ಮಾಸ್ಕೋ: ಉಕ್ರೇನ್‌ಗೆ ಲಾಂಗ್ ರೇಂಜ್ ಕ್ಷಿಪಣಿಗಳನ್ನು ಅಮೆರಿಕ ಪೂರೈಸಿತು ಎಂದಾದರೆ, ನಾವು ಕೂಡಾ ಒಂದು ಸೂಕ್ತ ನಿರ್ಧಾರ ಮಾಡಿ, ಹೊಸದೊಂದು ಗುರಿಯನ್ನೇ ಹೊಡೆಯುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್‌ಗೆ ಅಮೆರಿಕ ಸುಧಾರಿತ ಶಸ್ತ್ರಾಸ್ತ್ರಗಳನ್ನು ವಿತರಿಸುವ ನಿರ್ಧಾರವನ್ನು ಖಂಡಿಸಿದ ಪುಟಿನ್, ಯುದ್ಧವನ್ನು ಇನ್ನೂ ಹೆಚ್ಚಿನ ಕಡೆಗೆ ವಿಸ್ತರಿಸುವುದಾಗಿ ತಿಳಿಸಿದ್ದಾರೆ. ನಾವು ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡು, ನಮ್ಮ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಬಳಸುತ್ತೇವೆ ಹಾಗೂ ಇಲ್ಲಿಯವರೆಗೂ ಹೊಡೆದಿರದ ಗುರಿಗಳನ್ನು ಹೊಡೆಯುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಬೈಡನ್ ನಿವಾಸದ ಮೇಲೆ ವಿಮಾನ ಹಾರಾಟ – ದಾಳಿ ಭೀತಿಯಿಂದ ಸ್ಥಳಾಂತರ
ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕ ಯುದ್ಧಪೀಡಿತ ಉಕ್ರೇನ್‌ಗೆ ಸುಧಾರಿತ ಲಾಂಗ್ ರೇಂಜ್ ರಾಕೆಟ್ ಸಿಸ್ಟಮ್ ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಒದಗಿಸಿ ಸಹಾಯ ಮಾಡುವುದಾಗಿ ತಿಳಿಸಿತ್ತು. ಇದರ ಬೆನ್ನಲ್ಲೇ ಪುಟಿನ್ ಇದೀಗ ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಸಹಾಯ ಮಾಡುವುದನ್ನು ವಿರೋಧಿಸಿ, ಬೆದರಿಕೆ ಒಡ್ಡಿದ್ದಾರೆ. ಇದನ್ನೂ ಓದಿ: ಪರಮಾಣು ಪರೀಕ್ಷೆ ಆತಂಕದ ನಡುವೆಯೇ ಇನ್ನೊಂದು ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ
ರಷ್ಯಾ ಅಧ್ಯಕ್ಷ ಹೊಸ ಗುರಿಗಳನ್ನು ಹೊಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ನಿಖರವಾಗಿ ಯಾವ ಗುರಿ, ವ್ಯಾಪ್ತಿ ಅಥವಾ ಉಕ್ರೇನ್ ಹೊರತುಪಡಿಸಿ ಇತರ ದೇಶವೋ ಎಂಬುದರ ಬಗ್ಗೆ ಸ್ಪಷ್ಟಪಡಿಸಿಲ್ಲ.
ಸಿಯೋಲ್: ಉತ್ತರ ಕೊರಿಯಾ ಪರಮಾಣು ಪರೀಕ್ಷೆ ನಡೆಸಲು ಯೋಜಿಸುತ್ತಿದೆ ಎಂಬ ಆತಂಕಕಾರಿ ಸಂಗತಿಯ ನಡುವೆಯೇ ಭಾನುವಾರ ಮತ್ತೊಂದು ಅಪರಿಚಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ.
ಜಪಾನ್ ಮಾಹಿತಿ ಉಲ್ಲೇಖಿಸಿ, ದಕ್ಷಿಣ ಕೊರಿಯಾ ಅಧಿಕಾರಿಗಳು ಉತ್ತರ ಕೊರಿಯಾ ಅಪರಿಚಿತ ಕ್ಷಿಪಣಿಯನ್ನು ತನ್ನ ಪೂರ್ವ ಸಮುದ್ರದ ಕಡೆ ಹಾರಿಸಿದೆ ಎಂದು ತಿಳಿಸಿದ್ದಾರೆ. ಆದರೆ ಕ್ಷಿಪಣಿಯನ್ನು ಎಲ್ಲಿಂದ ಹಾರಿಸಲಾಯಿತು ಹಾಗೂ ಯಾವ ಗುರಿಗೆ ಹಾರಿಸಲಾಯಿತು ಎಂಬ ಬಗ್ಗೆ ತಿಳಿಸಿಲ್ಲ. ಇದನ್ನೂ ಓದಿ: ಕಂಟೈನರ್ ಡಿಪೋದಲ್ಲಿ ಬೆಂಕಿ: 16 ಸಾವು, 450ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಉತ್ತರ ಕೊರಿಯಾ ಆರ್ಥಿಕ ನಿರ್ಬಂಧಗಳನ್ನು ಎಸುರಿಸುತ್ತಿದ್ದರೂ ಈ ವರ್ಷ ತನ್ನ ಶಸ್ತ್ರಾಸ್ತ್ರ ನವೀಕರಣ ಯೋಜನೆಗಳನ್ನು ದ್ವಿಗುಣಗೊಳಿಸಿದೆ. ತನ್ನ 7ನೇ ಪರಮಾಣು ಕ್ಷಿಪಣಿ ಪರೀಕ್ಷೆಯನ್ನು ಶೀಘ್ರವೇ ನಡೆಸಲಿದೆ ಎಂದು ಅಮೆರಿಕ ಹಾಗೂ ದಕ್ಷಿಣ ಕೊರಿಯ ಅಧಿಕಾರಿಗಳು ಕಳೆದ 1 ವಾರದಿಂದ ಹೇಳುತ್ತಲೇ ಇದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಹತ್ಯೆಗೆ ಸಂಚು- ಬಿಗಿ ಭದ್ರತೆ
ಕಳೆದ ತಿಂಗಳು 3 ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪರೀಕ್ಷಿಸಿದ್ದು, ಅವುಗಳಲ್ಲಿ ಅತಿದೊಡ್ಡ ಖಂಡಾಂತರ ಕ್ಷಿಪಣಿ ಹ್ವಾಸಾಂಗ್-17 ಕೂಡಾ ಇತ್ತು ಎಂದು ತಿಳಿದುಬಂದಿದೆ.
ವಾಷಿಂಗ್ಟನ್: ರಷ್ಯಾದ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್‌ಗೆ ಅಮೆರಿಕ ಸುಧಾರಿತ ರಾಕೆಟ್ ಸಿಸ್ಟಮ್‌ಗಳನ್ನು ಕಳುಹಿಸಲು ಒಪ್ಪಿಕೊಂಡಿದೆ.
ಬುಧವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ 700 ಮಿಲಿಯನ್ ಡಾಲರ್(ಸುಮಾರು 5 ಸಾವಿರ ಕೋಟಿ ರೂ.) ಮೌಲ್ಯದ ಶಸ್ತ್ರಾಸ್ತ್ರ ಪ್ಯಾಕೇಜ್ ಅನ್ನು ಉಕ್ರೇನ್‌ಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಅಮೆರಿಕ ಕಳುಹಿಸುತ್ತಿರುವ ಸುಧಾರಿತ ಲಾಂಗ್‌ರೇಂಜ್ ರಾಕೆಟ್ ಸಿಸ್ಟಮ್‌ಗಳು ರಷ್ಯಾದ ಕ್ಷಿಪಣಿಗಳನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪರಮಾಣು ಅಸ್ತ್ರ ಬಳಸಿದರೆ, ಯುಎನ್‌ಗೆ ನಿರ್ಬಂಧ ಕಠಿಣಗೊಳಿಸಲು ಯತ್ನಿಸುತ್ತೇವೆ: ಉತ್ತರ ಕೊರಿಯಾಗೆ ಅಮೆರಿಕ ಎಚ್ಚರಿಕೆ
ಅಮೆರಿಕ ಕಳುಹಿಸುತ್ತಿರುವ ಸುಧಾರಿತ ರಾಕೆಟ್ ಸಿಸ್ಟಮ್‌ಗಳು 80 ಕಿಮೀ ದೂರದ ಗುರಿಯನ್ನು ನಿಖರವಾಗಿ ಹೊಡೆಯಬಲ್ಲದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೈಡನ್, ಉಕ್ರೇನ್‌ಗೆ ಹೆಚ್ಚು ಸುಧಾರಿತ ರಾಕೆಟ್ ಸಿಸ್ಟಮ್ ಹಾಗೂ ಇತರ ಅಸ್ತ್ರಗಳನ್ನು ಒದಗಿಸಲು ನಿರ್ಧರಿಸಿದ್ದೇನೆ. ಅವು ಉಕ್ರೇನ್‌ಗೆ ತನ್ನ ಮೇಲೆ ದಾಳಿ ನಡೆಸಬಹುದಾದ ಗುರಿಯನ್ನು ನಿಖರವಾಗಿ ಹೊಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದೆ. ಈ ಮಧ್ಯೆ ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ನಿರಂತರವಾಗಿ ನಿರ್ಬಂಧನೆಗಳನ್ನು ವಿಧಿಸುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ಮಿಂಚಿನ ವೇಗದ ಹೈಪರ್ಸಾನಿಕ್ ಪರಮಾಣು ಕ್ಷಿಪಣಿಯನ್ನು ರಷ್ಯಾ ಉಡಾಯಿಸಿದ್ದು, ದೃಶ್ಯಾವಳಿಗಳನ್ನು ರಷ್ಯಾ ಬಿಡುಗಡೆ ಮಾಡಿದೆ. ರಷ್ಯಾ ಹಂಚಿಕೊಂಡಿರುವ ಈ ಫೋಟೋ ಎದುರಾಳಿ ದೇಶಗಳ ಮೇಲೆ ಒಂದೇ ಹೊಡೆತದಲ್ಲಿ ದಾಳಿ ನಡೆಸಬಲ್ಲದು ಎಂಬುದನ್ನು ಪ್ರದರ್ಶಿಸಿದೆ.
ಶ್ವೇತ ಸಮುದ್ರದಿಂದ ಯುದ್ಧನೌಕೆ ಉಡಾವಣೆ: ಮ್ಯಾಕ್ 9 `ಜಿರ್ಕಾನ್’ ಅಥವಾ `ಸಿರ್ಕಾನ್’ ಹೆಸರಿನ ಈ ಕ್ಷಿಪಣಿಯನ್ನು ಬಿಳಿ ಸಮುದ್ರದಲ್ಲಿ ಅಡ್ಮಿರಲ್ ಗೋರ್ಶ್ಕೋವ್ ಯುದ್ಧನೌಕೆಯಿಂದ ಉಡಾವಣೆ ಮಾಡಲಾಗಿದೆ. ಯುದ್ಧದ ನಡುವೆಯೇ ಈ ದೃಶ್ಯಾವಳಿಗಳನ್ನು ಬಿಡುಗಡೆ ಮಾಡುವ ಉದ್ದೇಶವೆಂದರೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಒಂದು ವೇಳೆ ಯಾವುದೇ ದೇಶ ಹಸ್ತಕ್ಷೇಪ ಮಾಡಿದರೆ, ನಂತರ ಈ ಪರಮಾಣು ಕ್ಷಿಪಣಿಗಳನ್ನು ಬಳಸಲಾಗುವುದು ಎಂಬುದನ್ನು ರಷ್ಯಾ ತೋರಿಸಿದೆ. ಇದನ್ನೂ ಓದಿ: ಜುಲೈ – ಆಗಸ್ಟ್‌ನಲ್ಲೇ ಭಾರತಕ್ಕೆ ಎದುರಾಗಲಿದೆ ವಿದ್ಯುತ್ ಕೊರತೆ – CREA ವರದಿ ಹೇಳಿದ್ದೇನು?
ಮಿಂಚಿನ ವೇಗ: ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಈ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿ ಎಂದು ಘೋಷಿಸಿದ್ದರು. ಇದೇ ವರ್ಷ ಈ ಕ್ಷಿಪಣಿಯನ್ನು ಸೇನೆಗೆ ಸೇರ್ಪಡೆ ಮಾಡಲಾಗಿದೆ. ಪಾಶ್ಚಿಮಾತ್ಯ ದೇಶಗಳ ಬಳಿ ಈ ಕ್ಷಿಪಣಿಗಳಿಗೆ ಯಾವುದೇ ಉತ್ತರವಿಲ್ಲ ಎಂದು ರಷ್ಯಾ ತಜ್ಞರು ಹೇಳುತ್ತಾರೆ. ರಷ್ಯಾದ ಜಿರ್ಕಾನ್ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆಯ ನಂತರ ಅದರ ರಹಸ್ಯ ವೈಶಿಷ್ಟ್ಯಗಳು ಬಹಿರಂಗಗೊಂಡಿವೆ ಎಂದು ರಷ್ಯಾ ಮಾಧ್ಯಮಗಳು ಮಾಹಿತಿ ಪ್ರಸಾರ ಮಾಡಿವೆ. ಇದನ್ನೂ ಓದಿ: 4 ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ನಾಪತ್ತೆ
ಹೀಗಿದೆ ವೇಗದ ಮಿತಿ: ಸಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿಯು ಶ್ವೇತ ಸಮುದ್ರದಲ್ಲಿ ಸುಮಾರು 1,000 ಕಿಮೀ ದೂರದಲ್ಲಿರುವ ನೌಕೆಯನ್ನು ಉಡಾಯಿಸುವ ಗುರಿ ಹೊಂದಿದೆ. ಕ್ಷಿಪಣಿಯು ಶಬ್ದದ ವೇಗಕ್ಕಿಂತ 9 ಪಟ್ಟು ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಮಾಸ್ಕೋ: ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿ ತಿಂಗಳಾಗುತ್ತಿದೆ. ಈ ನಡುವೆಯೇ ರಷ್ಯಾ ಹೊಸ ಪರಮಾಣು ಸಾಮರ್ಥ್ಯದ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿದೆ. ಇದು ಭೂಮಿಯ ಯಾವುದೇ ಭಾಗವನ್ನೂ ತಲುಪುವ ಸಾಮರ್ಥ್ಯ ಹೊಂದಿದೆ.
ವರ್ಷಗಳಿಂದ ಅಭಿವೃದ್ಧಿ ಪಡಿಸಲಾಗಿರುವ ಸರ್ಮ್ಯಾಟ್ ಕ್ಷಿಪಣಿಯನ್ನು ರಷ್ಯಾದ ಪ್ಲೆಸೆಟ್ಸ್ಕ್ ನಿಂದ ಇದೇ ಮೊದಲ ಬಾರಿಗೆ ಪರೀಕ್ಷಾರ್ಥವಾಗಿ ಉಡಾವಣೆ ಮಾಡಲಾಗಿದೆ. ಇದು ಸುಮಾರು 6,000 ಕಿ.ಮೀ ದೂರದ ಕಮ್ಚಾಟ್ಕಾ ದ್ವೀಪದಲ್ಲಿನ ಗುರಿಯನ್ನು ಹೊಡೆದಿದೆ ಎಂದು ರಷ್ಯಾ ಬುಧವಾರ ತಿಳಿಸಿದೆ.
ಈ ಹೊಸ ಕ್ಷಿಪಣಿ ಅತ್ಯುನ್ನತ ಯುದ್ಧತಂತ್ರ ಹಾಗೂ ತಾಂತ್ರಿಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಕ್ಷಿಪಣಿ-ವಿರೋಧಿ ರಕ್ಷಣೆಯ ಎಲ್ಲಾ ಆಧುನಿಕ ವಿಧಾನಗಳನ್ನು ಜಯಿಸಲು ಸಮರ್ಥವಾಗಿದೆ. ಜಗತ್ತಿನಲ್ಲಿ ಇಂತಹ ಸಾಮರ್ಥ್ಯದ ಕ್ಷಿಪಣಿಯನ್ನು ಎಲ್ಲಿಯೂ ಮಾಡಲಾಗಿಲ್ಲ, ಮಾಡಿದರೂ ದೀರ್ಘ ಸಮಯದ ವರೆಗೆ ಯಾರಿಂದಲೂ ತಯಾರಿಸಲು ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಇದು ನಿಜವಾಗಿಯೂ ಅಪರೂಪದ ಆಯುಧವಾಗಿದ್ದು, ನಮ್ಮ ಶಸ್ತ್ರಾಸ್ತ್ರ ಪಡೆಯನ್ನು ಬಲಿಷ್ಟವಾಗಿಸಲು ಸಹಕಾರಿಯಾಗಿದೆ. ಬಾಹ್ಯ ಬೆದರಿಕೆಗೆ ಇದೊಂದು ತಕ್ಕ ಉತ್ತರವಾಗಿದೆ ಎಂದು ಪುಟಿನ್ ಹೇಳಿದರು.
ಪರಮಾಣು ಸಾಮರ್ಥ್ಯದ ಕ್ಷಿಪಣಿಯನ್ನು ಪರೀಕ್ಷಿಸಿರುವ ರಷ್ಯಾ ಇತರ ದೇಶಗಳನ್ನು ಆಶ್ಚರ್ಯಗೊಳಿಸಲು ಸಾಧ್ಯವೇ ಇಲ್ಲ. ರಷ್ಯಾ ಏನು ಬೇಕಾದರೂ ಮಾಡಬಹುದು ಎಂಬುದು ಉಕ್ರೇನ್ ಮೇಲೆ ದಾಳಿ ನಡೆಸಿದಾಗಿನಿಂದ ಇತರ ದೇಶಗಳಿಗೆ ಖಾತ್ರಿಯಾಗಿದೆ. ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿತ್ತು. ಸಾವಿರಾರು ಸೈನಿಕರು, ಜನರು ಯುದ್ಧದಲ್ಲಿ ಜೀವತೆತ್ತಿದ್ದರೂ ರಷ್ಯಾ ಇಲ್ಲಿ ವರೆಗೆ ಉಕ್ರೇನ್‌ನ ಯಾವುದೇ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಸಂಪ್ರದಾಯಕ್ಕೆ ಬ್ರೇಕ್ – ಸೂರ್ಯಾಸ್ತದ ಬಳಿಕ ಕೆಂಪು ಕೋಟೆಯಲ್ಲಿ ಮೋದಿ ಭಾಷಣ
ಏನಿದು ಬ್ಯಾಲಿಸ್ಟಿಕ್ ಕ್ಷಿಪಣಿ?
ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ಮತ್ತೆ ಭೂಮಿಯನ್ನು ಪ್ರವೇಶಿಸಿ ಭೂಮಿಗೆ ಅಪ್ಪಳಿಸುವ ಕ್ಷಿಪಣಿಗಳಮನ್ನು ಬ್ಯಾಲಿಸ್ಟಿಕ್ ಕ್ಷಿಪಣಿ ಎಂದು ಕರೆಯಲಾಗುತ್ತಿದೆ. ಈ ಕ್ಷಿಪಣಿಗಳು ವೇಗವಾಗಿ ಭೂಮಿಯ ವಾತಾವರಣ ಮರು ಪ್ರವೇಶಿಸುವಾಗ ವಾತಾವರಣದೊಂದಿಗೆ ಘರ್ಷಣೆಯುಂಟಾಗಿ ಹೆಚ್ಚಿನ ತಾಪಮಾನದಿಂದಾಗಿ ಶತ್ರುಗಳ ಕ್ಷಿಪಣಿಗಳನ್ನು ನಾಶಮಾಡಲು ಸಾಧ್ಯವಾಗುತ್ತದೆ.
ಕ್ಷಿಪಣಿಗಳು ಭೂಮಿ ಪ್ರವೇಶಿಸುವಾಗ ಭೂ ಗುರುತ್ವಾಕರ್ಷಣೆಗೆ ಒಳಗಾಗುತ್ತದೆ. ಹೀಗಾಗಿ ನಿರ್ಧಿಷ್ಟ ಗುರಿಯನ್ನು ತಲುಪುವಂತಾಗಲು ಗ್ಲೋಬಲ್ ಪೊಸಿಷನ್ ಸಿಸ್ಟಮ್(ಜಿಪಿಎಸ್) ಅಳವಡಿಸಲಾಗಿರುತ್ತದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭೂಮಿಯಿಂದ, ಆಕಾಶದಿಂದ, ಸಮುದ್ರದಿಂದ, ಜಲಾಂತಗಾರ್ಮಿಯಿಂದ ಹಾಗೂ ಚಲಿಸುವ ವಾಹನಗಳ ಮೂಲಕವೂ ಉಡಾಯಿಸಬಹುದಾಗಿದೆ. ಶಬ್ದದ ವೇಗಕ್ಕಿಂತಲೂ 5 ಪಟ್ಟು ವೇಗವನ್ನು ಹೊಂದಿರುವ ಕಾರಣ ಇವುಗಳಿಗೆ ಹೈಪರ್ ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿ ಎಂದು ಕರೆಯಲಾಗುತ್ತದೆ.
ನವದೆಹಲಿ: ಭಾರತದ ಕ್ಷಿಪಣಿ ಪಾಕಿಸ್ತಾನದಲ್ಲಿ ಆಕಸ್ಮಿಕವಾಗಿ ಸ್ಫೋಟವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಭಾರತವು ತನ್ನ ಶಸ್ತ್ರಾಸ್ತ್ರ ವ್ಯವಸ್ಥೆಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಾರ್ಚ್ 9, 2022 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ನಾನು ಆಗಸ್ಟ್‌ನಲ್ಲಿ ಸದನಕ್ಕೆ ಸಂಕ್ಷಿಪ್ತವಾಗಿ ಮಾಹಿತಿ ನೀಡಲು ಬಯಸುತ್ತೇನೆ. ತಪಾಸಣೆಯ ಸಮಯದಲ್ಲಿ ಕ್ಷಿಪಣಿ ಅಜಾಗರೂಕತೆಯಿಂದ ಉಡಾವಣೆಗೊಂಡಿದೆ. ನಂತರ ಕ್ಷಿಪಣಿ ಪಾಕಿಸ್ತಾನದ ಭೂಪ್ರದೇಶದೊಳಗೆ ಬಂದಿಳಿದಿದೆ ಎಂದು ತಿಳಿಸಿದ್ದಾರೆ. ಆಕಸ್ಮಿಕವಾಗಿ ಘಟನೆ ಸಂಭವಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಸದ್ಯ ಈ ಅವಘಡದಿಂದ ಯಾವುದೇ ಹಾನಿ, ಪ್ರಾಣಾಪಾಯ ಸಂಭವಿಸಿಲ್ಲ. ಇದು ಸಮಾಧಾನದ ವಿಚಾರ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ವಿಚಾರವನ್ನ ಅನಗತ್ಯವಾಗಿ ವಿವಾದ ಮಾಡದೆ ಸ್ವಾಗತಿಸಬೇಕು: ಬಿಎಸ್‍ವೈ
ಭಾರತದ ಶಸ್ತ್ರಸ್ತ್ರ ಪಡೆಗಳು ಉತ್ತಮ ತರಬೇತಿ ಪಡೆದಿದ್ದು, ಶಿಸ್ತುಬದ್ಧವಾಗಿವೆ. ಘಟನೆಯ ತನಿಖೆಯ ನಂತರ ಶಸ್ತ್ರಾಸ್ತ್ರ ವ್ಯವಸ್ಥೆಯಲ್ಲಿ ಕಂಡುಬರುವ ಯಾವುದೇ ನ್ಯೂನತೆಗಳನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
ಭಾರತೀಯ ರಕ್ಷಣಾ ಸಚಿವಾಲಯವು ಘಟನೆಯ ಬಗ್ಗೆ ನ್ಯಾಯಾಲಯದ ತನಿಖೆಗೆ ಆದೇಶಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ವಾಷಿಂಗ್ಟನ್: ಪಾಕಿಸ್ತಾನದಲ್ಲಿ ಭಾರತದ ಕ್ಷಿಪಣಿಯೊಂದು ಬಿದ್ದಿದ್ದು, ಆಕಸ್ಮಿಕವಲ್ಲದೆ ಬೇರೇನೂ ಅಲ್ಲ ಎಂದು ಅಮೆರಿಕ ಹೇಳಿದೆ.
