Tag: minor girl

  • ದೂರು ನೀಡಿದ್ದಕ್ಕೆ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್- ಮೂವರು ಅರೆಸ್ಟ್

    ದೂರು ನೀಡಿದ್ದಕ್ಕೆ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್- ಮೂವರು ಅರೆಸ್ಟ್

    ಪಾಟ್ನಾ: ಅಪ್ರಾಪ್ತ ಬಾಲಕಿಯ ಮೇಲೆ ಐವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಚಾರಗೈದಿರುವ ಘಟನೆ ಬಿಹಾರದ ಜಮುಯಿ ಜಿಲ್ಲೆಯ ಕೋಚಿಂಗ್ ಸೆಂಟರ್‌ನಲ್ಲಿ ನಡೆದಿದೆ.

    ಬಾಲಕಿಯು ಕೋಚಿಂಗ್ ಕ್ಲಾಸ್‍ನಿಂದ ಹಿಂತಿರುಗುತ್ತಿದ್ದಾಗ ಆರೋಪಿಗಳು ಬಾಲಕಿಯನ್ನು ಬಲವಂತವಾಗಿ ಸಮೀಪದ ಕಾಡಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಮೂವರನ್ನು ಬಂಧಿಸಲಾಗಿದೆ. ಆ ಐವರು ಆರೋಪಿಗಳಲ್ಲಿ ವಿದ್ಯಾರ್ಥಿಯೋರ್ವ ಅದೇ ಕೋಚಿಂಗ್ ಸೆಂಟರ್‌ನಲ್ಲಿ ಓದುತ್ತಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ

    ಅವನು ಈ ಹಿಂದೆ ಆ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಈ ಬಗ್ಗೆ ಕೋಚಿಂಗ್ ಸೆಂಟರ್‌ನ ಮುಖ್ಯಸ್ಥರಿಗೆ ಬಾಲಕಿಯ ಕುಟುಂಬದವರು ದೂರು ನೀಡಿದ್ದರು. ಈ ಹಿನ್ನೆಲೆ ಇನ್ನು ಮುಂದೆ ಬಾಲಕಿಗೆ ತೊಂದರೆಯಾಗುವುದಿಲ್ಲ ಅಂತಾ ಮುಖ್ಯಸ್ಥ ಭರವಸೆ ನೀಡಿದ್ದರು. ನಂತರ ಕುಟುಂಬವು ಅದೇ ಕೋಚಿಂಗ್ ಸೆಂಟರ್‌ಗೆ ಬಾಲಕಿಯನ್ನು ಕಳುಹಿಸಲು ನಿರ್ಧರಿಸಿದರು. ದೂರಿನ ಮೇರೆಗೆ ಕೋಪಗೊಂಡ ಆರೋಪಿ ಮತ್ತು ಅವನ ಸ್ನೇಹಿತರು ಬಾಲಕಿಯನ್ನು ಸಾಮೂಹಿಕ ಅತ್ಯಾಚಾರಕ್ಕೆ ಯೋಜನೆ ರೂಪಿಸಿದ್ದರು. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ?

    ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ವರದಿಯ ನಂತರ ಸಾಮೂಹಿಕ ಅತ್ಯಾಚಾರ ನಡೆದಿರುವುದು ದೃಢಪಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕಾರ್ಖಾನೆಗೆ ಕರೆದೊಯ್ದು ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ

    ಕಾರ್ಖಾನೆಗೆ ಕರೆದೊಯ್ದು ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ

    ಕೋಲ್ಕತ್ತಾ: ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ಪಶ್ಚಿಮ ಬಂಗಾಳದ ಹಬೀಬ್‍ಪುರದಲ್ಲಿ ನಡೆದಿದೆ.

    4ನೇ ತರಗತಿಯನ್ನು ಓದುತ್ತಿರುವ ವಿದ್ಯಾರ್ಥಿನಿಯ ಮೇಲೆ ನಿಮಾಯ್ ಬಿಸ್ವಾಸ್ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಬಾಲಕಿಯ ಕುಟುಂಬಸ್ಥರು ದಿನಗೂಲಿ ನೌಕರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ನಿಮಾಯ್ ಬಿಸ್ವಾಸ್ ಬಾಲಕಿಯನ್ನು ಬಲವಂತವಾಗಿ ಪೊರಕೆ ಕಾರ್ಖಾನೆಗೆ ಕರೆದೊಯ್ದಿದ್ದಾನೆ.

