Tag: minister

  • ಬಿಜೆಪಿಯಲ್ಲೂ ಇಬ್ಬರು ನಾಯಕರ ನಡುವೆ ಗುದ್ದಾಟ- ಬಿಎಸ್‍ವೈ ಗೆ ಸಂಕಟ

    ಬಿಜೆಪಿಯಲ್ಲೂ ಇಬ್ಬರು ನಾಯಕರ ನಡುವೆ ಗುದ್ದಾಟ- ಬಿಎಸ್‍ವೈ ಗೆ ಸಂಕಟ

    ಬೆಂಗಳೂರು: ಕಾಂಗ್ರೆಸ್‍ ನಲ್ಲಿ ಬೆಳಗಾವಿ ಬ್ಯಾಟಲ್ ಆಯ್ತು, ಈಗ ಬಿಜೆಪಿಯಲ್ಲಿ ಬೆಂಗಳೂರು ಬ್ಯಾಟಲ್ ನಡೆಯುತ್ತಿದೆ. ಇಬ್ಬರು ನಾಯಕರ ನಡುವಿನ ಗುದ್ದಾಟದಿಂದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಹೊಸ ಸಂಕಟ ಎದುರಾಗಿದೆ.

    ಶಾಸಕರು, ಸಂಸದರಿಗೆ ಗೊತ್ತಿಲ್ಲದೇ ನಾಯಕ ಆರ್ ಅಶೋಕ್ ಅವರು ಬಿಬಿಎಂಪಿ ಆಪರೇಷನ್ ಗೇಮ್ ಮಾಡ್ತಿದ್ದಾರಂತೆ. ಸಾಮ್ರಾಟ್ ಎಂದೇ ಕರೆಸಿಕೊಳ್ಳುವ ಅಶೋಕ್ ಮೇಲೆ ಡಿ.ವಿ.ಸದಾನಂದ ಗೌಡ ಕೆಂಡಾಮಂಡಲರಾಗಿದ್ದಾರೆ. ಅಲ್ಲದೇ ಅಶೋಕ್ ವಿರುದ್ಧ ಕೇಂದ್ರ ನಾಯಕರು, ಆರ್‍ಎಸ್‍ಎಸ್ ನಾಯಕರಿಗೆ ದೂರು ನೀಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಬಿಬಿಎಂಪಿ ಚುನಾವಣೆಯಲ್ಲೂ ಆರ್.ಅಶೋಕ್ `ಆಪರೇಷನ್ ಕಮಲ’ ಅಂತಾ ಆರೋಪಿಸಿ ಇದೀಗ ಈ ದೂರು ನೀಡಲಾಗಿದೆ. ಹೀಗಾಗಿ ಬಿ.ಎಸ್.ಯಡಿಯೂರಪ್ಪ ಅವರು ಡಿವಿಎಸ್ ಪರ ನಿಲ್ತಾರೋ ಅಥವಾ ಅಶೋಕ್ ಪರ ನಿಲ್ತಾರೋ ಎಂಬ ಕುತೂಹಲ ಎದುರಾಗಿದೆ. ಒಟ್ಟಿನಲ್ಲಿ ಈ ವಿಚಾರ ಸಂಬಂಧ ಇಂದು ಆರ್.ಅಶೋಕ್ ಜೊತೆ ಬಿಎಸ್‍ವೈ ಮಾತುಕತೆ ನಡೆಸುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಟ್ರೆ ಬೇರೆ ಖಾತೆ ಕೊಡಿ ಇಲ್ದೆ ಹೋದ್ರೆ ರಾಜೀನಾಮೆ ತಗೊಳ್ಳಿ- ಸಿಎಂ ಎದುರು ಸಚಿವ ಅಳಲು

    ಕೊಟ್ರೆ ಬೇರೆ ಖಾತೆ ಕೊಡಿ ಇಲ್ದೆ ಹೋದ್ರೆ ರಾಜೀನಾಮೆ ತಗೊಳ್ಳಿ- ಸಿಎಂ ಎದುರು ಸಚಿವ ಅಳಲು

    ಬೆಂಗಳೂರು: ಐಎಎಸ್ ಅಧಿಕಾರಿಯ ವರ್ತನೆಗೆ ಬೇಸತ್ತ ಸಚಿವರೊಬ್ಬರು ಕೊಟ್ರೆ ಬೇರೆ ಖಾತೆ ಕೊಡಿ ಇಲ್ಲದೇ ಹೋದ್ರೆ ರಾಜೀನಾಮೆ ತೆಗೆದುಕೊಳ್ಳಿ ಅಂತ ಹೇಳಿದ್ದಾರೆ.

    ಐಎಎಸ್ ಅಧಿಕಾರಿ ಆದಿತ್ಯ ಬಿಸ್ವಾಸ್ ಅವರ ಆಡಳಿತಕ್ಕೆ ಬೇಸತ್ತು ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಇದೀಗ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಆದಿತ್ಯ ಬಿಸ್ವಾಸ್ ನನ್ನ ಮಾತಿಗೆ ಬೆಲೆ ಕೊಡಲ್ಲ. ನನ್ನ ವಿರುದ್ಧ ಕೆಲಸ ಮಾಡುತ್ತಾರೆ. ನನ್ನ ಇಲಾಖೆಯಲ್ಲಿ ಏನು ನಡೆಯುತ್ತಿದೆ ಅನ್ನೋದೇ ನನಗೆ ಗೊತ್ತಾಗುತ್ತಿಲ್ಲ. ನನ್ನ ಮಾತಿಗೆ ಬೆಲೆ ಇಲ್ಲದ ಮೇಲೆ ಈ ಖಾತೆ ಇದ್ದರೆಷ್ಟು ಬಿಟ್ಟರೆಷ್ಟು. ಹೀಗಾಗಿ ನನ್ನ ಖಾತೆ ಬದಲಾವಣೆ ಮಾಡಿ, ಇಲ್ಲವೇ ರಾಜೀನಾಮೆ ತೆಗೆದುಕೊಳ್ಳಿ ಅಂತ ಕಾರ್ಮಿಕ ಸಚಿವರು ಸಿಎಂ ಕುಮಾರಸ್ವಾಮಿ ಮುಂದೆ ತನ್ನ ಅಳಲು ತೋಡಿಕೊಂಡಿಕೊಂಡಿದ್ದಾರೆ ಎನ್ನಲಾಗಿದೆ.

    ನನ್ನ ಖಾತೆಯೇ ನನಗೆ ಮರೆತು ಹೋಗಿದೆ. ಎಲ್ಲಾ ಟೆಂಡರ್ ಗಳನ್ನು ಅವರೇ ಕರೆಯುತ್ತಾರೆ. ಗುತ್ತಿಗೆ ಆಧಾರದ ಮೇಲೆ ಅವರೆ ಉದ್ಯೋಗ ನೇಮಕಾತಿ ಮಾಡಿಕೊಳ್ಳುತ್ತಾರೆ. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಷ್ಟೆಲ್ಲ ಇದ್ದ ಮೇಲೆ ನನಗೆ ಸಚಿವ ಸ್ಥಾನ ಯಾಕೆ ಅಂತ ಪ್ರಶ್ನಿಸಿದ ಸಚಿವರು, ಕೇವಲ ಸಹಿ ಹಾಕಿಕೊಂಡು ಕೂರಲು ಸಾಧ್ಯವಿಲ್ಲ. ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಖಾತೆ ಬದಲಾವಣೆ ಮಾಡಿ ಅಂತ ವೆಂಕಟರಮಣಪ್ಪ ಬಿಗಿ ಪಟ್ಟು ಹಿಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡ್ ಮಾಡಿದ ಸಚಿವರು, ಶಾಸಕರು

    ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡ್ ಮಾಡಿದ ಸಚಿವರು, ಶಾಸಕರು

    ತುಮಕೂರು: ಹೆಲ್ಮೆಟ್ ಇಲ್ಲದೆ ಸಚಿವರು ಹಾಗೂ ಶಾಸಕರು ತುಮಕೂರಿನ ಕುಣಿಗಲ್ ಪಟ್ಟಣದಲ್ಲಿ ತ್ರಿಬಲ್ ರೈಡ್ ಮಾಡಿದ್ದಾರೆ.

    ಆಹಾರ ಸಚಿವ ಜಮೀರ್ ಅಹಮದ್ ಹಾಗೂ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ತ್ರಿಬಲ್ ರೈಡ್ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಜಮೀರ್ ಅಹಮದ್ ಸಂಬಂಧಿಕರ ಮದುವೆಗೆ ಬಂದಿದ್ದರು. ಈ ವೇಳೆ ತ್ರಿಬಲ್ ರೈಡ್ ಮಾಡಿದ್ದಾರೆ.

    ಗ್ರಾಮದೇವತೆ ಸರ್ಕಲ್ ನಿಂದ ದಿವ್ಯಾ ಕಲ್ಯಾಣ ಮಂಟಪದವರೆಗೆ ಹೆಲ್ಮೆಟ್ ಇಲ್ಲದೆ ಜಮೀರ್ ತ್ರಿಬಲ್ ರೈಡ್ ಮಾಡಿದ್ದಾರೆ. ಜಮೀರ್ ಬುಲೆಟ್ ನಲ್ಲಿ ಶಾಸಕ ರಂಗನಾಥ್ ಹಾಗೂ ಇನ್ನೋರ್ವ ಕಾರ್ಯಕರ್ತ ಸಾಥ್ ನೀಡಿದ್ದಾರೆ. ಇದ್ನನೂ ನೋಡಿಯೂ ಪೊಲೀಸರು ನೋಡದಂತೆ ಮೂಕ ಪ್ರೇಕ್ಷಕರಾಗಿದ್ದರು.

    ಸಚಿವ ಜಮೀರ್ ಪೊಲೀಸರ ಭದ್ರತೆಯಲ್ಲೇ ಕಲ್ಯಾಣ ಮಂಟಪಕ್ಕೆ ತಲುಪಿದ್ದಾರೆ.

    ಸಚಿವರು ಹಾಗೂ ಶಾಸಕರ ಈ ನಡೆಯ ಬಗ್ಗೆ ನೀವೇನು ಹೇಳುತ್ತೀರಿ? ಕಮೆಂಟ್ ಮಾಡಿ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯದ ಒಂದೇ ಒಂದು ಹನಿನೀರೂ ಸಮುದ್ರ ಸೇರಲು ಬಿಡಲ್ಲ: ಡಿಕೆಶಿ

    ರಾಜ್ಯದ ಒಂದೇ ಒಂದು ಹನಿನೀರೂ ಸಮುದ್ರ ಸೇರಲು ಬಿಡಲ್ಲ: ಡಿಕೆಶಿ

    ಹುಬ್ಬಳ್ಳಿ: ರಾಜ್ಯದ ಒಂದೇ ಒಂದು ಹನಿ ನೀರು ಸಹ ಸಮುದ್ರ ಸೇರಲು ಬಿಡುವುದಿಲ್ಲವೆಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮಹಾದಾಯಿ ಉಗಮ ಸ್ಥಾನ ಕಣಕುಂಬಿಗೆ ಭೇಟಿ ನೀಡುತ್ತಿದ್ದೇನೆ. ಮಹಾದಾಯಿ ವಿಚಾರವಾಗಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ. ನಮ್ಮ ಪಾಲಿನ ನೀರು ಪಡೆಯಲು ಕಾನೂನಾತ್ಮಕ ಅಭಿಪ್ರಾಯ ಕೇಳಿದ್ದೇನೆ. ಮಹಾದಾಯಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು.

    ನ್ಯಾಯಾಧೀಕರಣದ ತೀರ್ಪನ್ನು ಕೇಳಿ ಸುಮ್ಮನೆ ಕುಳಿತಿಲ್ಲ. ಕಾನೂನು ತಜ್ಞರು ಹಾಗೂ ತಾಂತ್ರಿಕ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಕಾವೇರಿಯ ಬಗ್ಗೆ ಇರುವ ಕಾಳಜಿ ಮಹಾದಾಯಿಗೆ ಇಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ನಮಗೆ ಮಹಾದಾಯಿ ವಿಚಾರದಲ್ಲಿ ಸರಿಯಾದ ನ್ಯಾಯ ಸಿಕ್ಕಿಲ್ಲ. ಇಂದಿನ ಭೇಟಿ ಬಳಿಕ ಸರ್ವ ಪಕ್ಷಗಳ ಸಭೆ ಕರೆಯಲಾಗುವುದು. ಅಲ್ಲದೇ ರಾಜ್ಯದ ಒಂದೇ ಒಂದು ಹನಿ ನೀರು ಸಮುದ್ರ ಸೇರಲು ಬಿಡುವುದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಮತ ಇಲ್ಲ. ನಮ್ಮ ಶಾಸಕರು ಆಲ್ ಇಜ್ ವೆಲ್ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾವು ಮನಸ್ಸು ಮಾಡಿದ್ರೆ ಅವನನ್ನು ಕಿತ್ತುಹಾಕ್ತೀವಿ: ಎನ್.ಮಹೇಶ್‍ಗೆ ಪುಟ್ಟರಂಗಶೆಟ್ಟಿ ಎಚ್ಚರಿಕೆ

    ನಾವು ಮನಸ್ಸು ಮಾಡಿದ್ರೆ ಅವನನ್ನು ಕಿತ್ತುಹಾಕ್ತೀವಿ: ಎನ್.ಮಹೇಶ್‍ಗೆ ಪುಟ್ಟರಂಗಶೆಟ್ಟಿ ಎಚ್ಚರಿಕೆ

    – ಕಾರವಾರದಲ್ಲಿ ಮತ್ತೆ ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತಿದ ಸಚಿವ ಎನ್.ಮಹೇಶ್

    ಚಾಮರಾಜನಗರ/ಕಾರವಾರ: ಶಾಸಕರ ಬಂಡಾಯದ ಬಳಿಕ ಈಗ ಎಚ್‍ಡಿಕೆ ಸಂಪುಟದ ಮಂತ್ರಿಗಳೇ ಪರಸ್ಪರ ವಾಗ್ದಾಳಿ ನಡೆಸಿ ಸುದ್ದಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಇದಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಏಕವಚನದಲ್ಲೇ ತಿರುಗೇಟು ಕೊಟ್ಟಿದ್ದಾರೆ.

    ಅವನ್ಯಾರು ಕಾಂಗ್ರೆಸ್ಸನ್ನು ಕಿತ್ತು ಹಾಕೋದಕ್ಕೆ. ನಾವು ಮನಸ್ಸು ಮಾಡಿದರೆ ಅವನನ್ನೇ ಕಿತ್ತು ಹಾಕುತ್ತೇವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರು ಎನ್.ಮಹೇಶ್ ವಿರುದ್ಧ ಗುಡುಗಿದ್ದಾರೆ.

    ಚಾಮರಾಜನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಚಿವ ಸಂಪುಟದ ಸಹೋದ್ಯೋಗಿ ಎನ್.ಮಹೇಶ್ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು. ಸಮ್ಮಿಶ್ರ ಸರ್ಕಾರದಲ್ಲಿ 79 ಜನ ಕಾಂಗ್ರೆಸ್ ಹಾಗೂ 36 ಮಂದಿ ಜೆಡಿಎಸ್ ಶಾಸಕರಿದ್ದಾರೆ. ಅವರು ಒನ್ ಮ್ಯಾನ್ ಆರ್ಮಿ. ನಾವು ಮನಸ್ಸು ಮಾಡಿದರೆ ಸರ್ಕಾರದಿಂದ ಹೊರಗೆ ಉಳಿಯಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

    ಈಗಷ್ಟೇ ಎನ್.ಮಹೇಶ್ ಸಚಿವರಾಗಿ ನೇಮಕಗೊಂಡಿದ್ದಾರೆ. ಅದನ್ನು ಬಳಸಿಕೊಂಡು ಸಾಧನೆ ಮಾಡಲಿ. ಆದರೆ ಹೀಗೆ ಸರ್ಕಾರದ ವಿರುದ್ಧ ಮಾತನಾಡುವುದು ಸರಿಯಲ್ಲ. ಸಚಿವರ ಈ ಹೇಳಿಕೆಗಾಗಿಯೇ ಪ್ರತ್ಯೇಕ ಸುದ್ದಿಗೋಷ್ಠಿ ಕರೆದು ಸೂಕ್ತ ಉತ್ತರ ಕೊಡುತ್ತೇನೆ ಎಂದರು.

    ಕಾರವಾರದಲ್ಲಿ ಎನ್ ಮಹೇಶ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ತಾನು ದೊಡ್ಡಣ್ಣ ಎನ್ನುವ ಅಹಂನಿಂದ ಕೆಳಗಿಳಿಯಬೇಕು. ಕಾಂಗ್ರೆಸ್ಸಿಗರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂತ ಎಲ್ಲರಿಗೂ ಗೊತ್ತಿದೆ. ಅವರು ಕೆಳಗಿಳಿದಾಗ ನಾವು ಅವರ ಜೊತೆ ಕೈಜೋಡಿಸುತ್ತೇವೆ ಎಂದು ಹೇಳಿದರು.

    ಛತ್ತಿಸ್‍ಗಢದಲ್ಲಿ ಕಾಂಗ್ರೆಸ್ಸಿನೊಂದಿಗೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇತ್ತ ರಾಜ್ಯದಲ್ಲಿ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತಿದೆ. ಕೊಡಗು, ಮಲೆನಾಡು ಭಾಗದ ಹಾಗೂ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಚುನಾವಣೆ ನೀತಿ ಸಂಹಿತೆಯಿಂದಾಗಿ ಮಕ್ಕಳಿಗೆ ಸೈಕಲ್ ವಿತರಣೆ ತಡವಾಗಿದ್ದು, ಶೀಘ್ರದಲ್ಲಿ ವಿತರಿಸಲಾಗುವುದು. ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮಾತೃ ಭಾಷೆ ಜೊತೆಗೆ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸಲು ಮುಖ್ಯಮಂತ್ರಿಗಳ ಅನುಮೋದನೆ ಸಿಕ್ಕಿದ್ದು, ಸದ್ಯದಲ್ಲಿಯೇ ಜಾರಿಗೆ ತರುತ್ತೇವೆ ಎಂದರು.

    ಎನ್.ಮಹೇಶ್ ಹೇಳಿದ್ದು ಏನು?
    ಚಾಮರಾಜನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಅವರು, ಕಾಂಗ್ರೆಸ್ ಗಿಡವನ್ನು ಕಡಿಯುವ ಕೆಲಸವನ್ನು ಮಾಡಿದ್ದೇವೆ ಅಂತ ಕಾಂಗ್ರೆಸ್ ವಿರುದ್ಧ ವಿಡಂಬನಾತ್ಮಕ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಗಿಡ ತುಂಬಾ ಅಪಾಯಕಾರಿ, ಹೀಗಾಗಿ ಅದನ್ನು ಕಡಿಯುವ ಕೆಲಸ ಮಾಡಿದ್ದೇವೆ ಎಂದರು. ಆಗ ಕಾರ್ಯಕರ್ತರು ಸಾರ್ ಅದು ಪಾರ್ಥೆನಿಯಂ ಗಿಡ ಎಂದಿದ್ದಾರೆ. ಆದರೂ ಸಹ ಅದು ಕಾಂಗ್ರೆಸ್ ಗಿಡ ಅದನ್ನು ಕಿತ್ತು ಹಾಕಿದ್ದೀವಿ ಎಂದು ಹೇಳಿಕೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಹೊಡದ್ರೆ ಹುಲಿ ಹೊಡಿಬೇಕು, ಕತ್ತೆಯನ್ನಲ್ಲ ಅನ್ನೋದ್ನ ಜಿಟಿಡಿ ಮಾಡಿ ತೋರ್ಸಿದ್ದಾರೆ: ಪ್ರತಾಪ್ ಸಿಂಹ

    ಹೊಡದ್ರೆ ಹುಲಿ ಹೊಡಿಬೇಕು, ಕತ್ತೆಯನ್ನಲ್ಲ ಅನ್ನೋದ್ನ ಜಿಟಿಡಿ ಮಾಡಿ ತೋರ್ಸಿದ್ದಾರೆ: ಪ್ರತಾಪ್ ಸಿಂಹ

    ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಿದ್ದಕ್ಕೆ, ಹೊಡೆದರೆ ಹುಲಿಯನ್ನೇ ಹೊಡೆಯಬೇಕು, ಕತ್ತೆಯನ್ನಲ್ಲ ಎನ್ನುವುಂತೆ ಮಾಡಿ ತೋರಿಸಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡರನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಶಂಸಿಸಿದ್ದಾರೆ.

    ನಗರದಲ್ಲಿ ರೈಲ್ವೆ ನಿಲ್ದಾಣ ಸ್ಥಳ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಸಚಿವ ಹಾಗೂ ನಮ್ಮ ನಿಮ್ಮಲ್ಲೆರ ಅಚ್ಚುಮೆಚ್ಚಿನ ನಾಯಕರು ಜಿ.ಟಿ.ದೇವೇಗೌಡರು. ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಶಕ್ತಿ ಏನು ಎಂಬುದನ್ನು ತೋರಿಸಿದ್ದಾರೆ. ನಮ್ಮ ಉತ್ತರ ಕರ್ನಾಟಕ ಮಾತಿನ ಶೈಲಿಯಲ್ಲಿ ಹೇಳಬೇಕಾದರೆ, ಹೊಡೆದರೆ ಹುಲಿಯನ್ನೇ ಹೊಡಿಬೇಕು ಕತ್ತೆಯನ್ನಲ್ಲ ಎನ್ನುವ ಮಾತಿನ ಹಾಗೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಸಿದ್ದರಾಮಯ್ಯನವರನ್ನೇ ಸೋಲಿಸಿದ್ದಾರೆ ಎನ್ನುವ ಮೂಲಕ ಜಿಟಿಡಿಯವರ ಗೆಲುವಿನ ಪರಿಯನ್ನು ಹೊಗಳಿದರು.

    ಸಂಸದ ಪ್ರತಾಪ್ ಸಿಂಹ ಚುನಾವಣೆ ಮುಗಿದರೂ ಸಹ ಫಲಿತಾಂಶದ ಗುಂಗಲ್ಲಿ ಸಿದ್ದರಾಮಯ್ಯನವರ ಸೋಲಿನ ಬಗೆಯನ್ನು ವ್ಯಂಗ್ಯವಾಡುವ ಮೂಲಕ ಮತ್ತೊಮ್ಮೆ ಟಾಂಗ್ ನೀಡಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕದ ಮಾತಿನ ಶೈಲಿಯಲ್ಲೇ ಅವರನ್ನು ಕಿಚಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಡಿನ ಜನತೆ ಬಿಜೆಪಿ ವಿರುದ್ಧ ದಂಗೆ ಏಳಬೇಕು: ಸಿಎಂ ಎಚ್‍ಡಿಕೆ

    ನಾಡಿನ ಜನತೆ ಬಿಜೆಪಿ ವಿರುದ್ಧ ದಂಗೆ ಏಳಬೇಕು: ಸಿಎಂ ಎಚ್‍ಡಿಕೆ

    ಹಾಸನ: ಜನಪರ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿರುವ ಬಿಜೆಪಿ ವಿರುದ್ಧ ನಾಡಿನ ಜನತೆ ದಂಗೆ ಏಳಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ತೋಟಿ ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಜನಪರ ಸರ್ಕಾರವನ್ನು ಉರುಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಇಂತವರ ವಿರುದ್ಧ ನಾಡಿನ ಜನ ದಂಗೆ ಏಳಬೇಕು. ಈ ನಾಡಿನ ಜನರಿಗೆ ಈ ಪುಣ್ಯ ಭೂಮಿಯಿಂದಲೇ ನಾನು ದಂಗೆಗೆ ಕರೆ ನೀಡುತ್ತೇನೆ. ಅಷ್ಟೇ ಅಲ್ಲದೇ ನನ್ನಿಂದಲೂ ಏನದರೂ ತಪ್ಪಾಗಿದ್ದರೆ ಅಥವಾ ನಾನೇದರೂ ನಿಮಗೆ ದ್ರೋಹವನ್ನು ಮಾಡಿದ್ದರೆ, ಈ ನಾಡಿನ ಜನತೆ ನನ್ನ ವಿರುದ್ಧವೂ ದಂಗೆ ಏಳಿ ಎಂದು ಹೇಳಿದ್ದಾರೆ.

    ನಾನು ಮಜಾ ಮಾಡಲು ಮುಖ್ಯಮಂತ್ರಿ ಆಗಿಲ್ಲ. ನಾಡಿನ ಯುವಕರು, ಮಹಿಳೆಯರು ಹಾಗೂ ಅಂಗವಿಕಲರು ಸ್ವಾವಲಂಬಿ ಜೀವನ ನಡೆಸಲು ಶಾಶ್ವತ ವ್ಯವಸ್ಥೆ ಮಾಡುವುದು ನನ್ನ ಕನಸಾಗಿದೆ. ಯಡಿಯೂರಪ್ಪ ಸರ್ಕಾರ ಟೇಕಾಫ್ ಆಗ್ತಿಲ್ಲ ಅಂತ ಹೇಳಿಕೆ ನೀಡುತ್ತಿದ್ದಾರೆ. ಅವರು ಸುಮ್ಮನೇ ಇದ್ದರೆ ಟೇಕಾಫ್ ಆಗುತ್ತೆ. ಈಗಾಗಲೇ ನಾವು ರೈತರ 45 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದೇವೆ. ಇನ್ನು ಸ್ವಲ್ಪ ದಿನಗಳಲ್ಲಿ ರಾಜ್ಯದ ಸಹಕಾರಿ ಬ್ಯಾಂಕುಗಳಲ್ಲಿರುವ ರೈತರ ಒಂದು ಲಕ್ಷದ ವರೆಗಿನ ಸುಮಾರು 9,450 ಕೋಟಿ ರೂಪಾಯಿ ಚಾಲ್ತಿ ಸಾಲಮನ್ನಾಗೆ ಆದೇಶ ಸಿದ್ದವಾಗಿದ್ದು, ಶೀಘ್ರದಲ್ಲಿಯೇ ಆದೇಶ ಹೊರಬೀಳಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

    ಪತ್ರಕರ್ತ ಮಿತ್ರರಿಗೆ ನನ್ನ ಮೇಲೆ ಪ್ರೀತಿ ಇದೆ. ಆದರೆ ಮಾಧ್ಯಮಗಳಲ್ಲಿ ಕೆಲವರ ಮೇಲೆ ಬೇರೆ ಬೇರೆ ರೀತಿಯ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಅವರು ಸದಾ ಸರ್ಕಾರ ಬೀಳುತ್ತದೆ ಎನ್ನುವ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ಮಾಧ್ಯಮಗಳು ಮೊದಲು ನನ್ನ ಕಾರ್ಯಕ್ರಮವನ್ನು ಅರ್ಥ ಮಾಡಿಕೊಳ್ಳಬೇಕು. ನನ್ನ ಶಾಸಕರನ್ನು ಯಾರೂ ಸಹ ಹಣ ಕೊಟ್ಟು ಕೊಂಡುಕೊಂಡು ಸರ್ಕಾರ ಉರುಳಿಸಲು ಸಾಧ್ಯವಿಲ್ಲವೆಂದು ಹೇಳಿದರು.

    ಇದಾದ ಬಳಿಕ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪ್ರತಿನಿಧಿಸುವ ಚನ್ನರಾಯಪಟ್ಟಣದ ಉದಯಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಕುಟುಂಬದ ಮೇಲೆ ಜಿಲ್ಲೆಯ ಋಣಭಾರ ಬಹಳ ಇದೆ. ದೇವೇಗೌಡರು ತಮ್ಮ ಜೀವನದ ಬಹುಕಾಲವನ್ನು ವಿರೋಧ ಪಕ್ಷದಲ್ಲೇ ಕಳೆದಿದ್ದಾರೆ. ಅವರು ಕೇವಲ ನಾಲ್ಕುವರೆ ವರ್ಷ ಮಾತ್ರ ಅಧಿಕಾರದಲ್ಲಿದ್ದರು. ಅವರು ಹೆಚ್ಚು ಕಾಲ ವಿರೋಧ ಪಕ್ಷದಲ್ಲಿದ್ದರೂ ಸಹ ಜಿಲ್ಲೆಯ ಜನತೆ ಅವರೊಂದಿಗೆ ಇದ್ದಾರೆ ಎಂದು ಸಂತೋಷ ಹಂಚಿಕೊಂಡರು.

    ನಮ್ಮ ರೇವಣ್ಣನವರಿಗೆ ಆತುರ ಜಾಸ್ತಿ. ಕಳೆದ ಹತ್ತು ವರ್ಷಗಳಲ್ಲಿ ಅವರ ಜಿಲ್ಲೆ ಹಿಂದುಳಿದಿದೆ ಎನ್ನುವ ಬೇಸರ ಅವರಲ್ಲಿದೆ. ಹೀಗಾಗಿ ಅವರು ಒಂದೇ ರಾತ್ರಿಯಲ್ಲಿ ಎಲ್ಲಾ ಕೆಲಸಗಳು ಆಗಬೇಕು ಎನ್ನುವ ಹುಚ್ಚು ಕಲ್ಪನೆಯಲ್ಲಿದ್ದಾರೆ. ಆದರೆ ಅವರೂ ಸಹ ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಜಿಲ್ಲೆಯ ಅಭಿವೃದ್ಧಿಗೆ ರೇವಣ್ಣನವರು ಅತಿಯಾದ ಉತ್ಸುಕತೆಯನ್ನು ಹೊಂದಿದ್ದಾರೆ ಎನ್ನುವ ಮೂಲಕ ಪ್ರಶಂಸೆ ತೋರಿಸಿದರು.

    ಈ ಹಿಂದೆ ಬಿಜೆಪಿ ಜೊತೆಯಲ್ಲಿ ಮೈತ್ರಿಯಲ್ಲಿದ್ದಾಗಲೂ ಒತ್ತಡ ಅನುಭವಿಸಿದ್ದೆ. ಈಗಲೂ ಸಹ ಒತ್ತಡದಿಂದಲೇ ಕಾರ್ಯನಿರ್ವಹಿಸುತ್ತಿದ್ದೇನೆ. ಆದರೆ ನನ್ನ ರಾಜಕೀಯ ಒತ್ತಡದ ಕಾರಣದಿಂದ ನನ್ನ ಜವಾಬ್ದಾರಿಯಿಂದ ನಾನು ಎಂದಿಗೂ ಹಿಂದೆ ಸರಿಯುವವನಲ್ಲ. ಬಿಜೆಪಿಯ ಮಹಾನ್ ನಾಯಕರು ಸರ್ಕಾರ ಟೇಕಾಫ್ ಆಗಿಲ್ಲ ಅಂತಾರೆ. ಅಲ್ಲದೇ ಈ ರಾಜ್ಯದ ಖಜಾನೆಯನ್ನು ಅಪ್ಪ-ಮಕ್ಕಳು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ನೀವೇ ಹೇಳಿ ಯಾರಾದರೂ ಸಭ್ಯಸ್ಥರು ಈ ಮಾತನ್ನು ಹೇಳಿದ್ದರೆ, ನಾವು ಕೂಡ ಯೋಚನೆ ಮಾಡಬಹುದಿತ್ತು. ಆದರೆ ಮಾಡಬಾರದ್ದನ್ನು ಮಾಡಿದವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಎಸ್‍ವೈ ವಿರುದ್ಧ ಕಿಡಿಕಾರಿದರು.

    ತಪ್ಪು ಮಾಡಿದ್ದವರು ಯಾರೇ ಆಗಲಿ ಅದು ನಮ್ಮ ಕುಟುಂದವರೇ ಇರಲಿ, ಇಲ್ಲಾ ಸಹೋದರನೇ ಇರಲಿ, ನಾನು ಯಾರಿಗೂ ರಾಜಿಯಾಗುವವನಲ್ಲ. ಕಾಂಗ್ರೆಸ್ ಮಾಜಿ ಸಚಿವ ಎ.ಮಂಜುರವರು ರೇವಣ್ಣನವರ ವಿರುದ್ಧ ಭೂ-ಕಬಳಿಕೆ ಆರೋಪದ ಬಗ್ಗೆ ಈಗಾಗಲೇ ಮಾಹಿತಿ ಪಡೆದುಕೊಂಡಿದ್ದೇನೆ. ಶೀಘ್ರವೇ ಇದಕ್ಕೆ ಅಧಿಕಾರಿಗಳೇ ಉತ್ತರ ನೀಡುತ್ತಾರೆ. ರಾಜ್ಯದ ಖಜಾನೆಯನ್ನು ಸುಭದ್ರವಾಗಿಟ್ಟು ಆಡಳಿತ ನಡೆಸಲು ನಾನು ಮುಖ್ಯಮಂತ್ರಿಯಾಗಿರುವುದು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=hoxHPHIYsCA

  • ನ್ಯಾಯ ಸಿಗದಿದ್ದರೆ ನನ್ನ ದಾರಿ ನನಗೆ: ಹೈಕಮಾಂಡ್ ವಿರುದ್ಧ ಎಂಟಿಬಿ ಗುಡುಗು

    ನ್ಯಾಯ ಸಿಗದಿದ್ದರೆ ನನ್ನ ದಾರಿ ನನಗೆ: ಹೈಕಮಾಂಡ್ ವಿರುದ್ಧ ಎಂಟಿಬಿ ಗುಡುಗು

    ಆನೇಕಲ್: ಮಂತ್ರಿ ಸ್ಥಾನ ಸಿಗದಿದ್ದರೆ ರಾಜೀನಾಮೆ ಅಥವಾ ಪಕ್ಷ ಬದಲಾವಣೆ ಮಾಡುವಂತೆ ಕಾರ್ಯಕರ್ತರು ಸೂಚಿಸಿದರೆ ಅದಕ್ಕೆ ನಾನು ಸಿದ್ದವೆಂದು ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು ಮಂತ್ರಿ ಮಂಡಲದ ವಿಸ್ತರಣೆ ಮಾಡುವಾಗ ನಿಮಗೂ ಯಾವುದಾದರೂ ಒಂದು ಅವಕಾಶ ಕೊಡುತ್ತೇವೆ ಎಂದು ಹೈಕಮಾಂಡ್ ಹೇಳಿದರು. ವಿದೇಶದಿಂದ ಬಂದ ಬಳಿಕ ಸಿದ್ದರಾಮಯ್ಯ ಅವರು ಏನೂ ಮಾತನಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನನ್ನೊಂದಿಗೆ ಮಾತಾಡಿದ್ದಾರೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ನ್ಯಾಯ ಸಿಗದಿದ್ದರೆ ನನ್ನ ದಾರಿ ನನಗೆ ಎಂದು ಗುಡುಗಿದ್ದಾರೆ.

    ದಿನೇಶ್ ಗುಂಡೂರಾವ್ ಅವರು ಸಂಧಾನ ಮಾಡುತ್ತಿದ್ದು ಇವತ್ತು ಕೂಡ ಮಾತನಾಡಲು ಕರೆದಿದ್ದಾರೆ ಹೀಗಾಗಿ ಹೋಗುತ್ತಿದ್ದೇನೆ. ಸೋಮವಾರ ಸಿದ್ದರಾಮಯ್ಯ, ಜಾರಕಿಹೊಳಿ, ಸುಧಾಕರ್ ಅವರೆಲ್ಲಾ ಮಾತುಕತೆ ಮಾಡಿದ್ದಾರೆ. ಆದರೆ ಏನೂ ಮಾಡಿದ್ದಾರೆ ಎಂಬುದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ ಎಂದರು.

    ನಮಗೂ ನಮ್ಮ ಪಕ್ಷದ ಕಾರ್ಯಕರ್ತರಿಗೆ ಬೇಸರ ಇದೆ. ಏಕೆಂದರೆ ನಾಲ್ಕು ಬಾರಿ ಹೊಸಕೋಟೆಯಲ್ಲಿ ಸ್ಪರ್ಧಿಸಿದ್ದು, 3 ಬಾರಿ ಗೆದ್ದಿದ್ದೇನೆ. ಜನರು ನನ್ನನ್ನು ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ನನಗಿಂತ ಚಿಕ್ಕವರೆಲ್ಲಾ ಕಾಂಗ್ರೆಸ್ ನಲ್ಲಿ ಮಂತ್ರಿ ಗಳಾಗಿದ್ದಾರೆ. 2 ಬಾರಿ ಶಾಸಕರಾದವರು 2 ಬಾರಿ ಮಂತ್ರಿಗಳಾಗಿದ್ದಾರೆ. ಜೆಡಿಎಸ್ ನಿಂದ ಬಂದವರು ಕಾಂಗ್ರೆಸ್ ನಲ್ಲಿ ಮಂತ್ರಿಗಳಾಗಿದ್ದಾರೆ. ನಾನು 35 ವರ್ಷಗಳಿಂದ ಪ್ರಾಮಾಣಿಕವಾಗಿ ನಗರ ಸಭೆ ಸದಸ್ಯನಾಗಿ ಕೆಲಸ ಮಾಡಿದ್ದರಿಂದ ಏನೋ ಕಾಂಗ್ರೆಸ್ ನಿರ್ಲಕ್ಷ್ಯ ಮಾಡುತ್ತಿದೆ. ಇದರಿಂದ ಕಾರ್ಯಕರ್ತರೆಲ್ಲ ಬೇಸರಗೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಕಲೇಶಪುರ ಶಾಸಕ ಕುಮಾರಸ್ವಾಮಿ ಪತ್ನಿಯಿಂದ ಆಪರೇಷನ್ ಕಮಲದ ರಹಸ್ಯ ಬಯಲು

    ಸಕಲೇಶಪುರ ಶಾಸಕ ಕುಮಾರಸ್ವಾಮಿ ಪತ್ನಿಯಿಂದ ಆಪರೇಷನ್ ಕಮಲದ ರಹಸ್ಯ ಬಯಲು

    ಹಾಸನ: ಸಕಲೇಶಪುರ ಜೆಡಿಎಸ್ ಶಾಸಕರಾಗಿರುವ ನನ್ನ ಪತಿ ಹೆಚ್.ಕೆ. ಕುಮಾರಸ್ವಾಮಿ ಅವರಿಗೆ ಬಿಜೆಪಿ ಆಫರ್ ಮಾಡಿತ್ತು ಎಂದು ಪತ್ನಿ ಚಂಚಲ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪತ್ನಿ ಚಂಚಲ ಕುಮಾರಸ್ವಾಮಿ ಅವರು, ಗಣೇಶ ಚತುರ್ಥಿ ಹಬ್ಬದ ದಿನವೇ ಉದಯ್ ಗೌಡ ಅವರು ಶಾಸಕ ಹೆಚ್.ಕೆ. ಕುಮಾರಸ್ವಾಮಿ ಮನೆಗೆ ಬಂದು  ಡೀಲ್ ಮಾಡಲು ಯತ್ನ ಮಾಡಿದ್ದರು. ಇಷ್ಟು ವರ್ಷ ಪಕ್ಷದಲ್ಲಿದ್ದರೂ ಏನೂ ಸ್ಥಾನಮಾನ ಸಿಕ್ಕಿಲ್ಲ. ನೀವು ಬಿಜೆಪಿ ಸೇರಿ ನಿಮ್ಮನ್ನ ನಾವೇ ಗೆಲ್ಲಿಸಿಕೊಂಡು ಬರುತ್ತೇವೆ. ನಿಮ್ಮನ್ನ ಸಚಿವರನ್ನಾಗಿ ಮಾಡುತ್ತೇವೆ. ಬಿಜೆಪಿಗೆ ಬನ್ನಿ ಎಂದು ಆಫರ್ ನೀಡಿದ್ದಾಗಿ ಹೇಳಿದ್ದಾರೆ.

    ನಮ್ಮ ಮನೆಗೂ ಬಂದಾಗ, ಪತಿ ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡುವುದಿಲ್ಲ. ದೇವೇಗೌಡರ ಮೇಲೆ ಗೌರವವಿದೆ. ನಿಮ್ಮ ಜೊತೆ ಬರಲ್ಲ. ನಿಮಗೆ ಬರುತ್ತಾರೆ ಅಂತ ಯಾರೋ ತಪ್ಪು ಮಾಹಿತಿ ಹೇಳಿದ್ದಾರೆ. ನಾವು ಪಕ್ಷ ಬಿಟ್ಟು ಬರುವುದಿಲ್ಲ. ಅದನ್ನು ಕನಸಲ್ಲೂ ನೆನೆಸಿಕೊಳ್ಳಬೇಡಿ ಎಂದು ಹೇಳಿದೆ. ಬಳಿಕ ಅವರು ವಾಪಸ್ ತೆರಳಿದರು ಎಂದು ಚಂಚಲ ಕುಮಾರಸ್ವಾಮಿ ವಿವರಿಸಿದರು.

    ಕೆಲವು ದಿನಗಳಿಂದ ಬಿಜೆಪಿಯ ಮೂವರು ಕಿಂಗ್ ಪಿನ್ ಗಳಿಂದ ಶಾಸಕರಿಗೆ ಗಾಳ ಹಾಕಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆರೋಪ ಮಾಡಿದ್ದರು. ಶಾಸಕ ಕುಮಾರಸ್ವಾಮಿಗೆ ಬಿಜೆಪಿ ಕಿಂಗ್ ಪಿನ್ ಉದಯ್ ಗೌಡ ಅವರು ಸಚಿವ ಸ್ಥಾನ ಮತ್ತು 30 ಕೋಟಿ ರೂ. ಆಫರ್ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಂಡೆದ್ದ ರಮೇಶ್ ಜಾರಕಿಹೊಳಿಗೆ `ಕೈ’ ಶಾಕ್!

    ಬಂಡೆದ್ದ ರಮೇಶ್ ಜಾರಕಿಹೊಳಿಗೆ `ಕೈ’ ಶಾಕ್!

    ಬೆಂಗಳೂರು: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿಗೆ ಕೈ ಮುಖಂಡರು ಶಾಕ್ ನೀಡಲು ಮುಂದಾಗಿದ್ದು, ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಸಹೋದರ ಸತೀಶ್ ಜಾರಕಿಹೊಳಿ ಅವರಿಗೆ ನೀಡಲು ಮುಂದಾಗಿದೆ ಎಂಬ ಮಾಹಿತಿ ಲಭಿಸಿದೆ.

    ಕಾಂಗ್ರೆಸ್ ನಾಯಕರ ಈ ತೀರ್ಮಾನಕ್ಕೆ ಪ್ರಮುಖ ಕಾರಣವೂ ಇದ್ದು, ರಮೇಶ್ ಜಾರಕಿಹೊಳಿ ಅವರೊಂದಿಗೆ ಬಂಡಾಯದ ಸಮಯದಲ್ಲಿ ಸಮಾಧಾನದಿಂದ ಮಾತುಕತೆ ನಡೆಸುವುದು ಕಷ್ಟಸಾಧ್ಯ. ಅಲ್ಲದೇ ಅವರ ನೇರ ನುಡಿ ಸರ್ಕಾರದ ಮೇಲೆ ಹೆಚ್ಚು ಪ್ರಭಾವ ಬೀರುವ ಸಾಧ್ಯತೆಯಿದೆ. ಹೀಗಾಗಿ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಿದರೆ ಎಲ್ಲಾ ಸಮಸ್ಯೆಗಳು ಬಗೆಹರಿಸಬಹುದು ಎನ್ನುವ ನಿರ್ಧಾರಕ್ಕೆ ಕಾಂಗ್ರೆಸ್ ಬಂದಿದೆ ಎನ್ನಲಾಗಿದೆ.

    ರಮೇಶ್ ಜಾರಕಿಹೊಳಿ ಬಂಡಾಯ ಮುಂದಾಳತ್ವ ವಹಿಸಿ ಹಲವು ಶಾಸಕರನ್ನು ತಮ್ಮತ್ತ ಸೆಳೆದಿದ್ದರು. ಅಲ್ಲದೇ ಹಲವು ಅತೃಪ್ತರು ಕೂಡ ರಮೇಶ್ ಜಾರಕಿಹೊಳಿ ನಿರ್ಧಾರಕ್ಕೆ ತಾವು ಬದ್ಧ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಇದನ್ನು ಗಮನಿಸಿರುವ ಕಾಂಗ್ರೆಸ್ ಮುಖಂಡರು ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಿದರೆ ಅತೃಪ್ತರ ಬಣವನ್ನು ತಣಿಸಲು ಸಾಧ್ಯ. ಅಲ್ಲದೇ ಸತೀಶ್ ಜಾರಕಿಹೊಳಿ ಅವರು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡುತ್ತಾರೆ ಎನ್ನುವ ಅಭಿಪ್ರಾಯಕ್ಕೆ ಬಂದಿದೆ ಎನ್ನಲಾಗಿದೆ.

     

    ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವ ಸ್ಥಾನ ಹೊಂದಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶ ತಪ್ಪಿಸಿ ಸಮ್ಮಿಶ್ರ ಸರ್ಕಾರದಲ್ಲಿ ಸ್ಥಾನ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಸದ್ಯ ಕೈ ನಾಯಕರ ಈ ನಡೆಯೇ ಅವರಿಗೆ ಮುಳುವಾಗಿದ್ದ ಕಾರಣ ಸಚಿವ ಸ್ಥಾನ ಬದಲಾಗುವ ಸಾಧ್ಯತೆ ಇದೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv