Tag: MIT

  • ತರಗತಿಯಲ್ಲಿ ವಿದ್ಯಾರ್ಥಿಯನ್ನ `ಟೆರರಿಸ್ಟ್’ ಎಂದ ಪ್ರೊಫೆಸರ್ ಅಮಾನತು

    ತರಗತಿಯಲ್ಲಿ ವಿದ್ಯಾರ್ಥಿಯನ್ನ `ಟೆರರಿಸ್ಟ್’ ಎಂದ ಪ್ರೊಫೆಸರ್ ಅಮಾನತು

    ಉಡುಪಿ: ಮಾಹೆ ವಿಶ್ವವಿದ್ಯಾಲಯದ ಎಂಐಟಿ ಕಾಲೇಜಿನಲ್ಲಿ (MIT College) ಪ್ರಾಧ್ಯಾಪಕರೊಬ್ಬರು (Professor)  ತರಗತಿ ಸಮಯದಲ್ಲಿ ಮುಸ್ಲಿಂ ವಿದ್ಯಾರ್ಥಿಗೆ `ಟೆರರಿಸ್ಟ್’ (Terrorist) ಎಂದು ನಿಂದನೆ ಮಾಡಿದ ಘಟನೆ ನಡೆದಿದೆ.

    ಈ ವಾಗ್ವಾದದ ವಿಡಿಯೋ ಜಾಲತಾಣದಲ್ಲಿ (Social Media) ಸದ್ದು ಮಾಡುತ್ತಿದೆ. ಇದೇ ತಿಂಗಳ ನವೆಂಬರ್ 26ರಂದು ಘಟನೆ ನಡೆದಿದ್ದು, ವಿದ್ಯಾರ್ಥಿಗಳೊಂದಿಗೆ (Students) ಮಾತನಾಡುವಾಗ ಮುಸ್ಲಿಮರು ಟೆರರಿಸ್ಟ್ಗಳು ಎಂಬ ಅರ್ಥದಲ್ಲಿ ಪ್ರೊಫೆಸರ್ (Professor) ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಫುಲ್ ಆಕ್ಟೀವ್

    ಪ್ರೊಫೆಸರ್ ಮಾತಿಗೆ ತರಗತಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿ, ಮುಸ್ಲಿಂ ಕಮ್ಯೂನಿಟಿಯನ್ನು (Muslim Community) ಟೆರರಿಸ್ಟ್ ಎಂದು ಕರೆಯಬೇಡಿ, ಅನಗತ್ಯವಾಗಿ ಈ ರೀತಿ ಮಾತನಾಡಬೇಡಿ ಎಂದಿದ್ದಾನೆ.

    ಬಳಿಕ ಪ್ರಾಧ್ಯಾಕರು ವಿದ್ಯಾರ್ಥಿ ತನ್ನ ಮಗನಂತೆ ಎಂದು ಹೇಳಿದ್ದಾರೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿ `ನೀವು ನಿಮ್ಮ ಮಗನಿಗೆ ಹೀಗೆ ಮಾತನಾಡುತ್ತೀರಾ? ನೀವು ಅವನನ್ನು ಭಯೋತ್ಪಾದಕ ಎಂದು ಕರೆಯುತ್ತೀರಾ? ನೀವು ಎಷ್ಟು ಜನರ ಮುಂದೆ ನನ್ನನ್ನು ಹಾಗೆ ಕರೆಯುತ್ತೀರಿ? ಇದು ತರಗತಿ, ನೀವು ವೃತ್ತಿಪರರಾಗಿ ಕಲಿಸುತ್ತಿದ್ದೀರಿ, ಮುಸ್ಲಿಮನಾಗಿ ದಿನನಿತ್ಯ ಇದನ್ನು ಎದುರಿಸುವುದು ತಮಾಷೆಯಲ್ಲ. ನೀವು ನನ್ನನ್ನು ಹಾಗೆ ಕರೆಯಬೇಡಿ” ಎಂದು ವಿದ್ಯಾರ್ಥಿ ವಾಗ್ವಾದಕ್ಕಿಳಿದಿದ್ದಾನೆ. ವಿದ್ಯಾರ್ಥಿ ಆಕ್ಷೇಪಿಸುತ್ತಿದ್ದಂತೆ ಪ್ರೊಫೆಸರ್ ವಿಷಾದ ವ್ಯಕ್ತಪಡಿಸಿ, ಸ್ಥಳದಲ್ಲೇ ಕ್ಷಮೆ ಕೋರಿದ್ದಾರೆ.

    ನೀವು ಕ್ಷಮೆ ಕೇಳಿದ ತಕ್ಷಣ ಮಾಡಿರುವ ಆರೋಪ ಬದಲಾಗಲ್ಲ ಎಂದು ವಿದ್ಯಾರ್ಥಿ ಆಕ್ಷೇಪಿಸಿದ್ದಾನೆ. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಉಪನ್ಯಾಸಕನ ವಿರುದ್ಧ ಮಾಹೆ ವಿಶ್ವವಿದ್ಯಾನಿಲಯ ಕ್ರಮ ಕೈಗೊಂಡಿದೆ. ವಿವಿಯ ಉಪನ್ಯಾಸಕನನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ನಿರ್ಧರಿಸಿದೆ. ವಿದ್ಯಾರ್ಥಿಗೆ ಕೌನ್ಸಿಲಿಂಗ್ ಮೂಲಕ ಸಾಂತ್ವನ ಹೇಳಿದೆ. ಇದನ್ನೂ ಓದಿ: ಅದಾನಿ ಬಂದರು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ – 3 ಸಾವಿರಕ್ಕೂ ಅಧಿಕ ಮಂದಿ ವಿರುದ್ಧ ಕೇಸ್

    ಈ ಕುರಿತಾಗಿ ಮಾತನಾಡಿರುವ ವಿವಿ ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕ ಎಸ್.ಪಿ. ಕರ್, ಎಲ್ಲಾ ಧರ್ಮಗಳಿಗೆ ಸಮಾನ ಗೌರವ ಕೊಡುತ್ತೇವೆ. ವಸುದೈವ ಕುಟುಂಬ ಎನ್ನುವ ನಾವು ಇಂತಹ ಘಟನೆಯನ್ನು ಖಂಡಿಸುತ್ತೇವೆ. ನಾವು ಸ್ವಯಂಪ್ರೇರಿತ ಕ್ರಮ ತೆಗೆದುಕೊಂಡಿದ್ದೇವೆ. ಘಟನೆ ಬಳಿಕ ವಿದ್ಯಾರ್ಥಿಯೂ ಆತಂಕಕ್ಕೊಳಗಾಗಿದ್ದಾನೆ. ಈ ವೀಡಿಯೋವನ್ನು ತರಗತಿಯ ಒಳಗಿನ ವಿದ್ಯಾರ್ಥಿಗಳೇ ಚಿತ್ರೀಕರಣ ಮಾಡಿರುವ ಸಾಧ್ಯತೆಯಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಣಿಪಾಲದಲ್ಲಿ ಅಂಗಡಿ, ಮಾಲ್‍ಗಳ ಮೇಲೂ ನಿಗಾ: ಡಿಎಚ್‍ಒ

    ಮಣಿಪಾಲದಲ್ಲಿ ಅಂಗಡಿ, ಮಾಲ್‍ಗಳ ಮೇಲೂ ನಿಗಾ: ಡಿಎಚ್‍ಒ

    – ಇಂದು ಬರೋಬ್ಬರಿ 210 ಕೊರೊನಾ ಕೇಸ್ ಪತ್ತೆ

    ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ವಿಪರೀತವಾಗಿದ್ದು, ಒಂದೇ ದಿನ 210 ಪಾಸಿಟಿವ್ ಪ್ರಕರಣ ದಾಖಲಾಗುವ ಮೂಲಕ ರಾಜ್ಯದಲ್ಲೇ ಹೆಚ್ಚು ಪ್ರಕರಣ ಪತ್ತೆಯಾದ ಜಿಲ್ಲೆಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಅಂಗಡಿ, ಮಾಲ್‍ಗಳ ಮೇಲೆ ನಿಗಾ ಇಡಲಾಗುತ್ತಿದೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಎಚ್‍ಒ ಡಾ.ಸುಧೀರ್ ಚಂದ್ರ ಸೂಡ, ಈಗಾಗಲೇ ಕಾಲೇಜಿನ ವಿದ್ಯಾರ್ಥಿಗಳು ಸಂಪರ್ಕದಲ್ಲಿರುವ ಅಂಗಡಿ, ಮಾಲ್ ಗಳ ಮೇಲೆ ನಿಗಾ ಇಡಲಾಗಿದೆ. ಮಣಿಪಾಲ ನಗರದಲ್ಲೇ ಕಾಲೇಜು ಇರುವುದರಿಂದ ಬಫರ್ ಜೋನ್ ಗಳಲ್ಲೂ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡುವುದು ಅನಿವಾರ್ಯ. ಕಾಲೇಜು ವಿದ್ಯಾರ್ಥಿಗಳಿಂದ ಇತರರಿಗೂ ಕೊರೊನಾ ಹಬ್ಬಿರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ, ಜನ ಮೈ ಮರೆಯದಿರಿ. ಲಕ್ಷಣ ಕಂಡು ಬಂದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿ ಎಂದು ಮನವಿ ಮಾಡಿದ್ದಾರೆ.

    ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು 210 ಪ್ರಕರಣಗಳ ಪೈಕಿ 184 ಪ್ರಕರಣಗಳು ಮಣಿಪಾಲದ ಎಂಐಟಿ ಕಾಲೇಜು ಕ್ಯಾಂಪಸ್‍ನಲ್ಲಿ ಪತ್ತೆಯಾಗಿರುವುದು ಆತಂಕಕಾರಿ. ವಾರದ ಲೆಕ್ಕ ನೋಡಿದರೆ ಮಣಿಪಾಲದಲ್ಲಿ ಈವರೆಗೆ 706 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಂಟೈನ್ಮೆಂಟ್ ಝೋನ್ ನಲ್ಲಿರುವ ಎಲ್ಲ ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ಮುಗಿದಿದೆ ಎಂದು ಆರೋಗ್ಯ ಇಲಾಖೆ ಏದುಸಿರು ಬಿಟ್ಟಿದೆ.

    ಜಿಲ್ಲೆಯ ಪಾಸಿಟಿವಿಟಿಗೆ ಹೋಲಿಸಿದರೆ ಎಂಐಟಿ ಕ್ಯಾಂಪಸ್ ಜಿಲ್ಲಾಡಳಿತದ ತಲೆನೋವಿಗೆ ಕಾರಣವಾಗಿದೆ. ಶೇಕಡಾ 20ರ ಆಸುಪಾಸಿನಲ್ಲಿ ಪಾಸಿಟಿವಿಟಿ ರೇಟ್ ಇದೆ. ಶನಿವಾರ ಬೆಳಗ್ಗೆಯಿಂದ ಎಂಜಿನಿಯರಿಂಗ್ ಕಾಲೇಜು ಸಿಬ್ಬಂದಿಯ ಪ್ರಾಥಮಿಕ ಸಂಪರ್ಕಿತರ ಕೊರೊನಾ ಟೆಸ್ಟ್ ನಡೆಯಲಿದೆ ಎಂದು ಡಿಎಚ್‍ಒ ಮಾಹಿತಿ ನೀಡಿದ್ದಾರೆ.