Tag: Mission Majnu

  • ಬಾಲಿವುಡ್‌ ಚಿತ್ರಗಳ ಸೋಲಿನ ಬೆನ್ನಲ್ಲೇ ರಶ್ಮಿಕಾ ನಟನೆಯ 3ನೇ ಚಿತ್ರದ ಟೀಸರ್‌ ರಿಲೀಸ್

    ಬಾಲಿವುಡ್‌ ಚಿತ್ರಗಳ ಸೋಲಿನ ಬೆನ್ನಲ್ಲೇ ರಶ್ಮಿಕಾ ನಟನೆಯ 3ನೇ ಚಿತ್ರದ ಟೀಸರ್‌ ರಿಲೀಸ್

    ಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಬಾಲಿವುಡ್‌ನಲ್ಲಿ ಲಕ್ ಕೈ ಕೊಟ್ಟಿದೆ. ಗುಡ್ ಬೈ, ಮಿಷನ್ ಮಜ್ನು (Mission Majnu) ಈ ಎರಡು ಸಿನಿಮಾಗಳ ಸೋಲಿನ ನಂತರ ಇದೀಗ ಅನಿಮಲ್ ಚಿತ್ರದ ಮೂಲಕ ಕಿರಿಕ್ ನಟಿ ಬರುತ್ತಿದ್ದಾರೆ. ರಣ್‌ಬೀರ್, ರಶ್ಮಿಕಾ ನಟನೆಯ ‘ಅನಿಮಲ್’ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸದ್ದು ಮಾಡುತ್ತಿದೆ.

    ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ, ಅಂಜನಿಪುತ್ರ, ಚಮಕ್, ಪೊಗರು ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ರು. ಜೊತೆಗೆ ತೆಲುಗಿನ ‘ಗೀತಾ ಗೋವಿಂದಂ’, ಸರಿಲೇರು ನಿಕ್ಕೇವರು, ಪುಷ್ಪ ಸೇರಿದಂತೆ ತೆಲುಗಿನ ಚಿತ್ರಗಳಲ್ಲಿ ಕೊಡಗಿನ ಕುವರಿ ಗಮನ ಸೆಳೆದರು.

    ಕಳೆದ ವರ್ಷ ಬಾಲಿವುಡ್‌ನಲ್ಲಿ ಬಿಗ್ ಬಿ ಜೊತೆಗಿನ ಗುಡ್ ಬೈ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗಿನ `ಮಿಷನ್ ಮಜ್ನು’ ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾಗಳು ಕಲೆಕ್ಷನ್ ವಿಷ್ಯದಲ್ಲಿ ಮಕಾಡೆ ಮಲಗಿತ್ತು. ಈಗ ರಣ್‌ಬೀರ್ ಕಪೂರ್ ಜೊತೆಗೆ ಕೊಡಗಿನ ಕುವರಿ ರಶ್ಮು ಬರುತ್ತಿದ್ದಾರೆ. ಇದನ್ನೂ ಓದಿ:ಮೂಗು ಚುಚ್ಚಿಸಿಕೊಂಡ ಪತ್ನಿ ಸಂಗೀತಾ ಲುಕ್‌ಗೆ ‘ಭಾಗ್ಯಲಕ್ಷ್ಮಿ’ ನಟ ಏನಂದ್ರು ಗೊತ್ತಾ?

    ಸದ್ಯ ‘ಅನಿಮಲ್’ ಸಿನಿಮಾದ ರಿಲೀಸ್ ಆಗಿರುವ ಟೀಸರ್‌ನಲ್ಲಿ ರಣಬೀರ್ ಕಪೂರ್ ಕೊಡಲಿ ಹಿಡಿದು ಬರುವುದನ್ನು ಕಾಣಬಹುದು. ಕೆಲವು ಮಾಸ್ಕ್ ಧರಿಸಿದ ಮಂದಿ ನಟನಿಗಾಗಿ ಕಾಯುತ್ತಿರುತ್ತಾರೆ. ನಟ ಬಿಳಿ ಕುರ್ತಾ ಹಾಗೂ ಧೋತಿ ಧರಿಸಿರುತ್ತಾರೆ. ನಟನ ಮುಖದ ದೃಶ್ಯವೂ ಕಾಣಿಸುತ್ತದೆ. ಈ ಲುಕ್ ನೋಡಿದರೆ ರಣಬೀರ್ ಕಪೂರ್ ಅವರು ಕ್ರೂರವಾದ ಗ್ಯಾಂಗ್‌ಸ್ಟರ್ ಪಾತ್ರ ಮಾಡುತ್ತಿರುವಂತೆ ಕಾಣಿಸುತ್ತದೆ. ರಣಬೀರ್ ಅವರು ಒಂಟಿಯಾಗಿ ಫೈಟ್ ಮಾಡುತ್ತಾರೆ. ಪಂಜಾಬಿ ಸಾಂಗ್ ಒಂದು ಹಿನ್ನೆಲೆಯಲ್ಲಿ ಪ್ಲೇ ಆಗುತ್ತದೆ. ರಣಬೀರ್ ಅವರ ಟ್ರಾನ್ಸ್ಫರ್ಮೇಶನ್ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

    ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಚಿತ್ರದಲ್ಲಿ ಮೊದಲ ಬಾರಿಗೆ ರಣ್‌ಬೀರ್ ಕಪೂರ್‌ಗೆ (Ranbir Kapoor) ಜೋಡಿಯಾಗಿ ನಟಿಸಿದ್ದಾರೆ. ರಶ್ಮಿಕಾ ನಟಿಸಿರುವ ಹಿಂದಿ 2 ಸಿನಿಮಾಗಳು ಸೋತಿದ್ರು ಕೂಡ ‘ಪುಷ್ಪ’ ಚಿತ್ರದ ಯಶಸ್ಸು ಮತ್ತು ನಟನೆ ನೋಡಿ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟಿದ್ದಾರೆ. ಇದೇ ಆಗಸ್ಟ್‌ 11ಕ್ಕೆ ಅನಿಮಲ್‌ ಸಿನಿಮಾ ತೆರೆಗೆ ಅಬ್ಬರಿಸುತ್ತಿದೆ. ಗುಡ್ ಬೈ, ಮಿಷನ್ ಮಜ್ನು ಚಿತ್ರದ ಸೋಲಿನ ಬಳಿಕ ‘ಅನಿಮಲ್’ (Animal) ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣಗೆ (Rashmika Mandanna) ಬಾಲಿವುಡ್‌ನಲ್ಲಿ ಗಟ್ಟಿನೆಲೆ ಗಿಟ್ಟಿಸಿಕೊಳ್ಳುತ್ತಾರಾ ಕಾದುನೋಡಬೇಕಿದೆ.

  • ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ಪಾರ್ಟಿ

    ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ಪಾರ್ಟಿ

    `ಪುಷ್ಪ’ (Pushpa) ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್‌ನಲ್ಲಿ ಸದ್ದು ಮಾಡ್ತಿದ್ದಾರೆ. ಈಗ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಭರ್ಜರಿಯಾಗಿ ಪಾರ್ಟಿ ಮಾಡಿದ್ದಾರೆ. ಈ ಕುರಿತ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    ರಶ್ಮಿಕಾ ನಟನೆಯ ಮೊದಲ ಚಿತ್ರ `ಗುಡ್ ಬೈ’ ಬಿಟೌನ್ ಮಕಾಡೆ ಮಲಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ `ಮಿಷನ್ ಮಜ್ನು’ ಮೊದಲು ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ತಡವಾಗಿ ರಿಲೀಸ್ ಆಯ್ತು. ಕಳೆದ ವಾರ ಸಿದ್ಧಾರ್ಥ್ ಮತ್ತು ರಶ್ಮಿಕಾ ನಟನೆಯ `ಮಿಷನ್ ಮಜ್ನು’ ಚಿತ್ರ ಒಟಿಟಿಯಲ್ಲಿ ತೆರೆಕಂಡಿತ್ತು. ಸಿನಿಮಾ ಪ್ರೇಕ್ಷಕರು ವಾವ್ ಎಂದಿದ್ದಾರೆ. ಚಿತ್ರ ಸಕ್ಸಸ್ ಕೂಡ ಕಂಡಿದೆ. ಇದೇ ಖುಷಿಯಲ್ಲಿ ಇಡೀ ಚಿತ್ರತಂಡ ಪಾರ್ಟಿ ಮಾಡಿದ್ದಾರೆ.

     

    View this post on Instagram

     

    A post shared by yogen shah (@yogenshah_s)

    ರಶ್ಮಿಕಾ (Rashmika) ಅವರು ಹೊಸ ಹೊಸ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. `ಮಿಷನ್ ಮಜ್ನು’ (Mission Majnu) ಚಿತ್ರದಲ್ಲಿ ಕಣ್ಣಿಲ್ಲದ ಪಾಕ್ ಯುವತಿಯ ಪಾತ್ರವನ್ನು ರಶ್ಮಿಕಾ ಮಾಡಿದ್ದಾರೆ. ಅವರ ನಟನೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಖುಷಿಯಲ್ಲಿ ಎಲ್ಲರೂ ಮುಂಬೈನಲ್ಲಿ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಒಳಗೆ ತೆರಳುವುದಕ್ಕೂ ಮುನ್ನ ರಶ್ಮಿಕಾ ಹಾಗೂ ಸಿದ್ದಾರ್ಥ್ ಮಲ್ಹೋತ್ರ (Siddarth Malhotra) ಪಾಪರಾಜಿಗಳತ್ತ ಕೈ ಬೀಸಿದ್ದಾರೆ. ಇದನ್ನೂ ಓದಿ: ವಿಷ್ಣುವರ್ಧನ್ ಪರಭಾಷಾ ನಟರಾ?: ಫಿಲ್ಮ್ ಚೇಂಬರ್ ವಿರುದ್ಧ ವೀರಕಪುತ್ರ ಶ್ರೀನಿವಾಸ್ ಆಕ್ರೋಶ

    ಹೀಗೆ ಬಾಲಿವುಡ್ ಮತ್ತು ಸೌತ್ ಸಿನಿಮಾ ಅಂತಾ ಕನ್ನಡತಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಸದ್ಯ ʻಪುಷ್ಪ 2ʼ ಚಿತ್ರೀಕರಣದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಡ್ಡೆಗಳ ಮತ್ತೆ ನಿದ್ದೆಗೆಡಿಸಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

    ಪಡ್ಡೆಗಳ ಮತ್ತೆ ನಿದ್ದೆಗೆಡಿಸಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೋವನ್ನು ಹಂಚಿಕೊಂಡು ನಿಮ್ಮೊಂದಿಗೆ ಆದಷ್ಟು ಬೇಗ ಸೋಷಿಯಲ್ ಮೀಡಿಯಾ ಮೂಲಕ ಭೇಟಿ ಆಗುವುದಾಗಿ ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ನಿಮ್ಮೊಂದಿಗೆ ಮಾತನಾಡುವುದು ಅಂದರೆ ನನಗೆ ಎಲ್ಲಿಲ್ಲದ ಸಂಭ್ರಮ ಎಂದೂ ಅವರು ಹೇಳಿಕೊಂಡಿದ್ದಾರೆ.

    ಸದ್ಯ ರಶ್ಮಿಕಾ ಮಂದಣ್ಣ ನಟನೆಯ ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಬಿಡುಗಡೆಗೆ ಸಿದ್ಧವಾಗಿದೆ. ಈ ಬಿಡುಗಡೆಯ ಹೊತ್ತಿನಲ್ಲಿ ಇವೆಂಟ್ ಆಯೋಜನೆ ಮಾಡಿದ್ದು, ಆ ಕಾರ್ಯಕ್ರಮಕ್ಕಾಗಿಯೇ ರಶ್ಮಿಕಾ ವಿಶೇಷ ಕಾಸ್ಟ್ಯೂಮ್ ರೆಡಿ ಮಾಡಿಕೊಂಡಿದ್ದರು. ಅದೇ ಕಾಸ್ಟ್ಯೂಮ್ ನಲ್ಲಿ ಸೆರೆ ಹಿಡಿದ ಫೋಟೋಗಳನ್ನು ಅವರು ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಟಲ್ ಬಿಹಾರಿ ವಾಜಪೇಯಿ ರೋಲ್‌ನಲ್ಲಿ ಪಂಕಜ್ ತ್ರಿಪಾಠಿ: ಫಸ್ಟ್ ಲುಕ್ ಔಟ್

    ರಶ್ಮಿಕಾ ಹಂಚಿಕೊಂಡಿರುವ ಫೋಟೋಗಳ ಬಗ್ಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದು, ಸುಂದರಿಯನ್ನು ಹಾಡಿಹೊಗಳಿದ್ದಾರೆ. ನಿಮ್ಮೊಂದಿಗೆ ಮಾತನಾಡುವುದಕ್ಕಾಗಿ ನಾವೂ ಕೂಡ ಕಾಯುತ್ತಿದ್ದೇವೆ ಎಂದು ಕೆಲವರು ಬರೆದುಕೊಂಡಿದ್ದಾರೆ. ಆದಷ್ಟು ಬೇಗ ಅಂತಹ ಅವಕಾಶವನ್ನು ಒದಗಿಸಿ ಕೊಡಿ ಎಂದೂ ಅಭಿಮಾನಿಗಳು ಕೇಳಿಕೊಂಡಿದ್ದಾರೆ.

    ರಶ್ಮಿಕಾ ಮತ್ತು ಸಿದ್ಧಾರ್ಥ ಮಲ್ಹೋತ್ರ ಕಾಂಬಿನೇಷನ್ನ ‘ಮಿಷನ್ ಮಜ್ನು’ ಬಾಲಿವುಡ್ ಸಿನಿ ಅಂಗಳದಲ್ಲಿ ಕುತೂಹಲ ಮೂಡಿಸಿದೆ. ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ನಿರೀಕ್ಷೆ ಮೂಡಿಸಿದ್ದರಿಂದಲೇ ಅವರು ಕೂಡ ಪ್ರಚಾರ ಕಾರ್ಯದಲ್ಲಿ ಸಕ್ರೀಯರಾಗಿದ್ದಾರೆ. ಈ ಸಿನಿಮಾ ರಶ್ಮಿಕಾಗೆ ಬಾಲಿವುಡ್ ನಲ್ಲಿ ಒಳ್ಳೆಯ ಹೆಸರು ತಂದುಕೊಡಲಿದೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • `ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ

    `ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ

    ನ್ನಡತಿ ರಶ್ಮಿಕಾ ಮಂದಣ್ಣಗೆ(Rashmika Mandanna) ಅದ್ಯಾಕೋ ಇತ್ತೀಚೆಗೆ ಲಕ್ ಕೈಕೊಟ್ಟಂತಿದೆ. `ಗುಡ್ ಬೈ’ (Good Bye) ಚಿತ್ರದ ಸೋಲಿನ ನಂತರ ಮತ್ತೆ ಬಾಲಿವುಡ್‌ನಲ್ಲಿ ಮತ್ತೊಂದು ಹಿನ್ನೆಡೆಯಾಗಿದೆ. `ಕಾಂತಾರ’ ಮುಂದೆ ನೆಲೆಕಚ್ಚಿದ ʻಗುಡ್ ಬೈʼ ಚಿತ್ರದ ಕಲೆಕ್ಷನ್ ನೋಡಿ, ರಶ್ಮಿಕಾ ನಟನೆಯ ಮುಂದಿನ `ಮಿಷನ್ ಮಜ್ನು'(Mission Majnu) ಚಿತ್ರವನ್ನು ನೇರವಾಗಿ ಓಟಿಟಿಗೆ ರಿಲೀಸ್ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

