Tag: minister

  • ಶ್ರೀರಾಮುಲು ಅಣ್ಣನವರ ತಂತ್ರ ನನ್ನ ಮಂತ್ರ ಏನೂ ಇಲ್ಲ: ಡಿ.ಕೆ.ಶಿವಕುಮಾರ್

    ಶ್ರೀರಾಮುಲು ಅಣ್ಣನವರ ತಂತ್ರ ನನ್ನ ಮಂತ್ರ ಏನೂ ಇಲ್ಲ: ಡಿ.ಕೆ.ಶಿವಕುಮಾರ್

    – ಬೆಂಗಳೂರು ಗ್ರಾಮಾಂತರಿಂದ ಯಾರೇ ಸ್ಪರ್ಧಿಸಿದರೂ ಸ್ವಾಗತ
    – ಸಿ.ಪಿ.ಯೋಗೇಶ್ವರ್ ಮಗಳು ನನಗೂ ಮಗಳೇ

    ಬೆಂಗಳೂರು: ಶಾಸಕ ಶ್ರೀರಾಮುಲು ಅಣ್ಣನವರು ಹಿರಿಯ ನಾಯಕರು. ಅವರ ತಂತ್ರ ನನ್ನ ಮಂತ್ರ ಏನೂ ಇಲ್ಲ ಎಂದು ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ನಾನು ಶ್ರೀರಾಮುಲು ಅವರ ಮೇಲೆ ಯುದ್ಧ ಮಾಡಲು ಹೋಗುವುದಿಲ್ಲ. ಶಾಸಕರು ಎಷ್ಟು ಬೇಕಾದರೂ ತಂತ್ರ, ಕುತಂತ್ರ ಮಾಡಲಿ. ಆದರೆ ನಾನು ಮಾತ್ರ ತಂತ್ರ, ಕುತಂತ್ರ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.

    ಈ ಹಿಂದೆ ಬಳ್ಳಾರಿ ಜಿಲ್ಲೆಯ ಪರಿಸ್ಥಿತಿ ಹೇಗಿತ್ತು? ಈಗ ಹೇಗಿದೆ. ಬಡವರಿಗೆ ಹಿಂಸೆ ಕೊಡುವುದನ್ನು ನಿಲ್ಲಿಸಿದ್ದೇನೆ. ಕೆರೆ ತುಂಬಿಸುವ ಯೋಜನೆ ಕಾರ್ಯಗತ ಮಾಡಿದ್ದೇವೆ. ಜಿಲ್ಲೆಯಲ್ಲಿ ಬಹಳ ಉದ್ಯೋಗಗಳು ಖಾಲಿ ಇವೆ. ಹೀಗಾಗಿ ಅರ್ಹ ವ್ಯಕ್ತಿಗಳ ಆಯ್ಕೆಗೆ ಮುಂದಾಗಿದ್ದೇವೆ. ಜಿಲ್ಲೆಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ಆರಂಭಿಸುವ ಯೋಚನೆ ನಡೆದಿದೆ. ಬಡವರ ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

    ಬೆನ್ನಿಗೆ ಚೂರಿ ಹಾಕುವವರನ್ನು ನಾನು ನಂಬುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವರು, ಒಂದು ಬಾರಿ ಪಕ್ಷ ಸೇರಿದ ಮೇಲೆ ಯಾರು ಮೂಲ, ವಲಸಿಗರು ಎನ್ನುವ ಮಾತು ಬರುವುದಿಲ್ಲ. ಉಮೇಶ್ ಜಾಧವ್, ದೇವೇಂದ್ರಪ್ಪ ಹಾಗೂ ಎ.ಮಂಜು ಅವರು ಕಾಂಗ್ರೆಸ್ಸಿನಲ್ಲಿದ್ದವರು. ಬಿಜೆಪಿಗೆ ಅರ್ಜಿ ಹಾಕಿದ ಅವರಿಗೆ ಟಿಕೆಟ್ ಕೊಡಲಾಗಿದೆ. ಪಕ್ಷದ ನಿರ್ಧಾರಗಳಿಗೆ ಪ್ರತಿಯೊಬ್ಬರು ಬದ್ಧವಾಗಿರಬೇಕು. ಅದನ್ನಷ್ಟೇ ಕುಮಾರಸ್ವಾಮಿ ಹೇಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

    ಮಂಡ್ಯ ಲೋಕಸಭಾ ಚುನಾವಣೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಕಾಂಗ್ರೆಸ್‍ನ ಮುಖಂಡರು, ಕಾರ್ಯಕರ್ತರು ಹಾಜರಿರಬೇಕು. ನಾವೆಲ್ಲ ಸೇರಿಯೇ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ಹೀಗಾಗಿ ಎರಡೂ ಪಕ್ಷದ ಮುಖಂಡರು ಒಮ್ಮತದಿಂದ ಇರಬೇಕು. ಯಾವುದೇ ಸಮಸ್ಯೆ ಇದ್ದರೂ ಬದಿಗೊತ್ತಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚನೆ ನೀಡಿದರು.

    ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಸಿ.ಪಿ.ಯೋಗೇಶ್ವರ್ ಆದರೂ ನಿಲ್ಲಲಿ. ಇಲ್ಲವೇ ಅವರ ಮಗಳಾದರೂ ಸ್ಪರ್ಧಿಸಲಿ. ಅವರ ಮಗಳು ನನಗೂ ಮಗಳೇ. ಯಾರೇ ಸ್ಪರ್ಧಿಸಿದರೂ ಅದಕ್ಕೆ ನನ್ನ ಸ್ವಾಗತವಿದೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಜನರಿಗೆ ಎಲ್ಲವೂ ಗೊತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ನೀತಿಗಳಿಂದ ಜನರು ಸಂಕಷ್ಟದಲ್ಲಿದ್ದಾರೆ. ಜಿಎಸ್‍ಟಿಯಿಂದ ಎಷ್ಟು ಹೊಡೆತ ಬಿದ್ದಿದೆ ಗೊತ್ತಿದೇಯಾ? ನೀವು ವ್ಯಾಪಾರಿಗಳಾಗಿದ್ದರೆ ಅದರ ಕಷ್ಟ ಅರ್ಥವಾಗುತ್ತದೆ. ಮೋದಿ ಅವರು ಐದು ವರ್ಷಗಳಲ್ಲಿ ಎಷ್ಟು ಉದ್ಯೋಗ ಸೃಷ್ಟಿಸಿದ್ದಾರೆ? ಯುವಕರು ಉದ್ಯೋಗವಿಲ್ಲದೆ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.

  • ಕೆಆರ್ ಪೇಟೆ ಶಾಸಕ ನಾರಾಯಣಗೌಡ ವಿರುದ್ಧ ಎಫ್‍ಐಆರ್ ದಾಖಲು

    ಕೆಆರ್ ಪೇಟೆ ಶಾಸಕ ನಾರಾಯಣಗೌಡ ವಿರುದ್ಧ ಎಫ್‍ಐಆರ್ ದಾಖಲು

    ಮಂಡ್ಯ: ಲೋಕಸಭಾ ಜೆಡಿಎಸ್ ಅಭ್ಯರ್ಥಿ, ನಟ ನಿಖಿಲ್ ಪರ ಪ್ರಚಾರ ಮಾಡುವಾಗ ಹುಮ್ಮಸ್ಸಿನಲ್ಲಿ ಚಿತ್ರನಟರಿಗೆ ಧಮ್ಕಿ ಹಾಕಿದ್ದ ಕೆಆರ್ ಪೇಟೆ ಶಾಸಕ ನಾರಾಯಣಗೌಡ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಇತ್ತೀಚೆಗೆ ಮಂಡ್ಯದ ಕೆ.ಆರ್ ಪೇಟೆಯಲ್ಲಿ ಮಾತನಾಡಿದ ನಾರಾಯಣಗೌಡ, ಅಂಬರೀಶ್ ಬಗ್ಗೆ ನಮಗೂ ಗೌರವ ಇದೆ. ಇತರೆ ಚಿತ್ರ ನಟರು ಗೊಂದಲ ಹುಟ್ಟು ಹಾಕ್ತಿದ್ದಾರೆ. ಕ್ಷೇತ್ರದ ಬಗ್ಗೆ ಮಾತಾಡಿ. ಅದು ಬಿಟ್ಟು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದರೆ ಸುಮ್ಮನಿರಲ್ಲ. ತಕ್ಕ ಪಾಠ ಕಲಿಸ್ತೇವೆ ಎಂದು ಹೇಳಿದ್ದರು.

    ಅಲ್ಲದೆ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ಸಿನಿಮಾ ನಟರು ಗೌರವದಿಂದ ಇರದಿದ್ದರೆ ಆಸ್ತಿ ತನಿಖೆಯಾಗುತ್ತೆ ಎಂದು ದರ್ಶನ್, ಯಶ್‍ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು. ಹೇಳಿಕೆ ನೀಡಿ ನೀತಿಸಂಹಿತೆ ಉಲ್ಲಂಘಿಸಿದ್ದಕ್ಕೆ ಚುನಾವಣಾಧಿಕಾರಿ ರವಿಕುಮಾರ್ ಕೆಆರ್ ಪೇಟೆ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

    ಈ ಬಗ್ಗೆ ವಕೀಲ ನಾರಾಯಣಸ್ವಾಮಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಈ ರೀತಿಯ ವರ್ತನೆ ಸರಿಯದಲ್ಲ. ಅವರದ್ದೇ ಸರ್ಕಾರ ಇದೆ ಎಂದು ಈ ರೀತಿ ಮಾತನಾಡುವುದು ಸರಿಯಲ್ಲ. ಈ ರೀತಿ ಬೆದರಿಕೆ ಹಾಕಿದ್ರೆ ಜನಸಾಮಾನ್ಯರು ಹೇಗೆ ಮತದಾನ ಮಾಡುತ್ತಾರೆ. ನಾರಾಯಣಗೌಡ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದೇವೆ. ನಮ್ಮದೇ ಸರ್ಕಾರ ಇದೆ ರೇಡ್ ಮಾಡಿಸ್ತೀವಿ ಎಂದು ಬೆದರಿಕೆ ಭಾಷಣ ಮಾಡ್ತಾರೆ. ಹಾಗಾಗಿ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗಿದೆ ಎಂದರು.

    ಚುನಾವಣಾ ಅಧಿಕಾರಿಗಳು ದೂರು ಸ್ವೀಕರಿಸಿದ ಬಳಿಕ ಮಂಡ್ಯ ಡಿಸಿ ಜೊತೆ ಮಾತಾಡಿದ್ದಾರೆ. ಏನು ಭಾಷಣ ಮಾಡಿದ್ರು ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಕಾಲ್ ಮಾಡಿ ಮಾತನಾಡಿದ್ದಾರೆ. ಇಂತಹ ಭಾಷಣಗಳು ಜನ ಪ್ರತಿನಿಧಿ ಅನ್ನಿಸಿಕೊಂಡವರು ಮಾತಾಡಬಾರದು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

  • ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಬಿಗ್ ಶಾಕ್ – 25 ನಾಯಕರು ಗುಡ್‍ಬೈ

    ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಬಿಗ್ ಶಾಕ್ – 25 ನಾಯಕರು ಗುಡ್‍ಬೈ

    – ಬಿಜೆಪಿಯ ಇಬ್ಬರು ಸಚಿವರು, 6 ಶಾಸಕರು ಎನ್‍ಪಿಪಿಗೆ ಸೇರ್ಪಡೆ

    ಇಟಾನಗರ: ಲೋಕಸಭಾ ಚುನಾವಣೆಗೆ ಬೆರಳೆಣಿಕೆ ದಿನಗಳು ಬಾಕಿಯಿದೆ. ಹೀಗಿರುವಾಗಲೇ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಸಾಮೂಹಿಕ ರಾಜೀನಾಮೆ ಶಾಕ್‍ಗೆ ಒಳಗಾಗಿದೆ.

