Tag: miraj

  • 15 ದಿನಗಳ ಹಿಂದಷ್ಟೇ ಡಿವೋರ್ಸ್- ಪತ್ನಿಯನ್ನು ಕೊಲ್ಲಲು ಪಿಸ್ತೂಲ್ ಖರೀದಿಸಿ ಅರೆಸ್ಟ್ ಆದ!

    15 ದಿನಗಳ ಹಿಂದಷ್ಟೇ ಡಿವೋರ್ಸ್- ಪತ್ನಿಯನ್ನು ಕೊಲ್ಲಲು ಪಿಸ್ತೂಲ್ ಖರೀದಿಸಿ ಅರೆಸ್ಟ್ ಆದ!

    ಚಿಕ್ಕೋಡಿ: ಹೆಂಡತಿಯನ್ನು (Wife) ಕೊಲ್ಲಲು ಕಂಟ್ರಿ ಪಿಸ್ತೂಲ್ ಖರೀದಿಸಿದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರದ (Maharashtra) ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಚಿಕ್ಕೋಡಿಯ ಸಚಿನ್ ಬಾಬಾಸಾಹೇಬ್ ರಾಯಮಾನೆ ಎಂದು ಗುರುತಿಸಲಾಗಿದೆ. 15 ದಿನಗಳ ಹಿಂದಷ್ಟೆ ಡಿವೋರ್ಸ್ ನೀಡಿ, ಈಗ ಪತ್ನಿಯನ್ನು ಕೊಲ್ಲಲು ಸ್ಕೆಚ್ ಹಾಕಿದ್ದ. ಮೀರಜ್ (Miraj) ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಒಡಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಉಗಾಂಡದಲ್ಲಿ ಉಗ್ರರ ದಾಳಿ 37 ವಿದ್ಯಾರ್ಥಿಗಳ ಸಜೀವ ದಹನ

    ಮೀರಜ್‍ನ ಕುಪವಾಡ ಗ್ರಾಮದಲ್ಲಿ ಪಿಸ್ತೂಲ್ ಖರೀದಿಸಿದ್ದಾನೆ. ವಿಚಾರಣೆ ವೇಳೆ ಹೆಂಡತಿಯನ್ನು ಕೊಲ್ಲಲು ರಿವಾಲ್ವಾರ್ ಖರೀದಿಸಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. ಹೆಂಡತಿಗೆ ಅಕ್ರಮ ಸಂಬಂಧ ಇದೆ ಎಂದು ಅನುಮಾನಿಸಿ ಕೊಲೆಗೆ ಸ್ಕೆಚ್ ಹಾಕಿದ್ದಾಗಿ ಆರೋಪಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಚಿನ್ ಪತ್ನಿ ಹರ್ಷಿತಾ ತನ್ನ ಪ್ರಾಣಕ್ಕೇನಾದರೂ ಅಪಾಯ ಆದರೆ ಅದಕ್ಕೆ ಪತಿ (Husband) ಸಚಿನ್ ಕಾರಣ ಎಂದು ದೂರು ನೀಡಿದ್ದಾಳೆ. ಅಲ್ಲದೇ ತನಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾಳೆ. ಮೀರಜ್‍ನ ಗಾಂಧೀ ಚೌಕ್ ಹಾಗೂ ಚಿಕ್ಕೋಡಿ (Chikkodi) ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಕ್ಕಿ ಮಾರಾಟಕ್ಕೆ ಕೇಂದ್ರ ನಿರ್ಬಂಧ ಹೇರಿರುವ ಬಗ್ಗೆ ತೇಜಸ್ವಿ ಸೂರ್ಯ ಸ್ಪಷ್ಟೀಕರಣ

  • ಯುದ್ಧ ವಿಮಾನ ಪತನ- ಭಾರೀ ದುರಂತವನ್ನೇ ತಡೆದು ಅಮರರಾದ ಪೈಲಟ್‍ಗಳು..!

    ಯುದ್ಧ ವಿಮಾನ ಪತನ- ಭಾರೀ ದುರಂತವನ್ನೇ ತಡೆದು ಅಮರರಾದ ಪೈಲಟ್‍ಗಳು..!

    ಬೆಂಗಳೂರು: ತಾಂತ್ರಿಕ ದೋಷದಿಂದ ವಾಯುಪಡೆಯ ಮಿರಾಜ್-2000 ನಂಬರ್‍ನ ಯುದ್ಧ ವಿಮಾನ ಬೆಂಗಳೂರಿನ ಎಚ್‍ಎಎಲ್‍ನ ಯಮಲೂರು ಬಳಿ ಪತನಗೊಂಡು ಇಬ್ಬರು ಪೈಲಟ್‍ಗಳು ಶುಕ್ರವಾರ ಸಾವನ್ನಪ್ಪಿದ್ದರು. ಆದರೆ ಪೈಲಟ್ ಗಳು ತಮ್ಮ ಜೀವತೆತ್ತು ಸಂಭವಿಸಬಹುದಾದ ಭಾರೀ ಅವಘಡವನ್ನು ತಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಪ್ರಾಯೋಗಿಕ ಹಾರಾಟ ವೇಳೆ ಈ ಅವಘಡ ಸಂಭವಿಸಿದ್ದು, ರನ್‍ವೇಯಲ್ಲಿ ಹಾರಾಟ ನಡೆಸಿದ್ದ ವಿಮಾನ ಟೇಕಾಫ್ ಆಗಿದ್ದರೆ ವಸತಿ ಹೆಚ್ಚಾಗಿರುವ ಪ್ರದೇಶದಲ್ಲಿ ಬೀಳುವ ಸಾಧ್ಯತೆ ಇತ್ತು. ಆದರೆ ಇದನ್ನು ಮನಗಂಡ ಫೈಲಟ್‍ಗಳು ವಿಮಾನ ಎತ್ತರಕ್ಕೆ ಟೇಕಾಫ್ ಮಾಡದಿರಲು ನಿರ್ಧರಿಸಿ ಹೊರ ಬರಲು ಪ್ರಯತ್ನಿಸಿದ್ದರು.

    ಅಂತಿಮ ಕ್ಷಣದಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದ ಪೈಲಟ್ ಗಳು ಪ್ಯಾರಚೂಟ್ ಬಳಸಿ ಹಾರಲು ಯತ್ನಿಸಿದ್ದರು. ಆದರೆ ಆ ವೇಳೆಗೆ ವಿಮಾನ ಸ್ಫೋಟಗೊಂಡಿತ್ತು. ಪರಿಣಾಮ ಸಿದ್ದಾರ್ಥ್ ನೇಗಿ (31), ಸಮೀರ್ ಅಬ್ರೋಲ್(33) ಜೀವ ಕಳೆದುಕೊಂಡಿದ್ದಾರೆ. ಸಮೀರ್ ಬೆಂಕಿ ಹೊತ್ತಿಕೊಂಡಿದ್ದ ಪ್ಯಾರಚೂಟ್ ಮೇಲೆಯೇ ಬಿದ್ದ ಪರಿಣಾಮ ಸುಟ್ಟು ಕರಕಲಾದರೆ, ತೀವ್ರ ಗಾಯಗೊಂಡಿದ್ದ ನೇಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದರು.

    ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದು, ಒಂದೊಮ್ಮೆ ವಿಮಾನ ಜನ ವಸತಿ ಪ್ರದೇಶದಲ್ಲಿ ಪತನವಾಗಿದ್ದರೆ ಭಾರೀ ಅವಘಡ ಸಂಭವಿಸುತ್ತಿತ್ತು ಎಂದು ತಿಳಿಸಿದ್ದಾರೆ. ಅಲ್ಲದೇ ಈ ಕುರಿತು ಮಾಹಿತಿ ನೀಡಿರುವ ಎಚ್‍ಎಎಲ್ ಅಧಿಕಾರಿಯೊಬ್ಬರು ರನ್‍ವೇಯಲ್ಲಿಯೇ ವಿಮಾನದ ಟೈರ್ ಕಳಚಿ ಬಿದ್ದ ಪರಿಣಾಮ ಮುಂಭಾಗ ರನ್ ವೇಗೆ ಉಜ್ಜಿ ಬೆಂಕಿ ಕಿಡಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿತ್ತು ಎಂದು ವಿವರಿಸಿದ್ದಾರೆ.

    ವಿಮಾನ ಸ್ಫೋಟಗೊಂಡ ಅಲ್ಪ ದೂರದಲ್ಲೇ ಜನ ವಸತಿ ಪ್ರದೇಶಗಳಿದ್ದು, ಶಾಲೆ, ಟೆಕ್ ಪಾರ್ಕ್, ರಸ್ತೆ ಸೇರಿದಂತೆ ಹಲವು ಪ್ರದೇಶಗಳಿದೆ. ಒಂದೊಮ್ಮೆ ಪೈಟಲ್‍ಗಳು ವಿಮಾನವನ್ನು ರನ್ ವೇಯಿಂದ ಟೇಕಾಫ್ ಆಗಿದ್ದರೆ ವಸತಿ ಪ್ರದೇಶದಲ್ಲಿ ಉರುಳುವ ಸಾಧ್ಯತೆ ಇತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಎಚ್‍ಎಎಲ್ ಬಳಿ ಯುದ್ಧವಿಮಾನ ಪತನ- ಪೈಲಟ್ ದುರ್ಮರಣ

    ಎಚ್‍ಎಎಲ್ ಬಳಿ ಯುದ್ಧವಿಮಾನ ಪತನ- ಪೈಲಟ್ ದುರ್ಮರಣ

    ಬೆಂಗಳೂರು: ಇಲ್ಲಿ ಎಚ್‍ಎಎಲ್ ಏರ್ ಪೋರ್ಟ್  ಬಳಿ ಯುದ್ಧ ವಿಮಾನವೊಂದು ಪತನವಾಗಿದ್ದು, ಪೈಲಟ್ ಮೃತಪಟ್ಟಿರುವ ಘಟನೆ  ಇಂದು ನಡೆದಿದೆ.

    ಸಿದ್ದಾರ್ಥ್ ಮೃತ ದುರ್ದೈವಿ ಪೈಲಟ್ ಆಗಿದ್ದು, ಮಿರಾಜ್ ಎನ್ನುವ ಯುದ್ಧ ವಿಮಾನ ಪತನವಾಗಿದೆ. ಮಿರಾಜ್ ಭಾರೀ ಸ್ಫೋಟಗೊಂಡ ಪರಿಣಾಮ ದಟ್ಟವಾದ ಹೊಗೆ ಅಲ್ಲಿ ಆವರಿಸಿದೆ. ಇದರಿಂದ ಸ್ಥಳೀಯರು ಗಾಬರಿಗೊಂಡಿದ್ದಾರೆ.

    ಎಚ್ ಎ ಎಲ್ ನಿಂದ ಹೊರಭಾಗದಲ್ಲಿ ಮನೆಗಳ ಮೇಲೆ ಪತನವಾಗುವ ಸಾಧ್ಯತೆ ಇತ್ತು. ಪೈಲಟ್ ಗಳ ಸಮಯ ಪ್ರಜ್ಞೆಯಿಂದ ಎಚ್ ಎ ಎಲ್ ಕಂಪೌಂಡ್ ಒಳಗೆ ಬಿದ್ದಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv