Tag: Mirai

  • ತೇಜ ಸಜ್ಜಾ ನಟನೆಯ ಮಿರಾಯ್ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್

    ತೇಜ ಸಜ್ಜಾ ನಟನೆಯ ಮಿರಾಯ್ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್

    ನುಮಾನ್’ ಮೂಲಕ ಸಾಕಷ್ಟು ಜನಪ್ರಿಯರಾಗಿರುವ ಟಾಲಿವುಡ್ ನಟ ತೇಜ ಸಜ್ಜಾ (Teja Sajja) ನಟನೆಯ ಬಹು ನಿರೀಕ್ಷಿತ ಸಿನಿಮಾ ಮಿರಾಯ್. ಹನುಮಾನ್ ಚಿತ್ರದ ಬಳಿಕ ತೇಜ ಒಪ್ಪಿಕೊಂಡಿರುವ ಮತ್ತೊಂದು ಸೂಪರ್ ಹೀರೋ ಚಿತ್ರ ಇದಾಗಿದೆ. ಸ್ಯಾಂಪಲ್ಸ್ ಮೂಲಕ ನಿರೀಕ್ಷೆ ಹೆಚ್ಚಿರುವ ಮಿರಾಯ್ (Mirai) ಸಿನಿಮಾ ಸೆಪ್ಟೆಂಬರ್ 12ರಂದು ತೆರೆಗೆ ಬರ್ತಿದೆ.

    ಮಿರಾಯ್ ಸಿನಿಮಾದ ಥಿಯೇಟರಿಕಲ್ ಟ್ರೇಲರ್ ನ್ನು ಚಿತ್ರತಂಡ ನಾಳೆ ರಿಲೀಸ್ ಮಾಡಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡಿದೆ. ರಾಕಿಂಗ್ ಸ್ಟಾರ್ ಮನೋಜ್ ಮಂಚು ಖಳನಾಯಕನಾಗಿ ಮತ್ತು ರಿತಿಕಾ ನಾಯಕ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸೂಪರ್ ಯೋಧಾ ಪಾತ್ರದಲ್ಲಿ ತೇಜ ಸಜ್ಜಾ ಅಭಿನಯಿಸಿದ್ದಾರೆ. ಇದನ್ನೂ ಓದಿ: ಗುರುವಾಯೂರು ದೇವಾಲಯದ ಕೊಳದಲ್ಲಿ ಕಾಲು ತೊಳೆದ ಜಾಸ್ಮಿನ್ ಜಾಫರ್ ಭುಗಿಲೆದ್ದ ಆಕ್ರೋಶ

    ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಮಿರಾಯ್ಗೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶನ ಚಿತ್ರಕ್ಕಿದ್ದು, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರು. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

    ವಿಶೇಷವಾಗಿ ಈ ಚಿತ್ರ 2D ಮತ್ತು 3D ಫಾರ್ಮಾಟ್ನಲ್ಲಿ ರಿಲೀಸ್ ಆಗಲಿದೆ. ಮಿರಾಯ್ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಸಿನಿಮಾ ಹೇಳುತ್ತದೆ.

  • ಮಂಚು ಮನೋಜ್ ನಟನೆಯ ‘ಮಿರಾಯ್’ ಫಸ್ಟ್ ಲುಕ್ ರಿಲೀಸ್- ಸಾಥ್‌ ನೀಡಿದ ಡಿಬಾಸ್, ಕಿಚ್ಚ

    ಮಂಚು ಮನೋಜ್ ನಟನೆಯ ‘ಮಿರಾಯ್’ ಫಸ್ಟ್ ಲುಕ್ ರಿಲೀಸ್- ಸಾಥ್‌ ನೀಡಿದ ಡಿಬಾಸ್, ಕಿಚ್ಚ

    ತೆಲುಗಿನ ರಾಕಿಂಗ್ ಸ್ಟಾರ್ ಅಂತಾ ಕರೆಯಲ್ಪಡುವ ಮಂಚು ಮನೋಜ್ (Manchu Manoj) ಜನ್ಮದಿನದ (ಮೇ 20) ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿರುವ ಮನೋಜ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 8 ವರ್ಷದ ಬಳಿಕ ಮಂಚು ಮನೋಜ್ ಮತ್ತೆ ಬಣ್ಣ ಹಚ್ಚಿದ್ದಾರೆ. ‘ಹನುಮಾನ್’ ಖ್ಯಾತಿಯ ತೇಜ್ ಸಜ್ಜಾ (Teja Sajja) ನಾಯಕನಾಗಿ ನಟಿಸುತ್ತಿರುವ ಮಿರಾಯ್ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಮನೋಜ್ ಬೆಳ್ಳಿತೆರೆಗೆ ಮತ್ತೆ ಕಂಬ್ಯಾಕ್ ಆಗಿದ್ದಾರೆ.

    ಮಂಚು ಮನೋಜ್ ಜನ್ಮದಿನದ ವಿಶೇಷವಾಗಿ ಮಿರಾಯ್ ಚಿತ್ರತಂಡ ಸ್ಪೆಷಲ್ ವಿಡಿಯೋ ಬಿಡುಗಡೆ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಹಾಗೂ ಕಿಚ್ಚ ಸುದೀಪ್ (Actor Sudeep) ಮನೋಜ್ ಫಸ್ಟ್ ಲುಕ್ ಬಿಡುಗಡೆ ಮಾಡಿ ಪ್ರೀತಿಯ ಸಹೋದರನಿಗೆ ಸೋಶಿಯಲ್‌ ಮೀಡಿಯಾದಲ್ಲಿ ಶುಭಾಶಯ ಕೋರಿದ್ದಾರೆ. ‘ದಿ ಬ್ಲ್ಯಾಕ್ ಸ್ವೋರ್ಡ್’ ಟೈಟಲ್ ನಡಿ ರಿಲೀಸ್ ಆಗಿರುವ ಫಸ್ಟ್ ಲುಕ್ ನಲ್ಲಿ ಮನೋಜ್ ಉದ್ದ ಕೂದಲು ಬಿಟ್ಟು ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಭರ್ಜರಿ ಆಕ್ಷನ್ಸ್ ಮೂಲಕ ಗಮನ ಸೆಳೆಯುವ ಮಂಚು ಮನೋಜ್ ಡಬಲ್ ಶೇಡ್ ನಲ್ಲಿ ನಟಿಸಿದ್ದಾರೆ.

    ‘ಮಿರಾಯ್’ (Mirai Film) ಸಿನಿಮಾಗೆ ಕಾರ್ತಿಕ್ ಗಟ್ಟಮ್ನೇನಿ ಆಕ್ಷನ್ ಕಟ್ ಹೇಳಿದ್ದಾರೆ. ಮಿರಾಯ್ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಬಿಚ್ಚಿಡುವ ಕಥೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿಜಿ ವಿಶ್ವಪ್ರಸಾದ್ ‘ಮಿರಾಯ್’ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

    ಕಾರ್ತಿಕ್ ಗಟ್ಟಮ್ನೇನಿ ಮಿರಾಯ್‌ಗೆ ಚಿತ್ರಕಥೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದು, ಮಣಿಬಾಬು ಕರಣಂ ಅವರು ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶಕನ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರಾಗಿದ್ದಾರೆ. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

    ‘ಮಿರಾಯ್’ ಸಿನಿಮಾವನ್ನು 2 ಡಿ ಹಾಗೂ 3 ಡಿ ವರ್ಷನ್ ನಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಮುಂದಿನ ವರ್ಷದ ಏಪ್ರಿಲ್ 18ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್  ಹಾಕಿಕೊಂಡಿದೆ.

  • 5 ನಿಮಿಷ ಚಾರ್ಜ್‌ ಮಾಡಿದ್ರೆ 600 ಕಿ.ಮೀ ಸಂಚಾರ – ಹೈಡ್ರೋಜನ್‌ ಎಲೆಕ್ಟ್ರಿಕ್‌ ಕಾರು ಬಿಡುಗಡೆ

    5 ನಿಮಿಷ ಚಾರ್ಜ್‌ ಮಾಡಿದ್ರೆ 600 ಕಿ.ಮೀ ಸಂಚಾರ – ಹೈಡ್ರೋಜನ್‌ ಎಲೆಕ್ಟ್ರಿಕ್‌ ಕಾರು ಬಿಡುಗಡೆ

    ನವದೆಹಲಿ: 5 ನಿಮಿಷ ಚಾರ್ಜ್‌ ಮಾಡಿದರೆ 600 ಕಿ.ಮೀ ಸಂಚರಿಸುವ ಹೈಡ್ರೋಜನ್‌ ಎಲೆಕ್ಟ್ರಿಕ್‌ ಕಾರು ದೇಶದಲ್ಲಿ ಬಿಡುಗಡೆಯಾಗಿದೆ.

    ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಸಚಿವ ನಿತಿನ್‌ ಗಡ್ಕರಿ ಹೈಡ್ರೋಜನ್ ಆಧಾರಿತ ಸುಧಾರಿತ ಇಂಧನ ಕೋಶದ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ) ‘ಟೊಯೊಟಾ ಮಿರಾಯ್‌’ ಕಾರನ್ನು ಬಿಡುಗಡೆ ಮಾಡಿದ್ದಾರೆ.

    ಇದು ಭಾರತದಲ್ಲಿನ ಮೊದಲ ಯೋಜನೆಯಾಗಿದ್ದು, ಇದು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದೆ. ನೀರನ್ನು ಹೊರತುಪಡಿಸಿ ಬೇರೆ ಯಾವುದೇ ಅನಿಲವನ್ನು ಹೊರಸೂಸುವುದಿಲ್ಲ ಎಂದು ಗಡ್ಕರಿ ತಿಳಿಸಿದರು. ಇದನ್ನೂ ಓದಿ: ಉಕ್ರೇನ್ ಯುದ್ಧ – ಭಾರತದ ಗೋಧಿಗೆ ಬೇಡಿಕೆ

    ಟೊಯೊಟಾ ಮಿರಾಯ್‌ ಕಾರು ಹೈಡ್ರೋಜನ್ ಫ್ಯುಯಲ್ ಸೆಲ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು ಒಂದು ಬಾರಿ ಚಾರ್ಜ್‌ ಮಾಡಿದರೆ 600 ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಕೇವಲ 5 ನಿಮಿಷದಲ್ಲಿ ಬ್ಯಾಟರಿ ಚಾರ್ಜ್‌ ಆಗುತ್ತದೆ ಎಂದು ಈ ಕಾರನ್ನು ತಯಾರಿಸಿದ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ (ಟಿಕೆಎಂ) ಕಂಪನಿ ತಿಳಿಸಿದೆ. ಜಪಾನ್ ಭಾಷೆಯಲ್ಲಿ ‘ಮಿರೈ’ ಪದಕ್ಕೆ ʼಭವಿಷ್ಯʼ ಎಂಬ ಅರ್ಥವಿದೆ. ಈ ಕಾರಣಕ್ಕೆ ಕಾರಿಗೆ ಈ ಹೆಸರನ್ನೇ ಇಡಲಾಗಿದೆ.

    ಟೊಯೊಟಾ ಕಿರ್ಲೋಸ್ಕರ್ (TKM) ಮತ್ತು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ICAT) ಜಂಟಿಯಾಗಿ ಮಿರಾಯ್ ಅನ್ನು ದೇಶದಲ್ಲಿ ಪರೀಕ್ಷಿಸಲಿವೆ. ಭಾರತೀಯ ರಸ್ತೆಗಳು ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ಪ್ರಯೋಗವನ್ನು ಮಾಡಲಾಗುತ್ತದೆ.

    https://twitter.com/nitin_gadkari/status/1504045296661065734

    ಈ ಹೊಸ ಹೈಡ್ರೋಜನ್ ಇಂಧನ ಆಧಾರಿತ ಕಾರು ಎಲೆಕ್ಟ್ರಿಕ್ ವೆಹಿಕಲ್ (EV) ಗಿಂತ ಹೆಚ್ಚಿನ ಡ್ರೈವ್ ಶ್ರೇಣಿಯನ್ನು ಹೊಂದಿದೆ. ಒಂದು ಎಲೆಕ್ಟ್ರಿಕ್‌ ಕಾರು ಚಾರ್ಜ್ ಮಾಡಲು 6-8 ಗಂಟೆಗಳನ್ನು ತೆಗೆದುಕೊಂಡರೆ, ಹೈಡ್ರೋಜನ್ ಚಾಲಿತ ಕಾರಿನ ಬ್ಯಾಟರಿಯನ್ನು ಕೇವಲ 5 ನಿಮಿಷಗಳಲ್ಲ ಚಾರ್ಜ್‌ ಮಾಡಬಹುದು. ಎಲೆಕ್ಟ್ರಿಕ್ ಕಾರ್‌ನಲ್ಲಿನ ಲಿಥಿಯಂ ಬ್ಯಾಟರಿಯ ಸಾಮರ್ಥ್ಯವು ಕಾಲಾನಂತರದಲ್ಲಿ ಕ್ಷೀಣಿಸುತ್ತದೆ ಮತ್ತು ಬ್ಯಾಟರಿ ನಿಷ್ಕ್ರಿಯಗೊಂಡರೆ ದೊಡ್ಡ ಸಮಸ್ಯೆಯಾಗುತ್ತದೆ. ಆದರೆ ಟೊಯೊಟಾದ ಮಿರಾಯ್‌ನಲ್ಲಿ ತುಂಬುತ್ತಿರುವ ಹೈಡ್ರೋಜನ್ ತಯಾರಿಸುವಾಗಲೂ ಮಾಲಿನ್ಯವನ್ನು ಉಂಟುಮಾಡುವುದಿಲ್ಲ. ಅದಕ್ಕಾಗಿಯೇ ಇದನ್ನು ಹಸಿರು ಹೈಡ್ರೋಜನ್ ಎಂದು ಕರೆಯಲಾಗುತ್ತದೆ.

    https://twitter.com/OfficeOfNG/status/1504093272142389255

    ಈ ಕಾರು ಇಂಗಾಲವನ್ನು ಹೊರ ಸೂಸುವುದಿಲ್ಲ. ಹೀಗಾಗಿ ಮಾಲಿನ್ಯವಾಗುವುದಿಲ್ಲ. ಕೆಲವು ಹನಿ ನೀರು ಮಾತ್ರ ತ್ಯಾಜ್ಯವಾಗಿ ಹೊರ ಹೊಮ್ಮುತ್ತದೆ. ಟೊಯೊಟಾ 2014ರಲ್ಲಿ ಮಿರಾಯ್‌ ಕಾರನ್ನು ಬಿಡುಗಡೆ ಮಾಡಿತ್ತು. ಈಗ ಹಲವು ಅಪ್‌ಗ್ರೇಡ್‌ ಮಾಡಿ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.