    ಆಡಳಿತರೂಢ ಪಕ್ಷ ಬಿಜೆಪಿಯ ಇಬ್ಬರು ಸಚಿವರು, ಆರು ಜನ ಶಾಸಕರು ಸೇರಿದಂತೆ ಒಟ್ಟು 25 ಮುಖಂಡರು ಪಕ್ಷಕ್ಕೆ ಗುಡ್‍ಬೈ ಹೇಳಿದ್ದಾರೆ. ಈ ಮೂಲಕ ಎಲ್ಲರೂ ನ್ಯಾಷನಲ್ ಪಿಪಲ್ಸ್ ಪಾರ್ಟಿ (ಎನ್‍ಪಿಪಿ) ಸೇರ್ಪಡೆಯಾಗಿದ್ದು, ಬಿಜೆಪಿಗೆ ಭಾರೀ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತದೆ.

    ಲೋಕಸಭಾ ಚುನಾವಣೆ ಜೊತೆಗೆ ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ನಿನ್ನೆಯಷ್ಟೇ ವಿಧಾನಸಭೆಯ 60 ಕ್ಷೇತ್ರಗಳ ಪೈಕಿ 54 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಕೆಲ ಪ್ರಮುಖ ಶಾಸಕರು, ಸಚಿವರನ್ನೇ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದಾಗಿ ಒಟ್ಟು 25 ಜನರು ಬಿಜೆಪಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಜರ್ಪಮ್ ಗಾಮ್ಲಿನ್, ರಾಜ್ಯ ಗೃಹಸಚಿವ ಕುಮಾರ್ ವೈಯ್ ಹಾಗೂ ಪ್ರವಾಸೋದ್ಯಮ ಸಚಿವ ಜಾರ್ಕರ್ ಗಾಮ್ಲಿನ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಎನ್‍ಪಿಪಿ ಸೇರ್ಪಡೆಯಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರ್ ವೈಯ್ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದ್ದು, ಜನರಿಗೆ ಮೋಸ ಮಾಡಿದೆ. ನಾವು ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಈ ಬಾರಿ ಎನ್‍ಪಿಪಿ ಸರ್ಕಾರ ರಚನೆಗೆ ಶ್ರಮಿಸುತ್ತೇವೆ ಎಂದು ಶಪಥ ಮಾಡಿದರು.

    ಸಚಿವರು ಸೇರಿದಂತೆ ಬಿಜೆಪಿಯ 8 ಶಾಸಕರು, ಪಿಪಲ್ಸ್ ಪಾರ್ಟಿ ಅರುಣಾಚಲ ಪ್ರದೇಶದ ಓರ್ವ ಶಾಸಕರು ಎನ್‍ಪಿಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಎನ್‍ಪಿಪಿ ನಾಯಕ ಕಾನ್ರಾಡ್ ಸಂಗ್ಮಾ ಭಾರೀ ಬೆಂಬಲ ಸಿಕ್ಕಿದ್ದು, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಎನ್‍ಪಿಪಿ ಪ್ರಧಾನ ಕಾರ್ಯದರ್ಶಿ ಥಾಮಸ್ ಸಾಂಗ್ಮಾ ಅವರು, ಅರುಣಾಚಲ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಮೈತ್ರಿಯಿಲ್ಲ. ಏಕಾಂಗಿಯಾಗಿ ಸ್ಪರ್ಧೆ ಮಾಡಲಿದ್ದು, ಬುಧವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಜೊತೆಗೆ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಕೂಡ ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

  • ಎಲೆಕ್ಷನ್‍ಗೆ 2 ಕೋಟಿ ಕಲೆಕ್ಷನ್ ಪ್ರಕರಣ – ಕೃಷ್ಣ ಬೈರೇಗೌಡ ವಿರುದ್ಧ ಎಚ್‍ಡಿಕೆ ಕಂಪ್ಲೆಂಟ್ !

    ಎಲೆಕ್ಷನ್‍ಗೆ 2 ಕೋಟಿ ಕಲೆಕ್ಷನ್ ಪ್ರಕರಣ – ಕೃಷ್ಣ ಬೈರೇಗೌಡ ವಿರುದ್ಧ ಎಚ್‍ಡಿಕೆ ಕಂಪ್ಲೆಂಟ್ !

    ಬೆಂಗಳೂರು: ಎಲೆಕ್ಷನ್ ಕಲೆಕ್ಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಕೆ. ಸಿ ವೇಣುಗೋಪಾಲ್ ಅವರಿಗೆ ಕರೆ ಮಾಡಿ ಕಂಪ್ಲೇಂಟ್ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ದೂರಿನಲ್ಲಿ ಏನ್ ಹೇಳಿದ್ದಾರೆ..?
    ಏನ್ ಬ್ರದರ್.. ನಿಮ್ಮ ಸಚಿವರು.. ಹೀಗಂತೆ.. ಈ ಸಂದರ್ಭದಲ್ಲಿ ಇದು ಬೇಕಿತ್ತಾ..? ಚುನಾವಣೆಯ ಹೊತ್ತಲ್ಲಿ ಎರಡು ಪಕ್ಷಗಳಿಗೂ ಹೊಡೆತ ಅಲ್ವೇನ್ರೀ.. ಏನಾದ್ರೂ ಮಾಡಿ..! ಎರಡು ಬಾರಿ ಸಚಿವರಾಗವ್ರೇ.. ಮನಿ ಮ್ಯಾಟರ್ ಡೀಲ್ ಮಾಡೋದು ಗೊತ್ತಿಲ್ವ..? ನೋಡಿ ನಾವೇ ಬಿಜೆಪಿಗೆ ಅಸ್ತ್ರ ಕೊಟ್ಟಂಗೆ ಆಯ್ತು.. ಸ್ವಲ್ಪ ನಿಮ್ಮವರಿಗೆ ಹೇಳಿ ಎಂದು `ಕೈ’ ಉಸ್ತುವಾರಿ ವೇಣುಗೋಪಾಲ್‍ಗೆ ಕರೆ ಮಾಡಿ ಎಚ್‍ಡಿಕೆ ದೂರು ನೀಡಿದ್ದಾರೆ ಎನ್ನಲಾಗಿದೆ.

