Tag: mint

  • ಬಾಯಾರಿಕೆಗೆ ಆರೋಗ್ಯಕರವಾದ ಮಸಾಲ ಮಜ್ಜಿಗೆ ಮಾಡಿ

    ಬಾಯಾರಿಕೆಗೆ ಆರೋಗ್ಯಕರವಾದ ಮಸಾಲ ಮಜ್ಜಿಗೆ ಮಾಡಿ

    ಬಿಸಿಲಿನ ತಾಪಕ್ಕೆ ಫ್ರಿಜ್ಜಿನಲ್ಲಿಟ್ಟ್ ನೀರನ್ನು ನಾವು ಕುಡಿಯುತ್ತೆವೆ. ಆದರೆ ನಾವೇ ಮನೆಯಲ್ಲಿ ರುಚಿಯಾದ ಪಾನೀಯವನ್ನು ಮಾಡಿ ಸೇವಿಸಬಹುದಾಗಿದೆ. ಈ ಪಾನಿಯಕ್ಕೆ ಪುದೀನಾ ಬಳಸುತ್ತವೆ. ಇದು ರುಚಿಯನ್ನು ಹೆಚ್ಚಿಸುವ ಜೊತೆಗೇ ಜೀರ್ಣಕ್ರಿಯೆಯಲ್ಲಿಯೂ ಸಹಕರಿಸುತ್ತದೆ. ಈ ಪಾನಿಯದಲ್ಲಿರುವ ಕೆಲವು ಪೋಷಕಾಂಶಗಳು ಆರೋಗ್ಯವನ್ನು ಸಮೃದ್ಧವಾಗಿರಿಸುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಪುದೀನಾ ಎಲೆ- ಸ್ವಲ್ಪ
    * ಮೊಸರು: 2 ಕಪ್
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಹಸಿಮೆಣಸು – 2
    * ಮಾವಿನ ಪುಡಿ ಅಥವಾ ಆಮ್ ಚೂರ್ ಪುಡಿ – 1/4ಚಿಕ್ಕ ಚಮಚ
    * ಕಾಳುಮೆಣಸಿನ ಪುಡಿ – 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು  ಇದನ್ನೂ ಓದಿ ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ

    ಮಾಡುವ ವಿಧಾನ:
    * ಮೊದಲು ಪುದೀನಾ, ಕೊತ್ತಂಬರಿ ಸೊಪ್ಪು, ಮೊಸರು, ಹಸಿಮೆಣಸು, ಆಮ್ಚೂರ್ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.

    * ನಂತ್ರ ಈ ಮಿಶ್ರಣವನ್ನು ಈಗ ಟೀ ಸೋಸುವ ಸೋಸುಕ ಬಳಸಿ ಸೋಸಿಕೊಳ್ಳಿ ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

    * ಈಗ ಸೇವಿಸಬೇಕಾದರೆ ಐಸ್ ತುಂಡುಗಳನ್ನು ಸೇರಿಸಬಹುದು, ಐಸ್ ಇಲ್ಲದೇ ಕುಡಿಯುವುದೇ ಹೆಚ್ಚು ರುಚಿಯಾಗಿರುತ್ತದೆ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