Tag: minister

  • ಭಾರೀ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ- ಸಚಿವ ಎಂ.ಬಿ ಪಾಟೀಲ್

    ಭಾರೀ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ- ಸಚಿವ ಎಂ.ಬಿ ಪಾಟೀಲ್

    ವಿಜಯಪುರ: ರಾಜ್ಯ ಹಾಗೂ ವಿಜಯಪುರ ಜಿಲ್ಲೆಯೆ ಹೈ ವೋಲ್ಟೇಜ್ ಮತಕ್ಷೇತ್ರ ಬಬಲೇಶ್ವರದಲ್ಲಿ 80% ಮತದಾನವಾಗಿದೆ. ಇದೇ ಮೊದಲನೆ ಬಾರಿಗೆ ಈ ಮಟ್ಟಕ್ಕೆ ಮತದಾನವಾಗಿದ್ದು, ಕಾಂಗ್ರೆಸ್ ಭಾರಿ ಅಂತರದಿಂದ ಜಯಭೇರಿ ಬಾರಿಸಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ ಬಿ ಪಾಟೀಲ್ ಹೇಳಿದ್ದಾರೆ.

    ನನ್ನ ಮತಕ್ಷೇತ್ರದಲ್ಲಿ ಹೆಚ್ಚು ಮತದಾನ ಆಗಿದ್ದು ಖುಷಿ ಆಗಿದೆ. ನನ್ನ ವಿರುದ್ಧ ಹಲವು ಷಡ್ಯಂತ್ರ ಮಾಡಲಾಗಿದೆ. ನನ್ನ ಸೋಲಿಸಲು ವಿರೋಧ ಪಕ್ಷದವರು ಅನೇಕ ತಂತ್ರ ಕುತಂತ್ರಗಳನ್ನು ಮಾಡಿದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಸ್ವತಃ ಬಂದು ನನ್ನ ವಿರುದ್ಧ ಪ್ರಚಾರ ಮಾಡಿದರು. ಅದರ ಲಾಭ ನನಗೆ ಆಗಲಿದೆ. ಇದಕ್ಕೆ ಉತ್ತರ 15 ಕ್ಕೆ ಸಿಗಲಿದೆ ಕಾದು ನೋಡಿ ಎಂದರು.

    ರಾಜ್ಯದಲ್ಲಿ 120 ಸೀಟ್ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಕುರಿತು ಮಾತನಾಡಿದ ಅವರು, ಬಿಎಲ್‍ಡಿಇ ಸಂಸ್ಥೆಯ ನೋಟ್‍ಪ್ಯಾಡ್ ನಲ್ಲಿ ನನ್ನ ನಕಲಿ ಸಹಿ ಮಾಡಲಾಗಿದೆ. ನಕಲಿ ಸಹಿ ಮಾಡಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಕಳಿಸಲಾಗಿದೆ. ಇದರ ಹಿಂದೆ ಆರ್.ಎಸ್.ಎಸ್. ಹಾಗೂ ಬಿಜೆಪಿ ಕೈವಾಡವಿದೆ. ಅವರ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳತ್ತೇನೆ ಅಂದ್ರು.

  • ಬಿಎಸ್‍ವೈ ನಿವೃತ್ತಿ ಜೀವನ ಸುಖಕರವಾಗಿ 100 ವರ್ಷ ಬಾಳಲಿ- ಸಚಿವ ಎಂಬಿ ಪಾಟೀಲ್

    ಬಿಎಸ್‍ವೈ ನಿವೃತ್ತಿ ಜೀವನ ಸುಖಕರವಾಗಿ 100 ವರ್ಷ ಬಾಳಲಿ- ಸಚಿವ ಎಂಬಿ ಪಾಟೀಲ್

    ವಿಜಯಪುರ: ಮೇ 17ರಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ನಿಡಿರುವ ಹೇಳಿಕೆಗೆ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಬಿಎಸ್‍ವೈ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಯುವಂತೆ ಮಾಡುತ್ತಿದ್ದಾರೆ. ಬಿಎಸ್‍ವೈ ಅವರನ್ನು ನೋಡಿದ್ರೆ ಪಾಪ ಕೆಟ್ರು ಅನಿಸುತ್ತದೆ ಎಂದರು.

    ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರಿಗೆ ಅರಳು ಮರಳು ಆಗಿ, ಹತಾಶರಾಗಿದ್ದಾರೆ. ಅಲ್ಲದೇ, ಅವರು ಮುಖ್ಯಮಂತ್ರಿ ಆಗುವುದಿಲ್ಲ. ಅವರ ಮುಂದಿನ ದಿನಗಳ ಬಗ್ಗೆ ದೇವರಲ್ಲಿ ಕೇಳಿಕೊಳ್ತೇನೆ. ಅವರ ನಿವೃತ್ತಿ ಜೀವನ ಸುಖಕರವಾಗಿ 100 ವರ್ಷ ಬಾಳಲಿ. ಹಾಗೇ ನನ್ನ ಹಾಗೇ ಅವರಿಗೂ ಬಿಪಿ ಜಾಸ್ತಿ ಇದೆ. ಅದಕ್ಕಾಗಿಯೇ ಬೆಳಗ್ಗೆ ಹಾಗೂ ಸಂಜೆ ವಾಕಿಂಗ್ ಮಾಡಿ ಆರಾಮಾಗಿರಲಿ ಎಂದು ಸಲಹೆ ನೀಡಿದರು.

  • ದೇವಸ್ಥಾನದೊಳಗೆ ಬಂದ್ರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಅಂದ್ರು ಸ್ಮೃತಿ ಇರಾನಿ!

    ದೇವಸ್ಥಾನದೊಳಗೆ ಬಂದ್ರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಅಂದ್ರು ಸ್ಮೃತಿ ಇರಾನಿ!

    ಬಳ್ಳಾರಿ: ಬಿಜೆಪಿ ನಾಯಕರು ಒಂದೆಡೆ ಟೆಂಪಲ್ ರನ್ ಮಾಡತ್ತಿದ್ದರೆ, ಮತ್ತೊಂದೆಡೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ದೇವಾಲಯದೊಳಗೆ ಪ್ರವೇಶ ಮಾಡೋದು ಅಕ್ರಮ ಅನ್ನೋ ಹೇಳಿಕೆ ನೀಡಿದ್ದಾರೆ.

    ಸಂಡೂರಿನಲ್ಲಿಂದು ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ಸ್ಮೃತಿ ಇರಾನಿಯವರನ್ನು ಪಕ್ಷದ ಮುಖಂಡರು ಸಂಡೂರಿನ ವಿರಕ್ತ ಮಠಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ದೇವಾಲಯದೊಳಗೆ ಪ್ರವೇಶ ಮಾಡಲು ನಿರಾಕರಿಸಿದ ಸೃತಿ ಇರಾನಿ, ಹೊರಗಡೆಯಿಂದಲೇ ಕೈ ಮುಗಿದು ರೋಡ್ ಶೋ ನಡೆಸಲು ಮುಂದಾದ್ರು.

    ಕಾರ್ಯಕರ್ತರ ಮಠದೊಳಗೆ ಆಗಮಿಸುವಂತೆ ಮನವಿ ಮಾಡಿದಾಗ ದೇವಾಲಯದೊಳಗೆ ಪ್ರವೇಶ ಮಾಡಿದ್ರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ. ಹೀಗಾಗಿ ನಾನು ಬರಲ್ಲವೆಂದು ಹೊರಗಡೆಯಿಂದಲೇ ಕೈ ಮುಗಿದು ರೋಡ್ ಶೋ ಮೂಲಕ ಪ್ರಚಾರ ನಡೆಸಿದರು.

    ಬಳಿಕ ಮಾತನಾಡಿದ ಸ್ಮೃತಿ ಇರಾನಿ, ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಲಿದೆ. ಹೀಗಾಗಿ ಎಲ್ಲಾ ಮತದಾರರು ಬಿಜೆಪಿಗೆ ಮತ ಹಾಕಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಬೇಕೆಂದು ಮನವಿ ಮಾಡಿದರು. ಇದೇ ವೇಳೆ ಮಾತನಾಡಿದ ಅಭ್ಯರ್ಥಿ ರಾಘವೇಂದ್ರ ಸಹ ಈ ಭಾರೀ ಸಂಡೂರಿನಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಪ್ರಧಾನಿ ಮೋದಿ ಬಳ್ಳಾರಿ ಪ್ರವಾಸ ಮಾಡಿದ ನಂತರ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು.

  • ನಡುರಸ್ತೆಯಲ್ಲೇ ಸಚಿವ ತನ್ವೀರ್ ಸೇಠ್ ಗೆ ಫುಲ್ ಕ್ಲಾಸ್- ತಡೆಯಲು ಬಂದ ಆಪ್ತನಿಗೆ ಅವಾಜ್ ಹಾಕಿದ ಮತದಾರ

    ನಡುರಸ್ತೆಯಲ್ಲೇ ಸಚಿವ ತನ್ವೀರ್ ಸೇಠ್ ಗೆ ಫುಲ್ ಕ್ಲಾಸ್- ತಡೆಯಲು ಬಂದ ಆಪ್ತನಿಗೆ ಅವಾಜ್ ಹಾಕಿದ ಮತದಾರ

    ಮೈಸೂರು: ಮತ ಕೇಳಲು ಬಂದ ಸಚಿವರಿಗೆ ಮತದಾರ ಕ್ಲಾಸ್ ತೆಗೆದುಕೊಂಡ ಘಟನೆ ಮೈಸೂರಿನ ಎನ್ ಆರ್ ಕ್ಷೇತ್ರದಲ್ಲಿ ನಡೆದಿದೆ.

    ಮೈಸೂರಿನ ಎನ್ ಆರ್ ಕ್ಷೇತ್ರದ ಶಾಸಕ ಹಾಗೂ ಸಚಿವ ತನ್ವೀರ್ ಸೇಠ್ ಮತದಾರನಿಂದ ತರಾಟೆಗೆ ಒಳಗಾಗಿದ್ದಾರೆ. ಮತದಾರ ರಸ್ತೆಯಲ್ಲಿ ಏಕಾಂಗಿಯಾಗಿ ನಿಂತು ಸಚಿವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇದನ್ನು ತಡೆಯಲು ಬಂದ ಸಚಿವರ ಆಪ್ತ ಕಾರ್ಯದರ್ಶಿಯನ್ನು ಲೆಕ್ಕಿಸದೆ ಅವಾಜ್ ಹಾಕಿದ್ದಾರೆ.

    ಮೈಸೂರಿನ ಕನ್ನಡಪರ ಹೋರಾಟಗಾರ ಪರಮೇಶ್, ತನ್ವೀರ್ ಸೇಠ್ ಗೆ ಕ್ಲಾಸ್ ತೆಗೆದುಕೊಂಡ ವ್ಯಕ್ತಿ. ಎನ್.ಆರ್. ಕ್ಷೇತ್ರದ ರಾಘವೇಂದ್ರ ನಗರದಲ್ಲಿ ಮತಯಾಚನೆಗಾಗಿ ತನ್ವೀರ್ ಸೇಠ್ ಪಾದಯಾತ್ರೆ ನಡೆಸುತ್ತಿದ್ದರು. ಈ ವೇಳೆ ಎದುರಾದ ಮತದಾರ ಪರಮೇಶ್, ತನ್ವೀರ್ ಸೇಠ್‍ಗೆ ಹಲವು ನಿಮಿಷಗಳ ಕಾಲ ಪ್ರಶ್ನೆಗಳ ಸುರಿಮಳೆಗೈದರು.

    ರಸ್ತೆ ರೀಪೇರಿ ಮಾಡಿಸಿಲ್ಲ. ನಾನು ಅಂದಿನಿಂದಲೂ ನಿಮಗೆ ನಿಮ್ಮ ತಂದೆ ಹಾಗೂ ನಿಮಗೆ ಮತ ಹಾಕ್ತಿದ್ದೀವಿ. ಆದ್ರೆ ಮನೆ ಬಳಿ ಕೆಲಸ ಮಾಡಿಕೊಡಿ ಅಂತ ಬಂದ್ರೆ ಕ್ಯಾರೇ ಅನ್ನೊಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

  • ಕೇಂದ್ರ ಸಚಿವರ ಕಾರ್ ಅಪಘಾತಕ್ಕೆ ಹಾವೇರಿ ಎಸ್‍ಪಿ ಸ್ಪಷ್ಟನೆ

    ಕೇಂದ್ರ ಸಚಿವರ ಕಾರ್ ಅಪಘಾತಕ್ಕೆ ಹಾವೇರಿ ಎಸ್‍ಪಿ ಸ್ಪಷ್ಟನೆ

    ಹಾವೇರಿ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಕಾರ್ ಅಪಘಾತವಾಗಿದ್ದು, ಸಚಿವರು ಕೊಲೆ ಯತ್ನ ಅಂತ ಆರೋಪಿಸಿದ್ದರು. ಈ ಬೆನ್ನಲ್ಲೇ ಹಾವೇರಿ ಎಸ್ ಪಿ ಕೆ. ಪರಶುರಾಮ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಅನಂತಕುಮಾರ್ ಹೆಗ್ಡೆ ಅವರು ಶಿರಸಿಯಿಂದ ಬೆಂಗಳೂರಿಗೆ ಹೋಗುವಾಗ ರಾತ್ರಿ 10 ಗಂಟೆ ಸಮಯದಲ್ಲಿ ರಾತ್ರಿ 10 ಗಂಟೆಯ ಸುಮಾರಿಗೆ ರಾಣೆಬೆನ್ನೂರಿನ ಹಲಗೇರಿ ಕ್ರಾಸ್ ಬಳಿ ಸಚಿವರ ಬೆಂಗಾವಲು ಪೊಲೀಸ್ ವಾಹನ ಲಾರಿಗೆ ಡಿಕ್ಕಿ ಹೊಡೆದಿದೆ. ಬೆಂಗಾವಲು ವಾಹನದಲ್ಲಿದ್ದ ಎಎಸ್‍ಐ ಪ್ರಭು ತಳವಾರ ಮತ್ತು ಚಾಲಕರು ಗಾಯಗೊಂಡಿದ್ದಾರೆ.

    ಎಸ್‍ಪಿ ಸ್ಪಷ್ಟನೆ:
    ಲಾರಿ ಚಾಲಕ ನಾಸೀರ ಅಹ್ಮದ್ ಮಾಫೀಜ್ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮುತ್ತಿನಕಟ್ಟೆ ಗ್ರಾಮದ ನಿವಾಸಿ. ಭಾನುವಾರ ರಾತ್ರಿ ಎನ್ ಆರ್ ಪುರದಿಂದ ರಬ್ಬರ್ ವುಡ್ ಲೋಡ್ ಮಾಡಿಕೊಂಡು ಹುಬ್ಬಳ್ಳಿಯ ತಾರಿಹಾಳ ಇಂಡಸ್ಟ್ರಿಗೆ ಅನ್‍ಲೋಡ್ ಮಾಡಿದ್ದಾರೆ. ಸೋಮವಾರ ಹುಬ್ಬಳಿಯಲ್ಲಿ ಉಳಿದುಕೊಂಡು ಮಂಗಳವಾರ ಅದೇ ಲಾರಿಯಲ್ಲಿ ಕಿರಾಣಿ ಸಾಮಾಗ್ರಿಗಳನ್ನು ಲೋಡ್ ಮಾಡಿಕೊಂಡು ಶಿವಮೊಗ್ಗಕ್ಕೆ ಹೋಗಬೇಕಿತ್ತು. ಆದ್ರೆ ಮಾರ್ಗ ಮಧ್ಯದಲ್ಲಿ ಸಂಬಂಧಿಕರ ಫೋನ್ ಬಂದಿದೆ. ಹಾಗೇ ಮಾತನಾಡುತ್ತಾ ಹಲಗೇರಿ ಬೈಪಾಸ್ ಗೆ ಹೋಗದೇ ಓವರ್ ಬ್ರಿಡ್ಜ್ ಗೆ ಬಂದಿದ್ದಾರೆ. 100 ಮೀಟರ್ ನಷ್ಟು ಬಂದಾಗ ದಾರಿ ತಪ್ಪಿದೆ ಅಂತಾ ತಿಳಿದ ಕೂಡಲೇ ಅಲ್ಲೆ ರಿವರ್ಸ್ ತೆಗೆದುಕೊಳ್ಳಲು ಹೋದಾಗ ಸಚಿವರ ಬೆಂಗಾಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯ ಬಳಿಕ ಲಾರಿ ಮತ್ತು ಚಾಲಕನನ್ನು ವಶಪಡಿಸಿಕೊಂಡಿದ್ದು, ವಿಚಾರಣೆಯನ್ನು ನಡೆಸುತ್ತಿದ್ದೇವೆ ಅಂತಾ ತಿಳಿಸಿದ್ದಾರೆ.

    ಈಗಾಗಲೇ ಮುತ್ತಿನಕಟ್ಟೆ ಗ್ರಾಮಕ್ಕೆ ನಮ್ಮ ಪೊಲೀಸರು ತಂಡ ಕಳುಹಿಸಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ನಾಸೀರ್ ಮೊಬೈಲ್ ವಶಕ್ಕೆ ಪಡೆದಿದ್ದು, ಕಾಲ್ ಡಿಟೇಲ್ಸ್ ಚೆಕ್ ಮಾಡಲಾಗ್ತಿದೆ. ಮೇಲ್ನೊಟಕ್ಕೆ  ಸಚಿವರ ಹತ್ಯೆಗೆ ಯತ್ನ ನಡೆದಿದೆ ಅನ್ನೋದು ಕಂಡು ಬಂದಿಲ್ಲ. ಸಂಬಂಧ ಅಪಘಾತ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಅಂತ ಅವರು ಸ್ಪಷ್ಟಪಡಿಸಿದ್ದಾರೆ.

    ಜಿಲ್ಲೆಯ ರಾಣೇಬೆನ್ನೂರು ನಗರದ ಹೊರವಲಯದಲ್ಲಿ ಮಂಗಳವಾರ ರಾತ್ರಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಬೆಂಗಾವಲು ವಾಹನ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಘಟನೆಯಿಂದ ಬೆಂಗಾವಲು ವಾಹನದಲ್ಲಿದ್ದ ಎಎಸ್‍ಐ ಪ್ರಭು ತಳವಾರ ಎಂಬವರ ಕಾಲಿಗೆ ಗಾಯವಾಗಿತ್ತು. ಆದ್ರೆ ಘಟನೆ ನಡೆದ ಕೆಲವೇ ಕೆಲವು ನಿಮಿಷಗಳಲ್ಲಿ ಸಚಿವ ಹೆಗ್ಡೆ ಉದ್ದೇಶಪೂರ್ವಕವಾಗಿ ನನ್ನ ಹತ್ಯೆಗೆ ಪ್ರಯತ್ನ ನಡೆದಿದೆ. ನನ್ನ ವಾಹನ ಸ್ಪೀಡ್ ಇದ್ದಿದ್ದರಿಂದ ನಾನು ಪಾರಾದೆ ಅಂತಾ ಟ್ವೀಟ್ ಮಾಡಿದ್ದರು.

    https://youtu.be/cwbDP5ViV3U

  • ಚುನಾವಣೆ ಹೊತ್ತಲ್ಲಿ ಆಪ್ತನಿಂದ ಸಂಕಷ್ಟಕ್ಕೊಳಗಾದ್ರು ಸಚಿವ ಎಂ ಬಿ ಪಾಟೀಲ್

    ಚುನಾವಣೆ ಹೊತ್ತಲ್ಲಿ ಆಪ್ತನಿಂದ ಸಂಕಷ್ಟಕ್ಕೊಳಗಾದ್ರು ಸಚಿವ ಎಂ ಬಿ ಪಾಟೀಲ್

    ಬೆಂಗಳೂರು: ವಿಧಾನಸಭಾ ಚುನಾವಣಾ ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಆಪ್ತನಿಗೆ ಪೊಲೀಸ್ ಇಲಾಖೆ ದೊಡ್ಡ ಶಾಕ್ ಕೊಟ್ಟಿದೆ.

    ಎಂ.ಬಿ ಪಾಟೀಲ್ ಆಪ್ತ ಮಹಾದೇವ ಭೈರಗೊಂಡ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯದೇ ವಿಜಯಪುರ ಜಿಲ್ಲೆಯ ಸುತ್ತಮುತ್ತ ದೊಡ್ಡ ಮಟ್ಟದಲ್ಲಿ ಅಕ್ರಮ ಮರಳು ದಂಧೆ ನಡೆಸ್ತಿದ್ದನು. ಇಂದು ಏಕಾಏಕಿ ದಾಳಿ ನಡೆಸಿದ ಐಜಿಪಿ ಅಲೋಕ್‍ಕುಮಾರ್ ನೇತೃತ್ವದ ತಂಡ ಈ ಅಕ್ರಮ ದಂಧೆ ಬಯಲಿಗೆಳೆದಿದ್ದಾರೆ.

    ಅಲ್ಲದೇ ಲಕ್ಷಾಂತರ ಬೆಲೆಬಾಳುವ 20ಕ್ಕೂ ಹೆಚ್ಚು ಮರಳಿನ ಲಾರಿಗಳನ್ನ ವಶಕ್ಕೆ ಪಡೆದು ಕಿಂಗ್‍ಪಿನ್ ಮಹಾದೇವ ವಿರುದ್ಧ ರೌಡಿಶೀಟರ್ ತೆರೆದು ಚಡಚಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಮಹಾದೇವನನ್ನು ಬೆನ್ನಟ್ಟಿದ್ದ ಪೊಲೀಸರು ಶಿರಡಿಯಲ್ಲಿ ಬಂಧಿಸಿದ್ದಾರೆ. ಆರೋಪಿ ಮಹಾದೇವ ಕಾಂಗ್ರೆಸ್‍ನ ಘಟಾನುಘಟಿ ಸಚಿವರಾದ ವಿನಯ್ ಕುಲಕುರ್ಣಿ ಮತ್ತು ಎಂಬಿಪಾಟೀಲ್ ಅವರೊಂದಿಗೆ ಗುರತಿಸಿಕೊಂಡಿದ್ದ ಎನ್ನಲಾಗಿದೆ. ಇದನ್ನೇ ದಾಳವಾಗಿಸಿಕೊಂಡು ಪಾರಾಗಲು ಯತ್ನಿಸಿದ್ದ ಎಂಬುದಾಗಿ ತಿಳಿದುಬಂದಿದೆ.

     

  • ಉಡುಪಿಯಲ್ಲಿ ಪ್ರಮೋದ್ ಮಧ್ವರಾಜ್ ಕಟ್ಟಿಹಾಕಲು ಆರ್‌ಎಸ್‌ಎಸ್ ಪ್ಲಾನ್!

    ಉಡುಪಿಯಲ್ಲಿ ಪ್ರಮೋದ್ ಮಧ್ವರಾಜ್ ಕಟ್ಟಿಹಾಕಲು ಆರ್‌ಎಸ್‌ಎಸ್ ಪ್ಲಾನ್!

    ಉಡುಪಿ: ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಗೆ ಈ ಬಾರಿ ಚುನಾವಣೆಯಲ್ಲಿ ಸೆಡ್ಡು ಹೊಡೆಯಲು ಆರ್‌ಎಸ್‌ಎಸ್ ಪ್ಲಾನ್ ಮಾಡಿದೆ.

    ಪ್ರಮೋದ್ ಮಧ್ವರಾಜ್ ಅವರನ್ನು ಹೇಗಾದ್ರೂ ಮಾಡಿ ಕಟ್ಟಿ ಹಾಕಲು ಆರ್‌ಎಸ್‌ಎಸ್ ಸೈಲೆಂಟಾಗಿ ಸ್ಕೆಚ್ ಹಾಕಿದ್ದು, ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಯನ್ನು ಇಳಿಸಲು ಮಾಸ್ಟರ್ ಪ್ಲಾನ್ ಮಾಡಿದೆ ಅಂತ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

    ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್ ಗೆ ಬಿಜೆಪಿ ಟಿಕೆಟ್ ಕೊಡಲು ನಿರ್ಧರಿಸಿದೆ. ಮೊಗವೀರ ಸಮುದಾಯದ ನಯನ ಗಣೇಶ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಗೇಮ್ ಪ್ಲಾನ್ ಮಾಡಿದೆ. ಬಿಜೆಪಿ ಹೈಕಮಾಂಡ್ ಗೆ ನಯನ ಗಣೇಶ್ ಅವರ ಹೆಸರನ್ನು ಆರ್‌ಎಸ್‌ಎಸ್ ಸೂಚಿಸಿದೆ. ಈ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದ ಮಹಿಳಾ ಮತದಾರರ ಸೆಳೆಯಲು ಯತ್ನ ಮಾಡಿದೆ ಎನ್ನಲಾಗಿದೆ.

     

    ಜಿಲ್ಲೆಯಲ್ಲಿ ಮೊಗವೀರ ಮಹಿಳೆಗೆ ಸೀಟ್ ಕೊಟ್ಟರೆ ಕಾಪು, ಕುಂದಾಪುರ, ಬೈಂದೂರು ಕ್ಷೇತ್ರದ ಮೊಗವೀರ ಮತಕ್ಕೂ ಬಲೆ ಬೀಸಲು ಸುಲಭವಾಗುತ್ತದೆ ಎಂಬುದು ಬಿಜೆಪಿಯ ಪ್ಲಾನ್. ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಈಗಾಗಲೇ ಐದಾರು ಹೆಸರು ಸಾಲಿನಲ್ಲಿದೆ. ಇದೀಗ ಮೊದಲ ಬಾರಿಗೆ ನಯನ ಗಣೇಶ್ ಹೆಸರು ಕೇಳಿ ಬಂದಿದೆ. ಕಳಂಕ ರಹಿತರನ್ನು ಇಳಿಸಿದ್ರೆ ಸುಲಭವಾಗಿ ಪ್ರಚಾರಕ್ಕೆ ಹೋಗಬಹುದು. ಎದುರಾಳಿಗೆ ದಾಳಿ ಮಾಡಲು ವಿಷಯಗಳೇ ಇರಬಾರದು ಎಂಬುದು ಬಿಜೆಪಿಯ ವಾದ. ತಳಮಟ್ಟದಲ್ಲಿ ನಾವು ಕ್ಯಾಂಪೇನ್ ಮಾಡುತ್ತೇವೆ ಎಂದು ಆರ್‌ಎಸ್‌ಎಸ್ ಭರವಸೆ ಕೊಟ್ಟಿದೆ ಎಂಬ ಮಾಹಿತಿಯಿದೆ.

  • ಐ ಆ್ಯಮ್ ಎ ಎಜುಕೇಟೆಡ್, ಐ ನೊ ವಾಟ್ ಐ ಆ್ಯಮ್- ಸಿಂಧೂರಿ ನೋಟಿಸ್‍ಗೆ ಮಂಜು ಗರಂ

    ಐ ಆ್ಯಮ್ ಎ ಎಜುಕೇಟೆಡ್, ಐ ನೊ ವಾಟ್ ಐ ಆ್ಯಮ್- ಸಿಂಧೂರಿ ನೋಟಿಸ್‍ಗೆ ಮಂಜು ಗರಂ

    ಹಾಸನ: ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಎ. ಮಂಜು ಅವರಿಗೆ ನೋಟಿಸ್ ಜಾರಿಯಾಗಿದ್ದು, ಈ ಕುರಿತು ಸಚಿವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಅರಕಲಗೂಡು ತಾಲೂಕಿನ ತಮ್ಮ ಸ್ವಗ್ರಾಮದಲ್ಲಿ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳಲ್ಲಿ ಬಂದ ಬಳಿಕ ನನ್ನ ಸ್ನೇಹಿತರು ಕರೆ ಮಾಡಿ ಡಿಸಿ ಕಚೇರಿಯಿಂದ ನೋಟಿಸ್ ಬಂದಿರುವುದಾಗಿ ನನ್ನ ಗಮನಕ್ಕೆ ತಂದ್ರು. ಆದ್ರೆ ಇಲ್ಲಿಯವರೆಗೂ ನನಗೆ ಯಾವುದೇ ರೀತಿಯ ನೋಟಿಸ್ ಬಂದಿಲ್ಲ. ನೋಟಿಸ್ ಕೊಡೋಕೆ ಸಮರ್ಥರ ಎಂಬುದನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಬೇಕು. ಯಾಕಂದ್ರೆ ಆ ಕಚೇರಿ ಎ ಮಂಜು ಕಚೇರಿಯಲ್ಲ. ಬದಲಾಗಿ ಹಾಸನ ಜಿಲ್ಲೆಯ ಉಸ್ತುವಾರಿ ಮಂತ್ರಿ ಕಚೇರಿಯಾಗಿದೆ. ಹೀಗಾಗಿ ನಾನು ಸರ್ಕಾರದ ಓರ್ವ ಪ್ರತಿನಿಧಿಯಾಗಿ ಜನಸಾಮಾನ್ಯರು ಬಂದಾಗ ಅವರ ಕಷ್ಟ-ಸುಖಗಳನ್ನು ಆಲಿಸಲೆಂದು ಸರ್ಕಾರ ಕೊಟ್ಟಿರುವ ಕಚೇರಿಯನ್ನು ಬಳಸಿಕೊಂಡಿದ್ದೇನೆ. ಅದನ್ನು ದುರುಪಯೋಗಪಡಿಸಿಕೊಳ್ಳಬಾರದೆಂದು ನನಗೆ ಅರಿವಿದೆ ಅಂದ್ರು. ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ: ಸಚಿವ ಎ.ಮಂಜು ವಿರುದ್ಧ ಎಫ್‍ಐಆರ್ ದಾಖಲು

    ನಾನು ಕೂಡ ಎರಡು ಪದವಿಗಳನ್ನು ಪಡೆದಿದ್ದೇನೆ. ಕಾನೂನು ನನಗೂ ತಿಳಿದಿದೆ. ನೋಟಿಸ್ ಬಂದಿದೆ ಅಂತ ಸ್ನೇಹಿತರಿಂದ ತಿಳಿಯಿತು. ಹೀಗಾಗಿ ಆ ನೋಟಿಸ್ ನನ್ನ ಕೈಸೇರಿದ ಬಳಿಕ ಅದರಲ್ಲೇನಿದೆ ಅಂತ ತಿಳಿದು ಆಮೇಲೆ ಪ್ರತಿಕ್ರಿಯಿಸುತ್ತೇನೆ ಅಂತ ಹೇಳಿದ್ರು.

    ಚುನಾವಣೆಯಲ್ಲಿ ಜನ ನನ್ನನ್ನು ಗೆಲ್ಲಿಸಿ ಆಶೀರ್ವಾದ ಮಾಡಿದ್ದಾರೆ. ಅವರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ನನ್ನನ್ನು ಮಂತ್ರಿಯನ್ನಾಗಿ ಮಾಡಿದೆ. ಮಂತ್ರಿಯಾದ ಬಳಿಕ ಜನಪರ ಕೆಲಸ ಮಾಡುವುದರ ಸಲುವಾಗಿ ಸರ್ಕಾರ ಕಚೇರಿ ನೀಡುತ್ತದೆ. ನಾನು ನನ್ನ ಕಚೇರಿಯನ್ನು ಸಾರ್ವಜನಿಕರ ಕೆಲಸಗಳನ್ನು ಆಲಿಸಲು ಮಾತ್ರ ಉಪಯೋಗಿಸುತ್ತೇನೆ ಹೊರತು ಯಾವುದೇ ರೀತಿಯ ರಾಜಕೀಯ ಪ್ರೇರಿತವಾಗಿ ಆ ಕಚೇರಿಯನ್ನು ಉಪಯೋಗಿಸಿಕೊಳ್ಳುವುದಿಲ್ಲ. ಅದು ನನಗೆ ತಿಳಿದಿದೆ. ಸೋ ಐ ಆ್ಯಮ್ ಎ ಎಜುಕೇಟೆಡ್. ಐ ನೋ ವಾಟ್ ಐ ಆ್ಯಮ್, ವಾಟ್ ಐ ಡಿಡ್ ಅಂತ ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದ್ದಾರೆ.

  • ನೀತಿ ಸಂಹಿತೆ ಉಲ್ಲಂಘನೆ: ಸಚಿವ ಎ.ಮಂಜು ವಿರುದ್ಧ ಎಫ್‍ಐಆರ್ ದಾಖಲು

    ನೀತಿ ಸಂಹಿತೆ ಉಲ್ಲಂಘನೆ: ಸಚಿವ ಎ.ಮಂಜು ವಿರುದ್ಧ ಎಫ್‍ಐಆರ್ ದಾಖಲು

    ಹಾಸನ: ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಎ. ಮಂಜು ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ನೀತಿಸಂಹಿತೆ ಜಾರಿ ಬಳಿಕವೂ ಎ ಮಂಜು ಅವರು ಸರ್ಕಾರಿ ಕಟ್ಟಡ ಬಳಸಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಸೂಚನೆಯ ಮೇರೆಗೆ ಚುನಾವಣಾಧಿಕಾರಿ ರಾಜೇಶ್ ದೂರು ನೀಡಿದ್ದರು.

    ಮಾರ್ಚ್ 26 ರಂದು ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಅಂದೇ ನೀತಿ ಸಂಹಿತೆ ಜಾರಿಯಾಗಿತ್ತು. ಹೀಗಾಗಿ ನೀತಿ ಸಂಹಿತೆ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರಾಗಿರುವ ಮಂಜು ವಿರುದ್ಧ ಹಾಸನ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ದೂರು ಏನಿತ್ತು?
    ಸಚಿವರ ಕಚೇರಿ ಇದ್ದ ಕಟ್ಟಡದಲ್ಲಿ ಅನಧಿಕೃತವಾಗಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೀತಿಸಂಹಿತೆ ಜಾರಿ ಬಳಿಕವೂ ಕಚೇರಿಯ ಬಾಗಿಲನ್ನು ಹೊರಗಿನಿಂದ ಬಂದ್ ಮಾಡಿ ಕೆಲ ಸಿಬ್ಬಂದಿ ಒಳಗೆ ಕೆಲಸಮಾಡುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೇಳಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ರೋಹಿಣಿ ಸಿಂಧೂರಿ ಅವರು ನೋಟೀಸ್ ನೀಡಿದ್ದರು.