    ಸೇಡು ತೀರಿಸಿಕೊಂಡ ಸಿಎಂ:
    ಸರ್ಕಾರ ರಚನೆ ಮಾಡುವ ಆರಂಭದಲ್ಲೇ ಕೃಷ್ಣ ಬೈರೇಗೌಡರು, ಸಚಿವ ಎಚ್ ಡಿ ರೇವಣ್ಣ ಅವರು ನಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಆ ಸೇಡನ್ನು ಕುಮಾರಸ್ವಾಮಿ ಅವರು ಇಂದು ತೀರಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಸಚಿವರು ಸ್ಪಷ್ಟನೆ:
    ಹಣ ಸೀಜ್ ಮಾಡಿರುವ ಕುರಿತು ನಿನ್ನೆಯೇ ಪ್ರತಿಕ್ರಿಯೆ ನೀಡಿರುವ ಕೃಷ್ಣ ಬೈರೇಗೌಡ, ಈ ಬಗ್ಗೆ ನಮಗೆ ಗೊತ್ತಿಲ್ಲ. ಅಲ್ಲದೇ ನಮ್ಮ ಇಲಾಖೆಯ ಯಾವ ಅಧಿಕಾರಿಯೂ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಅಧಿಕಾರಿಗಳಿಗೆ ಆಗಲಿ ಅಥವಾ ನನಗಾಗಲಿ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

    2 ಕೋಟಿ ರೂ. ಸೀಜ್:
    ಶುಕ್ರವಾರ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣಗೌಡ ಬಿ. ಪಾಟೀಲ್‍ಗೆ ಆದಾಯ ತೆರಿಗೆ ಇಲಾಖೆಯವರು ಶಾಕ್ ಕೊಟ್ಟಿದ್ದರು. ಆರ್‍ಡಿಪಿಆರ್ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣಗೌಡ ಬಿ ಪಾಟೀಲ್, ಬೆಂಗಳೂರಿನ ಗಾಂಧಿನಗರದ ಹೋಟೆಲ್ ನಲ್ಲಿ ಮೂರು ರೂಮ್ ಬುಕ್ ಮಾಡಿದ್ದರು. ಐಟಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಹೋಟೆಲ್ ಮೇಲೆ ದಾಳಿ ಮಾಡಿದ್ದಾರೆ. ಆಗ ಕೊಠಡಿ ಸಂಖ್ಯೆ 104, 105, 115ರಲ್ಲಿ ಕೋಟಿ ಕೋಟಿ ಹಣ ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಐಟಿ ದಾಳಿಯಾಗುತ್ತಿದ್ದಂತೆ ನಾರಾಯಣಗೌಡ ಬಿ ಪಾಟೀಲ್ ಪರಾರಿಯಾಗಿದ್ದಾರೆ. 500 ಮತ್ತು 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿತ್ತು.

    ನಾರಾಯಣಗೌಡ ಹಾವೇರಿಯಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಗ್ರಾಮೀಣಾಭಿವೃದ್ದಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆಲಸ ಮಾಡುತ್ತಿದ್ದರು. ಹಾವೇರಿಯಲ್ಲೂ ಮೂರು ಮನೆಯನ್ನು ಕಟ್ಟಿಸಿದ್ದಾರೆ. ಇವರು ಬೆಂಗಳೂರಿಗೆ ಹಣ ಸಾಗಾಟ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗಿನ ಜಾವ 3.30ಕ್ಕೆ ದಾಳಿ ಮಾಡಿದ್ದರು. ನಾರಾಯಣಗೌಡ ತನ್ನ ಕಾರಿನ ಮೂಲಕ ಹಣವನ್ನು ತಂದು ಹೋಟೆಲಿನಲ್ಲಿ ಸಂಗ್ರಹಿಸಿಟ್ಟಿದ್ದರು. ಈ ಹಣ ರಾಹುಲ್ ಗಾಂಧಿಯವರ ಕಾರ್ಯಕ್ರಮಕ್ಕೆ ಸಂಗ್ರಹಿಸಲಾಗಿತ್ತು ಎಂಬ ಮಾಹಿತಿ ಸಿಕ್ಕಿತ್ತು. ಅಲ್ಲದೆ ಹಣದ ಹಿಂದೆ ಸಚಿವರ ಪಾತ್ರವಿದೆ ಎಂದು ಬಿಜೆಪಿ ಆರೋಪ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಕೆಶಿಗೆ ಮಂಡ್ಯ ಕಾಂಗ್ರೆಸ್ ಮುಖಂಡರು ಎಚ್ಚರಿಕೆ

    ಡಿಕೆಶಿಗೆ ಮಂಡ್ಯ ಕಾಂಗ್ರೆಸ್ ಮುಖಂಡರು ಎಚ್ಚರಿಕೆ

    – ಡಿಕೆಶಿ ಗೋ ಬ್ಯಾಕ್ ಗೆ ಸಿದ್ಧತೆ

    ಮಂಡ್ಯ: ನಟ ನಿಖಿಲ್ ಕುಮಾರಸ್ವಾಮಿ ಬೆನ್ನಲ್ಲೇ ಇದೀಗ ಮಂಡ್ಯದಲ್ಲಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ `ಡಿಕೆಶಿ ಗೋ ಬ್ಯಾಕ್’ ಅನ್ನೋದಕ್ಕೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಿದ್ಧತೆ ನಡೆಸುತ್ತಿದ್ದಾರೆ.

    ಡಿಕೆಶಿ ವಿರುದ್ಧ ಹೋರಾಟಕ್ಕೆ ನಿರ್ಧರಿಸಿರುವ ಮಂಡ್ಯ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಪಕ್ಷದ ಸಂಘಟನೆಗೆ ಬಂದರೆ ಸ್ವಾಗತಿಸುತ್ತೇವೆ. ಆದ್ರೆ ಜೆಡಿಎಸ್ ಏಜೆಂಟಾಗಿ ಬಂದರೆ ‘ಗೋ ಬ್ಯಾಕ್ ಡಿಕೆಶಿ’ ಹೆಸರಲ್ಲಿ ಹೋರಾಟ ಮಾಡುವುದಾಗಿ ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡ, ನಗರಸಭೆ ಮಾಜಿ ಸದಸ್ಯ ಅನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

    1994ರಲ್ಲಿ ಕನಕಪುರದಿಂದ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪಕ್ಷೇತರವಾಗಿ ನಿಂತು ಗೆದ್ದಿದ್ದೀರಿ. ಅವತ್ತೇ ನಿಮ್ಮ ವಿರುದ್ಧ ಕ್ರಮ ತೆಗೆದುಕೊಂಡಿದ್ರೆ ಇವತ್ತು ನೀವು ಕಾಂಗ್ರೆಸ್ ನಾಯಕರಾಗುತ್ತಿರಲಿಲ್ಲ. ನಿಖಿಲ್ ಸ್ಪರ್ಧಿಸಲೇಬೇಕಿದ್ರೆ ರಾಮನಗರದಲ್ಲಿ ನಿಲ್ಲಿಸಿಕೊಳ್ಳಲಿ. ಅಪ್ಪ-ಮಗ ಅವ್ವ ಎಲ್ಲಾ ಒಂದೇ ಕ್ಷೇತ್ರದಲ್ಲಿ ಇರಲಿ. ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಷ್ಟ, ಸುಖ ಕೇಳೋದಕ್ಕೆ ನೀವು ಸಚಿವರಾಗಿದ್ದೀರಿ. ನಿಮ್ಮ ಬಾಮೈದ ಎಂಎಲ್‍ಸಿ ಆಗಿದ್ದಾರೆ. ಮಂಡ್ಯದಲ್ಲಿ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿ ಇಲ್ಲ. ನಮ್ಮ ಕಷ್ಟ ಸುಖ ಕೇಳೋದಕ್ಕೆ ಅಂತಾಲೇ ಸುಮಲತಾ ಗೆಲ್ಲಿಸಿಕೊಂಡು ಬರ್ತೀವಿ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ನಾಯಕರಿಗೆ, ಪಕ್ಷ ಉಳಿಸಲು ಸಭೆ ಕರೆದರೆ ಒಪ್ಪಿಗೆ ಇದೆ. ಜೆಡಿಎಸ್ ಪರವಾಗಿ, ಜೆಡಿಎಸ್ ಗೆ ಚುನಾವಣೆ ಮಾಡಿ ಎಂದು ಸಭೆ ಕರೆದರೆ ಬಹಿಷ್ಕರಿಸುತ್ತೇವೆ. ಕಾಂಗ್ರೆಸ್ ನಿಂದ ಸುಮಲತಾಗೆ ಟಿಕೆಟ್ ಕೊಡದಿದ್ದರೂ ಪಕ್ಷೇತರವಾಗಿ ನಿಲ್ಲಿಸಿ ಗೆಲ್ಲಿಸುತ್ತೇವೆ. ನಾಯಕರಿಗೆ ಪಕ್ಷದಿಂದ ಅಮಾನತು, ನೋಟಿಸ್ ಕೊಡುವುದಾಗಿ ಬೆದರಿಕೆ ಹಾಕಿದ್ರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಚ್‍ಡಿಡಿ, ಕುಮಾರಸ್ವಾಮಿ ಕುಟುಂಬ ದೊಡ್ಡ ನಾಟಕ ಕಂಪನಿ: ರೇಣುಕಾಚಾರ್ಯ

    ಎಚ್‍ಡಿಡಿ, ಕುಮಾರಸ್ವಾಮಿ ಕುಟುಂಬ ದೊಡ್ಡ ನಾಟಕ ಕಂಪನಿ: ರೇಣುಕಾಚಾರ್ಯ

    ದಾವಣಗೆರೆ: ಸೂರ್ಯ-ಚಂದ್ರರು ಇರೋದು ಎಷ್ಟು ಸತ್ಯನೋ, ಮತ್ತೆ ಮೋದಿ ಪ್ರಧಾನಿಯಾಗುವುದು ಅಷ್ಟೇ ಸತ್ಯ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

    ಲೋಕಸಭಾ ಚುನಾವಣೆ ಮೋದಿ ವರ್ಸಸ್ ಮಹಾಘಟಬಂಧನ್ ನಡುವೆ ನಡೆಯುತ್ತೆ. ಏಕೆಂದರೆ ಮಹಾಘಟ್ ಬಂಧನ್‍ಗೆ ಯಾರು ನಾಯಕರು ಎನ್ನುವುದೇ ಗೊತ್ತಿಲ್ಲ. ದೇಶಾದ್ಯಂತ ಮೋದಿ ಪರ ಅಲೆ ಹಾಗೂ ಮೋದಿ ಆಡಳಿತ ಇಡೀ ಜಗತ್ತು ಮೆಚ್ಚಿದೆ. ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬಳಿಕ ಸುಮಲತಾ ಬಗ್ಗೆ ರೇವಣ್ಣ ಹೇಳಿಕೆ ನೀಡಿದ್ದ ವಿಚಾರದ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕುಟುಂಬ ಅಂಬರೀಶ್ ಕೈ-ಕಾಲು ಹಿಡಿದು ಮಂಡ್ಯದಲ್ಲಿ ಹೆಚ್ಚಿನ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಈಗ ಅಂಬರೀಶ್ ಕುಟುಂಬದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಬದುಕಿದ್ದಾಗ ಅಂಬರೀಶ್ ಅವರನ್ನು ಹೇಗೆ ಬಳಸಿಕೊಂಡರೋ, ಮರಣ ನಂತರ ಅವರಿಗೆ ಗೌರವ ಕೊಡಲಿಲ್ಲ. ಸುಮಲತಾಗೆ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ನಾಟಕೀಯವಾಗಿ ಕ್ಷಮೆಯಾಚಿಸಿದ್ದಾರೆ. ಕುಮಾರಸ್ವಾಮಿ ತಾಕತ್ ಇದ್ದರೆ ರೇವಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದರು.

    ಸಚಿವ ಸಂಪುಟದಿಂದ ಕೈಬಿಡದಿದ್ದರೆ ಜಿಡಿಎಸ್ ಸರ್ವನಾಶ ಶತಸಿದ್ಧ. ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬ ದೊಡ್ಡ ನಾಟಕ ಕಂಪನಿ. ಅವರಿಗೆ ನಾಟಕ ಆಡುವುದು ಚನ್ನಾಗಿ ಗೊತ್ತು. ನಿಮ್ಮ ಮನೆಯಲ್ಲಿ ಯಾರಾದರೂ ಸತ್ತಿದ್ರೆ ನಿಮ್ಮ ಕುಟುಂಬದವರು ಒಂದೇ ವಾರದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಎಚ್.ಡಿ ರೇವಣ್ಣಗೆ ಶಾಸಕ ಎಂ.ಪಿ ರೇಣುಕಾಚಾರ್ಯ ತಿರುಗೇಟು ನೀಡಿದರು. ಈ ವೇಳೆ ಸುಮಲತಾ ಬಿಜೆಪಿಗೆ ಬಂದರೆ ಸ್ವಾಗತ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚುನಾವಣಾ ನೀತಿ ಸಂಹಿತೆ ಎಫೆಕ್ಟ್ – ಸಿದ್ದರಾಮಯ್ಯ ಕಾರಿಗೆ ಡ್ರೈವರ್ ಆದ್ರು ಖಾದರ್

    ಚುನಾವಣಾ ನೀತಿ ಸಂಹಿತೆ ಎಫೆಕ್ಟ್ – ಸಿದ್ದರಾಮಯ್ಯ ಕಾರಿಗೆ ಡ್ರೈವರ್ ಆದ್ರು ಖಾದರ್

    – ದೇಶಾದ್ಯಂತ ಫ್ಲೆಕ್ಸ್, ಬ್ಯಾನರ್ ರಿಮೂವ್

    ಉಡುಪಿ/ಬೆಳಗಾವಿ: ಲೋಕಸಮರಕ್ಕೆ ಮುಹೂರ್ತ ನಿಗದಿಯಾಗಿದ್ದು ಭಾನುವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಉಡುಪಿಯಲ್ಲಿದ್ದ ಸಿದ್ದರಾಮಯ್ಯ ಮಂಗಳೂರಿಗೆ ವಾಪಸ್ ತೆರಳುವಾಗ ಸಚಿವ ಯು.ಟಿ. ಖಾದರ್ ಚಲಾಯಿಸುತ್ತಿದ್ದ ಕಾರಿನಲ್ಲಿ ತೆರಳಿದ್ದರು.

    ಕಲ್ಸಂಕದಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ಜಾಥಾ ಮುಗಿಯೋ ವೇಳೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಿಂದ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಮೀನುಗಾರ ಮಹಿಳೆಯರ ಕಾರ್ಯಕ್ರಮಕ್ಕೆ ಸರಕಾರಿ ಕಾರನ್ನು ಬಿಟ್ಟು ಸಚಿವ ಖಾದರ್ ಕಾರಿನಲ್ಲಿ ಆಗಮಿಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ: ಯಾವ ಕ್ಷೇತ್ರಗಳಲ್ಲಿ ಯಾವ ದಿನ ಚುನಾವಣೆ?

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವೆ ಜಯಮಾಲಾ ಸೇರಿದಂತೆ ಹಲವು ನಾಯಕರು ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ರು. ಬೆಳಗಾವಿಯ ಯರಗಟ್ಟಿಯಲ್ಲಿ ಆಯೋಜಿಸಿದ್ದ ಮೋದಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಸುರೇಶ್ ಅಂಗಡಿ ಸಹ ಸರ್ಕಾರಿ ವಾಹನ ಬಿಟ್ಟು ಬಸ್‍ನಲ್ಲೇ ಸುಮಾರು 65 ಕಿ.ಮೀ ಪ್ರಯಾಣಿಸಿದ್ರು.

    ಸಚಿವರಾದ ಜಿ.ಟಿ.ದೇವೆಗೌಡ ಹಾಗೂ ಪುಟ್ಟರಾಜು ಮೊದಲೇ ಖಾಸಗಿ ಕಾರಿನಲ್ಲಿ ಬಂದು ಮೈಸೂರಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇವರೆಲ್ಲರ ಮಧ್ಯೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಕಾಂಗ್ರೆಸ್ ಪರಿವರ್ತನಾ ಯಾತ್ರೆ ಮುಗಿಸಿ ಸರ್ಕಾರಿ ಕಾರಿನಲ್ಲೇ ಪ್ರಯಾಣ ಬೆಳೆಸಿದ್ರು. ಇತ್ತ ಸಂಸದ ಪ್ರಹ್ಲಾದ್ ಜೋಶಿ ನೀತಿ ಸಂಹಿತೆ ಜಾರಿ ಬಳಿಕವೂ ಸಾರ್ವಜನಿಕ ಸಭೆ ನಡೆಸಿದ್ರು.


    ನೀತಿ ಸಂಹಿತೆ ಜಾರಿ ಬೆನ್ನಲ್ಲೇ ದೇಶಾದ್ಯಂತ ರಸ್ತೆ, ಮಾಲ್, ಅಂಗಡಿ ಸೇರಿ ಹಲವೆಡೆ ಹಾಕಲಾಗಿದ್ದ ರಾಜಕೀಯ ಪಕ್ಷಗಳ ಬ್ಯಾನರ್, ಫ್ಲೆಕ್ಸ್‍ಗಳನ್ನು ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ. ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಬ್ಯಾನರ್, ಫ್ಲೆಕ್ಸ್ ಗಳನ್ನು ತೆರವುಗೊಳಿಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಯೋಜನೆಗಳ ಪರ ಜಾಹೀರಾತು ಹೊಂದಿರುವ ಫ್ಲೆಕ್ಸ್ ಗಳನ್ನು ಕೂಡ ತೆರವು ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಚಿವ ಜಮೀರ್ ಅಹ್ಮದ್ ಒಬ್ಬ ಕಂತ್ರಿ, ರಾಬರ್: ಅಲ್ತಾಫ್ ಖಾನ್

    ಸಚಿವ ಜಮೀರ್ ಅಹ್ಮದ್ ಒಬ್ಬ ಕಂತ್ರಿ, ರಾಬರ್: ಅಲ್ತಾಫ್ ಖಾನ್

    ಬೆಂಗಳೂರು: ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಒಬ್ಬ ಕಂತ್ರಿ. ನನ್ನ ಬೆಳವಣಿಗೆ ಸಹಿಸದೇ ಪರೋಕ್ಷವಾಗಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಅಲ್ತಾಫ್ ಖಾನ್ ಕಿಡಿಕಾರಿದ್ದಾರೆ.

    ಪೊಲೀಸ್ ಬಂಧನದಿಂದ ಹೊರಬಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಬಂಧನದ ಹಿಂದೆ ಸಚಿವ ಜಮೀರ್ ಅಹ್ಮದ್ ಕೈವಾಡವಿದೆ. ನನ್ನನ್ನು ಜೈಲಿಗೆ ಕಳಿಸಲು ಜಮೀರ್ ಅಹ್ಮದ್ ಪ್ರಯತ್ನ ಮಾಡುತ್ತಿದ್ದಾರೆ. ಸಚಿವರ ಬಣ್ಣವನ್ನು ಕೆಲವೇ ದಿನಗಳಲ್ಲಿ ಬಹಿರಂಗ ಮಾಡುತ್ತೇನೆ ಎಂದು ಹರಿಹಾಯ್ದರು.

    ಸಚಿವ ಜಮೀರ್ ಅಹ್ಮದ್ ಅವರು ವಕೀಲ ಇಬ್ರಾಹಿಂ ಮೂಲಕ ನನ್ನ ಮೇಲೆ ದೂರು ಕೊಡಿಸಿದ್ದಾರೆ. ವಕೀಲ ಇಬ್ರಾಹಿಂ ಕಳೆದ ಐದು ವರ್ಷಗಳಿಂದ ನನ್ನ ಜೊತೆ ಇದ್ದ ಎಂದ ಅವರು, ಜಮೀರ್ ಅಹ್ಮದ್ ಒಬ್ಬ ರಾಬರ್, ರಾಮನಗರದಲ್ಲಿ ರಾಬರಿ ಮಾಡಿದ್ದ ಎಂದು ಆರೋಪಿಸಿದರು.

    ಏನಿದು ಪ್ರಕರಣ:
    ಅಲ್ತಾಫ್ ಖಾನ್ ಹೋಟೆಲ್ ಗೆ ನುಗ್ಗಿ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿದ್ದರು. ಈ ವಿಚಾರವಾಗಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಪೊಲೀಸರಿಂದ ತಡರಾತ್ರಿ ಠಾಣೆಗೆ ಕರೆಸಿ ಅಲ್ತಾಫ್ ವಿಚಾರಣೆ ನಡೆಸಿದ್ದರು. ಬಳಿಕ ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಿದ್ದು, ಈ ವೇಳೆ ನ್ಯಾಯಾಧೀಶರ ಸಮ್ಮುಖದಲ್ಲೇ ಬೇಲ್ ಪಡೆದು ಅಲ್ತಾಫ್ ಖಾನ್ ರಿಲೀಸ್ ಆಗಿದ್ದರು.

    ಅಲ್ತಾಫ್ ಖಾನ್ ಬಂಧನದ ಹಿಂದೆ ಮೈತ್ರಿ ಸರ್ಕಾರದ ಪ್ರಭಾವಿ ಸಚಿವರೊಬ್ಬರ ಕೈವಾಡವಿದೆ ಎಂದು ಆರೋಪಗಳು ಕೇಳಿ ಬಂದಿತ್ತು. ಈಗ ಅಲ್ತಾಫ್ ಖಾನ್ ಅವರೇ ಆ ಪ್ರಭಾವಿ ಸಚಿವ ಜಮೀರ್ ಅಹ್ಮದ್ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪ್ರಧಾನಿ ಮೋದಿ ನಮ್ಮ ಡ್ಯಾಡಿ: ತಮಿಳುನಾಡು ಸಚಿವ

    ಪ್ರಧಾನಿ ಮೋದಿ ನಮ್ಮ ಡ್ಯಾಡಿ: ತಮಿಳುನಾಡು ಸಚಿವ

    ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಆಡಳಿತ ಪಕ್ಷ ಆಲ್ ಇಂಡಿಯಾ ಅಣ್ಣ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ)ಯ ಡ್ಯಾಡಿ (ತಂದೆ) ಎಂದು ಡೈರಿ ಅಭಿವೃದ್ಧಿ ಸಚಿವ ಕೆ.ಟಿ.ರಾಜೇಂತಿರ ಬಾಲಾಜಿ ಹೇಳಿದ್ದಾರೆ.

    ವಿರುದುನಗರ್ ಜಿಲ್ಲೆಯ ಶ್ರೀವಿಲ್ಲಿಪುತುರ್‍ನಲ್ಲಿ ಶುಕ್ರವಾರ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಅಮ್ಮ (ಎಐಎಡಿಎಂಕೆ ನಾಯಕಿ ಜಯಲಲಿತಾ) ಅವರ ಮೃತರಾದ ಬಳಿಕ ಪ್ರಧಾನಿ ಮೋದಿ ಅವರು ಎಐಎಡಿಎಂಕೆಗೆ ತಂದೆಯಂತೆ ಮಾರ್ಗದರ್ಶನ ಮಾಡಿದ್ದಾರೆ ಎಂದು ಹೊಗಳಿದರು.

    ಪ್ರಧಾನಿ ನರೇಂದ್ರ ಮೋದಿ ನಮ್ಮ ತಂದೆ. ಜಯಲಲಿತಾ ಅವರನ್ನು ಕಳೆದುಕೊಂಡ ಬಳಿಕ ನಮಗೆ ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರು ಕೇವಲ ನಮಗಷ್ಟೇ ತಂದೆಯಲ್ಲ, ಇಡೀ ದೇಶಕ್ಕೆ ತಂದೆಯಾಗಿದ್ದಾರೆ. ಇದೇ ಕಾರಣಕ್ಕೆ ಎಐಎಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ತಿಳಿಸಿದರು.

    ಎಐಎಡಿಎಂಕೆ 2014ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಒಟ್ಟು 39 ಸೀಟುಗಳಲ್ಲಿ 37 ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಎಐಎಡಿಎಂಕೆಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ 39 ಸೀಟುಗಳ ಪೈಕಿ, ಐದು ಸ್ಥಾನಗಳನ್ನು ಬಿಜೆಪಿಗೆ ನೀಡಲಾಗಿದೆ.

    ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು 2014ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ “ತಮಿಳುನಾಡಿನ ಮಹಿಳೆಯೋ ಅಥವಾ ಗುಜರಾತಿನ ಮೋದಿಯೋ?” ಎಂಬ ಘೋಷವಾಕ್ಯದ ಭಾರೀ ಪ್ರಚಾರ ಮಾಡಿದ್ದರು. ಈ ಘೋಷಣೆ ಮೂಲಕ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಟಾಂಗ್ ಕೊಟ್ಟಿದ್ದರು.

    ನನ್ನ ನೇತೃತ್ವದ ತಮಿಳುನಾಡು ಸರ್ಕಾರವು ಗುಜರಾತ್‍ನ ನರೇಂದ್ರ ಮೋದಿ ಸರ್ಕಾರಕ್ಕಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ತಮಿಳುನಾಡಿನ ಮಹಿಳೆ ಜನರಿಗೆ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಕಳೆದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ವ್ಯಂಗ್ಯವಾಡಿದ್ದರು.

    ಇತ್ತ ಮಿಜೋರಾಂ ರಾಜ್ಯಪಾಲ ಸ್ಥಾನಕ್ಕೆ ಕುಮ್ಮನಂ ರಾಜಶೇಖರ್ ರಾಜೀನಾಮೆ ನೀಡಿದ್ದು, ಬಿಜೆಪಿಯ ಅಭ್ಯರ್ಥಿಯಾಗಿ ಕೇರಳದ ತಿರುವನಂತಪುರಂನಿಂದ ಸ್ಪರ್ಧಿಸುವ ಇಚ್ಛೇ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯ ಸಂಘರ್ಷ ಶಮನಕ್ಕೆ `ಕನಕಪುರ ಬಂಡೆ’ ಎಂಟ್ರಿ

    ಮಂಡ್ಯ ಸಂಘರ್ಷ ಶಮನಕ್ಕೆ `ಕನಕಪುರ ಬಂಡೆ’ ಎಂಟ್ರಿ

    ಮಂಡ್ಯ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಒತ್ತಾಯದ ಮೇರೆಗೆ ಮಡ್ಯ ಸಂಘರ್ಷ ಶಮನಕ್ಕೆ ಕನಕಪುರ ಬಂಡೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಎಂಟ್ರಿಯಾಗಿದ್ದಾರೆ.

    ಸುಮಲತಾ ಅಂಬರೀಶ್ ಅವರ ಜೊತೆ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡರೊಂದಿಗೆ ಡಿಕೆಶಿ ಸಭೆ ನಡೆಸಲು ನಿರ್ಧರಿಸಿದ್ದಾರೆ. ಹೀಗಾಗಿ ನಾಳೆ(ಭಾನುವಾರ) ಬೆಂಗಳೂರಿನಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ ಡಿಕೆಶಿ ಔತಣಕೂಟ ಏರ್ಪಡಿಸಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

    ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಕೆ.ಬಿ ಚಂದ್ರಶೇಖರ್ ಮನವೊಲಿಕೆಗೆ ಈ ಮೂಲಕ ಕಸರತ್ತು ನಡೆಸಲಿದ್ದಾರೆ. ಇವರೆಲ್ಲರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಲತಾ ಅವರಿಗೆ ಬೆಂಬಲ ನೀಡುವ ಬಗ್ಗೆ ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಸಭೆಯಲ್ಲಿ ಚರ್ಚೆ ನಡೆಸಲಿದ್ದು, ಮೈತ್ರಿ ಸರ್ಕಾರವನ್ನು ಬೆಂಬಲಿಸುವಂತೆ ಮನವೊಲಿಸುವ ಸಾಧ್ಯತೆಗಳಿವೆ.

    ಮಂಡ್ಯದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಫೈಟ್ ಇದೆ. ಹೀಗಾಗಿ ಕಾಂಗ್ರೆಸ್ಸಿನ ಬಹುತೇಕ ಮುಖಂಡರು ಸುಮಲತಾ ಅವರಿಗೆ ಬೆಂಬಲವನ್ನು ಸೂಚಿಸಿದ್ದಾರೆ. ಈ ವಿಚಾರ ಮೃತ್ರಿ ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv