Tag: mithun rai

  • ಮೂಡುಶೆಡ್ಡೆ ಘಟನೆಗಳಿಗೆ ಮಿಥುನ್ ರೈ ಪ್ರಚೋದನೆಯೇ ಕಾರಣ: ಉಮಾನಾಥ್ ಕೋಟ್ಯಾನ್ ಕಿಡಿ

    ಮೂಡುಶೆಡ್ಡೆ ಘಟನೆಗಳಿಗೆ ಮಿಥುನ್ ರೈ ಪ್ರಚೋದನೆಯೇ ಕಾರಣ: ಉಮಾನಾಥ್ ಕೋಟ್ಯಾನ್ ಕಿಡಿ

    ಮಂಗಳೂರು: ಮೂಡುಶೆಡ್ಡೆಯಲ್ಲಿ (Moodushedde) ನಡೆದ ಅಹಿತಕರ ಘಟನೆಗಳಿಗೆ ಮಿಥುನ್ ರೈ (Mithun Rai) ಪ್ರಚೋದನೆಯೇ ಕಾರಣ ಎಂದು ಮೂಡಬಿದರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮನಾಥ್ ಕೋಟ್ಯಾನ್ (Umanatha Kotian) ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮತಯಂತ್ರಗಳನ್ನು ಡಿಮಸ್ಟರಿಂಗ್ ಕ್ಷೇತ್ರಕ್ಕೆ ಒಯ್ಯುತ್ತಿದ್ದಾಗ ಬಿಜೆಪಿ (BJP) ಕಾರ್ಯಕರ್ತರು ಪ್ರಧಾನಿ ಮೋದಿ (Narendra Modi) ಪರ ಘೋಷಣೆ ಕೂಗಿದ್ದಾರೆ. ಅಲ್ಲಿಗೆ ಬಂದ ಕಾಂಗ್ರೆಸ್ (Congress) ಅಭ್ಯರ್ಥಿ ಮಿಥುನ್ ರೈ ಬಿಜೆಪಿ ಕಾರ್ಯಕರ್ತರು ಸೇರಿದ್ದ ಬೂತ್ ಎದುರೇ ಕಾರು ನಿಲ್ಲಿಸಿದ್ದಾರೆ. ಅವರು ಬಿಜೆಪಿ ಕಾರ್ಯಕರ್ತರನ್ನು ಪ್ರಶ್ನಿಸಿದ್ದಲ್ಲದೇ ಅವರನ್ನು ತಳ್ಳಾಡಿದ್ದಾರೆ. ಈ ವೇಳೆ ಅವರ ಜೊತೆಗಿದ್ದ ಬೆಂಬಲಿಗರು ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಪ್ರಚೋದನಕಾರಿ ನಡವಳಿಕೆಗೆ ಬಿಜೆಪಿ ಕಾರ್ಯಕರ್ತರು ಪ್ರತಿರೋಧ ತೋರಿದ್ದಾರೆ ಎಂದರು. ಇದನ್ನೂ ಓದಿ: ಮಂಗಳೂರಿನಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ – ಮಿಥುನ್ ರೈ ಕಾರ್ ಮೇಲೆ ಕಲ್ಲು ತೂರಾಟ

    ಘಟನೆಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಈ ಎಲ್ಲಾ ಘಟನೆಗಳಿಗೆ ಮಿಥುನ್ ರೈ ಮತ್ತು ಅವರ ಬೆಂಬಲಿಗರೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ಬಳಕೆ ಮಾಡಿದ ಇವಿಎಂ ಬಳಸಿಲ್ಲ: ಸುರ್ಜೇವಾಲಾ ಆರೋಪಕ್ಕೆ ಆಯೋಗದ ಉತ್ತರ

  • ಮಂಗಳೂರಿನಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ – ಮಿಥುನ್ ರೈ ಕಾರ್ ಮೇಲೆ ಕಲ್ಲು ತೂರಾಟ

    ಮಂಗಳೂರಿನಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ – ಮಿಥುನ್ ರೈ ಕಾರ್ ಮೇಲೆ ಕಲ್ಲು ತೂರಾಟ

    ಮಂಗಳೂರು: ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟಿದ್ದು ಕೈ ಅಭ್ಯರ್ಥಿ ಮಿಥುನ್ ರೈ (Mithun Rai) ಅವರ ಕಾರ್ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮಂಗಳೂರು (Mangaluru) ಹೊರವಲಯದ ಮೂಡುಶೆಡ್ಡೆಯಲ್ಲಿ ನಡೆದಿದೆ.

    ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟಿದೆ. ಮುಲ್ಕಿ-ಮೂಡುಬಿದ್ರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರ ಕಾರ್ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ಏರ್ಪಟ್ಟಿದೆ.

    ವರದಿಗಳ ಪ್ರಕಾರ ಪಕ್ಷದ ಬೂತ್‌ಗೆ ಅಭ್ಯರ್ಥಿ ಮಿಥುನ್ ರೈ ಬಂದಾಗ ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಕೂಗಿದ್ದಾರೆ. ಈ ವೇಳೆ ಎರಡು ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿದೆ. ಬಳಿಕ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಇದನ್ನೂ ಓದಿ: ಮತಗಟ್ಟೆಗೆ ನುಗ್ಗಿ ನಿವೃತ್ತ ಅಧಿಕಾರಿಯಿಂದ ಗಲಾಟೆ – ಯಾದಗಿರಿಯಲ್ಲಿ ನಿಷೇಧಾಜ್ಞೆ ಜಾರಿ

    ತಕ್ಷಣ ಸ್ಥಳಕ್ಕೆ ಆಗಮಿಸಿದ ಮಂಗಳೂರು ಪೊಲೀಸ್ ಕಮಿಷನರ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಈ ಬಾರಿ ಬಿಜೆಪಿ 125ರಿಂದ 130 ಸ್ಥಾನಗಳನ್ನು ಗೆಲ್ಲಲಿದೆ: ಯಡಿಯೂರಪ್ಪ ವಿಶ್ವಾಸ

  • ಮಿಥುನ್ ರೈ ವಿವಾದ :  ಬಕೆಟ್ ಅಲ್ಲ, ಟ್ಯಾಂಕ್ ಹಿಡೀತಿನಿ ಎಂದ ರಕ್ಷಿತ್ ಶೆಟ್ಟಿ

    ಮಿಥುನ್ ರೈ ವಿವಾದ : ಬಕೆಟ್ ಅಲ್ಲ, ಟ್ಯಾಂಕ್ ಹಿಡೀತಿನಿ ಎಂದ ರಕ್ಷಿತ್ ಶೆಟ್ಟಿ

    ಡುಪಿ (Udupi) ಮಠಕ್ಕೆ (Math) ಜಾಗ ಕೊಟ್ಟಿದ್ದು ಮುಸ್ಲಿಂ ಎಂದು ಹೇಳುವ ಮೂಲಕ ವಿವಾದಕ್ಕೆ (Controversy) ಕಾರಣವಾಗಿದ್ದ ಮಿಥುನ್ ರೈ (Mithun Rai) ಮಾತಿಗೆ ಬೆಳಗ್ಗೆಯಷ್ಟೇ ನಟ ರಕ್ಷಿತ್ ಶೆಟ್ಟಿ (Rakshit Shetty) ಸೋಷಿಯಲ್ ಮೀಡಿಯಾ ಮೂಲಕ ತಿರುಗೇಟು ನೀಡಿದ್ದರು. ಸಾವಿರಾರು ವರ್ಷ ಇತಿಹಾಸವಿರುವ ದೇವಸ್ಥಾನದ ಬಗ್ಗೆ ತಿಳಿದುಕೊಂಡು ಮಾತನಾಡುವಂತೆ ಸಲಹೆ ಕೂಡ ನೀಡಿದ್ದರು. ರಕ್ಷಿತ್ ಮಾಡಿದ್ದ ಟ್ವೀಟ್ ಇದೀಗ ಪರ ವಿರೋಧಕ್ಕೆ ಕಾರಣವಾಗಿದೆ.

    ಸೋಷಿಯಲ್ ಮೀಡಿಯಾದ ತಮ್ಮ ಖಾತೆಯಲ್ಲಿ ರಕ್ಷಿತ್ ಶೆಟ್ಟಿ ಈ ವಿವಾದದ ಕುರಿತಂತೆ ಬರೆದುಕೊಂಡಿದ್ದು, ಮಿಥುನ್ ರೈ ಹೆಸರನ್ನು ಬಳಸದೇ ತರಾಟೆಗೆ ತಗೆದುಕೊಂಡಿದ್ದಾರೆ. ‘ಉಡುಪಿ ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ. ಮಾಹಿತಿ ಗೊತ್ತಿಲ್ಲದೇ ಸಾರ್ವಜನಿಕವಾಗಿ ನಾನ್ ಸೆನ್ಸ್ ರೀತಿಯಲ್ಲಿ ಮಾತಾನಾಡೋದು ಯಾಕೆ?’ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಮಿಥುನ್ ರೈ ಹೆಸರು ಬಳಸದೇ ಇದ್ದರೂ, ಇವರಿಗೆ ಕೊಟ್ಟ ಪ್ರತಿಕ್ರಿಯೆ ಎನ್ನುವುದು ಸ್ಪಷ್ಟವಾಗುತ್ತದೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

    ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳ ಹೇಳಿಕೆಗಳಿಗೆ ರಕ್ಷಿತ್ ಶೆಟ್ಟಿ ಈವರೆಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಸ್ವತಃ ತಮ್ಮ ಮೇಲೆಯೇ ಹಲವರು ನೆಗೆಟಿವ್ ಕಾಮೆಂಟ್ ಮಾಡಿದಾಗಲೂ ರಕ್ಷಿತ್ ಮೌನವಹಿಸಿದ್ದರು. ಆದರೆ, ಉಡುಪಿ ಮಠಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದ್ದಾರೆ. ರಕ್ಷಿತ್ ಪೋಸ್ಟ್ ಗೆ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲೂ ಒಬ್ಬರು ‘ರಕ್ಷಿತ್ ಶೆಟ್ರೆ ಜಾಸ್ತಿ ಯಾರಿಗೂ ಬಕೆಟ್ ಹಿಡಿಯೋಕೆ ಹೋಗ್ಬೇಡಿ. ದೇವರು ಮೆಚ್ಚುವಂಥ ಕೆಲಸ ಮಾಡಿ ಅಷ್ಟು ಸಾಕು’ ಎಂದು ಸಲಹೆ ನೀಡಿದ್ದರು.

    ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ರಕ್ಷಿತ್ ಶೆಟ್ಟಿ, ‘ಉಡುಪಿ ನನ್ನ ಜನ್ಮಸ್ಥಳ. ಬಕೆಟ್ ಅಲ್ಲಾ ಟ್ಯಾಂಕರ್ ಹಿಡಿತೀನಿ. ಅವರು ಯಾವ ಭೂಮಿಯ ಬಗ್ಗೆ ಮಾತನಾಡುತ್ತಿದ್ದಾರೆಂಬುದು ಖಚಿತವಾಗಿಲ್ಲ. ಕಾರ್ ಸ್ಟ್ರೀಟ್ ನಲ್ಲಿರುವ ಜಮೀನು ಖಂಡಿತವಾಗಿಯೂ ಅಲ್ಲ. ಅನಂತೇಶ್ವರ ದೇವಸ್ಥಾನವು ಕೃಷ್ಣಮಠಕ್ಕಿಂತಲೂ ಹಳೆಯದು. ಚಂದ್ರಮೌಳೀಶ್ವರ ದೇವಸ್ಥಾನ ಇನ್ನೂ ಹಳೆಯದು’ ಎಂದು ಇತಿಹಾಸ ಪಾಠ ಮಾಡಿದ್ದಾರೆ.

  • ಕಾಂಗ್ರೆಸ್ ಮುಖಂಡ ಮಿಥುನ್ ರೈರನ್ನು ತರಾಟೆಗೆ ತೆಗೆದುಕೊಂಡ ನಟ ರಕ್ಷಿತ್ ಶೆಟ್ಟಿ

    ಕಾಂಗ್ರೆಸ್ ಮುಖಂಡ ಮಿಥುನ್ ರೈರನ್ನು ತರಾಟೆಗೆ ತೆಗೆದುಕೊಂಡ ನಟ ರಕ್ಷಿತ್ ಶೆಟ್ಟಿ

    ಡುಪಿ (Udupi) ದೇಗುಲಕ್ಕೆ (Math) ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಪಕ್ಷದ ಮುಖಂಡ ಮಿಥುನ್ ರೈ (Mithun Rai) ವಿವಾದಾತ್ಮಕ (Controversy) ಹೇಳಿಕೆ ನೀಡಿದ್ದರು. ಉಡುಪಿ ದೇಗುಲಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂರು ಎಂದು ಮಿಥುನ್ ಹೇಳಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಪರ ವಿರೋಧದ ಮಾತುಗಳು ಕೇಳಿ ಬಂದಿದ್ದವು. ಸಾವಿರಾರು ವರ್ಷ ಇತಿಹಾಸವಿರುವ ದೇವಸ್ಥಾನದ ಬಗ್ಗೆ ತಿಳಿದುಕೊಂಡು ಮಾತನಾಡಿ ಎಂದು ಸ್ವತಃ ಸ್ವಪಕ್ಷಿಯರೇ ಕಿವಿಹಿಂಡಿದ್ದರು. ಈ ಪ್ರಕರಣ ಕುರಿತಂತೆ ನಟ ರಕ್ಷಿತ್ ಶೆಟ್ಟಿ  (Rakshit Shetty)ಕೂಡ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರೆಟ್ರೋ ಲುಕ್‌ನಲ್ಲಿ ಕಂಗೊಳಿಸಿದ ರಕ್ಷಿತ್ ಶೆಟ್ಟಿ ನಾಯಕಿ

