Tag: Missile Attack

  • ಪಂಜಾಬ್‌ನಲ್ಲಿ ಪಾಕ್‌ ಕ್ಷಿಪಣಿ ಅವಶೇಷ ಪತ್ತೆ – ಚೀನಾ ನಿರ್ಮಿತ ಪವರ್‌ಫುಲ್‌ ಮಿಸೈಲ್‌ ಠುಸ್‌!

    ಪಂಜಾಬ್‌ನಲ್ಲಿ ಪಾಕ್‌ ಕ್ಷಿಪಣಿ ಅವಶೇಷ ಪತ್ತೆ – ಚೀನಾ ನಿರ್ಮಿತ ಪವರ್‌ಫುಲ್‌ ಮಿಸೈಲ್‌ ಠುಸ್‌!

    ಚಂಡೀಗಢ: ಪಾಕಿಸ್ತಾನದ ಕಡೆಯಿಂದ ಹಾರಿ ಬಂದ ಚೀನಾ ನಿರ್ಮಿತ ಕ್ಷಿಪಣಿಯ (Missile) ಅವಶೇಷವೊಂದು ಪಂಜಾಬ್‌ನ (Punjab) ಹೋಶಿಯಾರ್‌ಪುರ ಕವಾಯಿದೇವಿಯ ಬಳಿಯ ಫಾರೆಸ್ಟ್‌ನಲ್ಲಿ ಪತ್ತೆಯಾಗಿದೆ.

    ಚೀನಾ ನಿರ್ಮಿತ PL-15 (PL-15 Missile) ಭಾರತದ ಭೂಭಾಗ ಪ್ರವೇಶಿಸಿದ್ದರೂ ಯಾವುದೇ ಅಪಾಯ ಉಂಟುಮಾಡಿಲ್ಲ. ಪಾಕ್‌ ಹಾರಿಸಿದ ಈ ಕ್ಷಿಪಣಿ ಆಟಿಕೆಯಂತೆ ಫೇಲ್ಯೂರ್‌ ಆಗಿ ನೆಲಕ್ಕೆ ಅಪ್ಪಳಿಸಿದೆ. ಹೀಗಾಗಿ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯ ಮೂಲಸೌಕರ್ಯದ ವಿಶ್ವಾಸಾರ್ಹತೆ ಮತ್ತೊಮ್ಮೆ ಬಟಾಬಯಲಾಗಿದೆ. ಜೊತೆಗೆ ಚೀನಾ (China) ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಒಂದೆಂದು ಹೇಳಲಾಗುತ್ತಿದ್ದ PL-15 ಕ್ಷಿಪಣಿ ನಂಬಿ ಕೆಟ್ಟಂತಾಗಿದೆ. ಇದನ್ನೂ ಓದಿ: ಪಾಕ್‌ನಿಂದ ಸಂಭಾವ್ಯ ದಾಳಿ ಮುನ್ಸೂಚನೆ – ಚಂಢೀಗಡದಲ್ಲಿ ಸೈರನ್ ಮೊಳಗಿಸಿ ಎಚ್ಚರಿಕೆ

    Chinese Radars 4 1

    ಚೀನಾ ನಿರ್ಮಿತವಾದ ಈ ಕ್ಷಿಪಣಿ ದೀರ್ಘಶ್ರೇಣಿಯದ್ದಾಗಿದ್ದು, ಗಾಳಿಯಿಂದ ಗಾಳಿಗೆ ಹಾರಿಸುವಂತಹ ಕ್ಷಿಪಣಿಯಾಗಿದೆ. ಇದನ್ನು ಚೀನಾದಿಂದ ಪಾಕ್‌ ಖರೀಸಿದ್ದ ಜೆಎಫ್‌-17 ಯುದ್ಧವಿಮಾನದಿಂದ ಹಾರಿಸಲಾಗಿದೆ. ಚಂಡೀಗಢ ಅಥವಾ ಧರ್ಮಶಾಲಾ ಗುರಿಯಾಗಿಸಿ ಹಾರಿಸಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದನ್ನೂ ಓದಿ: ಭಾರತ ಮಿಸೈಲ್‌ ದಾಳಿಗೆ ಪಾಕ್‌ ತತ್ತರ – ಭಿಕ್ಷೆ ಬೇಡುತ್ತಿದೆ ʻಭಿಕಾರಿಸ್ತಾನʼ

    ಈ ಬೆನ್ನಲ್ಲೇ ಎಚ್ಚೆತ್ತ ವಾಯುಪಡೆ ಚಂಡೀಗಢದಲ್ಲಿ ಸೈರನ್‌ ಮೊಳಗಿಸಿ ಪಾಕ್‌ನಿಂದ ಸಂಭಾವ್ಯ ದಾಳಿಯ ಬಗ್ಗೆ ಜನರನ್ನ ಎಚ್ಚರಿಸಿದೆ. ಜನರು ರಸ್ತೆಗಳಲ್ಲಿ ಓಡಾಡದಂತೆ, ಬಾಲ್ಕನಿಗಳಲ್ಲೂ ಕಾಣಿಸಿಕೊಳ್ಳದಂತೆ ಸೂಚಿಸಿದೆ. ಇದನ್ನೂ ಓದಿ: ಬಿಎಸ್‌ಎಫ್‌ ಯೋಧರ ಭರ್ಜರಿ ಬೇಟೆ – ಸಾಂಬಾದಲ್ಲಿ 7 ಮಂದಿ ಜೈಶ್‌ ಉಗ್ರರ ಹತ್ಯೆ

    China Pakistan 2

    ಚೀನಾ ನಂಬಿ ಪಾಕ್‌ ಕೆಟ್ಟಿದ್ದೇಕೆ?
    ಪಾಕ್‌ ರಕ್ಷಣಾ ಉತ್ಪನ್ನ ಕೈಕೊಟ್ಟಿದ್ದು ಇದೇ ಮೊದಲಲ್ಲ. ಪಾಕಿಸ್ತಾನಕ್ಕೆ ಸರಬರಾಜು ಮಾಡಿದ ಚೀನಾ ನಿರ್ಮಿತ ರೆಡಾರ್‌ (Chinese Radars) ವ್ಯವಸ್ಥೆಗಳು ಭಾರತೀಯ ಸೇನೆಯ ವಾಯುದಾಳಿಯನ್ನು ಪತ್ತೆಹಚ್ಚುವಲ್ಲಿ ಸಹ ವಿಫಲವಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. 2022ರ ಮಾರ್ಚ್‌ನಲ್ಲಿಯೂ ಭಾರತದ ಬ್ರಹ್ಮೋಸ್‌ ಕ್ಷಿಪಣಿಯ ಆಕಸ್ಮಿಕ ದಾಳಿಯನ್ನ ಪತ್ತೆಹಚ್ಚುವಲ್ಲಿ ಪಾಕಿಸ್ತಾನದ ರೆಡಾರ್‌ ವ್ಯವಸ್ಥೆ ವಿಫಲವಾಗಿತ್ತು. ʻಆಪರೇಷನ್‌ ಸಿಂಧೂರʼ ಸಂದರ್ಭದಲ್ಲೂ ಭಾರತೀಯ ಕ್ಷಿಪಣಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ. ಈ ಬೆನ್ನಲ್ಲೇ ಭಾರತದ ಮೇಲೆ ದಾಳಿ ನಡೆಸಲು ಹಾರಿಸಿದ್ದ ಚೀನಾ ನಿರ್ಮಿತ ಕ್ಷಿಪಣಿ ವೈಫಲ್ಯ ಅನುಭವಿಸಿದೆ.

    Xi Jinping

    ಚೀನಾದ ರೆಡಾರ್‌ ವಿಫಲ
    ಮೇ 7ರಂದು ದೇಶಾದ್ಯಂತ ಮಾಕ್‌ ಡ್ರಿಲ್‌ ನಡೆಸಲು ಭಾರತೀಯ ಕೇಂದ್ರ ಸಚಿವಾಲಯ ಕರೆ ಕೊಟ್ಟಿತ್ತು, ಇಂದು ಸೂರ್ಯೋದಯಕ್ಕೂ ಮುನ್ನವೇ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರ ತಾಣಗಳ ಮೇಲೆ ದಾಳಿ ನಡೆಸಿ ಯಾರೂ ಊಹಿಸದ ರೀತಿಯಲ್ಲಿ ಪಾಕ್‌ಗೆ ಶಾಕ್‌ ಕೊಟ್ಟಿದೆ. ಆದ್ರೆ ಪಾಕಿಸ್ತಾನವು ತನ್ನ ರಕ್ಷಣಾ ವ್ಯವಸ್ಥೆಗೆ ಅಳವಡಿಸಿಕೊಂಡಿರುವ ಚೀನಾದ ತಂತ್ರಜ್ಞಾನ ಆಧರಿತ ರೆಡಾರ್‌ ವ್ಯವಸ್ಥೆಯು ಸೂಕ್ತ ಸಮಯದಲ್ಲಿ ಕ್ಷಿಪಣಿಗಳನ್ನ ಪತ್ತೆ ಹಚ್ಚಲು ಸಾಧ್ಯವಾಗದೇ ಬಹುದೊಡ್ಡ ವೈಫಲ್ಯ ಅನುಭವಿಸಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾದ ರಕ್ಷಣಾ ಉತ್ಪನ್ನಗಳ ಬಗ್ಗೆ ಪ್ರಶ್ನೆ ಮಾಡುವಂತಾಗಿದೆ. ಇದನ್ನೂ ಓದಿ: ಬಾಲಾಕೋಟ್‌, ಬ್ರಹ್ಮೋಸ್‌ ಬಳಿಕ ʻಆಪರೇಷನ್‌ ಸಿಂಧೂರʼ – ಪಾಕ್‌ ನಂಬಿದ್ದ ʻಮೇಡ್‌ ಇನ್‌ ಚೈನಾʼ ರೆಡಾರ್‌ ಫೇಲ್‌

    ರಿಪೇರಿ ಮಾಡದ ಚೀನಾ
    ಇಲ್ಲಿಯವರೆಗೆ ಪಾಕಿಸ್ತಾನ LY-80 ರಕ್ಷಣಾ ವ್ಯವಸ್ಥೆಯಲ್ಲಿನ 388 ದೋಷಗಳ ಸುದೀರ್ಘ ಪಟ್ಟಿಯನ್ನು ಚೀನಾಕ್ಕೆ ಹಸ್ತಾಂತರಿಸಿದೆ, ಅವುಗಳಲ್ಲಿ 103 ಹೊಸದಾಗಿ ಪಟ್ಟಿಮಾಡಲಾದ ದೋಷಗಳಾಗಿದ್ದು, 255 ದೋಷಗಳನ್ನು ತಕ್ಷಣವೇ ಪರಿಹರಿಸಬೇಕಾದ ಅಗತ್ಯವಿದೆ ಎಂದು ಪಾಕ್‌ ಬೇಡಿಕೊಂಡಿತ್ತು. ಆದರೆ ಚೀನಾ ಸರಿಯಾಗಿ ರಿಪೇರಿ ಮಾಡಿಕೊಟ್ಟಿಲ್ಲ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

  • ಬಿಎಸ್‌ಎಫ್‌ ಯೋಧರ ಭರ್ಜರಿ ಬೇಟೆ – ಸಾಂಬಾದಲ್ಲಿ 7 ಮಂದಿ ಜೈಶ್‌ ಉಗ್ರರ ಹತ್ಯೆ

    ಬಿಎಸ್‌ಎಫ್‌ ಯೋಧರ ಭರ್ಜರಿ ಬೇಟೆ – ಸಾಂಬಾದಲ್ಲಿ 7 ಮಂದಿ ಜೈಶ್‌ ಉಗ್ರರ ಹತ್ಯೆ

    ನವದೆಹಲಿ: ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದ ಜೈಶ್-ಎ-ಮೊಹಮ್ಮದ್‌ (Jaish-e-Mohammed) ಸಂಘಟನೆಯ 7 ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದ ಸಾಂಭಾದಲ್ಲಿ (Samba) ಭಾರತದ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ.

    ಗುರುವಾರ ಹಲವು ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್‌ಎಫ್ (BSF) ವಿಫಲಗೊಳಿಸಿದೆ. ಇದನ್ನೂ ಓದಿ: ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

    ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಬಿಎಸ್‌ಎಫ್‌ ಯೋಧರು ಗುಂಡಿಕ್ಕಿ ಕೊಂದಿದ್ದಾರೆ ಈ ಮಾಹಿತಿಯನ್ನು ಬಿಎಸ್‌ಎಫ್‌ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: Video | ಪ್ರತೀಕಾರ ಸಮರ – ರಾತ್ರಿಯಿಡೀ ವಾರ್‌ರೂಂನಲ್ಲಿದ್ದು ಕ್ಷಣಕ್ಷಣದ ಮಾಹಿತಿ ಪಡೆದ ಮೋದಿ

    ಜಮ್ಮು, ರಾಜಸ್ಥಾನ ಮತ್ತು ಪಂಜಾಬ್‌ನ ಅಮೃತಸರ ಸೇರಿ ಭಾರತದ 15 ನಗರಗಳನ್ನು ಗುರಿಯಾಗಿಸಿ ಪಾಕಿಸ್ತಾನ ಮಿಸೈಲ್‌, ಡ್ರೋನ್‌ ದಾಳಿ ನಡೆಸಿತು. ಭಾರತೀಯ ಸೇನೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕ್‌ನ ಎಲ್ಲಾ ಮಿಸೈಲ್‌ಗಳನ್ನು ಹೊಡೆದುರುಳಿಸಿದೆ. ಇದನ್ನೂ ಓದಿ: ಭಾರತ-ಪಾಕ್‌ ನಡುವೆ ಯುದ್ಧ ಛಾಯೆ – ರದ್ದಾಗುತ್ತಾ ಐಪಿಎಲ್‌?- ಅತ್ತ ಪಾಕ್‌ ಸೂಪರ್‌ ಲೀಗ್‌ ದುಬೈಗೆ ಶಿಫ್ಟ್‌

  • Video | ಪ್ರತೀಕಾರ ಸಮರ – ರಾತ್ರಿಯಿಡೀ ವಾರ್‌ರೂಂನಲ್ಲಿದ್ದು ಕ್ಷಣಕ್ಷಣದ ಮಾಹಿತಿ ಪಡೆದ ಮೋದಿ

    Video | ಪ್ರತೀಕಾರ ಸಮರ – ರಾತ್ರಿಯಿಡೀ ವಾರ್‌ರೂಂನಲ್ಲಿದ್ದು ಕ್ಷಣಕ್ಷಣದ ಮಾಹಿತಿ ಪಡೆದ ಮೋದಿ

    ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರತೀಕಾರದ ಸಮರ ಈಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಗುರುವಾರ ರಾತ್ರಿ ಜಮ್ಮುವಿನ ಮೇಲೆ ಪಾಕ್‌ 100 ಕ್ಷಿಪಣಿಗಳ ದಾಳಿ ನಡೆಸಿದ ಬಳಿಕ ಭಾರತ ಪ್ರತೀಕಾರದ ತೀವ್ರತೆಯನ್ನ ಹೆಚ್ಚಿಸಿದೆ. ಹೀಗಾಗಿ ರಾತ್ರಿಯಿಡೀ ವಾರ್‌ರೂಮ್‌ನಲ್ಲೇ ವಾಸ್ತವ್ಯ ಹೂಡಿದ ಪ್ರದಾನಿ ಮೋದಿ ಎನ್‌ಎಸ್‌ಎ, ಸಿಡಿಎಸ್‌ ಅವರಿಂದ ಕ್ಷಣ ಕ್ಷಣದ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಮುಂದಿನ ಕ್ರಮಗಳ ಬಗ್ಗೆಯೂ ಸೂಚಿಸಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ…

  • ಪಾಕ್‌ ಕ್ಷಿಪಣಿ ದಾಳಿ ಬೆನ್ನಲ್ಲೇ ಹೈಅಲರ್ಟ್‌ – ದೇಶಾದ್ಯಂತ 24 ಏರ್‌ಪೋರ್ಟ್‌ಗಳು ತಾತ್ಕಾಲಿಕ ಬಂದ್‌

    ಪಾಕ್‌ ಕ್ಷಿಪಣಿ ದಾಳಿ ಬೆನ್ನಲ್ಲೇ ಹೈಅಲರ್ಟ್‌ – ದೇಶಾದ್ಯಂತ 24 ಏರ್‌ಪೋರ್ಟ್‌ಗಳು ತಾತ್ಕಾಲಿಕ ಬಂದ್‌

    ನವದೆಹಲಿ: ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ ಬಳಿಕ ಭಾರತ ʻಆಪರೇಷನ್‌ ಸಿಂಧೂರʼ (Operation Sindoor) ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಭಿಕಾರಿಸ್ತಾನದ ಮೇಲೆ ಮಿಸೈಲ್‌ಗಳ ಸುರಿಮಳೆಗೈದಿದೆ. ಈ ನಡುವೆ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಆದ್ರೆ ಪಾಕ್‌ ಕ್ಷಿಪಣಿ ದಾಳಿ ಬೆನ್ನಲ್ಲೇ ಭಾರತ (India) ದೇಶಾದ್ಯಂತ 24 ವಿಮಾನ ನಿಲ್ದಾಣಗಳ (Airports) ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಜಮ್ಮುವಿನ ಮೇಲೆ ದಾಳಿಗೆ ಯತ್ನಿಸಿದ್ದ ಪಾಕ್‌ನ 50ಕ್ಕೂ ಹೆಚ್ಚು ಡ್ರೋನ್‌ಗಳು ಮಟಾಶ್‌

    ಹಲವು ಭಾರತೀಯ ವಿಮಾನಯಾನ ಸಂಸ್ಥೆಗಳು (Indian Airlines) ಪ್ರಯಾಣ ಸಲಹೆಗಳನ್ನು ನೀಡಿದ್ದು, ಅದಕ್ಕೆ ಅನುಗುಣವಾಗಿ ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆಯನ್ನು ಪ್ಲ್ಯಾನ್‌ ಮಾಡಿಕೊಳ್ಳುವಂತೆ ತಿಳಿಸಿವೆ. ಇನ್ನೂ ದೇಶಾದ್ಯಂತ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದನ್ನೂ ಓದಿ: ಪಾಕ್‌ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿದ್ದೇವೆ – ಭಾರತೀಯ ಸೇನೆ ಅಭಯ

    ದೆಹಲಿ ಏರ್‌ಪೋರ್ಟ್‌ ಸಹಜ ಸ್ಥಿತಿಯಲ್ಲಿ ಕಾರ್ಯಾಚರಣೆ – ಕೆಲ ವಿಮಾನ ಹಾರಾಟ ರದ್ದು
    ಇನ್ನೂ ದೇಶದ ರಾಜಧಾನಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಭದ್ರತೆ ಹೆಚ್ಚಿಸಿರುವ ಕಾರಣ ಕೆಲವು ವಿಮಾನಗಳ ಹಾರಾಟಗಳು ರದ್ದಾಗಿವೆ. ಪ್ರಯಾಣಿಕರು ತಮ್ಮ ವಿಮಾನಯಾನದ ಬಗ್ಗೆ ಮಾಹಿತಿ ತಿಳಿದುಕೊಂಡು ಏರ್‌ಪೋರ್ಟ್‌ಗೆ ಬರಲು ಸೂಚಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನಿಗಳಿಗೆ ಶಸ್ತ್ರಾಸ್ತ್ರಗಳನ್ನ ತ್ಯಜಿಸುವಂತೆ ಅಮೆರಿಕ ಹೇಳಲು ಸಾಧ್ಯವಿಲ್ಲ: ಜೆಡಿ ವ್ಯಾನ್ಸ್

  • ಪಾಕ್‌ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿದ್ದೇವೆ – ಭಾರತೀಯ ಸೇನೆ ಅಭಯ

    ಪಾಕ್‌ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿದ್ದೇವೆ – ಭಾರತೀಯ ಸೇನೆ ಅಭಯ

    – 15 ನಗರಗಳ ಮೇಲಿನ ದಾಳಿಗಳನ್ನೂ ಹತ್ತಿಕ್ಕಿದ ಸೇನೆ

    ನವದೆಹಲಿ: ಪಾಕಿಸ್ತಾನ ಸಶಸ್ತ್ರಪಡೆಗಳು (Pakistan Armed Forces) ಮೇ 8 ಮತ್ತು 9ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ನಡೆಸಿದ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿರುವುದಾಗಿ ಭಾರತೀಯ ಸೇನೆ (Indian Army) ಅಧಿಕೃತ ಹೇಳಿಕೆ ನೀಡಿದೆ.

    ಈ ಕುರಿತು ಇಂಡಿಯನ್‌ ಆರ್ಮಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಪಾಕಿಸ್ತಾನ ಸಶಸ್ತ್ರ ಪಡೆಗಳು ಇದೇ ಮೇ 08 ಮತ್ತು 09ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋನ್‌ಗಳು (Drones) ಮತ್ತು ಇತರ ಯುದ್ಧಸಾಮಗ್ರಿಗಳನ್ನು ಬಳಸಿಕೊಂಡು ಅನೇಕ ದಾಳಿಗಳನ್ನು ನಡೆಸಿದವು. ಜಮ್ಮು ಮತ್ತು ಕಾಶ್ಮೀರದ (Jammu and Kashmir) ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್ ಪಡೆಗಳು ಹಲವಾರು ಕದನ ವಿರಾಮ ಉಲ್ಲಂಘನೆ ಮಾಡಿವೆ. ಆದ್ರೆ ಪಾಕ್‌ನ ಡ್ರೋನ್ ದಾಳಿಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿ, ಸಿಎಫ್‌ವಿಗಳಿಗೆ ತಕ್ಕ ಉತ್ತರ ನೀಡಲಾಗಿದೆ ಎಂದು ಸೇನೆ ಹೇಳಿದೆ. ಇದನ್ನೂ ಓದಿ: ಪಾಕ್‌ನ ಪ್ರಮುಖ ಎಫ್‌-16 ಹೊಡೆದುರುಳಿಸಿದ ಭಾರತೀಯ ವಾಯು ಸೇನೆ

    ಅಲ್ಲದೇ ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ. ಎಲ್ಲಾ ದುಷ್ಟ ವಿನ್ಯಾಸಗಳಿಗೆ ಬಲದಿಂದ ಪ್ರತಿಕ್ರಿಯಿಸಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ಸಾಂಬಾದಲ್ಲಿ ಹಲವು ಪಾಕ್ ಉಗ್ರರ ಹತ್ಯೆ

    15 ನಗರಗಳ ಮೇಲಿನ ದಾಳಿ ಹತ್ತಿಕ್ಕಿದ ಸೈನ್ಯ:
    ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಒಂದು ದಿನದ ನಂತರ ನಿನ್ನೆ ರಾತ್ರಿ (ಮೇ 8) ಮತ್ತು ಇಂದು ಬೆಳಿಗ್ಗೆ (ಮೇ 9) ಪಾಕಿಸ್ತಾನವು ಭಾರತದ ಮೇಲೆ ಮತ್ತೆ ದಾಳಿ ಮಾಡಲು ಪ್ರಯತ್ನಿಸಿದೆ. ಇದನ್ನೂ ಓದಿ: ಜಮ್ಮುವಿನ ಮೇಲೆ ದಾಳಿಗೆ ಯತ್ನಿಸಿದ್ದ ಪಾಕ್‌ನ 50ಕ್ಕೂ ಹೆಚ್ಚು ಡ್ರೋನ್‌ಗಳು ಮಟಾಶ್‌

    ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಗುಜರಾತ್ ಸೇರಿದಂತೆ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿರುವ 15 ನಗರಗಳಲ್ಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಉದ್ವಿಗ್ನತೆ ಹೆಚ್ಚಿಸಲು ಪಾಕ್ ಪ್ರಯತ್ನಿಸಿತು. ಆದರೆ, ಆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇದನ್ನೂ ಓದಿ: ಪಾಕಿಸ್ತಾನಿಗಳಿಗೆ ಶಸ್ತ್ರಾಸ್ತ್ರಗಳನ್ನ ತ್ಯಜಿಸುವಂತೆ ಅಮೆರಿಕ ಹೇಳಲು ಸಾಧ್ಯವಿಲ್ಲ: ಜೆಡಿ ವ್ಯಾನ್ಸ್

  • ಪಾಕಿಸ್ತಾನಿಗಳಿಗೆ ಶಸ್ತ್ರಾಸ್ತ್ರಗಳನ್ನ ತ್ಯಜಿಸುವಂತೆ ಅಮೆರಿಕ ಹೇಳಲು ಸಾಧ್ಯವಿಲ್ಲ: ಜೆಡಿ ವ್ಯಾನ್ಸ್

    ಪಾಕಿಸ್ತಾನಿಗಳಿಗೆ ಶಸ್ತ್ರಾಸ್ತ್ರಗಳನ್ನ ತ್ಯಜಿಸುವಂತೆ ಅಮೆರಿಕ ಹೇಳಲು ಸಾಧ್ಯವಿಲ್ಲ: ಜೆಡಿ ವ್ಯಾನ್ಸ್

    – ಭಾರತ-ಪಾಕ್ ವಿಷಯದಲ್ಲಿ ಮಧ್ಯ ಪ್ರವೇಶಿಸಲ್ಲ, ನಮಗೆ ಸಂಬಂಧಿಸಿಲ್ಲ; ಯುಎಸ್‌ ಉಪಾಧ್ಯಕ್ಷ

    ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈ ವಿಷಯದಲ್ಲಿ ಅಮೆರಿಕ (America) ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದೆ. ಇದು ನಮಗೆ ಸಂಬಂಧಿಸಿದ ವಿಷಯವಲ್ಲ ಎಂದೂ ತಿಳಿಸಿದೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ (JD Vance), 2 ಪರಮಾಣು ಶಕ್ತಿ ಹೊಂದಿರುವ ರಾಷ್ಟ್ರಗಳ ನಡುವೆ ಸಂಘರ್ಷ ಹೆಚ್ಚಾಗುವ ಅಪಾಯದ ಬಗ್ಗೆ ಅಮೆರಿಕ ಚಿಂತಿಸಿದೆ. ಆದರೆ, ಅವರ ಕ್ರಮಗಳನ್ನು ನಾವು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಉಭಯ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ವಾಷಿಂಗ್ಟನ್ ಪ್ರೋತ್ಸಾಹಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಜಮ್ಮು ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿ ಯತ್ನ – ಮಿಸೈಲ್‌, ಡ್ರೋನ್‌ ಹೊಡೆದುರುಳಿಸಿದ ಭಾರತ

    ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (Donald Trump) ಮತ್ತು ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರ ಮಾತನ್ನು ವ್ಯಾನ್ಸ್ ಪುನರುಚ್ಚರಿಸಿದ್ದಾರೆ. ʻನಾವು ಸಂಘರ್ಷವನ್ನು ತಡೆಯಲು ಆಶಿಸುತ್ತೇವೆ. ಆದರೆ, ಯಾವುದೇ ದೇಶವನ್ನು ನಿರಾಯುಧೀಕರಣ ಮಾಡಲು ಸಾಧ್ಯವಿಲ್ಲʼ ಎಂದು ಹೇಳಿದ್ದಾರೆ. ಪ್ರಾದೇಶಿಕ ಸಂಘರ್ಷ ಅಥವಾ ಪರಮಾಣು ಯುದ್ಧದ ಸಾಧ್ಯತೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ. ಆದರೆ, ರಾಜತಾಂತ್ರಿಕ ಪ್ರಯತ್ನಗಳು ಮತ್ತು ಎರಡೂ ಕಡೆಯವರ ಸಂಯಮದಿಂದ ಶಾಂತಿ ನೆಲೆಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ನ ಪ್ರಮುಖ ಎಫ್‌-16 ಹೊಡೆದುರುಳಿಸಿದ ಭಾರತೀಯ ವಾಯು ಸೇನೆ

    ಕಾರ್ಯದರ್ಶಿ ರುಬಿಯೊ ಎರಡೂ ದೇಶಗಳ ನಾಯಕರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದಾರೆ. ತಕ್ಷಣವೇ ಉದ್ವಿಗ್ನತೆ ಕಡಿಮೆ ಮಾಡುವಂತೆ ಒತ್ತಾಯಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಅಮೆರಿಕ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಉಭಯ ದೇಶಗಳು ಶಾಂತಿ ಕಾಪಾಡಿಕೊಳ್ಳಬೇಕು. ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

    ಅಮೆರಿಕ ಈ ವಿಷಯದಲ್ಲಿ ತಟಸ್ಥವಾಗಿರಲು ನಿರ್ಧರಿಸಿದೆ. ಆದರೆ, ಶಾಂತಿ ಸ್ಥಾಪನೆಗೆ ತನ್ನ ಬೆಂಬಲವನ್ನು ನೀಡುತ್ತದೆ. ಉಭಯ ದೇಶಗಳು ಸಂಯಮದಿಂದ ವರ್ತಿಸಬೇಕೆಂದು ಅಮೆರಿಕ ಕೋರಿದೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವುದನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರಾಚಿಯ 15 ಕಡೆ ಭಾರೀ ಸ್ಫೋಟ – INS ವಿಕ್ರಾಂತ್‌ ನೌಕೆಯಿಂದ ಅಟ್ಯಾಕ್‌

    ಗುರುವಾರ ರಾತ್ರಿ ಜಮ್ಮುವಿನ ಮೇಲೆ ಪಾಕ್‌ ನೂರು ಕ್ಷಿಪಣಿಗಳಿಂದ ದಾಳಿ ಬಳಿಕ ಭಾರತ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಭಾರತದ ದಾಳಿಗೆ ಇಡೀ ಪಾಕ್‌ ಜೀವಭಯದಲ್ಲಿ ನಡುಗುತ್ತಿದೆ. ಇದನ್ನೂ ಓದಿ: ಭಾರತ-ಪಾಕ್ ಗಡಿಯಲ್ಲಿ ಹೈ-ಅಲರ್ಟ್ ಘೋಷಣೆ

  • ಪಾಕ್‌ ಕ್ಷಿಪಣಿ ದಾಳಿ ಬೆನ್ನಲ್ಲೇ ಭಾರತದ 24 ಏರ್‌ಪೋರ್ಟ್‌ಗಳು ಬಂದ್‌

    ಪಾಕ್‌ ಕ್ಷಿಪಣಿ ದಾಳಿ ಬೆನ್ನಲ್ಲೇ ಭಾರತದ 24 ಏರ್‌ಪೋರ್ಟ್‌ಗಳು ಬಂದ್‌

    ಶ್ರೀನಗರ: ʻಆಪರೇಷನ್‌ ಸಿಂಧೂರʼಕ್ಕೆ (Operation Sindoor) ಪ್ರತೀಕಾರವಾಗಿ ಪಾಕಿಸ್ತಾನ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಭಾರತದ  24 ವಿಮಾನ ನಿಲ್ದಾಣಗಳನ್ನು ಬಂದ್‌ ಮಾಡಲಾಗಿದೆ.

    ಗುರುವಾರ ಪಾಕಿಸ್ತಾನ ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ನಡೆಸುತ್ತಿದ್ದಂತೆಯೇ ಭಾರತವು ಕೂಡ ಲಾಹೋರ್‌, ಇಸ್ಲಾಮಾಬಾದ್‌ ಮೇಲೆ ದಾಳಿ ಆರಂಭಿಸಿದೆ. ಹೀಗಾಗಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

    ಕ್ಷಿಪಣಿಗಳನ್ನು ಬಳಸಿಕೊಂಡು ಹಮಾಸ್ ಸ್ಟೈಲ್‌ನಲ್ಲಿ ಪಾಕ್ ಆರ್ಮಿ ಜಮ್ಮು, ಪಂಜಾಬ್‌ ಹಾಗೂ ರಾಜಸ್ಥಾನದ ಕೆಲವು ಸ್ಥಳಗಳನ್ನು ಗುರಿಯಾಗಿಸಿಕೊಂಡು ಅಟ್ಯಾಕ್‌ ಮಾಡಿದೆ. ಭಾರತದ ಏರ್ ಡಿಫೆನ್ಸ್ ಯೂನಿಟ್‌ನಿಂದ ಪಾಕ್‌ನ ಎಲ್ಲ ಕ್ಷಿಪಣಿಗಳನ್ನು ಉಡೀಸ್ ಮಾಡಿ, ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ.

    ಯಾವೆಲ್ಲ ಏರ್‌ಪೋರ್ಟ್‌ಗಳು ಬಂದ್‌?

    ಚಂಡೀಗಢ

    1. ಶ್ರೀನಗರ
    2. ಅಮೃತಸರ
    3. ಲುಧಿಯಾನ
    4. ಭುಂಟರ್
    5. ಕಿಶೆನ್‌ಗಢ
    6. ಪಟಿಯಾಲ
    7. ಶಿಮ್ಲಾ
    8. ಕಾಂಗ್ರಾ-ಗಗ್ಗಲ್
    9. ಭಟಿಂಡಾ
    10. ಜೈಸಲ್ಮೇರ್
    11. ಜೋಧಪುರ
    12. ಬಿಕಾನೆರ್
    13. ಹಲ್ವಾರಾ
    14. ಪಠಾಣ್‌ಕೋಟ್
    15. ಜಮ್ಮು
    16. ಲೆಹ್
    17. ಮುಂದ್ರಾ
    18. ಜಾಮ್‌ನಗರ್
    19. ಹಿರಾಸರ್ (ರಾಜ್‌ಕೋಟ್)
    20. ಪೋರಬಂದರ್
    21. ಕೆಶೋಡ್
    22. ಕಾಂಡ್ಲಾ
    23. ಭುಜ್

  • ಭಾರತ-ಪಾಕ್ ಗಡಿಯಲ್ಲಿ ಹೈ-ಅಲರ್ಟ್ ಘೋಷಣೆ

    ಭಾರತ-ಪಾಕ್ ಗಡಿಯಲ್ಲಿ ಹೈ-ಅಲರ್ಟ್ ಘೋಷಣೆ

    -ಭಾರತದ 3 ಪಡೆಗಳಿಂದಲೂ ಪಾಕ್‌ ಮೇಲೆ ಅಟ್ಯಾಕ್‌

    ಶ್ರೀನಗರ: ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಭಾರತ ಪಾಕ್ ಮೇಲೆ ದಾಳಿ ನಡೆಸುತ್ತಿದೆ. ಇದರಿಂದಾಗಿ ಭಾರತ್-ಪಾಕ್ ಗಡಿಯಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.

    ಜಮ್ಮು, ಪಂಜಾಬ್, ರಾಜಸ್ಥಾನ ಗುರಿಯಾಗಿಸಿಕೊಂಡು ಪಾಕ್ ದಾಳಿ ಆರಂಭಿಸಿದರೆ, ಭಾರತ ಲಾಹೋರ್, ಇಸ್ಲಾಮಾಬಾದ್ ಮೇಲೆ ದಾಳಿ ನಡೆಸಿದ್ದು,  ಅರಬ್ಬೀ ಸಮುದ್ರದಲ್ಲಿಯೂ ನೌಕಾ ಪಡೆ ದಾಳಿ ಆರಂಭಿಸಿದೆ.

    ಭಾರತದ ಏರ್ ಡಿಫೆನ್ಸ್ ಯೂನಿಟ್‌ನಿಂದ ಪಾಕ್‌ನ ಎಲ್ಲ ಕ್ಷಿಪಣಿಗಳನ್ನು ಉಡೀಸ್ ಮಾಡಿದೆ. ಇಸ್ರೇಲ್ ಮೇಲೆ ಹಮಾಸ್ ದಾಳಿಯ ಮಾದರಿಯಲ್ಲಿ ಪಾಕ್ ಆರ್ಮಿ ದಾಳಿ ನಡೆಸಿದೆ. ಸದ್ಯ ಭಾರತದ ಮೂರು ಪಡೆಗಳಿಂದಲೂ ದಾಳಿ ಆರಂಭವಾಗಿದ್ದು, ಸದ್ಯ ಭಾರತ-ಪಾಕ್ ಗಡಿಯಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.

     

  • ಭಾರತದ ಮೇಲೆ ಪಾಕ್‌ನಿಂದ 100 ಕ್ಷಿಪಣಿ ದಾಳಿ

    ಭಾರತದ ಮೇಲೆ ಪಾಕ್‌ನಿಂದ 100 ಕ್ಷಿಪಣಿ ದಾಳಿ

    – ಹಮಾಸ್ ಮಾದರಿಯಲ್ಲಿ ಪಾಕ್ ಆರ್ಮಿ ಟಾರ್ಗೆಟ್

    ಶ್ರೀನಗರ: ಜಮ್ಮುವನ್ನು ಗುರಿಯಾಗಿಸಿಕೊಂಡು ಮತ್ತೆ ಪಾಕಿಸ್ತಾನ ದಾಳಿ ನಡೆಸಿದ್ದು, ಕ್ಷಿಪಣಿಗಳನ್ನು ಬಳಸಿಕೊಂಡು ಹಮಾಸ್ ಸ್ಟೈಲ್‌ನಲ್ಲಿ ಪಾಕ್ ಆರ್ಮಿ ಆಟ್ಯಾಕ್ ಆರಂಭಿಸಿದೆ.

    ಆದರೆ ಭಾರತದ ಏರ್ ಡಿಫೆನ್ಸ್ ಯೂನಿಟ್‌ನಿಂದ ಪಾಕ್‌ನ ಎಲ್ಲ ಕ್ಷಿಪಣಿಗಳನ್ನು ಉಡೀಸ್ ಮಾಡಿದೆ. ಇಸ್ರೇಲ್ ಮೇಲೆ ಹಮಾಸ್ ದಾಳಿಯ ಮಾದರಿಯಲ್ಲಿ ಪಾಕ್ ಅರ್ಮಿ ದಾಳಿ ನಡೆಸಿದೆ. ಆದರೆ ಭಾರತದ ದಾಳಿಗೆ ಪಾಕ್ ಆರ್ಮಿ ಆಟ ನಡೆಯದಂತಾಗಿದೆ. ದಾಳಿ ಆರಂಭವಾಗುತ್ತಿದ್ದಂತೆ ಭಾರೀ ಶಬ್ದಕ್ಕೆ ಬೆಚ್ಚಿ ಬಿದ್ದು, ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.ಇದನ್ನೂ ಓದಿ: ಜಮ್ಮು ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿ ಯತ್ನ – ಮಿಸೈಲ್‌, ಡ್ರೋನ್‌ ಹೊಡೆದುರುಳಿಸಿದ ಭಾರತ

    ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಜಮ್ಮುವಿನ ಮೇಲೆ ಹಾಕಿಸಿದ್ದು, ನಗರದಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದಿವೆ. ದಾಳಿಗೆ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ಭಾರತದಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

    ಜಮ್ಮುವಿನಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದವು. ನಂತರ ಸೈರನ್‌ಗಳ ಕೂಗು ಕೇಳಿಬಂತು. ತಕ್ಷಣ ವಿದ್ಯುತ್ ಕಡಿತವಾಯಿತು. ದಾಳಿ ಇನ್ನೂ ಮುಂದುವರಿದಿದೆ. ಪರಿಣಾಮವಾಗಿ ಸೆಲ್‌ಫೋನ್ ಸೇವೆ ಸ್ಥಗಿತಗೊಂಡಿದೆ.

    ಸ್ಥಳೀಯರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವೀಡಿಯೋಗಳಲ್ಲಿ, ಆಕಾಶದಾದ್ಯಂತ ದೀಪಗಳು ಪಸರಿಸಿದಂತೆ ದೃಶ್ಯ ಕಂಡುಬಂದಿದೆ. ಇದು ಭಾರತೀಯ ಸಶಸ್ತ್ರ ಪಡೆಗಳ ವಾಯು ರಕ್ಷಣಾ ವ್ಯವಸ್ಥೆಯಿಂದ ಪಾಕ್‌ನ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಹೊಡೆದುರುಳಿಸುವ ದೃಶ್ಯವಾಗಿದೆ.

    300 ಕಿ.ಮೀ.ಗಿಂತಲೂ ಹೆಚ್ಚು ದೂರದಲ್ಲಿರುವ ಕುಪ್ವಾರಾ ಪಟ್ಟಣ ಮತ್ತು ಪಠಾಣ್‌ಕೋಟ್‌ನಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿದೆ. ಪಂಜಾಬ್‌ನ ಹತ್ತಿರದ ಪಟ್ಟಣವಾದ ಗುರುದಾಸ್ಪುರದಲ್ಲಿ ಬ್ಲ್ಯಾಕೌಟ್ ಘೋಷಿಸಲಾಯಿತು. ಅಖ್ನೂರ್‌ನ ಸಾಂಬಾದಲ್ಲಿರುವ ಅಂತರರಾಷ್ಟ್ರೀಯ ಗಡಿಯಲ್ಲಿ ಶೆಲ್ ದಾಳಿ ನಡೆದಿದೆ.ಇದನ್ನೂ ಓದಿ:ಭಯೋತ್ಪಾದನೆ ವಿರುದ್ಧ ನಾವು ನಿಮ್ಮೊಂದಿಗೆ – ಭಾರತದ ಬೆಂಬಲಕ್ಕೆ ನಿಂತ ನೇಪಾಳ

  • ಅನಗತ್ಯ ಪ್ರಯಾಣ ಬೇಡ, ಸುರಕ್ಷಿತ ಸ್ಥಳದಲ್ಲಿರಿ; ಇರಾನ್ – ಇಸ್ರೇಲ್ ಸಂಘರ್ಷದ ಬೆನ್ನಲ್ಲೇ ಭಾರತದ ಎಚ್ಚರಿಕೆ

    ಅನಗತ್ಯ ಪ್ರಯಾಣ ಬೇಡ, ಸುರಕ್ಷಿತ ಸ್ಥಳದಲ್ಲಿರಿ; ಇರಾನ್ – ಇಸ್ರೇಲ್ ಸಂಘರ್ಷದ ಬೆನ್ನಲ್ಲೇ ಭಾರತದ ಎಚ್ಚರಿಕೆ

    ನವದೆಹಲಿ: ಇಸ್ರೇಲ್ (Israel) ಮೇಲೆ ಇರಾನ್ ಕ್ಷಿಪಣಿ ದಾಳಿ (Iran Missile Attack) ನಡೆಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ ಕವಿದಿದ್ದು,ಇರಾನ್‌ಗೆ ಪ್ರಯಾಣಿಸದಂತೆ ಸರ್ಕಾರವು ಭಾರತೀಯ ನಾಗರಿಕರಿಗೆ ಸಲಹೆ ನೀಡಿದೆ.

    ಅಧಿಕಾರಿಗಳು ಇರಾನ್‌ನಲ್ಲಿರುವ ಭಾರತೀಯರಿಗೆ ಜಾಗರೂಕರಾಗಿರಲು ಮತ್ತು ಟೆಹ್ರಾನ್‌ನಲ್ಲಿರುವ ರಾಯಭಾರ ಕಚೇರಿಯೊಂದಿಗೆ (Embassy) ಸಂಪರ್ಕದಲ್ಲಿರಲು ಸೂಚಿಸಿದ್ದಾರೆ. ನಾವು ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಯಲ್ಲಿ ಇತ್ತೀಚಿನ ಉಲ್ಬಣವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ. ಪ್ರಸ್ತುತ ಇರಾನ್‌ನಲ್ಲಿ ನೆಲೆಸಿರುವವರು ಜಾಗರೂಕರಾಗಿರಲು ಮತ್ತು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ವಿನಂತಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಮೂಲಕ ತಿಳಿಸಿದೆ. ಇದನ್ನೂ ಓದಿ: Iran Attacks Israel | ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಭದ್ರತೆ ಹೆಚ್ಚಳ

    ದಯವಿಟ್ಟು ಜಾಗರೂಕರಾಗಿರಿ, ದೇಶದೊಳಗೆ ಅನಗತ್ಯ ಪ್ರಯಾಣವನ್ನು ತಪ್ಪಿಸಿ ಮತ್ತು ಸುರಕ್ಷತಾ ಆಶ್ರಯಕ್ಕೆ ಹತ್ತಿರದಲ್ಲಿರಿ. ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಮ್ಮ ಎಲ್ಲಾ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಸ್ರೇಲಿ ಅಧಿಕಾರಿಗಳೊಂದಿಗೆ ನಿಯಮಿತ ಸಂಪರ್ಕದಲ್ಲಿದೆ ಎಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಇದನ್ನೂ ಓದಿ: ಪ್ರವಾಹ ಪೀಡಿತ ರಾಜ್ಯಗಳಿಗೆ ಗೃಹ ಇಲಾಖೆಯಿಂದ 5858.60 ಕೋಟಿ ಪರಿಹಾರ ಬಿಡುಗಡೆ