Tag: minister

  • ಮೋದಿ ಕಾರ್ಯಕ್ರಮದಲ್ಲಿ ಸಚಿವನಿಂದ ಮಹಿಳಾ ಮಂತ್ರಿಗೆ ಲೈಂಗಿಕ ಕಿರುಕುಳ!

    ಮೋದಿ ಕಾರ್ಯಕ್ರಮದಲ್ಲಿ ಸಚಿವನಿಂದ ಮಹಿಳಾ ಮಂತ್ರಿಗೆ ಲೈಂಗಿಕ ಕಿರುಕುಳ!

    – ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯ
    – ವಿಡಿಯೋವನ್ನು ತಿರುಚಲಾಗಿದೆ ಎಂದ ಬಿಜೆಪಿ

    ಅಗರತಲಾ: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿಯೇ ಸಚಿವರೊಬ್ಬರು ಮಹಿಳಾ ಸಚಿವೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯ ಕೇಳಿಬರುತ್ತಿದೆ.

    ಬಿಜೆಪಿ ಸಚಿವ ಮನೋಜ್ ಕಾಂತಿ ಡೆಬ್ ವೇದಿಕೆ ಮೇಲೆಯೇ ಬುಡಕಟ್ಟು ಜನಾಂಗಕ್ಕೆ ಸೇರಿರುವ ಸಮಾಜ ಕಲ್ಯಾಣ ಹಾಗೂ ಸಾಮಾಜಿಕ ಶಿಕ್ಷಣ ಸಚಿವೆ ಶಾಂತನಾ ಚಕ್ಮಾ ಸೊಂಟ ಮುಟ್ಟಿದ್ದಾರೆ. ಸಚಿವರ ಅಸಭ್ಯ ವರ್ತನೆ ವಿರುದ್ಧ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳು ಆಕ್ರೋಶ ಹೊರಹಾಕಿವೆ.

    ಬಿಜೆಪಿ ಸರ್ಕಾರವಿರುವ ತ್ರಿಪುರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 9ರಂದು ಕೆಲವು ಯೋಜನೆಗಳ ಉದ್ಘಾಟನೆ ನೆರವೇರಿಸಿದರು. ಪ್ರಧಾನಿ ಮೋದಿ ಅವರ ಬಲ ಎದುರಿಗೆ ನಿಂತಿದ್ದ ಮನೋಜ್ ಕಾಂತಿ ಡೆಬ್ ಅವರು ಪಕ್ಕದಲ್ಲಿ ನಿಂತಿದ್ದ ಸಚಿವೆಯ ಸೊಂಟ ಹಿಡಿದಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಸಚಿವೆ ಮನೋಜ್ ಕಾಂತಿ ಡೆಬ್ ಅವರಿಂದ ತಪ್ಪಿಸಿಕೊಂಡಿದ್ದಾರೆ.

    ವೇದಿಕೆಯ ಮೇಲೆ ಸಚಿವರು ಸೊಂಟ ಹಿಡಿಯುತ್ತಿರುವ ದೃಶ್ಯವು ಸ್ಥಳೀಯ ಮಾಧ್ಯಮ ಹಾಗೂ ಕಾರ್ಯಕ್ರದಲ್ಲಿ ಸೇರಿದ್ದ ಜನರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಚಿವರ ನಡೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಪ್ರಧಾನಿ ನರೇಂದ್ರ ಮೋದಿ, ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ಡೆಬ್ ಹಾಗೂ ಸಾರ್ವಜನಿಕರು ಸೇರಿದ್ದ ಕಾರ್ಯಕ್ರದಲ್ಲೇ ಸಚಿವ ಮನೋಜ್ ಕಾಂತಿ ಡೆಬ್ ಮಹಿಳಾ ಮಂತ್ರಿಯ ಸೊಂಟ ಮುಟ್ಟಿದ್ದಾರೆ. ಮಹಿಳೆಯನ್ನು ಅವಮಾನಿಸಿದ ಹಾಗೂ ಅಸಭ್ಯವಾಗಿ ಸ್ಪರ್ಶ ಮಾಡಿದ ಸಚಿವರನ್ನು ಬಂಧಿಸಬೇಕು ಎಂದು ಎಡಪಂಥೀಯ ಸಂಚಾಲಕ ಬಿಜಾನ್ ಧಾರ್ ಒತ್ತಾಯಿಸಿದ್ದಾರೆ.

    ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಕೇವಲ 11 ತಿಂಗಳು ಕಳೆದಿದೆ. ಇಷ್ಟು ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸಚಿವರಿಗೆ ಶಿಕ್ಷಯಾಗಲೇಬೇಕು ಎಂದು ಬಿಜಾನ್ ಧಾರ್ ಆಗ್ರಹಿಸಿದ್ದಾರೆ.

    ಬಿಜೆಪಿ ಸಚಿವ ವಿರುದ್ಧ ವಿವಿಧ ಪಕ್ಷಗಳು ಹಾಗೂ ಸ್ಥಳೀಯ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ತ್ರಿಪುರಾ ವಿರೋಧ ಪಕ್ಷವು ಸಚಿವರ ವಿರುದ್ಧ ದೂರು ನೀಡಿದೆ.

