Tag: mistress

  • 13 ವರ್ಷದ ನಾಯಿ ನಾಪತ್ತೆ – ಹುಡುಕಿ ಕೊಟ್ಟವರಿಗೆ 25 ಸಾವಿರ ರೂ. ಬಂಪರ್ ಬಹುಮಾನ

    13 ವರ್ಷದ ನಾಯಿ ನಾಪತ್ತೆ – ಹುಡುಕಿ ಕೊಟ್ಟವರಿಗೆ 25 ಸಾವಿರ ರೂ. ಬಂಪರ್ ಬಹುಮಾನ

    ನವದೆಹಲಿ: ಚಮೇಲಿ ಎಂಬ 13 ವರ್ಷದ ನಾಯಿ ಕಳೆದ ತಿಂಗಳು ಕಾಣೆಯಾಗಿದ್ದು, ಅದನ್ನು ಹುಡುಕಿಕೊಡುವವರಿಗೆ 25,000 ರೂಪಾಯಿಗಳ ಬಹುಮಾನ ನೀಡುವುದಾಗಿ ದೆಹಲಿಯ (Delhi) ಮಾಲೀಕರೊಬ್ಬರು ಘೋಷಿಸಿದ್ದಾರೆ.

    ಅಕ್ಟೋಬರ್ 24 ರಂದು ದೀಪಾವಳಿ ಹಬ್ಬದಂದು ರಾತ್ರಿ ಪಟಾಕಿ ಶಬ್ದಕ್ಕೆ ಹೆದರಿ ಚಮೇಲಿ, ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿರುವ ತನ್ನ ಪ್ರದೇಶದಿಂದ ಓಡಿಹೋಗಿ ತಪ್ಪಿಸಿಕೊಂಡಿದೆ. ನಾಯಿಗೆ 13 ವರ್ಷ ಮತ್ತು ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ತಿಳಿದಿಲ್ಲ. ನಮಗೆ ಚಮೇಲಿಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಇದರಿಂದ ನಾವು ಸಂಪೂರ್ಣವಾಗಿ ವಿಚಲಿತರಾಗಿದ್ದೇವೆ. ನಾಯಿಯನ್ನು ಹುಡುಕಲು ನಮಗೆ ಸಹಾಯದ ಅವಶ್ಯಕತೆ ಇದೆ ಎಂದು ನಾಯಿಯ ಯಜಮಾನಿ ಅನುಪ್ರಿಯಾ ದಾಲ್ಮಿಯಾ ಹೇಳಿದ್ದಾರೆ.

    ಚಮೇಲಿ ಚಿಕ್ಕ ಗಾತ್ರದ ದೇಸಿ ನಾಯಿಯಾಗಿದ್ದು, ನಾಪತ್ತೆಯಾದಾಗ ಬೆಲ್ಟ್ ಧರಿಸಿರಲಿಲ್ಲ. ನೀವು ನಾಯಿಯನ್ನು ನೋಡಿದರೆ. ಅದನ್ನು ಹಿಂಬಾಲಿಸಬೇಡಿ, ನೀವು ಇರುವಲ್ಲಿಯೇ ಇರಿ, ಬದಲಿಗೆ ನಾಯಿಯ ಫೋಟೋ/ವೀಡಿಯೊ ಕ್ಲಿಕ್ ಮಾಡಿ ಮಾಹಿತಿ ನೀಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮರಾಠಿ ಸಾಂಗ್ ಹಾಕಲ್ಲ – ಹೋಟೆಲ್ ಮ್ಯಾನೇಜರ್ ಮೇಲೆ MNS ಕಾರ್ಯಕರ್ತರಿಂದ ಹಲ್ಲೆ

