Tag: Miss Elegant Asia

  • ಮಿಸ್ ಎಲಿಗೆಂಟ್ ಏಷ್ಯಾ ಆದ ಮಂಡ್ಯ ಹುಡ್ಗಿ- ಅರಬ್ ದೇಶದಲ್ಲಿ ರನ್ನರಪ್ ಕಿರೀಟ ತೊಟ್ಟ ಹಳ್ಳಿ ಕುವರಿ

    ಮಿಸ್ ಎಲಿಗೆಂಟ್ ಏಷ್ಯಾ ಆದ ಮಂಡ್ಯ ಹುಡ್ಗಿ- ಅರಬ್ ದೇಶದಲ್ಲಿ ರನ್ನರಪ್ ಕಿರೀಟ ತೊಟ್ಟ ಹಳ್ಳಿ ಕುವರಿ

    ಮಂಡ್ಯ: ಅರಬ್ ದೇಶದ ಓಮನ್ನಿನ ಮಸ್ಕತ್‍ನಲ್ಲಿ ನಡೆದ ಮಿಸ್ ಎಲಿಗೆಂಟ್ ಏಷ್ಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಂಡ್ಯದ ಹುಡುಗಿ ಸ್ನೇಹಗೌಡ ರನ್ನರಪ್ ಆಗಿ ಆಯ್ಕೆಯಾಗಿದ್ದಾರೆ. ವಿವಿಧ ದೇಶದ ಸ್ಪರ್ಧಿಗಳು ಪಾಲ್ಗೊಂಡಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ಸ್ನೇಹ ಅಂತಿಮವಾಗಿ ಮಿಸ್ ಎಲಿಗೆಂಟ್ ಏಷ್ಯಾದ ರನ್ನರಪ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

    ಇದೇ ತಿಂಗಳು 14ರಂದು ಅರಬ್ ದೇಶದ ಓಮಾನ್ನಿನ ಮಸ್ಕತ್ ನಲ್ಲಿ ಝಿ ಈವೆಂಟ್ ಆಯೋಜಿಸಿದ್ದ ಮಿಸ್ ಎಲಿಗೆಂಟ್ ಏಷ್ಯಾ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಮಂಡ್ಯ ಬೆಡಗಿ ಸ್ನೇಹಗೌಡ ರನ್ನರಪ್ ಆಗಿದ್ದಾರೆ. ವಿವಿಧ ದೇಶಗಳಿಂದ ಆಗಮಿಸಿದ್ದ ಒಟ್ಟು 12 ಜನರಲ್ಲಿ ಸ್ನೇಹ ಅಂತಿಮವಾಗಿ ರನ್ನರಪ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

    ಸುಮಾರು 2 ವರ್ಷಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸ್ನೇಹಗೌಡ ಮೈಸೂರಿನಲ್ಲಿ ನಡೆದ ಮಿಸ್ ಕರ್ನಾಟಕ, ಮಿಸ್ ಮೈಸೂರು ಹಾಗೂ ಬೆಂಗಳೂರಿನಲ್ಲಿ ನಡೆದ ಮಿಸ್ ಇಂಡಿಯಾ ಎಲಿಗೆಂಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಸ್ನೇಹ ಮಿಸ್ ಎಲಿಗೆಂಟ್ ಏಷ್ಯಾ ಸ್ಪರ್ಧೆಯಲ್ಲಿ ರನ್ನರಪ್ ಆಗುತ್ತಿದ್ದಂತೆ ಮಂಡ್ಯದಲ್ಲಿ ಉತ್ತಮ ಬೆಂಬಲ ದೊರಕಿದೆ. ಮಂಡ್ಯದಂತಹ ಹಳ್ಳಿಯ ಹೆಣ್ಣು ಮಗಳು ದೂರದ ಅರಬ್ ದೇಶದ ಸೌಂದರ್ಯ ಸ್ಪರ್ಧೆಯನ್ನು ಗೆದ್ದಿರೋದು ಹೆಮ್ಮೆಯ ವಿಚಾರ ಎಂದು ಹೇಳುತ್ತಿದ್ದಾರೆ. ಇದರ ಜೊತೆಗೆ ಸ್ನೇಹ ಪೋಷಕರು ಕೂಡ ಮಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ನೇಹಾಗೆ ಸಿನಿಮಾ ರಂಗದಲ್ಲಿ ಒಳ್ಳೆಯ ಆಫರ್ ಗಳು ಬರುತ್ತಿದ್ದು, ಮಗಳ ಯಶಸ್ಸಿಗೆ ಸಹಕರಿಸುತ್ತೇವೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv