Tag: Missile Strike

  • ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ- 7 ಸಾವು, 90 ಮಂದಿಗೆ ಗಾಯ

    ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ- 7 ಸಾವು, 90 ಮಂದಿಗೆ ಗಾಯ

    ಕೈವ್: ಉತ್ತರ ಉಕ್ರೇನ್‍ನ (Ukraine) ಐತಿಹಾಸಿಕ ನಗರವಾದ ಚೆರ್ನಿವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ (Russian Missile Strike) ನಡೆಸಿದೆ. ಘಟನೆಯಲ್ಲಿ 6 ವರ್ಷದ ಮಗು ಸೇರಿ ಒಟ್ಟು 7 ಮಂದಿ ಸಾವನ್ನಪ್ಪಿ, 90 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‍ನ ಆಂತರಿಕ ಸಚಿವಾಲಯ ತಿಳಿಸಿದೆ.

    ಧಾರ್ಮಿಕ ಆಚರಣೆಯ ಸಲುವಾಗಿ ಜನ ಚರ್ಚ್‍ಗೆ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ. ಗಾಯಗೊಂಡವರಲ್ಲಿ 12 ಮಂದಿ ಮಕ್ಕಳು ಹಾಗೂ 10 ಮಂದಿ ಪೊಲಿಸ್ ಅಧಿಕಾರಿಗಳು ಇದ್ದಾರೆ ಎಂದು ಸಚಿವಾಲಯ ತಿಳಿಸಿದೆ.

    ಈ ಸಂಬಂಧ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ (Zelenskiy) ಟೆಲಿಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಚೆರ್ನಿವ್ (Chernihiv) ನಗರದ ಕೇಂದ್ರ ಭಾಗಕ್ಕೆ ರಷ್ಯಾ ಕ್ಷಿಪಣಿ ಅಪ್ಪಳಿಸಿದೆ. ಈ ಮೂಲಕ ರಷ್ಯಾ ಸೇನೆಯು ಎಂದಿನಂತೆ ಸಾಮಾನ್ಯವಾಗಿದ್ದ ದಿನವನ್ನು ದುಃಖ ಮತ್ತು ನಷ್ಟ ಆವರಿಸುವಂತೆ ಮಾಡಿದೆ ಎಂದು ಕಿಡಿಕಾರಿದ್ದಾರೆ. ಪೋಸ್ಟ್ ಜೊತೆಗೆ ವೀಡಿಯೋ ತುಣುಕು ಕೂಡ ಅಪ್ಲೋಡ್ ಮಾಡಿದ್ದಾರೆ. ವೀಡಿಯೋದಲ್ಲಿ ಚದುರಿದ ಅವಶೇಷಗಳು, ಹಾನಿಗೊಳಗಾದ ಕಾರಿಗಳನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಅಮೆರಿಕಾದಲ್ಲಿ ದಾವಣಗೆರೆ ಮೂಲದ ಪತಿ, ಪತ್ನಿ, ಮಗು ದುರ್ಮರಣ

    ಚೆರ್ನಿವ್ ರಾಜಧಾನಿ ಕೈವ್‍ನ ಉತ್ತರಕ್ಕೆ ಶತಮಾನಗಳಷ್ಟು ಹಳೆಯದಾದ ಚರ್ಚ್‍ಗಳು ಇವೆ. ರಷ್ಯಾವು ಕಳೆದ ವರ್ಷ ಫೆಬ್ರವರಿಯಿಂದ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭೂಕಂಪದಿಂದ ತತ್ತರಿಸಿರುವ ಸಿರಿಯಾಗೆ ಮತ್ತೊಂದು ಆಘಾತ – ಇಸ್ರೇಲ್‌ ಕ್ಷಿಪಣಿ ದಾಳಿಗೆ 15 ಬಲಿ

    ಭೂಕಂಪದಿಂದ ತತ್ತರಿಸಿರುವ ಸಿರಿಯಾಗೆ ಮತ್ತೊಂದು ಆಘಾತ – ಇಸ್ರೇಲ್‌ ಕ್ಷಿಪಣಿ ದಾಳಿಗೆ 15 ಬಲಿ

    ಡಮಾಸ್ಕಸ್: ಈಚೆಗೆ ಸಂಭವಿಸಿದ ಭಾರೀ ಭೂಕಂಪದಿಂದಾಗಿ ತತ್ತರಿಸಿರುವ ಸಿರಿಯಾ ಮತ್ತೊಂದು ಆಘಾತ ಅನುಭವಿಸಿದೆ. ಭಾನುವಾರ ಮುಂಜಾನೆ ಇಸ್ರೇಲ್‌ ಕ್ಷಿಪಣಿ ದಾಳಿ (Israeli Missile Strike) ನಡೆಸಿದ್ದು, ಸಿರಿಯಾದ (Syria) 15 ಜನರನ್ನು ಮೃತಪಟ್ಟಿದ್ದಾರೆ. ಸಿರಿಯಾದ ಹೆಚ್ಚಿನ ಭದ್ರತಾ ಉಪಕರಣಗಳಿರುವ ಕಟ್ಟಡವನ್ನು ನಾಶಪಡಿಸಿದೆ.

    ಇರಾನ್‌ ಸಾಂಸ್ಕೃತಿಕ ಕೇಂದ್ರದ ಸಮೀಪ ಈ ದಾಳಿ ನಡೆದಿದ್ದು, ನಾಗರಿಕರು ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳ ಸರಿಯನ್‌ ವೀಕ್ಷಣಾಲಯವು ತಿಳಿಸಿದೆ. 2011 ರಲ್ಲಿ ಸಿರಿಯಾದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ, ಇಸ್ರೇಲ್ (Israeli) ತನ್ನ ನೆರೆಹೊರೆಯವರ ವಿರುದ್ಧ ನೂರಾರು ವೈಮಾನಿಕ ದಾಳಿಗಳನ್ನು ನಡೆಸಿದೆ. ಇದನ್ನೂ ಓದಿ: ಟರ್ಕಿ, ಸಿರಿಯಾ ಭೂಕಂಪ- ಸಾವಿನ ಸಂಖ್ಯೆ 41 ಸಾವಿರಕ್ಕೆ ಏರಿಕೆ

    “ಬೆಳಗ್ಗೆ ಇಸ್ರೇಲ್‌ನವರು ಡಮಾಸ್ಕಸ್ ಮತ್ತು ಅದರ ಸುತ್ತಮುತ್ತಲಿನ ಹಲವಾರು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಆಕ್ರಮಿತ ಗೋಲನ್ ಹೈಟ್ಸ್‌ನ ದಿಕ್ಕಿನಿಂದ ವೈಮಾನಿಕ ದಾಳಿ ನಡೆಸಿದ್ದಾರೆ. ಪರಿಣಾಮವಾಗಿ ಸಾವು-ನೋವು ಸಂಭವಿಸಿದೆ ಎಂದು ಸಿರಿಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

    ದಾಳಿಯಲ್ಲಿ 10 ಅಂತಸ್ತಿನ ಕಟ್ಟಡ ಹಾನಿಗೊಳಗಾಗಿದ್ದು, ಅದರ ಕೆಳ ಮಹಡಿಗಳ ರಚನೆ ನಾಶವಾಗಿದೆ. ಇಸ್ರೇಲ್‌ನ ಸೇನೆಯು ಸಿರಿಯಾ ವಿರುದ್ಧದ ತನ್ನ ದಾಳಿಗಳ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇರಾನ್ ತನ್ನ ಪ್ರಭಾವವನ್ನು ಇಸ್ರೇಲ್‌ನ ಗಡಿಗಳಿಗೆ ವಿಸ್ತರಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದನ್ನೂ ಓದಿ: ಟರ್ಕಿ ಭೀಕರ ಭೂಕಂಪದಲ್ಲಿ ಸಿಲುಕಿದ್ದ ಬೆಂಗಳೂರು ಮೂಲದ ಕಂಪನಿಯ ಟೆಕ್ಕಿ ಸಾವು – ಅವಶೇಷಗಳಡಿ ಮೃತದೇಹ ಪತ್ತೆ

    ಕೆಲ ದಿನಗಳ ಹಿಂದೆಯಷ್ಟೇ ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ಸಂಭವಿಸಿ, 46,000ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಈ ಹೊಡೆತದಿಂದ ಚೀತರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಸಿರಿಯಾ ಮೇಲೆ ಕ್ಷಿಪಣಿ ದಾಳಿ ನಡೆದಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉಕ್ರೇನ್ ಮೇಲೆ ಮತ್ತೆ ರಷ್ಯಾ ಕ್ಷಿಪಣಿ ದಾಳಿ – 12 ಮಂದಿ ಸಾವು

    ಉಕ್ರೇನ್ ಮೇಲೆ ಮತ್ತೆ ರಷ್ಯಾ ಕ್ಷಿಪಣಿ ದಾಳಿ – 12 ಮಂದಿ ಸಾವು

    ಕೀವ್/ಮಾಸ್ಕೋ: ಇನ್ಮುಂದೆ ಉಕ್ರೇನ್ ವಿರುದ್ಧ ಯುದ್ಧ (Russia Ukraine War)) ಮಾಡುವುದಿಲ್ಲ, ಮಾತುಕತೆಗೆ ಸಿದ್ಧರಿದ್ದೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹೇಳಿದ ನಂತರವೂ ರಷ್ಯಾ ಅಟ್ಟಹಾಸ ಮುಂದುವರಿದಿದೆ.

    ಉಕ್ರೇನಿನ ಡ್ನಿಪ್ರೊ ನಗರದ 9 ಅಂತಸ್ತಿನ ಕಟ್ಟಡದ ಮೇಲೆ ಮತ್ತೆ ಭೀಕರ ಕ್ಷಿಪಣಿ ದಾಳಿ (Missile Strike) ನಡೆಸಿದ್ದು, ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ ಸತತ ದಾಳಿಯಿಂದ ರಷ್ಯಾ, ಉಕ್ರೇನಿನ ಮೂಲ ಸೌಕರ್ಯಗಳನ್ನ (Ukraine Infrastructure) ನಾಶಪಡಿಸಿದೆ. ಇದೀಗ ದಾಳಿಯ ಹೊಸ ಅಲೆ ಮುಂದುವರಿಸಿದೆ. ಇದನ್ನೂ ಓದಿ: ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ಶನಿವಾರ ತಡರಾತ್ರಿ ನಡೆದ ದಾಳಿಯಲ್ಲಿ ಡ್ನಿಪ್ರೊ ನಗರ ಹೊರತುಪಡಿಸಿ, ಕೀವ್ ಹಾಗೂ ಇತರ ಸ್ಥಳಗಳಲ್ಲಿ ನಿರ್ಣಾಯಕ ಮೂಲ ಸೌಕರ್ಯಗಳನ್ನು ದಮನ ಮಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಉಕ್ರೇನ್‌ನಲ್ಲಿ ವಿದ್ಯುತ್, ನೀರು ಹಾಗೂ ಮೂಲ ಸೌಕರ್ಯಗಳ ಕೊರತೆ ಎದುರಾಗಲಿದೆ ಎಂದು ಉಕ್ರೇನಿನ ಇಂಧನ ಸಚಿವರು ಎಚ್ಚರಿಸಿದ್ದಾರೆ.

    ರಷ್ಯಾದ ದಾಳಿಯಲ್ಲಿ ಉಕ್ಕಿನ ತಯಾರಿಕಾ ನಗರವಾದ ಕ್ರಿವಿ ರಿಹ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದು ಮತ್ತೊಬ್ಬರು ಗಾಯಗೊಂಡಿದ್ದರು. ಅಲ್ಲದೇ ಝಲೆನ್ಸ್ಕಿ (Volodymyr Zelenskyy) ತವರು ನಗರದಲ್ಲಿ 6 ಮನೆಗಳು ಹಾನಿಗೊಳಗಾದವು.

    ಇದೀಗ ಡ್ನಿಪ್ರೊ ಅಪಾರ್ಟ್ಮೆಂಟ್ ದಾಳಿಯಲ್ಲಿ ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಅದಕ್ಕಾಗಿ ಉಕ್ರೇನ್ ತನ್ನ ನಾಗರಿಕರ ಮೇಲಿನ ದಾಳಿ ಕೊನೆಗೊಳಿಸಲು ಹೆಚ್ಚಿನ ಶಸ್ತ್ರಾಸ್ತ್ರಗಳಿಗಾಗಿ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಗೆ ಮನವಿ ಮಾಡಿದೆ. ಇದನ್ನೂ ಓದಿ: Exclusive- ‘ಮೇರುನಟ’ ವಿಷ್ಣುವರ್ಧನ್ ಸಮಾಧಿ ನೆಲಸಮ ಆಗತ್ತಾ? ಆತಂಕ ಹೊರಹಾಕಿದ ಅಭಿಮಾನಿ

    ಇತ್ತೀಚೆಗೆ “ನಮ್ಮ ಕ್ಷಿಪಣಿಗಳು 1,300ಕ್ಕೂ ಹೆಚ್ಚು ಮಂದಿ ಇದ್ದ ಉಕ್ರೇನಿಯನ್ ಸೈನ್ಯದ ಕ್ರಾಮಾಟೋರ್ಸ್‌ನಲ್ಲಿರುವ ಎರಡು ಬ್ಯಾರಲ್‌ಗಳಿಗೆ ಅಪ್ಪಳಿಸಿದ್ದು, ಅವರಲ್ಲಿ 600 ಮಂದಿ ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ” ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿಕೆ ನೀಡಿದ್ದರು. ಆದರೆ ಉಕ್ರೇನ್ ಸೈನಿಕರು ಈ ದಾಳಿಯಲ್ಲಿ ಸಾವನ್ನಪ್ಪಿಲ್ಲ ಎಂದು ಹೇಳಿ ಆರೋಪ ತಳ್ಳಿಹಾಕಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k