    ಅನುಪ್ರಿಯ ಮತ್ತು ಆಕೆಯ ಕುಟುಂಬ ನಾಯಿಯನ್ನು ಹುಡುಕುವ ಪ್ರಯತ್ನವನ್ನು ನಿಲ್ಲಿಸಿಲ್ಲ. ಈ ಬಗ್ಗೆ ಪ್ರಮುಖ ಅಧಿಕಾರಿಗಳು, ಸ್ಥಳೀಯರು ಮತ್ತು ಆರ್‌ಡಬ್ಲ್ಯೂಎಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾವು ನಾಯಿಯನ್ನು ಎಲ್ಲ ಕಡೆ ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ. ಪೋಸ್ಟರ್ ಮತ್ತು ಫ್ಲೈಯರ್‌ಗಳನ್ನು ಹಂಚುತ್ತಿದ್ದೇವೆ. ಆದರೂ ನಾಯಿ ಪತ್ತೆಯಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಕೂದಲು ಉದುರಿದವರು ಫುಲ್ ಶೇವ್ ಮಾಡ್ಬೇಕು- ಏರ್ ಇಂಡಿಯಾ ನ್ಯೂ ರೂಲ್ಸ್

    Live Tv
    [brid partner=56869869 player=32851 video=960834 autoplay=true]

  • ತನ್ನ ಪತಿಯನ್ನು ಖುಷಿಯಾಗಿರಿಸಲು ಮೂವರು ಸುಂದರಿಯರನ್ನ ಕೆಲಸಕ್ಕೆ ನೇಮಿಸಿದ ಪತ್ನಿ!

    ತನ್ನ ಪತಿಯನ್ನು ಖುಷಿಯಾಗಿರಿಸಲು ಮೂವರು ಸುಂದರಿಯರನ್ನ ಕೆಲಸಕ್ಕೆ ನೇಮಿಸಿದ ಪತ್ನಿ!

    ಬ್ಯಾಂಕಾಕ್: ಸತಿ-ಪತಿಗಳಿಬ್ಬರು ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಸುಖವಾಗಿದ್ದರೆ ಸಂಸಾರ ಹಾಲು-ಜೇನು ಎಂದು ಎಲ್ಲರೂ ಹೇಳುತ್ತಾರೆ. ಇದಕ್ಕೆ ಥಾಯ್‌ಲ್ಯಾಂಡ್‌ನ ಮಹಿಳೆಯೊಬ್ಬರು ಸಾಕ್ಷಿಯಾಗಿ ನಿಲ್ಲುತ್ತಾಳೆ.

    ಹೌದು.. ಬ್ಯಾಂಕಾಕ್‌ನ 44 ವರ್ಷದ ಪಾತೀಮಾ ಚಮ್ನಾನ್, ತನ್ನ ಪತಿಯನ್ನು ಸಂತೋಷವಾಗಿಡಲು ಮೂವರು ಸುಂದರ ಹಾಗೂ ವಿದ್ಯಾವಂತ ಪ್ರೇಯಸಿಯರನ್ನ ಕೆಲಸಕ್ಕೆ ನೇಮಿಸಿಕೊಂಡಿದ್ದಾಳೆ. ತನ್ನ ಪತಿಯೊಂದಿಗೆ ಆಕೆ ಹೆಚ್ಚು ಸಮಯ ಕೊಡಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಪ್ರೇಯಸಿಯನ್ನ ಕೆಲಸಕ್ಕೆ ನೇಮಿಸಿಕೊಂಡಿರುವುದಾಗಿ ಹೇಳಿದ್ದಾಳೆ. ಇದನ್ನೂ ಓದಿ: ವಾಮನ ಟೀಸರ್ ರಿಲೀಸ್, ಆಕ್ಷನ್ ಮೂಡ್ ನಲ್ಲಿ ಶೋಕ್ದಾರ್ ಧನ್ವೀರ್

    ಇತ್ತೀಚೆಗೆ ಚಮ್ನಾನ್ ಅವರು ಕಾಲೇಜು ಡಿಪ್ಲೋಮಾ ಹೊಂದಿರುವ ಯುವ ಹಾಗೂ ಏಕಾಂಗಿ ಮಹಿಳೆಯರನ್ನು ಕೆಲಸಕ್ಕಾಗಿ ಹುಡುಕುವ ಬಗ್ಗೆ ವೀಡಿಯೋ ಜಾಹೀರಾತನ್ನು ಜಾಲತಾಣದಲ್ಲಿ ಪ್ರಕಟಿಸಿದ್ದರು. ಅದಕ್ಕಾಗಿ 15 ಸಾವಿರ ಬಹ್ತ್ (33,800 ರೂ.) ವೇತನ ನೀಡುವುದಾಗಿಯೂ ಹೇಳಿದ್ದರು. ಇದರೊಂದಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ನೀವು ನನಗೆ ಸಹಾಯ ಮಾಡಬೇಕು. ನನ್ನ ಕಚೇರಿಯಲ್ಲಿ ದಾಖಲೆಗಳ ಸಿದ್ಧತೆಗಾಗಿ ಇಬ್ಬರು ಹಾಗೂ ನಾನು, ನನ್ನ ಪತಿ-ಮಗುವನ್ನು ನೋಡಿಕೊಳ್ಳಲು ಒಬ್ಬರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ವೀಡಿಯೋನಲ್ಲಿ ಹೇಳಿದ್ದರು.

    ನನ್ನ ನಿಮ್ಮ ನಡುವೆ ಯಾವುದೇ ಜಗಳ ನಡೆಯುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ನನ್ನ ಪತಿ ಏಕಾಂಗಿಯಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾನೆ. ನಾನು ಅವನನ್ನು ಸಂತೋಷವಾಗಿಡಲು ಬಯಸುತ್ತೇನೆ. ಮನೆಗೆ ಸ್ನೇಹಿತರು ಬಂದಾಗ ನಾನು ಅವನೊಂದಿಗೆ ಇರಲು ಬಯಸುತ್ತೇನೆ. ಹಾಗಾಗಿ ಮಹಿಳೆಯರ ಅಗತ್ಯವಿದೆ. ಆದರೆ ಕೆಲಸಕ್ಕೆ ಬರುವವರು ಮಕ್ಕಳನ್ನು ಹೊಂದಿರಬಾರದು, ಉತ್ತಮ ಸಂವಹನ ಕೌಶಲ ಇರಬೇಕು. ಜೊತೆಗೆ ಪ್ರೇಯಸಿಯರು ನನ್ನ ಪತಿಯನ್ನು ಮೆಚ್ಚಿಸಲು, ಅವನನ್ನು ಸಂತೋಷಪಡಿಸಲು ಹಾಗೂ ಒಡನಾಟದಲ್ಲಿ ಸಮರ್ಥರಾಗಿರುವಂತಹವರು ಆಗಿರಬೇಕು ಎಂದು ಷರತ್ತು ವಿಧಿಸಿದ್ದಾರೆ. ಇದನ್ನೂ ಓದಿ: ದೇಶ ವಿಭಜನೆ ಒಪ್ಪಿಕೊಳ್ಳದಿದ್ರೆ ಭಾರತ ಛಿದ್ರವಾಗ್ತಿತ್ತು- ಪಟೇಲ್ ಹೇಳಿಕೆ ಪುನರುಚ್ಚರಿಸಿದ ಸೋನಿಯಾ

    ಅದರಂತೆ ಮೂವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಚೇರಿ ಕೆಲಸ ಮಾಡಲು ಇಬ್ಬರು ಹಾಗೂ ಮನೆಯಲ್ಲಿ ಗಂಡ-ಹೆಂಡತಿ ಮಕ್ಕಳನ್ನು ನೋಡಿಕೊಳ್ಳಲು 33 ವರ್ಷದ ಮಹಿಳೆ ಒಪ್ಪಿಕೊಂಡಿದ್ದಾಳೆ. ಆದರೆ ಆಕೆ ಚಮ್ಮಾನ್ ಸ್ನೇಹಿತೆಯೇ ಆಗಿದ್ದಾಳೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