    ನಂತರ ಅಲ್ಲಿ ಅವಳಿಗೆ ಬಿಸ್ಕೆಟ್ ನೀಡುವುದಾಗಿ ಆಸೆ ತೋರಿಸಿದ್ದಾನೆ. ಇದಾದ ನಂತರ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲಿ ಬಾಲಕಿಯು ಅಲ್ಲಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ಮೊದಲ ತಲೆದಂಡ- ಕೆಎಎಸ್ ಅಧಿಕಾರಿ ಅಮಾನತು

    ನಂತರ ಘಟನೆ ಬಗ್ಗೆ ಬಾಲಕಿಯು ತನ್ನ ಪೊಷಕರಿಗೆ ವಿವರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಬಾಲಕಿಯ ಕುಟುಂಬಸ್ಥರು ನಿಮಾಯ್ ಬಿಸ್ವಾಸ್ ವಿರುದ್ಧ ಹಬೀಬ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈವರೆಗೂ ಆರೋಪಿಯನ್ನು ಬಂಧಿಸಿಲ್ಲ. ಆದರೆ ಆತನ ವಿರುದ್ಧ ತನಿಖೆ ಆರಂಭಿಸಲಾಗಿದೆ. ಇದನ್ನೂ ಓದಿ: ಮದುವೆ ಮನೆ ಗೋಡೆ ಕುಸಿದು 5 ವರ್ಷದ ಮಗು ಸೇರಿ ಮೂವರು ದುರ್ಮರಣ

  • ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ 88ರ ವೃದ್ಧ ಆತ್ಮಹತ್ಯೆ..!

    ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ 88ರ ವೃದ್ಧ ಆತ್ಮಹತ್ಯೆ..!

    ಚಂಡೀಗಢ: ವೃದ್ಧನೊಬ್ಬ ಪಕ್ಕದ ಮನೆಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುಗ್ರಾಮದ ಹಳ್ಳಿಯೊಂದರಲ್ಲಿ ನಡೆದಿದೆ.

    ಲಾಲ್ ಸಿಂಗ್ (88) ಅತ್ಯಾಚಾರವೆಸಗಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಚಿಕ್ಕ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪದಿಂದ ವೃದ್ಧನು ಎಲ್ಲಿ ನಾನು ಸಿಕ್ಕಿ ಬೀಳುತ್ತೇನೆ ಎಂಬ ಭಯದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಾಲಕಿಯ ತಾಯಿಯು ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ತನ್ನ ವಿರುದ್ಧ ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದ ನಂತರ ವೃದ್ಧನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ-ಮುಸ್ಲಿಂ ಒಟ್ಟಿಗೆ ಇರಲು ಸಾಧ್ಯವಿಲ್ಲ ಅಂತ ಅಂಬೇಡ್ಕರ್ ಹೇಳಿದ್ದರು: ಪ್ರತಾಪ್ ಸಿಂಹ

    ಪೊಲೀಸರ ಪ್ರಕಾರ, ಮೃತ ವೃದ್ಧ ಲಾಲ್ ಸಿಂಗ್ ವಿರುದ್ಧ ಬುಧವಾರ ಫೋಕ್ಸೊ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಲಾಗಿತ್ತು. ತಾನು ಜೈಲಿಗೆ ಹೋದರೆ ಮರ್ಯಾದೆ ಹೋಗುತ್ತದೆ ಎಂಬ ಭೀತಿಯಲ್ಲಿ ಲಾಲ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ವೃದ್ಧನ ಶವವು ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವೃದ್ಧನ ಶವದ ಹತ್ತಿರ ಯಾವುದೇ ಡೇತ್ ನೋಟ್ ಕಂಡುಬಂದಿಲ್ಲ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

