Tag: Misbehaving

  • ಮತ್ತೆ ತಬ್ಲಿಘಿಗಳ ಹುಚ್ಚಾಟ – ಗಾಜಿಯಾಬಾದ್ ಬಳಿಕ ಕಾನ್ಪುರ, ಲಕ್ನೋದಿಂದ ದೂರು

    ಮತ್ತೆ ತಬ್ಲಿಘಿಗಳ ಹುಚ್ಚಾಟ – ಗಾಜಿಯಾಬಾದ್ ಬಳಿಕ ಕಾನ್ಪುರ, ಲಕ್ನೋದಿಂದ ದೂರು

    ಲಕ್ನೋ: ಕ್ಯಾರೆಂಟೈನ್‍ನಲ್ಲಿ ಇರಿಸಲಾಗಿರುವ ತಬ್ಲಿಘಿ ಜಮಾತ್‍ನ ಜನರು ದುರ್ವತೆ ಕೈಬಿಡುವಂತೆ ಕಾಣುತ್ತಿಲ್ಲ. ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ಅವರು ಕೆಟ್ಟದಾಗಿ ವರ್ತಿಸಿ, ಅಶ್ಲೀಲತೆ ಮೆರೆದಿದ್ದರು. ಇದರಿಂದಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ತಬ್ಲಿಘಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಇಷ್ಟಾದರೂ ತಬ್ಲಿಘಿಗಳು ತಮ್ಮ ಕೆಟ್ಟ ಚಾಳಿಯನ್ನು ಮುಂದುರಿಸಿದ್ದು, ಗಾಜಿಯಾಬಾದ್ ಬೆನ್ನಲ್ಲೇ ಲಕ್ನೋ ಮತ್ತು ಕಾನ್ಪುರದಿಂದ ಇದೇ ರೀತಿಯ ದೂರುಗಳು ಬಂದಿವೆ ಎಂದು ವರದಿಯಾಗಿದೆ.

    ಕಾನ್ಪುರ:
    ಕಾನ್ಪುರದ ಲಾಲಾ ಲಜಪತ್ ರೈ ಆಸ್ಪತ್ರೆಯಲ್ಲಿ ತಬ್ಲಿಘಿ ಜಮಾತ್‍ನ 22 ಮಂದಿಯನ್ನು ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ. ಆಸ್ಪತ್ರೆಯು ಗಣೇಶ್ ಶಂಕರ್ ವಿದ್ಯಾ ವೈದ್ಯಕೀಯ ಕಾಲೇಜಿನ ಅಡಿ ಬರುತ್ತದೆ. ಕಾಲೇಜಿನ ಪ್ರಾಂಶುಪಾಲರಾದ ಆರತಿ ಲಾಲ್ ಚಂದಾನಿ, `ತಬ್ಲಿಘಿ ಜಮಾತ್‍ನಲ್ಲಿ ಭಾಗವಹಿಸಿದ್ದ 22 ಜನರನ್ನು ಕ್ಯಾರೆಂಟೈನ್ ವಾರ್ಡಿಗೆ ದಾಖಲಿಸಲಾಗಿದೆ. ಆದರೆ ಅವರು ವೈದ್ಯಕೀಯ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಬಲರಾಂಪುರ:
    ಲಕ್ನೋದ ಮಸೀದಿಯಲ್ಲಿ ಸಹರಾನ್‍ಪುರದ 12 ಜನರು ಸೋಂಕಿಗೆ ಒಳಗಾಗಿದ್ದಾರೆ. ಅವರನ್ನು ಬಲರಾಂಪುರ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇಲ್ಲಿಯೂ ಅವರು ಅಸಭ್ಯ ವರ್ತನೆ, ನೌಕರರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡುವುದು, ಸಿಬ್ಬಂದಿಯನ್ನು ನಿಂದಿಸುವುದನ್ನು ಮಾಡುತ್ತಿದ್ದಾರೆ. ಸೋಂಕಿತರು ಸಿಬ್ಬಂದಿ, ರೋಗಿಗಳನ್ನು ತಬ್ಬಿಕೊಳ್ಳುತ್ತಿದ್ದಾರೆ. ಆಹಾರ ಮತ್ತು ಕುಡಿಯುವ ನೀರನ್ನು ಮಿತಿಯಿಲ್ಲದೆ ಕೇಳುತ್ತಿದ್ದಾರೆ. ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದ್ದರಿಂದ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಜೊತೆಗೆ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಕುಶಿನಗರ:
    ಉತ್ತರ ಪ್ರದೇಶದ ಕುಶಿನಗರದ ಜಮೀನಿನಲ್ಲಿ ಅಡಗಿ ಕುಳಿತಿದ್ದ 14 ಮಂದಿ ತಬ್ಲಿಘಿಗಳನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ನೇಪಾಳಕ್ಕೆ ಪಲಾಯನ ಬೆಳೆಸುವ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಪೊಲೀಸರು ಎಲ್ಲರನ್ನೂ ಕ್ವಾರಂಟೈನ್‍ಗೆ ಕಳುಹಿಸಿದ್ದಾರೆ.

    ಮುಸ್ಲಿಂ ಧರ್ಮಗುರು ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹ್ಲಿ ಮತ್ತು ಶಿಯಾ ಧರ್ಮಗುರು ಮೌಲಾನಾ ಸೈಫ್ ರಿಜ್ವಿ ಅವರು ನಿಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಿ ಎಂದು ತಬ್ಲಿಘಿ ಜಮಾತ್ ಜನರಿಗೆ ಸಲಹೆ ನೀಡಿದ್ದರು. ಮೌಲಾನಾ ಖಾಲಿದ್ ರಶೀದ್ ಶನಿವಾರ ವಿಡಿಯೋ ಬಿಡುಗಡೆ ಮಾಡಿ, ‘ನಿಮ್ಮ ನಡವಳಿಕೆಯಿಂದ ಮುಸ್ಲಿಂ ಸಮುದಾಯದ ಹೆಸರನ್ನು ಕಳಂಕಿತಗೊಳಿಸಲಾಗುತ್ತಿದೆ. ಸಮಾಜದಲ್ಲಿ ಕೊರೊನಾದ ಅಪಾಯ ಹೆಚ್ಚುತ್ತಿದೆ. ಶಿಸ್ತಿನಿಂದ ಸರ್ಕಾರದ ಆದೇಶಗಳನ್ನು ಪಾಲಿಸಿ’ ಎಂದು ಕೇಳಿಕೊಂಡಿದ್ದರು.

  • ವಿಡಿಯೋ: ಮಹಿಳೆಯ ಜತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಬಿತ್ತು ಗೂಸಾ

    ವಿಡಿಯೋ: ಮಹಿಳೆಯ ಜತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಬಿತ್ತು ಗೂಸಾ

    ಬೆಳಗಾವಿ: ಮಹಿಳೆಯ ಜೊತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಖತ್ ಗೂಸಾ ನೀಡಿದ ಘಟನೆ ಜಿಲ್ಲೆಯ ಸವದತ್ತಿ ಪಟ್ಟಣದ ಅರಳಿಗಿಡ ಓಣಿಯಲ್ಲಿ ನಡೆದಿದೆ.

    ಪಟ್ಟಣದ ಅರಳಿಗಿಡ ಓಣಿಯಲ್ಲಿ ಆರೋಪಿ ದಾವಲ್ ಉಸ್ತಾದ ಎಂಬಾತ ಮದ್ಯಪಾನ ಮಾಡಿ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿದ್ದ. ಇದನ್ನ ಗಮನಿಸಿದ ಮಹಿಳೆಯರು ಮತ್ತು ಸ್ಥಳೀಯರು ಸೇರಿ ದಾವಲ್‍ಗೆ ಥಳಿಸಿದ್ದಾರೆ.

    ಅಲ್ಲದೇ ದಾವಲ್ ನನ್ನು ಪಟ್ಟಣದಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸವದತ್ತಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://youtu.be/ceDHNlsOlBw