Tag: Minority Welfare Department

  • ಹೆಲ್ಪ್‌ಲೈನ್ ಹೆಸರಲ್ಲಿ ಒಬ್ಬರಿಗೆ 4 ಲಕ್ಷ ರೂ. ವೇತನ- ತನಿಖೆಗೆ ಆದೇಶಿಸಿದ ಸಚಿವ ಜಮೀರ್

    ಹೆಲ್ಪ್‌ಲೈನ್ ಹೆಸರಲ್ಲಿ ಒಬ್ಬರಿಗೆ 4 ಲಕ್ಷ ರೂ. ವೇತನ- ತನಿಖೆಗೆ ಆದೇಶಿಸಿದ ಸಚಿವ ಜಮೀರ್

    ಬೆಂಗಳೂರು: ಹೆಲ್ಪ್‌ಲೈನ್ (Helpline) ಸ್ಥಾಪಿಸಿ ಅದರ ನಿರ್ವಹಣೆ ಮಾಡಿದ ಒಬ್ಬರಿಗೆ ತಿಂಗಳಿಗೆ 4 ಲಕ್ಷ ರೂ. ವೇತನ ನೀಡಿರುವ ಬಗ್ಗೆ ಹಾಗೂ ಅದರಿಂದ ಪ್ರಯೋಜನ ಆಗದಿದ್ದರೂ ಮುಂದುವರಿಸಿದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಚಿವ ಜಮೀರ್ ಅಹ್ಮದ್ (Zameer Ahmed) ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸೋಮವಾರ ಅಧಿಕಾರಿಗಳೊಂದಿಗೆ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ (Minority Welfare Department) ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಹೆಲ್ಪ್‌ಲೈನ್ ಸ್ಥಾಪಿಸಿ ಅದನ್ನು ನಿರ್ವಹಿಸಿದವರಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗಿಂತ ಮೂರು ಪಟ್ಟು ವೇತನವನ್ನು ಒಬ್ಬರಿಗೆ ನೀಡಿದ್ದು ಹೇಗೆ? ಸಹಾಯವಾಣಿ ಕೇಂದ್ರಕ್ಕೆ ವಾರ್ಷಿಕ 2.5 ಕೋಟಿ ರೂ. ವೆಚ್ಚ ಮಾಡುತ್ತಿದ್ದರೂ ಪ್ರತ್ಯೇಕವಾಗಿ ಸಹಾಯವಾಣಿಯ ಅಗತ್ಯತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಸ್ವಂತ ಕಾರನ್ನೇ ಅಪರಿಚಿತನಿಗೆ ಕೊಟ್ಟು ಮೆಟ್ರೋ ಹತ್ತಿದ!

    ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿ ಹಾಗೂ ವಕ್ಫ್ ಸೇರಿದಂತೆ ಇರುವ ಯೋಜನೆಗಳ, ಹೊಸ ಯೋಜನೆಗಳ ಅನುಷ್ಠಾನದ ವಾರ್ಷಿಕ ಅನುದಾನದ ಬಗ್ಗೆ ಬಜೆಟ್ ಪೂರ್ವಬಾವಿ ಸಭೆಗೂ ಮುನ್ನ ಪ್ರಸ್ತಾವನೆಗೆ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ.

    ರಾಜ್ಯದಲ್ಲಿ ಅಪೂರ್ಣಗೊಂಡಿರುವ 126 ಶಾದಿ ಮಹಲ್‍ಗಳ ಕಾಮಗಾರಿ ಪೂರ್ಣಗೊಳಿಸಲು 56 ಕೋಟಿ ರೂ. ಅಗತ್ಯವಿದೆ. ಅಲ್ಲದೇ ಹೊಸದಾಗಿ ಶಾದಿ ಮಹಲ್ ನಿರ್ಮಾಣಕ್ಕೆ ಬೇಡಿಕೆ ಇರುವ ಬಗ್ಗೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದಿದ್ದಾರೆ. ಇದನ್ನೂ ಓದಿ: ಬೆಂ-ಮೈ ದಶಪಥ ಹೆದ್ದಾರಿ ಟೋಲ್ ಮತ್ತಷ್ಟು ದುಬಾರಿ- ಜೂನ್ 1ರಿಂದಲೇ ಪ್ರಯಾಣಿಕರ ಜೇಬಿಗೆ ಕತ್ತರಿ

  • ಸಿದ್ದು ಬಜೆಟ್‍ನಲ್ಲಿ ಅಲ್ಪಸಂಖ್ಯಾತರಿಗೆ ಸಿಕ್ಕಿದ್ದು ಏನು?

    ಸಿದ್ದು ಬಜೆಟ್‍ನಲ್ಲಿ ಅಲ್ಪಸಂಖ್ಯಾತರಿಗೆ ಸಿಕ್ಕಿದ್ದು ಏನು?

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಅಲ್ಪಸಂಖ್ಯಾತ ಕಲ್ಯಾಣ ಮತ್ತು ಹಜ್ ಇಲಾಖೆಗೆ 2750 ಕೋಟಿ ರೂ. ಅನುದಾನವನ್ನು ನೀಡಿದ್ದಾರೆ. ಬಜೆಟ್‍ನಲ್ಲಿ ಘೋಷಣೆಯಾದ ಪ್ರಮುಖ ಅಂಶಗಳು

    – ಮೌಲಾನ ಅಬ್ದುಲ್ ಕಲಾಂ ಆಜಾದ್ ಭವನ, ಉರ್ದು ಕನ್ವೆಷನ್ ಹಾಲ್ ಮತ್ತು ಸಾಂಸ್ಕೃತಿಕ ಕೇಂದ್ರ ನಿರ್ಮಿಸಲು – 20 ಕೋಟಿ
    – ವಕ್ಫ್ ಸಂಸ್ಥೆ ನಿರ್ವಹಣೆ ಮತ್ತು ಸಿಬ್ಬಂದಿಗಳಿಗೆ ತರಬೇತಿ ಕೇಂದ್ರ
    – ಸರ್ಕಾರಿ ಉರ್ದು ಶಾಲೆ ಜಾಗದಲ್ಲಿ 200 ಮೌಲಾನ ಆಜಾದ್ ಶಾಲೆಗಳು
    – ಮಹಿಳೆಯರಿಗಾಗಿ 2 ಕೋಟಿ ವೆಚ್ಚದಲ್ಲಿ 10 ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್
    – ಐಐಎಂ, ಐಐಟಿ, ಐಐಎಸ್‍ಸಿ ಯಲ್ಲಿ ಪ್ರವೇಶ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 2 ಲಕ್ಷ ಪ್ರೋತ್ಸಾಹ ಧನ

    – ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 20 ಮೊರಾರ್ಜಿ ದೇಸಾಯಿ ವಸತಿ ಶಾಲೆ, 5 ಪದವಿಪೂರ್ವ ಕಾಲೇಜು, 2 ಮಾದರಿ ವಸತಿ ಶಾಲೆ, 25 ಮೆಟ್ರಿಕ್ ನಂತರದ ಬಾಲಕ ಬಾಲಕಿಯರ ವಿದ್ಯಾರ್ಥಿ ನಿಲಯ ಸ್ಥಾಪನೆ
    – ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 175 ಕೋಟಿ
    – ಪೇಷ್ ಇಮಾಮ್ ಅವರ ಗೌರವ ಧನ 3,100 ರೂ ಇಂದ 4,000ಕ್ಕೆ ಏರಿಕೆ
    – ಮೌಜಾನ್ ಅವರ ಗೌರವಧನ 2500 ರಿಂದ 3000ಕ್ಕೆ ಹೆಚ್ಚಳ
    – ಮಂಗಳೂರಲ್ಲಿ 10 ಕೋಟಿ ವೆಚ್ಚದಲ್ಲಿ ಹಜ್ ಭವನ ಸ್ಥಾಪನೆ

    – 500 ಮಂದಿ ಫಲಾನುಭವಿಗಳಿಗೆ ಟ್ಯಾಕ್ಸಿ ಖರೀದಿಸಲು ತಲಾ 3 ಲಕ್ಷ ರೂ. ಸಹಾಯ ಧನ ಹಾಗೂ ಉಳಿದ ಹಣಕ್ಕೆ ಬ್ಯಾಂಕ್ ಸಾಲ
    – ಕಾನೂನು ಪದವಿಧರರ ಮಾಸಿಕ ತರಬೇತಿ ಭತ್ಯೆ 2 ಸಾವಿರ ರೂ.ಗಳಿಂದ 4 ಸಾವಿರ ರೂ.ಗಳಿಗೆ ಹೆಚ್ಚಳ