Tag: misbehavior

  • ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಕರವೇ ಗೌರವಾಧ್ಯಕ್ಷನಿಗೆ ಥಳಿತ!

    ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಕರವೇ ಗೌರವಾಧ್ಯಕ್ಷನಿಗೆ ಥಳಿತ!

    ಉಡುಪಿ: ಮಹಿಳೆಯೊಬ್ಬರನ್ನು ಮಂಚಕ್ಕೆ ಕರೆದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣದ) ಗೌರವಾಧ್ಯಕ್ಷನಿಗೆ ಮಹಿಳೆ ಮತ್ತು ಆಕೆಯ ಪತಿ ಥಳಿಸಿದ ಘಟನೆ ಜಿಲ್ಲೆಯ ಶಿರ್ವ ಗ್ರಾಮದ ಪಂಜಿಮಾರಲ್ಲಿ ನಡೆದಿದೆ.

    ಸಂತೋಷ್ ಶೆಟ್ಟಿ ಮಹಿಳೆಯನ್ನು ಮಂಚಕ್ಕೆ ಕರೆದ ವ್ಯಕ್ತಿ. ಸಂತೋಷ್ ನೊಂದ ಮಹಿಳೆಯ ಮೊಬೈಲ್‍ಗೆ ಅಶ್ಲೀಲ ಸಂದೇಶ ರವಾನಿಸುವುದು, ಕರೆ ಮಾಡಿ ಹೋಟೆಲ್‍ನಲ್ಲಿ ರೂಂ ಬುಕ್ ಮಾಡಿರುವುದಾಗಿ ಹೇಳುತ್ತಿದ್ದ.

    ಸಂತೋಷ್ ವರ್ತನೆಯಿಂದ ಬೇಸತ್ತ ಮಹಿಳೆಯು ಹಲವು ದಿನಗಳಿಂದ ಆರೋಪಿಗೆ ಬಲೆ ಬೀಸಿದ್ದಳು. ಅಷ್ಟೇ ಅಲ್ಲದೆ ಸಂತೋಷ್ ವರ್ತನೆ ಕುರಿತು ತನ್ನ ಪತಿಗೂ ತಿಳಿಸಿ ಉಪಾಯ ಹೂಡಿದ್ದರು. ಸಂತೋಷ್ ಕರೆ ಮಾಡುತ್ತಿದ್ದಂತೆ ತಮ್ಮ ಫ್ಯಾನ್ಸಿ ಅಂಗಡಿಗೆ ಬರುವಂತೆ ತಿಳಿಸಿದ್ದಳು. ಇದಕ್ಕೆ ಸಂತೋಷ್ ಒಪ್ಪಿ, ಮಹಿಳೆಯನ್ನು ಕರೆದೊಯ್ಯಲು ಬಂದಿದ್ದ. ತಕ್ಷಣವೇ ಮಹಿಳೆಯ ಪತಿ ಸಂತೋಷ್‍ನನ್ನು ಹಿಡಿದು, ಪತ್ನಿ ಜೊತೆ ಸೇರಿ ಥಳಿಸಿ, ನಂತರ ಶಿರ್ವ ಪೊಲೀಸರಿಗೆ ಒಪ್ಪಿಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.