Tag: Ministry

  • 2025ರ ವೇಳೆಗೆ ಭಾರತದಲ್ಲಿ ತಲೆ ಎತ್ತಲಿವೆ 220 ವಿಮಾನ ನಿಲ್ದಾಣ: ಸಿಂಧಿಯಾ

    2025ರ ವೇಳೆಗೆ ಭಾರತದಲ್ಲಿ ತಲೆ ಎತ್ತಲಿವೆ 220 ವಿಮಾನ ನಿಲ್ದಾಣ: ಸಿಂಧಿಯಾ

    ನವದೆಹಲಿ: ನಾಗರಿಕ ವಿಮಾನಯಾನ ಉದ್ಯಮವು ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, 2025ರ ವೇಳೆಗೆ ಕೇಂದ್ರ ಸರ್ಕಾರವು 220 ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

    ಈ ಕುರಿತು ಅಧಿವೇಶನದಲ್ಲಿ ಮಾತನಾಡಿರುವ ಅವರು, ಕೋವಿಡ್ ಸಮಯದಲ್ಲೂ ಭಾರತ ದೇಶ-ವಿದೇಶದ ಪ್ರಯಾಣದಲ್ಲಿ ಮುನ್ನಡೆ ಸಾಧಿಸಿದೆ. ಇದು ಆರ್ಥಿಕತೆಯ ಭಾಗವೂ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಆರ್ಥಿಕತೆ ಬಲಪಡಿಸಲು 220 ವಿಮಾನ ನಿಲ್ದಾಣ ಸ್ಥಾಪನೆಯ ಗುರಿಯನ್ನು ಹೊಂದಲಾಗಿದೆ. ಜೊತೆಗೆ ಆಹಾರ ಪದಾರ್ಥಗಳ ಸಾಗಾಣಿಕೆಗೆ ಕಾರ್ಗೋ ವಿಮಾನಗಳ ಸಂಖ್ಯೆಯನ್ನು ಶೇ.30ರಷ್ಟು ಹೆಚ್ಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಾಲಿವುಡ್ ಗಲ್ಲಿ ಬಾಯ್ ಖ್ಯಾತಿಯ ರಾಪರ್ ಧರ್ಮೇಶ್ ಪರ್ಮಾರ್ ಇನ್ನಿಲ್ಲ

    ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳಲ್ಲಿ ಒಟ್ಟು ಪೈಲಟ್‍ಗಳಲ್ಲಿ ಶೇ.5 ರಷ್ಟು ಮಾತ್ರ ಮಹಿಳೆಯರಿದ್ದಾರೆ. ಆದರೆ, ಭಾರತದಲ್ಲಿ ಶೇ.15 ರಷ್ಟು ಮಹಿಳೆಯರಿದ್ದಾರೆ. ಕಳೆದ 20-25 ವರ್ಷಗಳಲ್ಲಿ ಹೀಗೆ ಸಾಕಷ್ಟು ಬೆಳವಣಿಗೆಗಳಾಗಿವೆ. ಇದು ಮಹಿಳಾ ಸಬಲೀಕರಣಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಹಾಗಾಗಿ, ಕೇಂದ್ರ ಸರ್ಕಾರವು 33 ದೇಶಿಯ ಸರಕು ಟರ್ಮಿನಲ್‍ಗಳು, 15 ವಿಮಾನಯಾನ ತರಬೇತಿ ಶಾಲೆಗಳನ್ನು ಸ್ಥಾಪಿಸುವ ಮೂಲಕ ಮತ್ತಷ್ಟು ಉದ್ಯೋಗಾವಕಾಶ ಕಲ್ಪಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಕರ್ನಾಟಕದ ಗಣಿಗಾರಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ರಚನೆ – ಸುಪ್ರೀಂಕೋರ್ಟ್

     

    2018-19ರಲ್ಲಿ ವಾರ್ಷಿಕ ಪ್ರಯಾಣಿಕರ ಸಂಖ್ಯೆ 34.5 ಕೋಟಿ ಇತ್ತು. 2023-24ರ ವೇಳೆಗೆ ಈ ಸಂಖ್ಯೆಯನ್ನು 40 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಎಲ್ಲ ಉದ್ದೇಶಗಳಿಂದಾಗಿ 220 ಇಮಾನ ನಿಲ್ದಾಣಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ ಎಂದು ವಿವರಿಸಿದ್ದಾರೆ.

