Tag: minor

  • ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕಾನ್ಸ್‌ಟೇಬಲ್ ಅರೆಸ್ಟ್

    ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕಾನ್ಸ್‌ಟೇಬಲ್ ಅರೆಸ್ಟ್

    ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗೋವಿಂದರಾಜನಗರ ಪೊಲೀಸ್ ಕಾನ್ಸ್‌ಟೇಬಲ್‌ನನ್ನು ಬಂಧನ ಮಾಡಲಾಗಿದೆ.

    ಚಾಮರಾಜನಗರ ಮೂಲದ ಬಾಲಕಿ ಮೇಲೆ ಗೋವಿಂದರಾಜನಗರ ಪೊಲೀಸ್ ಕಾನ್ಸ್‌ಟೇಬಲ್‌ ದೌರ್ಜನ್ಯ ಎಸಗಿದ್ದ ಎಂದು ಅಪ್ರಾಪ್ತೆಯ ಪೋಷಕರು ದೂರು ಕೊಟ್ಟಿದ್ದಾರೆ. ಈ ಆರೋಪದ ಆಧಾರ ಮೇಲೆ ಕಾನ್ಸ್‌ಟೇಬಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: 6 ರಿಂದ 7 ಮಂದಿ ಸೇರಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಶಂಕಿತರು ವಶ  

    ನಡೆದಿದ್ದೇನು?
    ಗೋವಿಂದರಾಜನಗರದ ರಸ್ತೆ ಬದಿಯ ಪಾರ್ಕ್‍ನಲ್ಲಿ ಬಾಲಕಿ ಇದ್ದಳು. ಈ ವೇಳೆ ಕಾನ್ಸ್‌ಟೇಬಲ್‌ ಸಹಾಯ ಮಾಡುವ ನೆಪದಲ್ಲಿ ಬಾಲಕಿ ಹತ್ತಿರ ಹೋಗಿದ್ದ. ಬಳಿಕ ಆಕೆಯನ್ನು ತನ್ನ ರೂಂಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಮರುದಿನ ಬಾಲಕಿಯನ್ನು ವಾಪಸ್ ಊರಿಗೆ ಕಳಿಸಿದ್ದ.

    ಬಾಲಕಿ ಮನೆಗೆ ಹೋದ ಬಳಿಕ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಪರಿಣಾಮ ಪೋಷಕರು ಆಕ್ರೋಶಗೊಂಡಿದ್ದು, ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಮಾಹಿತಿ ಮೇರೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಗೋವಿಂದರಾಜನಗರ ಪೊಲೀಸರು ಕಾನ್ಸ್‌ಟೇಬಲ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಯುವತಿ ಫೋಟೋ ಬಳಸಿ ಯುವಕರಿಂದ 19 ಲಕ್ಷ ರೂ. ಎಗರಿಸಿದ್ದ ಆರೋಪಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಕೋಲ್ಡ್ ಡ್ರಿಂಕ್ಸ್‌ನಲ್ಲಿ ನಿದ್ದೆ ಮಾತ್ರೆ ಬೆರೆಸಿ ಅಪ್ರಾಪ್ತೆ ಮೇಲೆ ರೇಪ್