    Live Tv

  • ಪ್ರೇಯಸಿಯ ಸಹೋದರನನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ

    ಪ್ರೇಯಸಿಯ ಸಹೋದರನನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ

    ಲಕ್ನೋ: ಪ್ರೇಯಸಿ ಮನೆಗೆ ನುಗ್ಗಿ ಆಕೆಯ ಸಹೋದರನನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಉತ್ತರಪ್ರದೇಶದ ಪಿಲಿಭಿತ್‍ನಲ್ಲಿ ಶನಿವಾರ 19 ವರ್ಷದ ಯುವಕನೊಬ್ಬ ತನ್ನ ಪ್ರೇಯಸಿ ಮನೆಗೆ ನುಗಿದ್ದು, ಆಕೆ ಮತ್ತು ಆಕೆಯ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತನನ್ನು ತಡೆಯಲು ಬಂದ ಪ್ರೇಯಸಿಯ ಸಹೋದರನನ್ನು ಗುಂಡಿಕ್ಕಿ ಕೊಂದಿದ್ದು, ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಸ್ತುತ ಈ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ನಾಯಕತ್ವ ಬದಲಾವಣೆ ಬಗ್ಗೆ ಸಂತೋಷ್ ಯಾಕೆ ಹೇಳಿದ್ದಾರೆ ನನಗೆ ಗೊತ್ತಿಲ್ಲ: ಉಮೇಶ್ ಕತ್ತಿ

    crime

    ನಡೆದಿದ್ದೇನು?
    ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಪ್ರಭು ಈ ಕುರಿತು ಮಾಹಿತಿ ಕೊಟ್ಟಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಇದೊಂದು ಪ್ರೇಮ ಸಂಬಂಧ ವಿಫಲವಾದ ಹಿನ್ನೆಲೆ ಆರೋಪಿ ರಿಂಕು ಗಂಗ್ವಾರ್ ಈ ಕೃತ್ಯ ಮಾಡಿದ್ದಾನೆ ಎಂಬುದು ತಿಳಿದುಬರುತ್ತದೆ. ಆರೋಪಿ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ನಿವಾಸಿಯಾಗಿದ್ದು, ರಚನಾ ಗಂಗ್ವಾರ್ (22)ನನ್ನು ಪ್ರೀತಿಸುತ್ತಿದ್ದ. ಆದರೆ ಆಕೆಯ ಪೋಷಕರು ಬೇರೊಬ್ಬನ ಜೊತೆ ವಿವಾಹವನ್ನು ನಿಶ್ಚಯಿಸಿದ್ದರು.

    ಸುದ್ದಿ ಕೇಳಿ ಕೋಪಕೊಂಡ ರಿಂಕು, ಸಿರ್ಸಾ ಗ್ರಾಮದ ರಚನಾ ಅವರ ಮನೆಗೆ ಬೆಳಗ್ಗೆ ನುಗ್ಗಿ ಆಕೆ ಹಾಗೂ ಆಕೆಯ ತಾಯಿ ಮಾಯಾದೇವಿ(50) ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ರಚನಾ ಅವರ ಸಹೋದರ ರವೀಂದ್ರಪಾಲ್(28) ಮಧ್ಯಪ್ರವೇಶಿಸಿದಾಗ, ರಿಂಕು ಅವನನ್ನು ಗುಂಡಿಕ್ಕಿ ಕೊಂದಿದ್ದಾನೆ. ನಂತರ ಅವನು ಅಲ್ಲಿಂದ ಓಡಿಹೋಗಿ ಸುಮಾರು 20 ಮೀಟರ್ ದೂರದಲ್ಲಿ ತನ್ನ ಮೇಲೆ ಗುಂಡು ಹಾರಿಸಿಕೊಂಡಿದ್ದಾನೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ಯಾನ್ ಇಂಡಿಯಾ’ – ಸಿನಿಮಾಗಳಿಗೆ ಅಗೌರವ ತೋರುವ ಪದ, ಇದನ್ನು ತೆಗೆದುಹಾಕಬೇಕು: ಸಿದ್ಧಾರ್ಥ್ 

    ಪ್ರಸ್ತುತ ರಚನಾ ಮತ್ತು ಮಾಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.

  • ಕಡೂರು ಕೊಲೆ ಪ್ರಕರಣ- ಒಡವೆಗಳನ್ನು ವಶಪಡಿಸಿಕೊಂಡ ಪೊಲೀಸರು

    ಕಡೂರು ಕೊಲೆ ಪ್ರಕರಣ- ಒಡವೆಗಳನ್ನು ವಶಪಡಿಸಿಕೊಂಡ ಪೊಲೀಸರು

    ಚಿಕ್ಕಮಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಜಿಲ್ಲೆಯ ಕಡೂರಿನ ಕೊಲೆ ಹಾಗೂ ಸರಣಿ ಆತ್ಮಹತ್ಯೆಯ ಕೇಂದ್ರಬಿಂದು ದಂತ ವೈದ್ಯ ರೇವಂತ್ ಪತ್ನಿ ಕೊಲೆ ಪ್ರಕರಣದಲ್ಲಿ ಕಳುವಾಗಿದ್ದ 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನ ಪೊಲೀಸರು ವಶಪಡಿಸಿಕೊಂಡಿರುವುದಾಗಿ ಕಡೂರು ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ತಿಳಿಸಿದರು.

    ಕಡೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ರಾಜರಾಜೇಶ್ವರಿ ನಗರದ ಹರ್ಷಿತಾಳೊಂದಿಗೆ ಇದ್ದ ಅಕ್ರಮ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ಫೆಬ್ರವರಿ 17ರಂದು ಹರಿತವಾದ ಚಾಕುವಿನಿಂದ ಪತಿ ರೇವಂತ್ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದರು. ಇದನ್ನು ಮುಚ್ಚಿ ಹಾಕಲು ನಾಟಕ ಮಾಡಿ ಕೊನೆಗೆ ಸಿಕ್ಕಿಹಾಕಿಕೊಳ್ಳುತ್ತೇವೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

    ಈ ವೇಳೆ ಪೊಲೀಸರ ದಾರಿ ತಪ್ಪಿಸಲು ಕಳ್ಳತನದ ನಾಟಕ ಮಾಡಿ, ಮನೆಯಲ್ಲಿದ್ದ ಒಡವೆಗಳನ್ನ ತಾನೇ ಕದ್ದು ಬೀರೂರಿನಿಂದ ಕೊರಿಯರ್ ಮೂಲಕ ತನ್ನ ಪ್ರೇಯಸಿ ಹರ್ಷಿತಾಗೆ ಕಳುಹಿಸಲಾಗಿತ್ತು. ಆ ಆಭರಣಗಳನ್ನ ತನಿಖಾ ತಂಡ ವಶಪಡಿಸಿಕೊಂಡಿದೆ. ಇದರಿಂದ ಕಡೂರಿನ ಜನತೆಯಲ್ಲಿ ಮೂಡಿದ್ದ ಆತಂಕ ದೂರವಾಗಿದೆ, ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರಿಸಲಿದ್ದೇವೆ ಎಂದರು. ಇದನ್ನು ಓದಿ: ಅವಳಿಗೆ ಗಂಡ ಬೇಡವಾಗಿದ್ದ, ಇವನಿಗೆ ಹೆಂಡ್ತಿ ಬೇಡವಾಗಿದ್ಳು- ಇಬ್ಬರು ಸೇರಲು ಪತ್ನಿಯನ್ನ ಕೊಂದ ಡಾಕ್ಟರ್

    ಎಸ್‍ಪಿ ಹರೀಶ್ ಪಾಂಡೆ, ಎಎಸ್‍ಪಿ ಶೃತಿ ಮಾರ್ಗದರ್ಶನದಲ್ಲಿ ರಚನೆಯಾದ ಡಿ.ಎಸ್.ಪಿ ರೇಣುಕಾ ಪ್ರಸಾದ್ ನೇತೃತ್ವದ ತಂಡದಿಂದ ತನಿಖೆ ನಡೆದಿದೆ. ಪ್ರಕರಣವನ್ನು ಭೇದಿಸುವಲ್ಲಿ ಕಡೂರಿನ ಉಪ ನಿರೀಕ್ಷಕರಾದ ಎನ್.ಸಿ. ವಿಶ್ವನಾಥ್, ಬೀರೂರಿನ ರಾಜಶೇಖರ್, ಸಖರಾಯಪಟ್ಟಣ ಪಿಎಸ್‍ಐ ಮೌನೇಶ್, ಜಿಲ್ಲಾ ಪೊಲೀಸ್ ವೈಜ್ಞಾನಿಕ ತನಿಖಾ ತಂಡ ಹಾಗೂ ಕಡೂರು-ಬೀರೂರು ವೃತ್ತದ ಪೊಲೀಸ್ ಸಿಬ್ಬಂದಿಗಳ ಕಾರ್ಯವನ್ನು ಎಸ್‍ಪಿ ಶ್ಲಾಘಿಸಿದ್ದಾರೆ ಎಂದು ತಿಳಿಸಿದರು.