Tag: Mission 1000 Beds

  • ‘ಯುವಿಕ್ಯಾನ್ ಮಿಶನ್ 1000 ಬೆಡ್ಸ್’ ಮೂಲಕ ಕೊರೊನಾ ಸೋಂಕಿತರಿಗೆ ಯುವಿ ನೆರವು

    ‘ಯುವಿಕ್ಯಾನ್ ಮಿಶನ್ 1000 ಬೆಡ್ಸ್’ ಮೂಲಕ ಕೊರೊನಾ ಸೋಂಕಿತರಿಗೆ ಯುವಿ ನೆರವು

    ನವದೆಹಲಿ: ಕೊರೊನಾ ಸೋಂಕಿತರಿಗೆ ಈಗಾಗಲೇ ಸಾಕಷ್ಟು ಕ್ರೀಡಾಪಟುಗಳು ನೆರವನ್ನು ನೀಡಿದ್ದಾರೆ. ಕೊರೊನಾ ಅರಂಭದಿಂದಲೂ ನೆರವಿನ ಹಸ್ತ ಚಾಚುತ್ತಾ ಬಂದಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಅಟಗಾರ ಯುವರಾಜ್ ಸಿಂಗ್ ‘ಯುವಿಕ್ಯಾನ್ ಮಿಶನ್ 1000 ಬೆಡ್ಸ್’ ಎಂಬ ಕಾರ್ಯಕ್ರಮದ ಮೂಲಕ ಇದೀಗ ಮತ್ತೆ ದೇಶಾದ್ಯಂತ ಇರುವ ಕೊರೊನಾ ಸೋಂಕಿತರ ನೆರವಿಗೆ ಮುಂದಾಗಿದ್ದಾರೆ.

    ಭಾರತ ತಂಡ ಏಕದಿನ ಮತ್ತು ಟಿ-20 ವಿಶ್ವಕಪ್‍ನಲ್ಲಿ ಜಯಭೇರಿ ಬಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವಿ, ಕಷ್ಟದಲ್ಲಿರುವ ಜನರಿಗೆ ಸದಾ ಸಹಾಯ ಮಾಡುತ್ತಿದ್ದರು. ಆದರೆ ಇದೀಗ ಕೊರೊನಾದಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮತ್ತು ಇತರ ಪ್ರಮುಖ ಸೇವೆಗಳು ಇಲ್ಲದೆ ಇದ್ದರೆ ಅಂತಹ ಆಸ್ಪತ್ರೆಗಳಿಗೆ ಬೇಕಾದ ಸೌಲಭ್ಯವನ್ನು ಒದಗಿಸುವ ಸಲುವಾಗಿ ಯುವಿಕ್ಯಾನ್ ಎಂಬ ಹೆಸರಿನ ಚಾರಿಟಿ ಮೂಲಕ ಮಿಶನ್ 1000 ಬೆಡ್ಸ್ ಎಂಬ ಹೊಸ ಕಾರ್ಯಕ್ರಮ ಆರಂಭಿಸಿದ್ದಾರೆ. ಇದನ್ನೂ ಓದಿ: 2007ರ ಟಿ20ಗೆ ನಾನು ನಾಯಕನಾಗುವ ನಿರೀಕ್ಷೆ ಹೊಂದಿದ್ದೆ, ಆದರೆ ಧೋನಿ ಆಯ್ಕೆಯಾದ್ರು – ಯುವಿ

    ಈ ಚಾರಿಟಿ ಮೂಲಕ ದೇಶದಾದ್ಯಂತ ಇರುವ ಆಸ್ಪತ್ರೆಗಳಿಗೆ ಅಗತ್ಯ ಔಷಧಿ ಮತ್ತು ವೈದ್ಯಕೀಯ ಸಲಕರಣೆಗಳನ್ನು ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಈ ಕುರಿತು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡ ಯುವರಾಜ್ ಸಿಂಗ್, ಕ್ರಿಟಿಕಲ್ ಕೇರ್ ಬೆಡ್ಸ್ ಮತ್ತು ವೈದ್ಯಕೀಯ ಉಪಕರಣದೊಂದಿಗೆ ಟ್ರಕ್ ಒಂದು ಡೆಲ್ಲಿಯಿಂದ ಹಿಮಾಚಲ ಪ್ರದೇಶಕ್ಕೆ ಹೊರಟಿದೆ. ದೇಶಾದ್ಯಂತ ಆರೋಗ್ಯ ಸೌಲಭ್ಯವನ್ನು ಹೆಚ್ಚಿಸುವ ನಮ್ಮ ಕಾರ್ಯಕ್ಕೆ ಕೈ ಜೋಡಿಸಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬ್ರಾಡಿ, ಓ ನನ್ನ ಗೆಳೆಯ ನೀನೊಂದು ದಂತಕಥೆ: ಯುವರಾಜ್ ಸಿಂಗ್

    ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಯುವರಾಜ್ ಸಿಂಗ್ ಅವರು ಹಲವು ಸಮಾಜಮುಖಿ ಕಾರ್ಯದಲ್ಲಿ ತೋಡಗಿಕೊಂಡಿದ್ದು, ಇದೀಗ ಕೊರೊನಾ ಕಷ್ಟಕಾಲದಲ್ಲಿ ಸಂಕಷ್ಟದಲ್ಲಿರುವ ಸಾವಿರಾರು ಮಂದಿಗೆ ನೆರವಿನ ಹಸ್ತ ಚಾಚಿದ್ದಾರೆ.