Tag: Mission Manju

  • ಆಲ್ ದಿ ಬೆಸ್ಟ್.. ನಾನು ಇಲ್ಲದೆ ಸಂತೋಷದಿಂದ ಇರಿ: ರಶ್ಮಿಕಾ ಮಂದಣ್ಣ

    ಆಲ್ ದಿ ಬೆಸ್ಟ್.. ನಾನು ಇಲ್ಲದೆ ಸಂತೋಷದಿಂದ ಇರಿ: ರಶ್ಮಿಕಾ ಮಂದಣ್ಣ

    ಬೆಂಗಳೂರು: ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಫೆಬ್ರವರಿ 6 ರಿಂದ ಲಕ್ನೋದಲ್ಲಿ ಪ್ರಾರಂಭವಾಗಿದೆ. ಆದರೆ ಸಿನಿಮಾದ ಪ್ರಮುಖ ನಾಯಕಿ ರಶ್ಮಿಕಾ ಮಂದಣ್ಣ ಚಿತ್ರೀಕರಣದಲ್ಲಿ ಸದ್ಯ ಪಾಲ್ಗೊಂಡಿಲ್ಲ. ಬದಲಾಗಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರಕ್ಕೆ ಆಲ್ ದಿ ಬೆಸ್ಟ್ ಎಂದು ವಿಶ್ ಮಾಡಿದ್ದಾರೆ.

    ಸಿನಿಮಾ ನಿರ್ಮಾಣ ಮಾಡುತ್ತಿರುವ ಆರ್‍ಎಸ್‍ವಿಪಿ ಇನ್‍ಸ್ಟಾಗ್ರಾಮ್ ಖಾತೆಯ ಮೂಲಕ ಮಿಷನ್ ಮಜ್ನು ಕ್ಲಾಪ್ ಬೋರ್ಡ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಭಾರತದ ಮಾರಕ ರಹಸ್ಯ ಕಾರ್ಯಚರಣೆಯ ಮೊದಲ ಅಧ್ಯಾಯವು ಇಂದು ಆರಂಭವಾಗಿದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದೆ.

    ಜೊತೆಗೆ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣವನ್ನು ಲಕ್ನೋನಲ್ಲಿ ಇಂದಿನಿಂದ ಆರಂಭಿಸಲಾಗಿದ್ದು, ಮುಂದಿನ ಒಂದೆರಡು ದಿನಗಳ ಕಾಲ ಕೇವಲ ಸಿದ್ಧಾರ್ಥ್ ಮಲ್ಹೋತ್ರಾ ದೃಶ್ಯಗಳನ್ನು ಮಾತ್ರ ಚಿತ್ರೀಕರಿಸಲಾಗುತ್ತದೆ. ನಂತರದ ದಿನಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

    ಸಿನಿಮಾ ಕುರಿತಂತೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಹಾಹಾಹಾ… ನಮ್ಮ ಹುಡುಗರು ಇಂದು ರೋಲಿಂಗ್ ಆರಂಭಿಸಿದ್ದಾರೆ. ಆಲ್ ದಿ ಬೆಸ್ಟ್ ಆಲ್. ನಾನು ಇಲ್ಲದೆ ಸಂತೋಷದಿಂದ ಇರಿ ಎಂದು ಬೇಸರದ ಸಿಂಬಲ್ ಹಾಕಿ ವಿಶ್ ಮಾಡಿದ್ದಾರೆ. ಇನ್ನೂ ಈ ಪೋಸ್ಟ್‍ನನ್ನು ಆರ್‍ಎಸ್‍ವಿಪಿ ಚಲನಚಿತ್ರ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

    ಮಿಷನ್ ಮಜ್ನು ಸಿನಿಮಾದ ಲೀಡ್ ರೋಲ್‍ನಲ್ಲಿ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯಿಸುತ್ತಿದ್ದು, ಇತ್ತೀಚೆಗಷ್ಟೇ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್‍ನನ್ನು ಶೇರ್ ಮಾಡಿಕೊಂಡಿದ್ದರು. ಜೊತೆಗೆ ನಮ್ಮ ಗುಪ್ತಚರ ಸಂಸ್ಥೆ ಶತ್ರುಗಳ ಕುರಿತಂತೆ ನಡೆಸಿದ ಅತ್ಯಂತ ಮಾರಕ ರಹಸ್ಯ ಕಾರ್ಯಾಚರಣೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದರು.

     

    View this post on Instagram

     

    A post shared by Sidharth Malhotra (@sidmalhotra)

    ಮಿಷನ್ ಮಜ್ನು 1870ರ ನೈಜ ಘಟನೆಗಳಿಂದ ಪ್ರೇರಿತವಾಗಿರುವ ಒಂದು ಪತ್ತೆದಾರಿ ಥ್ರಿಲ್ಲರ್ ಚಿತ್ರವಾಗಿದ್ದು, ಈ ಸಿನಿಮಾವು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನು ಶಾಶ್ವತವಾಗಿ ಬದಲಿಸಿದ ಕಥೆಯನ್ನು ಒಳಗೊಂಡಿದೆ ಎಂದು ಸಿನಿಮಾತಂಡ ತಿಳಿಸಿದೆ.