    ಬಾಲಿವುಡ್ (Bollywood) ಸಿನಿಮಾಗಳಿಗೆ ಅದ್ಯಾಕೋ ಅದೃಷ್ಟ ಕೈಕೊಟ್ಟಿದೆ. ಬಾಲಿವುಡ್ ನೆಲದಲ್ಲಿ ಹಿಂದಿ ಸಿನಿಮಾಗಳಿಗೆ ನೆಲೆ ಇಲ್ಲದಂತೆಯಾಗಿದೆ. ಇತ್ತೀಚೆಗೆ ಕೆಜಿಎಫ್‌ 2, ಕಾಂತಾರ ಕಮಾಲ್‌ ಮಾಡಿತ್ತು.  ಹಿಂದಿ ಸಿನಿಮಾಗಳ ಕಲೆಕ್ಷನ್ ಗಮನಿಸಿ `ಮಿಷನ್ ಮಜ್ನು’ ನಿರ್ಮಾಪಕ ಮಹತ್ತರ ನಿರ್ಧಾರಕ್ಕೆ ಬಂದಿದ್ದಾರೆ. ಇತ್ತೀಚೆಗೆ ರಶ್ಮಿಕಾ ನಟನೆಯ ʻಗುಡ್‌ಬೈʼ ಮತ್ತು ಸಿದ್ಧಾರ್ಥ್ ನಟನೆಯ ʻಥ್ಯಾಂಕ್ ಗಾಢ್ʼ ಎರಡು ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿದೆ. ಹೀಗಿರುವಾಗ ಈ ಜೋಡಿಯ ಬಹುನಿರೀಕ್ಷಿತ ಚಿತ್ರ ʻಮಿಷನ್ ಮಜ್ನುʼ ಸಿನಿಮಾವನ್ನು ನೇರವಾಗಿ ಓಟಿಟಿಗೆ ರಿಲೀಸ್ ಮಾಡಲು ಯೋಚಿಸಿದ್ದಾರೆ. ʻಕಾಂತಾರʼ ರಿಲೀಸ್‌ ಆಗಿ 50ನೇ ದಿನದತ್ತ ಮುನ್ನುಗ್ಗುತ್ತಿದ್ದರು, ಚಿತ್ರದ ಕಲೆಕ್ಷನ್‌ನಲ್ಲಿ ತಗ್ಗುವ ಲಕ್ಷಣ ಕಾಣುತ್ತಿಲ್ಲ.

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಶ್ಮಿಕಾ ನಟನೆಯ ಮಿಷನ್ ಮಜ್ನು ಸಿನಿಮಾ ಜೂನ್ 2022ರಲ್ಲಿಯೇ ರಿಲೀಸ್ ಆಗಬೇಕಿತ್ತು. ಕೆಲ ಕಾರಣಗಳಿಂದ ರಿಲೀಸ್ ಡೇಟ್ ಕೂಡ ಮುಂದಕ್ಕೆ ಹಾಕಲಾಗಿತ್ತು. ಇತ್ತೀಚಿನ ಹಿಂದಿ ಸಿನಿಮಾಗಳ ಕಲೆಕ್ಷನ್ ನೋಡಿ, ʻಮಿಷನ್ ಮಜ್ನುʼ ಚಿತ್ರವನ್ನು ನೇರವಾಗಿ ಓಟಿಟಿಗೆ ರಿಲೀಸ್ ಮಾಡಲಿದ್ದಾರೆ. ಇದನ್ನೂ ಓದಿ:ಹಸೆಮಣೆ ಏರಲು ಸಜ್ಜಾದ `ಸತ್ಯ’ ಧಾರಾವಾಹಿ ಹೀರೋ ಸಾಗರ್

    2023ರಂದು ಜನವರಿ 18ರಂದು ಓಟಿಟಿಯಲ್ಲಿ ಈ ಸಿನಿಮಾವನ್ನ ನೋಡಬಹುದಾಗಿದೆ. ಸಿದ್ಧಾರ್ಥ್ ಮತ್ತು ರಶ್ಮಿಕಾ ಜೋಡಿ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಮುಂಬೈ: ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್ ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಇತ್ತೀಚೆಗೆ ರಶ್ಮಿಕಾ ಮತ್ತು ಬಾಲಿವುಡ್ ನಟ ವಿಕ್ಕಿ ಕೌಶಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತು ಪುರುಷರ ಒಳ ಉಡುಪಿನ ಬಗ್ಗೆಯಾಗಿದ್ದು, ಅದರಲ್ಲಿ ರಶ್ಮಿಕಾ ಯೋಗ ಇನ್‍ಸ್ಟ್ರಾಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ವಿಕ್ಕಿ ಅವರು ಯೋಗ ಕಲಿಯುವ ವಿದ್ಯಾರ್ಥಿಯಾಗಿದ್ದು, ಅವರ ಒಳ ಉಡುಪನ್ನೆ ರಶ್ಮಿಕಾ ನೋಡುವ ಅದರತ್ತ ಆಕರ್ಷಕರಾಗುವ ರೀತಿ ವೀಡಿಯೋವನ್ನು ಚಿತ್ರೀಕರಿಸಲಾಗಿತ್ತು. ಇದನ್ನೂ ಓದಿ: 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    ಈ ಜಾಹೀರಾತಿಗೆ ರಶ್ಮಿಕಾ ಅಭಿಮಾನಿಗಳಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರೋಲ್ ಪೇಜ್ ಗಳು ಈ ಜಾಹೀರಾತಿನಲ್ಲಿ ರಶ್ಮಿಕಾ ಅಭಿನಯದ ಬಗ್ಗೆ ಫುಲ್ ಟ್ರೋಲ್ ಮಾಡುತ್ತಿದ್ದಾರೆ.

    ಸಖತ್ ಬ್ಯುಸಿಯಾಗಿರುವ ರಶ್ಮಿಕಾ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದಾರೆ. ಅದು ಅಲ್ಲದೇ ಇತ್ತೀಚೆಗೆ ಬಾಲಿವುಡ್ ಗೂ ಹಾರಿರುವ ಇವರು ‘ಮಿಷನ್ ಮಜ್ನು’ ಸಿನಿಮಾ ಮುಗಿಸಿ, ಬಾಲಿವುಡ್ ನ ಮತ್ತೊಂದು ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆಗೂ ನಟಿಸುತ್ತಿದ್ದಾರೆ. ಇದನ್ನೂ ಓದಿ: ನಾಗಚೈತನ್ಯ ‘ಲವ್ ಸ್ಟೋರಿ’ ಲೀಕ್ ಆಯ್ತು

    ರಶ್ಮಿಕಾ ಅಭಿಮಾನಿಗಳು ಮಾತ್ರ ಇವರ ನಟನೆಯ ‘ಪುಷ್ಪ’ ನೋಡಲು ಕಾಯುತ್ತಿದ್ದು, ಕೊರೊನಾ ಮತ್ತು ಚಿತ್ರಮಂದಿರಗಳ ಸಮಸ್ಯೆಯಿಂದ ಚಿತ್ರದ ರಿಲೀಸ್ ಡೇಟ್ ಮುಂದೆ ಹೋಗುತ್ತಿದೆ.

  • ಮುಂಬೈನಲ್ಲಿ ಅದ್ದೂರಿ ಫ್ಲಾಟ್ ಖರೀದಿಸಿದ್ರಾ ರಶ್ಮಿಕಾ ಮಂದಣ್ಣ?

    ಮುಂಬೈನಲ್ಲಿ ಅದ್ದೂರಿ ಫ್ಲಾಟ್ ಖರೀದಿಸಿದ್ರಾ ರಶ್ಮಿಕಾ ಮಂದಣ್ಣ?