    ಅತ್ಯಾಚಾರಕ್ಕೊಳಗಾದ ಬಾಲಕಿಯ ತಾಯಿ ನೀಡಿದ ದೂರಿನನ್ವಯ, ಆ ವೃದ್ಧ ಬಾಲಕಿಗೆ ಸಿಹಿತಿಂಡಿ ಕೊಡಿಸುವುದಾಗಿ ನಂಬಿಸಿದ್ದಾನೆ. ನಂತರ ಆಕೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಕಳೆದ ಹಲವು ದಿನಗಳಿಂದ ಆ ವೃದ್ಧ ತನಗೆ ಕಿರುಕುಳ ನೀಡುತ್ತಿದ್ದ ಎಂದು ನನ್ನ ಮಗಳು ಹೇಳಿದಾಗ ನನಗೆ ಆಘಾತವಾಯಿತು. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಬಾಲಕಿಯ ತಾಯಿ ಹೇಳಿದ್ದಾರೆ. ಆತ ಅತ್ಯಾಚಾರ ನಡೆಸಿರುವ ಬಗ್ಗೆ ನನ್ನ ಮಗಳು ಹೇಳಿದಾಗ ನಾನು ಪೊಲೀಸರ ಬಳಿ ಹೋಗಿ ದೂರು ನೀಡಿದೆ ಎಂದು ಬಾಲಕಿಯ ತಾಯಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

    ಬಿಲಾಸ್‍ಪುರ ಪೊಲೀಸ್ ಠಾಣೆಯ ಹೆಚ್ಚುವರಿ ಠಾಣಾಧಿಕಾರಿ ಕುಂದನ್ ಸಿಂಗ್, ವೃದ್ಧನ ಸಾವಿನ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಅದೇ ಸಮಯದಲ್ಲಿ ಅತ್ಯಾಚಾರ ಪ್ರಕರಣದ ತನಿಖೆಯೂ ನಡೆಯುತ್ತಿದೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ಮತ್ತು ಇತರ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

  • ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ವೇಶ್ಯಾವಾಟಿಕೆ – ನಾಲ್ವರು ಅರೆಸ್ಟ್

    ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ವೇಶ್ಯಾವಾಟಿಕೆ – ನಾಲ್ವರು ಅರೆಸ್ಟ್

    ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆಯ ಪ್ರಕರಣಗಳು ಒಂದಾದ  ಮೇಲೊಂದರಂತೆ ಬೆಳಕಿಗೆ ಬರುತ್ತಲೇ ಇವೆ. ಮಂಗಳವಾರ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.

    ಈ ಹಿಂದೆ ವೇಶ್ಯಾವಾಟಿಕೆ ದಂಧೆಯಲ್ಲಿ ಓರ್ವ ಅಪ್ರಾಪ್ತ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಂತ್ರಸ್ಥರನ್ನು ಮಂಗಳೂರು ಪೊಲೀಸರು ರಕ್ಷಣೆ ಮಾಡಿದ್ದರು. ಇದೀಗ ಮತ್ತೊಬ್ಬ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ. ಈ ಮೂಲಕ ಪೊಲೀಸರು ಪ್ರತ್ಯೇಕ 4 ಪೋಕ್ಸೋ ಪ್ರಕರಣ ಸೇರಿದಂತೆ ಒಟ್ಟು 5 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೈಲಾದಷ್ಟು ಹೋರಾಡಿದ್ದೇವೆ, ಫಲಿತಾಂಶವನ್ನು ಕಾದು ನೋಡುತ್ತೇವೆ: ಪ್ರಿಯಾಂಕಾ ಗಾಂಧಿ

    POLICE JEEP

    ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ರಶೀದ್ ಸಾಹೇಬ್(73), ಮೊಹಮ್ಮದ್ ಆಲಿ(74), ಗ್ರೆಗರಿ ಲಿಯೋನಾರ್ಡ್ ಸಿಕ್ವೇರಾ(62) ಹಾಗೂ ಇಸ್ಮಾಯಿಲ್(41) ಬಂಧಿತ ಆರೋಪಿಗಳಾಗಿದ್ದು, ಗ್ರಾಹಕರ ರೀತಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದನ್ನೂ ಓದಿ: 24 ಗಂಟೆಯೊಳಗೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ: ಇಮ್ರಾನ್‌ ಖಾನ್‌ಗೆ ಗಡುವು

    ಮಂಗಳೂರಿನ ನಂದಿಗುಡ್ಡ ರಿಯಾನಾ ರೆಸಿಡೆನ್ಸಿ ಅಪಾರ್ಟ್ಮೆಂಟ್‌ನ ಪೆಂಟ್ ಹೌಸ್‌ನಲ್ಲಿ ಈ ಹೈಟೆಕ್ ವೇಶ್ಯಾವಾಟಿಕೆ ಬೆಳಕಿಗೆ ಬಂದಿತ್ತು. ಮಂಗಳೂರಿನ ಸಿಸಿಬಿ ಪೊಲೀಸರು ಪ್ರಕರಣದ ಬೆನ್ನು ಬಿದ್ದು ತನಿಖೆ ನಡೆಸಿದ್ದರು. ಇದೀಗ 5 ಪ್ರಕರಣಗಳನ್ನು ದಾಖಲಿಸಿ 10 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

  • ಅಪ್ರಾಪ್ತ ಬಾಲಕಿ ಮೇಲೆ ಶಿಕ್ಷಕ, ಮ್ಯಾನೇಜರ್‌ನಿಂದಲೇ ಅತ್ಯಾಚಾರ

    ಅಪ್ರಾಪ್ತ ಬಾಲಕಿ ಮೇಲೆ ಶಿಕ್ಷಕ, ಮ್ಯಾನೇಜರ್‌ನಿಂದಲೇ ಅತ್ಯಾಚಾರ

    ಲಕ್ನೋ: ಎಂಟು ವರ್ಷದ ಬಾಲಕಿಯ ಮೇಲೆ ಶಿಕ್ಷಕ ಮತ್ತು ಶಾಲೆಯ ಮ್ಯಾನೇಜರ್ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ.

    ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಬಾಲಕಿ 3ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಶಾಲೆಯಿಂದ ಮನೆಗೆ ಬಂದ ನಂತರ ಬಾಲಕಿ ನಡೆದ ಘಟನೆಯನ್ನೆಲ್ಲಾ ಪೋಷಕರಿಗೆ ವಿವರಿಸಿದ್ದಾಳೆ. ಬಳಿಕ ಬಾಲಕಿ ಪೋಷಕರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ : ನಂದಿಬೆಟ್ಟ, ಚಾಮುಂಡಿ ಬೆಟ್ಟ, ಮುಳ್ಳಯ್ಯನಗಿರಿಯಲ್ಲಿ ರೋಪ್ ವೇ

    ಈ ಸಂಬಂಧ ಸರ್ಕಲ್ ಅಧಿಕಾರಿ ಕುಲದೀಪ್ ಸಿಂಗ್ ಅವರು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವರದಿಯಲ್ಲಿ ಅತ್ಯಾಚಾರವನ್ನು ದೃಢಪಟ್ಟಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ಏಳು ತಿಂಗಳ ಗರ್ಭಿಣಿಗೆ ಇದೆಂಥ ಟಾರ್ಚರ್? : ಶಾಕ್ ನಲ್ಲಿ ನಟಿ ಸಂಜನಾ

  • ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಯುವಕ ಅರೆಸ್ಟ್

    ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಯುವಕ ಅರೆಸ್ಟ್

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

    ಯಶ್ ಭಂಡಾರೆ(19) ಬಂಧಿತ ಆರೋಪಿ. ಯಶ್ ಮುಂಬೈನ ಚೆಂಬೂರ್ ಪ್ರದೇಶದ ನಿವಾಸಿ. ಈತ ಅಪ್ರಾಪ್ತೆಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪರಿಚಯವಾಗಿದ್ದ. ಪರಿಚಯದ ಮೂಲಕವೇ ಬಾಲಕಿಯ ಖಾಸಗಿ ಫೋಟೋಗಳನ್ನು ಪಡೆದುಕೊಂಡಿದ್ದ. ನಂತರ ಇನ್‍ಸ್ಟಾಗ್ರಾಮ್‍ನಲ್ಲಿ ನಕಲಿ ಖಾತೆ ಮಾಡಿ ಫೋಟೋಗಳನ್ನು ಶೇರ್ ಮಾಡುವುದಾಗಿ ಬೆದರಿಸಿ ಆಕೆಗೆ ಕಿರುಕುಳ ನೀಡುತ್ತಿದ್ದ.

    ಈ ಕುರಿತು ಬಾಲಕಿಯು ತನ್ನ ತಾಯಿಗೆ ತಿಳಿಸಿದ್ದಾಳೆ. ಬಾಲಕಿಯ ತಾಯಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ತಂತ್ರಜ್ಞಾನದ ಸಹಾಯದಿಂದ ಯಶ್ ಮುಂಬೈನಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ. ನಂತರ ಪೊಲೀಸರ ತಂಡವೊಂದು ಮುಂಬೈಗೆ ತೆರಳಿ ಯಶ್‍ನನ್ನು ಬಂಧಿಸಿದೆ. ಇದನ್ನೂ ಓದಿ: ಯಾರನ್ನಾದರೂ ಮುಟ್ಟಲಿ ನೋಡೋಣ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ: ಡಿಕೆಶಿ

    ಯಶ್ ಭಂಡಾರೆ ವಿರುದ್ಧ ಭಾರತೀಯ ದಂಡ ಸಂಹಿತೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆಗಟ್ಟುವಿಕೆ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಇದನ್ನೂ ಓದಿ: ಅಂಡರ್‌ಗ್ರೌಂಡ್‌ನಲ್ಲಿ ಕಂತೆ ಕಂತೆ ನೋಟು ಬಚ್ಚಿಟ್ಟಿದ್ದ ಉದ್ಯಮಿ – ಇವನ ಆಸ್ತಿ ಬಗ್ಗೆ ಮಾಹಿತಿ ನೀಡಿದ್ರೆ 10,000 ಬಹುಮಾನ

  • ಅಜ್ಜಿ ಜೊತೆ ಮದುವೆಗೆ ಬಂದಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ

    ಅಜ್ಜಿ ಜೊತೆ ಮದುವೆಗೆ ಬಂದಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ

    ಲಕ್ನೋ:  ಅಪ್ರಾಪ್ತ ಬಾಲಕಿಯ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿದ ಪ್ರಕರಣ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಇದೀಗ ಬೆಳಕಿಗೆ ಬಂದಿದೆ.

    ಆರೋಪಿಯನ್ನು ನಿಸಾರ್(27) ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ನೇಕಾರ. ಈ ಘಟನೆ ಸಿಗ್ರಾದ ಲಲ್ಲಾಪುರದಲ್ಲಿ ನಡೆದಿದೆ.

    ಮದುವೆಗೆಂದು ತನ್ನ ಅಜ್ಜಿಯ ಜೊತೆ 6 ವರ್ಷದ ಬಾಲಕಿ ಲಲ್ಲಾಪುರಕ್ಕೆ ಹೋಗಿದ್ದಳು. ನಿಸ್ಸಾರ್ ಆ ಬಾಲಕಿಯನ್ನು ತನ್ನೊಂದಿಗೆ ಕೆರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ಚಂಡೀಗಢಕ್ಕೆ ಬಂದ ಪ್ರಯಾಣಿಕನಿಗೆ ಕೊರೊನಾ

    ಭಾನುವಾರ ಈ ಘಟನೆ ನಡೆದಿದ್ದು, ಆರೋಗ್ಯದಲ್ಲಿ ಏರುಪೇರಾದಾಗ ಈ ಅಮಾನವೀಯ ಕೃತ್ಯವನ್ನು ಬಾಲಕಿಯು ಮನೆಯವರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಸಂತ್ರಸ್ತೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಿಸಾರ್ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯ ನಂತರ ಆರೋಪಿ ತಲೆಮರೆಸಿಕೊಂಡಿದ್ದು, ಆರೋಪಿಗಾಗಿ ಶೋಧ ನಡೆಯುತ್ತಿದೆ. ಇದನ್ನೂ ಓದಿ: ನೌಕಾಪಡೆಯ ನೂತನ ನೌಕಸೇನಾಧಿಪತಿಯಾಗಿ ಆರ್. ಹರಿ ಕುಮಾರ್ ಅಧಿಕಾರ ಸ್ವೀಕಾರ

    ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

  • 6 ತಿಂಗಳಲ್ಲಿ ಅಪ್ರಾಪ್ತೆ ಮೇಲೆ 400 ಮಂದಿ ರೇಪ್

    6 ತಿಂಗಳಲ್ಲಿ ಅಪ್ರಾಪ್ತೆ ಮೇಲೆ 400 ಮಂದಿ ರೇಪ್

    ಮುಂಬೈ: ವಿವಾಹಿತ ಅಪ್ರಾಪ್ತೆ ಯುವತಿ ಮೇಲೆ ಕಳೆದ 6ತಿಂಗಳುಗಳಿಂದ ಪೊಲೀಸರು ಸೇರಿದಂತೆ 400 ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.

    ಅಪ್ರಾಪ್ತ ಬಾಲಕಿ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಇತ್ತ ತಂದೆ ಮಗಳನ್ನು ಬೇಗ ಮದುವೆ ಮಾಡಿ ಕಳುಹಿಸಬೇಕೆಂದು, ವರನನ್ನು ಹುಡುಕಿ ಮದುವೆ ಮಾಡಿದ್ದರು. ಗಂಡನ ಮನೆ ಸೇರಿದಾಗ, ಆಕೆಯ ಗಂಡ 6 ತಿಂಗಳು ಕೆಲಸ ಟ್ರೈನಿಂಗ್ ಹಿನ್ನೆಲೆ ಬೇರೆ ಊರಿಗೆ ತೆರಳಿದ್ದ. ಆಗ ಮಾವ ಸೊಸೆ ಮೇಲೆ ಮಾವ ಲೈಂಗಿಕ ದೌರ್ಜನ್ಯ ವೆಸಗಿದ್ದಾನೆ.

    ಪತಿ ಮನೆಯ ಕಿರಕುಳದಿಂದ ಬೇಸತ್ತ ಆಕೆ ಕೆಲಸ ಹುಡುಕಿ ಹೋದಾಗ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಇಬ್ಬರು ದುರುಳರು ಅತ್ಯಾಚಾರವೆಸಗಿದ್ದಾರೆ. ಇದಾದ ಬಳಿಕ ಆಕೆ ಯಾವುದೋ ಜಾಲದಲ್ಲಿ ಸಿಲುಕಿ 400 ಮಂದಿ ಆಕೆ ಮೇಲೆ ಅತ್ಯಾಚಾರವೆಸಿಗಿದ್ದಾರೆ. ಪೊಲೀಸರು ಕೂಡ ತಮ್ಮ ತೀಟೆ ತಿರಿಸಿಕೊಳ್ಳಲು ಆಕೆಯನ್ನು ಬಳಸಿಕೊಂಡಿದ್ದಾರೆ. ಈಗ ಆಕೆ ಗರ್ಭಿಣಿಯಾಗಿದ್ದಾಳೆ. ಇದನ್ನೂ ಓದಿ: ಮಗಳ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಆಚರಿಸುತ್ತಿರೋ ಅಭಿ, ಐಶ್ – ದಿನಕ್ಕೆ ಇದರ ಬೆಲೆ ಎಷ್ಟು ಗೊತ್ತಾ?

    ಯುವತಿಯನ್ನು ಮಕ್ಕಳ ಇಲಾಖೆ ಸಮಿತಿ ರಕ್ಷಿಸಿದೆ. ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. . ಈ ಕುರಿತಾಗಿ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ? : ಕ್ಷಮೆ ಕೇಳಿದ ಹಂಸಲೇಖ

  • ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಜೀವಂತ ಸುಟ್ಟ ಕಾಮುಕರು

    ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಜೀವಂತ ಸುಟ್ಟ ಕಾಮುಕರು

    – ಚಿಕಿತ್ಸೆ ಫಲಕಾರಿಯಾಗದೆ ಹುಡುಗಿ ಸಾವು
    – ನಾಲ್ವರು ಕಾಮುಕರಿಂದ ಕೃತ್ಯ

    ಪಾಟ್ನಾ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಜೀವಂತವಾಗಿ ಸುಡುವ ಮೂಲಕ ಕಾಮುಕರು ವಿಕೃತಿ ಮೆರೆದಿದ್ದಾರೆ.

    ಬಿಹಾರದ ಮುಜಾಫರ್ ಪುರದಲ್ಲಿ ಜನವರಿ 11ರಂದು ಘಟನೆ ನಡೆದಿದ್ದು, ಸುಟ್ಟಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅಪ್ರಾಪ್ತೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.

    ಹುಡುಗಿಯ ತಂದೆ ನಾಲ್ವರ ವಿರುದ್ಧ ಆರೋಪಿಸಿದ್ದು, ಹುಡುಗಿಯ ತಂದೆ ನೀಡಿದ ದೂರಿನ ಆಧಾರ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

    ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್‍ಡಿಪಿಓ ರಾಜೇಶ್ ಕುಮಾರ್ ಶರ್ಮಾ, ಅಪ್ರಾಪ್ತೆ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿ ಜೀವಂತವಾಗಿ ಸುಟ್ಟಿದ್ದಾರೆ. ಹುಡುಗಿಯ ತಂದೆ ನಾಲ್ವರ ವಿರುದ್ಧ ಆರೋಪಿಸಿದ್ದು, ಅದರಂತೆ ಎಫ್‍ಐಆರ್ ದಾಖಲಿಸಲಾಗಿದೆ. ಈಗಾಗಲೇ ನಾವು ತನಿಖೆ ಆರಂಭಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

  • ಕಬ್ಬಿನ ಗದ್ದೆಯಲ್ಲಿ ಶವವಾದ ಅಪ್ರಾಪ್ತ ಬಾಲಕಿ – ನ್ಯಾಯಕ್ಕಾಗಿ ಕಿಚ್ಚನ ಆಗ್ರಹ

    ಕಬ್ಬಿನ ಗದ್ದೆಯಲ್ಲಿ ಶವವಾದ ಅಪ್ರಾಪ್ತ ಬಾಲಕಿ – ನ್ಯಾಯಕ್ಕಾಗಿ ಕಿಚ್ಚನ ಆಗ್ರಹ

    ಬೆಂಗಳೂರು: ಮಂಡ್ಯದ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನ ಗದ್ದೆಯಲ್ಲಿ ಕೊಲೆಯಾಗಿದ್ದ ಅಪ್ರಾಪ್ತ ಬಾಲಕಿಯ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಿಚ್ಚ, ಈ ಪ್ರಕರಣದಲ್ಲಿ ಬಾಲಕಿಗೆ ನ್ಯಾಯ ಸಿಗುತ್ತದೆ ಮತ್ತು ತಪಿಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮುಂದೆ ಈ ರೀತಿ ಮಾಡುವವರಿಗೆ ತೀವ್ರ ತರಹದ ಸಂದೇಶ ರವಾನೆಯಾಗಲಿದೆ ಎಂದು ಭಾವಿಸಿದ್ದೇನೆ. ಈ ಮೂಲಕ ಮುಂದೆ ಈ ರೀತಿ ಕ್ರೂರ ಕೃತ್ಯ ಮಾಡಲು ಯೋಚಿಸುವವರಿಗೆ ಒಂದು ಎಚ್ಚರಿಕೆ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

    ಏನಿದು ಪ್ರಕರಣ?: ಬಾಲಕಿ ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಿವಾಸಿ. ಬಾಲಕಿ ಕುಟುಂಬಸ್ಥರ ಜೊತೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗ್ರಾಮಕ್ಕೆ ಬಂದಿದ್ದಳು. ಬುಧವಾರ ಕಬ್ಬು ಕಟಾವಿಗೆ ಬಾಲಕಿ ಗದ್ದೆಗೆ ಬಂದಿದ್ದಳು. ಈ ವೇಳೆ ಬಾಲಕಿಯನ್ನ ಎಳೆದೊಯ್ದ ಕಾಮುಕ ಕಿರಾತಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಬಾಲಕಿ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದು ಶವವನ್ನು ಕಬ್ಬಿನ ಗದ್ದೆಯಲ್ಲಿ ಎಸೆದು ಹೋಗಿದ್ದರು.

    ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿ ಕೊಲೆಯಾದ ಅದೇ ಕಬ್ಬಿನ ಗದ್ದೆಯಲ್ಲಿ ಅವಿತುಕೊಂಡಿದ್ದನು. ಅನುಮಾನದ ಮೇರೆಗೆ ಅಪ್ರಾಪ್ತನನ್ನ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಮೊದಲಿಗೆ ಯಾರೋ ಇಬ್ಬರು ಬಾಲಕಿಯನ್ನು ಎಳೆದುಕೊಂಡು ಹೋಗುತ್ತಿದ್ದಾಗ ನಾನು ಆಕೆಯನ್ನ ಬಿಡಿಸಲು ಹೋಗಿದ್ದೆ. ನಂತರ ಭಯವಾಗಿ ಗದ್ದೆಯಲ್ಲಿ ಅವಿತು ಕುಳಿತಿದ್ದೆ ಎಂದು ಹೇಳಿದ್ದನು. ಅಪ್ರಾಪ್ತನ ನಡವಳಿಕೆ ಬಗ್ಗೆ ಮೃತ ಬಾಲಕಿಯ ಸಂಬಂಧಿಕರು ಶಂಕೆ ವ್ಯಕ್ತಪಡಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.