Tag: MIvsRCB

  • IPL 2023: RCB ನನ್ನ ಹೆಮ್ಮೆಯ ತಂಡ – ಇಂದಲ್ಲ ನಾಳೆ ಕಪ್‌ ನಮ್ದೆ ಎಂದ ಸಿದ್ದರಾಮಯ್ಯ

    IPL 2023: RCB ನನ್ನ ಹೆಮ್ಮೆಯ ತಂಡ – ಇಂದಲ್ಲ ನಾಳೆ ಕಪ್‌ ನಮ್ದೆ ಎಂದ ಸಿದ್ದರಾಮಯ್ಯ

    ಬೆಂಗಳೂರು: ಕ್ರಿಕೆಟ್‌ ನನ್ನ‌ ಇಷ್ಟದ ಆಟ, ಆರ್‌ಸಿಬಿ (RCB) ನನ್ನ ಹೆಮ್ಮೆಯ ತಂಡ. ಇಂದಲ್ಲ ನಾಳೆ ಕಪ್‌ ನಮ್ಮವರೂ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ದಿನಾಂಕ ಘೋಷಣೆಯಾಗಿದ್ದು, ಒಂದೆಡೆ ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಒತ್ತಡದ ನಡುವೆಯೂ ಭಾನುವಾರ ಐಪಿಎಲ್‌ ಮ್ಯಾಚ್‌ ವೀಕ್ಷಿಸಿ ಕಾಲ ಕಳೆದಿದ್ದಾರೆ. ಇದನ್ನೂ ಓದಿ: IPL 2023: ಕೊಹ್ಲಿ, ಡುಪ್ಲೆಸಿಸ್‌ ಶತಕದ ಜೊತೆಯಾಟಕ್ಕೆ ಮುಂಬೈ ಪಂಚರ್‌- RCBಗೆ 8 ವಿಕೆಟ್‌ಗಳ ಭರ್ಜರಿ ಜಯ

    16ನೇ ಆವೃತ್ತಿಯ ಐಪಿಎಲ್‌ ಆರಂಭಗೊಂಡಿದ್ದು, ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ (Mumbai Indians) ನಡುವೆ ಕಾದಾಟ ನಡೆದಿತ್ತು. ಕ್ರೀಡಾಂಗಣದ ತುಂಬಾ ಲಕ್ಷಾಂತರ ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಆಪ್ತರೊಂದಿಗೆ ತೆರಳಿ ಪಂದ್ಯ ವೀಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದು IPL ಕ್ರೇಜ್‌; ರಾಜಕೀಯ ಒತ್ತಡದ ಮಧ್ಯೆಯೂ RCB ಮ್ಯಾಚ್‌ ವೀಕ್ಷಣೆ

    ಪಂದ್ಯ ವೀಕ್ಷಣೆಯ ನಂತರ ಟ್ವೀಟ್‌ ಮೂಲಕ ಸಂತಸ ಹಂಚಿಕೊಂಡಿರುವ ಅವರು, ಕ್ರಿಕೆಟ್ ನನ್ನ ಇಷ್ಟದ ಆಟ, ಆರ್‌ಸಿಬಿ ನನ್ನ ಹೆಮ್ಮೆಯ ತಂಡ. ನನ್ನಂತಹ ಕೋಟ್ಯಂತರ ಅಭಿಮಾನಿಗಳ ಹಾರೈಕೆ ಆರ್‌ಸಿಬಿ ಹುಡುಗರ ಜೊತೆಗಿದೆ. ಇಂದಲ್ಲ ನಾಳೆ ನಮ್ಮವರೂ ಕಪ್ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಓರ್ವ ಕನ್ನಡಿಗನಾಗಿ ನನ್ನ ಬೆಂಬಲ‌ ಯಾವಾಗಲೂ ನಮ್ಮ ಆರ್‌ಸಿಬಿಗೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: IPL 2023: ಜೋಸ್, ಜೈಸ್ವಾಲ್‌, ಸ್ಯಾಮ್ಸನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 72 ರನ್‌ಗಳ ಭರ್ಜರಿ ಜಯ

    ಭಾನುವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿತ್ತು. 172 ರನ್‌ಗಳ ಗುರಿ ಬೆನ್ನತ್ತಿದ್ದ ಆರ್‌ಸಿಬಿ 16.2 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಭರ್ಜರಿ ಜಯ ಸಾಧಿಸಿತು.‌