    ಬೆಂಗಳೂರು: ಸೌತ್ ಸಿನಿ ಇಂಡಸ್ಟ್ರಿಯಾ ಒನ್ ಆಫ್ ದಿ ಮೋಸ್ಟ್ ಬ್ಯುಸಿಯಸ್ಟ್ ನಟಿ ಅಂದರೆ ಅದು ರಶ್ಮಿಕಾ ಮಂದಣ್ಣ. ಪ್ರಸ್ತುತ ಕನ್ನಡ, ತೆಲುಗು, ತಮಿಳು ಮತ್ತು ಬಾಲಿವುಡ್‍ನಲ್ಲಿ ಚಿತ್ರರಂಗದಲ್ಲಿ ಅಭಿನಯಿಸುವ ಮೂಲಕ ರಾಷ್ಟ್ರಾದ್ಯಂತ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ತಮ್ಮ ಮೊದಲ ಬಾಲಿವುಡ್ ಸಿನಿಮಾ ಮಿಷನ್ ಮಜ್ನುಗೆ ನಟ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಬಣ್ಣಹಚ್ಚುತ್ತಿದ್ದಾರೆ ಎಂಬ ಸುದ್ದಿ ಪ್ರಕಟವಾಗಿತ್ತು. ಈಗ ರಶ್ಮಿಕಾ ಕುರಿತಂತೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ.

    ಹೌದು, ನಟಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಅದ್ದೂರಿಯಾಗಿರುವ ಫ್ಲಾಟ್ ಖರೀದಿಸಿದ್ದಾರೆ. ಈ ಫ್ಲಾಟ್ ಮುಂಬೈ ಉಪನಗರದಲ್ಲಿದೆ. ರಶ್ಮಿಕಾ ಅಭಿನಯಿಸುತ್ತಿರುವ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಈಗಾಗಲೇ ಮುಂಬೈನಲ್ಲಿ ನಡೆಯುತ್ತಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸುಲಭವಾಗಲೆಂದು ರಶ್ಮಿಕಾ ಮುಂಬೈನಲ್ಲಿ ಫ್ಲಾಟ್ ಖರೀದಿಸಿದ್ದಾರೆ. ಆದರೆ ಈ ಕುರಿತಂತೆ ರಶ್ಮಿಕಾ ಎಲ್ಲಿಯೂ ಇಲ್ಲಿಯವರೆಗೂ ಬಹಿರಂಗ ಪಡಿಸಿಲ್ಲ. ಅಲ್ಲದೆ ರಶ್ಮಿಕಾ ಕೈನಲ್ಲಿ ಹಲವು ಟಾಲಿವುಡ್ ಸಿನಿಮಾಗಳಿದ್ದು, ಹೈದರಾಬಾದ್‍ನಲ್ಲಿ ಕೂಡ ಫ್ಲಾಟ್ ಖರೀದಿಸಿದ್ದಾರೆ.

    ರಶ್ಮಿಕಾ ತಮ್ಮ ಬಾಲಿವುಡ್‍ನ 2ನೇ ಸಿನಿಮಾಕ್ಕೂ ಕೂಡ ಸಹಿ ಹಾಕಿದ್ದು, ಬಿಗ್ ಬಿ ಅಮಿತಾ ಬಚ್ಚನ್ ಜೊತೆ ಅಭಿನಯಿಸಲಿದ್ದಾರೆ. ಈ ಸಿನಿಮಾಕ್ಕೆ ಕ್ವೀನ್ ಸಿನಿಮಾದ ನಿರ್ದೇಶಕ ವಿಕಾಸ್ ಬಹ್ಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ತಂದೆ ಮಗಳ ಸಂಬಂಧವನ್ನು ಆಧಾರಿಸಿದ ಹಾಸ್ಯಮಯವಾದ ಕಥೆಯನ್ನು ಸಿನಿಮಾ ಹೊಂದಿದೆ ಎಂದು ಹೇಳಲಾಗುತ್ತಿದೆ.

    ಟಾಲಿವುಡ್‍ನಲ್ಲಿ ರಶ್ಮಿಕಾ ಮಂದಣ್ಣ ನಟ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾ ತೆಲಗು, ತಮಿಳು, ಮಲೆಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ. ಅಲ್ಲದೆ ಕಾಲಿವುಡ್‍ನಲ್ಲಿ ನಟ ಕಾರ್ತಿಕ್ ಜೊತೆ ಕೂಡ ಸುಲ್ತಾನ್ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಕನ್ನಡದಲ್ಲಿ ನಟ ಧ್ರುವ ಸರ್ಜಾ ಜೊತೆ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದ ಪೊಗರು ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.