Tag: miyazaki

  • 1 ಮಾವಿಗೆ 10 ಸಾವಿರ ರೂ., ಕಿಲೋಗೆ 2.7 ಲಕ್ಷ ರೂ. – ಧಾರವಾಡದಲ್ಲಿದೆ ದುಬಾರಿ ಮಾವು

    1 ಮಾವಿಗೆ 10 ಸಾವಿರ ರೂ., ಕಿಲೋಗೆ 2.7 ಲಕ್ಷ ರೂ. – ಧಾರವಾಡದಲ್ಲಿದೆ ದುಬಾರಿ ಮಾವು

    – ಮಾವು ಮೇಳದಲ್ಲಿ ಗಮನ ಸೆಳೆದ ಮಾವು
    – ಪ್ರದರ್ಶನಕ್ಕೆ ಇಡಲಾಗಿದೆ ಮೀಯಾಝಾಕಿ ಮಾವು

    ಧಾರವಾಡ: ಮಾವಿಗೆ (Mango) ಹಣ್ಣುಗಳ ರಾಜ ಎಂದು ಸುಮ್ಮನೇ ಕರೆಯಲ್ಲ. ಧಾರವಾಡದಲ್ಲಿ (Dharawada) ನಡೆಯುತ್ತಿರುವ ಮಾವು ಮೇಳದಲ್ಲಿ, ವಿಶ್ವದಲ್ಲಿಯೇ ಅತಿ ದುಬಾರಿಯಾದ ಮಾವಿನ ಹಣ್ಣು ಬಂದಿದೆ. ಧಾರವಾಡ ಮಾವಿನ ಮೇಳದಲ್ಲಿ ಪ್ರತಿ ಕಿಲೋ ಗೆ 2.7 ಲಕ್ಷ ರೂ. ಮೌಲ್ಯದ ಮಾವು ಎಲ್ಲರ ಗಮನ ಸೆಳೆದಿದೆ.

    ವಿಶ್ವದ ಮಾವಿನ ತಳಿಗಳಲ್ಲಿಯೇ ಅತೀ ದುಬಾರಿಯಾದ ಮೀಯಾಝಾಕಿ (Miyazaki Mango) ತಳಿಯ ಮಾವನ್ನು ಪ್ರದರ್ಶನಕ್ಕಿಡಲಾಗಿದೆ. ಧಾರವಾಡ ನಗರದ ಪ್ರಮೋದ ಗಾಂವ್ಕರ್ ಎಂಬವರು ತಮ್ಮ ಕಲಕೇರಿ ಗ್ರಾಮದ ತೋಟದಲ್ಲಿ ಈ ಮಾವನ್ನು ಬೆಳೆದಿದ್ದಾರೆ.

    ಧಾರವಾಡದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಾವಿನ ಮೇಳದಲ್ಲಿ ಜಪಾನ್ ಮೂಲದ ಈ ವಿಶೇಷ ಮಾವಿನ ತಳಿ ಪ್ರದರ್ಶನಕ್ಕೆ ಇಡಲಾಗಿದೆ. ಪ್ರತಿ ಕೆಜಿಗೆ ಮೀಯಾಝಾಕಿ ಹಣ್ಣಿಗೆ ಮಾರು 2.7 ಲಕ್ಷ ರೂಪಾಯಿ ಬೆಲೆ ಇದೆ. ಕೇವಲ ಒಂದೇ ಒಂದು ಹಣ್ಣು ಸುಮಾರು 10 ಸಾವಿರ ರೂ. ಬೆಲೆಬಾಳುತ್ತದೆ. ಇದನ್ನೂ ಓದಿ: ಉಗ್ರ ಕೃತ್ಯಕ್ಕೆ ಸಹಕಾರ – ನಾಪತ್ತೆಯಾಗಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್‌

    ಮೀಯಾಝಾಕಿ ತಳಿ ಮೂಲತಃ ಜಪಾನಿನ (Japan) ತಳಿಯಾಗಿದೆ. ಅದರ ವಿಶಿಷ್ಟ ಸುವಾಸನೆ ಮತ್ತು ಪೌಷ್ಟಿಕತೆಗೆ ಇದು ವಿದೇಶಗಳಲ್ಲಿ ಭಾರೀ ಬೇಡಿಕೆಯನ್ನು ಹೊಂದಿದೆ. ಇದು ಹಣ್ಣಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಜಪಾನಿನ ಮೀಯಾಝಾಕಿ ಎಂಬುವವರು ಇದನ್ನ ಮೊದಲು ಬೆಳೆದಿದ್ದಕ್ಕೆ ಈ ಮಾವಿಗೆ ಅವರ ಹೆಸರನ್ನು ಇಡಲಾಗಿದೆ.