    ಈ ಕುರಿತು ತ್ರಿಪುರಾ ಬಿಜೆಪಿ ವಕ್ತಾರ ನಬೆಂದೂ ಭಟ್ಟಾಚಾರ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಆಡಳಿತ ಪಕ್ಷ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ಸಚಿವರು ಈ ರೀತಿ ನಡೆದುಕೊಂಡಿಲ್ಲ. ವಿರೋಧ ಪಕ್ಷಗಳು ವಿಡಿಯೋವನ್ನು ತಿರುಚಿವೆ ಎಂದು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಠಕ್ಕೆ 1 ಕೋಟಿ ಬಿಟ್ರೆ ನನ್ನ ಕ್ಷೇತ್ರಕ್ಕೆ ಏನೂ ಘೋಷಣೆಯಾಗಿಲ್ಲ- ಎಚ್‍ಡಿಕೆ ವಿರುದ್ಧ ಜೆಡಿಎಸ್ ಸಚಿವ ಸಿಟ್ಟು

    ಮಠಕ್ಕೆ 1 ಕೋಟಿ ಬಿಟ್ರೆ ನನ್ನ ಕ್ಷೇತ್ರಕ್ಕೆ ಏನೂ ಘೋಷಣೆಯಾಗಿಲ್ಲ- ಎಚ್‍ಡಿಕೆ ವಿರುದ್ಧ ಜೆಡಿಎಸ್ ಸಚಿವ ಸಿಟ್ಟು

    ತುಮಕೂರು: ಬಜೆಟ್‍ನಲ್ಲಿ ಗುಬ್ಬಿ ಕ್ಷೇತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಘೋಷಣೆ ಆಗದಿದ್ದುದರಿಂದ ಸಣ್ಣಕೈಗಾರಿಕಾ ಸಚಿವ ಎಸ್.ಆರ್ ಶ್ರೀನಿವಾಸ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ವಿವಿಧ ಯೋಜನೆಗಳಿಗೆ ಸುಮಾರು 400 ಕೋಟಿ ರೂ ಬೇಡಿಕೆ ಇಟ್ಟಿದ್ದೆ. ಆದ್ರೆ ಬಸವಬೃಂಗ ಮಠಕ್ಕೆ 1 ಕೋಟಿ ಅನುದಾನ ಘೋಷಣೆ ಮಾಡಿರುವುದು ಬಿಟ್ಟರೆ ಇನ್ನು ಯಾವುದೇ ಘೋಷಣೆ ಆಗಿಲ್ಲ. ಇದರಿಂದ ನನಗೆ ನೋವಾಗಿದೆ. ಮನಸ್ಸಿನ ಒಳಗಡೆ ತುಂಬಾ ನೋವಿದೆ ಎಂದು ಹೇಳಿದ್ದಾರೆ.

    ಹೇಮಾವತಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಬೇಡಿಕೆ ಇಟ್ಟಿದ್ದೆ. ಅದೂ ಕೈಗೂಡಲಿಲ್ಲ. ಇದರ ಪರಿಣಾಮ ನಾನು ಅನುಭಿಸಬೇಕಾಗುತ್ತದೆ. ಮುಂದಿನ ದಿನದಲ್ಲಿ ಅದರ ಪರಿಣಾಮ ಜನ ನನಗೆ ಕಲಿಸ್ತಾರೆ ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

    ಸಿಎಂ ಕರೆ ಸ್ವೀಕರಿಸಿಲ್ಲ ಅನ್ನೋದು ಸುಳ್ಳು. ನಿನ್ನೆ ಸಿಎಂ ಕರೆದ ಮೀಟಿಂಗ್‍ಗೆ ಹೋಗಲು ಸಾಧ್ಯವಾಗಲಿಲ್ಲ. ಮುಂದಿನ ದಿನದಲ್ಲಿ ಸಿಎಂ ನನ್ನ ಎಲ್ಲಾ ಬೇಡಿಕೆ ಈಡೇರಿಸ್ತಾರೆ ಅನ್ನೊ ಭರವಸೆ ಇದೆ. ಕ್ಷೇತ್ರದಲ್ಲಿ ಕೆಲಸ ಇತ್ತು ಹಾಗಾಗಿ ಹೋಗಲು ಸಾಧ್ಯವಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ವೈ ನಿವೃತ್ತಿಗೆ ಡಿಸಿಎಂ ಆಗ್ರಹ- ಇತ್ತ ಆತ್ಮಸಾಕ್ಷಿಗೆ ಡಿಕೆಶಿ ಅಭಿನಂದನೆ

    ಬಿಎಸ್‍ವೈ ನಿವೃತ್ತಿಗೆ ಡಿಸಿಎಂ ಆಗ್ರಹ- ಇತ್ತ ಆತ್ಮಸಾಕ್ಷಿಗೆ ಡಿಕೆಶಿ ಅಭಿನಂದನೆ

    ತುಮಕೂರು/ಬೆಂಗಳೂರು: ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿಗೆ ಪಡೆದುಕೊಳ್ಳಲಿ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಆಗ್ರಹಿಸಿದ್ದಾರೆ. ಇತ್ತ ತನ್ನ ತಪ್ಪೊಪ್ಪಿಕೊಂಡ ಬಿಎಸ್‍ವೈ ಅವರನ್ನು ಸಚಿವ ಡಿಕೆ ಶಿವಕುಮಾರ್ ಅಭಿನಂದಿಸಿದ್ದಾರೆ.

    ತುಮಕೂರಿನಲ್ಲಿ ಮಾತನಾಡಿದ ಡಿಸಿಎಂ, ಆಡಿಯೋ ಸಾಬೀತಾದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸೋದಾಗಿ ಹೇಳಿದ್ದರು. ಈಗ ಅವರೇ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಬಿಎಸ್‍ವೈ ಕೂಡಲೇ ನಿವೃತ್ತಿಯಾಗಲಿ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರೆ ಸ್ಪೀಕರ್ ಅವರು ಕೂಡ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡೋದಾಗಿ ಅವರು ಹೇಳಿದ್ರು.  

    ಈ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಡಿ.ಕೆ ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮದ ಮೂಲಕ ತಿಳಿಯಿತು. ಆದ್ರೆ ಅವರು ಏನ್ ಹೇಳಿಕೆ ನೀಡಿದ್ದರು ಎಂದು ನನಗೆ ಗೊತ್ತಿಲ್ಲ. ತಾವು ಮಾಡಿದ ತಪ್ಪು ಒಪ್ಪಿಕೊಂಡಿದ್ದಾರೆ ಅಂದ್ರೆ ಅಲ್ಲಿ ಮಿಮಿಕ್ರಿ ಪ್ರಶ್ನೆ ಬರೋದಿಲ್ಲ ಅಂದ್ರು. ಇದನ್ನೂ ಓದಿ: ನಾನು ಹಿಟ್ಲರ್ ಅಲ್ಲ, ಆಪರೇಷನ್ ಕಮಲದ ಬಗ್ಗೆ ಗೊತ್ತಿಲ್ಲ: ರಮೇಶ್‍ಕುಮಾರ್

    ರಾಜಕೀಯದಲ್ಲಿ ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ ಎಂದು ಹೇಳಿದ ಡಿಕೆಶಿ ತಪ್ಪೊಪ್ಪಿಕೊಂಡಿರುವ ಬಿಎಸ್‍ವೈ ಅವರ ಆತ್ಮಸಾಕ್ಷಿಗೆ ಇದೇ ವೇಳೆ ಅಭಿನಂದನೆ ಸಲ್ಲಿಸಿದ್ರು. ಈ ಮೂಲಕ ವಿಪಕ್ಷಗಳ ಟೀಕೆಗೆ ಸಚಿವರು ತಿರುಗೇಟು ನೀಡಿದ್ರು. ಆತ್ಮಸಾಕ್ಷಿಯಿಂದಲೇ ನಾನು ನಡೆಯಬೇಕು. ಉಳಿದ ವಿಚಾರವನ್ನು ಸ್ಪೀಕರ್ ಗೆ ಬಿಡೋಣ. ನಾಳೆ ಅವರು ಏನ್ ಹೇಳ್ತಾರೋ, ಪ್ರಕರಣ ಯಾವ ದೃಷ್ಟಿಯಲ್ಲಿ ಹೋಗುತ್ತದೆ ಎಂಬುದನ್ನು ಕಾದುನೋಡೋಣ ಎಂದು ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅತೃಪ್ತ ಶಾಸಕರನ್ನ ಕೂಡಿಟ್ಟು, ಮೊಬೈಲ್ ಕಿತ್ಕೊಂಡಿದ್ದಾರೆ: ಎಂ.ಬಿ ಪಾಟೀಲ್ ಗಂಭೀರ ಆರೋಪ

    ಅತೃಪ್ತ ಶಾಸಕರನ್ನ ಕೂಡಿಟ್ಟು, ಮೊಬೈಲ್ ಕಿತ್ಕೊಂಡಿದ್ದಾರೆ: ಎಂ.ಬಿ ಪಾಟೀಲ್ ಗಂಭೀರ ಆರೋಪ

    ಹುಬ್ಬಳ್ಳಿ: ಅತೃಪ್ತ ಶಾಸಕರನ್ನು ಬಿಜೆಪಿಯವರು ಹೋಟೆಲ್‍ನಲ್ಲಿ ಕೂಡಿ ಹಾಕಿದ್ದಾರೆ. ಅವರ ಮೊಬೈಲ್ ಸಹ ಕಿತ್ತುಕೊಂಡಿದ್ದಾರೆ. ಆದ್ರೆ ಅವರು ಎಲ್ಲಿಯೂ ಹೋಗಲ್ಲ. ನಮ್ಮ ಪಕ್ಷದಲ್ಲಿಯೇ ಇರುತ್ತಾರೆ ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

    ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಆಡಿಯೋ ವಿಚಾರವನ್ನು ಸ್ಪೀಕರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಸ್ಪೀಕರ್ ಹೆಸರು ಸಹ ಆಡಿಯೋದಲ್ಲಿ ಪ್ರಸ್ತಾಪ ಆಗಿದೆ. ಹೀಗಾಗಿ ಸ್ಪೀಕರ್ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರವನ್ನು ಕೆಡಿಸುವ ಪ್ರಯತ್ನಗಳು ನಡೆದಿವೆ ಎಂದರು.

    ಕಾಂಗ್ರೆಸ್ ಸರ್ಕಾರ ಮತ್ತು ಗೃಹ ಇಲಾಖೆ, ಬಿಎಸ್‍ವೈ ಆಡಿಯೋ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಿದೆ. ಬಿಎಸ್‍ವೈ ಆಡಿಯೋವನ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗುವುದು. ಎಫ್‍ಎಸ್‍ಎಲ್ ವರದಿ ಬಂದಾಗ ಯಾವುದು ಸತ್ಯ ಎನ್ನುವುದು ತಿಳಿಯಲಿದೆ ಎಂದು ಅವರು ಹೇಳಿದ್ರು.

    ಬಜೆಟ್ ಮಂಡನೆ ಆಗಿದೆ. ಅನುಮೋದನೆಯೂ ಸಿಗಲಿದೆ. ನಾಲ್ಕು ಜನ ಕಾಂಗ್ರಸ್ ಶಾಸಕರು ಗೈರಾದರೆ ಬಜೆಟ್ ಅನುಮೋದನೆಗೆ ತೊಂದರೆ ಆಗುವುದಿಲ್ಲ. ಅತೃಪ್ತ ಶಾಸಕರನ್ನು ಹೋಟೆಲ್‍ನಲ್ಲಿ ಕೂಡಿ ಹಾಕಿದ್ದಾರೆ. ಅವರ ಮೊಬೈಲ್ ಸಹ ಕಿತ್ತುಕೊಂಡಿದ್ದಾರೆ ಎಂದು ಸಚಿವರು ಗಂಭೀರ ಆರೋಪ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಂಪ್ಲಿ ಗಣೇಶ್ ಮೊಬೈಲ್ ಸ್ವಿಚ್ ಆಫ್ ಮಾಡ್ಕೊಂಡು ಎಲ್ಲೋ ಕುಳಿತವ್ರೆ: ಎಂ.ಬಿ.ಪಾಟೀಲ್

    ಕಂಪ್ಲಿ ಗಣೇಶ್ ಮೊಬೈಲ್ ಸ್ವಿಚ್ ಆಫ್ ಮಾಡ್ಕೊಂಡು ಎಲ್ಲೋ ಕುಳಿತವ್ರೆ: ಎಂ.ಬಿ.ಪಾಟೀಲ್

    ಹುಬ್ಬಳ್ಳಿ: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆಗೈದ ಆರೋಪಿ ಕಂಪ್ಲಿ ಶಾಸಕ ಗಣೇಶ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲೋ ಕುಳಿತಿದ್ದಾರೆ. ಹೀಗಾಗಿ ಅವರ ಬಂಧನ ವಿಳಂಬವಾಗುತ್ತಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ವೀಕ್ ಇಲ್ಲ. ಕಂಪ್ಲಿ ಗಣೇಶ್ ಅವರ ಬಂಧನಕ್ಕೆ ಎಲ್ಲ ಪ್ರಯತ್ನ ನಡೆದಿದೆ. ನೀವು ನೋಡುತ್ತೀರಿ ನಾವು ಶೀಘ್ರದಲ್ಲಿಯೇ ಅವರನ್ನು ಬಂಧಿಸುತ್ತೇವೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ತಿಳಿಸಿದರು.

    ಆಪರೇಷನ್ ಕಮಲದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ನಮ್ಮ ಪಕ್ಷದ ಯಾವುದೇ ಶಾಸಕರು ಬಿಜೆಪಿ ಹೋಗುವುದಿಲ್ಲ. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ಉಮೇಶ್ ಜಾದವ್, ನಾಗೇಂದ್ರ ಸೇರಿದಂತೆ ಎಲ್ಲರೂ ನಮ್ಮ ಸಂಪರ್ಕದಲ್ಲಿದ್ದಾರೆ. ಬಿಜೆಪಿಯವರು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಹಗಲು ಕನಸು ಕಾಣುತ್ತಿದ್ದಾರೆ ವ್ಯಂಗ್ಯವಾಡಿದರು.

    ಲೋಕಸಭಾ ಚುನಾವಣಾ ಸಿದ್ಧತೆಯ ನಿಟ್ಟಿನಲ್ಲಿ ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಇಂದು ಕಾಂಗ್ರೆಸ್‍ನ ಎಲ್ಲಾ ಸಚಿವರು ಸೇರಲಿದ್ದಾರೆ. ಜೊತೆಗೆ ಈ ಕುರಿತು ಚೆರ್ಚೆ ನಡೆಸಲು ನಾಳೆಯೂ ಸಭೆ ಕರೆಯಲಾಗಿದೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿಯಲ್ಲೇ ಲೋಕಸಭಾ ಚುನಾವಣೆ ನಡೆಯಲಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಂಜು ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ: ರೇವಣ್ಣ

    ಮಂಜು ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ: ರೇವಣ್ಣ

    ಬಾಗಲಕೋಟೆ: ಮಾಜಿ ಸಚಿವ ಎ.ಮಂಜು ವಿರುದ್ಧ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

    ದೇವೇಗೌಡರಿಂದ ಮಾತ್ರ ಹಾಸನದಲ್ಲಿ ಗೆಲ್ಲೋಕೆ ಸಾಧ್ಯ, ಪ್ರಜ್ವಲ್‍ಗೆ ಸಾಧ್ಯವಿಲ್ಲ ಎಂಬ ಎ.ಮಂಜು ಹೇಳಿಕೆ ವಿಚಾರವಾಗಿ ಬಾಗಲಕೋಟೆಯಲ್ಲಿ ತಡರಾತ್ರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಎ.ಮಂಜು ಅಂತವನ ಮಾತಿಗೆಲ್ಲ ನಾನು ಪ್ರತಿಕ್ರಿಯೆ ಕೊಡಲು ಆಗುತ್ತಾ? ನಾನು ಅಂತವ್ರಿಗೆಲ್ಲ ರಿಯಾಕ್ಟ್ ಮಾಡಲು ಆಗುತ್ತಾ? ಅವನಿಗೆ ನಾನು ರಿಯಾಕ್ಟ್ ಮಾಡಲ್ಲ, ಇಗ್ನೋರ್ ಮಾಡ್ತೀನಿ. ಅವನನ್ನು ಇಷ್ಟು ಹೊತ್ತಿನಲ್ಲಿ ನೆನಪು ಯಾಕೆ ಮಾಡ್ತೀರಿ ಎಂದು ರೇವಣ್ಣ ಗರಂ ಆಗಿಯೇ ಉತ್ತರಿಸಿದ್ದಾರೆ.

    ಹಾಸನಕ್ಕೆ ದೇವೇಗೌಡರು ಅಥವಾ ಪ್ರಜ್ವಲ್ ಇಬ್ಬರಲ್ಲಿ ಯಾರು ಸ್ಪರ್ಧಿಸಬೇಕೆಂದು ನೀವೇ ಹೇಳಿ. ಅವರನ್ನೇ ನಿಲ್ಲಿಸೋಣ ಎಂದು ರೇವಣ್ಣ ಹಾಸ್ಯ ಚಟಾಕಿ ಹಾರಿಸಿದರು.

    ಸಿಎಂ ಕುಮಾರಸ್ವಾಮಿ ಈ ಸಲ ಬಜೆಟ್ ಮಂಡಿಸಲ್ಲ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರಿಸಿದ ರೇವಣ್ಣ, ನೂರಕ್ಕೆ ನೂರು ಸಮ್ಮಿಶ್ರ ಸರ್ಕಾರದಿಂದ ಬಜೆಟ್ ಮಂಡನೆ ಮಾಡ್ತೇವೆ. ಕುಮಾರಸ್ವಾಮಿ ಬಜೆಟ್ ಮಂಡನೆ ಕುರಿತು ಯಾವುದೇ ಅನುಮಾನ ಬೇಡ ಎಂದು ಹೇಳಿದರು.

    ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ಕೊಡ್ತಾರೆ, ನೀವು ಏನು ಯೋಚನೆ ಮಾಡಬೇಡಿ ಎಂದು ಹೇಳಿದಲ್ಲದೇ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತೇನಿಲ್ಲ. ರೈತರ ಸಾಲಮನ್ನಾ ಆಗಿದ್ದು ಉತ್ತರ ಕರ್ನಾಟಕಕ್ಕೆ ಅಧಿಕ. ಅದರಲ್ಲೂ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಅತ್ಯಧಿಕವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಯಾಕೆ ರೈತರ ಸಾಲಮನ್ನಾ ಮಾಡಿಲ್ಲ. ಯಾಕೆ ಬಿಜೆಪಿ ಅವರು ಒತ್ತಾಯಿಸಿಲ್ಲ ಎಂದು ಗರಂ ಆದರು.

    ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾರಂಭಿಸುವ ವಿಚಾರವಾಗಿ ಮಾತನಾಡಿದ ರೇವಣ್ಣ, ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಓಪನ್ ಮಾಡಲೇಬೇಕು. ಯಾರೋ ರೇವಣ್ಣ, ಕುಮಾರಸ್ವಾಮಿ ಮಕ್ಕಳಷ್ಟೇ ಓದಬೇಕೇನ್ರೀ? ಎಲ್‍ಕೆಜಿಯಿಂದ ಇಂಗ್ಲಿಷ್ ಮಿಡಿಯಂ ಮಾಡಲೇಬೇಕು, ಹೊಟ್ಟೆಗೆ ಹಿಟ್ಟಿಲ್ಲದವರ ಮಕ್ಕಳು ಏನ್ ಮಾಡಬೇಕು. ಕೂಲಿ ಮಾಡುವವರ ಮಕ್ಕಳು ಇಂಗ್ಲಿಷ್ ಓದಬಾರದೇನ್ರೀ? ವಿವಿಧ ಇಲಾಖೆ ಅನುದಾನ ಕಟ್ ಮಾಡಿ ಇಂಗ್ಲಿಷ್ ಶಾಲೆಗೆ ನೀಡಬೇಕು. ಇದರಿಂದ ಹಿಂದೆ ಸರಿಯುವ ಮಾತೇ ಇಲ್ಲ. ಈ ಸಾಹಿತಿಗಳು ತಮ್ಮ ಮಕ್ಕಳನ್ನು ಎಲ್ಲಿ ಓದಿಸ್ತಾರೆ. ಹಾಗಿದ್ರೆ ಇಂಗ್ಲಿಷ್ ಶಾಲೆ ಬಂದ್ ಮಾಡಿಬಿಡಲಿ. ನಾನೇನು, ಕನ್ನಡ ಶಾಲೆ ಬೇಡ ಅಂತಿಲ್ಲ. ಒಂದು ಭಾಷೆ ಕನ್ನಡ ಇರಲಿ. ಸಮಾಜ ಕನ್ನಡದಲ್ಲಿ ಹೇಳಿ, ಗಣಿತ, ವಿಜ್ಞಾನ ಇಂಗ್ಲಿಷ್ ನಲ್ಲಿ ಹೇಳಲಿ. ಆದರೆ ಯಾರು ಏನು ಅಂದ್ರೂ ಈ ವಿಷಯದಲ್ಲಿ ನನ್ನದು ನೋ ಕ್ವಶ್ಚನ್. ಎಲ್‍ಕೆಜಿಯಿಂದ ಇಂಗ್ಲಿಷ್ ಶಾಲೆ ಆರಂಭ ಆಗಲೇಬೇಕು ಎಂದು ಹೇಳಿದರು.

    ಕಳೆದ 10 ವರ್ಷದಿಂದ ಹಾಸನದಲ್ಲಿ ಜನ ಕುಡಿಯುವ ನೀರಿಗೆ ಪರದಾಡುತ್ತಿದ್ದರು. ದೈವಾನುಗ್ರಹದಿಂದ ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ನನ್ನ ಕಡೆ ಎಷ್ಟು ಸಾಧ್ಯವೋ ಅಷ್ಟು ಹಾಸನಕ್ಕೆ ಸಹಾಯ ಮಾಡ್ತೀನಿ ಎಂದು ರೇವಣ್ಣ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 50 ಕೋಟಿ ಕೊಡ್ತೀವಿ ಬನ್ನಿ, ಕೈ ಶಾಸಕರಿಗೆ ಬಿಜೆಪಿ ಆಮಿಷ- ಮಾಜಿ ಸಿಎಂ ಹೊಸ ಬಾಂಬ್

    50 ಕೋಟಿ ಕೊಡ್ತೀವಿ ಬನ್ನಿ, ಕೈ ಶಾಸಕರಿಗೆ ಬಿಜೆಪಿ ಆಮಿಷ- ಮಾಜಿ ಸಿಎಂ ಹೊಸ ಬಾಂಬ್

    ಕೊಪ್ಪಳ/ಮೈಸೂರು: ಕೆಲವು ಜೆಡಿಎಸ್ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಅವರು ಭಾನುವಾರವೂ ಸಂಪರ್ಕಿಸಿದ್ದಾರೆ ಎಂದು ಮೈಸೂರಿನಲ್ಲಿ ಸಚಿವ ಸಾ.ರಾ ಮಹೇಶ್ ಆರೋಪಿಸಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಹೊಸ ಬಾಂಬ್ ಸಿಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ಬಿಜೆಪಿಯವರಿಗೆ ಅಧಿಕಾರದ ಭ್ರಮೆ ಹಿಡಿದುಬಿಟ್ಟಿದೆ. ನಮ್ಮ ಶಾಸಕರಿಗೆ 50 ಕೋಟಿ ರೂ. ಆಫರ್ ಮಾಡುತ್ತಾರೆ. ಅವರಿಗೆ ಎಲ್ಲಿಂದ ಈ ಹಣ ಬರುತ್ತಿದೆ. ಅಲ್ಲದೆ ಒಂದು ವಾರ ಹರಿಯಾಣದ ಸ್ಟಾರ್ ಹೊಟೇಲಿನಲ್ಲಿ ಉಳಿದುಕೊಂಡಿದ್ದರಲ್ವ ಅದಕ್ಕೂ ಎಲ್ಲಿಂದ ಹಣ ಬಂದಿದೆ. 50 ಕೋಟಿ ರೂ.ನಂತೆ 20 ಶಾಸಕರಿಗೆ ಆಫರ್ ಮಾಡ್ತಾರೆ. ಈ ದುಡ್ಡು ಅವರಿಗೆ ಎಲ್ಲಿಂದ ಬರುತ್ತದೆ. ಸಾರ್ವಜನಿಕರ ಹಣವನ್ನು ಅವರು ಲೂಟಿ ಹೊಡೆದಿದ್ದಾರೆ. ಇದೀಗ ಮತ್ತೆ ಲೂಟಿ ಹೊಡೆಯಲು ಅವರಿಗೆ ಅಧಿಕಾರ ಬೇಕು ಎಂದು ಹೇಳಿದ್ರು.

    ಸಾರಾ ಮಹೇಶ್ ಆರೋಪವೇನು..?
    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಾ.ರಾ ಮಹೇಶ್, ಕೆಲವರನ್ನು ಅಧಿವೇಶನಕ್ಕೆ ಬಾರದಂತೆ ತಡೆಯಲು ಬಿಜೆಪಿ ಮುಂದಾಗಿದೆ. ಬಿಜೆಪಿ ಅವರು ಕೆಲ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ಹಣ ಹಾಗೂ ಮಂತ್ರಿ ಸ್ಥಾನದ ಅಮಿಷವೊಡ್ಡಿದ್ದಾರೆ. ಬಿಜೆಪಿ ಅವರು ಹೇಗೆ ಶಾಸಕರನ್ನು ಮಂತ್ರಿ ಮಾಡುತ್ತಾರೋ ಗೊತ್ತಿಲ್ಲ. ಆಪರೇಷನ್ ಕಮಲದ ಬಗ್ಗೆ ನಾವು ಸಿಎಂ ಕುಮಾರಸ್ವಾಮಿ ಗಮನಕ್ಕೆ ತಂದಿದ್ದೇವೆ. ಖುದ್ದು ಶಾಸಕರೇ ಬಿಜೆಪಿ ಅವರು ತಮ್ಮನ್ನು ಸಂಪರ್ಕಿಸಿರುವ ಬಗ್ಗೆ ಸಿಎಂಗೆ ತಿಳಿಸಿದ್ದಾರೆ. ಬಿಜೆಪಿಯವರು ದಿನ ಒಂದೊಂದು ಸುಳ್ಳು ಹೇಳುತ್ತಾ ಸರ್ಕಾರ ಸ್ಥಿರವಾಗಿಲ್ಲ ಎಂದು ಬಿಂಬಿಸುವ ಪ್ರಯತ್ನ ನಡೆಸಿದೆ ಎಂದು ಟೀಕಿಸಿದರು.

    ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರದ ನಾಯಕರು ತಿಳುವಳಿಕೆ ಹೇಳಬೇಕು. ನಾವು ಅಧಿಕಾರ ಸ್ವೀಕಾರ ಮಾಡಿದ ದಿನದಿಂದಲೂ ಬಿಜೆಪಿ ಅಧಿಕಾರದ ದಾಹದಿಂದ ನಮಗೆ ತೊಂದರೆ ಕೊಡುತ್ತಿದೆ. ಈಗ ಕೊನೆಯ ಪ್ರಯತ್ನಕ್ಕೆ ಮುಂದಾಗಿದ್ದಾರೆ. ರಾಜ್ಯದ ಜನರು ಇದೆಲ್ಲವನ್ನು ನೋಡುತ್ತಿದ್ದಾರೆ. ಬಿಜೆಪಿ ಇಂತಹ ಅಸಹ್ಯ ರಾಜಕಾರಣ ಮಾಡಬಾರದು ಎಂದ ಅವರು, ಹಿಂದೆ ಹೇಳಿದಂತೆ ಬಿಜೆಪಿಯ ಕೆಲ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಎಲ್ಲವೂ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ನೀವೇ ಕಾದು ನೋಡಿ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸಚಿವ ಸಿ.ಎಸ್ ಶಿವಳ್ಳಿ ತಡರಾತ್ರಿ ಆಸ್ಪತ್ರೆಗೆ ದಾಖಲು

    ಸಚಿವ ಸಿ.ಎಸ್ ಶಿವಳ್ಳಿ ತಡರಾತ್ರಿ ಆಸ್ಪತ್ರೆಗೆ ದಾಖಲು

    ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ತಡರಾತ್ರಿ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಭಾನುವಾರ ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದ ಕಾಯಕ್ರಮ ಮುಗಿಸಿ ವಾಪಸ್ ಬರುವಾಗ ಸಚಿವರು ವಾಂತಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಾರ್ಯಕ್ರಮದ ನಂತರ ಸಚಿವರು ಉಪ್ಪಿಟ್ಟು ಸೇವಿಸಿದ್ದರು. ಉಪ್ಪಿಟ್ಟು ಸೇವಿಸಿದ್ದರಿಂದಲೇ ವಾಂತಿ ಆರಂಭವಾಗಿದೆ ಎನ್ನಲಾಗಿದೆ. ಸಚಿವರ ಗನ್ ಮ್ಯಾನ್ ಹಾಗೂ ಆಪ್ತಕಾರ್ಯದರ್ಶಿ ಸೇರಿದಂತೆ ನಾಲ್ಕು ಜನರಿಗೆ ವಾಂತಿಯಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಹೊಟ್ಟೆ ಕ್ಲೀನ್ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ. ಆದ್ರೆ ವೈದ್ಯರು ಯಾವುದೇ ವಿಚಾರವನ್ನು ಇದೂವರೆಗೂ ಸ್ಪಷ್ಟಪಡಿಸಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿ ತಂತ್ರಕ್ಕೆ ಟ್ರಬಲ್ ಶೂಟರ್ ಡಿಕೆಶಿ ಪ್ರತಿತಂತ್ರ..!

    ಬಿಜೆಪಿ ತಂತ್ರಕ್ಕೆ ಟ್ರಬಲ್ ಶೂಟರ್ ಡಿಕೆಶಿ ಪ್ರತಿತಂತ್ರ..!

    ಬಳ್ಳಾರಿ: ದೋಸ್ತಿ ಸರ್ಕಾರ ಕೆಡವಲು ಬಿಜೆಪಿ ಮೌನಕ್ರಾಂತಿ ನಡೆಸುತ್ತಿದ್ದರೆ ಇತ್ತ ಕೈ ನಾಯಕರು ಬಿಜೆಪಿಗೆ ರಿವರ್ಸ್ ಆಪರೇಷನ್ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ಮಧ್ಯರಾತ್ರಿ ಬಿಜೆಪಿಗರ ಮನೆಗೆ ಹೋಗಿ ಊಟ ಮಾಡಿ ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

    ಒಂದೆಡೆ ರೆಡ್ಡಿ-ರಾಮುಲು ಸಹೋದರರು ಬಿಜೆಪಿ ಪರವಾಗಿ ಆಪರೇಷನ್ ಗೆ ಇಳಿದ್ರೆ ಇನ್ನೊಂದೆಡೆ ಜನಾರ್ದನರೆಡ್ಡಿ ಸಹೋದರ, ಹರಪನಹಳ್ಳಿ ಶಾಸಕ ಕರುಣಾಕರರೆಡ್ಡಿಯನ್ನೆ ಕೈ ಪಾಳಯಕ್ಕೆ ಕರೆತರಲು ಡಿಕೆ ಶಿವಕುಮಾರ್ ಪ್ರತಿತಂತ್ರ ಹೆಣೆದಿದ್ದಾರೆ. ಈಗಾಗಲೇ ಕರುಣಾಕರರೆಡ್ಡಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಡಿಕೆ ಬ್ರದರ್ಸ್, ರೆಡ್ಡಿ-ರಾಮುಲು ಬ್ರದರ್ಸ್‍ಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಅಲ್ಲದೆ ಕರುಣಾಕರರೆಡ್ಡಿ ಸಹ ಕಳೆದ ತಿಂಗಳೂ ಬಿಜೆಪಿ ಶಾಸಕರು ಗುರುಗಾಂವ್ ರೆಸಾರ್ಟ್‍ಗೆ ಹೋದ ವೇಳೆ ಗೈರು ಹಾಜರಾಗಿದ್ದು ರಿವರ್ಸ್ ಆಪರೇಷನ್‍ಗೆ ಮತ್ತಷ್ಟೂ ಸಾಕ್ಷಿ ದೊರೆತಂತಾಗಿದೆ.


    ಹರಪನಹಳ್ಳಿ ಶಾಸಕ, ರೆಡ್ಡಿ ಸಹೋದರ ಕರುಣಾಕರರೆಡ್ಡಿಯನ್ನ ರಿವರ್ಸ್ ಆಪರೇಷನ್ ಮೂಲಕ ಕಾಂಗ್ರೆಸ್ ಗೆ ಸೆಳೆಯಲು ಡಿಕೆ ಬದ್ರರ್ಸ್ ಮಾತುಕತೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಈಗಾಗಲೇ ಕಾಂಗ್ರೇಸ್‍ನಿಂದ ದೂರವಾಗಿರುವ ಶಾಸಕರಾದ ನಾಗೇಂದ್ರ- ಗಣೇಶರ ವಿರುದ್ಧವೂ ಡಿಕೆಶಿವಕುಮಾರ್ ಮಸಲತ್ತು ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ನಾಗೇಂದ್ರ ವಿರೋಧಿಯಾಗಿ ಸ್ಪರ್ಧೆ ಮಾಡಿದ್ದ ಮಾಜಿ ಸಂಸದ ಸಣ್ಣ ಫಕ್ಕೀರಪ್ಪ ಹಾಗೂ ಕಂಪ್ಲಿಯ ಮಾಜಿ ಶಾಸಕ ಸುರೇಶಬಾಬುರನ್ನ ಕಾಂಗ್ರೇಸ್‍ಗೆ ಸೆಳೆಯಲು ಡಿಕೆ ಶಿವಕುಮಾರ್ ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಈ ಮೂಲಕ ಬಿಜೆಪಿ ಆಪರೇಷನ್‍ಗೆ ಮುಂದಾದ್ರೆ ಶಾಸಕ ಶ್ರೀರಾಮುಲು ಅವರಿಗೆ ಬಿಸಿ ಮುಟ್ಟಿಸಲು ಬಿಜೆಪಿ ನಾಯಕನ ಮನೆಯಿಂದಲೇ ರಾಜಕೀಯ ರಣತಂತ್ರಕ್ಕೆ ಮುಂದಾಗಿದ್ದಾರೆ. ಇದೂ ಶಾಸಕ ಶ್ರೀರಾಮುಲು ಮನೆಯಲ್ಲೆ ರಾಜಕೀಯ ಕಿಚ್ಚು ಹಚ್ಚಿದಂತಗಾಗುತ್ತದೆ ಅನ್ನೋದು ಡಿಕೆಶಿ ಮಾಸ್ಟರ್ ಪ್ಲಾನ್ ಆಗಿದೆ ಎನ್ನಲಾಗಿದೆ.

    ಒಟ್ಟಿನಲ್ಲಿ ಶಾಸಕ ಶ್ರೀರಾಮುಲು ಕಾಂಗ್ರೆಸ್ ಶಾಸಕರನ್ನ ಸೆಳೆಯಲು ಸೆಚ್ಕ್ ಹಾಕಿದ್ರೆ ಸಚಿವ ಡಿಕೆ ಶಿವಕುಮಾರ್ ಅವರು ರೆಡ್ಡಿ ಸಹೋದರ ಕರುಣಾಕರೆಡ್ಡಿ, ಶಾಸಕ ಶ್ರೀರಾಮುಲು ಅಣ್ಣ ಹಾಗೂ ಅವರ ಸೋದರಳಿಯನನ್ನೆ ಕಾಂಗ್ರೇಸ್ ಗೆ ಸೆಳೆಯಲು ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆಗೇ ಅತೀ ಹೆಚ್ಚು ಅನುದಾನ..!

    ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆಗೇ ಅತೀ ಹೆಚ್ಚು ಅನುದಾನ..!

    ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿಗಿಂತ ರೇವಣ್ಣ ಸಾಹೇಬ್ರೇ ಪವರ್ ಫುಲ್. ಅವರ ಇಲಾಖೆಯೇ ಫೇಮಸ್ ಎಂದು ಹೇಳೋದಕ್ಕೂ ಕಾರಣ ಇದೆ. ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆಗೆ ಅತಿ ಹೆಚ್ಚು ಅನುದಾನ ಸಿಕ್ಕಿದೆ.

    ಪ್ರತಿ ಕ್ಯಾಬಿನೆಟ್ ಸಭೆಯಲ್ಲೂ ರೇವಣ್ಣ ಇಲಾಖೆ ಅಥವಾ ರೇವಣ್ಣ ತವರು ಹಾಸನ ಜಿಲ್ಲೆಯ ಟಾಪಿಕ್ ಇದ್ದೇ ಇರುತ್ತದೆ. ಸಿಎಂ ಪ್ರತಿ ಕ್ಯಾಬಿನೆಟ್ ಸಭೆಯಲ್ಲೂ ರೇವಣ್ಣ ಇಲಾಖೆ ಅಥವಾ ರೇವಣ್ಣ ತವರು ಹಾಸನ ಜಿಲ್ಲೆಯ ಟಾಪಿಕ್ ಇದ್ದೇ ಇರುತ್ತದೆ. ಸಿಎಂ ಕುಮಾರಸ್ವಾಮಿ ಕೂಡ ರೇವಣ್ಣರ ಯಾವ ಕೆಲಸಕ್ಕೂ ಇಲ್ಲ ಅನ್ನೋದೇ ಇಲ್ಲ. ಪ್ರತಿ ಸಮಯದಲ್ಲೂ ಯಾವ ಫೈಲ್‍ಗಾದ್ರೂ ಕಣ್ಮುಚ್ಚಿ ಸೈನ್ ಹಾಕ್ತಾರಂತೆ ಮುಖ್ಯಮಂತ್ರಿ ಕುಮಾರಸ್ವಾಮಿ.

    ಹಾಗಾದ್ರೆ ರೇವಣ್ಣ ಮತ್ತು ಅವರ ಇಲಾಖೆ ಪವರ್ ಹೇಗಿದೆ ಅಂತಾ ನೋಡೋದಾದ್ರೆ..
    – ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‍ನಲ್ಲಿ 9271 ಕೋಟಿ ಅನುದಾನ
    – ಎಚ್‍ಡಿಕೆ ಮಂಡಿಸಿದ ಬಜೆಟ್‍ನಲ್ಲಿ ಹೆಚ್ಚುವರಿ 929 ಕೋಟಿ ರೂ.
    – ಪೂರಕ ಬಜೆಟ್‍ನಲ್ಲಿ ರೇವಣ್ಣ ಇಲಾಖೆಗೆ 1700 ಕೋಟಿ ಅನುದಾನ

    ವರ್ಗಾವಣೆ ಪವರ್.!
    ಎಕ್ಸಿಕ್ಯುಟಿವ್ ಎಂಜಿನಿಯರ್ 15, 200 ಕ್ಕೂ ಹೆಚ್ಚು ಎಇಇಗಳು, 500ಕ್ಕೂ ಹೆಚ್ಚು ಎಇ-ಜೆಇಳು, ಹಾಗೂ 100ಕ್ಕೂ ಹೆಚ್ಚು ಬಿ ದರ್ಜೆ ನೌಕರರ ವರ್ಗ. ಹೀಗೆ 7 ತಿಂಗಳಲ್ಲಿ 1 ಸಾವಿರಕ್ಕೂ ಹೆಚ್ಚು ವರ್ಗಾವಣೆ ಮಾಡಲಾಗಿದೆ.

    ಕ್ಯಾಬಿನೆಟ್ ಪವರ್..!
    ಒಟ್ಟು 16 ಕ್ಯಾಬಿನೆಟ್ ಸಭೆಗಳು ನಡೆದಿದ್ದು, ಪ್ರತಿ ಸಭೆಯಲ್ಲೂ ಲೋಕೋಪಯೋಗಿ ಇಲಾಖೆಯ 2-3 ವಿಷಯ ಅಪ್ರೂವ್ ಆಗುತ್ತಿದೆ. ಕ್ಯಾಬಿನೆಟ್‍ನಲ್ಲಿ ಒಟ್ಟು 20ಕ್ಕೂ ಹೆಚ್ಚು ವಿಷಯಗಳು ಅಪ್ರೂವ್ ಆಗಿವೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv