Tag: miss world 2024

  • ನೆಲ್ಸನ್ ಮಂಡೇಲಾರಿಗೆ ದೊರೆತಿದ್ದ ಪ್ರಶಸ್ತಿಗೆ ಈಗ ನೀತಾ ಅಂಬಾನಿ ಆಯ್ಕೆ!

    ನೆಲ್ಸನ್ ಮಂಡೇಲಾರಿಗೆ ದೊರೆತಿದ್ದ ಪ್ರಶಸ್ತಿಗೆ ಈಗ ನೀತಾ ಅಂಬಾನಿ ಆಯ್ಕೆ!

    ಮುಂಬೈ: ಮುಂಬೈನ ಜಿಯೋ ವರ್ಲ್ಡ್ ಸಭಾ ಭವನದಲ್ಲಿ (Jioworld convention centre) ನಡೆದ 71ನೇ ಮಿಸ್ ವರ್ಲ್ಡ್ ಫೈನಲ್ಸ್ (Miss World 2024) ಸಂದರ್ಭದಲ್ಲಿ ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆಯೂ ಆಗಿರುವ ನೀತಾ ಅಂಬಾನಿ (Nita Ambani) ಅವರು ಪ್ರತಿಷ್ಠಿತ ‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ ಅನ್ನು ಸ್ವೀಕರಿಸಿದರು.

    ಹೆಸರಾಂತ ಅಂತಾರಾಷ್ಟ್ರೀಯ ಸ್ಪರ್ಧೆಯ ವೇಳೆ ನೀಡಿದಂತಹ ಅತ್ಯುನ್ನತ ಪ್ರಶಸ್ತಿಯನ್ನು (Beauty With a Purpose Award) ಸ್ವೀಕರಿಸಿದ ಅವರು, ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹಿಳೆಯರ ಸಬಲೀಕರಣ ಎಷ್ಟು ಮುಖ್ಯ? ಎಂಬುದರ ಬಗ್ಗೆ ಮಾತನಾಡಿ ಗಮನ ಸೆಳೆದರು. ಇದೇ ಉದ್ದೇಶಕ್ಕಾಗಿ ತಮ್ಮ ಸ್ವಂತ ಜೀವನದಲ್ಲಿ ಇರುವಂಥ ಬದ್ಧತೆಯನ್ನು ಪುನರುಚ್ಚರಿಸಿದರು.

    ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ದಿವಂಗತ ನೆಲ್ಸನ್ ಮಂಡೇಲಾ ಮತ್ತು ಆಪರೇಷನ್ ಹಂಗರ್ ಇನಾ ಪರ್ಲ್ ಮನ್ ಅವರಂತಹವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದನ್ನೂ ಓದಿ: Miss World 2024: ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಎಡವಿದ ಕರ್ನಾಟಕ ಮೂಲದ ಸಿನಿ ಶೆಟ್ಟಿ

    ಇಂಥವರ ಸಾಲಿನಲ್ಲಿ ನೀತಾ ಅಂಬಾನಿ ಅವರು ಪ್ರಶಸ್ತಿ ಸ್ವೀಕರಿಸಿರುವುದು ಭಾರತೀಯ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಶಿಕ್ಷಣ, ಹೆಲ್ತ್ ಕೇರ್, ಕಲೆ ಮತ್ತು ಸಂಸ್ಕೃತಿ, ಕ್ರೀಡೆ, ದಾನ-ದತ್ತಿ ಕ್ಷೇತ್ರಗಳ ಆಚೆಗೆ ಮಾಡಿರುವಂತಹ ಸೇವೆಗೆ ಒಂದು ನಿದರ್ಶನವಾಗಿದೆ. ಇದನ್ನೂ ಓದಿ: Miss World 2024: ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಕ್ರಿಸ್ಟಿನಾ ಪಿಸ್ಕೋವಾ 

  • Miss World 2024: ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಎಡವಿದ ಕರ್ನಾಟಕ ಮೂಲದ ಸಿನಿ ಶೆಟ್ಟಿ

    Miss World 2024: ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಎಡವಿದ ಕರ್ನಾಟಕ ಮೂಲದ ಸಿನಿ ಶೆಟ್ಟಿ

    ವಿಶ್ವ ಸುಂದರಿ ಸ್ಪರ್ಧೆಯು (Miss World 2024) ಇಂದು (ಮಾ.9) ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದಿದೆ. ಭಾರತದಲ್ಲಿ 28 ವರ್ಷಗಳ ಬಳಿಕ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಕ್ರಿಸ್ಟಿನಾ ಪಿಸ್ಕೋವಾ (Krystyna Pyszkova) ಗೆದ್ದು ಬೀಗಿದ್ದಾರೆ. ಆದರೆ ಕರ್ನಾಟಕ ಮೂಲದ ಹುಡುಗಿ ಸಿನಿ ಶೆಟ್ಟಿ (Sini Shetty) ವಿಶ್ವ ಸುಂದರಿ ಕಿರೀಟ ಜಸ್ಟ್ ಮಿಸ್ ಆಗಿದೆ.

    ಭಾರತದಲ್ಲಿ 28 ವರ್ಷಗಳ ಬಳಿಕ ನಡೆಯುತ್ತಿರುವ ಮಿಸ್ ವರ್ಲ್ಡ್ ಸ್ಪರ್ಧೆ ಇದಾಗಿದ್ದು, 112 ಸ್ಪರ್ಧಿಗಳು ಭಾಗಿಯಾಗಿದ್ದರು. ಇದೀಗ ಮುಂಬೈ ನೆಲೆಸಿರುವ ಮೂಲತಃ ಕರ್ನಾಟಕದವರೇ ಸಿನಿ ಸದಾನಂದ ಶೆಟ್ಟಿ ಅವರು ಕೂಡ ಭಾಗಿಯಾಗಿದ್ದಾರೆ.

    2017ರಲ್ಲಿ ಹರಿಯಾಣದ ಬೆಡಗಿ ಮಾನುಷಿ ಚಿಲ್ಲರ್ ಮಿಸ್ ವರ್ಲ್ಡ್ ಕಿರೀಟ ಗೆದ್ದಿದ್ದರು. ಈ ಬಾರಿ ಸಿನಿ ಶೆಟ್ಟಿ ಸ್ಪರ್ಧಿಸಿದ್ದರು. ಟಾಪ್ 4ಗೆ ಬರಲು ಸಿನಿ ವಿಫಲರಾಗಿದ್ದಾರೆ. ಈ ಹಿಂದೆ ಫೆಮಿನಾ ಮಿಸ್ ಇಂಡಿಯಾ ಕರ್ನಾಟಕ 2022 ಪ್ರಶಸ್ತಿ ಗೆದ್ದಿದ್ದರು.

    ವಿಶ್ವ ಸುಂದರಿ ಕಿರೀಟ ಧರಿಸಿದ್ದ ಭಾರತೀಯ ನಾರಿಯರು

    ರೀಟಾ ಫರಿಯಾ (1966), ಐಶ್ವರ್ಯ ರೈ ಬಚ್ಚನ್ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ ಜೋನಾಸ್ (2000), ಮತ್ತು ಮಾನುಷಿ ಚಿಲ್ಲರ್ (2017).