    ಧಾರವಾಡದ ಪ್ರಮೋದ್ ಗಾಂವ್ಕರ್ ಅವರು ಈ ಮಾವಿನ ಸಸಿಯನ್ನ 2012 ರಲ್ಲಿ ತಮ್ಮ ತೋಟದಲ್ಲಿ ನೆಟ್ಟಿದ್ದರು. 2015 ರಿಂದ ಇಳುವರಿ ಆರಂಭವಾಗಿದ್ದು ಕಳೆದ ವರ್ಷ ಎರಡು ಮಾವಿನ ಮರಗಳಲ್ಲಿ ಕೇವಲ 15 ಮಾವು ಆಗಿದ್ದವು. ಈ ವರ್ಷ 4 ಮಾವು ಮಾತ್ರ ಆಗಿದೆ.

    ಇಳುವರಿ ಕಡಿಮೆ ಇರುವುದರಿಂದ ಬೆಲೆ ಜಾಸ್ತಿ ಇದೆ. ಮುಂದೆ ರೈತರು ಈ ಮಾವು ಬೆಳೆದು ಇಳುವರಿ ಹೆಚ್ಚಾದರೆ ಬೆಲೆ ಕೂಡಾ ಕಡಿಮೆಯಾಗಲಿದೆ‌ ಎಂದು ತೋಟದ ಮಾಲಿಕ ಪ್ರಮೋದ್‌ ಗಾಂವ್ಕರ್ ಹೇಳುತ್ತಾರೆ.

  • ಛತ್ತೀಸ್‌ಗಢದ ಮಾವಿನ ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಪ್ರದರ್ಶನ- ಕೆ.ಜಿಗೆ 2.70 ಲಕ್ಷ ರೂ.

    ಛತ್ತೀಸ್‌ಗಢದ ಮಾವಿನ ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಪ್ರದರ್ಶನ- ಕೆ.ಜಿಗೆ 2.70 ಲಕ್ಷ ರೂ.

    – ಮಿಯಾಝಾಕಿಯ ವಿಶೇಷತೆಯೇನು?

    ರಾಯ್ಪುರ: ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿರುವ ಮಾವು ಎಂದರೆ ಅದು ಜಪಾನಿನ (Japan) ಮಿಯಾಝಾಕಿ (Miyazaki) ಮಾವಿನ ಹಣ್ಣು. ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು 1.82 ಲಕ್ಷ ಮೌಲ್ಯವನ್ನು ಹೊಂದಿರುವ ಈ ದುಬಾರಿ ಮಾವನ್ನು ಛತ್ತೀಸ್‌ಗಢದ (Chattisgarh) ರಾಯ್ಪುರದಲ್ಲಿ (Raipur) ನಡೆದ ಮಾವಿನ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

    ಜಪಾನ್ ಮೂಲದ ಮಿಯಾಝಾಕಿ ಮಾವು ವಿಶ್ವದಲ್ಲೇ ಅತ್ಯಂತ ದುಬಾರಿ ಮಾವು ಎಂಬ ಖ್ಯಾತಿಯನ್ನು ಹೊಂದಿದೆ. ಜೂನ್ 17ರಿಂದ 19ರ ವರೆಗೆ ಛತ್ತೀಸ್‌ಗಢದ ರಾಯ್ಪುರದಲ್ಲಿ ಮಾವಿನ ಮೇಳವನ್ನು (Mango Festival) ಆಯೋಜಿಸಲಾಗಿತ್ತು. ಈ ಮಾವಿನ ಮೇಳದಲ್ಲಿ ದುಬಾರಿ ಮಾವು ಮಿಯಾಝಾಕಿಯನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಈ ಮಾವು ಕೆ.ಜಿಗೆ ಸುಮಾರು 2.70 ಲಕ್ಷ ರೂ. ಮೌಲ್ಯವನ್ನು ಹೊಂದಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. ಇದನ್ನೂ ಓದಿ: RAW ಸಂಸ್ಥೆಯ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ನೇಮಕ

    ಕೋಲ್ ಇಂಡಿಯಾದ (Coal India) ನಿವೃತ್ತ ಮ್ಯಾನೇಜರ್ ಆರ್‌ಪಿ ಗುಪ್ತ ಈ ದುಬಾರಿ ಮಾವನ್ನು ಮಾವಿನ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದು, ಈ ಮಾವನ್ನು ಅತ್ಯಂತ ಕಾಳಜಿಯಿಂದ ಬೆಳೆಸಬೇಕಾಗುತ್ತದೆ. ಈ ಮಾವನ್ನು ಕಾರ್ಪೊರೇಟ್‌ನ ಕೊಡುಗೆಯಾಗಿ ವ್ಯಾಪಾರ ಮಾಡಲಾಗುತ್ತಿದ್ದು, ಈ ಮಾವಿನ ಬೆಲೆ ಸಾಮಾನ್ಯ ಮಾವಿನ ಹಣ್ಣುಗಳಿಂತ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏರ್‌ಬಸ್‌ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್‌ – ವಿಶ್ವದಾಖಲೆ ಬರೆದ ಇಂಡಿಗೋ

    ಸೂರ್ಯನ ಬೆಳಕು ಬಿದ್ದ ಮಾವಿನ ಭಾಗವು ಒಂದು ರೀತಿಯ ರುಚಿಯನ್ನು ನೀಡಿದರೆ ಮತ್ತೊಂದು ಭಾಗ ವಿಭಿನ್ನ ರುಚಿಯನ್ನು ನೀಡುತ್ತದೆ. ಇದು ಈ ಮಾವಿನ ವಿಶೇಷತೆಯಾಗಿದ್ದು, ಪ್ರದರ್ಶನದಲ್ಲಿ ಇರಿಸಲಾದ ಮಾವು 639 ಗ್ರಾಂ. ತೂಕವನ್ನು ಹೊಂದಿದೆ ಎಂದು ಆರ್‌ಪಿ ಗುಪ್ತ ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ- ಟ್ರ್ಯಾಕ್‌ಗಳ ಡೀಪ್ ಸ್ಕ್ರೀನಿಂಗ್‌ಗೆ ನಿರ್ಧಾರ

  • ಕೆ.ಜಿಗೆ 2.75 ಲಕ್ಷಕ್ಕೆ ಮಾರಾಟವಾಯ್ತು ಜಗತ್ತಿನಲ್ಲೇ ದುಬಾರಿ ಮಾವಿನ ಹಣ್ಣು ‘ಮಿಯಾಝಾಕಿ’

    ಕೆ.ಜಿಗೆ 2.75 ಲಕ್ಷಕ್ಕೆ ಮಾರಾಟವಾಯ್ತು ಜಗತ್ತಿನಲ್ಲೇ ದುಬಾರಿ ಮಾವಿನ ಹಣ್ಣು ‘ಮಿಯಾಝಾಕಿ’

    – ಏನಿದರ ವಿಶೇಷತೆ..?

    ಕೋಲ್ಕತ್ತಾ: ಜಪಾನ್ ಮೂಲದ ವಿಶ್ವದ ಅತ್ಯಂತ ದುಬಾರಿ ಮಾವು ಎಂದೇ ಖ್ಯಾತಿ ಪಡೆದಿರುವ ಮಿಯಾಝಾಕಿ (Miyazaki) ಮಾವನ್ನು ಪಶ್ಚಿಮಬಂಗಾಳ (WestBengal) ದಲ್ಲಿ ಕೆ.ಜಿಗೆ 2.75 ಲಕ್ಷ ರೂ. ನೀಡಿ ಖರೀದಿಸಲಾಗಿದೆ.

    ಸಿಲಿಗುರಿ (Siliguri) ಯ ಮಾಡೆಲ್ಲಾ ಕೇರ್ ಟೇಕರ್ ಸೆಂಟರ್ ಹಾಗೂ ಶಾಲೆಯಲ್ಲಿ ಪ್ರವಾಸೋದ್ಯಮ ಸಂಸ್ಥೆ ಸಹಯೋಗದೊಂದಿಗೆ ಮೂರು ದಿನಗಳ ಮಾವು ಉತ್ಸವ ಆಯೋಜಿಸಲಾಗಿತ್ತು. ಈ ಉತ್ಸವದಲ್ಲಿ ಮಿಯಾಝಾಕಿ ಎಂಬ ತಳಿಯ ಮಾವಿನ ಹಣ್ಣು ದಾಖಲೆ ಬೆಲೆಗೆ ಮಾರಾಟವಾಗಿದೆ. ಈ ಮಾವಿನ ಹಣ್ಣನ್ನು ‘ಸೂರ್ಯನ ಮೊಟ್ಟೆ’ ಎಂದೂ ಕರೆಯುತ್ತಾರೆ.

    ಇಲ್ಲಿ 262 ಬಗೆಯ ಮಾವುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಇದರಲ್ಲಿ ಮಿಯಾಝಾಕಿಯೇ ಪ್ರಮುಖ ಆಕರ್ಷಣೆಯಾಗಿತ್ತು. ಈ ಮಾವಿನ ತಳಿ ಮಾರಾಟಕ್ಕೆ ಇಟ್ಟಿದ್ದ ಮಾಲೀಕರಿಂದ ಮಾಹಿತಿಗಳನ್ನು ಪಡೆದು ಕೆಲವರು ಖರೀದಿ ಮಾಡಿದ್ದಾರೆ.

    ವಿಶೇಷತೆ ಏನು..?: ತನ್ನ ವಿಭಿನ್ನ ಆಕಾರ ಹಾಗೂ ಬಣ್ಣದಿಂದ ಬೇರೆ ಮಾವಿಗಿಂತ ಈ ಮಾವು ಹೆಚ್ಚು ಆಕರ್ಷಿತವಾಗಿ ಕಾಣುತ್ತದೆ. ನೇರಳೆ ಬಣ್ಣದ ಈ ಹಣ್ಣನ್ನು ಜಪಾನ್‍ನ ಕ್ಯೂಶು ಪ್ರಾಂತ್ಯದ ಮಿಯಾಝಾಕಿ ನಗರದಲ್ಲಿ ಬೆಳೆಯಲಾಗುತ್ತದೆ. ನಂತರ ಈ ಹಣ್ಣನ್ನು ಜಪಾನ್‍ನೆಲ್ಲೆಡೆ ಸರಬರಾಜು ಮಾಡಲಾಗುತ್ತದೆ. ಜಪಾನ್‍ (Japan) ನಲ್ಲಿ ಇದು ಸ್ಥಳೀಯ ಹಣ್ಣಿನ ತಳಿಯಾಗಿದ್ದು, ಏಪ್ರಿಲ್‍ನಿಂದ ಆಗಸ್ಟ್ ನಲ್ಲಿ ಬೆಳೆಯಲಾಗುತ್ತದೆ.

    ಈ ಹಣ್ಣು ಯಾಕಿಷ್ಟು ದುಬಾರಿ ಎಂಬುದರ ಕುರಿತು ಮಾಹಿತಿಯಿಲ್ಲ. ಆದರೆ ಉತ್ಪಾದನೆ ಕಡಿಮೆ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಇದನ್ನು ಆಗ್ನೇಯ ಏಷ್ಯಾ ದೇಶಗಳಲ್ಲಿ ಹೆಚ್ಚು ಬೆಳೆಯಲಾಗುತ್ತದೆ.

    ಔಷಧೀಯ ಗುಣಗಳು: ರೋಗ ನಿರೋಧಕ ಅಂಶಗಳು (Antioxidant) ಈ ತಳಿಯ ಮಾವಿನಲ್ಲಿ ಅತಿ ಹೆಚ್ಚಾಗಿದೆ. ಬೆಟಾ ಕೆರೋಟಿನ್, ಫೋಲಿಕ್ ಆಸಿಡ್ ಹೆಚ್ಚಿದ್ದು, ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮ. ದೃಷ್ಟಿ ಮಂದವಾಗುತ್ತಿರುವವರಿಗೂ ಇದು ಸಹಾಯಕ್ಕೆ ಬರುತ್ತದೆ ಎನ್ನಲಾಗಿದೆ.