  • IPL 2023: ಕೊಹ್ಲಿ, ಡುಪ್ಲೆಸಿಸ್‌ ಶತಕದ ಜೊತೆಯಾಟಕ್ಕೆ ಮುಂಬೈ ಪಂಚರ್‌- RCBಗೆ 8 ವಿಕೆಟ್‌ಗಳ ಭರ್ಜರಿ ಜಯ

    IPL 2023: ಕೊಹ್ಲಿ, ಡುಪ್ಲೆಸಿಸ್‌ ಶತಕದ ಜೊತೆಯಾಟಕ್ಕೆ ಮುಂಬೈ ಪಂಚರ್‌- RCBಗೆ 8 ವಿಕೆಟ್‌ಗಳ ಭರ್ಜರಿ ಜಯ

    ಬೆಂಗಳೂರು: ಫಾಫ್‌ ಡು ಪ್ಲೆಸಿಸ್‌ (Faf du Plessis), ವಿರಾಟ್‌ ಕೊಹ್ಲಿ (Virat Kohli) ಬೆಂಕಿ ಬ್ಯಾಟಿಂಗ್‌ ಹಾಗೂ ಶಿಸ್ತು ಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವು, ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಆರಂಭಿಕರಾಗಿ ಕಣಕ್ಕಿಳಿದ ಆರ್‌ಸಿಬಿ ತಂಡದ ನಾಯಕ ಫಾಫ್‌ ಡು ಪ್ಲೆಸಿಸ್‌ ಮತ್ತು ವಿರಾಟ್‌ ಕೊಹ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸಿದರು. ಸಿಕ್ಸರ್‌, ಬೌಂಡರಿ ಸಿಡಿಸುತ್ತಾ ಅಭಿಮಾನಿಗಳಿಗೆ ರಸದೌತಣ ನೀಡಿದರು. ಇದಕ್ಕೆ ಪ್ರತಿಯಾಗಿ ಅಭಿಮಾನಿಗಳೂ ʻಕೊಹ್ಲಿ, ಕೊಹ್ಲಿʼ, ʻಆರ್‌ಸಿಬಿ, ಆರ್‌ಸಿಬಿʼ ಎಂದು ಕೂಗುತ್ತಾ ಆಟಗಾರರನ್ನು ಹುರಿದುಂಬಿಸಿದರು. ಪ್ರತಿ ಬೌಂಡರಿ, ಸಿಕ್ಸರ್‌ಗಳನ್ನು ಅದ್ಭುತವಾಗಿ ಎಂಜಾಯ್‌ ಮಾಡಿದರು.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿತ್ತು. 172 ರನ್‌ಗಳ ಗುರಿ ಬೆನ್ನತ್ತಿದ್ದ ಆರ್‌ಸಿಬಿ 16.2 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: IPL 2023: ಜೋಸ್, ಜೈಸ್ವಾಲ್‌, ಸ್ಯಾಮ್ಸನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 72 ರನ್‌ಗಳ ಭರ್ಜರಿ ಜಯ

    ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ ವಿರಾಟ್‌ ಕೊಹ್ಲಿ ಹಾಗೂ ಪ್ಲೆಸಿಸ್‌  ಮೊದಲ ವಿಕೆಟ್‌ ಪತನಕ್ಕೆ 14.5 ಓವರ್‌ಗಳಲ್ಲಿ 148 ರನ್‌ಗಳ ಜೊತೆಯಾಟವಾಡಿದರು. ಈ ವೇಳೆ ನಾಯಕ ಪ್ಲೆಸಿಸ್‌ ಸಿಕ್ಸರ್‌ ಸಿಡಿಸುವ ಬರದಲ್ಲಿ ಬೌಂಡರಿ ಲೈನ್‌ ಕ್ಯಾಚ್‌ ನೀಡಿ ಔಟಾದರು. 43 ಎಸೆತಗಳನ್ನು ಎದುರಿಸಿದ ಪ್ಲೆಸಿಸ್‌ 6 ಸಿಕ್ಸರ್‌, 5 ಬೌಂಡರಿಯೊಂದಿಗೆ 73 ರನ್‌ ಗಳಿಸಿದರು. ನಂತರ ಬಂದ ದಿನೇಶ್‌ ಕಾರ್ತಿಕ್‌ ಮೂರೇ ಎಸೆತಗಳಲ್ಲಿ ರನ್‌ ಗಳಿಸದೇ ಕ್ಯಾಚ್‌ ನೀಡಿ ಪೆವಿಲಿಯನ್‌ಗೆ ಮರಳಿದರು. 3ನೇ ವಿಕೆಟ್‌ನಲ್ಲಿ ಜೊತೆಯಾದ ಮ್ಯಾಕ್ಸ್‌ವೆಲ್‌ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿಸಿ ಗೆಲುವಿನ ಹಾದಿಗೆ ತಲುಪಿಸಿದರು. ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell) 3 ಎಸೆತಗಳಲ್ಲಿ 2 ಸಿಕ್ಸರ್‌ ಸಿಡಿಸಿ, 12 ರನ್‌ ಗಳಿಸಿದರೆ, ಕೊನೆಯವರೆಗೂ ಹೋರಾಡಿದ ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ ಅಜೇಯ 89 ರನ್‌ (6 ಬೌಂಡರಿ, 5 ಸಿಕ್ಸರ್‌) ಗಳಿಸಿ ಅಜೇಯರಾಗುಳಿದರು.

    ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿದರು. ಆದರೆ ಮಧ್ಯಮ ಕ್ರಮಾಂಕದ ಆಟಗಾರ ತಿಲಕ್ ವರ್ಮಾ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಆರ್‌ಸಿಬಿ ತಂಡದ ಲೆಕ್ಕಾಚಾರ ಬುಡಮೇಲಾಗಿತ್ತು. ಇದನ್ನೂ ಓದಿ: ಸಿದ್ದು IPL ಕ್ರೇಜ್‌; ರಾಜಕೀಯ ಒತ್ತಡದ ಮಧ್ಯೆಯೂ RCB ಮ್ಯಾಚ್‌ ವೀಕ್ಷಣೆ

    ಆರ್‌ಸಿಬಿ ತಂಡದ ಬೌಲರ್‌ಗಳು ಈ ಪಂದ್ಯದ ಆರಂಭದಲ್ಲಿಯೇ ಅದ್ಭುತ ಯಶಸ್ಸು ಗಳಿಸಲು ಆರಂಭಿಸಿದರು. ಇದರ ಪರಿಣಾಮವಾಗಿ ಅಗ್ರ ಕ್ರಮಾಂಕದ ಆಟಗಾರರಾದ ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್, ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯ ಕುಮಾರ್ ಯಾದವ್ ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಂಡರು.

    ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್, ಆರ್‌ಸಿಬಿಗೆ ಸುಲಭ ತುತ್ತಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ತಿಲಕ್ ವರ್ಮಾ ಹಾಗೂ ನೇಹಲ್ ವಧೇರಾ 6ನೇ ವಿಕೆಟ್‌ಗೆ ಅರ್ಧ ಶತಕದ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. 13 ಎಸೆತಗಳಲ್ಲಿ 21 ರನ್‌ಗಳಿಸಿದ ವಧೇರಾ ವಿಕೆಟ್ ಕಳೆದುಕೊಂಡಾಗ ಮುಂಬೈ ಇಂಡಿಯನ್ಸ್ ತಂಡ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಮತ್ತೊಂದು ತುದಿಯಲ್ಲಿ ಇನ್ನೆರಡು ವಿಕೆಟ್‌ಗಳು ಉರುಳಿದರೂ ಕೂಡ ತಿಲಕ್ ವರ್ಮಾ ತಮ್ಮ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿದರು. ಇದನ್ನೂ ಓದಿ: ಈ ಸಲ ಕಪ್ ನಹೀ ಎಂದ ಆರ್‌ಸಿಬಿ ಕ್ಯಾಪ್ಟನ್

    ಕೊನೆಯಲ್ಲಿ ಅರ್ಶದ್ ಖಾನ್ ಅವರೊಂದಿಗೆ ಜೊತೆಯಾದ ತಿಲಕ್ ತಂಡದ ಮೊತ್ತವನ್ನು 170ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಈ ಇನ್ನಿಂಗ್ಸ್‌ನಲ್ಲಿ ತಿಲಕ್ ವರ್ಮಾ 46 ಎಸೆತಗಳಲ್ಲಿ ಸ್ಪೋಟಕ 84 ರನ್‌ (9 ಬೌಂಡರಿ, 4 ಸಿಕ್ಸರ್‌) ಗಳಿಸಿ ಅಜೇಯರಾಗುಳಿದರು.

    ಆರ್‌ಸಿಬಿ ಪರ ಕರ್ಣ್ ಶರ್ಮಾ 2 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌, ರೀಸ್ ಟೋಪ್ಲಿ, ಆಕಾಶ್‌ ದೀಪ್‌, ಹರ್ಷಲ್‌ ಪಟೇಲ್‌ ಹಾಗೂ ಮೈಕೆಲ್‌ ಬ್ರೇಸ್‌ವೆಲ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. .

  • ಸಿದ್ದು IPL ಕ್ರೇಜ್‌; ರಾಜಕೀಯ ಒತ್ತಡದ ಮಧ್ಯೆಯೂ RCB ಮ್ಯಾಚ್‌ ವೀಕ್ಷಣೆ

    ಸಿದ್ದು IPL ಕ್ರೇಜ್‌; ರಾಜಕೀಯ ಒತ್ತಡದ ಮಧ್ಯೆಯೂ RCB ಮ್ಯಾಚ್‌ ವೀಕ್ಷಣೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಒತ್ತಡದ ನಡುವೆಯೂ ಐಪಿಎಲ್‌ ಮ್ಯಾಚ್‌ ವೀಕ್ಷಿಸುತ್ತಾ ಕಾಲ ಕಳೆದಿದ್ದಾರೆ.

    16ನೇ ಆವೃತ್ತಿಯ ಐಪಿಎಲ್‌ ಆರಂಭಗೊಂಡಿದ್ದು, ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ನಡುವೆ ಸೆಣಸಾಟ ನಡೆದಿತ್ತು. ಕ್ರೀಡಾಂಗಣದ ತುಂಬಾ ಲಕ್ಷಾಂತರ ಅಭಿಮಾನಿಗಳು ನೆರೆದಿದ್ದರು. ಈ ಪಂದ್ಯ ವೀಕ್ಷಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಆಪ್ತರೊಂದಿಗೆ ತೆರಳಿ ಪಂದ್ಯ ವೀಕ್ಷಣೆ ಮಾಡಿದ್ದಾರೆ.

    ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ತಂಡ ಆರಂಭದಲ್ಲಿ ಅಮೋಘ ಯಶಸ್ಸು ಸಾಧಿಸಿದರೂ ಬಳಿಕ ರೋಹಿತ್‌ ಪಡೆಯಿಂದ ಅದ್ಭುತ ಹೋರಾಟ ವ್ಯಕ್ತವಾಯಿತು. ಹೀಗಾಗಿ ಆರ್‌ಸಿಬಿ ತಂಡಕ್ಕೆ ಗೆಲ್ಲಲು ಮುಂಬೈ ಇಂಡಿಯನ್ಸ್ ತಂಡ ಸವಾಲಿನ ಗುರಿ ನೀಡಿತು. ಇದನ್ನೂ ಓದಿ: IPL 2023: ಜೋಸ್, ಜೈಸ್ವಾಲ್‌, ಸ್ಯಾಮ್ಸನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 72 ರನ್‌ಗಳ ಭರ್ಜರಿ ಜಯ

    ಮುಂಬೈ ಇಂಡಿಯನ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿದರೂ ಮಧ್ಯಮ ಕ್ರಮಾಂಕದ ಆಟಗಾರ ತಿಲಕ್ ವರ್ಮಾ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಆರ್‌ಸಿಬಿ ತಂಡದ ಲೆಕ್ಕಾಚಾರ ಬುಡಮೇಲಾಯಿತು. ಪರಿಣಾಮ ಮುಂಬೈ ಇಂಡಿಯನ್ಸ್ ತಂಡ ಆರ್‌ಸಿಬಿಗೆ ಈ ಪಂದ್ಯದಲ್ಲಿ ಗೆಲ್ಲಲು 172 ರನ್‌ಗಳ ಸವಾಲಿನ ಗುರಿ ನಿಗದಿಪಡಿಸಿದೆ.  ಇದನ್ನೂ ಓದಿ: IPL 2023: ಮಾರ್ಕ್‌ ಮಾರಕ ಬೌಲಿಂಗ್‌, ಡೆಲ್ಲಿಗೆ ಡಿಚ್ಚಿ ಕೊಟ್ಟ ಲಕ್ನೋ – ರಾಹುಲ್‌ ಸೈನ್ಯಕ್ಕೆ 50 ರನ್‌ಗಳ ಭರ್ಜರಿ ಜಯ