Tag: Mission Mangal

  • ನಿರ್ದೇಶಕನ ಆಸ್ಪತ್ರೆ ಖರ್ಚುಗಳನ್ನು ಭರಿಸುತ್ತಿದ್ದಾರೆ ಅಕ್ಷಯ್

    ನಿರ್ದೇಶಕನ ಆಸ್ಪತ್ರೆ ಖರ್ಚುಗಳನ್ನು ಭರಿಸುತ್ತಿದ್ದಾರೆ ಅಕ್ಷಯ್

    ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ತಮ್ಮ ‘ಮಿಷನ್ ಮಂಗಲ್’ ಚಿತ್ರದ ನಿರ್ದೇಶಕನ ವೈದ್ಯಕೀಯ ಖರ್ಚುಗಳನ್ನು ಭರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಶನಿವಾರ ಮುಂಬೈನಲ್ಲಿ ನಿರ್ದೇಶಕ ಜಗನ್ ಶಕ್ತಿ ತಮ್ಮ ಸ್ನೇಹಿತರ ಜೊತೆ ಗೆಟ್ ಟು ಗೆದರ್‍ನಲ್ಲಿ ಭಾಗವಹಿಸಿದ್ದರು. ಈ ವೇಳೆ ಜಗನ್ ಏಕಾಏಕಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಮುಂಬೈನ ಕೊಕಿಲ್‍ಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಗನ್ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಸೋಮವಾರ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ನಿರ್ದೇಶಕ ಜಗನ್ ಚೇತರಿಸಿಕೊಳ್ಳುತ್ತಿದ್ದಾರೆ.

    ಜಗನ್ ಅವರು ಕುಸಿದು ಬಿದ್ದಾಗ ಸ್ವತಃ ಅಕ್ಷಯ್ ಕುಮರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ವರದಿಯಾಗಿದೆ. ಸದ್ಯ ಜಗನ್ ಅವರು ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಕ್ಷಯ್ ಅವರು ಆಸ್ಪತ್ರೆಯ ಖರ್ಚು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ ಜಗನ್ ಅವರ ಕುಟುಂಬಸ್ಥರ ಜೊತೆ ನಿಂತು ಅವರಿಗೆ ಧೈರ್ಯ ಕೂಡ ಹೇಳಿದ್ದಾರೆ. ಅಕ್ಷಯ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಮಿಷನ್ ಮಂಗಲ್ ಜಗನ್ ಶಕ್ತಿ ನಿರ್ದೇಶನದ ಮೊದಲ ಚಿತ್ರ. ಈ ಸಿನಿಮಾ ಚಂದ್ರಯಾನ ಕತೆಯಾಗಿದ್ದು, ಕಳೆದ ವರ್ಷ ಬಿಡುಗಡೆಯಾಗಿತ್ತು. ಇದರಲ್ಲಿ ನಟ ಅಕ್ಷಯ್ ಕುಮಾರ್, ನಟಿಯರಾದ ವಿದ್ಯಾ ಬಾಲನ್, ತಾಪ್ಸಿ ಪನ್ನು, ನಿತ್ಯಾ ಮೆನನ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.

  • ಡ್ರೈವಿಂಗ್ ವೇಳೆ ಪುರುಷನ ಪ್ರೈವೆಟ್ ಪಾರ್ಟ್ ಟಚ್ – ತಾಪ್ಸಿಯಿಂದ ರೇಪ್ ಎಂದು ಕಿಡಿ

    ಡ್ರೈವಿಂಗ್ ವೇಳೆ ಪುರುಷನ ಪ್ರೈವೆಟ್ ಪಾರ್ಟ್ ಟಚ್ – ತಾಪ್ಸಿಯಿಂದ ರೇಪ್ ಎಂದು ಕಿಡಿ

    ಮುಂಬೈ: ಬಾಲಿವುಡ್ ನಟಿ ತಾಪ್ಸಿ ಪನ್ನು ನಟಿಸಿದ ‘ಮಿಶನ್ ಮಂಗಲ್’ ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ಈ ಟ್ರೈಲರ್ ನಲ್ಲಿ ತಾಪ್ಸಿ ಪುರುಷನ ಪ್ರೈವೆಟ್ ಪಾರ್ಟ್ ಮುಟ್ಟಿದ್ದಕ್ಕೆ ಟ್ರೋಲ್ ಆಗುತ್ತಿದ್ದಾರೆ.

    ಚಿತ್ರದ ಟ್ರೈಲರ್ ನಲ್ಲಿ ತಾಪ್ಸಿ ಕಾರು ಡ್ರೈವಿಂಗ್ ಕಲಿಯುತ್ತಿರುತ್ತಾರೆ. ಈ ವೇಳೆ ತಾಪ್ಸಿ ಕಾರಿನ ಗೇರ್ ಮುಟ್ಟುವ ಬದಲು ಪಕ್ಕದ ಸೀಟಿನಲ್ಲಿ ಕುಳಿತ್ತಿದ್ದ ತನ್ನ ಡ್ರೈವಿಂಗ್ ಟೀಚರ್ ನ ಪ್ರೈವೆಟ್ ಪಾರ್ಟ್ ಗೆ ಕೈ ಹಾಕುತ್ತಾರೆ. ತಾಪ್ಸಿ ಕೈ ಹಾಕಿದ ತಕ್ಷಣ ಡ್ರೈವಿಂಗ್ ಟೀಚರ್ ಜೋರಾಗಿ ಕಿರುಚಿಕೊಂಡಿದ್ದಾನೆ.

    https://twitter.com/SRKVEERSINGH/status/1159427484921692161?ref_src=twsrc%5Etfw%7Ctwcamp%5Etweetembed%7Ctwterm%5E1159427484921692161&ref_url=https%3A%2F%2Fwww.vijayavani.net%2Ftaapsee-pannus-act-of-pressing-mans-private-part-in-mission-mangal-irks-netizens-video%2F

    ಈ ದೃಶ್ಯ ಈಗ ವಿವಾದಕ್ಕೆ ಶುರುವಾಗಿದೆ. ಕೆಲವರು ‘ಇದೇ ಸೀನ್ ಪುರುಷರು ಮಾಡಿದ್ದರೆ, ಮಹಿಳೆಯರು ಸುಮ್ಮನೆ ಇರುತ್ತಿದ್ದೀರಾ?’ ಎಂದು ಕಮೆಂಟ್ ಮಾಡಿ ತಾಪ್ಸಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ‘ಹಾಸ್ಯಕ್ಕಾಗಿ ಪುರುಷರಿಗೆ ಜೊತೆ ಈ ರೀತಿಯ ದೃಶ್ಯಗಳನ್ನು ಚಿತ್ರೀಕರಿಸುವುದು ಸರಿಯಲ್ಲ’ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

    https://twitter.com/bhattac_arindam/status/1159469298076700673?ref_src=twsrc%5Etfw%7Ctwcamp%5Etweetembed%7Ctwterm%5E1159469298076700673&ref_url=https%3A%2F%2Fwww.vijayavani.net%2Ftaapsee-pannus-act-of-pressing-mans-private-part-in-mission-mangal-irks-netizens-video%2F

    ಮತ್ತೆ ಕೆಲವರು “ಒಬ್ಬರ ಅನುಮತಿಯಿಲ್ಲದೆ ಅವರ ಪ್ರೈವೆಟ್ ಪಾರ್ಟ್ ಮುಟ್ಟುವುದು ಸರಿಯಲ್ಲ. ಇದು ಮಹಿಳೆಯರು ಪುರುಷರ ಮೇಲೆ ನಡೆಸುವ ಅತ್ಯಾಚಾರ. ದಯವಿಟ್ಟು ಚಿತ್ರದಿಂದ ಈ ಸೀನ್ ಡಿಲೀಟ್ ಮಾಡಿ” ಎಂದು ಅಭಿಮಾನಿಗಳು ಗರಂ ಆಗಿದ್ದಾರೆ.

    ಮಿಶನ್ ಮಂಗಲ್ ಚಿತ್ರ ಚಂದ್ರಯಾನದ ಕತೆಯಾಗಿದ್ದು, ಜಗನ್ ಶಕ್ತಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್, ನಟಿಯರಾದ ವಿದ್ಯಾ ಬಾಲನ್, ತಾಪ್ಸಿ ಪನ್ನು, ನಿತ್ಯಾ ಮೆನನ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

  • ಬರಲಿದೆ ಮಿಷನ್ ಕಾಶ್ಮೀರದ ರೂವಾರಿ ದೋವಲ್ ಜೀವನಾಧಾರಿತ ಚಿತ್ರ

    ಬರಲಿದೆ ಮಿಷನ್ ಕಾಶ್ಮೀರದ ರೂವಾರಿ ದೋವಲ್ ಜೀವನಾಧಾರಿತ ಚಿತ್ರ

    ನವದೆಹಲಿ: ಇತ್ತೀಚೆಗೆ ಸಾಧಕರ ಜೀವನಾಧಾರಿತ ಚಲನಚಿತ್ರಗಳು ಸಾಲು ಸಾಲಾಗಿ ಬರುತ್ತಿರುವ ಬೆನ್ನಲ್ಲೇ ಪ್ರೇಕ್ಷಕ ಪ್ರಭುಗಳೂ ಸಹ ಅಷ್ಟೇ ಕುತೂಹಲದಿಂದ ಇಂತಹ ಚಿತ್ರಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಿಲ್ಕಾ ಸಿಂಗ್ ಜೀವನಾಧಾರಿತ ಚಿತ್ರ ಭಾಗ್ ಮಿಲ್ಕಾ ಭಾಗ್ ಹಾಗೂ ಧೋನಿ ಜೀವನಾಧಾರಿತ ಚಲನಚಿತ್ರದಿಂದ ಈ ವರೆಗೆ ವಿವಿಧ ಸಾಧಕರ ಚಿತ್ರಗಳು ಹಿಟ್ ಲಿಸ್ಟ್ ನಲ್ಲಿವೆ.

    ಇದೀಗ ಈ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಜೀವನಾಧಾರಿತ ಚಿತ್ರಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಈ ಚಿತ್ರಕ್ಕೆ ತಾರಾಗಣದ ಆಯ್ಕೆ ಪ್ರಕ್ರಿಯೆಯೂ ಅಷ್ಟೇ ಚುರುಕಾಗಿದ್ದು, ಬಹು ಬೇಡಿಕೆ ನಟ ಅಕ್ಷಯ್ ಕುಮಾರ್ ಅವರೇ ಅಜಿತ್ ದೋವಲ್ ಆಗಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

    https://www.instagram.com/p/B0fTbh3nT9O/?utm_source=ig_embed

    ಇತ್ತೀಚೆಗೆ ಅಕ್ಷಯ್ ಕುಮಾರ್ ಸಾಲು ಸಾಲು ಚಿತ್ರಗಳಿಗೆ ಸಹಿ ಹಾಕಿದ್ದನ್ನು ನೋಡಿದರೆ ಮುಖ್ಯವಾಹಿನಿ ಚಲನಚಿತ್ರ ನಿರ್ಮಾಪಕರ ಮೊದಲ ಆಯ್ಕೆಯಾಗಿದ್ದಾರೆ ಎಂದೇ ಹೇಳಬಹುದು. ಇದೀಗ ಅಕ್ಷಯ್ ಕುಮಾರ್ ಅವರು ಸುಮಾರು ಏಳು ಚಿತ್ರಗಳಿಗೆ ಸಹಿ ಹಾಕಿದ್ದು, ಈ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    ಮಿಷನ್ ಮಂಗಳ್, ಹೌಸ್‍ಫುಲ್ 4, ಗುಡ್ ನ್ಯೂಸ್, ಸೂರ್ಯವಂಶಿ, ಲಕ್ಷ್ಮಿ ಬಾಂಬ್, ಬಚ್ಚನ್ ಪಾಂಡೆ ಮತ್ತು ಇಕ್ಕಾ ಚಿತ್ರಗಳು ಅಕ್ಷಯ್ ಕುಮಾರ್ ಅವರ ಲಿಸ್ಟ್‍ನಲ್ಲಿವೆ. ಇದೀಗ ಅಕ್ಷಯ್ ಕುಮಾರ್ ಅವರಿಗಾಗಿ ಮತ್ತೊಂದು ಚಿತ್ರವನ್ನು ರೂಪಿಸಲಾಗಿದ್ದು, ಅದೇ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಜೀವನಾಧಾರಿತ ಚಿತ್ರವಾಗಿದೆ. ಆದರೆ, ಈವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

    ಅಜಿತ್ ದೋವಲ್ ಅವರ ವೃತ್ತಿ ಜೀವನದ ಮುಖ್ಯಾಂಶಗಳನ್ನು ಆಧರಿಸಿದ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಹಾಗೂ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ನೀರಜ್ ಪಾಂಡೆ ಮತ್ತೆ ಒಂದಾಗಲಿದ್ದಾರೆ. ಈ ಹಿಂದೆ ಇವರಿಬ್ಬರು ಬೇಬಿ ಮತ್ತು ಸ್ಪೆಷಲ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

    ಅಜಿತ್ ದೋವಲ್ ಜೀವನಾಧಾರಿತ ಚಿತ್ರ ಇನ್ನೂ ಸ್ಕ್ರಿಪ್ಟಿಂಗ್ ಹಂತದಲ್ಲಿದ್ದು, ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ಇನ್ನೂ ಕೆಲ ಸಮಯವನ್ನು ತೆಗೆದುಕೊಳ್ಳಲಿದೆ. ಏಕೆಂದರೆ ಅಕ್ಷಯ್ ಕುಮಾರ್ ಅವರ ಕಾಲ್ ಲಿಸ್ಟ್‍ನಲ್ಲಿ ಈಗಾಗಲೇ ಸಾಲು ಸಾಲು ಚಿತ್ರಗಳಿದ್ದು, ಇವೆಲ್ಲ ಪೂರ್ಣಗೊಳ್ಳಬೇಕಿದೆ. ಅಲ್ಲದೆ, ನೀರಜ್ ಪಾಂಡೆ ಸಹ ಅಜಯ್ ದೇವಗನ್ ಅವರ ಚಾಣಕ್ಯ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಅಜಿತ್ ದೋವಲ್ ಜೀವನಾಧಾರಿತ ಸಿನಿಮಾ ಸೆಟ್ಟೇರಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.

    ನೀರಜ್ ಅವರು ಕೆಲ ತಿಂಗಳಿಂದ ಅಜಯ್ ದೇವಗನ್ ಅವರ ಚಾಣಕ್ಯ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಷಯ್ ಕುಮಾರ್ ಸಹ ಅವರ ಲಿಸ್ಟ್‍ನಲ್ಲಿರುವ ಚಿತ್ರಗಳನ್ನು ಪೂರೈಸಬೇಕಿದೆ. ಹೀಗಾಗಿ ಅಧೀಕೃತವಾಗಿ ಘೋಷಣೆ ಮಾಡುವವರೆಗೆ ಸ್ಕ್ರಿಪ್ಟ್ ಕುರಿತು ಯಾವುದೇ ಗುಟ್ಟನ್ನು ಬಿಟ್ಟುಕೊಡದಿರಲು ಚಿತ್ರ ತಂಡ ನಿಶ್ಚಯಿಸಿದೆ.

    https://www.instagram.com/tv/B0VhqAoHKag/?utm_source=ig_embed

    ಪ್ರಸ್ತುತ ಅಕ್ಷಯ್ ಕುಮಾರ್ ಮಿಷನ್ ಮಂಗಳ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದು ಆ.15ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಲಿದೆ. ಇದನ್ನು ಜಗನ್ ಶಕ್ತಿ ನಿರ್ದೇಶಿಸಿದ್ದು, ಇದು 2013ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಪ್ರಾರಂಭಿಸಿದ ಮೊದಲ ಅಂತರ್ ಗ್ರಹ ಕಾರ್ಯಾಚರಣೆಯಾದ ಮಾರ್ಸ್ ಆರ್ಬಿಟರ್ ಮಿಷನ್(ಎಂಓಎಂ)ಗೆ ಕೊಡುಗೆ ನೀಡಿದ ವಿಜ್ಞಾನಿಗಳ ಜೀವನಾಧಾರಿತ ಚಲನಚಿತ್ರವಾಗಿದೆ. ಮಿಷನ್ ಮಂಗಳ್ ಸಹ ಬಹುತಾರಾಗಣದ ಚಿತ್ರವಾಗಿದ್ದು, ವಿದ್ಯಾಬಾಲನ್, ತಾಪ್ಸಿ ಪನ್ನು, ಸೋನಾಕ್ಷಿ ಸಿನ್ಹಾ, ಕೀರ್ತಿ ಕುಲ್ಹಾರಿ, ನಿತ್ಯಾ ಮೆನನ್ ಹಾಗೂ ಶರ್ಮನ್ ಜೋಶಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.