ನವದೆಹಲಿ: ಉಡಾನ್ ಯೋಜನೆಯಡಿ (Udan Scheme) ಬಳ್ಳಾರಿ ಹಾಗೂ ಕೋಲಾರ ಏರ್‌ಸ್ಟ್ರಿಪ್‌ಗಳಲ್ಲಿ (ಮಿನಿ ಏರ್‌ಪೋರ್ಟ್) ಸಣ್ಣ ವಿಮಾನಗಳ ಕಾರ್ಯಾಚರಣೆಗಾಗಿ (20 ಸೀಟುಗಳಿಗಿಂತ ಕಡಿಮೆ) ಬಿಡ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ (Ministry of Civil Aviation) ತಿಳಿಸಿದೆ.
ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯಾ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳಿಧರ್ ಮೊಹೊಲ್ (Murlidhar Mohol), ಈ ವಿಮಾನ ನಿಲ್ದಾಣಗಳ ಆರಂಭಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿದೆ. ಜೊತೆಗೆ, ಭೂಮಿಯ ಲಭ್ಯತೆಯನ್ನು ಖಚಿತಪಡಿಸುವಂತೆ ತಿಳಿಸಲಾಗಿದೆ. ರಾಜ್ಯ ಸರ್ಕಾರವು ಉಚಿತವಾಗಿ ಭೂಮಿ ಒದಗಿಸಬೇಕು ಎಂದಿದ್ದಾರೆ. ಇದನ್ನೂ ಓದಿ: 17,000 ಕೋಟಿ ಬ್ಯಾಂಕ್ ಲೋನ್ ವಂಚನೆ ಕೇಸ್ – ಇಡಿ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ
ಈ ನಿಲ್ದಾಣದಲ್ಲಿ ಆರಂಭಿಕ ಹಂತದಲ್ಲಿ ಸಣ್ಣ ವಿಮಾನಗಳ ಕಾರ್ಯಾಚರಣೆ ಮಾಡಲಾಗುವುದು. ಆ ಭೂಮಿಯಲ್ಲಿ ಮುಂದೆ ನಿಲ್ದಾಣದ ವಿಸ್ತರಣೆಗೆ ಅವಕಾಶವೂ ಇರಬೇಕು. ಅಂತಹ ಜಾಗ ಗುರುತಿಸುವಂತೆ ಸೂಚಿಸಲಾಗಿದೆ. ರಾಯಚೂರು, ಕುಶಾಲನಗರ ಹಾಗೂ ಹಾಸನದಲ್ಲಿ ಏರ್‌ಸ್ಟ್ರಿಪ್‌ಗಳ ನಿರ್ಮಾಣಕ್ಕೆ ಯಾವುದೇ ಬಿಡ್ ಸ್ವೀಕಾರ ಆಗಿಲ್ಲ ಎಂದು ಸ್ಟಷ್ಟಪಡಿಸಿದ್ದಾರೆ.
ನವದೆಹಲಿ: ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್‌ಗಳನ್ನು (Black Boxes) ವಿದೇಶಕ್ಕೆ ಕಳುಹಿಸಲಾಗುತ್ತಿದೆ ಎಂಬ ವರದಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯ (Ministry of Civil Aviation) ತಳ್ಳಿಹಾಕಿದೆ.
ಅಪಘಾತಕ್ಕೀಡಾದ ಏರ್ ಇಂಡಿಯಾ 171 ವಿಮಾನದ CVR/DFDR ಅನ್ನು ವಿಶ್ಲೇಷಣೆಗಾಗಿ ವಿದೇಶಕ್ಕೆ ಕಳುಹಿಸಲಾಗುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಫ್ಲೈಟ್ ರೆಕಾರ್ಡರ್‌ಗಳನ್ನು ಡಿಕೋಡ್ ಮಾಡುವ ಸ್ಥಳದ ಬಗ್ಗೆ ಸೂಕ್ತ ಮೌಲ್ಯಮಾಪನದ ನಂತರ AAIB ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಚಿವಾಲಯ ಎಕ್ಸ್ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದೆ. ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಊಹಾಪೋಹಗಳನ್ನು ಹರಡದಂತೆ ಸಚಿವಾಲಯವು ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ಏರ್ ಇಂಡಿಯಾ ದುರಂತದ ಬಳಿಕ ಎಚ್ಚೆತ್ತ DGCA – ಏರ್‌ಪೋರ್ಟ್ ಬಳಿಯ ಕಟ್ಟಡಗಳಿಗೆ ಹೊಸ ರೂಲ್ಸ್
#AirIndiaPlaneCrash | Ministry of Civil Aviation (MoCA) says, “It has been reported in certain media outlets that the CVR/DFDR from the ill-fated AI171 flight is being sent abroad for retrieval and analysis. The decision regarding the location for decoding the flight recorders…
ನಾಗರಿಕ ವಿಮಾನಯಾನ ಸಚಿವಾಲಯವು ಎಲ್ಲಾ ಪಾಲುದಾರರನ್ನು ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಊಹಾಪೋಹಗಳಿಂದ ದೂರವಿರಲು ಮತ್ತು ತನಿಖಾ ಪ್ರಕ್ರಿಯೆಯು ಅದು ಖಾತರಿಪಡಿಸುವ ಗಂಭೀರತೆ ಮತ್ತು ವೃತ್ತಿಪರತೆಯೊಂದಿಗೆ ಮುಂದುವರಿಯಲು ಅನುವು ಮಾಡಿಕೊಡುವಂತೆ ಒತ್ತಾಯಿಸುತ್ತದೆ.
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಪ್ರೋಟೋಕಾಲ್‌ಗಳಿಗೆ ಅನುಸಾರವಾಗಿ, ಬಹು-ಶಿಸ್ತಿನ AAIB ತಂಡವು ಜೂ.12 ರಂದು ತನಿಖೆ ಪ್ರಾರಂಭಿಸಿತು. ಇದಕ್ಕೆ US ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಮತ್ತು ಮೂಲ ಸಲಕರಣೆ ತಯಾರಕರ (OEM) ತಜ್ಞರ ಬೆಂಬಲವಿದೆ.
ನವದೆಹಲಿ: ದೇಶಿಯ ವಿಮಾಯಾನದಲ್ಲಿ ಭಾನುವಾರ ಅತಿ ಹೆಚ್ಚು ಜನರು ಪ್ರಯಾಣಿಸುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ.
ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ (Ministry of Civil Aviation) ಮಾಹಿತಿ ಹಂಚಿಕೊಂಡಿದೆ. ನ.17 ರಂದು ಒಂದೇ ದಿನದಲ್ಲಿ ಮೊದಲ ಬಾರಿಗೆ 5 ಲಕ್ಷ ಜನರು ಪ್ರಯಾಣಿಸಿದ್ದು, ಹಬ್ಬ ಹಾಗೂ ಮದುವೆ ಕಾರಣದಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.ಇದನ್ನೂ ಓದಿ: ಮಾತಿನ ಭಾಗದ ಶೂಟಿಂಗ್ ಮುಗಿಸಿದ ಫಾದರ್
ಅಂಕಿಅಂಶಗಳ ಪ್ರಕಾರ, ಭಾನುವಾರ 5,05,412 ಜನರು ಪ್ರಯಾಣಿಸಿದ್ದು, ಒಟ್ಟು 3,173 ವಿಮಾನ ಹಾರಾಟಗೊಂಡಿವೆ.
ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ (Sambra Airport) ದುಷ್ಕರ್ಮಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ (Bomb Threat) ಕಳಿಸಿದ್ದಾರೆ.
ಶನಿವಾರ ಏರ್‌ಪೋರ್ಟ್‌ಗೆ ದುಷ್ಕರ್ಮಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯ ಸಂದೇಶ ಕಳುಹಿಸಿದ್ದು, ಚೆನೈನಿಂದ ಬರುವ ವಿಮಾನದಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದರು. ಬೆಳಗಾವಿಗೆ ಚೆನೈನಿಂದ ಯಾವುದೇ ವಿಮಾನ ಸಂಪರ್ಕ ಇರುವುದಿಲ್ಲ. ಇದರಿಂದ ಇದು ಹುಸಿ ಬೆದರಿಕೆ ಎಂದು ತೀರ್ಮಾನಕ್ಕೆ ಬರಲಾಗಿದೆ.
ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇ-ಮೇಲ್ ಎಲ್ಲಿಂದ ಬಂದಿದೆ? ಯಾರು ಮಾಡಿದ್ದಾರೆ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದೇಶದಲ್ಲಿ ಒಂದು ವಾರದಲ್ಲಿ 46ಕ್ಕೂ ಹೆಚ್ಚು ವಿಮಾನಗಳು ಬೆದರಿಕೆ ಕರೆ ಸ್ವೀಕರಿಸಿರುವ ಬಗ್ಗೆ ವರದಿಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (Ministry Of Civil Aviation) ತಿಳಿಸಿದೆ.
ನವದೆಹಲಿ: ಕಳೆದ 24 ಗಂಟೆಗಳಲ್ಲಿ 3 ವಿಮಾನಗಳಿಗೆ ಬಾಂಬ್ ಬೆದರಿಕೆ (Bomb Threat) ಕರೆಗಳು ಬಂದಿದೆ. ಆ ಮೂಲಕ ಒಂದು ವಾರದಲ್ಲಿ 35ಕ್ಕೂ ಹೆಚ್ಚು ವಿಮಾನಗಳು ಬೆದರಿಕೆ ಕರೆ ಸ್ವೀಕರಿಸಿರುವ ಬಗ್ಗೆ ವರದಿಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (Ministry Of Civil Aviation) ತಿಳಿಸಿದೆ.
ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ವಿಸ್ತಾರಾ ವಿಮಾನ (Vistara Flight) ಸೋಷಿಯಲ್ ಮೀಡಿಯಾದಲ್ಲಿ ಬಾಂಬ್ ಬೆದರಿಕೆಯ ಕರೆಯನ್ನು ಸ್ವೀಕರಿಸಿದ್ದು, ತಕ್ಷಣ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಫ್ರಾಂಕ್‌ಫರ್ಟ್‌ಗೆ ಕಳುಹಿಸುವಂತೆ ನಿರ್ಧರಿಸಲಾಯಿತು. ವಿಮಾನವನ್ನು ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಕಳುಹಿಸಿ, ಬಳಿಕ ಅಲ್ಲಿಂದ ಲಂಡನ್‌ಗೆ ಕಳುಹಿಸಲಾಯಿತು.ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್ – ಹಿರಿಯ ಐಎಎಸ್ ಅಧಿಕಾರಿ, ಆರ್‌ಜೆಡಿ ಮಾಜಿ ಶಾಸಕ ಅರೆಸ್ಟ್
ಜೈಪುರ್‌ನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ (Air India) ಎಕ್ಸ್‌ಪ್ರೆಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಇದರಿಂದಾಗಿ ಸ್ವಲ್ವ ಸಮಯದ ಬಳಿಕ ವಿಮಾನ ಟೇಕ್‌ಆಫ್ ಆಯಿತು. ಇಂದು ಬೆಳಗ್ಗೆ 6:10ಕ್ಕೆ ಟೇಕ್ ಆಫ್ ಆಗಬೇಕಿದ್ದ ವಿಮಾನ ತಡವಾಗಿ 7:45ಕ್ಕೆ ಟೇಕ್ ಆಫ್ ಆಯಿತು.
ಶುಕ್ರವಾರ ಬೆಂಗಳೂರಿನಿಂದ ಮುಂಬೈಗೆ ಹೊರಡಲು ಸಿದ್ಧವಾಗಿದ್ದ ಆಕಾಶ ಏರ್ (Akash Air) ವಿಮಾನಕ್ಕೆ ಬಾಂಬ್ ಬೆದರಿಕೆಯ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಸಂಪೂರ್ಣ ಪರಿಶೀಲನೆ ನಡೆಸಲಾಯಿತು. ನೆಟ್‌ವರ್ಕ್ ಆಪರೇಷನ್ ಕಂಟ್ರೋಲ್ (NOC) ಒಪ್ಪಿಗೆ ನೀಡಿದ ಬಳಿಕ ಸಂಜೆ ಮುಂಬೈಗೆ ಹೊರಟಿತು.
ಒಂದು ವಾರದಲ್ಲಿ ಸುಮಾರು 35 ವಿಮಾನಗಳು ಬೆದರಿಕೆಯ ಕರೆಗಳನ್ನು ಸ್ವೀಕರಿಸಿದ್ದು, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಅಧಿಕಾರಿಗಳು ಆ ಸಂದರ್ಭದಲ್ಲಿ ಭದ್ರತಾ ಪರಿಶೀಲನೆ ನಡೆಸಿ, ಕಠಿಣ ಕ್ರಮಗಳನ್ನು ಕೈಗೊಳ್ಳಲಾಯಿತು.
ಬಾಂಬ್ ಬೆದರಿಕೆ ಸಂಬಂಧಿಸಿದಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು (Rammohan Naidu) ಮಾತನಾಡಿ, ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಮೂರು ಸೇರಿದಂತೆ ಸೋಮವಾರ ನಾಲ್ಕು ವಿಮಾನಗಳಿಗೆ ಬೆದರಿಕೆ ಹಾಕಲಾಗಿದೆ. 17 ವರ್ಷದ ಹುಡುಗನನ್ನು ಮುಂಬೈ ಪೊಲೀಸರು ಬುಧವಾರ ಕಸ್ಟಡಿಗೆ ತೆಗೆದುಕೊಂಡಿದ್ದು, ಹೆಚ್ಚಿನ ಕರೆಗಳನ್ನು ಅಪ್ರಾಪ್ತರು ಮತ್ತು ಕುಚೇಷ್ಟೆಗಾರರು ಮಾಡಿದ್ದಾರೆ ಎಂದು ಹೇಳಿದರು.
ಭವಿಷ್ಯದಲ್ಲಿ ಇಂತಹ ಹುಸಿ ಬಾಂಬ್ ಕರೆಗಳು ನಡೆಯದಂತೆ ನೋಡಿಕೊಳ್ಳಲು ಹಾಗೂ ಈ ರೀತಿಯ ಕುಚೇಷ್ಟೆಗಳನ್ನು ಮಾಡಲು ಪ್ರಯತ್ನಿಸುವ ಜನರಿಗೆ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲು ನಮ್ಮ ಇಲಾಖೆಯ ನಿಯಮಗಳು ಮತ್ತು ಶಾಸನಗಳಲ್ಲಿ ಬದಲಾವಣೆ ತರಲು ಸೂಚಿಸಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ಬಿಬಿಎಂಪಿಯಿಂದ ತುರ್ತು ಇ-ಖಾತಾ ಪಡೆಯಲು ಮಾರ್ಗಸೂಚಿ ಬಿಡುಗಡೆ – ಗೈಡ್‌ಲೈನ್‌ನಲ್ಲಿ ಏನಿದೆ?
ನವದೆಹಲಿ: ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ (Hubbali) ಅಹಮದಾಬಾದ್ (Ahmadabad) ಹಾಗೂ ಚೆನ್ನೈಗೆ (Chennai) ವಿಮಾನಯಾನ ಸೌಲಭ್ಯ ಕಲ್ಪಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ನಾಗರಿಕ ವಿಮಾನಯಾನ ಸಚಿವ ರಾಮ್‌ಮೋಹನ್ ನಾಯ್ಡು (Rammohan Naidu) ಅವರ ಗಮನ ಸೆಳೆದಿದ್ದಾರೆ.
ಹುಬ್ಬಳ್ಳಿಯಿಂದ ಅಹಮದಾಬಾದ್ ನಡುವೆ ವಿಮಾನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಹುಬ್ಬಳ್ಳಿಯಿಂದ ಚೆನ್ನೈಗೆ ಇರುವ ವಿಮಾನ ಸಂಪರ್ಕವನ್ನು ಸ್ಥಗಿತಗೊಳಿಸುವುದು ಬೇಡ. ಈ ವಿಮಾನಯಾನವನ್ನು ಮುಂದುವರೆಸುವಂತೆ ಮನವಿ ಮಾಡಿದರು.
ಛೋಟಾ ಮುಂಬೈ ಎಂದೇ ಹೆಸರಾದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಅನೇಕ ಉದ್ಯಮಿಗಳ ಸಂಪರ್ಕವಿದೆ. ಅಹಮದಾಬಾದ್ ಮತ್ತು ಚೆನ್ನೈ ನಗರಗಳಿಗೆ ವಿಮಾನ ಸಾರಿಗೆ ಸೌಲಭ್ಯಕ್ಕೆ ಹೆಚ್ಚು ಆದ್ಯತೆ ನೀಡಿದ್ದಲ್ಲಿ ಉದ್ಯಮಿಗಳ ತ್ವರಿತ ಸಂಚಾರ ಮತ್ತು ನಿಕಟ ಸಂಪರ್ಕಕ್ಕೆ ಅನುಕೂಲವಾಗುತ್ತದೆ. ಹುಬ್ಬಳ್ಳಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹ ಗುರುತಿಸಿಕೊಳ್ಳುತ್ತಿದೆ. ಅಂತೆಯೇ ರೈಲ್ವೇ ನಿಲ್ದಾಣದ ಜೊತೆ ವಿಮಾನ ನಿಲ್ದಾಣವೂ ಅಂತಾರಾಷ್ಟ್ರೀಯ ಮೆರುಗಿನಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಮಾತುಕತೆ ನಡೆಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದ ವಿಶಾಲವಾದ ಪ್ರದೇಶದಲ್ಲಿ ಹೊಸ ಟರ್ಮಿನಲ್ ಸಹ ನಿರ್ಮಾಣವಾಗುತ್ತಿದೆ. ಪ್ರಯಾಣಿಕರಿಗೆ ಮತ್ತು ವಿಮಾನಗಳಿಗೆ ಅಗತ್ಯ ಮೂಲ ಸೌಲಭ್ಯ ಇಲ್ಲಿದ್ದು, ಚೆನ್ನೈ ಸಂಪರ್ಕದ ವಿಮಾನಯಾನ ಸ್ಥಗಿತಗೊಳಿಸದೇ ಅದನ್ನು ಮುಂದುವರೆಸಿ ಎಂದು ಸಮಾಲೋಚನೆ ನಡೆಸಿದರು.ಇದನ್ನೂ ಓದಿ: CJI ಹುದ್ದೆಗೆ ನ್ಯಾ. ಸಂಜೀವ್ ಖನ್ನಾ ಹೆಸರು ಶಿಫಾರಸು