರ್ ಮೇಲೆ ಪತ್ರಕರ್ತೆಯರು ಆರೋಪ ಮಾಡುತ್ತಿರುವ ಕುರಿತು ಮಾಹಿತಿ ಸಿಕ್ಕಿತ್ತು. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಅಕ್ಬರ್ ಅವರಂತಹ ವ್ಯಕ್ತಿ ಉನ್ನತ ಸ್ಥಾನದಲ್ಲಿ ಇದ್ದಾರೆ. ಅಷ್ಟೇ ಅಲ್ಲದೆ ಆಡಳಿತ ಪಕ್ಷದ ಸದಸ್ಯರಾಗಿರುವುದು ದುರ್ದೈವ.

    ನನ್ನ 22 ವಯಸ್ಸಿನಲ್ಲಿ ಏಷ್ಯನ್ ಏಜ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪತ್ರಿಕೆಯ ಸಂಪಾದಕರಾಗಿದ್ದ ಎಂ.ಜೆ.ಅಕ್ಬರ್ ಅವರ ಕೈಕೆಳಗೆ ಕೆಲಸ ಮಾಡುವುದು ಪ್ರತಿಷ್ಠೆಯ ವಿಚಾರವಾಗಿತ್ತು. ಆಗಿನ್ನು ಎಂ.ಜಿ.ಅಕ್ಬರ್ ಅವರಿಗೆ 40 ವರ್ಷ. ನಮ್ಮ ತಪ್ಪುಗಳನ್ನು ತಿದ್ದುತ್ತಲೇ ಗದರಿಸುತ್ತಿದ್ದರು ಹಾಗೂ ಬೈಯುತ್ತಿದ್ದರು. ಅವರ ನಿರೀಕ್ಷೆಯ ಮಟ್ಟದಲ್ಲಿ ನಾವು ಕೆಲಸ ಮಾಡುತ್ತಿಲ್ಲವೆಂದು ಹೀಯಾಳಿಸುತ್ತಿದ್ದರು.

    ಅವರಿಂದ ನಾನು ಹೆಚ್ಚು ವಿಷಯಗಳನ್ನು ಕಲಿತುಕೊಂಡೆ. ಆತ್ಮೀಯವಾಗಿ ಬೆರೆತುಕೊಂಡೆ. ಹೀಗಾಗಿ ನನ್ನ 23ನೇ ವಯಸ್ಸಿಗೆ ಒಪ್-ಎಡ್ ಪುಟದ ಸಂಪಾದಕಿಯಾದೆ. ಹಿರಿಯ ಪತ್ರಕರ್ತರಾದ ಖುಷವಂತ್ ಸಿಂಗ್, ಜಸ್ವತ್ ಸಿಂಗ್ ರೀತಿಯಲ್ಲಿ ನನಗೂ ಅಂಕಣ ಬರೆಯಲು ಅವಕಾಶ ಸಿಕ್ಕಿತ್ತು.

    ನನಗೆ ಸಿಕ್ಕ ಅವಕಾಶಗಳಿಗೆ, ಸ್ಥಾನಕ್ಕೆ ನಾನು ಭಾರೀ ಬೆಲೆ ತೆರಬೇಕಾಯಿತು. 1994ರಲ್ಲಿ ಒಂದು ದಿನ ಸಿದ್ಧಪಡಿಸಿದ್ದ ಪುಟವನ್ನು ತೋರಿಸಲು ಎಂ.ಜಿ.ಅಕ್ಬರ್ ಅವರ ಕೊಠಡಿಗೆ ಹೋಗಿದ್ದೆ. ಪುಟ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ತಕ್ಷಣವೇ ನನ್ನನ್ನು ಅಪ್ಪಿಕೊಂಡು ಬಲವಂತವಾಗಿ ಮುತ್ತಿಕ್ಕಿದರು. ಈ ಘಟನೆಯಿಂದ ಗಾಬರಿಗೊಂಡ ನಾನು ಗೊಂದಲಕ್ಕೆ ಒಳಗಾಗಿ ಅಲ್ಲಿಂದ ಹೊರ ಬಂದೆ.

    ಈ ಘಟನೆಯಾದ ಕೆಲವು ತಿಂಗಳ ನಂತರದಲ್ಲಿ ನಿಯತಕಾಲಿಕವೊಂದರ ಉದ್ಘಾಟನೆ ಕಾರ್ಯಕ್ರಮವಿತ್ತು. ಹೀಗಾಗಿ ಫ್ಯಾನ್ಸಿ ತಾಜ್ ಹೊಟೇಲ್‍ನಲ್ಲಿ ರೂಮ್ ಪಡೆದಿದ್ದರು. ಆಗ ಪುಟವನ್ನು ಹೇಗೆ ವಿನ್ಯಾಸ ಮಾಡಿರುವಿರಿ, ನೋಡಬೇಕು ತೆಗೆದುಕೊಂಡು ಬನ್ನಿ ಎಂದು ಅಕ್ಬರ್ ಅವರು ತಿಳಿಸಿದ್ದರು.

    ಸೂಚನೆಯೆಂತೆ ಅವರ ರೂಮ್‍ಗೆ ಹೋಗಿದ್ದೆ. ಆಗ ಈ ಹಿಂದೆ ನಡೆದುಕೊಂಡಂತೆ ವರ್ತಿಸಲು ಪ್ರಾರಂಭಿಸಿದರು. ಬಲವಂತವಾಗಿ ಕಿಸ್ ಮಾಡಲು ಅಕ್ಬರ್ ಬಂದಿದ್ದರು. ತಕ್ಷಣವೇ ಅವರನ್ನು ತಳ್ಳಿದೆ. ಆದರೆ ಇಷ್ಟಕ್ಕೆ ಬಗ್ಗದ ಅವರು ನನ್ನ ಮೇಲೆ ಬಲ ಪ್ರದರ್ಶನ ಮಾಡಿ, ಹಲ್ಲೆಗೆ ಯತ್ನಿಸಿದರು. ಅವರ ಜೊತೆಗೆ ಹೋರಾಡಿ ಅಲ್ಲಿಂದ ಅಳುತ್ತಲೇ ಹೊರಬಂದೆ.

    ಈ ಎರಡು ಘಟನೆಯ ಬಳಿಕ, ಅವರಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದೆ. ಆದರೆ ಜೈಪುರದಲ್ಲಿ ಇದ್ದಾಗ ಅಕ್ಬರ್ ನನಗೆ ಫೋನ್ ಮಾಡಿ ತಾವಿರುವಲ್ಲಿಗೆ ಕರೆಸಿಕೊಂಡು ನನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಪಲ್ಲವಿ ಗಗೋಯ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸತ್ಯವೇ ನನ್ನ ರಕ್ಷಣೆ – ಎಂ.ಜೆ.ಅಕ್ಬರ್‌ಗೆ ಪ್ರಿಯಾ ರಮಣಿ ತಿರುಗೇಟು

    ಸತ್ಯವೇ ನನ್ನ ರಕ್ಷಣೆ – ಎಂ.ಜೆ.ಅಕ್ಬರ್‌ಗೆ ಪ್ರಿಯಾ ರಮಣಿ ತಿರುಗೇಟು

    ನವದೆಹಲಿ: ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆಯ ಸಚಿವ ಎಂಜೆ.ಅಕ್ಬರ್ ಹಾಕಿರುವ ಮಾನನಷ್ಟ ಮೊಕದ್ದಮೆ ಹಿನ್ನೆಲೆಯಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ಸತ್ಯವೇ ನನ್ನ ರಕ್ಷಣೆ ಮಾಡಲಿದೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    #Metoo ಅಭಿಯಾನದ ಮೂಲಕ ತನ್ನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದರು. ಅಲ್ಲದೇ ಇಂದು ವಕೀಲ ಕರಣ್ ಜವಾಲ್ ರ ಮೂಲಕ ಪತ್ರಕರ್ತೆ ಪ್ರಿಯಾ ರಮಣಿ ಸೇರಿದಂತೆ ಒಟ್ಟು 11 ಜನರ ಮೇಲೆ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

    https://twitter.com/priyaramani/status/1051817717467045890

    ಕೇಂದ್ರ ಸಚಿವರ ಕಾನೂನು ಹೋರಾಟಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಪ್ರಿಯಾ ರಮಣಿ, ಸಚಿವರ ಈ ನಡೆಯಿಂದ ನನಗೆ ಬಹಳ ನೋವಾಗಿದ್ದು, ಮಹಿಳೆಯರ ಮೇಲೆ ಅನವಶ್ಯಕವಾಗಿ ಆರೋಪ ಮಾಡಿ, ಅವರನ್ನು ರಾಜಕೀಯ ಪಿತೂರಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ಮೂಲಕ ಅವರ ನಿಲುವನ್ನ ಸ್ಪಷ್ಟ ಪಡಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಎಂಜೆ ಅಕ್ಬರ್

    ಅಕ್ಬರ್ ರವರು ತಮ್ಮ ಮೇಲಿರುವ ಆರೋಪಗಳನ್ನು ತಳ್ಳಿಹಾಕಿ, ಆರೋಪ ಮಾಡಿದ ಮಹಿಳೆಯರನ್ನ ಬೆದರಿಸುತ್ತಿದ್ದಾರೆ. ಆರೋಪ ಮಾಡಿದವರಿಗೆ ಕಿರುಕುಳ ನೀಡುವ ಮೂಲಕ ಬಾಯಿ ಮುಚ್ಚಿಸುವ ಯತ್ನ ಮಾಡುತ್ತಿದ್ದಾರೆ. ನನ್ನ ಮೇಲೆ ಹಾಕಿರುವ ಮೊಕದ್ದಮೆಯ ವಿರುದ್ಧ ಹೋರಾಡಲು ನಾನು ಸಿದ್ದಳಿದ್ದೇನೆ. “ಸತ್ಯ ಮತ್ತು ಕೇವಲ ಸತ್ಯವೇ ನನ್ನನ್ನು ರಕ್ಷಣೆ” ಮಾಡಲಿದೆ ಎಂದು ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv