Tag: miss india international

  • ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಪ್ರಶಸ್ತಿ ಗೆದ್ದ ಬೀದರ್ ಬೆಡಗಿ

    ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಪ್ರಶಸ್ತಿ ಗೆದ್ದ ಬೀದರ್ ಬೆಡಗಿ

    ಬೀದರ್: ಗಡಿ ಜಿಲ್ಲೆಯ ಕುಗ್ರಾಮದ ಬೆಡಗಿ ನಿಶಾ ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌-2019 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಮಿಸ್ ಇಂಡಿಯಾ ಪ್ರಶಸ್ತಿ ಗೆದ್ದ ಜಿಲ್ಲೆಯ ಹಾಗೂ ರಾಜ್ಯದ ಏಕೈಕ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಗಡಿ ಜಿಲ್ಲೆ ಬೀದರಿನ ದುಮ್ಮಸ್ನೂರು ಎಂಬ ಕುಗ್ರಾಮ ನಿವಾಸಿಯಾಗಿರುವ ನಿಶಾ ತಾಳಂಪಳ್ಳಿ, 2019 ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪಿಯುಸಿವರೆಗೆ ಜಿಲ್ಲೆಯಲ್ಲೇ ಶಿಕ್ಷಣ ಮುಗಿಸಿರುವ ನಿಶಾ, ನಂತರ ಹೈದರಾಬಾದ್ ನಲ್ಲಿ ಡಿಪ್ಲೊಮಾ ಇನ್ ಏವಿಎಷನ್ ಮಾಡಿದ್ದಾರೆ. ಹೈದರಾಬಾದ್ ನಲ್ಲಿ ಒಂದು ತಿಂಗಳ ಕಾಲ ನಡೆದ ಇಂಡಿಯನ್ ಫ್ಯಾಷನ್ ಪಿಸ್ತಾ ಆಡಿಷನ್ ನಲ್ಲಿ ಭಾಗಿಯಾಗಿ ಕೊನೆಗೂ ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಪ್ರಶಸ್ತಿಯನ್ನು ಗೆದ್ದಿದ್ದಾರೆ.

    ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಈ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆ ನವೆಂಬರ್ 14ರಿಂದ 18ರವರೆಗೆ ನಡೆದಿದೆ. ಅಂತಿಮ ಸುತ್ತಿನಲ್ಲಿ ನಿಶಾ 30 ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    ನಿಶಾ ಈ ಸ್ಪರ್ಧೆಗೆ ಆಯ್ಕೆಯಾಗಿದ್ದಾಗ ಬೀದರ್ ರಾಜ್ಯ ಹಾಗೂ ದೇಶದ ಜನ ಹೆಮ್ಮೆ ಪಟ್ಟಿದ್ದರು. ಆದರೆ ಈಗ ನಿಶಾ ಪ್ರಶಸ್ತಿ ಗೆದ್ದಿದ್ದು ರಾಜ್ಯದ ಜನತೆ ಖುಷಿಪಡುತ್ತಿದ್ದಾರೆ. ಸ್ಪರ್ಧೆಗೆ ಆಯ್ಕೆ ಆಗಿದ್ದಾಗ ನಿಶಾ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುವ ಮೂಲಕ ನನಗೆ ಸಪೋರ್ಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.

     

  • ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಫೈನಲಿಗೆ ಬೀದರ್ ಬೆಡಗಿ ಆಯ್ಕೆ

    ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಫೈನಲಿಗೆ ಬೀದರ್ ಬೆಡಗಿ ಆಯ್ಕೆ

    ಬೀದರ್: ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಫೈನಲ್ ಗೆ ಗಡಿ ಜಿಲ್ಲೆಯ ಕುಗ್ರಾಮದ ಬೆಡಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮಿಸ್ ಇಂಡಿಯಾ ಪಿಸ್ತಾ ಫೈನಲಿಗೆ ಜಿಲ್ಲೆಯ ಹಾಗೂ ರಾಜ್ಯದ ಏಕೈಕ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಗಡಿ ಜಿಲ್ಲೆ ಬೀದರಿನ ದುಮ್ಮಸ್ನೂರು ಎಂಬ ಕುಗ್ರಾಮ ನಿವಾಸಿಯಾಗಿರೋ ನಿಶಾ ತಾಳಂಪಳ್ಳಿ, 2019 ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಫೈನಲ್ ಗೆ ಆಯ್ಕೆಯಾಗಿದ್ದಾರೆ. ಪಿಯುಸಿ ವರೆಗೆ ಜಿಲ್ಲೆಯಲ್ಲೇ ಶಿಕ್ಷಣ ಮುಗಿಸಿರುವ ನಿಶಾ, ನಂತರ ಹೈದರಾಬಾದ್ ನಲ್ಲಿ ಡಿಪ್ಲೊಮಾ ಇನ್ ಎವಿಎಷನ್ ಮಾಡಿದ್ದಾರೆ. ಹೈದರಾಬಾದ್ ನಲ್ಲಿ ಒಂದು ತಿಂಗಳ ಕಾಲ ನಡೆದ ಇಂಡಿಯನ್ ಫ್ಯಾಷನ್ ಪಿಸ್ತಾ ಆಡಿಷನ್ ನಲ್ಲಿ ಭಾಗಿಯಾಗಿ ಕೊನೆಗೂ ಮಿಸ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.

    ಈ ಸ್ಪರ್ಧೆಗೆ ಆಯ್ಕೆಯಾದ ಬೀದರ್ ನ ಮೊದಲಿಗರು ಹಾಗೂ ರಾಜ್ಯದ ಏಕೈಕ ಯುವತಿಯಾಗಿದ್ದಾರೆ. ಮುಂದಿನ ತಿಂಗಳು ನವೆಂಬರ್ 18 ರಂದು ಫೈನಲ್ ಹಣಾಹಣಿ ನಡೆಯಲಿದ್ದು, 30 ಸ್ಪರ್ಧಿಗಳ ಪೈಕಿ ಒಬ್ಬರನ್ನು ಮಿಸ್ ಇಂಡಿಯಾ ಎಂದು ಘೋಷಣೆ ಮಾಡಲಿದ್ದಾರೆ.

    ನಿಶಾ ಈ ಸ್ಪರ್ಧೆಗೆ ಆಯ್ಕೆಯಾಗಿದ್ದು, ಇದೀಗ ಬೀದರ್ ರಾಜ್ಯ ಹಾಗೂ ದೇಶದ ಜನ ಹೆಮ್ಮೆ ಪಡುವಂತಾಗಿದೆ. ಫೈನಲ್ ಸ್ಪರ್ಧೆಯಲ್ಲಿ ನಿಶಾ ಗೆದ್ದು ಬರಲಿ ಎಂದು ಎಲ್ಲರೂ ಹರಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುವ ಮೂಲಕ ನನಗೆ ಸಪೋರ್ಟ್ ಮಾಡಿ ಎಂದು ನಿಶಾ ಮನವಿ ಮಾಡಿಕೊಳ್ಳುತ್ತಿದ್ದಾರೆ.