    ಸೋಷಿಯಲ್ ಮೀಡಿಯಾದ ತಮ್ಮ ಖಾತೆಯಲ್ಲಿ ರಕ್ಷಿತ್ ಶೆಟ್ಟಿ ಈ ವಿವಾದದ ಕುರಿತಂತೆ ಬರೆದುಕೊಂಡಿದ್ದು, ಮಿಥುನ್ ರೈ ಹೆಸರನ್ನು ಬಳಸದೇ ತರಾಟೆಗೆ ತಗೆದುಕೊಂಡಿದ್ದಾರೆ. ‘ಉಡುಪಿ ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ. ಮಾಹಿತಿ ಗೊತ್ತಿಲ್ಲದೇ ಸಾರ್ವಜನಿಕವಾಗಿ ನಾನ್ ಸೆನ್ಸ್ ರೀತಿಯಲ್ಲಿ ಮಾತಾನಾಡೋದು ಯಾಕೆ?’ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಮಿಥುನ್ ರೈ ಹೆಸರು ಬಳಸದೇ ಇದ್ದರೂ, ಇವರಿಗೆ ಕೊಟ್ಟ ಪ್ರತಿಕ್ರಿಯೆ ಎನ್ನುವುದು ಸ್ಪಷ್ಟವಾಗುತ್ತದೆ.

    ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳ ಹೇಳಿಕೆಗಳಿಗೆ ರಕ್ಷಿತ್ ಶೆಟ್ಟಿ ಈವರೆಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಸ್ವತಃ ತಮ್ಮ ಮೇಲೆಯೇ ಹಲವರು ನೆಗೆಟಿವ್ ಕಾಮೆಂಟ್ ಮಾಡಿದಾಗಲೂ ರಕ್ಷಿತ್ ಮೌನವಹಿಸಿದ್ದರು. ಆದರೆ, ಉಡುಪಿ ಮಠಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದ್ದಾರೆ. ರಕ್ಷಿತ್ ಪೋಸ್ಟ್ ಗೆ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

  • ʼಕೃಷ್ಣಮಠದ ಜಾಗ ಕೊಟ್ಟಿದ್ದು ಮುಸ್ಲಿಮರುʼ – ಸತ್ಯಾಸತ್ಯತೆ ಏನು?

    ʼಕೃಷ್ಣಮಠದ ಜಾಗ ಕೊಟ್ಟಿದ್ದು ಮುಸ್ಲಿಮರುʼ – ಸತ್ಯಾಸತ್ಯತೆ ಏನು?

    ಬೆಂಗಳೂರು: ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ಅಲ್ಪಸಂಖ್ಯಾತರ ಮನವೊಲಿಕೆ ಪ್ರಯತ್ನವನ್ನು ಕಾಂಗ್ರೆಸ್ (Congress) ಮುಂದುವರೆಸಿದಂತೆ ಕಾಣುತ್ತಿದೆ. ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಪರಮಾಪ್ತ ಮಿಥುನ್ ರೈ (Mithun Rai) ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

    ಮೂಡಬಿದ್ರೆಯ ಪುತ್ತಿಗೆಯಲ್ಲಿ ನಡೆದ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಉಡುಪಿ ಕೃಷ್ಣ ಮಠಕ್ಕೆ (Udupi Krishna Mutt) ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂದು ಹೇಳುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜನಲ್ಲ, ದೊರೆ ರಾಮಭೋಜ ನೀಡಿದ್ದು- ಪೇಜಾವರ ಶ್ರೀ ಸ್ಪಷ್ಟನೆ

    ಮಿಥುನ್ ರೈ ವಿವಾದಾತ್ಮಕ ಹೇಳಿಕೆಗೆ ಸಹಜವಾಗಿಯೇ ಬಿಜೆಪಿ (BJP) ನಾಯಕರು ಗರಂ ಆಗಿದ್ದಾರೆ. ಮುಸಲ್ಮಾನ ಅರಸರು (Muslim King) ಯಾವುದೇ ಜಾಗವನ್ನು ಕೃಷ್ಣಮಠಕ್ಕಾಗಲಿ, ಅನಂತೇಶ್ವರಕ್ಕಾಗಲಿ ನೀಡಿಲ್ಲ. ಮಠದ ಜಾಗದಲ್ಲೇ ಚರ್ಚ್, ಮಸೀದಿಗಳಿವೆ ಅಂತ ಶಾಸಕ ರಘುಪತಿ ಭಟ್ ಸ್ಪಷ್ಟಪಡಿಸಿದ್ದಾರೆ. ಇನ್ನೊಂದು ಹೆಜ್ಜೆ ಮುಂದೆ ಹೋದ ಸಿಟಿ ರವಿ, ದೇಶಕ್ಕೆ ಭಾರತ ಅಂತಾ ಹೆಸರು ಕೊಟ್ಟಿದ್ದೇ ಮುಸಲ್ಮಾನ ದೊರೆಗಳು ಅಂತಾ ಕಾಂಗ್ರೆಸ್‍ನವರು ಹೇಳಿದ್ರೂ ಅಚ್ಚರಿ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ ಕೇಸ್ – ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್ ಶಾರೀಕ್ ಟಾರ್ಗೆಟ್!

    ಮಿಥುನ್ ರೈ ಹೇಳಿಕೆ ಅರ್ಥಹೀನ. ಉಡುಪಿಯ ಅನಂತೇಶ್ವರ, ಕೃಷ್ಣಮಠದ ಸನ್ನಿಧಾನಕ್ಕೆ ಜಾಗವನ್ನು ರಾಮಭೋಜ ರಾಜರು ದಾನ ಕೊಟ್ಟಿದ್ದು ಇದಕ್ಕೆ ದಾಖಲೆ ಇದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

    ಮಿಥುನ್ ರೈ ಹೇಳಿಕೆಗೆ ಹಿಂದೂ ಮುಖಂಡರು ಆಕ್ರೋಶ ಹೊರಹಾಕಿ ಮಿಥುನ್‌ ರೈ ಕೂಡಲೇ ಹಿಂದೂಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಿಥುನ್ ರೈ, ತಪ್ಪಾಗಿದ್ರೆ ಕ್ಷಮೆ ಕೇಳುತ್ತೇನೆ. ಪೇಜಾವರ ಶ್ರೀಗಳು ಹಿಂದೆ ಹೇಳಿದ್ದನ್ನೇ ನಾನು ಹೇಳಿದ್ದೇನೆ ಎಂದು ಸಮರ್ಥನೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.

    ಕೃಷ್ಣಮಠದ ಇತಿಹಾಸ; ಸತ್ಯಾಸತ್ಯತೆ ಏನು?
    1200 ವರ್ಷಗಳ ಹಿಂದೆ ಉಡುಪಿ ರಥಬೀದಿಯಲ್ಲಿ ಅನಂತೇಶ್ವರ ದೇವಸ್ಥಾನ ಸ್ಥಾಪನೆಯಾಗಿದ್ದು ಅನಂತೇಶ್ವರ ದೇವಸ್ಥಾನಕ್ಕೆ ಜಮೀನು ಕೊಟ್ಟಿದ್ದು ರಾಜ ರಾಮಭೋಜ. ಅನಂತೇಶ್ವರ ದೇಗುಲದ ಜಮೀನಿನಲ್ಲಿ 800 ವರ್ಷಗಳ ಹಿಂದೆ ಕೃಷ್ಣಮಠ ಸ್ಥಾಪನೆಯಾಗಿದೆ. ಅನಂತೇಶ್ವರ ದೇವಸ್ಥಾನದ ಜಮೀನಿನಲ್ಲಿ ರಥಬೀದಿ, ಅಷ್ಟಮಠಗಳು ಇದೆ. ಮುಸಲ್ಮಾನ ಸಂಸ್ಥಾನ ಅಥವಾ ದೊರೆಗಳು ಉಡುಪಿ ಭಾಗವನ್ನು ಆಳಿದ ಬಗ್ಗೆ ಇತಿಹಾಸದ ದಾಖಲೆಗಳಿಲ್ಲ.

  • ಭಾರತ ಎಂದು ಹೆಸರು ಕೊಟ್ಟದ್ದೇ ಮುಸಲ್ಮಾನ ದೊರೆಗಳು ಎಂದು ಕಾಂಗ್ರೆಸ್ ಹೇಳಿದರೂ ಅಚ್ಚರಿಯಿಲ್ಲ: ಸಿ.ಟಿ.ರವಿ ವ್ಯಂಗ್ಯ

    ಭಾರತ ಎಂದು ಹೆಸರು ಕೊಟ್ಟದ್ದೇ ಮುಸಲ್ಮಾನ ದೊರೆಗಳು ಎಂದು ಕಾಂಗ್ರೆಸ್ ಹೇಳಿದರೂ ಅಚ್ಚರಿಯಿಲ್ಲ: ಸಿ.ಟಿ.ರವಿ ವ್ಯಂಗ್ಯ

    ಚಿಕ್ಕೋಡಿ: ಭಾರತ (Bharatha) ಎಂದು ಹೆಸರು ಕೊಟ್ಟದ್ದೇ ಮುಸಲ್ಮಾನ ದೊರೆಗಳು ಎಂದು ಕಾಂಗ್ರೆಸ್ ಮುಖಂಡರು (Congress Leaders) ಹೇಳಿದರೂ ಅಚ್ಚರಿಯಿಲ್ಲ ಎಂದು ಶಾಸಕ ಹಾಗೂ ಬಿಜೆಪಿ (BJP) ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ವ್ಯಂಗ್ಯವಾಡಿದರು.

    ಉಡುಪಿ ಕೃಷ್ಣ ಮಠ (Udupi Krishna Math) ಜಾಗ ಕೊಟ್ಟದ್ದು ಮುಸ್ಲಿಂ ರಾಜರು ಎಂಬ ಕಾಂಗ್ರೆಸ್ ಮುಖಂಡ ಮಿಥುನ್ ರೈ(Mithun Rai) ಹೇಳಿಕೆಗೆ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ಅಂಕಲಿ (Ankali) ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು: ಮಿಥುನ್ ರೈ ವಿವಾದ

    ಬರೀ ಕೃಷ್ಣ ಮಠ ಅಲ್ಲ, ಭಾರತ ಎಂದು ಹೆಸರು ಕೊಟ್ಟದ್ದು ಮುಸಲ್ಮಾನ ದೊರೆಗಳು. ಮುಸಲ್ಮಾನ ದೊರೆಗಳೇ ರಾಮ ಮಂದಿರ ನಿರ್ಮಾಣ ಮಾಡಿದ್ದು. ಮುಸಲ್ಮಾನ ದೊರೆಗಳೇ ಕಾಶಿ ವಿಶ್ವನಾಥನ ಪ್ರತಿಷ್ಠಾಪನೆ ಮಾಡಿದ್ದು ಎಂದು ಹೇಳಿದರೂ ಅಚ್ಚರಿ ಪಡಬೇಕಿಲ್ಲ. ಸುಳ್ಳು ಮತ್ತು ಕಾಂಗ್ರೆಸ್ (Congress) ಒಂದೇ ನಾಣ್ಯದ ಮುಖಗಳು. ಸುಳ್ಳನ್ನು ಸತ್ಯದ ರೀತಿಯಲ್ಲಿ ಹೇಳುವುದು ಅವರಿಗಿರುವ ಕಾಯಿಲೆ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ಮಾನವ ಹಕ್ಕುಗಳನ್ನು ಬಳಸಿ ನಮ್ಮಲ್ಲಿ ಇರಲು ಸಾಧ್ಯವಿಲ್ಲ: ಅಕ್ರಮ ವಲಸಿಗರ ನಿಯಂತ್ರಣಕ್ಕೆ ಮುಂದಾದ ಬ್ರಿಟನ್

    ಸಿ.ಟಿ.ರವಿ ನೀಡಿದ್ದ ಸೀರೆ ಸುಟ್ಟು ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರೆಲ್ಲಾ ಡ್ರಾಮಾ (Drama) ಮಾಡುತ್ತಾರೆ. ಆ ರೀತಿ ನಾವು ಸೀರೆ ಕೊಡುತ್ತಿಲ್ಲ. ಅವೆಲ್ಲಾ ಕಾಂಗ್ರೆಸ್‌ನವರ ಹಳೇ ಡ್ರಾಮಾ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಹೆಂಡತಿ ಕೋಪ ಮಾಡಿಕೊಂಡಿದ್ದಾಳೆ – ಅತ್ತೆ ಮನೆಯಲ್ಲಿ ಹೋಳಿ ಆಚರಿಸೋಕೆ 10 ದಿನ ರಜೆ ಕೇಳಿದ ಇನ್ಸ್‌ಪೆಕ್ಟರ್‌

  • ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು: ಮಿಥುನ್ ರೈ ವಿವಾದ

    ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು: ಮಿಥುನ್ ರೈ ವಿವಾದ

    ಉಡುಪಿ: ಸುಮ್ನಿರಲಾರದವ ಇರುವೆ ಬಿಟ್ಕೊಂಡ ಅನ್ನೋ ಪರಿಸ್ಥಿತಿ ಯೂತ್ ಕಾಂಗ್ರೆಸ್ ಮುಖಂಡ ಮಿಥುನ್ ರೈ (Congres Leader Mithun Rain) ಅವರದ್ದು. ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ‘ಕೈ’ಗೆ ‘ರೈ’ ಅಸ್ತ್ರ ಕೊಟ್ಟಿದ್ದಾರೆ. ಉಡುಪಿ ಕೃಷ್ಣ ಮಠಕ್ಕೆ ಸಂಬಂಧಪಟ್ಟಂತೆ ಮಿಥುನ್ ಕೊಟ್ಟ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಬಿಜೆಪಿ (BJP) ನಾಯಕರು ರೈ ವಿರುದ್ಧ ತಿರುಗಿ ಬಿದ್ದಿದ್ದಾರೆ.

    ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತಿಕ್ಕಾಟ ಶುರುವಾಗಿದೆ. ಒಂದೊಂದು ಹೇಳಿಕೆಗಳು ಚರ್ಚಾಸ್ಪದ ವಿವಾದಾತ್ಮಕವಾಗುತ್ತಿದೆ. ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಆಪ್ತ ಮಿಥುನ್ ರೈ ಕೊಟ್ಟ ಹೇಳಿಕೆ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಉಡುಪಿ ಕೃಷ್ಣ ಮಠ (Krishna Mutt, Udupi) ದ ಜಮೀನನ್ನು ಮುಸಲ್ಮಾನ ದೊರೆ ಧಾರವಾಹಿ ನೀಡಿದ್ದ ಎಂಬ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಆಪ್ ನಾಯಕರ ಬಂಧನ – ಹೋಳಿ ತೊರೆದು ಧ್ಯಾನ ಆರಂಭಿಸಿದ ಕೇಜ್ರಿವಾಲ್

    ಮೂಡಬಿದರೆ ವಿಧಾನಸಭಾ ಕ್ಷೇತ್ರ (Mudabidire Vidhanasabha Constituency) ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಮಿಥುನ್ ರೈ ನಮ್ಮೂರ ಮಸೀದಿ ನೋಡಬನ್ನಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದಾರೆ. ಸೌಹಾರ್ದದ ಮಾತಿನ ನಡುವಿನ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಗೆ ಉಡುಪಿ ಶಾಸಕ ರಘುಪತಿ ಭಟ್ (Raghupathi Bhat) ತಿರುಗೇಟು ಕೊಟ್ಟಿದ್ದಾರೆ. ಅಯೋಧ್ಯೆ, ಕಾಶಿ – ಮಥುರಾದಲ್ಲಿ ನಿಮ್ಮ ಅಣ್ಣ ತಮ್ಮಂದಿರು ಏನು ಮಾಡಿದ್ದಾರೆ ಎಂದು ಇಡೀ ದೇಶಕ್ಕೆ ಗೊತ್ತಿದೆ. ಸತ್ಯ ತಿಳಿದುಕೊಂಡು ಮಾತನಾಡಿ ಎಂದಿದ್ದಾರೆ.

    ಆ ಕಾಲದಲ್ಲಿ ಕೃಷ್ಣ ಮಠಕ್ಕೆ ಮುಸಲ್ಮಾನರು ಕೊಡುಗೆಗಳನ್ನು ನೀಡಿದ್ದಾರೆ, ಎಣ್ಣೆ ಬತ್ತಿ ಮತ್ತಿತರ ಪರಿಕರಗಳನ್ನು ಕೊಟ್ಟಿದ್ದಾರೆ ಎಂಬುದು ಬಾಯಿ ಮಾತಿನಲ್ಲಿದೆ. ಹಾಜಿ ಅಬ್ದುಲ್ಲಾ ಸಾಹೇಬ್ ಎಣ್ಣೆಯ ಹರಕೆ ಜನಜನಿತವಾಗಿದೆ. ಆದರೆ ಮುಸಲ್ಮಾನ ದೊರೆಯ ಜಮೀನು ಬಳುವಳಿ ವಿಚಾರ ಚುನಾವಣೆಯವರೆಗೂ ಚರ್ಚೆ ಆಗುವ ಸಾಧ್ಯತೆ ಇದೆ.

  • ಸುರತ್ಕಲ್ ಅಕ್ರಮ ಟೋಲ್‍ಗೇಟ್ ವಿವಾದ – ಟೋಲ್ ಪ್ಲಾಜಾ ಮೇಲೇರಿ ಮಿಥುನ್ ರೈ ಆಕ್ರೋಶ

    ಸುರತ್ಕಲ್ ಅಕ್ರಮ ಟೋಲ್‍ಗೇಟ್ ವಿವಾದ – ಟೋಲ್ ಪ್ಲಾಜಾ ಮೇಲೇರಿ ಮಿಥುನ್ ರೈ ಆಕ್ರೋಶ

    ಮಂಗಳೂರು: ದಕ್ಷಿಣ ಕ್ನನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ಟೋಲ್ (Surathkal Toll gate) ಬಳಿ ಇಂದು ಭಾರೀ ಹೈಡ್ರಾಮಾ ನಡೆಯುತ್ತಿದೆ.

    ಸುರತ್ಕಲ್ ಅಕ್ರಮ ಟೋಲ್ ತೆರವು ಆಗ್ರಹಿಸಿ ಟೋಲ್ ವಿರೋಧಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಟೋಲ್ ಪ್ಲಾಜಾಗೆ ನುಗ್ಗಿದ್ದರು. ಇತ್ತ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ (Mithun Rai) ಟೋಲ್ ಪ್ಲಾಜಾ ಮೇಲೇರಿದರು. ಅಲ್ಲದೆ ಕಾರ್ಯಕರ್ತರು ಟೋಲ್ ಸಂಗ್ರಹ ವಸ್ತುಗಳನ್ನು ಪುಡಿಮಾಡಲು ಮುಂದಾದರು. ಇದನ್ನೂ ಓದಿ: ಪೊಲೀಸ್ ಬಲಪ್ರಯೋಗದಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ: ಸುನೀಲ್ ಕುಮಾರ್ ಬಜಾಲ್

    ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಇದೇ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತಳ್ಳಾಟ ನಡೆಸಲಾಯಿತು. ಬ್ಯಾರಿಕೇಡ್ ಕಿತ್ತೆಸೆದು, ಟೋಲ್‍ಗೆ ಮುತ್ತಿಗೆ ಹಾಕಿದ 500ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಮುಖಂಡರಾದ ಐವಾನ್ ಡಿಸೋಜ, ಮೊಯಿದ್ದೀನ್‍ಬಾವ, ಜೆ.ಆರ್ ಲೋಬೋ, ಮಿಥುನ್ ರೈ ಸೇರಿ ಹಲವರ ಬಂಧಿಸಲಾಗಿದೆ.

    ಪ್ರತಿಭಟನೆ ಹಿನ್ನೆಲೆಯಲ್ಲಿ ಟೋಲ್ ಸುತ್ತ ಭಾರೀ ಪೊಲೀಸ್ ಭದ್ರತೆ ಕೈಗೊಳಲಾಗಿದ್ದು, 6 ಕೆಎಸ್‍ಆರ್ ಪಿ, 5 ಸಿಎಆರ್, 250 ಸಿವಿಲ್, 4 ಎಸಿಪಿ, 15 ಇನ್ಸ್ ಪೆಕ್ಟರ್ ಸೇರಿದಂತೆ 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ಕಿತ್ತೆಸೆಯುತ್ತೇವೆ ಎಂದ ಹೋರಾಟಗಾರಿಗೆ ಬಿಸಿ ಮುಟ್ಟಿಸಿದ ಪೊಲೀಸರು

    Live Tv
    [brid partner=56869869 player=32851 video=960834 autoplay=true]

  • ಮಿಥುನ್ ರೈ ಎಲ್ಲಿ, ಸೆಲ್ಫಿ ತೆಗೆದುಕೊಳ್ಳಲು ಬರ್ಲಿ: ಶೋಭಾ ಕರಂದ್ಲಾಜೆ ತಿರುಗೇಟು

    ಮಿಥುನ್ ರೈ ಎಲ್ಲಿ, ಸೆಲ್ಫಿ ತೆಗೆದುಕೊಳ್ಳಲು ಬರ್ಲಿ: ಶೋಭಾ ಕರಂದ್ಲಾಜೆ ತಿರುಗೇಟು

    ಉಡುಪಿ: ಕೆಲ ದಿನಗಳ ಹಿಂದೆ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ (mithun Rai) ಅವರು ಸಚಿವೆ ಶೋಭಾ ಕರಂದ್ಲಾಜೆ ಕಂಡರೆ ಪೋಟೋ ತೆಗೆದು ಕಳುಹಿಸಿ. ನಾನು ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದೀಗ ಶೋಭಾ ಅವರು, ಮಿಥುನ್ ರೈ ಎಲ್ಲಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಮೊದಲು ಅವರು ಬರಲಿ ಎಂದು ಸವಾಲೆಸೆದಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಉಡುಪಿಗೆ ಬಂದಿದ್ದೇನೆ ಬನ್ನಿ ಎಲ್ಲರೂ ಸೆಲ್ಫಿ (Selfie) ತೆಗೆಯಿರಿ. ಅವ ಎಲ್ಲಿ ಮಿಥುನ್ ರೈ ಅವನು ಬರಲಿ ಎಂದು ಸಚಿವೆ ಗರಂ ಆಗಿ ಹೇಳಿದ್ದಾರೆ.  ಇದನ್ನೂ ಓದಿ: ಹೆಸರು ಬದಲಾಯಿಸಲು ತಲೆ ಕೆಟ್ಟಿದ್ಯಾ?: ಶೋಭಾ ಕರಂದ್ಲಾಜೆ ಗರಂ

    ಬರಲಿ ಎಲ್ಲರೂ ಸೆಲ್ಫಿ ತೆಗೆಯಲು ಬರಲಿ. ಅವನು ಮಿಥುನ್ ರೈ ಫಸ್ಟ್ ಬರಲಿ. ಈ ವಿಷಯಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಅವನನ್ನು ಯಾಕೆ ದೊಡ್ಡ ಮನುಷ್ಯ ಮಾಡಬೇಕು. ಅವನು ಚಿಲ್ಲರೆ ಮನುಷ್ಯ ಎಂದು ವಾಗ್ದಾಳಿ ನಡೆಸಿ ಶೋಭಾ ಕರಂದ್ಲಾಜೆ (Shobha Karandlaje) ಕಾರು ಹತ್ತಿದರು.

    ಮಿಥುನ್ ರೈ ಹೇಳಿದ್ದೇನು..?: ಉಡುಪಿಯ ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುವಂತೆ ಕಾಂಗ್ರೆಸ್ ಪ್ರತಿಭಟನೆ ಮಾಡಿತ್ತು. ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ನಾಪತ್ತೆಯಾಗಿದ್ದಾರೆ. ಅವರ ಜೊತೆ ಸೆಲ್ಫಿ ತೆಗೆದವರಿಗೆ ಐದು ಸಾವಿರ ರೂಪಾಯಿ ಬಹುಮಾನ ಎಂದು ಮಿಥುನ್ ರೈ ಘೋಷಿಸಿದ್ದರು.

    Live Tv
    [brid partner=56869869 player=32851 video=960834 autoplay=true]