Tag: Minsiter

  • ಸಚಿವ ಸ್ಥಾನಕ್ಕೆ ನಾಗೇಶ್ ರಾಜೀನಾಮೆ

    ಸಚಿವ ಸ್ಥಾನಕ್ಕೆ ನಾಗೇಶ್ ರಾಜೀನಾಮೆ

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮತ್ತೊಂದು ವಿಕೆಟ್ ಪತನವಾಗಿದ್ದು, ಸಚಿವ ಸ್ಥಾನಕ್ಕೆ ನಾಗೇಶ್ ರಾಜೀನಾಮೆ ನೀಡಿದ್ದಾರೆ.

    ಮುಳುಬಾಗಿಲಿನಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಶ್ ಅವರಿಗೆ ಬಳಿಕ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಇದೀಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಅತೃಪ್ತರ ಗುಂಪು ಸೇರಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸರ್ಕಾರ ಉಳಿಸಿಕೊಳ್ಳಲು 21 ದಿನಗಳ ಹಿಂದೆ ನಾಗೇಶ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಕಾಂಗ್ರೆಸ್ ಸಚಿವರ ಸಾಮೂಹಿಕ ರಾಜೀನಾಮೆಯ ಹಿನ್ನೆಲೆಯಲ್ಲಿ ನಾಗೇಶ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

    ಸಿಎಂ ಅಮೆರಿಕದಿಂದ ಬಂದ ಬಳಿಕ ತಡರಾತ್ರಿ ಸಭೆಯ ಮೇಲೆ ಸಭೆ ನಡೆಸಿದ್ದಾರೆ. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು 10 ಮಂದಿ ಸಚಿವರ ರಾಜೀನಾಮೆ ನೀಡಲು ಸೂಚನೆ ನೀಡಿದ್ದರು. ಹೀಗಾಗಿ ಸರ್ಕಾರ ಉಳಿಯಲ್ಲ ಎಂಬುದನ್ನು ಮನಗಂಡ ನಾಗೇಶ್ ರಾಜೀನಾಮೆ ಕೊಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ದೋಸ್ತಿ ಸರ್ಕಾರದ 13 ಶಾಸಕರು ರಾಜೀನಾಮೆ

  • Exclusive: ಸಚಿವ ಡಿಕೆಶಿಗೆ ಭಾರೀ ಸಂಕಷ್ಟ – ಐಟಿ ಇಲಾಖೆ ಕೋರ್ಟ್ ಗೆ ಕೊಟ್ಟ ಕಂಪ್ಲೆಂಟ್‍ನಲ್ಲಿ ಏನಿದೆ ಗೊತ್ತಾ?

    Exclusive: ಸಚಿವ ಡಿಕೆಶಿಗೆ ಭಾರೀ ಸಂಕಷ್ಟ – ಐಟಿ ಇಲಾಖೆ ಕೋರ್ಟ್ ಗೆ ಕೊಟ್ಟ ಕಂಪ್ಲೆಂಟ್‍ನಲ್ಲಿ ಏನಿದೆ ಗೊತ್ತಾ?

    ಬೆಂಗಳೂರು: ಐಟಿ ದಾಳಿಗೆ ಒಳಗಾಗಿರೋ ಸಚಿವ ಡಿಕೆ ಶಿವಕುಮಾರ್ ಅವರು ಸಂಕಷ್ಟಗಳ ಮೇಲೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.

    `ಕನಕಪುರದ ಬಂಡೆ’ ವಿರುದ್ಧ ಐಟಿ ಅಧಿಕಾರಿಗಳು ಕೋರ್ಟ್ ಗೆ ಗುಪ್ತವಾಗಿ ದೂರು ನೀಡಿದ್ದಾರೆ. ಸಚಿವ ಡಿಕೆ ಶಿವಕುಮಾರ್ ವಿರುದ್ಧ ಐಟಿ ಅಧಿಕಾರಿಗಳು ಕೊಟ್ಟ ಕಂಪ್ಲೆಂಟ್ ಕಾಪಿ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಕಂಪ್ಲೇಂಟ್ ನಲ್ಲೇನಿದೆ?:
    ಮಾಧ್ಯಮಗಳಲ್ಲಿ ಪ್ರತ್ಯಕ್ಷವಾದ ವರದಿಯೇ ಬೇರೆ, ಕೋರ್ಟ್ ನಲ್ಲಿ ಇರೋ ಕಾಪಿಯೇ ಬೇರೆಯಾಗಿದೆ. ಡಿಕೆಶಿಯ ಅಸಲಿಯತ್ತು ಗುಪ್ತವಾಗಿ ಸಲ್ಲಿಸಿದ್ದ ದೂರಿನಲ್ಲಿ ದಾಖಲಾಗಿದೆ. ಹಣ ಸಾಗಾಟ ಮಾಡಲಿಕ್ಕಾಗಿಯೇ ಶಿವಕುಮಾರ್ ದೊಡ್ಡ ಟೀಂ ಕಟ್ಟಿದ್ದರು. ಆಪ್ತರು ಅನ್ನಿಸಿಕೊಂಡವರೆಲ್ಲಾ ಹಣ ಸಾಗಾಟ ಮಾಡಲಿಕ್ಕಾಗಿಯೇ ಇದ್ದವರಾಗಿದ್ದಾರೆ. ಒಟ್ಟಿನಲ್ಲಿ ಈ ಟೀಂ ಯಾರಿಗೂ ಅನುಮಾನ ಬಾರದಂತೆ ಕೆಲಸ ಮಾಡುತ್ತಿತ್ತು. ಅಲ್ಲದೇ ಡಿಕೆಶಿ ಅಂಡ್ ಟೀಂ ಮೂಲಕವೇ ಕರ್ನಾಟಕದಿಂದ ಹೈಕಮಾಂಡ್‍ಗೆ ಕಪ್ಪ ಕಾಣಿಕೆ ಸಲ್ಲಿಕೆಯಾಗುತ್ತಿತ್ತು. ಸಾಕಷ್ಟು ವರ್ಷದಿಂದ ಇದನ್ನು ಮಾಡ್ತಾ ಇದ್ದಿದ್ದು ನಿಜ. ಸರ್ಕಾರಕ್ಕೆ ಈ ಟೀಂ ಮೂಲಕವೇ ತೆರಿಗೆ ವಂಚನೆ ಆಗ್ತಾ ಇತ್ತು ಅಂತ ಕೋರ್ಟ್ ಗೆ ಕೊಟ್ಟ ದೂರಿನಲ್ಲಿ ಐಟಿ ಅಧಿಕೃತವಾಗಿ ತಿಳಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಡಬಲ್ ಬೆಡ್‍ರೂಂ ಫ್ಲ್ಯಾಟ್ ಇರೋದು ನಿಜ- ಡಿಕೆಶಿ

    ರೆಸಾರ್ಟ್ ನಲ್ಲಿ ಚೀಟಿ ಹರಿದು ರಾಜೇಂದ್ರನೇ ಗೊತ್ತಿಲ್ಲ ಅಂತ ಹೇಳಿದ್ದರು. ಅಲ್ಲದೇ ರಾಜೇಂದ್ರನಿಗು ನನಗೂ ಯಾವುದೇ ವ್ಯವಹಾರಿಕ ಸಂಬಂಧವೂ ಇಲ್ಲ ಅಂತಾನೂ ಹೇಳಿದ್ದರು. ಆದ್ರೆ, ಚೀಟಿಯಲ್ಲಿ ರಾಜೇಂದ್ರ-3 “ಡ್ಯೂ” ಅಂತ ಡಿಕೆಶಿ ಬರೆದಿದ್ದರು. ಇದ್ರಿಂದ ಬಲವಾದ ಸಾಕ್ಷಿಯಿದೆ. ಆದ್ರೆ, ಡಿಕೆಶಿ ಕಾಲಾವಕಾಶ ಪಡೆದು ಸಾಕ್ಷ್ಯ ನಾಶಪಡಿಸಿದ್ದಾರೆ ಎಂಬುದಾಗಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಐಟಿ ದಾಳಿಗೆ ಒಳಗಾಗಿರೋ ಡಿಕೆಶಿಗೆ ಹೊಸ ಸಂಕಷ್ಟ!

  • ಪಾದಚಾರಿ ಮಾರ್ಗದಲ್ಲೇ ಕುಳಿತು ತಿಂಡಿ ತಿಂದ್ರು ಸಚಿವ ಸಂತೋಷ್ ಲಾಡ್

    ಪಾದಚಾರಿ ಮಾರ್ಗದಲ್ಲೇ ಕುಳಿತು ತಿಂಡಿ ತಿಂದ್ರು ಸಚಿವ ಸಂತೋಷ್ ಲಾಡ್

    ಮೈಸೂರು: ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪಾದಚಾರಿ ಮಾರ್ಗದಲ್ಲಿ ಕುಳಿತು ತಿಂಡಿ ತಿಂದಿದ್ದಾರೆ.

    ಮೈಸೂರಿನಲ್ಲಿ ದೋಸೆಗೆ ಹೋಟೆಲ್ ಮೈಲಾರಿ ತುಂಬಾ ಫೇಮಸ್. ಹೇಳಿ ಕೇಳಿ ಈ ಹೋಟೆಲ್ ತುಂಬಾ ಚಿಕ್ಕದ್ದು. 10 ಜನ ತಿಂಡಿ ತಿನ್ನುತ್ತಾ ಕೂತುಬಿಟ್ಟರೆ ಹೋಟೆಲ್ ಹೌಸ್ ಫುಲ್ ಆಗುತ್ತೆ.

    ಸಚಿವ ಸಂತೋಷ್ ಲಾಡ್ ಮೈಸೂರಿನ ಕೆಲ ಸ್ಥಳೀಯ ಮುಖಂಡರ ಜೊತೆ ತಿಂಡಿ ತಿನ್ನಲು ಮೈಲಾರಿ ಹೋಟೆಲ್‍ಗೆ ಹೋಗಿದ್ದರು. ಆದರೆ, ಒಳಗೆ ಕುಳಿತುಕೊಳ್ಳಲು ಜಾಗ ಇರಲಿಲ್ಲ. ಹೀಗಾಗಿ ದೋಸೆಯನ್ನು ಹೋಟೆಲ್ ಹೊರಗೆ ತರಸಿಕೊಂಡು ಪಾದಾಚಾರಿ ಮಾರ್ಗದಲ್ಲೆ ಕುಳಿತು ತಿಂಡಿ ತಿಂದಿದ್ದಾರೆ.