Tag: Ministry of Health and Family Welfare

  • ಒಂದು ವಾರದಲ್ಲಿ ದೇಶದಲ್ಲಿ 752 ಮಂದಿಗೆ ಕೊರೊನಾ ಸೋಂಕು – ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ

    ಒಂದು ವಾರದಲ್ಲಿ ದೇಶದಲ್ಲಿ 752 ಮಂದಿಗೆ ಕೊರೊನಾ ಸೋಂಕು – ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ

    ನವದೆಹಲಿ: ಕಳೆದ ಒಂದು ವಾರದಲ್ಲಿ ದೇಶದಲ್ಲಿ 752 ಹೊಸ ಕೋವಿಡ್-19 (Covid-19) ಪ್ರಕರಣಗಳು ವರದಿಯಾಗಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 1,000ಕ್ಕೆ ಏರಿದೆ. ಕೇರಳ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಅತಿ ಹೆಚ್ಚು ಹೊಸ ಸೋಂಕು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (Ministry of Health and Family Welfare) ಹೇಳಿದೆ.

    ಕೇರಳದಲ್ಲಿ 335 ಹೊಸ ಸೋಂಕುಗಳು ವರದಿಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 430ಕ್ಕೆ ಏರಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕ್ರಮವಾಗಿ 153 ಮತ್ತು 99 ಹೊಸ ಪ್ರಕರಣಗಳು ದಾಖಲಾಗಿವೆ. ಸೋಮವಾರ ಬೆಳಗ್ಗೆ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು ಕ್ರಮವಾಗಿ 209 ಮತ್ತು 104ರಷ್ಟಿವೆ. ಇದನ್ನೂ ಓದಿ: ಸದ್ಯದಲ್ಲೇ ರಾಜನಾಥ್ ಭೇಟಿ, ಡಿಫೆನ್ಸ್ ಕಾರಿಡಾರ್‌ಗೆ ಪಟ್ಟು: ಎಂಬಿಪಿ

    ಗುಜರಾತ್‌ನಲ್ಲಿ 83 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 47, ಉತ್ತರ ಪ್ರದೇಶದಲ್ಲಿ 15 ಮತ್ತು ಪಶ್ಚಿಮ ಬಂಗಾಳದಲ್ಲಿ 12 ಪ್ರಕರಣಗಳು ವರದಿಯಾಗಿವೆ. ಕೇಂದ್ರ ಸರ್ಕಾರಿ ಸಂಸ್ಥೆ ಇಂಡಿಯನ್ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂನ (ಇನ್ಸಾಕಾಗ್) ಇತ್ತೀಚಿನ ಮಾಹಿತಿಯ ಪ್ರಕಾರ, ಹೊಸ ಕೊರೊನಾ ಸೋಂಕುಗಳ ಹೆಚ್ಚಳದ ನಡುವೆ ಎರಡು ಹೊಸ ರೂಪಾಂತರಗಳ ಪ್ರಕರಣಗಳು ವರದಿಯಾಗಿದೆ. ಇದನ್ನೂ ಓದಿ: ಸ್ವಚ್ಛವಾಹಿನಿ ಚಾಲಕಿಯರ ವೇತನ, ಸೌಲಭ್ಯಗಳ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿ: ಪ್ರಿಯಾಂಕ್ ಖರ್ಗೆ

    ಬಂಗಾಳದಲ್ಲಿ ಮತ್ತೆ ನಾಲ್ಕು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಉಸಿರಾಟದ ತೊಂದರೆ ಇರುವ ರೋಗಿಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣಗಳಲ್ಲಿ ಹೆಚ್ಚಿನವು ಕೋಲ್ಕತ್ತಾ ಮತ್ತು ಅದರ ಉಪನಗರಗಳಿಂದ ವರದಿಯಾಗಿವೆ. ಇದನ್ನೂ ಓದಿ: ಮಾಡಾಳ್ ಜೈಲಿಗೆ ಹೋದಾಗ ಇವರಿಗೆ ಕನ್ನಡ ಅಸ್ಮಿತೆ ನೆನಪಾಗಲಿಲ್ಲ: ಬಿವೈವಿ ವಿರುದ್ಧ ಎಂಬಿಪಿ ಕಿಡಿ

    ಬಿಹಾರದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ವರದಿಯಾಗಿದೆ. ಪಾಟ್ನಾದ 31 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಇತ್ತೀಚೆಗೆ ರಾಜ್ಯದಿಂದ ಹೊರಗೆ ಪ್ರಯಾಣ ಮಾಡಿದ ಇತಿಹಾಸವಿಲ್ಲ. ಇದನ್ನೂ ಓದಿ: ಮಂಡ್ಯ | ಬೈಕ್ ಅಡ್ಡಗಟ್ಟಿದ ಪೊಲೀಸ್ರು – ಆಯತಪ್ಪಿ ಬಿದ್ದು ತಾಯಿ ಮಡಿಲಲ್ಲೇ ಪ್ರಾಣಬಿಟ್ಟ ಮಗು

  • ದೇಶದಲ್ಲಿ ಮಂಕಿಪಾಕ್ಸ್ ಆತಂಕ – ಕೇಂದ್ರದಿಂದ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಗೈಡ್‍ಲೈನ್

    ದೇಶದಲ್ಲಿ ಮಂಕಿಪಾಕ್ಸ್ ಆತಂಕ – ಕೇಂದ್ರದಿಂದ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಗೈಡ್‍ಲೈನ್

    ನವದೆಹಲಿ: ದೇಶದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ದಾಖಲಾದ ಬಳಿಕ ಇದೀಗ ಕೇಂದ್ರ ಆರೋಗ್ಯ ಇಲಾಖೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನೂತನ ಗೈಡ್‍ಲೈನ್ ಬಿಡುಗಡೆ ಮಾಡಿದೆ.

    ವಿದೇಶದಿಂದ ಆಗಮಿಸಿದ್ದ ಕೇರಳದ ಕೊಲ್ಲಂನ ವ್ಯಕ್ತಿಯೋರ್ವನಿಗೆ ನಿನ್ನೆ ಮಂಕಿಪಾಕ್ಸ್ ಸೋಂಕಿರುವುದು ದೃಢವಾಗಿತ್ತು. ಆ ಬಳಿಕ ಇದೀಗ ವಿದೇಶದಿಂದ ವಿಮಾನದಲ್ಲಿ ಆಗಮಿಸುವ ಪ್ರಯಾಣಿಕರ ಮೇಲೆ ಕೇಂದ್ರ ಆರೋಗ್ಯ ಇಲಾಖೆ ನಿಗಾ ವಹಿಸಲು ಮುಂದಾಗಿದೆ. ಇದನ್ನೂ ಓದಿ: ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ – ಕೇರಳದ ವ್ಯಕ್ತಿಯೋರ್ವನಲ್ಲಿ ಕಾಣಿಸಿಕೊಂಡ ಸೋಂಕು

    ಹೊಸ ಗೈಡ್‍ಲೈನ್:
    ಅಂತಾರಾಷ್ಟ್ರೀಯ ಪ್ರಯಾಣಿಕರು ಅನಾರೋಗ್ಯವಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಿರಬಾರದು. ಇಲಿಗಳು, ಅಳಿಲುಗಳು, ಮಂಗಗಳು ಮತ್ತು ಸಸ್ತನಿಗಳು ಸೇರಿದಂತೆ ಸತ್ತ ಅಥವಾ ಜೀವಂತ ಕಾಡು ಪ್ರಾಣಿಗಳ ಸಂಪರ್ಕದಿಂದ ದೂರವಿರಬೇಕು. ಕಾಡು ಪ್ರಾಣಿಗಳ ಮಾಂಸವನ್ನು ತಿನ್ನಬಾರದು. ಆಫ್ರಿಕಾ ಸೇರಿದಂತೆ ಇತರ ದೇಶಗಳಲ್ಲಿ ಕಾಡು ಪ್ರಾಣಿಗಳಿಂದ ಉತ್ಪಾದಿಸಿದ ಉತ್ಪನ್ನಗಳಾದ ಕ್ರೀಮ್‌ ಲೋಷನ್‍ಗಳನ್ನು ಬಳಸಬಾರದು ಮತ್ತು ತರಬಾರದೆಂದು ಗೈಡ್‍ಲೈನ್‍ನಲ್ಲಿ ಸ್ಪಷ್ಟಪಡಿಸಲಾಗಿದೆ.

    ಜೊತೆಗೆ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ಔಷಧಿ ಪಡೆಯಿರಿ ಮತ್ತು ಈ ಬಗ್ಗೆ ಸರಿಯಾಗಿ ಮಾಹಿತಿ ನೀಡಿ. ಜೊತೆಗೆ ಸೋಂಕಿತರೊಂದಿಗೆ ಸಂಪರ್ಕಿಸಿದವರ ಬಗ್ಗೆ ಮಾಹಿತಿ ನೀಡಿ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಗರ್ಭಪಾತ ಬೇಡ, ಮಗುವಿಗೆ ಜನ್ಮ ನೀಡಿ ದತ್ತು ಕೊಡಿ – ಅವಿವಾಹಿತ ಯುವತಿಗೆ ದೆಹಲಿ ಹೈಕೋರ್ಟ್ ಸಲಹೆ

    ವಿಶ್ವ ಆರೋಗ್ಯ ಸಂಸ್ಥೆ (WTC) ಪ್ರಕಾರ, ಮಂಕಿಪಾಕ್ಸ್ ಒಂದು ವೈರಲ್ ಝೂನೊಸಿಸ್ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್) ಆಗಿದ್ದು, ಸಿಡುಬು ರೋಗಿಗಳಲ್ಲಿ ಕಂಡುಬರುವ ರೋಗಲಕ್ಷಣಗಳನ್ನು ಹೋಲುತ್ತದೆ. ಇದು ಪ್ರಾಯೋಗಿಕವಾಗಿ ಕಡಿಮೆ ತೀವ್ರತೆ ಹೊಂದಿದೆ. 1970ರಲ್ಲಿ ಮೊದಲ ಬಾರಿಗೆ ಕಾಂಗೋ ದೇಶದಲ್ಲಿ ಮಾನವನಲ್ಲಿ ಪತ್ತೆಯಾಯಿತು. ಈ ರೋಗ ಹೆಚ್ಚಾಗಿ ಆಫ್ರಿಕಾದಲ್ಲಿ ವಾಸಿಸುವವರಲ್ಲಿ ಕಂಡು ಬಂದಿದೆ. ಮಂಕಿಪಾಕ್ಸ್ ವೈರಸ್ ಇಲಿಗಳಲ್ಲಿ ಮತ್ತು ಕೋತಿಗಳಲ್ಲಿ ಹರಡುವುದು ಸಾಮಾನ್ಯ. ಸೋಂಕಾದ ಪ್ರಾಣಿಗಳು ಮನುಷ್ಯನ ಸಂಪರ್ಕ ಪಡೆದಾಗ ಅವರಿಗೂ ಹರಡುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಕೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • 24 ಗಂಟೆಯಲ್ಲಿ ದೇಶದ 2,293 ಜನರಿಗೆ ಕೊರೊನಾ- 71 ಮಂದಿ ಸಾವು

    24 ಗಂಟೆಯಲ್ಲಿ ದೇಶದ 2,293 ಜನರಿಗೆ ಕೊರೊನಾ- 71 ಮಂದಿ ಸಾವು

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ದೇಶದಲ್ಲಿ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಕಳೆದ 24 ಗಂಟೆಯಲ್ಲಿ 2,293 ಜನರಿಗೆ ಸೋಂಕು ದೃಢಪಟ್ಟಿದ್ದು,  ಇದು ಒಂದು ದಿನದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರ ವರದಿಯಾಗಿದೆ. ಜೊತೆಗೆ 71 ಮಂದಿ ಸಾವನ್ನಪ್ಪಿದ್ದಾರೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಗ್ಗೆ ನೀಡಿದ ಮಾಹಿತಿ ಪ್ರಕಾರ, ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 37,336ಕ್ಕೆ ಏರಿದೆ. ಈ ಪೈಕಿ 26,167 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 9,950 ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ 1,218 ಡೆಡ್ಲಿ ಕೊರೊನಾಗೆ ಬಲಿಯಾಗಿದ್ದಾರೆ.

    ಕೊರೊನಾ ಸೋಂಕಿತರ ಹಾಗೂ ಮೃತ ಸಂಖ್ಯೆಯು ನಿನ್ನೆಗಿಂತಲೂ ಇಂದು ಹೆಚ್ಚಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಶುಕ್ರವಾರ ಸಂಜೆ ನೀಡಿದ್ದ ಮಾಹಿತಿ ಪ್ರಕಾರ, 24 ಗಂಟೆಗಳಲ್ಲಿ 1,993 ಮಂದಿ ಸೋಂಕಿಗೆ ತಗುಲಿದ್ದು, 73 ಮಂದಿ ಬಲಿಯಾಗಿದ್ದರು. ಆದರೆ  ಶುಕ್ರವಾರ ಬೆಳಗ್ಗೆಯಿಂದ  ಶನಿವಾರ ಬೆಳಗ್ಗೆವರೆಗೆ ಪತ್ತೆಯಾದ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಈ ಹಿಂದೆ  24 ಗಂಟೆಯಲ್ಲಿ 2,293 ಅಥವಾ ಅದಕ್ಕಿಂತ ಹೆಚ್ಚು ಜನರಿಗೆ ಸೋಂಕು ಪತ್ತೆಯಾಗಿರಲಿಲ್ಲ.

    ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ. ಶುಕ್ರವಾರ ಸಂಜೆಯ ಮಾಹಿತಿ ಪ್ರಕಾರ 216 ಮಂದಿ ಗುಣಮುಖರಾಗಿದ್ದು, 22 ಮಂದಿ ಮೃತಪಟ್ಟಿದ್ದಾರೆ. ಸೋಂಕಿತ ಪ್ರಕರಣಗಳ ಪಟ್ಟಿಯಲ್ಲಿ ರಾಜ್ಯ 12ನೇ ಸ್ಥಾನದಲ್ಲಿದೆ.