  • ಅಧಿಕಾರಿಗಳಿಂದ ಸಚಿವ ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನ ಸೀಜ್

    ಅಧಿಕಾರಿಗಳಿಂದ ಸಚಿವ ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನ ಸೀಜ್

    ಉಡುಪಿ: ವಿಧಾನಸಭಾ ಚುನಾವಣೆ ಘೋಷಣೆಯಾಗಿ 24 ಗಂಟೆ ಆಗುವುದರೊಳಗೆ ಜಿಲ್ಲಾಡಳಿತದ ಅಧಿಕಾರಿಗಳು ಬೇಟೆ ಶುರು ಮಾಡಿದ್ದಾರೆ. ಸಚಿವ ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನದ ಮೇಲೆ ಚುನಾವಣಾಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.

    ನಗರದ ಪ್ರವಾಸಿ ಬಂಗಲೆಯಿಂದ ಪ್ರಚಾರಕ್ಕೆಂದು ಹೊರಟ ವಾಹನವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪರವಾನಿಗೆಗೆ ಪತ್ರ ರವಾನಿಸಲಾಗಿತ್ತು. ಆದ್ರೆ ಪ್ರಚಾರದ ಸ್ಥಳ, ಸಮಯವನ್ನು ನಿಗದಿಪಡಿಸಿರಲಿಲ್ಲ. ಪರವಾನಿಗೆ ಪಡೆಯದೆ ಪ್ರಚಾರಕ್ಕೆ ಬಳಸಿದ ಆರೋಪದಡಿಯಲ್ಲಿ ನಗರ ಸಂಚಾರಿ ಪೊಲೀಸರು ವಾಹನವನ್ನು ಸೀಜ್ ಮಾಡಿ ನಗರ ಠಾಣೆಗೆ ಕೊಂಡೊಯ್ದಿದ್ದಾರೆ.

    ಪ್ರಚಾರ ವಾಹನದಲ್ಲಿ ಎರಡು ದಿನದ ಹಿಂದಷ್ಟೇ ಕಾಂಗ್ರೆಸ್ ಪಕ್ಷದ ಕೈ ಚಿಹ್ನೆ ಹಾಕಿಸಿದ್ದರು. ಪ್ರೊಬೆಶನರಿ ಐಎಎಸ್ ಅಧಿಕಾರಿ ಪೂವಿತಾ ನೇತೃತ್ವದಲ್ಲಿ ಇಂದು ದಾಳಿಯಾಗಿದ್ದು, ತಹಶಿಲ್ದಾರ್ ಮತ್ತು ಚುನಾವಣಾ ಅಧಿಕಾರಿಗಳು ಸ್ಥಳದಲ್ಲಿದ್ದರು.

    ಬಿಜೆಪಿ ಸೇರುವ ಬಗ್ಗೆ ಸ್ಪಷ್ಟನೆ: ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ತಾರೆ ಎಂಬ ಊಹಾಪೋಹಗಳಿಗೆ ಸಚಿವರು ಮೊದಲ ಬಾರಿಗೆ ಬಹಿರಂಗವಾಗಿಯೇ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಮೊದಲ ಬಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಮೌನ ಮುರಿದಿದ್ದಾರೆ.

    ಸಚಿವ ಮಧ್ವರಾಜ್ ಬಿಜೆಪಿ ಸೇರೋ ಬಗ್ಗೆ ಕಳೆದ ಹಲವು ದಿನಗಳಿಂದ ಭಾರೀ ಚರ್ಚೆ ಆಗುತ್ತಿತ್ತು. ಈ ಬಗ್ಗೆ ಮಧ್ವರಾಜ್ ಕೂಡ ಬಿಜೆಪಿ ಸೇರಲ್ಲ ಎಂದು ಮಾಧ್ಯಮಗಳ ಮುಂದೆ ಬಹಳ ಕೂಲ್ ಆಗಿ ಸ್ಪಷ್ಟನೆ ನೀಡುತ್ತಾ ಬಂದಿದ್ರು. ಕೆಲ ದಿನಗಳ ಹಿಂದೆ ಬಿಜೆಪಿ ಗೇಟು ಮುಚ್ಚಿದೆ. ಗೇಟು ಮುಚ್ಚಿರೋದ್ರಿಂದ ಹೋಗೋ ಪರಿಸ್ಥಿತಿ ಬರಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟು ಮಾತಾಡಿದ್ರು.

    ಮಂಗಳವಾರ ದೆಹಲಿಯಲ್ಲಿ ರಾಷ್ಟ್ರೀಯ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿರುವ ಸುದ್ದಿಯೂ ಹರಡಿದ್ದು, ಇದಕ್ಕೆ ಪ್ರಮೋದ್ ಮಧ್ವರಾಜ್ ಕೂಡ ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದು ಅದೆಷ್ಟೋ ಬಾರಿ ಹೇಳಿದ್ದೇನೆ ನಾನು ಯಾವ ಪಕ್ಷಕ್ಕೂ ಸೇರಲ್ಲ ಎಂದು ಈಗಲೂ ಹೇಳುತ್ತೇನೆ ಎಂದು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.

    https://twitter.com/PMadhwaraj/status/978873976641478656