  • 10 ಗಂಟೆಗೆ ಕಚೇರಿಗೆ ಬರೋಕ್ಕಾಗಲ್ಲ- ಸರ್ಕಾರಿ ನೌಕರರಿಂದ ಪತ್ರ

    10 ಗಂಟೆಗೆ ಕಚೇರಿಗೆ ಬರೋಕ್ಕಾಗಲ್ಲ- ಸರ್ಕಾರಿ ನೌಕರರಿಂದ ಪತ್ರ

    – ಖಾಸಗಿ ಸಂಸ್ಥೆಯಲ್ಲಿ 10 ಗಂಟೆ ಕೆಲಸ
    – 10 ನಿಮಿಷ ತಡವಾದ್ರೂ ಅರ್ಧ ದಿನದ ಸಂಬಳ ಕಟ್

    ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ದಿನಕ್ಕೆ 10 ಗಂಟೆ ಕೆಲಸ ಮಾಡಬೇಕಾಗಿದೆ. ಒಂದು ವೇಳೆ 10 ನಿಮಿಷ ತಡವಾಗಿ ಹೋದರೆ ಅರ್ಧ ದಿನದ ಸ್ಯಾಲರಿ ಕಟ್ ಮಾಡಲಾಗುತ್ತದೆ. ಹಾಗಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು ಕಚೇರಿ ಸಮಯ 9.00ಕ್ಕೆ ಇದ್ದರೂ 8.30ಕ್ಕೆ ಹೋಗುತ್ತಾರೆ. ಆದರೆ ಸರ್ಕಾರಿ ನೌಕರರ ಸ್ಥಿತಿ ಹಾಗಲ್ಲ ಸಕಲ ಸವಲತ್ತು ಇರುವ ವಿಧಾನಸೌದಕ್ಕೆ ಸರಿಯಾದ ಸಮಯಕ್ಕೆ ಬರಲು ಸಾದ್ಯವೇ ಇಲ್ಲ ಎಂದು ಪತ್ರ ಬರೆದಿದ್ದಾರೆ.

    ನಮಗೆ 10 ಗಂಟೆಗೆ ಕಚೇರಿಗೆ ಬರಲು ಸಾಧ್ಯವೇ ಇಲ್ಲ ದಯವಿಟ್ಟು ರಿಯಾಯಿತಿ ಕೊಡಿ ಪ್ಲೀಸ್ ಎಂದು ಸರ್ಕಾರಿ ನೌಕರರು ಪತ್ರ ಬರೆಯುವ ಮೂಲಕ ಹೇಳಿಕೊಂಡಿದ್ದಾರೆ. ರಾಜ್ಯ ಸರ್ಕಾರಿ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

    ದಿನಕ್ಕೆ 7.30 ಗಂಟೆ ಕೆಲಸ ಮಾಡಿ ನೌಕರರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಬಯೋಮೆಟ್ರಿಕ್ ಹಾಜರಾತಿಯಿಂದ ನೆಮ್ಮದಿ ಹಾಳಾಗಿದೆ. ಬೆಂಗಳೂರಿನ ಟ್ರಾಫಿಕ್​ನಲ್ಲಿ ಕಚೇರಿಗೆ ಬರುವುದು ದೊಡ್ಡ ಸವಾಲಾಗಿದೆ. ಈ ಎಲ್ಲ ಕಾರಣಗಳಿಂದ ನಮಗೆ ಕಚೇರಿಗೆ 10.10ರೊಳಗೆ ಬರಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಸಮಯವನ್ನು ಚೇಂಜ್ ಮಾಡಿ ಎಂದು ರಾಜ್ಯ ಸರ್ಕಾರಿ ಸಚಿವಾಲಯದ ನೌಕರರ ಸಂಘದಿಂದ ಪತ್ರ ಬರೆಯಲಾಗಿದೆ.

    ಪತ್ರದಲ್ಲಿ ಏನಿದೆ?
    ಸರ್ಕಾರದ ಕಚೇರಿ ವೇಳೆ ಬೆಳಗ್ಗೆ 10.00ರಿಂದ ಸಂಜೆ 5.30 ಗಂಟೆಯಾಗಿದ್ದು, ನೌಕರರು ದಿನದಲ್ಲಿ 7.30 ಗಂಟೆ ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ. ಸಚಿವಾಲಯವು ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿದ್ದು, ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆ ಸಂಚಾರದ ದಟ್ಟಣೆಯು ಹೆಚ್ಚಾಗುತ್ತಿದೆ. ಹೀಗಾಗಿ ಕಚೇರಿ ಆರಂಭದ ವೇಳೆಗೆ ವಿಧಾನಸೌಧಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ನೌಕರರು ಹೆಚ್ಚಿನ ಒತ್ತಡಕ್ಕೆ ಒಳಗಾಗಿ ಅವರುಗಳ ಆರೋಗ್ಯ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

    ನೌಕರರು ಹಾಜರಾತಿಯನ್ನ ದಾಖಲಿಸುವ ಬಯೋಮೆಟ್ರಿಕ್ ಯಂತ್ರಗಳು ಸೂಕ್ತ ನಿರ್ವಹಣೆ ಇಲ್ಲದೆ ಅಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಕೆಲವೊಮ್ಮೆ ಬಯೋಮೆಟ್ರಿಕ್ ಯಂತ್ರಗಳು ಸ್ಥಗಿತಗೊಂಡಿರುವುದು ಅಥವಾ ಹಾಜರಾತಿ ದಾಖಲಿಸಿದರೂ ಮಿಸ್‍ಫ್ಲ್ಯಾಷ್ ತೋರಿಸುವುದು ಕಂಡುಬರುತ್ತಿದೆ. ಬೆಂಗಳೂರಿನ ನಗರದ ವಿವಿಧ ಭಾಗಗಳಲ್ಲಿ ಕಾಮಗಾರಿ, ಮೇಲ್ ಸೇತುವೆಗಳು ಸೇರಿದಂತೆ ಹಲವಾರು ಕಾಮಗಾರಿಗಳಿಂದ ರಸ್ತೆ ಸಂಚಾರಿ ದಟ್ಟಣೆಯು ಗಣನೀಯವಾಗಿ ಹೆಚ್ಚಳವಾಗಿದೆ. ಇದರಿಂದ ಸರಿಯಾದ ಸಮಯಕ್ಕೆ ಕಚೇರಿಗೆ ತಲುಪುವುದು ಸವಾಲಿನ ಕೆಲಸವಾಗಿದೆ.

    ಈ ಮೇಲಿನ ಅಂಶಗಳನ್ನು ಪರಿಗಣಿಸಿ ಬೆಳಿಗ್ಗೆ 10.00 ರಿಂದ 10.30ರೊಳಗೆ ನೌಕರರು ಕಚೇರಿಗೆ ಹಾಜರಾಗಲು ಅನುವು ಮಾಡಿಕೊಡಬೇಕು. ಆಗ ನೌಕರರು ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಾರೆ. ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಒತ್ತಡದಲ್ಲಿ ಜೀವನ ನಡೆಸುತ್ತಿರುವ ನೌಕರರು ಸರ್ಕಾರಿ ಸೇವೆಯನ್ನು ಒತ್ತಡರಹಿತವಾಗಿ ಸಲ್ಲಿಸುವಂತೆ ಅನುವು ಮಾಡಿಕೊಡಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಕೆಳವರ್ಗದ ನೌಕರರಿಗಿಲ್ಲ ಟಾಯ್ಲೆಟ್- ಸಚಿವಾಲಯದ ಶೌಚಾಲಯಕ್ಕೆ ಬಯೋಮೆಟ್ರಿಕ್

    ಕೆಳವರ್ಗದ ನೌಕರರಿಗಿಲ್ಲ ಟಾಯ್ಲೆಟ್- ಸಚಿವಾಲಯದ ಶೌಚಾಲಯಕ್ಕೆ ಬಯೋಮೆಟ್ರಿಕ್

    ಲಾಹೋರ್: ಪಾಕಿಸ್ತಾನದಲ್ಲಿ ಸಚಿವಾಲಯದ ಶೌಚಾಲಯಕ್ಕೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೆಳವರ್ಗದ ನೌಕರರು ಸೇರಿದಂತೆ ಸಾರ್ವಜನಿಕರು ಸಚಿವಾಲಯದ ಶೌಚಾಲಯ ಬಳಸುವಂತಿಲ್ಲ. ಹೀಗಾಗಿ ವಿಐಪಿ ಮತ್ತು ಗ್ರೇಡ್ ಒನ್ ಅಧಿಕಾರಿಗಳಿಗಾಗಿ ಈ ಶೌಚಾಲಯ ಮೀಸಲಿರಿಸಲಾಗಿದೆ.

    ವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕಲು ಪ್ರಧಾನಿ ಇಮ್ರಾನ್ ಖಾನ್ ದೊಡ್ಡ ಬಂಗಲೆ ತೊರೆದು ಸಾಧಾರಣ ಫ್ಲ್ಯಾಟ್ ನಲ್ಲಿ ಇದ್ದಾರೆ. ಆದರೆ ಅವರ ಸಚಿವ ಸಂಪುಟದ ಅಧಿಕಾರಿಗಳು ವಿಐಪಿ ಸಂಸ್ಕೃತಿಯನ್ನು ಬಿಟ್ಟು ಹೊರ ಬಂದಿಲ್ಲ. ಬಯೋಮೆಟ್ರಿಕ್ ಅಳವಡಿಸಲಾಗಿರುವ ಶೌಚಾಲಯಗಳನ್ನು ಕೇವಲ ಸಹಾಯಕ ಕಾರ್ಯದರ್ಶಿಗಳು ಮತ್ತು ಗ್ರೇಡ್ ಅಧಿಕಾರಿಗಳು ಮಾತ್ರ ಬಳಸಬಹುದಾಗಿದೆ. ಉಳಿದಂತೆ ಸಚಿವಾಲಯದ ಇತರೆ ಸಿಬ್ಬಂದಿ ಹೊರಗಿನ ಸಾರ್ವಜನಿಕ ಶೌಚಾಲಯ ಬಳಸಬೇಕಿದೆ.

    ಸಾರ್ವಜನಿಕ ಶೌಚಾಲಯದಲ್ಲಿ ಸರಿಯಾಗಿ ನೀರಿನ ವ್ಯವಸ್ಥೆ, ಟಿಶ್ಯೂ ಪೇಪರ್ ಸಹ ಇಡುವುದಿಲ್ಲ ಎಂದು ಸಚಿವಾಲಯದ ಕೆಳಹಂತದ ಅಧಿಕಾರಿಗಳು, ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

  • ರಾಜೀವ್ ಗಾಂಧಿ ಶೈಲಿಯಲ್ಲೇ ಮೋದಿ ಹತ್ಯೆಗೆ ಸಂಚು – ಪ್ರಧಾನಿ ಬಳಿ ಬರಲು ಮಂತ್ರಿಗಳಿಗೂ ಅವಕಾಶವಿಲ್ಲ!

    ರಾಜೀವ್ ಗಾಂಧಿ ಶೈಲಿಯಲ್ಲೇ ಮೋದಿ ಹತ್ಯೆಗೆ ಸಂಚು – ಪ್ರಧಾನಿ ಬಳಿ ಬರಲು ಮಂತ್ರಿಗಳಿಗೂ ಅವಕಾಶವಿಲ್ಲ!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಗುಪ್ತಚರ ವರದಿಯ ಬಳಿಕ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗೆ ಕೈಗೊಳ್ಳಲಾಗಿದ್ದು, ಮಂತ್ರಿಗಳು ಮತ್ತು ಅಧಿಕಾರಿಗಳು ಸಹ ರಕ್ಷಣಾ ಸಿಬ್ಬಂದಿ ಪರಿಶೀಲನೆ ಬಳಿಕಷ್ಟೇ ಪ್ರಧಾನಿಗಳ ಬಳಿ ತೆರಳಬಹುದಾಗಿದೆ ಎಂದು ಗೃಹ ಸಚಿವಾಲಯ ಸೂಚನೆ ನೀಡಿದೆ.

    ಮೋದಿ ಅವರ ಭದ್ರತೆಯ ಕುರಿತು ರಾಜ್ಯ ಸರ್ಕಾರಗಳಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಕಳುಹಿಸಿದೆ. ಮೋದಿಯವರು 2019ರ ಸಾರ್ವತ್ರಿಕ ಚುನಾವಣೆಗೆ  “ಅತ್ಯಮೂಲ್ಯ ಗುರಿಯಾಗಿದ್ದು”, ಹತ್ಯೆ ಸಂಚು ರೂಪಿಸುವ ಕುರಿತ ಎಚ್ಚರಿಕೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಇದೇ ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರಾಗಿರುವ ಮೋದಿ ಅವರ ರೋಡ್ ಶೋಗಳ ಕಡಿತಗೊಳಿಸುವ ಸಲಹೆಯನ್ನು ನೀಡಿದ್ದು, ಬದಲಾಗಿ ಸಾರ್ವಜನಿಕ ಸಮಾವೇಶಗಳನ್ನು ನಡೆಸುವಂತೆ ಎಸ್‍ಪಿಜಿ (ವಿಶೇಷ ರಕ್ಷಣಾ ಪಡೆ) ಸಲಹೆ ನೀಡಿದೆ.

    ಜೂನ್ 7 ರಂದು ಪುಣೆ ಪೊಲೀಸರು ಮೋದಿ ಹತ್ಯೆ ಸಂಚು ರೂಪಿಸಿರುವ ಕುರಿತು ಮಾಹಿತಿ ಬಹಿರಂಗ ಪಡಿಸಿದ ಬಳಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ರೀತಿಯಲ್ಲಿ ಮೋದಿಯವರನ್ನು ಹತ್ಯೆ ಮಾಡಲಾಗುವುದು ಎಂದು ಪುಣೆ ಪೊಲೀಸರು ಬಹಿರಂಗಗೊಳಿಸಿದ್ದ ಪತ್ರದಲ್ಲಿ ಬರೆಯಲಾಗಿತ್ತು ಎಂದು ಪೊಲೀಸರು ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.

    ಈ ಬೆಳವಣಿಗೆ ನಂತರ ಗೃಹ ಸಚಿವ ರಾಜ್‍ನಾಥ್ ಸಿಂಗ್‍ರವರು ಪ್ರಧಾನಿ ಮಂತ್ರಿಯ ಹತ್ಯೆ ಸಂಚು ರೂಪಿಸಿರುವ ಹಿನ್ನೆಲೆ ಭದ್ರತೆಯನ್ನು ಪರಿಶೀಲಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಗುಪ್ತಚರ ಇಲಾಖೆ ನಿದೇರ್ಶಕ ರಾಜೀವ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅಲ್ಲದೇ ಪ್ರಧಾನ ಮಂತ್ರಿಯ ಭದ್ರತಾ ವ್ಯವಸ್ಥೆ ಬಲಪಡಿಸಲು, ಇತರೆ ಏಜೆನ್ಸಿಗಳೊಂದಿಗೆ ಸಮಾಲೋಚಿಸಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.

    ದೇಶದಲ್ಲಿ ಛತ್ತಿಸ್‍ಗಢ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಮಾವೋವಾದಿಗಳ ಪ್ರಭಾವ ಹೆಚ್ಚಾಗಿದ್ದು, ಗೃಹಸಚಿವರು ಮತ್ತು ಪೊಲೀಸ್ ಅಧಿಕಾರಿಗಳು ಪ್ರಧಾನಿ ತಮ್ಮ ರಾಜ್ಯಗಳಿಗೆ ಭೇಟಿ ನೀಡಿದಾಗ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕೆಂದು ಎಂದು ಹೊಸ ಮಾರ್ಗಸೂಚಿಗಳಲ್ಲಿ ಸೂಚಿಸಿದ್ದಾರೆ ಎನ್ನಲಾಗಿದೆ.