ಎರಡು ದಿನಗಳ ಹಿಂದೆ ಭಾರತೀಯ ಸೂಪರ್ಸಾನಿಕ್ (supersonic missile) ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ, ಈ ಕ್ಷಿಪಣಿ ಪಾಕಿಸ್ತಾನಕ್ಕೆ ಬಂದು ಬಿದ್ದಿತ್ತು. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತ ಸರ್ಕಾರ, ಇದು ಆಕಸ್ಮಿಕವಾಗಿ ಉಡಾವಣೆ ಆಗಿದೆ. ಮಾರ್ಚ್ 9 ರಂದು ತಾಂತ್ರಿಕ ದೋಷದಿಂದಾಗಿ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆ ಆಗಿತ್ತು. ಘಟನೆಯು ತೀವ್ರ ವಿಷಾದನೀಯವಾಗಿದ್ದರೂ, ಅಪಘಾತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನದ ವಿಷಯವಾಗಿದೆ ಎಂದು ತಿಳಿಸಿತ್ತು. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಿತ್ತು ಭಾರತದ ಕ್ಷಿಪಣಿ- ಭಾರತ ಹೇಳಿದ್ದೇನು?
ಈ ಘಟನೆ ಬಗ್ಗೆ ನಿಮಗೆ ವಿವರಿಸುವಂತೆ ಭಾರತೀಯ ರಕ್ಷಣಾ ಸಚಿವಾಲಯಕ್ಕೆ ತಿಳಿಸಿದೇವು. ಹಾಗಾಗಿ ಮಾರ್ಚ್ 9 ರಂದು ನಿಖರವಾಗಿ ಏನಾಯಿತು ಎಂಬುದರ ಬಗ್ಗೆ ವಿವರಣೆ ನೀಡಿದರು. ಅದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ನಾವು ನೀಡಬೇಕಾಗಿಲ್ಲ ಎಂದು ಹೇಳಿದ್ದಾರೆ.
ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಿದ್ದ ಭಾರತದ ಕ್ಷಿಪಣಿ ಬಗ್ಗೆ ಪ್ರತ್ಯುತ್ತರ ನೀಡಬಹುದಿತ್ತು. ಆದರೆ ಪಾಕಿಸ್ತಾನವು ಸಂಯಮವನ್ನು ಅನುಸರಿಸುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದರು.
ಪಂಜಾಬ್‍ನ ಹಫೀಜಾಬಾದ್ ಜಿಲ್ಲೆಯಲ್ಲಿ ಜಂಟಿ ಪ್ರತಿಪಕ್ಷಗಳು ತಮ್ಮ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಘಟನೆಯ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು. ಮಿಯಾನ್ ಚನ್ನುನಲ್ಲಿ ಭಾರತೀಯ ಕ್ಷಿಪಣಿ ಬಿದ್ದ ನಂತರ ನಾವು ಪ್ರತಿಕ್ರಿಯಿಸಬಹುದಿತ್ತು. ಆದರೆ ನಾವು ಸಂಯಮವನ್ನು ಅನುಸರಿಸುತ್ತೇವೆ ಎಂದರು.
ಮಾರ್ಚ್ 9ರಂದು ಭಾರತೀಯ ಸೂಪರ್ಸಾನಿಕ್ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ, ಈ ಕ್ಷಿಪಣಿ ಪಾಕಿಸ್ತಾನಕ್ಕೆ ಬಂದು ಬಿದ್ದಿತ್ತು. ಭಾರತೀಯ ಸೂಪರ್ಸಾನಿಕ್ ಕ್ಷಿಪಣಿಯು ಸಿರ್ಸಾದಿಂದ ಉಡಾವಣೆಗೊಂಡು ಪಾಕಿಸ್ತಾನದ ಭೂಪ್ರದೇಶದ ಸುಮಾರು 124 ಕಿ.ಮೀ. ದೂರದಲ್ಲಿರುವ, ಖನೇವಾಲ್ ಜಿಲ್ಲೆಯ ಮಿಯಾನ್ ಚನ್ನು ಬಳಿ ಇಳಿದಿತ್ತು. ಆದರೆ ಯಾವುದೇ ಸಾವು ನೋವು ಆಗಿರಲಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: 2 ವರ್ಷಗಳ ಬಳಿಕ ಕಳೆಗಟ್ಟಲಿದೆ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ
ಇದಕ್ಕೂ ಮೊದಲು ಪ್ರತಿಕ್ರಿಯಿಸಿದ್ದ ಪಾಕಿಸ್ತಾನದ ವಿದೇಶಾಂಗ ಕಚೇರಿ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಂದಿಳಿದ ಕ್ಷಿಪಣಿಯ ಕುರಿತು ಭಾರತದ ಸರಳವಾದ ವಿವರಣೆ ನೀಡಿದೆ. ಇದರಿಂದ ನಾವು ತೃಪ್ತರಾಗಿಲ್ಲ. ಘಟನೆಯ ಸುತ್ತಲಿನ ಸತ್ಯಗಳನ್ನು ನಿಖರವಾಗಿ ಸ್ಥಾಪಿಸಲು ಜಂಟಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಇಸ್ಲಾಮಾಬಾದ್: ಭಾರತೀಯ ಸೂಪರ್ಸಾನಿಕ್ (supersonic missile) ಕ್ಷಿಪಣಿ (Missile) ಆಕಸ್ಮಿಕವಾಗಿ ಉಡಾವಣೆಯಾಗಿ, ಈ ಕ್ಷಿಪಣಿ ಪಾಕಿಸ್ತಾನಕ್ಕೆ ಬಂದು ಬಿದ್ದಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತ ಸರ್ಕಾರ, ಇದು ಆಕಸ್ಮಿಕವಾಗಿ ಉಡಾವಣೆ ಆಗಿದೆ. ಮಾರ್ಚ್ 9 ರಂದು ತಾಂತ್ರಿಕ ದೋಷದಿಂದಾಗಿ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆ ಆಗಿತ್ತು. ಘಟನೆಯು ತೀವ್ರ ವಿಷಾದನೀಯವಾಗಿದ್ದರೂ, ಅಪಘಾತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನದ ವಿಷಯವಾಗಿದೆ ಎಂದು ರಕ್ಷಣಾ ಸಚಿವಾಲಯ ಇಂದು ಹೇಳಿಕೆಯಲ್ಲಿ ತಿಳಿಸಿದೆ.
ಈ ಕ್ಷಿಪಣಿ ಸಂಬಂಧಿಸಿದಂತೆ ಪಾಕಿಸ್ತಾನ ಇಂದು ಭಾರತೀಯ ರಾಯಭಾರಕ್ಕೆ ಕರೆ ಮಾಡಿದ್ದು, ಈ ಘಟನೆಯನ್ನು ತಿಳಿಸಿದೆ. ಈ ಘಟನೆಯ ಬಗ್ಗೆ ಪಾರದರ್ಶಕ ತನಿಖೆಗೆ ಪಾಕ್ ಒತ್ತಾಯಿಸಿದೆ.
India regrets accidental firing of missile which landed in Pakistan
ನಡೆದಿದ್ದೇನು?: ಮಾರ್ಚ್ 9 ರಂದು ಸಂಜೆ 6:43 ಕ್ಕೆ ಭಾರತದ ಸೂರತ್‍ಗಢದಿಂದ ಭಾರತೀಯ ಸೂಪರ್ಸಾನಿಕ್ ಫ್ಲೈಯಿಂಗ್ ಆಬ್ಜೆಕ್ಟ್ ಪಾಕಿಸ್ತಾನಕ್ಕೆ ಪ್ರವೇಶಿಸಿದೆ. ಈ ಘಟನೆಯ ಬಗ್ಗೆ ಭಾರತದ ಚಾರ್ಜ್ ಡಿಅಫೇರ್ಸ್ ಎಂ ಸುರೇಶ್ ಕುಮಾರ್ ಅವರಿಗೆ ಗುರುವಾರ ರಾತ್ರಿ ತಿಳಿಸಲಾಗಿದೆ. ಇಂತಹ ನಿರ್ಲಕ್ಷ್ಯದ ಅಹಿತಕರ ಪರಿಣಾಮಗಳ ಬಗ್ಗೆ ಎಚ್ಚರದಿಂದಿರಬೇಕು. ಭವಿಷ್ಯದಲ್ಲಿ ಇಂತಹ ಉಲ್ಲಂಘನೆಗಳು ಮರುಕಳಿಸುವುದನ್ನು ತಪ್ಪಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತಕ್ಕೆ ಎಚ್ಚರಿಕೆ ನೀಡಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ
ಭಾರತೀಯ ಸೂಪರ್ಸಾನಿಕ್ ಕ್ಷಿಪಣಿಯು ಸಿರ್ಸಾದಿಂದ ಉಡಾವಣೆಗೊಂಡು ಪಾಕಿಸ್ತಾನದ ಭೂಪ್ರದೇಶದ ಸುಮಾರು 124 ಕಿ.ಮೀ. ದೂರದಲ್ಲಿರುವ, ಖನೇವಾಲ್ ಜಿಲ್ಲೆಯ ಮಿಯಾನ್ ಚನ್ನು ಬಳಿ ಇಳಿಯಿತು ಎಂದು ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಒಂದು ದಿನದ ನಂತರ ಭಾರತದಲ್ಲಿ ಹೇಳಿಕೆ ಬಂದಿದೆ. ಕ್ಷಿಪಣಿಯು 40,000 ಅಡಿ ಎತ್ತರದಲ್ಲಿ ಪ್ರಯಾಣಿಸುತ್ತಿದೆ. ಭಾರತೀಯ ಮತ್ತು ಪಾಕಿಸ್ತಾನ ವಾಯುಪ್ರದೇಶದಲ್ಲಿ ಪ್ರಯಾಣಿಕರ ವಿಮಾನಗಳು ಮತ್ತು ನೆಲದ ಮೇಲಿನ ನಾಗರಿಕರ ಆಸ್ತಿಗೆ ಅಪಾಯ ತರುತ್ತಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ:ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ
#BREAKING: India says it accidentally fired a missile due to technical malfunction which landed in an area of Pakistan. Incident is deeply regretted.
The Government of India has taken a serious view and ordered a high-level Court of Enquiry. pic.twitter.com/hvmsIJRJIQ
ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ: ಬಿದ್ದ ಸ್ಥಳದಲ್ಲಿ ಗೋಡೆಗೆ ಅಪ್ಪಳಿಸಿತು. ಈ ಕುರಿತಾಗಿ ಭಾರತ ಮತ್ತು ಪಾಕಿಸ್ತಾನ ಸೇನೆಯ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಘಟನೆಯನ್ನು ವಿವರಿಸುವ ಜವಾಬ್ದಾರಿ ಭಾರತದ ಮೇಲಿದೆ. ಬುಧವಾರ ಸಂಜೆ 6:43 ಕ್ಕೆ ಪಾಕಿಸ್ತಾನ ವಾಯುಪಡೆಯ ವಾಯು ರಕ್ಷಣಾ ಕಾರ್ಯಾಚರಣೆ ಕೇಂದ್ರದಿಂದ ಭಾರತೀಯ ವಾಯು ಪ್ರದೇಶದೊಳಗೆ ಅತಿ ವೇಗದ ಹಾರುವ ವಸ್ತುವೊಂದು ಪತ್ತೆಯಾಗಿದೆ ಎಂದು ಇಫ್ತಿಕರ್ ಹೇಳಿದ್ದಾರೆ.
ಭುವನೇಶ್ವರ: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ತಯಾರಿಸಿದ ಘನ-ಇಂಧನ ಕ್ಷಿಪಣಿಯನ್ನು ‘ಪ್ರಳಯ್’ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.
ಒಡಿಶಾ ಕರಾವಳಿಯ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಬುಧವಾರ ಬೆಳಗ್ಗೆ 10:30ರ ವೇಳೆಗೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಈ ಮೂಲಕ ಭಾರತೀಯ ರಕ್ಷಣಾ ಕ್ಷೇತ್ರ ಮತ್ತಷ್ಟು ಬಲಗೊಂಡಿದೆ. ಇದನ್ನೂ ಓದಿ: ರಷ್ಯಾದ ಮಹಿಳಾ ಗಗನಯಾತ್ರಿ ಸ್ಪೇಸ್ ಎಕ್ಸ್ ಮೂಲಕ ಬಾಹ್ಯಾಕಾಶಕ್ಕೆ
ಪ್ರಳಯ್ ಒಂದು ಅರೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಮುದ್ರ ಅಥವಾ ನೆಲದ ಮೂಲಕ ಉಡಾಯಿಸಬಹುದಾಗಿದೆ. ಇದು ನಿರ್ಧಿಷ್ಟ ದೂರ ಕ್ರಮಿಸಿದ ಬಳಿಕ ತನ್ನ ಮಾರ್ಗವನ್ನು ಬದಲಾಯಿಸಿ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.
ಪ್ರಳಯ್ 250 ರಿಂದ 500 ಕಿಮೀ ದೂರದಲ್ಲಿರುವ ಗುರಿಯನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 500 ರಿಂದ 1,000 ಕೆಜಿ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯುವ ಕ್ಷಿಪಣಿಯನ್ನು ಮೊಬೈಲ್ ಲಾಂಚರ್ ಮೂಲಕವೂ ಉಡಾವಣೆ ಮಾಡಬಹುದಾಗಿದೆ. ಈ ಕ್ಷಿಪಣಿಯನ್ನು ಅತ್ಯಾಧುನಿಕ ನ್ಯಾವಿಗೇಶನ್ ಸಿಸ್ಟಮ್ ಬಳಸಿ ಅಭಿವೃದ್ಧಿ ಪಡಿಸಲಾಗಿದೆ. ಇದನ್ನೂ ಓದಿ: ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ ಪ್ರೈಮ್ ತಂತ್ರಗಾರಿಕಾ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಸಕ್ಸಸ್