    ಕೋಲ್ಡ್ ಡ್ರಿಂಕ್ಸ್‌ನಲ್ಲಿ ನಿದ್ದೆ ಮಾತ್ರೆ ಬೆರೆಸಿ ಅಪ್ರಾಪ್ತೆ ಮೇಲೆ ರೇಪ್

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ್ದ ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತೆಯ ಸ್ನೇಹ ಬೆಳೆಸಿದ್ದ. ಇದಾದ ಬಳಿಕ ಬಾಲಕಿಯನ್ನು ಭೇಟಿಯಾಗಿದ್ದನು. ಆ ವೇಳೆ ಆಕೆಯ ಮೇಲೆ ಆತ ಅತ್ಯಾಚಾರವೆಸಗಿದ್ದಾನೆ. ಆಕೆಯ ಮೇಲೆ ಅತ್ಯಾಚಾರ ನಡೆಸುವ ಮೊದಲು ಬಾಲಕಿಗೆ ಕೋಲ್ಡ್ ಡ್ರಿಂಕ್ಸ್ ನೀಡಿದ್ದನು. ಆ ಕೋಲ್ಡ್ ಡ್ರಿಂಕ್ಸ್‌ನಲ್ಲಿ ನಿದ್ದೆ ಮಾತ್ರೆಯನ್ನು ಯುವಕ ಬೆದರಿಸಿದ್ದ. ಇದನ್ನೂ ಓದಿ: ಶಾಸಕ ಬಸವರಾಜ್ ದಡೆಸಗೂರುರಿಂದ ಅನ್ಯಾಯ – ನೇಣು ಬಿಗಿದುಕೊಳ್ಳಲು ಮುಂದಾದ ಮಹಿಳಾಧಿಕಾರಿ

    ಇದಾದ ನಂತರ ಪೋಷಕರಿಗೆ ತಿಳಿಸಿದರೆ ವೀಡಿಯೋವನ್ನು ಇಂಟರ್‌ನೆಟ್‍ನಲ್ಲಿ ಅಪ್‍ಲೋಡ್ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಈ ರೀತಿ ಬೆದರಿಕೆ ಹಾಕುತ್ತಾ ಕಳೆದ 4 ವರ್ಷದಿಂದ ನಿರಂತರವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ ಅಪ್ರಾಪ್ತೆಯು ಪೊಲೀಸರಿಗೆ ದೂರು ನೀಡಿದ್ದು, ಅಪ್ರಾಪ್ತೆಯ ಹೇಳಿಕೆ ಆಧಾರದ ಮೇಲೆ ಪುಣೆ ಭಾರತಿ ವಿದ್ಯಾಪೀಠ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 21ನೇ ಶತಮಾನದ ಭಾರತವು ಜನಕೇಂದ್ರಿತ ಆಡಳಿತದೊಂದಿಗೆ ಮುನ್ನಡೆಯುತ್ತಿದೆ: ಮೋದಿ

  • ಕುಡುಕ ತಂದೆಯಿಂದ ಚಿತ್ರಹಿಂಸೆ – ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ

    ಕುಡುಕ ತಂದೆಯಿಂದ ಚಿತ್ರಹಿಂಸೆ – ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ

    ಹೈದರಾಬಾದ್: ಬಾಲಕಿಯೊಬ್ಬಳು ತನ್ನ ಮದ್ಯವ್ಯಸನಿ ತಂದೆಯಿಂದ ದೈಹಿಕ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಂದಿಗಾಮ ಗ್ರಾಮದಲ್ಲಿ ನಡೆದಿದೆ.

    ಬಾಲಕಿಯು ಮನೆಯಲ್ಲಿ ಒಬ್ಬಳೇ ಇದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಈಗಾಗಲೇ ಆಕೆಯ ತಂದೆಯನ್ನು ಬಂಧಿಸಿದ್ದಾರೆ. ಆರೋಪಿ ರೈತನಾಗಿದ್ದು, ಆತನ ಪತ್ನಿ ಒಂದು ವರ್ಷದ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆರೋಪಿಗೆ ಇಬ್ಬರು ಮಕ್ಕಳಿದ್ದು, ಪತ್ನಿಯ ಸಾವಿನ ನಂತರ ಮಕ್ಕಳಿಗೆ ಚಿತ್ರಹಿಂಸೆ ನೀಡಲಾರಂಭಿಸಿದನು. ಅವನ ಹಿರಿಯ ಮಗನೊಬ್ಬನು ಅಂಗಡಿಯೊಂದರಲ್ಲಿ ಕೆಲಸ ಮಾಡಲು ಪಟ್ಟಣಕ್ಕೆ ತೆರಳಿದ್ದು, ಅಪ್ಪನ ಟಾರ್ಚರ್ ತಡೆದುಕೊಳ್ಳಲಾಗದೇ ಅಲ್ಲಿಯೇ ಇರಲು ಪ್ರಾರಂಭಿಸಿದನು. ಇದನ್ನೂ ಓದಿ: ಮಾಟಕ್ಕೆ ಒಳಗಾದ ಮಹಿಳೆಗೆ ಚಾಟಿಯಿಂದ ಹೊಡೆದ ಪೂಜಾರಿ

    POLICE JEEP

    ಆದರೆ ಮೃತ ಬಾಲಕಿಯು ತನ್ನ ಮದ್ಯವ್ಯಸನಿ ತಂದೆಯ ಚಿತ್ರಹಿಂಸೆಗೆ ನೊಂದು ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಈಗಾಗಲೇ ಬಂಧಿಸಿದ್ದೇವೆ ಎಂದು ಶಾದ್‍ನಗರ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಕುಶಾಲ್ಕರ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ

  • ಫುಟ್‍ಪಾತ್ ಮೇಲೆ ಕಾರು ಚಾಲನೆ – ಅಪ್ರಾಪ್ತನ ಹುಚ್ಚಾಟಕ್ಕೆ ನಾಲ್ವರು ಬಲಿ

    ಫುಟ್‍ಪಾತ್ ಮೇಲೆ ಕಾರು ಚಾಲನೆ – ಅಪ್ರಾಪ್ತನ ಹುಚ್ಚಾಟಕ್ಕೆ ನಾಲ್ವರು ಬಲಿ

    ಹೈದರಾಬಾದ್: ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಕಾರು ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಫುಟ್‍ಪಾತ್ ಮೇಲೆ ಸಂಚರಿಸಿದ್ದರಿಂದ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ತೆಲಂಗಾಣದ ಕರೀಮ್‍ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಒಟ್ಟು ಮೂವರು ಅಪ್ರಾಪ್ತರು ಇದ್ದರು. ಅದರಲ್ಲಿ ಒಬ್ಬಾತ ಕಾರು ಡ್ರೈವ್ ಮಾಡುತ್ತಿದ್ದ. ಈ ಬಾಲಕರೆಲ್ಲರೂ 9ನೇ ತರಗತಿಯಲ್ಲಿ ಓದುತ್ತಿದ್ದಾರೆ.

    ಕರೀಮ್‍ನಗರದ ಪ್ರದೇಶದಲ್ಲಿ ದಟ್ಟವಾದ ಮಂಜು ಇತ್ತು. ಇದರಿಂದಾಗಿ ಬಾಲಕನಿಗೆ ಸರಿಯಾಗಿ ದಾರಿ ಕಾಣುತ್ತಿರಲಿಲ್ಲ. ಈ ಮಧ್ಯೆ ಬಾಲಕ ತನ್ನ ಕಣ್ಣನ್ನು ಉಜ್ಜಿಕೊಳ್ಳಲು ಸ್ಟೀರಿಂಗ್‍ನಿಂದ ಕೈ ತೆಗೆದಾದ ನಿಯಂತ್ರಣ ಕಳೆದುಕೊಂಡಿದ್ದಾನೆ. ಇದನ್ನೂ ಓದಿ:  ಅಕ್ರಮ ಆಸ್ತಿ ಖರೀದಿಸಿಲ್ಲ – 3 ಕೋಟಿ ಮಾನನಷ್ಟ ಕೇಸ್‌ ಹಾಕ್ತೀನಿ ಎಂದ ಚನ್ನಣ್ಣನವರ್‌

    ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದು, ಅಲ್ಲೆ ಫುಟ್‍ಪಾತ್‍ನಲ್ಲಿ ಕುಳಿತಿದ್ದ ಮಹಿಳೆಯರ ಮೇಲೆ ಕಾರು ಹರಿದಿದೆ. ಘಟನೆಯಿಂದ 14 ವರ್ಷದ ಹುಡುಗಿ ಸೇರಿ 27-32 ವರ್ಷದೊಳಗಿನ ನಾಲ್ವರು ಮೃತಪಟ್ಟಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಟೆರೇಸ್‍ನಿಂದ ಜಿಗಿದು ಮಾಡೆಲ್ ಆತ್ಮಹತ್ಯೆಗೆ ಯತ್ನ

    POLICE JEEP

    ಘಟನೆಯಲ್ಲಿ ಡ್ರೈವಿಂಗ್‍ಗೆ ಕುಳಿತಿದ್ದ ಬಾಲಕ ಸ್ಟೀರಿಂಗ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಲ್ಲದೆ, ಬ್ರೇಕ್ ಬದಲಿಗೆ ಆಕ್ಸಿಲೇಟರ್ ಪ್ರೆಸ್ ಮಾಡಿದ್ದು, ದೊಡ್ಡ ಎಡವಟ್ಟಿಗೆ ಕಾರಣವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಕಾರಿನಲ್ಲಿದ್ದ ಮೂವರು ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲ, ಕಾರು ಡ್ರೈವ್ ಮಾಡುತ್ತಿದ್ದ ಬಾಲಕನ ತಂದೆ ವಿರುದ್ಧವೂ ಕೇಸ್ ದಾಖಲಾಗಿದೆ.

  • ಅಪ್ರಾಪ್ತೆಯ ಮೇಲೆ ರೇಪ್ – ಬೆಳ್ತಂಗಡಿ ಪೊಲೀಸರಿಂದ ಇಬ್ಬರು ಅರೆಸ್ಟ್

    ಅಪ್ರಾಪ್ತೆಯ ಮೇಲೆ ರೇಪ್ – ಬೆಳ್ತಂಗಡಿ ಪೊಲೀಸರಿಂದ ಇಬ್ಬರು ಅರೆಸ್ಟ್

    ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ನಡೆಸಿ ಬಳಿಕ ಆಕೆ ಏಳು ತಿಂಗಳ ಗರ್ಭಿಣಿಯಾದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸವಣಾಲು ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳಾದ ಸ್ಥಳೀಯ ನಿವಾಸಿ ರವೀಂದ್ರ ಹಾಗೂ ಯೋಗೀಶ್ ನನ್ನು ಬೆಳ್ತಂಗಡಿ ಪೆÇಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಇದನ್ನೂ ಓದಿ: ಮುಂಬೈ ಮಾಜಿ ಪೊಲೀಸ್ ಆಯುಕ್ತ ನಾಪತ್ತೆ, ರಷ್ಯಾಗೆ ಪರಾರಿ?

    10ನೇ ತರಗತಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಬಾಲಕಿಯನ್ನು ಜೆಸಿಬಿ ಚಾಲಕನಾಗಿದ್ದ ರವೀಂದ್ರ ಐದು ಬಾರಿ ಅತ್ಯಾಚಾರ ನಡೆಸಿದ್ದು, ಬಾಲಕಿಯ ಸಂಬಂಧಿ ಯೋಗೀಶ್ ಎಂಬಾತ ಎರಡು ಬಾರಿ ಅತ್ಯಾಚಾರ ನಡೆಸಿದ್ದಾನೆ. ಇದನ್ನೂ ಓದಿ: 14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್

    ಬಾಲಕಿಯ ಶಾಲೆಗೆ ಆರೋಗ್ಯ ತಪಾಸಣೆಗೆ ಬಂದಿದ್ದ ವೈದ್ಯರು ವಿದ್ಯಾರ್ಥಿಯ ದೇಹಸ್ಥಿತಿ ನೋಡಿ ಅನುಮಾನಗೊಂಡಿದ್ದು, ಬಳಿಕ ಬೆಳ್ತಂಗಡಿ ವೈದ್ಯರಲ್ಲಿ ಪರೀಕ್ಷಿಸಿದಾಗ ಬಾಲಕಿ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು 

  • ಹಾಡಹಗಲೇ ಬೆಂಗಳೂರಿನಲ್ಲಿ ಅಪ್ರಾಪ್ತೆಗೆ ಮುತ್ತಿಟ್ಟ ಯುವಕ

    ಹಾಡಹಗಲೇ ಬೆಂಗಳೂರಿನಲ್ಲಿ ಅಪ್ರಾಪ್ತೆಗೆ ಮುತ್ತಿಟ್ಟ ಯುವಕ

    ಬೆಂಗಳೂರು: ಮೈಸೂರಿನಲ್ಲಿ ಗ್ಯಾಂಗ್ ರೇಪ್ ನಡೆದ ಬೆನ್ನಲ್ಲೇ ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ ನಡೆದಿದೆ. ಹಾಡಹಗಲೇ ನಾಲ್ವರು ಪುಂಡರ ಜೊತೆ ಬಂದಿದ್ದ ಓರ್ವ ಯುವಕ 16 ವರ್ಷದ ಅಪ್ರಾಪ್ತೆಯ ಮೇಲೆ ದಾಳಿ ನಡೆಸಿ ಮುತ್ತಿಟ್ಟಿದ್ದಾನೆ.

    ಬೆಂಗಳೂರಿನಲ್ಲಿ ಶನಿವಾರ ಸಂಜೆ 4 ಗಂಟೆಗೆ ಈ ಘಟನೆ ನಡೆದಿದೆ. ಅಪ್ರಾಪ್ತೆ ಕಿರುಚಾಡ್ತಿದ್ದಂತೆ ಯುವಕ ಮುತ್ತು ಕೊಟ್ಟು ಪರಾರಿಯಾಗಿದ್ದಾನೆ. ಮುತ್ತು ನೀಡಿದ್ದು ಅಲ್ಲದೇ ಸೋಮವಾರ ಒಬ್ಬಳೇ ಸಿಗು ಎಂದು ವಾರ್ನಿಂಗ್ ನೀಡಿದ್ದಾನೆ. ಇದನ್ನೂ ಓದಿ: ಮೈಸೂರು ಕೇಸ್‍ಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್!

     

    ಈ ಎಲ್ಲ ಘಟನೆಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪ್ರಾಪ್ತೆ ದೊಡ್ಡಮ್ಮನ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದು, ಘಟನೆಯ ಬಳಿಕ ಸಂಬಂಧಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ದೌರ್ಜನ್ಯಕ್ಕೊಳಗಾದ ಅಪ್ರಾಪ್ತೆ ಮಾತನಾಡಿ, ಹೊರಗಡೆ ಓಡಾಡಲು ಭಯ ಆಗುತ್ತಿದೆ. ಅಲ್ಲಿ 4 ಹುಡುಗರು ನಿಂತಿದ್ದರು. ಒಬ್ಬ ಓಡೋಡಿ ಬಂದು ಮುತ್ತು ಕೊಟ್ಟ. ಒಬ್ಬ ಮುತ್ತು ನೀಡುವಾಗ 4 ಮಂದಿ ನಿಂತು ನೋಡುತ್ತಿದ್ದರು. ಕೆಲ ದಿನಗಳಿಂದ ನನ್ನನ್ನು ಫಾಲೋ ಮಾಡುತ್ತಿದ್ದ. ಆತ ಯಾರು ಏನು ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದಾಳೆ. ಇದನ್ನೂ ಓದಿ: ನುಡಿದಂತೆ ನಡೆದ ಜಗ್ಗೇಶ್- 1 ಲಕ್ಷ ರೂ. ಚೆಕ್ ಹಸ್ತಾಂತರ

    ಕುಟುಂಬಸ್ಥರು ಪ್ರತಿಕ್ರಿಯಿಸಿ, ಸ್ಥಳಕ್ಕೆ ಬಂದ ಪೊಲೀಸರು ನಾಮಕವಾಸ್ತೆ ಸ್ಥಳ ಮಹಜರು ಮಾಡಿದ್ದಾರೆ. ಕಿರುಕುಳ ಕೊಟ್ಟ ಯುವಕನ ಬಗ್ಗೆಯೂ ಪರಿಶೀಲನೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನೊಮ್ಮೆ ಕಿರುಕುಳ ಕೊಟ್ರೆ, ಫೋಟೋ ಕ್ಯಾಪ್ಚರ್ ಮಾಡಿ ಕಳುಹಿಸಿ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

  • ಚಿಕನ್ ಸಾಂಬಾರ್ ಕಡಿಮೆ ಹಾಕಿದ್ದಕ್ಕೆ ನಡೀತು ಕೊಲೆ

    ಚಿಕನ್ ಸಾಂಬಾರ್ ಕಡಿಮೆ ಹಾಕಿದ್ದಕ್ಕೆ ನಡೀತು ಕೊಲೆ

    ಮಡಿಕೇರಿ: ಊಟ ಮಾಡುವ ಸಂದರ್ಭದಲ್ಲಿ ಚಿಕನ್ ಸಾಂಬಾರ್ ಕಡಿಮೆ ಹಾಕಿದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಕೊಲೆ ನಡೆದಿದೆ.

    25 ವರ್ಷದ ಕುಮಾರ್ ದಾಸ ಕೊಲೆಯಾದ ಯುವಕ. ನಂಜನಗೂಡು ತಾಲೂಕಿನ ಕೊತ್ತೆನಾಹಳ್ಳಿಯ ಕುಮಾರ್ ಮತ್ತು 17 ವರ್ಷದ ಹುಡುಗನ ಜೊತೆ ನಾಲ್ಕೇರಿ ಗ್ರಾಮದ ಮಹೇಶ್ ಎಂಬವರ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. 25 ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದ ಇಬ್ಬರು ಜೊತೆಯಲ್ಲಿಯೇ ವಾಸವಾಗಿದ್ದರು.

    ಸೋಮವಾರ ಸಂಜೆ ಮಹೇಶ್ ಅವರ ಕಾಫಿ ತೋಟದ ಅಂಗಳಲ್ಲಿ ಬಾಡೂಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಸುಮಾರು ರಾತ್ರಿ 10.30ಕ್ಕೆ ಊಟ ಮಾಡುತ್ತಿರುವಾಗ ತನಗೆ ಕಡಿಮೆ ಚಿಕನ್ ಸಾಂಬಾರ್ ಹಾಕಲಾಗಿದೆ ಎಂದು ಬಾಲಕ ಜಗಳ ತೆಗೆದಿದ್ದಾನೆ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ಆರೋಪಿ ಬ್ಯಾಟ್ ಮತ್ತು ಒಲೆಯಲ್ಲಿದ್ದ ಸೌದೆಯಿಂದ ಕುಮಾರ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಅಪ್ರಾಪ್ತ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಅಪ್ರಾಪ್ತನಿಂದ ಬಾಲಕಿ ಮೇಲೆ ಅತ್ಯಾಚಾರ- ಪೋಷಕರು ಕೂಲಿಗೆ ಹೋದಾಗ ರೇಪ್

    ಅಪ್ರಾಪ್ತನಿಂದ ಬಾಲಕಿ ಮೇಲೆ ಅತ್ಯಾಚಾರ- ಪೋಷಕರು ಕೂಲಿಗೆ ಹೋದಾಗ ರೇಪ್

    ಶಿವಮೊಗ್ಗ : ಅಪ್ರಾಪ್ತ ಬಾಲಕನೋರ್ವ ನೆರೆ ಮನೆಯ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದೆ.

    ಸಾಗರ ಪಟ್ಟಣದ ವಾಸಿಗಳಾದ ಪೋಷಕರು ಕೂಲಿ ಕೆಲಸಕ್ಕೆ ತೆರಳಿದಾಗ ಪಕ್ಕದ ಮನೆಯ ಬಾಲಕ ಈ ಕೃತ್ಯ ಎಸಗಿದ್ದಾನೆ. ಕೆಲಸ ಮುಗಿಸಿಕೊಂಡು ಪೋಷಕರು ಮನೆಗೆ ವಾಪಸ್ ಬಂದಾಗ ಪಕ್ಕದ ಮನೆಯ ಬಾಲಕ ನಡೆಸಿದ ಕೃತ್ಯದ ಬಗ್ಗೆ ಬಾಲಕಿ ಪೋಷಕರಿಗೆ ತಿಳಿಸಿದ್ದಾಳೆ. ಘಟನೆ ಕುರಿತು ಸಾಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಘಟನೆ ಬಳಿಕ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಾಲ ಮಂದಿರದಲ್ಲಿ ಇರಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

  • 6 ದಿನ 15 ಜನರಿಂದ ಅಪ್ರಾಪ್ತ ಇಬ್ಬರು ಸೋದರಿಯರ ಮೇಲೆ ಗ್ಯಾಂಗ್‍ರೇಪ್

    6 ದಿನ 15 ಜನರಿಂದ ಅಪ್ರಾಪ್ತ ಇಬ್ಬರು ಸೋದರಿಯರ ಮೇಲೆ ಗ್ಯಾಂಗ್‍ರೇಪ್

    – ಬಾಲಕಿಯರಿಗೆ ನಶೆ ಪದಾರ್ಥ ನೀಡಿ ಅತ್ಯಾಚಾರ
    – ಮಾರುಕಟ್ಟೆಯ ಜನಸಂದಣಿಯಲ್ಲಿ ಬಿಟ್ಟು ನೀಚರು ಎಸ್ಕೇಪ್

    ಇಸ್ಲಾಮಾಬಾದ್: ಆರು ದಿನ 15 ಜನರು ಇಬ್ಬರು ಅಪ್ರಾಪ್ತ ಸೋದರಿಯರನ್ನು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಪಾಕಿಸ್ತಾನದ ಫೆಸ್ಲಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ಮಹಿಳೆ ಸಂಘಟನೆಗಳು ಸೇರಿದಂತೆ ಬಹುತೇಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿ, ಕಾಮುಕರನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

    15 ಮತ್ತು 17 ವರ್ಷದ ಬಾಲಕಿಯರನ್ನ 11 ಜನ ಪ್ಲಾನ್ ಮಾಡಿ ಅಪಹರಿಸಿದ್ದಾರೆ. ನಂತರ ಇಬ್ಬರನ್ನ ಪ್ರತ್ಯೇಕವಾಗಿ ಫೆಸ್ಲಾಬಾದ್ ವ್ಯಾಪ್ತಿಯಲ್ಲಿರಿಸಿದ್ದಾರೆ. ಆರು ದಿನವೂ ಇಬ್ಬರನ್ನ ನಶೆಯಲ್ಲಿರುವಂತೆ ನೋಡಿಕೊಂಡ ನೀಚರು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಆರು ದಿನಗಳ ಬಳಿಕ ಓರ್ವ ಬಾಲಕಿಯನ್ನ ಜಂಗ್ ಬಜಾರ್ ಮತ್ತು ಮತ್ತೋರ್ವಳನ್ನ ಗುಜರಾನ್ವಾಲ್ ಮಾರುಕಟ್ಟೆಯ ಜನಸಂದಣಿಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾರೆ.

    ತಾಯಿಯ ಕಣ್ಣೀರು: ಸೆಪ್ಟೆಂಬರ್ 11ರಂದು ಇಬ್ಬರು ಮಕ್ಕಳನ್ನ ಅಪಹರಿಸಲಾಗಿತ್ತು. ಆರು ದಿನಗಳ ಬಳಿಕ ಮಕ್ಕಳು ಮನೆಗೆ ಬಂದಾಗ ಅತ್ಯಾಚಾರ ನಡೆದಿರುವ ವಿಷಯ ತಿಳಿಯಿತು. ಎಲ್ಲ 15 ಜನ ಮಕ್ಕಳಿಗೆ ಆರು ದಿನ ನಶೆ ಪದಾರ್ಥ ನೀಡುವ ಮೂಲಕ ಮಂಪರಿನಲ್ಲಿರುವಂತೆ ನೋಡಿಕೊಂಡಿದ್ದರು. ಆರ್ಥಿಕವಾಗಿ ಸಬಲರಾಗಿರದ ಕಾರಣ ಕಾನೂನು ಹೋರಾಟ ನಡೆಸಲು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ಈ ಊರು ತೊರೆದು ಬೇರೆ ಸ್ಥಳದಲ್ಲಿ ನೆಲಸಲು ತೀರ್ಮಾನಿಸಿದ್ದೇವೆ ಎಂದು ಸಂತ್ರಸ್ತ ಬಾಲಕಿಯರ ತಾಯಿ ಕಣ್ಣೀರು ಹಾಕುತ್ತಾರೆ.

    ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರೂ ಇದುವರೆಗೂ ಯಾವ ಆರೋಪಿಯನ್ನ ಬಂಧಿಸಿಲ್ಲ. ಪೊಲೀಸರ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಬಹುತೇಕ ಸಂಘಟನೆಗಳ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿವೆ.

  • 5ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ ಐವರಿಂದ ರಾತ್ರಿಯಿಡೀ ಗ್ಯಾಂಗ್‍ರೇಪ್

    5ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ ಐವರಿಂದ ರಾತ್ರಿಯಿಡೀ ಗ್ಯಾಂಗ್‍ರೇಪ್

    – ಮನೆಯಿಂದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ
    – ದೂರು ದಾಖಲಿಸದಂತೆ ಗ್ರಾಮಸ್ಥರಿಂದ ಬೆದರಿಕೆ

    ರಾಂಚಿ: 5 ನೇ ಕ್ಲಾಸ್ ವಿದ್ಯಾರ್ಥಿನಿಯನ್ನ ಅಪಹರಿಸಿ ಐವರು ಅತ್ಯಾಚಾರಗೈದಿರುವ ಘಟನೆ ಜಾರ್ಖಂಡ್ ರಾಜ್ಯದ ಗುಮ್ಲಾದ ಚೈನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಶನಿವಾರ ರಾತ್ರಿ ಬಾಲಕಿಯನ್ನ ಅಪಹರಿಸಿ ಐವರು ರಾತ್ರಿಯಿಡೀ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಭಾನುವಾರ ಪ್ರಕರಣ ಬೆಳಕಿಗೆ ಬಂದಾಗ ಬಾಲಕಿ ಪೋಷಕರಿಗೆ ದೂರು ದಾಖಲಿಸದಂತೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ. ಬಾಲಕಿಯ ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ ಸಹ ನಡೆಸಲಾಗಿದೆ. ಸದ್ಯ ದೂರು ದಾಖಲಾಗಿದ್ದು, ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಘಟನೆ ಮಾಹಿತಿ ಸಿಗುತ್ತಿದ್ದಂತೆ ಗ್ರಾಮದಲ್ಲಿ ಪಂಚಾಯ್ತಿ ಮುಖಂಡರ ನೇತೃತ್ವದಲ್ಲಿ ಸಭೆ ನಡೆದಿದೆ. ಈ ವೇಳೆ ಬಾಲಕಿಯ ಕುಟುಂಬಸ್ಥರಿಗೆ ದೂರು ದಾಖಲಿಸದಂತೆ ಒತ್ತಡ ಹಾಕಲಾಗಿದೆ. ಒಂದು ವೇಳೆ ದೂರು ದಾಖಲಾದ್ರೆ ಬಾಲಕಿಯನ್ನು ಕೊಂದು ಮನೆಗೆ ಬೆಂಕಿ ಹಚ್ಚಲಾಗುವುದು ಬೆದರಿಕೆ ಹಾಕಿದ್ದಾರೆ.

    ಬಾಲಕಿ ಮತ್ತು ಆರೋಪಿಗಳ ಸಮುದಾಯ ಬೇರೆಯಾಗಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಮುಂಜಾಗ್ರಾತ ಕ್ರಮವಾಗಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ.