Tag: minister u t khader

  • ಸರಣಿ ಕೊಲೆಗಳು, ಗೋವುಗಳ ಕಳ್ಳಸಾಗಣಿಕೆಗೆ ಯು.ಟಿ.ಖಾದರ್ ಕಾರಣ: ಶೋಭಾ ಕರಂದ್ಲಾಜೆ

    ಸರಣಿ ಕೊಲೆಗಳು, ಗೋವುಗಳ ಕಳ್ಳಸಾಗಣಿಕೆಗೆ ಯು.ಟಿ.ಖಾದರ್ ಕಾರಣ: ಶೋಭಾ ಕರಂದ್ಲಾಜೆ

    – ಮೈತ್ರಿ ಸರ್ಕಾರವೇ ಮುಂದುವರಿಯಲಿ

    ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು, ಗೋವುಗಳ ಕಳ್ಳಸಾಗಣಿಕೆಗೆ ಸಚಿವ ಯು.ಟಿ.ಖಾದರ್ ಅವರೇ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

    ನಗರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರಾವಳಿ ಜಿಲ್ಲೆಗಳಲ್ಲಿ ಏನೇ ಅಕ್ರಮ ನಡೆದರೂ ಸಚಿವ ಯು.ಟಿ.ಖಾದರ್ ದುಷ್ಕರ್ಮಿಗಳಿಗೆ ಬೆನ್ನೆಲುಬಾಗಿ ನಿಂತಿರುತ್ತಾರೆ. ಯು.ಟಿ.ಖಾದರ್ ಪಾತ್ರ ಇಲ್ಲದೇ ಅಕ್ರಮಗಳು ನಡೆಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಅಕ್ರಮಗಳನ್ನು ತಡೆಯುತ್ತಿಲ್ಲ ಎಂದು ಆರೋಪಿಸಿದರು.

    ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಗೋವುಗಳ ಕಳ್ಳಸಾಗಣಿಕೆ ನಿಯಂತ್ರಿಸುವಲ್ಲಿ ಸರ್ಕಾರ ಎಡವಿದೆ. ದೇವಸ್ಥಾನಗಳು, ವಿದೇಶ ಅಂತ ಸುತ್ತುವ ಬದಲು ಸಿಎಂ ಗೋವುಗಳನ್ನೇ ದೇವರೆಂದು ಭಾವಿಸಿ ರಕ್ಷಿಸಲಿ. ಈ ಕೂಡಲೇ ಸ್ಕ್ವಾಡ್ ರಚನೆ ಮಾಡಿ ಗೋವುಗಳ ಕಳ್ಳಸಾಗಣೆ ತಡೆಯಲಿ ಎಂದು ಆಗ್ರಹಿಸಿದರು.

    ರಾಜ್ಯ ಬಿಜೆಪಿ ನಾಯಕರು ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆ ಮಾಡುವ ಸುಳಿವು ಕೊಡುತ್ತಿದ್ದರೆ ಸಂಸದೆ ಶೋಭಾ ಕರಂದ್ಲಾಜೆ ಮಾತ್ರ ತದ್ವಿರುದ್ಧ ಮಾತಾಡಿದ್ದಾರೆ. ಮೈತ್ರಿ ಸರ್ಕಾರ ಬೀಳಿಸುವ ಯಾವ ಪ್ರಯತ್ನವನ್ನೂ ಬಿಜೆಪಿ ಮಾಡುತ್ತಿಲ್ಲ. ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಬರುತ್ತೆ ಎನ್ನುವ ನಮ್ಮ ನಾಯಕರ ಮಾತುಗಳನ್ನು ನಾನು ಒಪ್ಪಲ್ಲ. ರಾಜ್ಯದಲ್ಲಿ ಮೈತ್ರಿಸರ್ಕಾರ ಅತಂತ್ರವಾಗಿರುವುದರಿಂದ ಅದೇ ಮುಂದುವರಿಯಬೇಕು. ಜನರೇ ತಕ್ಕಪಾಠ ಕಲಿಸುತ್ತಾರೆ. ಮೈತ್ರಿ ಸರ್ಕಾರವೇ ಮುಂದುವರಿಯಲಿ. ನಾವು ವಿರೋಧ ಪಕ್ಷದಲ್ಲೇ ಇದ್ದು ಕೆಲಸ ಮಾಡುತ್ತೇವೆ ಎಂದು ಅಚ್ಚರಿಯ ಹೇಳಿಕೆ ಕೊಟ್ಟರು.

    ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧವಾಗುತ್ತಿಲ್ಲ. ಆದರೆ ಚುನಾವಣೆ ಯಾವಾಗ ಬಂದರೂ ಎದುರಿಸಲು ಸಿದ್ಧ ಇರುತ್ತೇವೆ. ಸದ್ಯಕ್ಕೆ ಚುನಾವಣೆ ನಡೆಯಲ್ಲ. ಮೈತ್ರಿ ಸರ್ಕಾರವೇ ಮುಂದುವರಿಯಲಿ ಎಂದು ಹೇಳಿದರು.

    ಮೈತ್ರಿ ನಾಯಕರೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾಕ್ ವೋಟ್ ಕೊಟ್ಟಿರಿ ಅಂತ ರಾಜ್ಯದ ಮತದಾರರನ್ನು ಹೆದರಿಸುತ್ತಿದ್ದಾರೆ. ಜನ ತಾಂತ್ರಿಕ ವ್ಯವಸ್ಥೆಯಲ್ಲಿ ವೋಟು ಹಾಕುವುದು ಮತದಾರರ ಹಕ್ಕು. ನೀವು ಕೆಲಸ ಮಾಡದಿದ್ದರೂ ಜನ ಮತ ಹಾಕುತ್ತಾರಾ? ನಿಮ್ಮ ಹೊಣೆ ನಿಭಾಯಿಸಲಿಲ್ಲ ಅದಕ್ಕೆ ಜನ ಮತ ಹಾಕಲಿಲ್ಲ. ಮತದಾರರನ್ನು ಬೆದರಿಸುವ ಕೆಲಸ ಮಾಡಬೇಡಿ ಎಂದು ಮೈತ್ರಿ ನಾಯಕರ ವಿರುದ್ಧ ಗುಡುಗಿದರು.

    ಗ್ರಾಮವಾಸ್ತವ್ಯಕ್ಕೆ ಅಂತ ಹೋಗುವುದು ಅಲ್ಲಿ ನಾಟಕ ಆಡುವುದು, ಮತದಾರರನ್ನು ಬೆದರಿಸುವುದು. ಇಷ್ಟಕ್ಕೆ ಯಾಕಾದರೂ ಗ್ರಾಮ ವಾಸ್ತವ್ಯ ಮಾಡಬೇಕು ಎಂದು ಸಿಎಂಗೆ ಸಂಸದೆ ಶೋಭಾ ಪ್ರಶ್ನಿಸಿದರು.

  • ಮರಳು ತೆಗೆಯಲು ವಾರದೊಳಗೆ ಪರ್ಮಿಟ್- ಸಚಿವ ಖಾದರ್ ಭರವಸೆ

    ಮರಳು ತೆಗೆಯಲು ವಾರದೊಳಗೆ ಪರ್ಮಿಟ್- ಸಚಿವ ಖಾದರ್ ಭರವಸೆ

    ಮಂಗಳೂರು: ಕರಾವಳಿಯಲ್ಲಿ ಮರಳು ಕ್ಷಾಮ ವಿಚಾರವಾಗಿ ಕೊನೆಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಎಚ್ಚೆತ್ತುಕೊಂಡಿದ್ದು, ಕರಾವಳಿ ನಿಯಂತ್ರಣ ವಲಯ (ಸಿಆರ್‍ಝೆಡ್) ಪ್ರದೇಶದಲ್ಲಿ ಮರಳು ತೆಗೆಯಲು ವಾರದೊಳಗೆ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

    ಜನರಿಗೆ ಕೈಗೆಟುಕುವಂತೆ ಮರಳು ದರವನ್ನು ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ನಿಗದಿ ಮಾಡಬೇಕು. ಒಂದು ವೇಳೆ ಅದಕ್ಕಿಂತ ಹೆಚ್ಚಿನ ದರವನ್ನು ಪಡೆಯುವವರ ವಿರುದ್ಧ ದೂರು ಪಡೆಯಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ ತೆರೆಯಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.

    ಒಟ್ಟು 22 ಪ್ರದೇಶಗಳನ್ನು ನಾನ್ ಸಿಆರ್ ಝೆಡ್ ಪ್ರದೇಶಗಳೆಂದು ಎಂದು ಗುರುತಿಸಲಾಗಿದೆ. ಈ ಪ್ರದೇಶ ಬಿಟ್ಟು ಬೇರೆಕಡೆಗೆ ಮರಳು ತೆಗೆಯಲು ಟೆಂಡರ್ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತುಂಬೆ ಡ್ಯಾಂನಲ್ಲಿ ಮರಳು ತೆಗೆಯಲು ಪ್ರತ್ಯೇಕ ಯಾರ್ಡ್ ತೆರೆಯಲಾಗುವುದು ಎಂದು ಭರವಸೆ ನಿಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟಾರ್ಗೆಟ್ ಗ್ರೂಪ್ ಲೀಡರ್ ಇಲ್ಯಾಸ್ ಹಂತಕರ ಜೊತೆಗಿನ ಸಚಿವ ಖಾದರ್ ಫೋಟೋ ವೈರಲ್

    ಟಾರ್ಗೆಟ್ ಗ್ರೂಪ್ ಲೀಡರ್ ಇಲ್ಯಾಸ್ ಹಂತಕರ ಜೊತೆಗಿನ ಸಚಿವ ಖಾದರ್ ಫೋಟೋ ವೈರಲ್

    ಮಂಗಳೂರು: ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಟಾರ್ಗೆಟ್ ಗ್ರೂಪ್ ಲೀಡರ್ ಇಲ್ಯಾಸ್ ಜೊತೆ ಈ ಹಿಂದೆ ಸಚಿವ ಯು.ಟಿ.ಖಾದರ್ ಭೋಜನ ಮಾಡುತ್ತಿದ್ದ ಫೋಟೊ ವೈರಲ್ ಆಗಿತ್ತು. ಇದೀಗ ಇತ್ತೀಚೆಗೆ ಹತ್ಯೆಯಾದ ಟಾರ್ಗೆಟ್ ಗ್ರೂಪ್ ಲೀಡರ್ ಇಲ್ಯಾಸ್ ಹಂತಕರ ಜೊತೆ ನಿಂತು ಸಚಿವ ಖಾದರ್ ತೆಗೆಸಿಕೊಂಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದಾವೂದ್, ಸಮೀರ್, ಉಸ್ಮಾನ್ ಜೊತೆಗಿರುವ ಫೋಟೊ ಈಗ ವೈರಲ್ ಆಗಿದೆ. ಈ ಮೂವರು ಇಲ್ಯಾಸ್ ಹತ್ಯೆ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಸಚಿವ ಯು.ಟಿ.ಖಾದರ್, ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಗಳೊಂದಿಗೆ ನಂಟು ಹೊಂದಿದ್ದಾರೆಂದು ಬಿಂಬಿಸಿ ಜಾಲತಾಣದಲ್ಲಿ ಹರಿಯಬಿಡಲಾಗುತ್ತಿದೆ. ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಉಸ್ಮಾನ್ ಹೆಗಲಿನ ಮೇಲೆ ಖಾದರ್ ಕೈ ಹಾಕಿದ ಕಾರಣ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

    ಕಳೆದ ಜನವರಿ 13 ರಂದು ಇಲ್ಯಾಸ್ ನನ್ನು ಆತನ ಮಂಗಳೂರಿನ ಫ್ಲಾಟ್ ಒಂದರಲ್ಲಿ ಹತ್ಯೆ ಮಾಡಲಾಗಿತ್ತು. ಅದಕ್ಕೂ ಮುನ್ನ, ಸಚಿವ ಖಾದರ್ ಆಪ್ತನೆಂದು ಗುರುತಿಸಿಕೊಂಡಿದ್ದ ಇಲ್ಯಾಸ್ ಉಳ್ಳಾಲ ಯುವ ಕಾಂಗ್ರೆಸ್ ಉಪಾಧ್ಯಕ್ಷನೂ ಆಗಿದ್ದ. ಆನಂತರ ರೌಡಿಗಳ ನಡುವಿನ ದ್ವೇಷದಿಂದ ಹತ್ಯೆ ಇಲ್ಯಾಸ್ ಹತ್ಯೆ ಮಾಡಲಾಗಿತ್ತು ಎನ್ನಲಾಗಿದೆ. ಇದೀಗ ಆರೋಪಿಗಳ ಜೊತೆಗಿರುವ ಖಾದರ್ ಫೋಟೊ ಮತ್ತೆ ಹೆಚ್ಚು ಸಂಚಲನ ಉಂಟು ಮಾಡಿದೆ.

  • ಶೋಭಾ ಮಾಡ್ತಿರೋದು ಪಕ್ಕಾ ವೋಟ್ ಪಾಲಿಟಿಕ್ಸ್: ಸಂಸದೆ ವಿರುದ್ಧ ಖಾದರ್ ಗರಂ

    ಶೋಭಾ ಮಾಡ್ತಿರೋದು ಪಕ್ಕಾ ವೋಟ್ ಪಾಲಿಟಿಕ್ಸ್: ಸಂಸದೆ ವಿರುದ್ಧ ಖಾದರ್ ಗರಂ

    ಬೆಂಗಳೂರು: ಇಲ್ಲಿಯವರೆಗೆ ರಾಜ್ಯ ಮಟ್ಟದಲ್ಲಿ ಅವರ ಮಾನ ಹೋಗಿತ್ತು. ಇದೀಗ ತಪ್ಪು ಪತ್ರ ಬರೆದು ರಾಷ್ಟ್ರ ಮಟ್ಟದಲ್ಲಿ ಶೋಭಾ ಕರಂದ್ಲಾಜೆ ಮಯಾ9ದೆ ಹೋಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಯುಟಿ ಖಾದರ್ ಹೇಳಿದ್ದಾರೆ.

    ಸಂಸದೆ ಶೋಭಾ ಕರಂದ್ಲಾಜೆ ಕಳುಹಿಸಿರುವ ಪತ್ರ ಪಕ್ಕಾ ಪೊಲಿಟಿಕಲ್ ಗಿಮಿಕ್ ಆಗಿದ್ದು, ಈ ಪತ್ರ ನೋಡಿದರೇನೆ ಅವರ ಮನಸ್ಥಿತಿ ಅನ್ನೋದು ಗೊತ್ತಾಗುತ್ತದೆ. ಇವೆಲ್ಲಾ ಓಟಿಗಾಗಿ ಮಾಡುತ್ತಿರುವ ಕೆಲಸ ಎಂದು ಅವರು ಹೇಳಿದರು.

    ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 23 ಹಿಂದುಗಳ ಹತ್ಯೆಯಾಗಿದೆ ಎಂದು ಆರೋಪಿಸಿ ಕೇಂದ್ರಕ್ಕೆ ಶೋಭಾ ಕರಂದ್ಲಾಜೆ ಕಳುಹಿಸಿರುವ ಪಟ್ಟಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸತ್ತವರನ್ನು ಬದುಕಿಸ್ತಾರೆ, ಬದುಕಿದವರನ್ನು ಪತ್ರದಲ್ಲೇ ಸಾಯಿಸುತ್ತಾರೆ ಎಂದು ಗರಂ ಆಗಿ ಉತ್ತರಿಸಿದರು.

    ಅವರ ಪತ್ರದಲ್ಲಿ ವಿನಾಯಕ ಬಳಿಗಾ, ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ ಹತ್ಯೆಯಾಗಿದ್ದಾರೆ. ಆದ್ರೆ ಅವರ ಹೆಸರು ಸೇರಿಸಿಲ್ಲ. ಯಾಕೆ ಅವರು ದಕ್ಷಿಣ ಕನ್ನಡದವರು ಅಲ್ವಾ ಎಂದು ಪ್ರಶ್ನಿಸಿದರು.

    ಇದನ್ನೂ ಓದಿ: ಬದುಕಿದ್ದವರನ್ನು ಕೊಲೆ ಮಾಡಲಾಗಿದೆ ಎಂದು ಕೇಂದ್ರಕ್ಕೆ ಸುಳ್ಳು ವರದಿ ಕೊಟ್ಟ ಶೋಭಾ!