Tag: Mitchell Marsh AusvsPak

  • World Cup 2023: ಸ್ಪಿನ್‌ ದಾಳಿಗೆ ಮಕಾಡೆ ಮಲಗಿದ ಪಾಕ್‌ – ಆಸೀಸ್‌ಗೆ 62 ರನ್‌ ಭರ್ಜರಿ ಜಯ, ಪಾಕ್‌ಗೆ ಹೀನಾಯ ಸೋಲು

    World Cup 2023: ಸ್ಪಿನ್‌ ದಾಳಿಗೆ ಮಕಾಡೆ ಮಲಗಿದ ಪಾಕ್‌ – ಆಸೀಸ್‌ಗೆ 62 ರನ್‌ ಭರ್ಜರಿ ಜಯ, ಪಾಕ್‌ಗೆ ಹೀನಾಯ ಸೋಲು

    ಬೆಂಗಳೂರು: ಡೇವಿಡ್‌ ವಾರ್ನರ್‌ (David Warner), ಮಿಚೆಲ್‌ ಮಾರ್ಷ್‌ (Mitchell Marsh) ಶತಕಗಳ ಜೊತೆಯಾಟ ಹಾಗೂ ಆಡಂ ಝಂಪಾ ಸ್ಪಿನ್‌ ದಾಳಿ ನೆರವಿನಿಂದ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ವಿರುದ್ಧ 62 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಆಸೀಸ್‌ (Australia) ನೀಡಿದ 368 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಪಾಕಿಸ್ತಾನ (Pakistan) ತಂಡ 45.3 ಓವರ್‌ಗಳಲ್ಲೇ 305 ರನ್‌ಗಳಿಗೆ ಸರ್ವಪತನ ಕಂಡಿದ್ದು, ಹೀನಾಯ ಸೋಲನುಭವಿಸಿದೆ. ಇದನ್ನೂ ಓದಿ: World Cup 2023: ದಾಖಲೆ ಸೃಷ್ಟಿಸಿದ ವಾರ್ನರ್‌, ಮಿಚೆಲ್‌ ಮಾರ್ಷ್‌ ಶತಕಗಳ ಜೊತೆಯಾಟ – ಪಾಕ್‌ಗೆ 368 ರನ್‌ಗಳ ಗುರಿ

    ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಪಾಕ್‌ ಮೊದಲ ವಿಕೆಟ್‌ಗೆ 21.1 ಓವರ್‌ಗಳಲ್ಲಿ  134 ರನ್‌ಗಳ ಜೊತೆಯಾಟ ನೀಡಿತ್ತು. ಒಂದೆಡೆ ವಿಕೆಟ್‌ ಕಳೆದುಕೊಂಡಿದ್ದರೂ ರನ್‌ ಕಲೆಹಾಕುತ್ತಿದ್ದ ಪಾಕ್‌ 38 ಓವರ್‌ಗಳಲ್ಲಿ 265 ರನ್‌ ಗಳಿಸಿ ವಿಶ್ವದಾಖಲೆಯ ಜಯ ಸಾಧಿಸುವ ಕನಸು ಕಂಡಿತ್ತು. ಆದ್ರೆ 39ನೇ ಓವರ್‌ನ 5ನೇ ಎಸೆತದಲ್ಲಿ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಇಫ್ತಿಕಾರ್‌ ಅಹ್ಮದ್‌ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳುತ್ತಿದ್ದಂತೆ ಪಾಕ್‌ ತಂಡದ ಆಟಗಾರರು ತರಗೆಲೆಗಳಂತೆ ಉದುರಿಹೋದರು. 39ನೇ ಓವರ್‌ನಿಂದ 31 ಎಸೆತಗಳ ಅಂತರದಲ್ಲೇ ನಾಲ್ಕು ವಿಕೆಟ್‌ ಕಳೆದುಕೊಂಡು ಪಾಕಿಸ್ತಾನ ಗೆಲುವಿನ ನಿರೀಕ್ಷೆಯನ್ನೇ ಕಳೆದುಕೊಂಡಿತು. ಆರಂಭದಲ್ಲಿ ಅಬ್ಬರಿಸಿದ ಪಾಕ್‌ ಆಟಗಾರರು ಡೆತ್‌ ಓವರ್‌ನಲ್ಲಿ ಮಕಾಡೆ ಮಲಗಿದರು. ಇದರಿಂದ ಆಸೀಸ್‌ಗೆ ಜಯದ ಹಾದಿ ಸುಲಭವಾಯಿತು.

    ಪಾಕ್‌ ಪರ ಆರಂಭಿಕರಾಗಿ ಕಣಕ್ಕಿಳಿದ ಅಬ್ದುಲ್ಲಾ ಶಫೀಕ್ 61 ಎಸೆತಗಳಲ್ಲಿ 64 ರನ್‌ (7 ಬೌಂಡರಿ, 2 ಸಿಕ್ಸರ್)‌, ಇಮಾಮ್‌ ಉಲ್‌ ಹಕ್‌ 70 ರನ್‌ (71 ಎಸೆತ, 10 ಬೌಂಡರಿ) ಗಳಿಸಿದ್ರೆ ನಾಯಕ ಬಾಬರ್‌ ಆಜಂ ಮತ್ತೆ ಕಳಪೆ ಪ್ರದರ್ಶನ ನೀಡಿದರು. 14 ಎಸೆತಗಳಲ್ಲಿ 18 ರನ್‌ ಗಳಿಸಿ ಪೆವಿಲಿಯನ್‌ನತ್ತ ಮುಖ ಮಾಡಿದರು. ಮೊಹಮ್ಮದ್‌ ರಿಜ್ವಾನ್‌ 46 ರನ್‌ (40 ಎಸೆತ, 5 ಬೌಂಡರಿ), ಸೌದ್‌ ಶಕೀಲ್‌ 31 ಎಸೆತಗಳಲ್ಲಿ 30 ರನ್‌ ಗಳಿಸಿದ್ರೆ, ಇಫ್ತಿಕಾರ್‌ ಅಹ್ಮದ್‌ 26 ರನ್‌, ಮೊಹಮ್ಮದ್‌ ನವಾಜ್‌ 14 ರನ್‌, ಶಾಹೀನ್‌ ಶಾ ಅಫ್ರಿದಿ 10 ರನ್‌, ಹಸನ್‌ ಅಲಿ 8 ರನ್‌ ಗಳಿಸಿದ್ರೆ, ಉಸ್ಮಾನ್‌ ಮೀರ್‌ ಶೂನ್ಯಕ್ಕೆ ನಿರ್ಗಮಿಸಿದರು. ಹ್ಯಾರಿಸ್‌ ರೌಫ್‌ ಯಾವುದೇ ರನ್‌ ಗಳಿಸದೇ ಅಜೇಯರಾಗುಳಿದರು.

    ಆಸೀಸ್‌ ಪರ ಆಡಂ ಝಂಪಾ 4 ವಿಕೆಟ್‌ ಕಿತ್ತರೆ, ಮಾರ್ಕಸ್‌ ಸ್ಟೋಯ್ನಿಸ್‌ ಮತ್ತು ಪ್ಯಾಟ್‌ ಕಮ್ಮಿನ್ಸ್‌ ತಲಾ 2 ವಿಕೆಟ್‌ ಹಾಗೂ ಮಿಚೆಲ್‌ ಸ್ಟಾರ್ಕ್‌, ಜೋಸ್‌ ಹ್ಯಾಜಲ್‌ವುಡ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸಿತ್ತು. ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ ಹಾಗೂ ಡೇವಿಡ್ ವಾರ್ನರ್ ಜೋಡಿ ಆರಂಭದಿಂದಲೇ ಪಾಕ್ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿತು. 13 ಓವರ್‌ಗಳಲ್ಲೇ 100 ರನ್‌ಗಳ ಗಡಿ ದಾಟಿತ್ತು. ಮಿಚೆಲ್ ಮಾರ್ಷ್ 108 ಎಸೆತಗಳಲ್ಲಿ 121 ರನ್ (10 ಬೌಂಡರಿ, 9 ಸಿಕ್ಸರ್) ಬಾರಿಸಿದರೆ, 124 ಎಸೆತಗಳನ್ನು ಎದುರಿಸಿದ ಡೇವಿಡ್ ವಾರ್ನರ್ 14 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ 163 ರನ್ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ಈ ಜೋಡಿ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ರನ್ ವೇಗವೂ ಕಡಿಮೆಯಾಯಿತು. ಜೊತೆಗೆ ಆಸೀಸ್ ಒಂದೊಂದೇ ವಿಕೆಟ್‌ಕಳನ್ನು ಕಳೆದುಕೊಳ್ಳುತ್ತಾ ಸಾಗಿತು. ಅಂತಿಮವಾಗಿ 400 ರನ್‌ಗಳನ್ನು ಬಾರಿಸುವ ನಿರೀಕ್ಷೆಯಲ್ಲಿದ್ದ ಆಸ್ಟ್ರೇಲಿಲಿಯಾ 367 ರನ್‌ಗಳಿಗೆ ತೃಪ್ತಿಪಟ್ಟುಕೊಂಡಿತು.

    ಉಳಿದಂತೆ ಸ್ಟೀವ್ ಸ್ಮಿತ್‌ 7 ರನ್, ಮಾರ್ಕಸ್ ಸ್ಟೋಯ್ನಿಸ್ 21 ರನ್, ಜೋಶ್ ಇಂಗ್ಲಿಸ್ 13 ರನ್, ಮಾರ್ನಸ್ ಲಾಬುಶೇನ್ 8 ರನ್, ಮಿಚೆಲ್ ಸ್ಟಾರ್ಕ್ 2 ರನ್ ಗಳಿಸಿದ್ರೆ, ಸ್ಫೋಟಕ ಬ್ಯಾಟ್ಸ್ಮ್ಯಾನ್ ಗ್ಲೇನ್ ಮ್ಯಾಕ್ಸ್‌ವೆಲ್‌ ಮತ್ತು ಜೋಶ್ ಹ್ಯಾಜಲ್‌ವುಡ್ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಪ್ಯಾಟ್ ಕಮ್ಮಿನ್ಸ್ 6 ರನ್ ಹಾಗೂ ಆಡಂ ಝಂಪಾ 1 ರನ್ ಗಳಿಸಿ ಅಜೇಯರಾಗುಳಿದರು. ಇದನ್ನೂ ಓದಿ: ಸಿಎಂಗೆ ಕ್ರಿಕೆಟ್‌ ಕ್ರೇಜ್‌ – ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ vs ಪಾಕಿಸ್ತಾನ ಮ್ಯಾಚ್‌ ವೀಕ್ಷಿಸಿದ ಸಿದ್ದರಾಮಯ್ಯ

    ಶಾಹೀನ್ ಶೈನ್: ಆರಂಭದಲ್ಲಿ ರನ್ ಚಚ್ಚಿಸಿಕೊಂಡಿದ್ದ ಪಾಕಿಸ್ತಾನ ಬೌಲರ್‌ಗಳು ಡೆತ್ ಓವರ್‌ನಲ್ಲಿ ಬಿಗಿ ಹಿಡಿತ ಸಾಧಿಸಿದರು. ಮಾರಕ ಬೌಲಿಂಗ್ ದಾಳಿ ನಡೆಸಿದ ಶಾಹೀನ್ ಶಾ ಅಫ್ರಿದಿ 10 ಓವರ್‌ಗಳಲ್ಲಿ 5 ವಿಕೆಟ್ ಕಿತ್ತರೆ, ಹ್ಯಾರಿಸ್ ರೌಫ್ 3 ವಿಕೆಟ್ ಹಾಗೂ ಉಸ್ಮಾನ್ ಮಿರ್ 1 ವಿಕೆಟ್ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ದಾಖಲೆ ಸೃಷ್ಟಿಸಿದ ವಾರ್ನರ್‌, ಮಿಚೆಲ್‌ ಮಾರ್ಷ್‌ ಶತಕಗಳ ಜೊತೆಯಾಟ – ಪಾಕ್‌ಗೆ 368 ರನ್‌ಗಳ ಗುರಿ

    World Cup 2023: ದಾಖಲೆ ಸೃಷ್ಟಿಸಿದ ವಾರ್ನರ್‌, ಮಿಚೆಲ್‌ ಮಾರ್ಷ್‌ ಶತಕಗಳ ಜೊತೆಯಾಟ – ಪಾಕ್‌ಗೆ 368 ರನ್‌ಗಳ ಗುರಿ

    ಬೆಂಗಳೂರು: ಪಾಕಿಸ್ತಾನ ವಿರುದ್ಧ ಶುಕ್ರವಾರ ನಡೆಯುತ್ತಿರುವ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮಿಚೆಲ್‌ ಮಾರ್ಷ್‌ (Mitchell Marsh) ಹಾಗೂ ಡೇವಿಡ್‌ ವಾರ್ನರ್‌ (David Warner) ಆರಂಭಿಕ ಜೋಡಿ ಭರ್ಜರಿ ಶತಕಗಳನ್ನು ಸಿಡಿಸುವ ಜೊತೆಗೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ (Australia) ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 367 ರನ್‌ ಗಳಿಸುವ ಮೂಲಕ ಎದುರಾಳಿ ಪಾಕ್‌ (Pakistan) ತಂಡಕ್ಕೆ 368 ರನ್‌ಗಳ ಗುರಿ ನೀಡಿದೆ. ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2011ರ ಮಾರ್ಚ್‌ 16ರಂದು ಬ್ರಾಡ್ ಹ್ಯಾಡಿನ್ ಮತ್ತು ಶೇನ್ ವ್ಯಾಟ್ಸನ್ ಜೋಡಿ ಕೆನಡಾ ವಿರುದ್ಧ ಮೊದಲ ವಿಕೆಟ್‌ಗೆ 183 ರನ್‌ಗಳ ಜೊತೆಯಾಟ ನೀಡಿತ್ತು. ಇದು ಆಸೀಸ್‌ ಪರ ಮೊದಲ ವಿಕೆಟ್‌ಗೆ ಅತಿಹೆಚ್ಚು ರನ್‌ ಜೊತೆಯಾಟ ನೀಡಿದ್ದ ಜೋಡಿಯಾಗಿತ್ತು. 259 ರನ್‌ಗಳ ಜೊತೆಯಾಟ ನೀಡುವ ಮೂಲಕ ವಾರ್ನರ್‌ ಹಾಗೂ ಮಾರ್ಚ್‌ ಜೋಡಿ ಈ ದಾಖಲೆಯನ್ನು ಮುರಿದಿದೆ.

    ಅಲ್ಲದೇ ಆಸೀಸ್‌ ಪರ ಭರ್ಜರಿ ಶತಕ ಸಿಡಿಸಿ ಮಿಂಚಿದ ಡೇವಿಡ್‌ ವಾರ್ನರ್‌ ಹಾಗೂ ಮಿಚೆಲ್‌ ಮಾರ್ಷ್‌ ಜೋಡಿ 33.5 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 259 ರನ್‌ ಬಾರಿಸುವ ಮೂಲಕ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ವಿಕೆಟ್‌ಗೆ ಅತಿಹೆಚ್ಚು ರನ್‌ ಬಾರಿಸಿದ 2ನೇ ಜೋಡಿ ಎಂಬ ವಿಶೇಷ ಸಾಧನೆ ಮಾಡಿದೆ. 2011ರ ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ವಿಕೆಟ್‌ಗೆ 282 ರನ್‌ಗಳ ಜೊತೆಯಾಟ ನೀಡಿದ್ದ ಶ್ರೀಲಂಕಾ ತಂಡದ ತರಂಗ, ದಿಲ್ಶಾನ್‌ ಜೋಡಿ ಮೊದಲ ಸ್ಥಾನದಲ್ಲಿದೆ.

    ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್‌ ಮಾರ್ಷ್‌ ಹಾಗೂ ಡೇವಿಡ್‌ ವಾರ್ನರ್‌ ಜೋಡಿ ಆರಂಭದಿಂದಲೇ ಪಾಕ್‌ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿತು. 13 ಓವರ್‌ಗಳಲ್ಲೇ 100 ರನ್‌ಗಳ ಗಡಿ ದಾಟಿತ್ತು. ಮಿಚೆಲ್‌ ಮಾರ್ಷ್‌ 108 ಎಸೆತಗಳಲ್ಲಿ 121 ರನ್‌ (10 ಬೌಂಡರಿ, 9 ಸಿಕ್ಸರ್‌) ಬಾರಿಸಿದರೆ, 124 ಎಸೆತಗಳನ್ನು ಎದುರಿಸಿದ ಡೇವಿಡ್‌ ವಾರ್ನರ್‌ 14 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ 163 ರನ್‌ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ಈ ಜೋಡಿ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ರನ್‌ ವೇಗವೂ ಕಡಿಮೆಯಾಯಿತು. ಜೊತೆಗೆ ಆಸೀಸ್‌ ಒಂದೊಂದೇ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಅಂತಿಮವಾಗಿ 400 ರನ್‌ಗಳನ್ನು ಬಾರಿಸುವ ನಿರೀಕ್ಷೆಯಲ್ಲಿದ್ದ ಆಸ್ಟ್ರೇಲಿಲಿಯಾ 367 ರನ್‌ಗಳಿಗೆ ತೃಪ್ತಿಪಟ್ಟುಕೊಂಡಿತು.

    ಉಳಿದಂತೆ ಸ್ಟೀವ್‌ ಸ್ಮಿತ್‌ 7 ರನ್‌, ಮಾರ್ಕಸ್‌ ಸ್ಟೋಯ್ನಿಸ್‌ 21 ರನ್‌, ಜೋಶ್ ಇಂಗ್ಲಿಸ್ 13 ರನ್‌, ಮಾರ್ನಸ್‌ ಲಾಬುಶೇನ್‌ 8 ರನ್‌, ಮಿಚೆಲ್‌ ಸ್ಟಾರ್ಕ್‌ 2 ರನ್‌ ಗಳಿಸಿದ್ರೆ, ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ ಮತ್ತು ಜೋಶ್‌ ಹ್ಯಾಜಲ್‌ವುಡ್‌ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಪ್ಯಾಟ್‌ ಕಮ್ಮಿನ್ಸ್‌ 6 ರನ್‌ ಹಾಗೂ ಆಡಂ ಝಂಪಾ 1 ರನ್‌ ಗಳಿಸಿ ಅಜೇಯರಾಗುಳಿದರು.

    ಶಾಹೀನ್‌ ಶೈನ್‌: ಆರಂಭದಲ್ಲಿ ರನ್‌ ಚಚ್ಚಿಸಿಕೊಂಡಿದ್ದ ಪಾಕಿಸ್ತಾನ ಬೌಲರ್‌ಗಳು ಡೆತ್‌ ಓವರ್‌ನಲ್ಲಿ ಬಿಗಿ ಹಿಡಿತ ಸಾಧಿಸಿದರು. ಮಾರಕ ಬೌಲಿಂಗ್‌ ದಾಳಿ ನಡೆಸಿದ ಶಾಹೀನ್‌ ಶಾ ಅಫ್ರಿದಿ (Shaheen Shah Afridi) 10 ಓವರ್‌ಗಳಲ್ಲಿ 5 ವಿಕೆಟ್‌ ಕಿತ್ತರೆ, ಹ್ಯಾರಿಸ್‌ ರೌಫ್‌ 3 ವಿಕೆಟ್‌ ಹಾಗೂ ಉಸ್ಮಾನ್‌ ಮಿರ್‌ 1 ವಿಕೆಟ್‌ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]