Tag: Mission Shakti

  • ಮೋದಿಗೆ ಚುನಾವಣಾ ಆಯೋಗದಿಂದ ಕ್ಲೀನ್ ಚಿಟ್

    ಮೋದಿಗೆ ಚುನಾವಣಾ ಆಯೋಗದಿಂದ ಕ್ಲೀನ್ ಚಿಟ್

    ನವದೆಹಲಿ: ಮಿಶನ್ ಶಕ್ತಿ (ಎ-ಸ್ಯಾಟ್) ಯಶಸ್ಸಿನ ಕುರಿತು ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ. ಪ್ರಧಾನಿ ಮೋದಿ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

    ಭಾರತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಜ್ಞಾನಿಗಳ ಸಾಧನೆ ಬಗ್ಗೆ ಪ್ರಧಾನಿ ಮೋದಿ ಮಾಡಿ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಅಂಶಗಳಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಇದನ್ನು ಓದಿ : ಏನಿದು ಉಪಗ್ರಹ ವಿರೋಧಿ ಅಸ್ತ್ರ? ಭಾರತದ ಸಾಧನೆ ಏನು?

    ಆಗಿದ್ದೇನು?:
    ಪ್ರಧಾನಿ ನರೇಂದ್ರ ಮೋದಿ ಎ- ಸ್ಯಾಟ್ ಯಶಸ್ಸಿನ ಕುರಿತು ದೇಶದ ಜನತೆಗೆ ಮಾಹಿತಿ ನೀಡಲು ದೇಶವನ್ನು ಉದ್ದೇಶಿಸಿ ಮಾರ್ಚ್ 27ರಂದು ಮಧ್ಯಾಹ್ನ ಭಾಷಣ ಮಾಡಿದ್ದರು. ಬಾಹ್ಯಾಕಾಶದಲ್ಲಿ ಕ್ಷಿಪಣಿ ಮೂಲಕ ಉಪಗ್ರಹವನ್ನು ಹೊಡೆದು ಉರುಳಿಸುವ ಸಾಮಥ್ರ್ಯವನ್ನು ಹೊಂದುವ ಮೂಲಕ ವಿಶ್ವದ ಇತಿಹಾಸದಲ್ಲಿ ಭಾರತ ವಿಶೇಷ ಸಾಧನೆ ಮಾಡಿದೆ. ಅಮೆರಿಕ, ರಷ್ಯಾ, ಚೀನಾದ ಬಳಿಕ ಉಪಗ್ರಹ ವಿರೋಧಿ ಅಸ್ತ್ರಗಳನ್ನು (ಆಂಟಿ-ಸ್ಯಾಟೆಲೈಟ್ ವೆಪನ್, ASAT) ಹೊಂದಿದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಮೂಲಕ ವಿಶ್ವದ ಸ್ಪೇಸ್ ಸೂಪರ್ ಪವರ್ ದೇಶವಾಗಿ ಭಾರತದ ಹೊರಹೊಮ್ಮಿದೆ ಎಂದು ತಿಳಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಜ್ಞಾನಿ ಮಾಡಿದ ಸಾಧನೆಯ ಬಗ್ಗೆ ಘೋಷಣೆ ಮಾಡುತ್ತಿದಂತೆ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದರು. ಚುನಾವಣೆಯ ಸಂದರ್ಭದಲ್ಲಿ ಇಂತಹ ಘೋಷಣೆ ಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿದ್ದರು.

    ದೇಶದ ವಿಜ್ಞಾನಿಗಳು ವರ್ಷಗಳ ಕಾಲ ಶ್ರಮ ವಹಿಸಿ ಮಾಡಿದ ಸಾಧನೆಯನ್ನು ಚುನಾವಣೆಗೆ ಕೇವಲ 2 ವಾರಗಳು ಬಾಕಿ ಇರುವ ವೇಳೆ ತಿಳಿಸಿದ್ದು ಎಷ್ಟು ಸರಿ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿತ್ತು. `ಮಿಶನ್ ಶಕ್ತಿ’ ಮೋದಿ ಮಾಡಿದ ಸಾಧನೆ ಅಲ್ಲ. ಅಷ್ಟಕ್ಕೂ ಉಪಗ್ರಹವನ್ನು ನರೇಂದ್ರ ಮೋದಿ ಹಾರಿಸಿದ್ದಲ್ಲ. ಮೋದಿ ಸಾಧನೆ ಎಂದು ಸುಮ್ಮನೆ ಬಿಂಬಿಸಲಾಗ್ತಿದೆ. ವಿಜ್ಞಾನಿಗಳು ತಮ್ಮ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದರು.

