Tag: Ministry of Information and Broadcasting

  • ಕಂದಹಾರ್ ವಿಮಾನ ಅಪಹರಣ ಸೀರಿಸ್‌ನಲ್ಲಿ ಹಿಂದೂಗಳಿಗೆ ಅವಮಾನ – ನೆಟ್‌ಫ್ಲಿಕ್ಸ್‌ಗೆ ಸಮನ್ಸ್

    ಕಂದಹಾರ್ ವಿಮಾನ ಅಪಹರಣ ಸೀರಿಸ್‌ನಲ್ಲಿ ಹಿಂದೂಗಳಿಗೆ ಅವಮಾನ – ನೆಟ್‌ಫ್ಲಿಕ್ಸ್‌ಗೆ ಸಮನ್ಸ್

    ನವದೆಹಲಿ: ಕಂದಹಾರ್ ವಿಮಾನ ಅಪಹರಣ IC 814 ಸೀರಿಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು (Ministry of Information and Broadcasting) ಭಾರತದ ನೆಟ್‌ಫ್ಲಿಕ್ಸ್ (Netflix) ಕಂಟೆಂಟ್ ಚೀಫ್ ಮೋನಿಶಾ ಶೇರ್ಗಿಲ್ (Monika Shergill) ಅವರಿಗೆ ಸಮನ್ಸ್ ಮಾಡಿದೆ.

    ಕಂಟೆಂಟ್ ಚೀಫ್ ಶೆರ್ಗಿಲ್ ಅವರನ್ನು ಸೆಪ್ಟೆಂಬರ್ 3, ಮಂಗಳವಾರದಂದು ವೆಬ್ ಸರಣಿಯ ವಿವಾದಾತ್ಮಕ ಅಂಶಗಳ ಕುರಿತು ವಿವರಣೆಯನ್ನು ನೀಡಲು ಹಾಜರಾಗುವಂತೆ ಸೂಚಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಇದನ್ನೂ ಓದಿ: 2 ತಿಂಗಳ ಒಳಗಡೆ ಕೆಪಿಎಸ್‌ಸಿ ಮರು ಪರೀಕ್ಷೆ – ಅಧಿಕಾರಿಗಳು ಅಮಾನತು: ಸಿಎಂ ಘೋಷಣೆ

    1999ರಲ್ಲಿ ತಾಲಿಬಾನ್ ಉಗ್ರರು ನಡೆಸಿದ್ದ ಏರ್ ಇಂಡಿಯಾ ವಿಮಾನದ ಅಪಹರಣದ ಕಥೆಯನ್ನು ಆಧರಿಸಿ ನಿರ್ಮಾಣವಾಗಿದ್ದ ಸಿನಿಮಾ ಆ.29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿತ್ತು. ದಿ ಕಂದಹಾರ್ ಹೈಜಾಕ್’ ಐಸಿ 814 (The Kandahar Hijack IC 814) ಸಿನಿಮಾದಲ್ಲಿ ಇಬ್ಬರು ಅಪಹರಣಕಾರರ ಹೆಸರನ್ನು ಹಿಂದೂ ಹೆಸರುಗಳಿಗೆ ಬದಲಾಯಿಸಿದ ಆರೋಪದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

    ಏನಿದು ವಿವಾದ?
    ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಹರ್ಕತ್-ಉಲ್-ಮುಜಾಹಿದ್ದೀನ್‌ನಿಂದ 1999ರಲ್ಲಿ ನಡೆದ ಏರ್ ಇಂಡಿಯಾ ವಿಮಾನದ ಅಪಹರಣದಲ್ಲಿ ಮುಸ್ಲಿಂ ಉಗ್ರರ ಹೆಸರನ್ನು ಬದಲಿಸಿ ಹಿಂದೂ ಹೆಸರನ್ನು ಬಳಸಿರುವ ಕುರಿತು ಆರೋಪ ವ್ಯಕ್ತವಾಗಿದೆ.

    ವಿಮಾನ ಅಪಹರಿಣದಲ್ಲಿ ಇಬ್ರಾಹಿಂ ಅಖ್ತರ್, ಶಾಹಿದ್ ಅಖ್ತರ್‌ಸೈದ್, ಸನ್ನಿ ಸಹ್ಮದ್ ಖಾಜಿ, ಜಹೂರ್ ಮಿಸ್ತ್ರೀ ಮತ್ತು ಶಾಖೀರ್ ಭಾಗಿಯಾಗಿದ್ದ ಉಗ್ರರ ಹೆಸರನ್ನು ಬದಲಿಸಿ, ಸಿನಿಮಾದಲ್ಲಿ ಅಪಹರಣಕಾರರನ್ನು ಚೀಫ್, ಡಾಕ್ಟರ್, ಬರ್ಗರ್, ಭೋಲಾ ಮತ್ತು ಶಂಕರ್ ಎಂದು ಕೋಡ್‌ನೇಮ್‌ಗಳನ್ನು ಬಳಸುತ್ತಿದ್ದರು. ಈ ಕಾರಣಕ್ಕೆ ಆ ಹೆಸರನ್ನು ಇರಿಸಿ ಸರಣಿಯನ್ನು ತೆಗೆಯಲಾಗಿದೆ ಎಂದು ನಿರ್ದೇಶಕ ಅನುಭವ್ ಸಿನ್ಹಾ (Anubhav Sinha) ಸ್ಪಷ್ಟನೆ ನೀಡಿದ್ದರು.ಇದನ್ನೂ ಓದಿ: ಸಂಸ್ಕೃತ ಬರದಿದ್ರೆ ದೇವಲೋಕಕ್ಕೆ ವೀಸಾ ಇಲ್ಲ: ಚರ್ಚೆಗೆ ಗ್ರಾಸವಾದ ಪುತ್ತಿಗೆ ಶ್ರೀ ಹೇಳಿಕೆ

    ಸದ್ಯ ಸಿನಿಮಾ ಮೂಲಕ ನೈಜ ಘಟನೆಯನ್ನು ತಪ್ಪಾಗಿ ಚಿತ್ರಿಸುತ್ತಾರೆ ಹಾಗೂ ಧಾರ್ಮಿಕತೆಯನ್ನು ಪ್ರಚೋದಿಸುತ್ತಾರೆ. ನಿರ್ಮಾಪಕರು ಉದ್ದೇಶಪೂರ್ವಕವಾಗಿ ಹಿಂದೂ ಹೆಸರುಗಳನ್ನು ಆರಿಸಿಕೊಂಡಿದ್ದಾರೆ ಎಂದು ಹೆಸರುಗಳ ಕುರಿತಾಗಿ ಆರೋಪಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಅಶ್ಲೀಲ, ಅಸಭ್ಯ ಕಂಟೆಂಟ್‌ ಪ್ರಸಾರ; 18 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ನಿರ್ಬಂಧ

    ಅಶ್ಲೀಲ, ಅಸಭ್ಯ ಕಂಟೆಂಟ್‌ ಪ್ರಸಾರ; 18 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ನಿರ್ಬಂಧ

    ನವದೆಹಲಿ: ಅಶ್ಲೀಲ ಮತ್ತು ಅಸಭ್ಯ ಕಂಟೆಂಟ್‌ ಪ್ರಸಾರಕ್ಕಾಗಿ 18 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ (OTT Platform) ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information and Broadcasting) ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

    19 ವೆಬ್‌ಸೈಟ್‌ಗಳು, 10 ಅಪ್ಲಿಕೇಶನ್‌ಗಳು (ಗೂಗಲ್ ಪ್ಲೇ ಸ್ಟೋರ್‌ನಲ್ಲಿ 7, ಆ್ಯಪಲ್ ಆಪ್ ಸ್ಟೋರ್‌ನಲ್ಲಿ 3), ಒಟಿಟಿ ಪ್ಲಾಟ್‌ಫಾರ್ಮ್‌ಗಳ 57 ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ರಾಷ್ಟ್ರವ್ಯಾಪಿ ನಿರ್ಬಂಧಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಇದನ್ನೂ ಓದಿ: ಪಿಟ್‍ಬುಲ್, ಬುಲ್‍ಡಾಗ್, ರಾಟ್‍ವೀಲರ್: 23 ತಳಿ ಅಪಾಯಕಾರಿ ಶ್ವಾನಗಳ ನಿಷೇಧಕ್ಕೆ ರಾಜ್ಯಗಳಿಗೆ ಕೇಂದ್ರ ಆದೇಶ

    ಐಟಿ ಕಾಯಿದೆ, ಭಾರತೀಯ ದಂಡ ಸಂಹಿತೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್, ಸೃಜನಶೀಲ ಅಭಿವ್ಯಕ್ತಿಯ ಸೋಗಿನಲ್ಲಿ ಅಶ್ಲೀಲತೆ, ಅಸಭ್ಯತೆ ಮತ್ತು ನಿಂದನೆ ವಿಷಯಗಳನ್ನು ಪ್ರಚಾರ ಮಾಡಬಾರದು ಎಂದು ವೇದಿಕೆಗಳ ಜವಾಬ್ದಾರಿ ಕುರಿತು ಪದೇ ಪದೇ ಒತ್ತಿಹೇಳಿದ್ದಾರೆ.

    ಸೃಜನಶೀಲ ಅಭಿವ್ಯಕ್ತಿ ಹೆಸರಿನಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಅಶ್ಲೀಲತೆ, ಅಸಭ್ಯ ಕಂಟೆಂಟ್‌ಗಳನ್ನು ಪ್ರಸಾರ ಮಾಡದಂತೆ ನೋಡಿಕೊಳ್ಳುವುದು ಆಯಾ ಪ್ಲಾಟ್‌ಫಾರ್ಮ್‌ ಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಠಾಕೂರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಆಯೋಗದ ಆಯುಕ್ತರಾಗಿ ಇಬ್ಬರ ನೇಮಕ

    ನವದೆಹಲಿಯಲ್ಲಿ ನಡೆದಿದ್ದ ಸಭೆಯಲ್ಲಿ, ಯಾವುದೇ ಕಂಟೆಂಟ್‌ ಭಾರತದ ಸಂಸ್ಕೃತಿಯನ್ನು ಅವಮಾನಿಸದಂತೆ ಸಂವೇದನಾಶೀಲವಾಗಿರಬೇಕು ಎಂದು ಪ್ಲಾಟ್‌ಫಾರ್ಮ್‌ಗಳಿಗೆ ಸಚಿವರು ಮನವಿ ಮಾಡಿದ್ದರು.

  • ಆನ್‍ಲೈನ್ ಬೆಟ್ಟಿಂಗ್- ಮಾಧ್ಯಮಗಳಿಗೆ ಕೇಂದ್ರ ಖಡಕ್ ಸೂಚನೆ

    ಆನ್‍ಲೈನ್ ಬೆಟ್ಟಿಂಗ್- ಮಾಧ್ಯಮಗಳಿಗೆ ಕೇಂದ್ರ ಖಡಕ್ ಸೂಚನೆ

    ನವದೆಹಲಿ: ಆನ್‍ಲೈನ್ ಬೆಟ್ಟಿಂಗ್ (Online Betting) ಪ್ಲಾಟ್‍ಫಾರ್ಮ್‍ಗಳ ಕುರಿತಾದ ಜಾಹೀರಾತುಗಳ ವಿಚಾರವಾಗಿ ಕೇಂದ್ರ ಸರ್ಕಾರ (Central Government) ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದೆ. ಮಾಧ್ಯಮಗಳು ತಕ್ಷಣ ಇಂತಹ ಜಾಹೀರಾತುಗಳನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ರವಾನಿಸಿದೆ.

    ಟಿವಿ ಚಾನೆಲ್‍ಗಳು, ಡಿಜಿಟಲ್ ಮೀಡಿಯಾ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ರೀತಿಯ ಬೆಟ್ಟಿಂಗ್ ಹಾಗೂ ಜೂಜು ಸಂಬಂಧಿತ ಜಾಹೀರಾತುಗಳನ್ನು ತಡೆಯುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information and Broadcasting) ಸೂಚಿಸಿದೆ. ಇಂತಹ ಜಾಹೀರಾತುಗಳಿಗೆ ಪಾವತಿಸಲು ಕಪ್ಪು ಹಣ ಬಳಕೆಯಾಗುವ ಸಾಧ್ಯತೆಯಿದೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಪೇಚಿಗೆ ಸಿಲುಕಿದ ಪತ್ನಿ!

    ಇದಲ್ಲದೆ ಪ್ರಮುಖ ಕ್ರೀಡಾಕೂಟಗಳಲ್ಲಿ ವಿಶೇಷವಾಗಿ ಕ್ರಿಕೆಟ್‍ನಲ್ಲಿ ಅಂತಹ ಬೆಟ್ಟಿಂಗ್ ಮತ್ತು ಜೂಜಿನ ವೇದಿಕೆಗಳ ಪ್ರಚಾರವನ್ನು ಹೆಚ್ಚಿಸುವ ಪ್ರವೃತ್ತಿ ಇದೆ. ಶೀಘ್ರದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಕೂಟ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಸಚಿವಾಲಯ ಕ್ರಮಕ್ಕೆ ಮುಂದಾಗಿದೆ.

    ಆದೇಶವನ್ನು ಪಾಲಿಸಲು ವಿಫಲವಾದರೆ ಸೂಕ್ತ ಕಾಯಿದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ರೆಸಾರ್ಟ್‌ ತೋರಿಸುತ್ತೇನೆ ಬಾ ಅಂತ ಕರೆದು ಮಹಿಳೆ ಮೇಲೆ ರೇಪ್‌ – ಟೆಕ್ಕಿ ಅರೆಸ್ಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ ವಿರೋಧಿ ಸುಳ್ಳು ಸುದ್ದಿ ಪ್ರಸಾರ –  35 ಪಾಕ್‌ ಯೂಟ್ಯೂಬ್‌ ಚಾನೆಲ್‌ ಬ್ಲಾಕ್‌

    ಭಾರತ ವಿರೋಧಿ ಸುಳ್ಳು ಸುದ್ದಿ ಪ್ರಸಾರ – 35 ಪಾಕ್‌ ಯೂಟ್ಯೂಬ್‌ ಚಾನೆಲ್‌ ಬ್ಲಾಕ್‌

    ನವದೆಹಲಿ: ಭಾರತ ವಿರೋಧಿ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಪಾಕ್‌ ಆಧಾರಿತ 35 ಯೂಟ್ಯೂಬ್‌ ಚಾನೆಲ್‌, ಎರಡು ಟ್ವಿಟ್ಟರ್‌ ಖಾತೆ, ಎರಡು ಇನ್‌ಸ್ಟಾಗ್ರಾಮ್‌ ಖಾತೆ, ಎರಡು ವೆಬ್‌ಸೈಟ್‌ ಮತ್ತು ಫೇಸ್‌ಬುಕ್‌ ಖಾತೆಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬ್ಲಾಕ್‌ ಮಾಡಿದೆ.

    ಈ ಎಲ್ಲಾ ಖಾತೆಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದವು. ಭಾರತ ವಿರೋಧಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದವು ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್‌ ಸಹಾಯ್‌ ತಿಳಿಸಿದ್ದಾರೆ. ಇದನ್ನೂ ಓದಿ: ಸ್ವಚ್ಛತಾ ಸಿಬ್ಬಂದಿ ಕೊಟ್ಟ ಬದಲಿ ಚುಚ್ಚುಮದ್ದಿನಿಂದ ಮಗುವಿನ ಪ್ರಾಣವೇ ಹೋಯ್ತು!

    ಎಲ್ಲಾ ಖಾತೆಗಳನ್ನು ನಿರ್ಬಂಧಿಸಲು ಟೆಲಿಕಾಂ ಇಲಾಖೆಯ ಮೂಲಕ ಆಯಾ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಮತ್ತು ಇಂಟರ್ನೆಟ್‌ ಸೇವಾ ಪೂರೈಕೆದಾರರಿಗೆ ಸಚಿವಾಲಯ ಆದೇಶ ಹೊರಡಿಸಿದೆ.

    ನಿರ್ಬಂಧಿಸಲಾದ ಖಾತೆಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳು, ಕಾಶ್ಮೀರ, ಇತರ ದೇಶಗಳೊಂದಿಗೆ ಭಾರತದ ವಿದೇಶಿ ಸಂಬಂಧ, ಮಾಜಿ ಸಿಡಿಎಸ್‌ ಬಿಪಿನ್‌ ರಾವತ್‌ ಅವರ ಸಾವಿಗೆ ಸಂಬಂಧಿಸಿದ ವಿಷಯಗಳಿವೆ. ಈ ಖಾತೆಗಳು 130 ಕೋಟಿ ವೀಕ್ಷಕರು ಮತ್ತು 1.2 ಕೋಟಿ ಸಬ್‌ಸ್ಕ್ರೈಬರ್ಸ್‌ನ್ನು ಹೊಂದಿದ್ದವು ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಡ್ಯಾನ್ಸ್ ಮಾಡಿದ್ದಕ್ಕೆ ವರ ಕೆನ್ನೆಗೆ ಹೊಡೆದನೆಂದು ಬೇರೊಬ್ಬನ ವರಿಸಿದ ವಧು!

    ನಿರ್ಬಂಧಿತ ಖಾತೆಗಳಲ್ಲಿನ ವಿಷಯಗಳು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿ ಮತ್ತು ಡಿಜಿಟಲ್‌ ಮಾಧ್ಯಮ ನೀತಿಸಂಹಿತೆ) ನಿಯಮಗಳು, 2021ರ ನಿಯಮ 16ರ ಅಡಿಯಲ್ಲಿ ಹೊರಡಿಸಲಾದ ಆದೇಶಗಳನ್ನು ಉಲ್ಲಂಘಿಸಿವೆ ಎಂದು ಸಚಿವಾಲಯ ಹೇಳಿದೆ.