  • ರೈಲ್ವೇ ಜೊತೆ  ಕ್ಷಮೆ ಕೇಳಿದ ಹಿರಿಯ ನಟಿ ಶಬಾನಾ ಅಜ್ಮಿ

    ರೈಲ್ವೇ ಜೊತೆ ಕ್ಷಮೆ ಕೇಳಿದ ಹಿರಿಯ ನಟಿ ಶಬಾನಾ ಅಜ್ಮಿ

    ನವದೆಹಲಿ: ರೈಲ್ವೇ ಸಿಬ್ಬಂದಿ ಕೊಳಚೆ ನೀರಿನಲ್ಲಿ ಪಾತ್ರೆ ತೊಳೆಯುತ್ತಿದ್ದಾರೆ ಎನ್ನುವ ವಿಡಿಯೋವನ್ನು ಟ್ವೀಟ್ ಮಾಡಿದ್ದ ಹಿರಿಯ ನಟಿ ಶಬಾನಾ ಅಜ್ಮಿ ಈಗ ಕ್ಷಮೆ ಕೇಳಿದ್ದಾರೆ.

    ಸೋಮವಾರ ಹಿರಿಯ ನಟಿ ಅಜ್ಮಿ ಅವರು, ರೈಲ್ವೇ ಸಿಬ್ಬಂದಿ ಕೊಳಚೆ ನೀರಿನಲ್ಲಿ ಪಾತ್ರೆ ತೊಳೆಯುತ್ತಿದ್ದ 30 ಸೆಕೆಂಡ್ ವಿಡಿಯೋ ಟ್ವೀಟ್ ಮಾಡಿದ್ದರು. ಅಲ್ಲದೇ ಇದನ್ನು ನೋಡಿ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಹಾಗೂ ರೈಲ್ವೇ ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದರು.

    ಅಜ್ಮಿ ಅವರ ಟ್ವೀಟ್‍ನಿಂದ ತಬ್ಬಿಬ್ಬಾದ ರೈಲ್ವೇ ಸಚಿವಾಲಯ ವಿಡಿಯೋ ಎಲ್ಲಿದೆಂದು ಪತ್ತೆಹಚ್ಚಿ, ಬುಧವಾರ ಸಂಜೆ ತಮ್ಮ ಉತ್ತರವನ್ನು ಟ್ವೀಟ್ ಮಾಡಿದ್ದಾರೆ. “ಮೇಡಂ ನೀವು ಟ್ಯಾಗ್ ಮಾಡಿರುವ ಕೊಳಚೆ ನೀರಿನಲ್ಲಿ ಪಾತ್ರೆ ತೊಳೆಯುತ್ತಿವ ವಿಡಿಯೋ ಮಲೇಷ್ಯಾದ ಉಪಹಾರ ಗೃಹಕ್ಕೆ ಸೇರಿದ್ದು” ಎಂದು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದೆ.

    ಸಚಿವಾಲಯ ಟ್ವೀಟ್ ನೋಡಿದ ಬಳಿಕ ಎಚ್ಚೆತ್ತ ಹಿರಿಯ ನಟಿ, ನನ್ನಿಂದ ತಪ್ಪಾಗಿದೆ ಕ್ಷಮಿಸಿ ಹಾಗೂ ಮಾಹಿತಿ ನೀಡಿದ್ದಕ್ಕೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

    ಶಬಾನಾ ಅಜ್ಮಿ ಅವರ ಟ್ವೀಟ್ ಗೆ ಟ್ವಿಟ್ಟರ್ ನಲ್ಲಿ ಜನ ತರಾಟೆಗೆ ತೆಗೆದುಕೊಂಡಿದ್ದು, ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕೆ ರೈಲ್ವೇ ಸಚಿವಾಲಯವು ಅಜ್ಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕೆಂದು ಆಗ್ರಹಿಸಿದ್ದಾರೆ.