  • ಯುಪಿಎ ಅವಧಿಯಲ್ಲೂ ಹಲವು ಉಪಗ್ರಹಗಳನ್ನು ಹಾರಿಸಲಾಗಿದೆ: ಮೋದಿಗೆ ಖರ್ಗೆ ತಿರುಗೇಟು

    ಯುಪಿಎ ಅವಧಿಯಲ್ಲೂ ಹಲವು ಉಪಗ್ರಹಗಳನ್ನು ಹಾರಿಸಲಾಗಿದೆ: ಮೋದಿಗೆ ಖರ್ಗೆ ತಿರುಗೇಟು

    ಕಲಬುರಗಿ: ಜನರಿಗೆ ತೋರಿಸುವ ಉದ್ದೇಶದಿಂದ ಮಿಶನ್ ಶಕ್ತಿ ಪ್ರಯೋಗ ಮಾಡಲಾಗಿದೆ. ದೇಶದಲ್ಲಿ ಇಂತಹ ಪ್ರಯೋಗಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಆದರೆ ಯಾರೋ ಒಬ್ಬರು ಕ್ರೆಡಿಟ್ ತೆಗೆದುಕೊಳ್ಳುವುದು ತಪ್ಪು ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    2012ರಲ್ಲಿಯೇ ಪ್ರಯೋಗಿಸಲಾಗಿರುವ ಸ್ಯಾಟ್‍ಲೈಟ್ ತಯಾರಾಗಿತ್ತು. ಇದರಿಂದ ಬೇರೆ ದೇಶದ ಉಪಗ್ರಹಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಪ್ರಯೋಗಿಸಿರಲಿಲ್ಲ. ಇಂದು ಜನರಿಗೆ ತೋರಿಸುವ ಉದ್ದೇಶಕ್ಕಾಗಿ ಪ್ರಯೋಗ ಮಾಡಿ ಪ್ರಚಾರ ತೆಗೆದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ದೇಶದ ಹಿತದೃಷ್ಟಿಯಿಂದಲೇ ಡಿಆರ್‍ಡಿಓ ಸಂಸ್ಥೆಯನ್ನು ಕಟ್ಟಲಾಗಿದೆ. ಯುಪಿಎ ಅವಧಿಯಲ್ಲಿ ಹಲವಾರು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಬಿಡಲಾಗಿದೆ. ಎಲ್ಲವನ್ನು ದೇಶದ ಹಿತದೃಷ್ಟಿಯಿಂದಲೇ ಮಾಡಲಾಗಿದೆ. ಆದರೆ ಇಂದು ಬಂದು ನಾನೇ ಮಾಡಿದ್ದೇನೆ ಎಂದು ಹೇಳುತ್ತಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಗರಂ ಆದರು. ಇದನ್ನೂ ಓದಿ: ಏನಿದು ಉಪಗ್ರಹ ವಿರೋಧಿ ಅಸ್ತ್ರ? ಭಾರತದ ಸಾಧನೆ ಏನು?

    ಕ್ಷಿಪಣಿ ಮೂಲಕ ಉಪಗ್ರಹವನ್ನು ಹೊಡೆದು ಉರುಳಿಸುವ ಸಾಮಥ್ರ್ಯವನ್ನು ಹೊಂದುವ ಮೂಲಕ ವಿಶ್ವದ ಇತಿಹಾಸದಲ್ಲಿ ಭಾರತ ವಿಶೇಷ ಸಾಧನೆ ಮಾಡಿದೆ. ಅಮೆರಿಕ, ರಷ್ಯಾ, ಚೀನಾದ ಬಳಿಕ ಉಪಗ್ರಹ ವಿರೋಧಿ ಅಸ್ತ್ರಗಳನ್ನು (ಆಂಟಿ-ಸ್ಯಾಟೆಲೈಟ್ ವೆಪನ್) ಹೊಂದಿದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಮೂಲಕ ವಿಶ್ವದ ಸ್ಪೇಸ್ ಸೂಪರ್ ಪವರ್ ದೇಶವಾಗಿ ಭಾರತ ಈಗ ಹೊರಹೊಮ್ಮಿದೆ.

    https://www.youtube.com/watch?v=F7KwqUg_uqA