Tag: Miss India World

  • ಮಿಸ್ ಇಂಡಿಯಾ ವರ್ಲ್ಡ್ ಸಿನಿ ಶೆಟ್ಟಿಗೆ ಸೀರೆ ಉಡೋದು ಕಷ್ಟವಂತೆ

    ಮಿಸ್ ಇಂಡಿಯಾ ವರ್ಲ್ಡ್ ಸಿನಿ ಶೆಟ್ಟಿಗೆ ಸೀರೆ ಉಡೋದು ಕಷ್ಟವಂತೆ

    ಮಂಗಳೂರು ಮೂಲದ ಮಿಸ್ಟ್ ಇಂಡಿಯಾ ವರ್ಲ್ಡ್ ಮೊನ್ನೆಯಷ್ಟೇ ತಮಗೆ ವಿಜಯ್ ದೇವರಕೊಂಡ ಅಂದರೆ ಇಷ್ಟವೆಂದು ಹೇಳಿಕೊಂಡಿದ್ದರು. ಅವರು ಒಪ್ಪುವದಾದರೆ, ಅವರೊಂದಿಗೆ ಸಿನಿಮಾದಲ್ಲಿ ನಟಿಸಲು ತಾವು ಸಿದ್ಧವೆಂದೂ ತಿಳಿಸಿದ್ದರು. ಜೊತೆಗೆ ಖಾಸಗಿಯ ಹಲವು ಸಂಗತಿಗಳನ್ನು ಕೂಡ ಹಂಚಿಕೊಂಡಿದ್ದರು. ಈ ಬಾರಿ ಅವರು ಸೀರೆಯ ಕುರಿತು ಹಲವು ಅಚ್ಚರಿಯ ವಿಷಯಗಳನ್ನು ಹೇಳಿದ್ದಾರೆ.

    ಸಿನಿ ಶೆಟ್ಟಿಗೆ ಸೀರೆ ಅಂದರೆ ಇಷ್ಟವಂತೆ. ಆದರೆ, ಅದನ್ನು ಉಡೋದೆ ಕಷ್ಟ ಅಂತಾರೆ. ನನ್ನ ಬಳಿ ಬಗೆ ಬಗೆಯ ಸೀರೆಗಳು ಇವೆ. ಆಕರ್ಷಕ ಬಣ್ಣದ ಸೀರೆಗಳನ್ನು ನಾನು ಹೊಂದಿದ್ದೇನೆ. ಎಲ್ಲ ಸೀರೆಗಳನ್ನು ಇಷ್ಟಪಟ್ಟೇ ನಾನು ತಗೆದುಕೊಳ್ಳುವೆ. ಆದರೆ, ಸೀರೆ ಉಡುವಾಗ ಅದರ ಕಷ್ಟ ಗೊತ್ತಾಗುತ್ತದೆ. ಹೀಗಾಗಿಯೇ ಕಾಸ್ಟ್ಯೂಮ್ ವಿಚಾರವಾಗಿ ತಮಗೆ ಸೀರೆ ಉಡೋದು ಕಷ್ಟ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ರು ಶ್ವೇತಾ ಶ್ರೀವಾಸ್ತವ್

    ಸದ್ಯ ಮಿಸ್ ವರ್ಲ್ಡ್ ಸ್ಪರ್ಧೆಗೂ ಅವರು ತಾಲೀಮು ನಡೆಸಿದ್ದು, ಆ ಕಿರೀಟವನ್ನೂ ಧರಿಸುವವರೆಗೂ ಮಿಶ್ರಮಿಸುವುದಿಲ್ಲ ಎಂದಿದ್ದಾರೆ ಸಿನಿ ಶೆಟ್ಟಿ. ಜೊತೆಗೆ ಬಾಲಿವುಡ್ ಸಿನಿಮಾ ರಂಗದಿಂದಲೇ ಬಣ್ಣದ ಪ್ರಪಂಚಕ್ಕೆ ಕಾಲಿಡುವ ವಿಚಾರವನ್ನೂ ಅವರು ಹಂಚಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬರುವುದು ತತಕ್ಷಣಕ್ಕೆ ಆಗದೇ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಕಂಡಿತಾ ಬೆಳ್ಳಿ ಪರದೆಯ ಮೇಲೆ ತನ್ನನ್ನು ನೋಡಬಹುದು ಎಂದೂ ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತವರೂರಿಗೆ ಬಂದಿಳಿದ ‘ಮಿಸ್ ಇಂಡಿಯಾ ವರ್ಲ್ಡ್’ ಸಿನಿ ಶೆಟ್ಟಿ: ತುಳುವಿನಲ್ಲಿ ಧನ್ಯವಾದ ಹೇಳಿದ ಸುಂದರಿ

    ತವರೂರಿಗೆ ಬಂದಿಳಿದ ‘ಮಿಸ್ ಇಂಡಿಯಾ ವರ್ಲ್ಡ್’ ಸಿನಿ ಶೆಟ್ಟಿ: ತುಳುವಿನಲ್ಲಿ ಧನ್ಯವಾದ ಹೇಳಿದ ಸುಂದರಿ

    ಮಂಗಳೂರು ಮೂಲದ ಮಿಸ್ ಇಂಡಿಯಾ ವರ್ಲ್ಡ್‍ 2022 ಕಿರೀಟ ಮುಡಿಗೇರಿಸಿಕೊಂಡಿರುವ ಸಿನಿ ಶೆಟ್ಟಿ ಇಂದು ಮಂಗಳೂರಿಗೆ ಆಗಮಿಸಿದ್ದರು. ತವರು ನೆಲಕ್ಕೆ ಸಿನಿ ಶೆಟ್ಟಿ ಕಾಲಿಡುತ್ತಿದ್ದಂತೆಯೇ ಅದ್ಧೂರಿ ಸ್ವಾಗತ ದೊರೆಯಿತು. ಮಂಗಳೂರು ಜನತೆ ಪ್ರೀತಿಯಿಂದಲೇ ಸಿನಿ ಶೆಟ್ಟಿ ಅವರನ್ನು ಬರಮಾಡಿಕೊಂಡು ತನ್ನೂರಿನ ಹುಡುಗಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

    ಸಿನಿ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಇನ್ನಂಜೆ ಅವರು. ಮಿಸ್ ಇಂಡಿಯಾ ಆದ ಬಳಿಕ ಇದೇ ಮೊದಲ ಬಾರಿಗೆ ಅವರು ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರಿನ ಜನತೆ ಮನೆ ಮಗಳಿಗೆ ಆರತಿ ಎತ್ತಿ, ಹೂ ಮಾಲೆ ಹಾಕಿ ಸಡಗರದಿಂದಲೇ ಬರಮಾಡಿಕೊಂಡರು. ಕಿರೀಟ ಸಮೇತ ಸಿನಿ ಶೆಟ್ಟಿ ಮಂಗಳೂರಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಮಿಸ್‍ ಇಂಡಿಯಾ ವರ್ಲ್ದ್ ಕಿರೀಟ ಕಂಡು ಹಲವರು ಸಂಭ್ರಮಿಸಿದರು. ಇದನ್ನೂ ಓದಿ:ಪೊನ್ನಿಯನ್ ಸೆಲ್ವನ್ ವಿವಾದ : ಮಣಿರತ್ನಂ ಮತ್ತು ವಿಕ್ರಮ್ ಗೆ ನೋಟಿಸ್

    ನಂತರ ಮಾಧ್ಯಮಗಳ ಜೊತೆ ಮಾತನಾಡಿರದ ಸಿನಿ ಶೆಟ್ಟಿ  ತುಳುವಿನಲ್ಲೇ ಕನ್ನಡಿಗರಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಒಳ್ಳೆಯ ಪಾತ್ರಗಳು ಮತ್ತು ಕಥೆಗಳು ಸಿಕ್ಕರೆ ಸಿನಿಮಾದಲ್ಲಿ ನಟಿಸುವುದಾಗಿತೂ ಅವರು ತಿಳಿಸಿದರು. ಆನಂತರ ಅವರು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

    Live Tv
    [brid partner=56869869 player=32851 video=960834 autoplay=true]